Yadgir District Reported Crimes Updated on 29-01-2018

By blogger on ಸೋಮವಾರ, ಜನವರಿ 29, 2018

                                        

                                            Yadgir District Reported Crimes
ಯಾದಗಿರಿ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ: 302, 201 ಐಪಿಸಿ;- ದಿನಾಂಕ 28/01/2018 ರಂದು 10 ಎಎಂಕ್ಕೆ ಶ್ರೀ ಹಣಮಂತ್ರಾಯ ತಂ.ಮಲ್ಲಪ್ಪ ಮುಂಡರಿಗಿ ವಃ37 ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಬೋವಿವಾಡ ಯಾದಗಿರಿ ಇವರು ಠಾಣೆಗೆ ಬಂದು ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವೆನೆಂದರೆ ಮೇಲಿನ ವಿಳಾಸದವನಿದ್ದು ಒಕ್ಕಲುತನ ಮಾಡಿಕೊಂಡು ಇರುತ್ತೇನೆ. ನಿನ್ನೆ ದಿನಾಂಕ.27/01/2018 ರಂದು ನಮ್ಮ ಅಳಿಯ ಭಿಮು ತಂ. ಬಸವರಾಜ ತಳವಾರ ಈತನು ರಾತ್ರಿ 9 ಗಂಟೆವರೆಗೆ ನಮ್ಮ ಮನೆಯಲ್ಲಿದ್ದು ನಂತರ ಆತನು ತಮ್ಮ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಇರುತ್ತದೆ.ಹೀಗಿದ್ದು ಇಂದು ದಿನಾಂಕ; 28.01.2018 ರಂದು ಬೆಳೆಗ್ಗೆ 8-30 ಗಂಟೆ ಸೂಮಾರಿಗೆ ನಾನು ಗಾಂಧಿಚೌಕದಲ್ಲಿ ಇದ್ದಾಗ ಶಶಾಂಕ ನಾಲಡಗಿ ಇವರು ಬಂದು ನನಗೆ ತಿಳಿಸಿದ್ದನೆಂದರೆ, ಇಂದು ದಿನಾಂಕ 28/01/2018 ರಂದು ಬೆಳಿಗ್ಗೆ  8 ಗಂಟೆ ಸುಮಾರಿಗೆ ನಾನು ಹತ್ತಿಕುಣಿ ಕ್ರಾಸನಲ್ಲಿದ್ದಾಗ  ಕಿಶನರಾವ ಚವ್ಹಾಣ ಇವರ ಕಟ್ಟಿಗೆ ಅಡ್ಡದ ಮುಂದೆ  ಯಾವುದೋ ಒಂದು ಹೆಣ ಬಿದ್ದಿರುತ್ತದೆ ಅಂತಾ ಜನರು ಅಂದಾಡುತ್ತಿರುವುನ್ನು ಕೇಳಿ ನಾನು ಅಲ್ಲಿಗೆ ಹೋಗಿ ನೋಡಲು ನಿಮ್ಮ ಅಳಿಯ ಭೀಮು ತಳವಾರ ಈತನ ಶವ ಇದ್ದು ಯಾರೋ ಈತನಿಗೆ ಕೊಲೆ ಮಾಡಿ ಹಾಕಿರುತ್ತಾರೆ. ಅಂತಾ ತಿಳಿಸಿದಾಗ ನಾನು ಮತ್ತು ಶಶಾಂಕ ಹಾಗೂ ಭಿಮು ಈತನ ತಮ್ಮ ಸುರೇಶ ಹಾಗೂ ಈತರರು ಕೂಡಿಕೊಂಡು ಹೊಗಿ ನೋಡಲು  ಹತ್ತಿಕುಣಿ ರಸ್ತೆಯ  ಕಿಶನರಾವ ತಂದೆ ನಾಗಪ್ಪ ಚವ್ಹಾಣ  ಇವರ ಕಟ್ಟಿಗೆ ಅಡ್ಡದ ಮುಂದೆ ಇರುವ ಖುಲ್ಲಾ ಜಾಗೆಯ ಕಂಟಿಯಲ್ಲಿ ಬಿದ್ದಿದ್ದು ನೋಡಲಾಗಿ ನಮ್ಮ ಅಳಿಯ ಭಿಮು ತಂ. ಬಸವರಾಜ ತಳವಾರ ವಃ 19 ಈತನ ಶವವಿದ್ದು, ನೋಡಲು ಸದರಿ ಮೃತ ಭಿಮು ಈತನ ತಲೆಯೆ ಎಡಭಾಗ, ಹಣೆಯೆ ಹುಬ್ಬಿನ ಹತ್ತಿರ ಹಾಗೂ ಕುತ್ತಿಗೆಗೆ ಯಾವುದೋ ಆಯುಧದಿಂದ ಹೊಡೆದ ಭಾರಿ ರಕ್ತ ಗಾಯವಾಗಿದ್ದು  ಮತ್ತು ಬಲಕಣ್ಣಿಗೆ ಗುಪ್ತಗಾಯ ಎಡಕಣ್ಣಿಗೆ  ಬಾಯಿಗೆ, ಗದ್ದಕ್ಕೆ ರಕ್ತಗಾಯವಾಗಿದ್ದು ಅಲ್ಲದೇ ಹೊಟ್ಟೆ, ಎದೆ, ಸೊಂಟ ಕೈಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನನ್ನ ಅಳಿಯ ಭೀಮು ಈತನಿಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ, ಯಾವುದೋ ಆಯುಧಗಳಿಂದ ಎಲ್ಲಿಯೋ ಕೊಲೆ ಮಾಡಿ  ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಕಿಶನರಾವ ಕಟ್ಟಿಗೆ ಅಡ್ಡೆಯ ಮುಂದೆ ಇರುವ ಕಂಟಿಯಲ್ಲಿ ಬಿಸಾಕಿದ್ದು ಇರುತ್ತದೆ ಸದರಿ ಘಟನೆಯು ದಿನಾಂಕ.27/01/2018 ರ ರಾತ್ರಿ 9-30 ಗಂಟೆಯಿಂದ ಇಂದು ದಿನಾಂಕ.28/01/2018 ರಂದು ಬೆಳಗ್ಗೆ 8 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿದ್ದು ಇರುತ್ತದೆ ನಮ್ಮ ಅಳಿಯನ ಕೊಲೆ ಮಾಡಿದ ಆರೋಪಿತರಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೆಕು ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.10/2018 ಕಲಂ.302, 201 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 23/2018  ಕಲಂ 323, 324,504, 506 ಸಂಗಡ 34 ಐಪಿಸಿ;- ದಿನಾಂಕ 28-01-2018 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಹಣಮಂತ ತಂದೆ ಮಲ್ಲಯ್ಯಾ ಡೊಂಗೇರ ವಯಾ:55 ಉ: ಒಕ್ಕಲುತನ ಜಾ: ಕಬ್ಬೇರ ಸಾ: ಕೌಳೂರು ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನಗೆ 6 ಗಂಡು ಜನ ಮಕ್ಕಳಿದ್ದು ನನಗಿದ್ದ ಒಟ್ಟು 33 ಎಕರೇ ಹೊಲದಲ್ಲಿ ಎಲ್ಲರಿಗೂ ಸಮನಾಗಿ ಉಪಭೋಗ ಮಾಡಲಿಕ್ಕೆ ಮಾಡಿಕೊಟ್ಟಿರುತ್ತೆನೆ. ನಾನು ಕೇವಲ 3 ಎಕರೇ ಹೋಲವನ್ನು ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತೆನೆ. ನಾವು ಹೋಲ ಸಾಗುವಳಿ ಮಾಡುವ ಸಮಯದಲ್ಲಿ ಸಾಲ ಮಾಡಿಕೊಂಡಿದ್ದು ನಮಗೆ ಮರಳಿ ಸಾಲ ತಿರಿಸಲಾಗದ ಸಂಬಂಧವಾಗಿ ನಮ್ಮ 5 ಎಕರೇ ಹೋಲ ನಮಗೆ ಸಾಲ ಕೊಟ್ಟವರಿಗೆ ಮುದ್ದತ್ತು ರಜಿಸ್ಟ್ರೇಷನ್ ಮಾಡಿಸಿ ಕೊಟ್ಟಿರುತ್ತೆ್ತೆನೆ. ನನ್ನ ಮಕ್ಕಳಿಗೆ ಸಾಲ ತಿರಿಸಲು ಹಣ ಕೇಳಿದಾಗ ಅವರು ನನ್ನ ಜೋತೆ ತಕರಾರು ಮಾಡಿಕೊಳ್ಳುತ್ತಾ ಬಂದು ಅದೇ ವಿಷಯದಲ್ಲಿ ಈ ಮೊದಲು ದಿನಾಂಕ 08-01-2018 ರಂದು ನನ್ನ ಮಕ್ಕಳಾದ ಮಲ್ಲಯ್ಯಾ,  ಗಂಗಪ್ಪಾ ಹಾಗೂ ಮರಲಿಂಗ ಹಾಗೂ ನನ್ನ ಹೆಂಡತಿಯಾದ ಗಂಗಮ್ಮಾ 4 ಜನರು ಹೊಡೆಬಡಿ ಮಾಡಿದ್ದರಿಂದ ನಾನು ದಿನಾಂಕ 09-01-2018 ರಂದು ಠಾಣೆಗೆ ಬಂದು ಅವರ ಮೇಲೆ ಕೇಸು ಮಾಡಿಸಿರುತ್ತೆನೆ. ನಾನು ನಮ್ಮ ಗ್ರಾಮದ ಹಣಮಂತಿ ಗುಡುಸಲೇರ ಇವರ ಗದ್ದೆಯನ್ನು ಪಾಲಿಗೆ ಮಾಡಿದ್ದು ಸದರಿ ಹೋಲ ನಮ್ಮ ಹೋಲದ ಪಕ್ಕದಲ್ಲಿಯೇ ಇದ್ದುದ್ದರಿಂದ ಆ ಗದ್ದೆಗೆ ನಮ್ಮ ಹೋಲದಿಂದಲೇ ನೀರು ಬಿಡುತ್ತಾ ಬಂದಿರುತ್ತೆನೆ. ಅದರಂತೆ ನಿನ್ನೆ ದಿನಾಂಕ 27-01-2018 ರಂದು ನಮ್ಮ ಹೋಲದಿಂದಸದರಿ ಬಸವರಾಜ ಇವರ ಹೋಲಕ್ಕೆ ನೀರು ಬೀಡಬೇಕೆಂದು ಮೋಟಾರ ಚಾಲು ಮಾಡುತ್ತಿರುವಾಗ ನನ್ನ ಮಗ ಮಲ್ಲಯ್ಯಾ ಇತನು ಬಂದು ಮಗನೇ ಮೋಟಾರ ಚಾಲು ಮಾಡಿದರೇ ನಿನಗೆ ಒಂದು ಗತಿ ಕಾಣೀಸುತ್ತೆನೆ ಅಂತಾ ಹೊಲಸು ಶಬ್ದಗಳಿಂದ ಬೈದು ಹೋಗಿದ್ದನು.  ಹೀಗಿದ್ದು ನಿನ್ನೆ ದಿನಾಂಕ 27-01-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಹಣಮಂತ ತಂದೆ ಭೀಮಪ್ಪಾ ಗಡ್ಡೆಸೂಗೂರ, ರಾಜಪ್ಪಾ ತಂದೆ ಭೀಮಶೆಪ್ಪಾ ಸೂಗೂರ ಶಿವನೂರು ಎಲ್ಲರೂ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದೆವು. ಅದೇ ವೇಳೆಗೆ ನನ್ನ ಮಕ್ಕಳಾದ ಮಲ್ಲಯ್ಯಾ ಮತ್ತು ಗಂಗಪ್ಪಾ ಹಾಗೂ ನಮ್ಮ ಗ್ರಾಮದ ಮೋನಪ್ಪಾ ತಂದೆ ಹಣಮಂತ ಮಡಿವಾಳ ಮತ್ತು ಮಡಿವಾಳಪ್ಪಾ ತಂದೆ ಹಣಮಂತ ಮಡಿವಾಳ 4 ಜನರು ನಮ್ಮ ಮನೆಯ ಹತ್ತಿರ ಬಂದವರೇ ಅವರಲ್ಲಿ ನನ್ನ ಮಗ ಮಲ್ಲಯ್ಯಾ ಇತನು ಭೋಸಡಿ ಮಗನೇ ನೀನು ಬೇರೆ ಯಾವುದೋ ನಮ್ಮ ಹೊಲದ ನೀರು ಬಿಡುತ್ತಿ ಮೊದಲೇ ನಮ್ಮ ಹೋಲದ ಬೇಳೆಗಳಿಗೆ ನೀರಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯಹತ್ತಿದನು. ಆಗ ನಾನು ಈ ಮೊದಲಿ ನಿಂದಲೂ ಪಾಲಿಗೆ ಮಾಡಿದ ಆ ಹೊಲಕ್ಕೆ ನಮ್ಮ ಹೊಲದಿಂದಲೇ ನೀರು ಬಿಡುತ್ತಾ ಬಂದಿದ್ದೆನೆ ಅಂತಾ ಅವನಿಗೆ ತಿಳಿಸಿ ಹೇಳುತ್ತಿದ್ದಾಗ ರಂಡಿ ಮಗನೇ ಮತ್ತೆ ಎದರು ಮಾತಾಡುತ್ತಿ ನಿನ್ನ ಇನ್ನೂ ಸೊಕ್ಕು ಮುರಿದಿಲ್ಲಾ ಮತ್ತು ಈ ಮೊದಲೇ ಸುಮ್ಮನೇ ನಮ್ಮ ಮೇಲೆ ಕೇಸು ಮಾಡಿಸಿದ್ದಿ ಅಂತಾ ಅಂದವನೇ ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ಬಡಿಗೆ ಎತ್ತಿಕೊಂಡು ನನ್ನ ಬಲಪಕ್ಕೆಗೆ  ಮತ್ತು ತಲೆಯ ಮೇಲೆ ಹೊಡೆದು ಗುಪ್ತಗಾಯ ಗೊಳಿಸಿದನು. ಇನ್ನೊಬ್ಬ ಮಗ ಗಂಗಪ್ಪಾ ಇತನು ಕೈಮುಷ್ಟಿಮಾಡಿ ಹೊಟ್ಟೆಗೆ ಗುದ್ದಿದನು. ಮತ್ತು ಮೋನಪ್ಪಾ ತಂದೆ ಹಣಮಂತ ಮಡಿವಾಳ ಮತ್ತು ಮಡಿವಾಳಪ್ಪಾ ತಂದೆ ಹಣಮಂತ ಮಡಿವಾಳ ಇಬ್ಬರೂ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದರು. ಮತ್ತು ನೆಲದ ಮೇಲೆ ದರ ದರನೇ ಎಳೆದಾಡಿದರು. ಆಗ ಅಲ್ಲಿಯೇ ಇದ್ದ ಹಣಮಂತ ತಂದೆ ಭೀಮಪ್ಪಾ ಗಡ್ಡೆಸೂಗೂರ, ರಾಜಪ್ಪಾ ತಂದೆ ಭೀಮಶೆಪ್ಪಾ ಸೂಗೂರ ಶಿವನೂರು ಇವರು ಜಗಳಾ ಬಿಡಿಸಿರುತ್ತಾರೆ. ಆಗ ಅವರು ಮತ್ತೆ ನಮ್ಮ ಮೇಲೆ ಕೇಸು ಮಾಡಿ ಇನ್ನೊಮ್ಮೆ ನಮ್ಮ ಕೈಯಲ್ಲಿ ಸೀಗು ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ನಂತರ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆನೆ. ಈ ರೀತಿಯಾಗಿ ನನಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ 4 ಜನರ ವಿರುದ್ದ ಕಾನೂನು ಪ್ರಕಾರ ಕೈಗೊಳ್ಳಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ನನಗೆ ಹೊಡೆಬಡಿ ಮಾಡಿದ ಬಗ್ಗೆ ನಾನು ವಿಚಾರ ಮಾಡಿ ತಡವಾಗಿ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 23/2018 ಕಲಂ 323, 324, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 07/2018 ಕಲಂ: 379 ಐಪಿಸಿ ;- ದಿನಾಂಕ: 28/01/2018 ರಂದು 3-30 ಪಿಎಮ್ ಕ್ಕೆ ಶ್ರೀ ಕಾಳಪ್ಪ ಎಮ್. ಬಡಿಗೇರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ದಿವಸ ದಿನಾಂಕ: 28/01/2018 ರಂದು ನಾನು ಪೆಟ್ರೋಲಿಂಗ ಕುರಿತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ್.ಸಿ 18 ಮತ್ತು ಶಿವಪುತ್ರ ಹೆಚ್.ಸಿ 82 ರವರೊಂದಿಗೆ ಹೊರಟು ಹಾಲಗೇರಾ, ಗಡ್ಡೆಸೂಗೂರು ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಹುಲಕಲ್ ಹತ್ತಿರ ಹೋಗುತ್ತಿದ್ದಾಗ ಬಾತ್ಮಿದಾರರಿಂದ ಕೆಲವರು ಐಕೂರು ಗ್ರಾಮದ ಕೃಷ್ಣಾ ನದಿ ದಡದಿಂದ ಟಿಪ್ಪರಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ಮೇನ ರೋಡ ಮುಖಾಂತರ ಯಾದಗಿರಿಗೆ ಸಾಗಿಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ವಡಗೇರಾ ಕ್ರಾಸಗೆ ಭೇಟಿ ನೀಡಿದಾಗ ಸಮಯ ಸುಮಾರು 3 ಪಿಎಮ್ ಆಗಿದ್ದು, ಖಾನಾಪೂರ ಮೇನ ರೋಡ ಕಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬರುತ್ತಿರುವುದನ್ನು, ನೋಡಿ ನಾವು ಹೋಗಿ ಟಿಪ್ಪರನ್ನು ನಿಲ್ಲಿಸಿದಾಗ ಅದರ ಚಾಲಕನು ಟಿಪ್ಪರ ನಿಲ್ಲಿಸಿದ್ದು, ಟಿಪ್ಪರ ನಂಬರ ನೋಡಲಾಗಿ ಕೆಎ 34 ಬಿ 1519 ಇದ್ದು, ಸದರಿ ಟಿಪ್ಪರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಘುಪತಿ ತಂದೆ ಶರಣಪ್ಪ ಸಾ:ಗೌಡಗೇರಾ ಎಂದು ಹೇಳಿದ್ದು, ಸದರಿಯವನಿಗೆ ಮರಳು ಸಾಗಾಣಿಕೆಯ ಪರವಾನಿಗೆ/ರಾಯಲ್ಟಿ ಕೇಳಿದಾಗ ತನ್ನ ಹತ್ತಿರ ಯಾವುದೇ ಪರವಾನಿಗೆ/ರಾಯಲ್ಟಿ ಇರುವುದಿಲ್ಲವೆಂದು ಹೇಳಿದನು. ಟಿಪ್ಪರನ್ನು ಜಪ್ತಿ ಮಾಡಬೇಕು ಠಾಣೆಗೆ ಚಲಾಯಿಸಿಕೊಂಡು ನಡೆ ಅಂತಾ ಹೇಳಿದಾಗ ಅವನು ಟಿಪ್ಪರ ಚಲಾಯಿಸಲು ಹತ್ತುವವನಂತೆ ನಟನೆ ಮಾಡಿ ಅಲ್ಲಿಂದ ಓಡಿ ಹೋದನು. ನಾವು ಬೆನ್ನಹತ್ತಿದರು ಸಿಗಲಿಲ್ಲ. ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು, ಇದರ ಚಾಲಕ ಮತ್ತು ಮಾಲಿಕ ಅಕ್ರಮವಾಗಿ ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸಿದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ನಿಲ್ಲಿಸಿದಾಗ ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 07/2018 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                                                                    
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ  87 ಕೆ.ಪಿ.ಆ್ಯಕ್ಟ್;- ದಿನಾಂಕ: 28/01/2018 ರಂದು 5-30 ಪಿಎಮ್ ಕ್ಕೆ ಸರಕಾರಿ ತಪರ್ೆ ಪಿರ್ಯಾದಿದಾರರಾದ ತಿಪ್ಪಣ್ಣ ಪಿ.ಎಸ್.ಐ ಭೀ.ಗುಡಿ ಠಾಣೆ ರವರು ಠಾಣೆಗೆ ಹಾಜರಾಗಿ 5 ಜನ ಆರೋಪಿ, ಜಪ್ತಿಪಂಚನಾಮೆಯೊಂದಿಗೆ ಒಂದು ವರದಿ ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 28/01/2018 ರಂದು 4 ಪಿಎಮ್ ಕ್ಕೆ  ಹಾಲಭಾವಿ ಸೀಮಾಂತರದ ಕೆನಾಲ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲಿ ಕೆಲವು ಜನ ದುಂಡಾಗಿ ನಿಂತು  ಮದ್ಯದಲ್ಲಿ ಹುಂಜಗಳಿಗೆ ಪಂಜೆ ಹಚ್ಚಿ ನಿನ್ನ ಹುಂಜ ಗೆದ್ದರೆ 200 ರೂಪಾಯಿ, ನನ್ನ ಹುಂಜ ಗೆದ್ದರೆ 400 ರೂಪಾಯಿ ಕೊಡಬೇಕು ಅಂತಾ ಅವರವರಲ್ಲಿಯೇ ಮಾತನಾಡುತ್ತಾ ಹುಂಜದ ಪಂಜೆದ ಮುಖಾಂತರ ಜೂಜಾಟ ಆಡುತ್ತಿರುವಾಗ  ಪಿ.ಎಸ್.ಐ ಸಾಹೇಬರು ಸಿಪಿಐ ಸಾಹೇಬರ ನೇತೃತ್ವದಲ್ಲಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ 2100/- ರೂ 3 ಹುಂಜಗಳನ್ನು  ಜಪ್ತಿ ಪಂಚನಾಮೆಯ ಮೂಲಕ  4-15 ಪಿಎಮ್ ದಿಂದ 5-15  ಪಿಎಮ್ ದವರೆಗೆ ಕೈಕೊಂಡು 5-45 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 6-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 13/2018 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!