Yadgir District Reported Crimes Updated on 26-01-2018

By blogger on ಶುಕ್ರವಾರ, ಜನವರಿ 26, 2018


                                           Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ: 323, 324, 504, 506 ಸಂಗಡ 34 ಐಪಿಸಿ;- ದಿನಾಂಕ 25.01.2017 ರಂದು ಸಂಜೆ 4.30 ಗಂಟೆ ಸುಮಾರಿಗೆ ನಾನು ಗುರುಮಠಕಲ್ ಪಟ್ಟಣದ ಅಂಬಿಗರ ಚೌಡಯ್ಯ ಗುಡಿಯ ಹತ್ತಿರ ಇರುವ ನನ್ನ ಟಿ.ಸ್ಟಾಲ್ನಲ್ಲಿ ಚಹಾ ಮಾರಾಟ ಮಾಡುತ್ತಿದ್ದಾಗ ಬಸವಂತಪ್ಪ ತಂದೆ ಮೊಗಲಪ್ಪ ನಾಯ್ಕಿನ್ ಸಾ||ಚಪೆಟ್ಲಾ ಈತನು ಕುಡಿದು ಬಂದು ನನಗೆ ಚಹಾ ಕೊಡಲೇ ಸೂಳೆ ಮಗನೆ ಅಂತಾ ಹೇಳಿದ ಆಗ ನಾನು ಸೀದಾ ಮಾತಿನಲ್ಲಿ ಚಹಾ ಕೇಳರಿ ಅಂತಾ ಅಂದಿದ್ದಕ್ಕೆ ಬಸವಂತಪ್ಪ ನಾಯ್ಕೀನ್ ಈತನು ಅಲ್ಲಿಯೇ ದೂರದಲ್ಲಿ ನಿಂತಿದ್ದ ಬಸವರಾಜ ತಂದೆ ಲಕ್ಷ್ಮಪ್ಪ ಪಡಿಗೆ, ಸಣ್ಣತಮ್ಮಪ್ಪ ತಂದೆ ಮಾಣಿಕೆಪ್ಪ ಪಡಿಗೆ, ಮಹೇಶ ತಂದೆ ಮಾಣಿಕೆಪ್ಪ ಪಡಿಗೆ ಮೂರು ಜನ ಸಾ||ಗುರುಮಠಕಲ್ ಇವರಿಗೆ ಕರೆದು ಈ ಸೂಳೆ ಮಗನದ್ದು ಬಾಳ ಆಗಿದೆ ಹೊಡಿರಿ ಅಂತಾ ಹೇಳಿದನು. ಆಗ ಬಸವಂತಪ್ಪ ಈತನು ನನಗೆ ಕೈಯಿಂದ ಬಲ ಕೆನ್ನೆಗೆ ಹೊಡೆದಿದ್ದು, ಬಸವರಾಜ ಈತನು ನನ್ನ ಹೊಟ್ಟೆಗೆ ಮತ್ತು ಎದೆಗೆ ಬಲವಾಗಿ ಹೊಡೆದಿದ್ದು, ಮಹೇಶ ಈತನು ಈ ಸೂಳೆ ಮಗನಿಗೆ ಇವತ್ತು ಬಿಡಬ್ಯಾಡ ಖಲಾಸ್ ಮಾಡು ಅಂತಾ ಹೇಳಿದ್ದು ಆಗ ಅಲ್ಲಿಯೇ ಇದ್ದ ಕಲ್ಲಿನಿಂದ ಸಣ್ಣತಮ್ಮಪ್ಪ ಈತನು ನನ್ನ ತಲೆಯ ಮೇಲೆ ನೇತ್ತಿಗೆ ಜೋರಾಗಿ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ ನಾನು ಚೀರಾಡುತ್ತಾ ಕೆಳಗೆ ಬಿದ್ದಾಗ ಅಲ್ಲಿದ ಸಾರ್ವಜನಿಕರು ಸೇರಿ ಅವರಿಂದ ನನಗೆ ಬಿಡಿಸಿದರು. ಸದರಿ ಜಗಳವಾಗಿದ್ದಾಗ ಸಂಜೆ 4.40 ಗಂಟೆ ಆಗಿರುತ್ತದೆ ಅಂತಾ ಸಲ್ಲಿಸಿದ ದೂರಿನ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2018 ಕಲಂ:323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 19/2018 ಕಲಂ: 420, 468, 471, 465, 419 ಸಂಗಡ 34 ಐಪಿಸಿ;- ದಿನಾಂಕ: 25/01/2018 ರಂದು 8-15 ಪಿ.ಎಮ್ ಕ್ಕೆ ಶ್ರೀ ವಿರೇಶ ಪಿಸಿ 374 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ಖಾಸಗಿ ಫಿರ್ಯದಿ ಸಂಖ್ಯೆ 13/2016 ನೇದ್ದನ್ನು ತಂದು ಹಾಜರ ಪಡಿಸಿದ್ದು, ಸದರಿ ಫಿಯರ್ಾದಿ ಸಾರಾಂಶವೆನೆಂದರೆ, ಫಿಯರ್ಾಧಿದಾರಳಾದ ಶಶಿಕಲಾ ಗಂಡ ತುಳಜಪ್ಪ ರಾಠೋಡ ಸಾ: ನಿಜಲಿಂಗಪ್ಪ ಕಾಲೋನಿ ರಾಯಚೂರ ಇವಳ ಗಂಡನಾದ ತುಳಜಪ್ಪನು ದಿ: 26/07/1999 ರಂದು ಕೆಂಬಾವಿ ಗ್ರಾಮದ ಸಿದ್ದಗಂಗಮ್ಮ ಇವರ ಕಡೆಯಿಂದ ಖುಲ್ಲಾ ಜಾಗ ಆಸ್ತಿ ನಂ. 11-48/1 ಪ್ಲಾಟ ನಂ. ಎ-5, ಈಗಿನ ನಂಬರ 16-43 ನೇದ್ದನ್ನು ಖರೀದಿ ಮಾಡಿ ನೊಂದಾಯಿಸಿಕೊಂಡಿರುತ್ತಾನೆ. ಸದರಿ ಖರೀದಿ ನೊಂದಣಿ ದಾಖಲೆ ನಂಬರ 619/99-200 ದಿನಾಂಕ: 26-07-1999 ಇರುತ್ತದೆ. ನಂತರ ಕೆಂಭಾವಿ ಎಸ್.ಬಿ.ಐ ಬ್ಯಾಂಕಿನಲ್ಲಿ ಕಟ್ಟಡ ರಚನೆಗಾಗಿ ಸಾಲ ಪಡೆದುಕೊಂಡು ವ್ಯಾಪಾರ ಸಲುವಾಗಿ ಮಳಿಗೆಗಳನ್ನು ಕಟ್ಟಿರುತ್ತಾನೆ. ಬಳಿಕ 1) ಗುಂಡಪ್ಪ ತಂದೆ ದೇವಪ್ಪ ರಾಠೋಡ ಸಾ: ರುಡಲಬಂಡಾ, 2) ಶಿವಾನಂದ ತಂದೆ ದೇವಪ್ಪ ರಾಠೋಡ ಸಾ: ಕೆಂಭಾವಿ ಇವರಿಗೆ ಬಾಡಿಗೆಗೆ ಕೊಟ್ಟಿದ್ದು, ಅವರು ಸರಿಯಾಗಿ ಬಾಡಿಗೆ ಕೊಡಲಾರದ ಕಾರಣ ಖಾಲಿ ಮಾಡುವಂತೆ ಕೇಳಿದರೂ ಮಳಿಗೆಗಳನ್ನು ಖಾಲಿ ಮಾಡದ ಕಾರಣ ವಕೀಲರ ಮುಖಾಂತರ ನೊಟೀಸ್ ಕೊಟ್ಟರೂ ಸಹಿತ ಖಾಲಿ ಮಾಡಲಿಲ್ಲ. ಆದ್ದರಿಂದ ಫಿಯರ್ಾದಿ ಗಂಡನು ಸಿವಿಲ್ ದಾವೆ ಹೂಡಿದ್ದು, ಕೇಸ್ ಚಾಲ್ತಿಯಲ್ಲಿರುವಾಗಲೇ ದಿ: 31/12/2007 ರಂದು ಮೃತಪಟ್ಟಿರುತ್ತಾನೆ. ನಂತರ ಫಿಯರ್ಾದಿದಾರಳು ಸದರಿ ದಾವೆಯಲ್ಲಿ ಸಾಕ್ಷಿ ನುಡಿದು ಡಿಕ್ರಿ ಮಾಡಿಸಿಕೊಂಡು ದಿ: 28/09/2012 ರಂದು ಕಬ್ಜೆಯನ್ನು ಪಡೆದಿರುತ್ತಾಳೆ.
     ಫಿಯರ್ಾಧಿದಾರಳ ಗಂಡನು ಆರೋಪಿತರ ವಿರುದ್ದ ಮಳಿಗೆಗಳನ್ನು ಖಾಲಿ ಮಾಡುವಂತೆ ದಿ: 13/09/20006 ರಂದು ದಾವೆ ದಾಖಲಿಸಿದ ನಂತರ ಆರೋಪಿತರಾದ ಗುಂಡಪ್ಪ ಹಾಗು ಶಿವಾನಂದ ಹಾಗು ಅವರ ಮೃತ ಸಹೋದರ ಮಲ್ಲಿಕಾಜರ್ುನ ಇವರು ಫಿಯರ್ಾದಿದಾರಳಿಗೆ ಹಾಗು ಆಕೆಯ ಗಂಡನಿಗೆ ಗೊತ್ತಾಗಲಾರದ ಹಾಗೆ ಗ್ರಾಮ ಪಂಚಾಯತ ಕಾಯರ್ಾಲಯದಲ್ಲಿ ಕಾನೂನು ಬಾಹಿರವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಲ್ಲದೇ, ದಿ: 12/01/2007 ರಂದು ವಿಜಯಕುಮಾರ ತಂದೆ ಬಸವಂತರಾಯ ಸಾ: ರಸ್ತಾಪೂರ ಇವರಿಗೆ ಖುಲ್ಲಾ ಜಾಗ ಇದೇ ಅಂತ ತೋರಿಸಿ ಮಾರಾಟ ಮಾಡಿರುತ್ತಾರೆ.  ಆ ಬಳಿಕ ದಿ: 27/06/2007 ರಂದು ಆರೋಪಿತರಾದ ಗುಂಡಪ್ಪ ಹಾಗು ಶಿವಾನಂದ ಮತ್ತು ಮೃತ ಮಲ್ಲಿಕಾಜರ್ುನ, ಮೃತ ವಿಜಯಕುಮಾರ ಇವರೆಲ್ಲರೂ ಗುಲಬಗರ್ಾದ ಕೆ.ಎಸ್.ಎಫ್.ಸಿ ಶಾಖೆಗೆ ಅಡಮಾನ ಮಾಡಿ 5 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿರುತ್ತಾರೆ. ಸದರಿ ಅಡಮಾನ ಮಾಡುವಾಗ ಸುರಪೂರದ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಫಿಯರ್ಾದಿದಾರಳ ಗಂಡನಾದ ತುಳಜಪ್ಪನ ಬದಲಿಗೆ ಬೆರೆಯವರನ್ನು ನಿಲ್ಲಿಸಿ ಖೊಟ್ಟಿ ಸಹಿ ಮಾಡಿಸಿ, ಮತ್ತು ಬೇರೆಯವರ ಭಾವಚಿತ್ರ ಮಾಡಿಕೊಂಡು ಅಡಮಾನ ಪತ್ರವನ್ನು ನೊಂದಣಿ ಮಾಡಿಕೊಂಡಿರುತ್ತಾರೆ. ಅಡಮಾನ ಪತ್ರ ನೊಂದಣಿ ಮಾಡಿಸುವಾಗ ಆರೋಪಿ ನಂ. 3) ತಿಪ್ಪಣ್ಣ ಹಾಗು 4) ಹಳ್ಳೆಪ್ಪಗೌಡ ಇವರು ದುರುದ್ದೇಶದಿಂದ ಸಾಕ್ಷಿದಾರರು ಅಂತಾ ಸಹಿ ಮಾಡಿರುತ್ತಾರೆ ಅಂತ ವಗೈರೆ ಫಿಯರ್ಾದಿ ಸಾರಾಂಶವಿದ್ದು ಮಾನ್ಯ ನ್ಯಾಯಾಲಯದ ನಿದರ್ೇಶನದ ಪ್ರಕಾರ ಠಾಣೆ ಗುನ್ನೆ ನಂ: 19/2018 ಕಲಂ: 420, 468, 471, 465, 419 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ 78(3)  ಕೆ.ಪಿ ಯಾಕ್ಟ ;- ದಿನಾಂಕ:24/01/2018 ರಂದು 17.300 ಗಂಟೆಯ ಸುಮಾರಿಗೆ ಆರೋಪಿತನು ಹುಣಸಗಿ ಅಗಸಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, ಪಿಸಿ-233, 288, 292, 297 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 770=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.
                                                                    
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 05/2018 ಕಲಂ: 323, 324, 354, 504, 506 ಐ.ಪಿ.ಸಿ.;- ಪಿರ್ಯಾದಿಯವರು ಹಗರಟಗಿ ಸೀಮಾಂತರದಲ್ಲಿರುವ ಹೊಲದ ಸವರ್ೇ ನಂ.279ನೇದ್ದರಲ್ಲಿಯ 02ಎಕರೆಯ ಜಮೀನಿಗೆ ಗುರಪ್ಪ ತಂದೆ ಹಣಮಪ್ಪ ಲಿಂಗದಳ್ಳಿ ಸಾ||ಹೊರಟ್ಟಿ ಇವರ ಹೊಲದ ಬದುವಿಗೆ ಹೊಂದಿಕೊಂಡಿರುವ ದಾರಿಗುಂಟ ತಮ್ಮ ಹೊಲಕ್ಕೆ ಹೋಗಿ-ಬರುವುದ ಮಾಡುತ್ತಿದ್ದು ಈ ದಾರಿಗೆ ಸಂಬಂದಿಸಿದಂತೆ ಅವರ ನಡುವೆ ತಂಟೆತಕರಾರು ಮೋದಲಿನಿಂದಲು ಇರುತ್ತದೆ. ದಿನಾಂಕ:20/01/2018ರಂದು ಮುಂಜಾನೆ ಪಿಯರ್ಾದಿಯು ತಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮುಂಜಾನೆ 09:00 ಗಂಟೆಯ ಸುಮಾರಿಗೆ ಗುರಪ್ಪ ತಂದೆ ಹಣಮಪ್ಪ ಲಿಂಗದಳ್ಳಿ ಸಾ||ಹೊರಟ್ಟಿ ಈತನು ಒಂದು ಜೆ.ಸಿ.ಬಿ.ಯನ್ನು ತೆಗೆದುಕೊಂಡು ಬಂದು ತನ್ನ ಹೊಲದ ಬದುವಿಗೆ ಹೊಂದಿಕೊಂಡಿರುವ ಪಿಯರ್ಾದಿಯವರ ಹೊಲಕ್ಕೆ ಹೋಗುವ ದಾರಿಯನ್ನು ಕಿತ್ತಿಸುತ್ತಿದ್ದಾಗ ಪಿಯರ್ಾದಿಯು ಯಾಕೆ ನಮ್ಮ ಹೊಲಕ್ಕೆ ಹೋಗುವ ದಾರಿಯನ್ನು ಕಿತ್ತಿಸುತ್ತಿದ್ದಿಯಾ ಅಂತಾ ಕೇಳಿದಾಗ ಗುರಪ್ಪ ಲಂಗದಳ್ಳಿಯು ಲೇ ಭೋಸೂಡಿ ಸೂಳಿ ನಿನ್ನ ಹೊಲಕ್ಕೆ ಹೋಗಲು ಇಲ್ಲಿ ದಾರಿ ಇಲ್ಲ ಇವತ್ತಿನಿಂದ ನೀವು ಈ ದಾರಿಯಿಂದ ತಿರುಗಾಡ ಬ್ಯಾಡ ತಿರುಗಾಡಿದರೆ ನಿಮಗೆ ಜೀವಂತ ಬಿಡುವುದಿಲ್ಲ ಖಲಾಸ್ ಮಾಡುತ್ತೇನೆ ಅಂತಾ  ಅಂತಾ ಬೈದು ಜಗಳ ತೆಗೆದು ಸೀರೆ ಹಿಡಿದು ಜಗ್ಗಾಡಿ ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಗಾಯಪೆಟ್ಟು ಪಡೆಸಿ ಜೀವ ಬೇಧರಿಕೆ ಹಾಕಿರುತ್ತಾರೆ ಅಂತಾ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 09/2018 ಕಲಂ:  87 ಕೆ.ಪಿ ಎಕ್ಟ್ 1963;- 09/2018 ಕಲಂ:  87 ಕೆ.ಪಿ ಎಕ್ಟ್ 1963;- ದಿನಾಂಕ.25/01/2018 ರಂದು 5-30 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳುವ ಕುರಿತು ಪಿಸಿ-398 ರವರು ಪರವಾನಿಗೆಯನ್ನು ತಂದು ಹಾಜರಪಡಿಸಿದ್ದು ಜಪ್ತಿ ಪಮಚನಾಮೆಯ ಸಾರಾಂಶವೆನೆಂದರೆ ಮಾನ್ಯ ಮೌನೇಶ್ವರ ಮಾಲೀಪಾಟೀಲ ಸಿಪಿಐ ಯಾದಗಿರಿ ರವರು ಇಂದು ದಿನಾಂಕ: 25/01/2018 ರಂದು ಮದ್ಯಾಹ್ನ 12-45 ಗಂಟೆ ಸುಮಾರಿಗೆ ಯಾದಗಿರಿ ನಗರದ ಗಂಜ ಹತ್ತಿರ ಶಹನಜಾ ಶಹಾ ದಗರ್ಾದಕ್ಕೆ ಹೋಗುವ ರೋಡಿನ ಮೇಲೆ ಬರುವ ಮಹಾಲಕ್ಷ್ಮೀ ಆಯಿಲ್ ಮಿಲ್ ಹಿಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವರು ಇಸ್ಪೀಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಚಿತ ಭಾತ್ಮೀ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಹೋಗಿ  1-30 ಪಿಎಂಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಸದರಿಯವರು ತಮ್ಮ ಹೆಸರುಗಳು ಒಬ್ಬಬ್ಬರಾಗಿ 1.ಮಲ್ಲಿಕಾಜರ್ುನ ತಂ. ಸಿದ್ದರಾಮಯ್ಯ ಮಠಪತಿ ವಃ 28 ಜಾಃ ಜಂಗಮ ಉಃ ಒಕ್ಕಲುತನ ಸಾಃ ಅಲ್ಲಿಪೂರ ತಾಃ ಯಾದಗಿರಿ. 2. ಉಮೇಶ ತಂ.ವೆಂಕಣ್ಣ ಬಡಿಗೇರ ವಃ 26 ಜಾಃ ಬಡೀಗೇರ ಉಃ ಕಾರಪೆಂಟರ ಸಾಃ ಠಾಣಾಗುಂದಿ 3. ನಾಗಭೂಷಣ ತಂ. ಭಿಮಶಪ್ಪ ಅಂಬಿಗೇರ ವಃ 40 ಜಾಃ ಕಬ್ಬಲಿಗ ಉಃ ಕೂಲಿಕೆಲಸ ಸಾಃ ಕೋಲಿವಾಡ ಯಾದಗಿರಿ. 4. ರವೀಂದ್ರ ತಂ.ಆಂಜನೇಯ ಭಿಮಶಪ್ಪನವರ ವಃ 24 ಜಾಃ ಕಬ್ಬಲಿಗ ಉಃ ಕೂಲಿಕೆಲಸ ಸಾಃ ಗಣಪೂರ ಹಾಃವಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ. 5) ಮಲ್ಲಿಕಾಜರ್ುನ ತಂ. ಅಂಬ್ರಯ್ಯಸ್ವಾಮಿ ಹಿರೇಮಠ ವಃ 29 ಜಾಃ ಜಂಗಮ ಉಃ ಅರ್ಚಕರು ಸಾಃ ಮಾಣಿಕೇಶ್ವರಿ ನಗರ ಯಾದಗಿರಿ. ಅಂತಾ ತಿಳಿಸಿದ್ದು ಅವರ ಅಂಗಶೋದನೆ ಮಾಡಲಾಗಿ ಸದರಿಯವರ ಹತ್ತಿರ 24,000-00 ನಗದು ಹಣ, ಮತ್ತು 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು, ನಂತರ ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡಿದ್ದು ಜಪ್ತಿ ಪಂಚಾನಾಮೆಯನ್ನು 1-30 ಪಿ.ಎಮ್ ದಿಂದ 2-30 ಪಿ.ಎಮ್ ದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ 3-00 ಪಿಎಂಕ್ಕೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದು  ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ.09/2018 ಕಲಂ. 87 ಕೆಪಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!