Yadgir District Reported Crimes Updated on 23-01-2018

By blogger on ಮಂಗಳವಾರ, ಜನವರಿ 23, 2018


                                           Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 05/2018 ಕಲಂ: 302.201. ಐ ಪಿ ಸಿ  ;- ದಿನಾಂಕ 21-01-2018 ರಂದು 10-30 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಮಶಪ್ಪ ತಂದೆ ದೊಡ್ಡಪ್ಪ ಸಂಜೀವಿನಿ ವಯಾ|| 35 ವರ್ಷ ಜಾ|| ಕಬ್ಬಲಿಗೇರ ಉ|| ಒಕ್ಕಲುತನ ಸಾ|| ಬಳಿಚಕ್ರ. ತಾ|| ಜಿಲ್ಲಾ|| ಯಾದಗಿರಿ ಇವರು ಒಂದು ಗಣಕೀಕೃತ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಮಾಡಿದ್ದು.ಅದರ ಸಾರಾಂಶವೇನಂದರೆ. ನಾನು ಇಂದು ದಿನಾಂಕ 21-01-2018 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಹೊಟೆಲ್ ಹತ್ತಿರ ಬಂದಾಗ ಅಲ್ಲಿ ನಮ್ಮೂರಿನ ಜನರು ಕಾಳೆಬೆಳಗುಂದ ಬಳಿಚಕ್ರ ನಡುವೆ ಕಾಳೆಬೆಳಗುಂದಿ ಸೀಮಾಂತರದಲ್ಲಿ ಸರಕಾರಿ ಆರಣ್ಯ ಜಮೀನದಲ್ಲಿ  ರಸ್ತೆಯ ಪಕ್ಕದಲ್ಲಿ  ಯಾರೋ ಒಂದು ಶವ ಸುಟ್ಟಹಾಕಿ .ಹೋಗಿರುತ್ತಾರೆ ಅಂತಾ ಅಂದಾಡುತ್ತಿದ್ದರು ಆಗ ನಾನು ನೋಡಲು ನನ್ನ ಸೈಕಲ ಮೋಟಾರದ ಮೇಲೆ ಕಾಳೆಬೆಳಗುಂದಿ ರೋಡಿಗೆ ಹೊರಟು ನಮ್ಮೂರ ಸೀಮೆ ದಾಟಿ ನಮ್ಮೂರಿನಿಂದ 3 ಕಿ ಮೀಟರ ದಾಟಿ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ. ಕಾಳೆಬೆಳಗುಂದಿ ಸೀಮಾಂತರದಲ್ಲಿ ಸರಕಾರಿ ಆರಣ್ಯ ಜಮೀನದಲ್ಲಿ ರಸ್ತೆಯ ಬಲಗಡೆ  30 ಪೀಟ ಅಂತರದಲ್ಲಿ ಜನರು ನೆರೆದು ನೋಡುತ್ತಿದ್ದರು. ಆಗ ನಾನು ನನ್ನ ಸೈಕಲ ಮೊಟಾರನ್ನು ನಿಲ್ಲಿಸಿ ಹೋಗಿ ನೋಡಲು. ಒಂದು ಗಂಡು ಮನುಷ್ಯನ ಅಪರಿಚಿತ ಶವ ಇದ್ದು.ತಲೆಯಿಂದ ಮೊಣಕಾಲುವರೆಗೆ ಪೂತರ್ಿ ಸುಟ್ಟಿದ್ದು. ಶವ ಗುತರ್ುಸಿಗದ ಪರಸ್ತಿತಿಯಲ್ಲಿದ್ದು. ಶವದ ಮುಖದ ಮೇಲೆ ಯಾವುದೋ ಬಟ್ಟೆಯನ್ನು ಹಾಕಿ ಮೇಲೆ ಯಾವುದೊ ಎಣ್ಣಿಯನ್ನು ಹಾಕಿ ಸುಟ್ಟಂತೆ ಕಂಡುಬರುತ್ತಿದ್ದು. ಶವದ ಮೊಣಕಾಲಿನಿಂದ ಕೆಳಗೆ  ಸುಟ್ಟಿರುವದಿಲ್ಲಾ. ಕಾಲುಗಳನ್ನು ನೋಡಲು ಬಲ ಮೊಣಕಾಲ ಮೇಲೆ ತೊಡೆಯ ಹತ್ತಿರ ಅರ್ಧ ಮರ್ದ ಸುಟ್ಟ ದೋತರ ಕಂಡು ಬರುತ್ತದೆ. ಮೃತನ ಅಂದಾಜು ವಯಾಸ್ಸು 25 ರಿಂದ 30 ವರ್ಷ ಇರಬಹುದು. ಘಟನೆಯು ದಿನಾಂಕ 20-01-2018 ರಂದು ರಾತ್ರಿ ಅಂದಾಜು 11 ಗಂಟೆಯಿಂದ  ದಿನಾಂಕ 21-01-2018 ರಂದು ಅಂದಾಜು ಬೆಳೆಗ್ಗೆ 5 ಗಂಟೆಯ ಒಳಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಶವ ಗುತರ್ುಸಿಗಬಾರದೆಂದು ಸಾಕ್ಷಿ ನಾಶಪಡಿಸಲು ಸುಟ್ಟು ಹಾಕಿ ಹೋದಂತೆ ಕಂಡುಬರುತ್ತದೆ. ಮೃತ ಹೆಸರು ವಿಳಾಸವನ್ನು ಪತ್ತೆ ಮಾಡಿ ಕಾನೂನ ರೀತಿಯ ಕ್ರಮವನ್ನು ಕೈಕೊಳ್ಳು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 05/2018 ಕಲಂ 302.201 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 24/2018 ಕಲಂ: 419, 420 ಐಪಿಸಿ;-ದಿನಾಂಕ:22/01/2018 ರಂದು 9.30 ಎ.ಎಂ.ಕ್ಕೆ ಶ್ರೀಮತಿ ರೇಣುಕಾ ಗಂಡ ದಿ|| ಹಣಮಂತ ಕೋನೇರ ವ|| 32 ವರ್ಷ ಜಾ|| ಬೇಡರ ಉ|| ಮನೆಗೆಲಸ ಸಾ|| ವಾಲ್ಮಿಕಿನಗರ, ಯಾದಗಿರಿ ತಾ||ಜಿ||ಯಾದಗಿರಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿಯಲ್ಲಿ ಮನೆ ಕಟ್ಟಿಸುತ್ತಿದ್ದು, ಹಣದ ಅಡಚಣೆ ಇದ್ದುದರಿಂದ ಮನೆಯ ಕಾಲಂ ಹಾಕಿ ಮನೆ ಕಟ್ಟಿಸುವದನ್ನು ಅರ್ಧಕ್ಕೆ ನಿಲ್ಲಿಸಿರುತ್ತೇನೆ. ಈಗ್ಗೆ ಸುಮಾರು 1 ಳಿ ತಿಂಗಳ ಹಿಂದೆ ನಮ್ಮ ಮನೆಯ ಹತ್ತಿರ ಒಬ್ಬ ಸ್ವಾಮೀಜಿಯಂತೆ ವೇಷ ಹಾಕಿಕೊಂಡು ಬಂದ ವ್ಯಕ್ತಿಯು ನನಗೆ ಯಾಕೆ ಮನೆ ಕಟ್ಟಿಸುವುದು ನಿಲ್ಲಿಸಿದ್ದೀರಿ ಅಂತಾ ಇತ್ಯಾದಿ ಮಾತನಾಡಿಸಿ ನಿಮಗೆ 15 ಲಕ್ಷ ಲೋನ್ ಕೊಡಿಸುತ್ತೇನೆ ಅದಕ್ಕೆ 3 ಲಕ್ಷ ಕಮಿಷನ್ ಕೊಡಬೇಕಾಗುತ್ತದೆ ಮರಳಿ ಅಷ್ಟು ಹಣ ಕೊಡಬೇಕಾಗಿಲ್ಲ ಅಂತಾ ಇತ್ಯಾದಿಯಾಗಿ ಹೇಳಿ ನನಗೆ ನಂಬಿಸಿ ದಿನಾಂಕ; 11/01/2018 ರಂದು ಒಬ್ಬ ಮಹಿಳೆಗೆ ನನ್ನ ಹತ್ತಿರ ಕಳುಹಿಸಿದ್ದು, ಅವಳು ಹೇಳಿದಂತೆ ಅವಳಿಗೆ ನನ್ನ ಹತ್ತಿರ ಇದ್ದ, 50500=00 ರೂಪಾಯಿಗಳನ್ನು ಬ್ಯಾಂಕಿಗೆ ಹಾಕಲು ಕೊಟ್ಟಿದ್ದು, ಅವಳು ನನಗೆ ಶಹಾಪುರ ಎಸ್.ಬಿ.ಹೆಚ್ ಬ್ಯಾಂಕಿಗೆ ಕರೆದುಕೊಂಡು ಹೋಗಿ ಓಚರ ತುಂಬಿದಂತೆ ಮಾಡಿ ಓಚರ ತಪ್ಪಾಗಿದೆ ಇನ್ನೊಂದು ಓಚರ ತೆಗೆದುಕೊಂಡು ಬಾ ಅಂತಾ ಹೇಳಿ ಇನ್ನೊಂದು ಓಚರ ತರಲು ಹೋಗಿ ಓಚರ ತೆಗೆದುಕೊಂಡು ಬಂದಾಗ ಅವಳು ಅಲ್ಲಿಂದ ಹೋಗಿದ್ದಳು ನಂತರ ಅವಳಿಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ
ಕಾರಣ ನಾನು ಸ್ವಾಮೀಜಿ ಇದ್ದೇನೆ ನನಗೆ ಬ್ಯಾಂಕಿನವರು ಪರಿಚಯ ಇರುತ್ತಾರೆ ಅಂತಾ ನಟಿಸಿ 15 ಲಕ್ಷ ಸಾಲ ಕೊಡಿಸುತ್ತೇನೆ ಅದಕ್ಕಾಗಿ ಕಮಿಷನ್ 3 ಲಕ್ಷ ಕೊಡಬೇಕು ಮರಳಿ 15 ಲಕ್ಷ  ಕಟ್ಟುವ ಅಗತ್ಯವಿಲ್ಲಾ ಅಂತಾ ನಂಬಿಸಿ ನನಗೆ ಕಮಿಷನ್ ಹಣ ಕೊಡುವಂತೆ ಪ್ರೇರೇಪಿಸಿ ನನ್ನಿಂದ 50,500/- ರೂಪಾಯಿಗಳನ್ನು ತೆಗೆದುಕೊಂಡು ಮೋಸ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2018 ಕಲಂ 419, 420 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 08/2018 ಕಲಂ 279, 337, 338 ಐಪಿಸಿ ಸಂ. 187 ಐ.ಎಂ.ವಿ ಆಕ್ಟ್ ;- ದಿನಾಂಕ 23.01.2018 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಪಿರ್ಯಾಧಿದಾರನು ಯಾದಗಿರಿ-ಹೈದ್ರಬಾದ ರೋಡಿನ ಮೇಲೆ ರವಿಂದ್ರರೆಡ್ಡಿ ಪೆಟ್ರೋಲ್ ಬಂಕ ಹತ್ತಿರ ಗ್ಯಾರೇಜದಲ್ಲಿ ತನ್ನ ಶಾಲಾ ವಾಹನ ಬಸ್ಸಿಗೆ ಗಾಳಿ ತುಂಬಿಸುತ್ತಿದ್ದಾಗ ಗುರುಮಠಕಲ ಕಡೆಯಿಂದ ಟ್ರ್ಯಾಕ್ಟರ ಇಂಜಿನ ನಂ. ಕೆಎ-33-ಟಿಎ-8562 ನೆದ್ದರ ಅಖ ಓಔ: 08.2017ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೊಂಕಲ ಕಡೆಯಿಂದ ಬರುತ್ತಿದ್ದ ಮೋಟರ ಸೈಕಲ ಸವಾರ ಅಲ್ತಪ ಹುಸೇನ ತಂದೆ ಮೈನೋದ್ದಿನ ಈತನ ಮೋಟರ ಸೈಕಲ ನಂ. ಕೆಎ-33-ಆರ್-1236ನೆದ್ದಕ್ಕೆ ಜೋರಾಗಿ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಅಲ್ತಪ ಹುಸೇನ ಈತನಿಗೆ ಮೂಗಿಗೆ ಭಾರಿ ರಕ್ತಗಾಯವಾಗಿ, ಬಲಕಾಲು ಮೊಳಕಾಲು ಕೆಳಗೆ ಮುರಿದಂತಾಗಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಅಪಘಾತಪಡಿಸಿದ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!