Yadgir District Reported Crimes Updated on 20-01-2018

By blogger on ಶನಿವಾರ, ಜನವರಿ 20, 2018


                                          Yadgir District Reported Crimes
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 09/2018 ಕಲಂ 143,147,148,323,324,504,506 ಸಂಗಡ 149 ಐಪಿಸಿ ;- ಸುಮಾರು 15 ದಿವಸಗಳ ಹಿಂದೆ ಜರುಗಿದ ಮಹಿಬೂಬಸುಭಾನಿ ಜಾತ್ರೆ ಕಾಲಕ್ಕೆ ಊಟದ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತರಿಗೂ ಜಗಳವಾಗಿದ್ದು ಆ ಕಾಲಕ್ಕೆ ಗ್ರಾಮದಲ್ಲೇ ಹಿರಿಯರು ಜಗಳವನ್ನು ಬಗೆಹರಿಸಿದ್ದು ಇರುತ್ತದೆ. ಆವಾಗಿನಿಂದ ಆರೋಪಿತರು ಫಿಯರ್ಾದಿ ಮೇಲೆ ದ್ವೇಷ ಸಾಧಿಸುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:18/01/2018 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಫಿಯರ್ಾದಿಯು ತನ್ನ ಮನೆಯ ಮುಂದೆ ಕುಳಿತಾಗ ಆರೋಪಿತರಾದ ಮೈಲಾರಿ ತಂದೆ ಮಾರ್ಥಂಡಪ್ಪ ಮದ್ರಕಿ ಸಂಗಡ 5 ಜನರು ಎಲ್ಲರೂ ಸಾ:ಮುಡಬೂಳ ಇವರೆಲ್ಲರೂ ಕೂಡಿಕೊಂಡು ಬಂದವರೇ ಮೈಲಾರಿ ಈತನು ಭೋಸಡಿ ಮಗನೆ ನಿನ್ನ ಸೊಕ್ಕು ಬಹಳವಾಗಿದೆ, ಊರಲ್ಲಿ ಹಿರಿತನ ಬಹಳ ನಡೆಸಿದ್ದಿಯಾ ಅಂತಾ ಅಂದವನೇ ಅಲ್ಲೇ ಬಿದ್ದಿರುವ ಒಂದು ಕಾಡು ಕಟ್ಟಿಗೆಯನ್ನು ತೆಗೆದುಕೊಂಡವನೇ ಫಿಯರ್ಾದಿಯ ಬೆನ್ನಿಗೆ ಹೊಡೆದು ಕಂದು ಗಟ್ಟಿದ ಗಾಯ ಮಾಡಿದನು. ಇನ್ನುಳಿದವರು ನನ್ನ ಎದೆ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ದೂರು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 17/2018 ಕಲಂ: 302 ಐ.ಪಿ.ಸಿ;- ದಿನಾಂಕ 19/01/2018 ರಂದು 9.00 ಗಂಟೆಗೆ ಶ್ರೀ ಶಿವಪ್ಪ ತಂದೆ ಸಾಯಬಣ್ಣ ಟಣಕೆದಾರ್, ವಯ:40 ವರ್ಷ, ಜಾತಿ:ಬೇಡರು, ಉ||ಒಕ್ಕಲುತನ, ಸಾ||ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ. ನನ್ನ ಚಿಕ್ಕಪನಾದ ಭೀಮಣ್ಣ ಟಣಕೆದಾರ ಇವರಿಗೆ 1)ತಿರುಪತಿ, 2)ಪಾರ್ವತಮ್ಮ, 3)ಪದ್ದಮ್ಮ, 4)ಸಾವಿತ್ರಮ್ಮ ಹೆಸರಿನ ನಾಲ್ಕುಜನ ಮಕ್ಕಳಿದ್ದು, ಪಾರ್ವತಮ್ಮಳಿಗೆ ಕಾಡಂಗೇರಿಗೆ ಮದುವೆಮಾಡಿಕೊಟ್ಟಿದ್ದು, ಪದ್ದಮ್ಮಳಿಗೆ ನಗನೂರಿಗೆ ಮದುವೆಮಾಡಿಕೊಟ್ಟಿರುತ್ತಾರೆ. ತಿರುಪತಿ ಈತನು ಸುಮಾರು 7 ವರ್ಷಗಳ ಹಿಂದೆ ಪರಸನಳ್ಳಿಯ ಶರಣಮ್ಮಳನ್ನು ಮದುವೆಯಾಗಿದ್ದು ಇರುತ್ತದೆ. ಸಾವಿತ್ರಮ್ಮ ಇವಳದು ಮದುವೆಯಾಗಿರುವುದಿಲ್ಲಾ, ಹರವಾಳ ಗ್ರಾಮದ ತನ್ನ ಚಿಕ್ಕಮ್ಮಳ ಮನೆಯಲ್ಲಿರುತ್ತಾಳೆ. ನನ್ನ ಚಿಕ್ಕಪ್ಪನಾದ ಭೀಮಣ್ಣ ಟಣಕೇದಾರ ಮತ್ತು ಚಿಕ್ಕಮ್ಮಳಾದ ಭೀಮಬಾಯಿ ಇಬ್ಬರು ಮೃತಪಟ್ಟಿರುತ್ತಾರೆ. ಅವರ ಮನೆಯಲ್ಲಿ ತಿರುಪತಿ ಮತ್ತು ಆತನ ಹೆಂಡತಿ ಶರಣಮ್ಮ ಹಾಗು ಅವರ ಮಗನಾದ ರಾಜಶೇಖರ ವಯ:6 ವರ್ಷ ಮತ್ತು ಮಗಳಾದ ಭೀಮಬಾಯಿ ವಯ:4 ವರ್ಷ ಇವರು ಇರುತ್ತಾರೆ. ನನ್ನ ತಮ್ಮನಾದ ತಿರುಪತಿಗೆ ಆಗಾಗ ಸರಾಯಿ ಕುಡಿಯುವ ಚಟ ಇತ್ತು. ತಿರುಪತಿ ಈತನ ಒಂದು ಎಕರೆ ಹೊಲವು ಆತನ ಮನೆಯ ಸಮೀಪ ಊರಿನ ಪಕ್ಕದಲ್ಲಿಯೇ ಇರುತ್ತದೆ. ತಿರುಪತಿಯ ಹೊಲದ ಪಕ್ಕದಲ್ಲಿ ನಮ್ಮೂರಿನ ಹಣಮಂತ್ರಾಯಗೌಡ ಇವರ ಹೊಲ ಇದ್ದು, ಅವರ ಹೊಲವನ್ನು ಚಂದ್ರಪ್ಪ ತಂದೆ ಬಾಲಪ್ಪ ಯಂಕಂಚಿ ಇವರು ಪಾಲಿಗೆ ಮಾಡುತ್ತಾರೆ. ಹೊಲಗಳಿಗೆ ಕೆನಾಲ್ ನೀರು ಬಿಡುವ ಸಂಬಂಧವಾಗಿ ಈ ಹಿಂದೆ ತಿರುಪತಿ ಮತ್ತು ಚಂದ್ರಪ್ಪ ರವರ ಮಧ್ಯೆ ಬಾಯಿಮಾತಿನ ತಕರಾರುಗಳಾಗಿರುತ್ತವೆ. ಹೀಗಿದ್ದು ನಿನ್ನೆ ದಿನಾಂಕ:18/01/2018 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ತಿರುಪತಿ ಮತ್ತು ಚಂದ್ರಪ್ಪ ರವರು ಹೊಲದಲ್ಲಿ ಜಗಳವಾಡುತ್ತಿದ್ದ ಬಗ್ಗೆ ನನಗೆ ತಿಳಿದುಬಂದಿದ್ದರಿಂದ ನಾನು ಮತ್ತು ನನ್ನ ತಮ್ಮನಾದ ದೇವಪ್ಪ ಇಬ್ಬರು ಕೂಡಿಕೊಂಡು ಹೋಗಿದ್ದು, ಹೊಲದಲ್ಲಿ ಚಂದ್ರಪ್ಪ ಮತ್ತು ಚಂದ್ರಪ್ಪನ ಮಗನಾದ ಬಾಲಪ್ಪ ಮತ್ತು ಅವರ ಅಣ್ಣನ ಮಗನಾದ ಈರಪ್ಪ ತಂದೆ ಭೀಮಣ್ಣ ಯಂಕಂಚಿ ಇವರು ತಿರುಪತಿಯೊಂದಿಗೆ ನೀರಿನ ವಿಷಯದಲ್ಲಿ ಬಾಯಿಮಾತಿನ ಜಗಳವಾಡುತ್ತಿದ್ದಾಗ ಅದೇ ವೇಳೆಗೆ ನಮ್ಮೂರಿನ ಹಣಮಂತ್ರಾಯಗೌಡ, ಶಿವನಗೌಡ ಇವರು ಸಹ ಬಂದಿದ್ದು, ಎಲ್ಲರು ಕೂಡಿಕೊಂಡು ತಿರುಪತಿ ಮತ್ತು ಚಂದ್ರಪ್ಪ, ಚಂದ್ರಪ್ಪನ ಮಕ್ಕಳಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದು, ನಾನು ನಮ್ಮ ತಮ್ಮನಾದ ತಿರುಪತಿ ಸಾರಾಯಿ ಕುಡಿದಿದ್ದರಿಂದ ಅವನಿಗೆ ಕರೆದುಕೊಂಡು ಅವರ ಮನೆಗೆ ಹೋಗಿ ಬಿಟ್ಟುಹೋಗಿದ್ದು, ಮನೆಯಲ್ಲಿ ತಿರುಪತಿಯ ಹೆಂಡತಿ ಶರಣಮ್ಮ, ಅವರ ಮಗನಾದ ರಾಜಶೇಖರ ಇದ್ದರು. ಆಗ ಸಮಯ ಸಾಯಂಕಾಲ 7:00 ಗಂಟೆ ಆಗಿರಬಹುದು. ನಂತರ ನಾನು ನಮ್ಮ ಮನೆಗೆ ಹೋಗಿರುತ್ತೇನೆ. ರಾತ್ರಿ 11:00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ನನ್ನ ತಮ್ಮ ತಿರುಪತಿಯ ಹೆಂಡತಿಯಾದ ಶರಣಮ್ಮಳು ನಮ್ಮ ಮನೆಗೆ ಬಂದು ನನಗೆ ಎಬ್ಬಿಸಿ ತಿಳಿಸಿದ್ದೇನೆಂದರೆ, ನನ್ನ ಗಂಡ ತಿರುಪತಿ ಈತನಿಗೆ ಹಣೆ ಎಡಗಡೆ ಗಾಯವಾಗಿದ್ದು, ತೊಡ್ಡು ಬಾವುಬಂದಿದ್ದು ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಶರಣಮ್ಮಳೊಂದಿಗೆ ಅವರ ಮನೆಗೆ ಹೋಗಿ ನನ್ನ ತಮ್ಮ ತಿರುಪತಿಗೆ ನೋಡಲಾಗಿ ಹಣೆ ಎಡಗಡೆ ಸಣ್ಣ ರಕ್ತಗಾಯವಾಗಿದ್ದು, ತೊಡ್ಡು ಬಾವುಬಂದಿದ್ದು ಮೃತಪಟ್ಟಿದ್ದನು. ಶರಣಮ್ಮಳಿಗೆ ವಿಚಾರಿಸಲಾಗಿ ನಾನು ರಾತ್ರಿ ಮಲಗಿಕೊಂಡಿದ್ದೆ, ಏನಾಗಿದೆಯೋ ನನಗೆ ಗೊತ್ತಿಲ್ಲಾ, ನನಗೆ ಎಚ್ಚರವಾಗಿ ನೋಡಿ ಗಾಭರಿಯಾಗಿ ನಿಮ್ಮ ಮನೆಗೆ ಬಂದಿರುತ್ತೇನೆ ಅಂತಾ ತಿಳಿಸಿದಳು. ಕಾರಣ ನನ್ನ ತಮ್ಮನಾದ ತಿರುಪತಿ ತಂದೆ ಭೀಮಣ್ಣ ಟಣಕೆದಾರ, ವಯ:28 ವರ್ಷ ಈತನಿಗೆ ಯಾರೋ ಯಾವುದೋ ಉದ್ದೇಶಕ್ಕಾಗಿ ಕೊಲೆಮಾಡಿರುತ್ತಾರೆ. ನಿನ್ನೆ ರಾತ್ರಿಯಾಗಿದ್ದರಿಂದ ಕೆಂಭಾವಿಗೆ ಬರಲು ವಾಹನಗಳು ಇರದಿದ್ದರಿಂದ ಹಾಗು ಈ ವಿಷಯವಾಗಿ ಮನೆಯಲ್ಲಿ ವಿಚಾರಿಸಿ ಬರಲು ತಡವಾಗಿರುತ್ತದೆ. ಕಾರಣ ತಾವು ನನ್ನ ತಮ್ಮ ತಿರುಪತಿಗೆ ಕೊಲೆಮಾಡಿದವರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 17/2018 ಕಲಂ: 302 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 18/2018 ಕಲಂ: 457, 380 ಐ.ಪಿ.ಸಿ ;- ದಿ: 19/01/2018 ರಂದು 18.15 ಗಂಟೆಗೆ ಶ್ರೀ ನಾಗರಾಜ ತಂದೆ ಚಿಕ್ಕಯ್ಯ ಶೆಟ್ಟಿ ಜಾ|| ಶೆಟ್ಟಿ ವಯಾ|| 38 ಉ|| ಸಪ್ತಗಿರಿ ವೈನ್ಶಾಪ್ ಮ್ಯಾನೇಜರ್ ಕೆಂಭಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೆನೆಂದರೆ, ನಾನು ಸುಮಾರು 3-4 ತಿಂಗಳಿನಿಂದ ಕೆಂಭಾವಿ ಪಟ್ಟಣದ ಸಪ್ತಗಿರಿ ವೈನ್ಶಾಪಿನ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮದು ಶೆಟರ್ಸ್ ಅಂಗಡಿ ಇದ್ದು ಬೆಳಿಗ್ಗೆ 10 ಗಂಟೆಗೆ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಂದ್ ಮಾಡುತ್ತೇವೆ. ನಮ್ಮ ಅಂಗಡಿಯಲ್ಲಿ ಅಣ್ಣಪ್ಪ ಮತ್ತು ಸೋಮು ಎಂಬ ಎರಡು ಹುಡುಗರು ಕೂಲಿ ಕೆಲಸಕ್ಕೆ ಇರುತ್ತಾರೆ. ಎಂದಿನಂತೆ ನಿನ್ನೆ ದಿನಾಂಕ: 18/01/2018 ರಂದು ರಾತ್ರಿ 10 ಗಂಟೆಗೆ ಅಂಗಡಿ ಬಂದ್ ಮಾಡಿ ಎಲ್ಲ ಹಣ ತೆಗೆದುಕೊಂಡು 4500/- ರೂಪಾಯಿ ಡ್ರಾದಲ್ಲಿ ಇಟ್ಟು ಶೆಟರ್ಸ್ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 19/01/2018 ರಂದು ಬೆಳಿಗ್ಗೆ 6 ಗಂಟೆಗೆ ಯಾರೋ ಫೋನ್ ಮಾಡಿ ನಮ್ಮ ವೈನ್ಶಾಪದ ಶೆಟರ್ಸ ಮುರಿದಿದೆ ಅಂತ ತಿಳಿಸಿದಾಗ ನಾನು ನಮ್ಮ ವೈನ್ಶಾಪಿಗೆ ಬಂದು ನೋಡಲು ನಮ್ಮ ವೈನ್ಶಾಪಿನ ಶೆಟರ್ಸ್ ಮುರಿದು ಅರ್ದ ಎತ್ತಿದ್ದು ಆಗ ನಾನು ಕೀಲಿ ತೆಗೆದು ಒಳಗೆ ಹೋಗಿ ನೋಡಲಾಗಿ ಡ್ರಾದಲ್ಲಿದ್ದ 4500/- ರೂ ಹಣ ಇರಲಿಲ್ಲ ಹಾಗೂ 5 ಬಿಯರ್ ಬಾಟಲಿಗಳು ಸಹ ಕಳವು ಆಗಿದ್ದು ಇರುತ್ತದೆ. ಅದರಂತೆ ನಮ್ಮ ಅಂಗಡಿಯ ಸ್ವಲ್ಪ ದೂರದಲ್ಲಿ ಬಸವ ಸೆಂಚುರಿ ಬಟ್ಟೆ ಅಂಗಡಿಯು ಸಹ ಕಳವು ಆಗಿದ್ದು ಸದರಿ ಅಂಗಡಿಯ ಶೆಟರ್ಸ್ ಸಹ ಮುರಿದು ಕಳವು ಆಗಿದ್ದು ಸದರ ಅಂಗಡಿಯ ಮಾಲಿಕರಾದ ಭೀಮಾಶಂಕರ ರೆಡ್ಡಿ ರವರಿಗೆ ವಿಚಾರಿಸಲು ಅವರ ಅಂಗಡಿಯ ಗಲ್ಲೆಯಲ್ಲಿದ್ದ 7500/- ರೂ ಹಣ ಕಳವು ಆದ ಬಗ್ಗೆ ತಿಳಿಸಿದರು. ಅದರಂತೆಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಪ್ರಕಾಶ ಆಲ್ದಾಳ ಇವರ ಅಡತಿ ಅಂಗಡಿಯ ಶೆಟರ್ಸ್ ಮುರಿದು ಅಂಗಡಿಯ ಗಲ್ಲಾದಲ್ಲಿದ್ದ 5000/- ರೂ ಹಣ ಕಳವು ಆಗಿರುತ್ತದೆ ಮತ್ತು ದೇವರಾಜ ಪೂಜಾರಿ ಇವರ ಲಕ್ಷ್ಮೀ ಟ್ರೇಡರ್ಸ್ ಅಂಗಡಿಯ ಶೆಟರ್ಸ್ ಸಹ ಮುರಿದು ಸದರ ಅಂಗಡಿ ಗಲ್ಲಾದಲ್ಲಿದ್ದ 6500/- ರೂ ಕಳ್ಳತನ ಆಗಿದ್ದು ಇರುತ್ತದೆ. ಹೀಗೆ ಒಟ್ಟು 4 ಅಂಗಡಿಗಳು ಸೇರಿ 23,500/- ರೂ. ನಗದು ಹಣ ಹಾಗೂ 5 ಬೀಯರ್ ಅ.ಕಿ 650/- ರೂ ಕಿಮ್ಮತ್ತಿನ ವಸ್ತು ಹಾಗೂ ನಗದು ಹಣ ಕಳ್ಳತನವಾಗಿದ್ದು ಇರುತ್ತದೆ. ದಿನಾಂಕ: 18/01/2018 ರ ರಾತ್ರಿ 10 ಗಂಟೆಯಿಂದ ದಿನಾಂಕ: 19/01/2018 ರ ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿ ಸಮೇತ ಉಳಿದ ಇನ್ನೂ 3 ಅಂಗಡಿಗಳ ಶೆಟರ್ಸ್ ಮುರಿದು ನಗದು ಹಣ ಹಾಗೂ ಬೀಯರ್ ಬಾಟಲಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 18/2018 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
                                                                    
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 07/2018  ಕಲಂ 279, 337, 338 ಐಪಿಸಿ ;- ದಿನಾಂಕ 20/01/2018 ರಂದು ಬೆಳಿಗ್ಗೆ 7-45 ಎ.ಎಂ. ಸುಮಾರಿಗೆ ಫಿಯರ್ಾದಿಯವರು ಲಕ್ಷ್ಮೀನಗರದಿಂದ ನೀರು ತೆಗೆದುಕೊಂಡು ತಮ್ಮ ಮೋಟಾರು ಸೈಕಲ್ ನಂ.ಕೆಎ-36, ಇಬಿ- 2932 ನೆದ್ದರ ಮೇಲೆ ಮನೆಗೆ ಹೊರಟಾಗ ಮಾರ್ಗ ಮದ್ಯೆ ಕೋಟರ್ು ಎದುರುಗಡೆ ಎಸ್.ಬಿ.ಐ ಬ್ಯಾಂಕ್ ಹತ್ತಿರ ಮುಂದಿನ ಮುಖ್ಯ ರಸ್ತೆಯ ಮೇಲೆ ಆರೋಪಿತ ತನ್ನ ಮೋಟಾರು ಸೈಕಲ್ ನಂ.ಕೆಎ-33, ಎಚ್-6369 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಫಿಯರ್ಾದಿಯ ಮೋಟಾರು ಸೈಕಲ್ಗೆ ಡಿಕ್ಕಿ ಕೊಟ್ಟು ನಂತರ ರಸ್ತೆಯ ಡಿವೆಡರ್ ಜಾಲಿಗೆ ಡಿಕ್ಕಿಕೊಟ್ಟು ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ಮತ್ತು ಆರೋಪಿತನ ಮೋಟಾರು ಸೈಕಲ್ ಮೇಲೆ ಕುಳಿತ ಹಿಂಬದಿ ಸವಾರನಿಗೆ ಸಾದಾ ಮತ್ತು ಭಾರೀ ರಕ್ತಗಾಯವಾದ ಬಗ್ಗೆ ಫಿಯರ್ಾದಿ ಇರುತ್ತದೆ.

ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ 323,354(ಬಿ),504,506 ಐಪಿಸಿ ಹಾಗು 8 ಪೋಕ್ಸೋ ಎಕ್ಟ್ ಹಾಗೂ 3(1)(ಆರ್)(ಎಸ್)(ಡಬ್ಲು);- ದಿನಾಂಕ:20/01/2018 ರಂದು 12 ಪಿಎಮ್ಕ್ಕೆ ಫಿಯರ್ಾದಿ ಮಾಳಮ್ಮ ತಂದೆ ರಮೇಶ ದೊಡಮನಿ ವ:17ವರ್ಷ ಜಾ:ಮಾದರ ಉ:ವಿದ್ಯಾಭ್ಯಾಸ ಸಾ:ಇಂಗಳಗಿ ತಾ:ಶಹಾಪೂರ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿಯರ್ಾದಿ ಕೊಟ್ಟಿದ್ದೇನೆಂದರೆ ನಮ್ಮ ತಂದೆತಾಯಿಗೆ ಮೂರು ಜನ ಗಂಡು ಮಕ್ಕಳು ಹಾಗು ನಾನು ಒಬ್ಬಾಕೆ ಹೆಣ್ಣು ಮಗಳಿರುತ್ತೇನೆ. ನಮ್ಮ ತಂದೆ ತಾಯಿಯವರು ನನ್ನ ವಿದ್ಯಾಭ್ಯಾಸ ಕುರಿತು ನಮ್ಮ ಸಂಬಂಧಿಕರು ಇರುವ ಯಡ್ರಾಮಿಯಲ್ಲಿ ಬಿಟ್ಟಿದ್ದು ನಾನು ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿರುತ್ತೇನೆ. ಆಗಾಗ ಹಬ್ಬ ಹರಿದಿನಗಳಲ್ಲಿ ನಮ್ಮ ಊರಿಗೆ ಬಂದು ಹೋಗುತ್ತಿದ್ದೆ. ಹೀಗಿದ್ದು ಮೊನ್ನೆ ಸಂಕ್ರಾತಿ ಹಬ್ಬದ ಕುರಿತು ಊರಿಗೆ ಬಂದಿದ್ದೆ. ಹಬ್ಬ ಮುಗಿದಿದ್ದರಿಂದ ಇಂದು ಮರಳಿ ಯಡ್ರಾಮಿಗೆ ಹೋಗಬೇಕೆಂದು ಬೆಳಿಗ್ಗೆ ಎದ್ದು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬಹಿದರ್ೆಸೆ ಬಂದಿದ್ದರಿಂದ ನಮ್ಮ ತಾಯಿಗೆ ಹೇಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಹಿದರ್ೆಸೆಗೆಂದು ಶಹಾಪೂರ ರೋಡಿಗೆ ಇರುವ ಬಸನಗೌಡರ  ಹೊಲಕ್ಕೆ ಹೋದೆ. ನಮ್ಮೂರ ಹೆಣ್ಣು ಮಕ್ಕಳು ಕೂಡಾ ಸಂಡಾಸಕ್ಕೆಂದು ಗೌಡರ ಹತ್ತಿ ಹೊಲಕ್ಕೆ ಹೋಗುತ್ತಾರೆ. ಆದರೆ ಹೊತ್ತು ಜಾಸ್ತಿ ಆಗಿದ್ದರಿಂದ  ಅಲ್ಲಿ ಯಾರೂ ಇರಲಿಲ್ಲಾ. ನಾನು ಹೊಲದ ಒಳಗೆ ಹತ್ತಿಯ ಹೊಲದಲ್ಲಿ ಹೋಗಿ ಬಹಿದರ್ೆಸೆಗೆ ಕೂತುಕೊಂಡಾಗ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಒಮ್ಮೆಲೆ ರೋಡಿನ ಕಡೆಯಿಂದ ನಮ್ಮೂರ ಕುರುಬ ಜನಾಂಗದ ಸಂತೋಷ ತಂದೆ ಶೇಖರ ಕಂದಕೂರ ಈತನು ನನ್ನ ಹತ್ತಿರ ಓಡಿ ಬಂದವನೇ ನನ್ನ ಬಾಯಿಯನ್ನು ಒತ್ತಿಹಿಡಿದು ನನ್ನನ್ನು ಎತ್ತಿಕೊಂಡು ನಾನು ಕುಳಿತ ಜಾಗದಿಂದ ಹತ್ತಿಯ ಹೊಲದಲ್ಲಿ ಮುಂದಕ್ಕೆ ಒಯ್ದು ನೀನು ನನಗೆ ಇಷ್ಟ ಆಗಿದಿ ನೀನು ನನ್ನ ಸಂಗಡ ಮಲಗಿಕೊ ಚೀರಾಡಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಅಂದು ನಿಂತಲ್ಲೇ ತನ್ನ ಪ್ಯಾಂಟನ್ನು ಬಿಚ್ಚಿಕೊಂಡು ನಿಂತಾಗ ನಾನು ಯಾಕೋ ನಿನಗೆ ನಿನ್ನ ಅಕ್ಕ ತಂಗಿಯರು ಇಲ್ಲವೇನು. ಅವರ ಹತ್ತಿರ ಹೋಗು ಅಂತ ಅಂದಾಗ ಎಲೇ ಮಾದಿಗ ಸೂಳಿ ನಾವು ಗೌಡ್ರು ಇದ್ದೀವಿ ಈಗ ನನ್ನ ಸಂಗಡ ಮಲಗಿಕೊಳ್ಳಲಿಲ್ಲ ಅಂದರ ನಿನಗ ಜೀವ ಸಹಿತ ಬಿಡುವುದಿಲ್ಲಾ ಅಂತ ನನಗೆ ಹಿಡಿದುಕೊಂಡು ನನ್ನ ಮೈ ಕೈ ಮುಟ್ಟಿ, ನನ್ನ ಬಲಗಡೆ ಗದ್ದಕ್ಕೆ ಆತ ಉಗುರಿನಿಂದ ಚೂರಿ ನನ್ನ ಲೆಗ್ಗಿನ್ ಹಿಡಿದು ಜಗ್ಗಿ ನನ್ನನ್ನು ಬೆತ್ತಲೆ ಮಾಡಲು ಬಂದಾಗ ಆಗ ನಾನು ಆತನಿಗೆ ದಬ್ಬಿಸಿಕೊಟ್ಟು ರೋಡಿನ ಕಡೆಗೆ ಓಡಿ ಬರುತ್ತಿದ್ದಂತೆ ನನ್ನ ತಾಯಿಯಾದ ಮರಲಿಂಗಮ್ಮ ಇವರು ಬಂದು ನೋಡಿದರು. ಆಗ ಅವನು ಜನರು ನೋಡುತ್ತಾರೆ ಅಂತ ಹತ್ತಿಯ ಹೊಲದೊಳಗೆ ಓಡಿಹೋದನು. ನಾನು ಮತ್ತು ನಮ್ಮ ತಾಯಿ ಕೂಡಿ ಮನೆಗೆ ಬಂದು ನಮ್ಮ ತಂದೆಯವರಾದ ರಮೇಶ, ಅಣ್ಣಂದಿರರಾದ ಸಂಜಯಕುಮಾರ ಮತ್ತು ಮಂಜುನಾಥ ಇವರಿಗೆ ವಿಷಯ ತಿಳಿಸಿ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನಗೆ ಜಾತಿ ನಿಂದನೆ ಮಾಡಿ ಮಾನಭಂಗ ಮಾಡಿ ಜೀವದ ಬೆದರಿಕೆ ಹಾಕಿದ ಸಂತೋಷ ಕಂದಕೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಫಿಯರ್ಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!