Yadgir District Reported Crimes Updated on 07-12-2017

By blogger on ಗುರುವಾರ, ಡಿಸೆಂಬರ್ 7, 2017


                                      Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 472/2017 ಕಲಂ 143 147 448 323 354 504 ಸಂ 149 ಐ.ಪಿ.ಸಿ  ;- ದಿನಾಂಕ 06/12/2017 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಶ್ರೀ ಸಂಗಣ್ಣ ತಂದೆ ಅಯ್ಯಣ್ಣ ದೇಸಾಯ ವಯ 62 ವರ್ಷ ಜಾತಿ ಲಿಂಗಾಯತ ಉಃ ಒಕ್ಕಲುತನ ಸಾಃ ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 06/12/2017 ರಂದು ಮದ್ಯಾಹ್ನ 14-00 ಗಂಟೆಗೆ ಫಿರ್ಯಾದಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಅನ್ನಪೂರ್ಣ ಇವಳ ಗಂಡನಾದ ವಿರೇಶ ತಂದೆ ಚಂದ್ರಶೇಖ ಇಟಗಿ ಸಾಃ ಕರದಾಳ ತಾಃ ಚಿತಾಪೂರ ಜಿಃ ಕಲಬುರಗಿ ಮತ್ತು ಇನ್ನೂ 4 ಜನರು ಜಗಳ ತೆಗೆಯುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು  ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮಗಳು ಅನ್ನಪೂರ್ಣ ಇವಳಿಗೆ ಕೈಯಿಂದ ಹೊಡೆ ಬಡೆ  ಗುಪ್ತಗಾಯ ಪಡಿಸಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 472/2017 ಕಲಂ 143 147 448  504 323 354  ಸಂ 149  ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 348/2017 ಕಲಂ. 323,324,341,427 ಸಂ.34 ಐಪಿಸಿ ;- ದಿನಾಂಕಃ 06/12/2017 ರಂದು 00-45 ಎ.ಎಮ್ ಕ್ಕೆ ಫಿಯರ್ಾದಿ ಶ್ರೀ ಇಮ್ತಿಯಾಜ ತದೆ ಮಹ್ಮದ ಹುಸೇನ ಗುತ್ತೇದಾರ ಸಾ: ಶೆಟ್ಟಿ ಮೊಹಲ್ಲಾ ಸುರಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನನ್ನ ನಾಲ್ಕನೇ ಮಗನಾದ ಇಲಿಯಾಸ್ ಹುಸೇನ ಇತನಿಗೆ ಕಳೆದ ಇದಮಿಲಾದ್ ಹಬ್ಬದ ಮೆರವಣಿಗೆ ಸಮಯದಲ್ಲಿ ದಾವುದ್ ಸಾ|| ರಂಗಂಪೇಟ ಇತನು ವಿನಾಕಾರಣ ಬೈದು ಕೈಯಿಂದ ಹೊಡೆದಿದ್ದನು. ಅಂದು ಹಬ್ಬ ಇದ್ದುದ್ದರಿಂದ ನಾವು ನಂತರ ವಿಚಾರಿಸದರಾಯಿತು ಎಂದು ಸುಮ್ಮನಿದ್ದೇವು. ದಿನಾಂಕಃ 05/12/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನನ್ನ ಮಕ್ಕಳಾದ ಇಲಿಯಾಸ್ ಹುಸೇನ ಹಾಗು ಮಹ್ಮದ ಅಯಾಜ ಇಬ್ಬರೂ ನಮ್ಮ ಬುಲೇಟ ವಾಹನ ತಗೆದುಕೊಂಡು ರಂಗಂಪೇಟಗೆ ಹೋಗಿ ಮೊನ್ನೆ ದಾವುದ್ ಏಕೆ ಹೊಡೆದಿರುತ್ತಾನೆ ಎಂದು ವಿಚಾರಿಸಿ ಬರುತ್ತೇವೆ ಅಂತಾ ಹೇಳಿ ಹೋದರು. ನಾನು ಅಲ್ಲಿ ಏನಾದರೂ ಕಿರಿಕಿರಿ ಆಗಬಹುದೆಂದು ಅವರು ಹೋದ ಸ್ವಲ್ಪ ಸಮಯದ ಬಳಿಕ ನನ್ನ ಸ್ನೇಹಿತನ ಮಗನಾದ ರಿಯಾಜ್ ತಂದೆ ಖಾಜಾ ಹುಸೇನ ಇತನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಹೊದೇನು. ಅಷ್ಟರಲ್ಲಿ ರಂಗಂಪೇಟ ದಾವೂದ ಮನೆಯ ಹತ್ತಿರ ದಾವೂದ ಹಾಗು ಅವನ ಗೆಳೆಯ ರಮೀಜ್ ತಂದೆ ತಾಜುದ್ದಿನ್ ಇಬ್ಬರೂ ಕೂಡಿ ನನ್ನ ಮಕ್ಕಳಿಗೆ ಕೈಯಿಂದ ಹೊಡೆಯುತ್ತಿದ್ದರು. ಆಗ ನಾವು ಬಿಡಿಸಿದೇವು. ಅಷ್ಟರಲ್ಲಿ ದಾವೂದ ಅಲ್ಲಿ ಬಿದ್ದ ಕಲ್ಲನ್ನು ತಗೆದುಕೊಂಡು ನನ್ನ ಮಗ ಇಲಿಯಾಜನ ಎಡಗಟ್ಟಿಗೆ ಹೊಡೆದು ಗಾಯಗೊಳಿಸಿದನು. ಅವರ ಪರವಾಗಿ ಯಾರೋ ಇನ್ನಿಬ್ಬರೂ ಬಂದು ನನಗೆ ಮತ್ತು ನನ್ನ ಮಗ ಅಯಾಜನಿಗೆ ಕೈಯಿಂದ ಹೊಡೆದಿರುತ್ತಾರೆ. ಆಗ ರಾತ್ರಿ 8-45 ಗಂಟೆಯಾಗಿರಬಹುದು. ಅಲ್ಲಿಂದ ನಾನು ನನ್ನ ಮಕ್ಕಳಿಗೆ ಕಾರಿನಲ್ಲಿ ಕೂಡಿಸಿಕೊಂಡು ಬರುವಾಗ ಮತ್ತೆ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಹೊಡೆದರು. ನಾವು ತಪ್ಪಿಸಿಕೊಂಡು ಕಾರಿನಲ್ಲಿ ಬರುವಾಗ ಹಿಂದಿನಿಂದ ಕಾರಿಗೆ ಕಲ್ಲಿನಿಂದ ಹೊಡೆದಿರುತ್ತಾರೆ. ನಾನು ನನ್ನ ಮಗನಿಗೆ ಸಕರ್ಾರಿ ಆಸ್ಪತ್ರೆಗೆ ತೋರಿಸಲು ಕರೆದುಕೊಂಡು ಹೋದಾಗ ಅವರಲ್ಲಿ ಯಾರೋ ನಮ್ಮ ಮನೆಯ ಹತ್ತಿರ ಹೋಗಿ ಕಲ್ಲಿನಿಂದ ಹೊಡೆದು ಕಿಟಕಿ ಗಾಜುಗಳನ್ನು ಜಖಂಗೊಳಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 348/2017 ಕಲಂ. 323 324 341 427 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 210/2017 ಕಲಂ: 379 ಐಪಿಸಿ;-ದಿನಾಂಕ: 06/12/2017 ರಂದು 11-30 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಇಬ್ರಾಹೀಂ ಕಲೀಲ ತಂದೆ ಸೈಯದ್ ಮುತರ್ುಜಾ ಲೈನ್ ವ|| 38 ಜಾ|| ಮುಸ್ಲೀಂ ಉ|| ಟಿಪ್ಪರ ಮಾಲಿಕ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಮಲ್ಲಾದ ಪಟ್ಟಣಶೆಟ್ಟಿ ಇವರ ಹೊಲದಲ್ಲಿನ ಶೆಡ್ಡಿನಲ್ಲಿ ನಿಲ್ಲಿಸಿದ ತನ್ನ ಟಿಪ್ಪರ ಕೆಎ-08 3268 ನೇದ್ದರ ಐದು ಟಾಯರ ಡಿಕ್ಸ ಸಮೇತ ಅ||ಕಿ|| 40,000/- ರೂ ಹಾಗು ಎರಡು ಬ್ಯಾಟರಿಗಳು ಅ||ಕಿ|| 8000/- ರೂ ಹೀಗೆ ಒಟ್ಟು 48,000/- ರೂಪಾಯಿ ಬೆಲೆ ಬಾಳುವ ಟಿಪ್ಪರ ಸಾಮಾನುಗಳನ್ನು ದಿನಾಂಕ 02/10/2017 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ  210/2017 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.


ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 379  ಕಅ    ಸಂಗಡ     21(3)(4)  ಒಒಆಖ  ಂಅಖಿ  1957 ;- ದಿನಾಂಕ: 06.12.2017 ರಂದು  ನಾನು ಬೆಳಿಗ್ಗೆ 06.00 ಗಂಟೆಗೆ ಠಾಣೆಯಲ್ಲಿದ್ದಾಗ ಕೊಡೇಕಲ್ಲ-ತಾಳಿಕೋಟಿ ಮುಖ್ಯ ರಸ್ತಯ ಮೇಲೆ ಕುರೇಕನಾಳ ಹಳ್ಳದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬೂದಿಹಾಳ ಗ್ರಾಮದ ಕಡೆಗೆ ರಸ್ತೆಯ ಮೇಲಿಂದ ಟ್ರ್ಯಾಕ್ಟರ್ಗಳು ಹೋಗುತ್ತವೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿಸಿ-299 ಶಂಕರಗೌಡ ರವರಿಗೆ ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ತಿಳಸಿದ್ದು, ಪಿಸಿ-299 ರವರು 06.15 ಗಂಟೆಗೆ ಪಂಚರನ್ನಾಗಿ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ, ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ: ಇಬ್ಬರು ಕೊಡೆಕಲ್ಲ ರವರಿಗೆ ಕರೆದುಕೊಂಡು ಬಂದಿದ್ದು ಪಂಚರಿಗೆ ವಿಷಯವನ್ನು ತಿಳಿಸಿ ಸಿಬ್ಬಂದಿಯವರಾದ ಹೆಚ್ಸಿ-100 ಬಸನಗೌಡ, ವೆಂಕಟೇಶ ಪಿಸಿ-132, ಶಂಕರಗೌಡ ಪಿಸಿ-299 ರವರಿಗೆ ಹಾಗು ಪಂಚರನ್ನು ಕರೆದುಕೊಂಡು ಠಾಣೆಯಿಂದ 06.30 ಎ.ಎಮ್ ಕ್ಕೆ  ಒಂದು ಖಾಸಗಿ ವಾಹನದಲ್ಲಿ ಕುಡಿಸಿಕೊಂಡು ಹೊರಟು ಬಾತ್ಮಿ ಬಂದ ಸ್ಥಳವಾದ ಬೂದಿಹಾಳ ಗ್ರಾಮದ ವಾಲ್ಮೀಖಿ ವೃತ್ತದ ಹತ್ತಿರ 06.50 ಗಂಟೆಗೆ ತಲುಪಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ರಸ್ತೆಯ ಮೇಲೆ ನಿಂತು 8-10 ನಿಮಿಷಗಳ ಕಾಲ ಕಾಯ್ದು ನೋಡುವಷ್ಟರಲ್ಲಿ ತಾಳಿಕೋಟಿ ಕಡೆಯಿಂದ  ರೋಡಿನ ಮೇಲಿಂದ ಒಂದು ಟ್ರ್ಯಾಕ್ಟರ್ ಮರಳನ್ನು ತುಂಬಿಕೊಂಡು ಬರುತ್ತಿದ್ದು, ನಾನು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು, ಟ್ರ್ಯಾಕ್ಟರ್ ಚಾಲಕನು ಸ್ವಲ್ಪ  ದೂರದಲ್ಲಿಯೇ ಟ್ರ್ಯಾಕ್ಟರ್ನ್ನು ನಿಲ್ಲಿಸಿ ಓಡ ಹತ್ತಿದ್ದು, ಹಿಡಿಯಲು ಬೆನ್ನು ಹತ್ತಿದರೂ ಸಿಗಲಿಲ್ಲ. ಸದರ ಟ್ರ್ಯಾಕ್ಟರ್ ಇಂಜೀನ್ ನೋಡಲಾಗಿ ಕೆಂಪು ಬಣ್ಣದ ಮಹೇಂದ್ರ 475 ಡಿಐ ಕಂಪನಿಯದಿದ್ದು, ಅದರ ಇಂಜೀನ್ ನಂ:ಚಂಂಂಃಇ006462 ಇದ್ದು, ರೇಜಿಸ್ಟ್ರೆಶನ್ ನಂಬರ ಏಂ-36 ಂ-9733 ಟ್ರ್ಯಾಕ್ಟರ್ಗೆ ಜೋಡಿಸಿದ  ಟ್ರಾಲಿಯನ್ನು ನೋಡಲಾಗಿ ಅದರಲ್ಲಿ ಮರಳು ತುಂಬಿದ್ದು, ಕೇಸರಿ ಬಣ್ಣದಿದ್ದು ಎಡ-ಬಲ ಪಾಟಾಕ್ಗಳಿಗೆ ಸೊಹೇಲ್ ಇಂಜಿನಿಯರ ವಕ್ರ್ಸ ವಿಜಯಪೂರ ರೋಡ ಮುದ್ದೇಬಿಹಾಳ ಹಿಂದಿನ ಪಾಟ ಹಳದಿ ಬಣ್ಣದಿದ್ದು ಮದಕರಿ, ಹಬ್ಬುಲಿ, ರಾಜಾಹುಲಿ ಅಂತಾ ಬರೆದಿದ್ದು, ಅದರಲ್ಲಿ ತುಂಬಿದ ಮರಳಿನ ಕಿಮ್ಮತ್ತು 1400/- ಆಗುತ್ತಿದ್ದು, ಟ್ರೈಲಿಗೆ ರೇಜಿಸ್ಟ್ರೇಶನ್ ನಂಬರ ಬರೆದಿರುವದಿಲ್ಲ. ಸದರ ಟ್ರ್ಯಾಕ್ಟರ್ ಮತ್ತು ಟ್ರೈಲಿಯನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ಓಡಿ ಹೋದ ಟ್ರ್ಯಾಕ್ಟರ್ ಚಾಲಕನ ಹೆಸರು ಮೌನೇಶ ತಂದೆ ಯಮನಪ್ಪ ಕೊಡೇಕಲ್ಲ ವ:26 ವರ್ಷ ಜಾತಿ ಹಿಂದೂ ಬೇಡರ ಉ: ಟ್ಯಾಕ್ಟರ ಚಾಲಕ ಸಾ: ಹಾಳಬಸಾಪೂರ ತಾ: ಸುರಾಪೂರ ಅಂತಾ ಗೊತ್ತಾಗಿದು ಇವನೇ ಸದರಿ ವಾಹನದ ಮಾಲಿಕನಾಗಿರತ್ತಾನೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದು, ಸದರಿ ಚಾಲಕನು ಸರಕಾರಕ್ಕೆ ಯಾವುಧೇ ರಾಜಧನ ಭರಿಸದೇ ದಾಖಲೆಗಳು ಮತ್ತು ಪರವಾನಿಗೆ ಪತ್ರ ಪಡೆಯದೇ ಕುರೇಕನಾಳಹಳ್ಳದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಕಳ್ಳತನದಿಂದ ಮರಳನ್ನು ಟ್ರ್ಯಾಕ್ಟರ್ದಲ್ಲಿ ಸಾಗಿಸುತ್ತಿರುವದು ಕಂಡುಬಂದಿದ್ದು, ಈ ಬಗ್ಗೆ ಪಂಚರ ಸಮಕ್ಷಮದಲ್ಲಿ 07.00 ಎ.ಎಂ ದಿಂದ  ಗಂಟೆಯಿಂದ 08.00 ಎ.ಎಂ ಗಂಟೆ ವರೆಗೆ ಜಪ್ತಿ ಪಂಚನಾಮೆ ಮಾಡುವ ಮೂಲಕ ಟ್ರ್ಯಾಕ್ಟರ್ನ್ನು ಜಪ್ತುಪಡಿಸಿಕೊಂಡು ಜಪ್ತಿ ಮಾಡಿದ ಟ್ರ್ಯಾಕ್ಟರ್ ಮತ್ತು ಪಂಚನಾಮೆಯೊಂದಿಗೆ ನಿಮಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುಲು ಸೂಚಿಸಲಾಗಿದ್ದು ನಾನು ಪಿ ಎಸ್ ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 126/2017 ಕಲಂ 379 ಐಪಿಸಿ ಸಂಗಡ ಕಲಂ 21(3), 21(4)ಎಂ.ಎಂ.ಡಿ.ಆರ್. ಕಾಯ್ದೆ 1957  ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!