Yadgir District Reported Crimes Updated on 30-11-2017

By blogger on ಗುರುವಾರ, ನವೆಂಬರ್ 30, 2017


                                               Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 339/2017 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 29/11/2017 ರಂದು 1-30 ಪಿ.ಎಮ್ ಕ್ಕೆ ಶ್ರೀ ಹಣಮಂತ ತಂದೆ ಮರೆಪ್ಪ ದುಬೈ ಸಾ: ಬಸವಂತಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 28/11/2017 ರಂದು 2 ಪಿ.ಎಮ್ ಸುಮಾರಿಗೆ ನನ್ನ ತಂದೆಯಾದ ಮರೆಪ್ಪನವರು ದಿವಳಗುಡ್ಡಾದಲ್ಲಿ ಮರೆಮ್ಮ ದೇವಿ ಜಾತ್ರೆಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಬಂದಿದ್ದರು. ನಂತರ ರಾತ್ರಿ ನಾವು ಮನೆಯಲ್ಲಿದ್ದಾಗ 10-00 ಪಿ.ಎಮ್ ಸುಮಾರಿಗೆ ಸುರಪೂರದಿಂದ ನಮಗೆ ಪರಿಚಯದ ಭೀಮಾಶಂಕರ ಬಿಲ್ಲವ್ ಎಂಬುವವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಸುರಪೂರ ಪಟ್ಟಣದ ಹಸನಾಪೂರ ಕ್ರಾಸದಿಂದ ಕುಂಬಾರಪೇಟ ಕಡೆಗೆ ಹೋಗುವ ಬೈಪಾಸ್ ರಸ್ತೆಯ ಮೇಲೆ ಸೋಫಿ ಕಿರಾಣಿ ಅಂಗಡಿ ಮುಂಭಾಗದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ರಸ್ತೆ ದಾಟುವಾಗ ಲಾರಿ ಡಿಕ್ಕಿ ಪಡಿಸಿದ್ದರಿಂದ ಹೊಟ್ಟೆಗೆ ಹಾಗು  ಎಡಪಕ್ಕಡಿಗೆ ಭಾರಿ ಪೆಟ್ಟಾಗಿದ್ದು, ಆತನಿಗೆ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ದವಾಖಾನೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ಅದು ನಿಮ್ಮ ತಂದೆಯವರ ಶವವಿರುತ್ತದೆ ಅಂತಾ ತಿಳಿಸಿದನು. ಆಗ ರಾತ್ರಿಯಾಗಿದ್ದರಿಂದ ಇಂದು ದಿ: 29/11/2017 ರಂದು ನಾನು ಮತ್ತು ನನ್ನ ತಾಯಿ ಇಬ್ಬರೂ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಶವಾಗಾರ ಕೋಣೆಯಲ್ಲಿ ಹಾಕಿದ್ದ ನನ್ನ ತಂದೆಯವರ ಶವವನ್ನು ನೋಡಿ ಬಳಿಕ ನಾವು ಹಸನಾಪೂರ ಬೈಪಾಸ್ ರಸ್ತೆಯ ಮೇಲೆ ಸೋಫಿ ಕಿರಾಣಿ ಅಂಗಡಿ ಹತ್ತಿರ ಹೋಗಿ ಕಿರಾಣಿ ಅಂಗಡಿ ಮಾಲಿಕರಾದ ಮಹ್ಮದ ಸೋಫಿ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ನಿನ್ನೆ ಸಾಯಂಕಾಲ ಒಬ್ಬ ಅಪರಿಚಿತ ವ್ಯಕ್ತಿ 4-45 ಪಿ.ಎಮ್ ಸುಮಾರಿಗೆ ಕಿರಾಣಿ ಅಂಗಡಿ ಮುಂಬಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ನಡೆಯುತ್ತ ರಸ್ತೆ ದಾಟುತ್ತಿದ್ದಾಗ ಕುಂಬಾರಪೇಟ ಕಡೆಯಿಂದ ಲಾರಿ ನಂಬರ ಕೆ.ಎ 31-4601 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಆತನಿಗೆ ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ನೆಲಕ್ಕೆ ಬಿದ್ದಿದ್ದರಿಂದ ತಕ್ಷಣ ನಾವು ಹೋಗಿ ಎಬ್ಬಿಸಿ ನೀರು ಕುಡಿಸಿದ್ದು, ನಂತರ ಆತನು ಬೇಹೋಶ್ ಆಗಿದ್ದರಿಂದ ಅಪಘಾತ ಪಡಿಸಿದ ಲಾರಿ ಚಾಲಕನು ಅಲ್ಲೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಯಾವುದೋ ಅಟೋರಿಕ್ಷಾದವನಿಗೆ ಕರೆದು ಅದರಲ್ಲಿ ಗಾಯಾಳುವಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ, ನಂತರ ರಾತ್ರಿ ತನ್ನ ಲಾರಿ ತಗೆದುಕೊಂಡು ಹೋಗಿರುತ್ತಾನೆ. ಲಾರಿಚಾಲಕನ ಹೆಸರು, ವಿಳಾಸ ಗೊತ್ತಿರುವದಿಲ್ಲ. ನೋಡಿದರೆ ಗುತರ್ಿಸುತ್ತೇವೆ ಅಂತಾ ತಿಳಿಸಿರುತ್ತಾರೆ. ಕಾರಣ ಸದರಿ ಲಾರಿ ಚಾಲಕನಿಗೆ ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 339/2017 ಕಲಂಃ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 87 ಕೆ ಪಿ ಆಕ್ಟ ;- ದಿನಾಂಕ: 29.11.2017 ರಂದು 17:30 ಪಿ ಎಂ ಕ್ಕೆ  ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರವನ್ನು ಹಾಜಪಡಿಸಿದ್ದರ  ಸಾರಾಂಶವೆನೆಂದರೆ, ಇಂದು ದಿನಾಂಕ:29.11.2017 ರಂದು 3  ಪಿ.ಎಂ ಕ್ಕೆ ಪಿಎಸ್ಐ ಸಾಹೇಬರು ಠಾಣೆಯಲ್ಲಿದ್ದಾಗ  ಕೊಡೇಕಲ್ಲ ಸಿಮಾಂತರ ನೀಲಪ್ಪ ಪೂಜಾರಿ ಬೂದಿಹಾಳ ಇವರ ಹೊಲದ ಹತ್ತಿರದ ಸಕರ್ಾರಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ 03:10 ಪಿ ಎಂ ಕ್ಕೆ ಪಂಚರನ್ನಾಗಿ 1) ಶ್ರೀ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ವ:32 ವರ್ಷ ಜಾ:ಹಿಂದು ಬೇಡರ ಸಾ:ಕೊಡೆಕಲ್ಲ 2) ಶ್ರೀ. ಸಂಗಯ್ಯ ತಂದೆ ಬಸಯ್ಯ ಹಿರೇಮಠ ವಯ-29 ವರ್ಷ ಜಾ:ಹಿಂದೂ ಜಂಗಮ  ಸಾ:ಕೊಡೆಕಲ್ಲ ರವರಿಗೆ ಠಾಣೆಗೆ ಕರೆಯಿಸಿ ಸದರಿ ಪಂಚರಿಗೆ ವಿಷಯ ತಿಳಿಸಿ ನಮ್ಮ ಜೊತೆಗೆ ಬಂದು ಪಂಚನಾಮೆಗೆ ಪಂಚರಾಗಲು ಕೋರಿ ಈ ವಿಷಯವನ್ನು ಮಾನ್ಯ ಎಎಸ್ಪಿ ಸಾಹೇಬರು ಸುರಪೂರ, ಮಾನ್ಯ ಸಿಪಿಐ ಹುಣಸಗಿರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಾಹೇಬರು ಪಂಚರು ಮತ್ತು ಠಾಣೆಯ ಸಿಬ್ಬಂದಿಯವರಾದ ಶಂಕರಗೌಡ ಪಿಸಿ-299, ನಿಂಗಪ್ಪ ಪಿಸಿ 260 ,ಪಿಸಿ 216 ಲಿಂಗಪ್ಪ ಪಿಸಿ 210 ಸಿದ್ರಾಮಪ್ಪ ಪಿಸಿ-132 ವೆಂಕಟೇಶ ಪಿಸಿ-319 ವಿಶ್ವಾನಾಥ  ರವರಿಗೆಲ್ಲಾ ಇಸ್ಪೇಟ್ ಜೂಜಾಟದ ಬಾತ್ಮಿ ಬಂದ ಸ್ಥಳಕ್ಕೆ ಒಂದು ಖಾಸಗಿ ವಾಹನದಲ್ಲಿ ಕುಳಿತು ಹೊರಟು ಬಾತ್ಮಿ ಬಂದ ಸ್ಥಳಕ್ಕೆ 3.45 ಪಿಎಮ್ಕ್ಕೆ ತಲುಪಿ ಎಲ್ಲರೂ ಕೂಡಿ ನಡೆದುಕೊಂಡು ಮರೆಮರೆಯಾಗಿ ಬಾತ್ಮಿ ಬಂದ ಸ್ಥಳದ ಹತ್ತಿರ ಸಕರ್ಾರಿ ಖುಲ್ಲಾ ಜಾಗೆಯಲ್ಲಿ 10 ಜನರು ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು 4.00 ಪಿ ಎಂಕ್ಕೆ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 9 ಜನರನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು, ಒಬ್ಬನು ಓಡಿ ಹೋಗಿದ್ದು  ಸದರಿ ಜೂಜುಕೋರರ ಹೆಸರು 1) ಸುರೇಶ ತಂದೆ ಯಂಕಪ್ಪ ವಡ್ಡರ ವ:28 ವರ್ಷ ಜಾತಿ: ವಡ್ಡರ ಉ:ಗೌಂಡಿಕೆಲಸ ಸಾ: ಬಲಶೆಟ್ಟಿಹಾಳ 2) ತಿಮ್ಮಣ್ಣ ತಂದೆ ದುರ್ಗಪ್ಪ ಹಂಚೇರಿ ವ:40ವರ್ಷ ಜಾ: ಬೇಡರ ಉ: ಒಕ್ಕಲುತನ ಸಾ; ಕೊಡೇಕಲ್ಲ 3) ಗೌಡಪ್ಪ ತಂದೆ ಬಸವರಾಜ ದೋರಿಗೋಳ ವ:42 ವರ್ಷ ಜಾತಿ: ಬೇಡರ ಉ: ಹೋಟೇಲ ಕೆಲಸ ಸಾ: ಕೊಡೇಕಲ್ಲ  4) ಸಿದ್ದಲಿಂಗಪ್ಪ ತಂದೆ ಸಂಗಪ್ಪ ಪುಜಾರಿ ವ:24 ವರ್ಷ ಜಾ:ಕುರಬರ ಉ: ಒಕ್ಕಲುತನ ಸಾ:ಹೊರಟ್ಟಿ 5) ಭೀಮಣ್ಣ ತಂದೆ ಹಣಮಂತ್ರಾಯ ಏಳೂರ ವ:32 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಹೊರಟ್ಟಿ  6) ನಾಗಪ್ಪ ತಂದೆ ಧನಸಿಂಗ ಚವ್ಹಾಣ ವಯ:22 ವರ್ಷ, ಜಾ:ಲಂಬಾಣಿ, ಉ:ಕೂಲಿ ಕೆಲಸ ಸಾ:ಉಪ್ಪಲದಿನ್ನಿ ತಾಂಡಾ, 7) ಬಸವರಾಜ ತಂದೆ ಅಂಬ್ರಪ್ಪ ಗೋಪಾಳಿ ವಯ:20 ಉ:ಕುಲಿ ಕೆಲಸ, ಜಾ:ಹಿಂದೂ ಬೇಡರ, ಸಾ:ಯರಕಿಹಾಳ. 8) ಪರಮಣ್ಣ ತಂದೆ ಹಣಮಂತ್ರಾ ಕೊಳ್ಳಿ ವಯ:48, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಬೂದಿಹಾಳ. 9) ಲಕ್ಷ್ಮಣ ತಂದೆ ಮೇಘಪ್ಪ ಜಾಧವ ವಯ:41, ಜಾ:ಲಂಬಾಣಿ, ಉ:ಒಕ್ಕಲುತನ, ಸಾ:ಮಾರನಾಳ ಬೆಲ್ಲದಗಿಡದ ತಾಂಡಾ. ಈ 9 ಜನರಿಗೆ ಹಿಡಿದಿದ್ದು, ಒಬ್ಬನು ಓಡಿ ಹೋಗಿದ್ದು, ಓಡಿ ಹೋದವನ ಹೆಸರು ಮತ್ತು ವಿಳಾಸವನ್ನು ಒಂದನೆ ಆರೋಪಿತನನ್ನು ವಿಚಾರಿಸಲಾಗಿ ಅವನ ಹೆಸರು ವೆಂಕಟೇಶ ತಂದೆ ಚಂದಪ್ಪ ಗೌಡರ ವಯ:35, ಜಾ:ಬೇಡರ, ಉ:ಒಕ್ಕಲುತನ, ಸಾ:ನಾರಾಯಣಪೂರ ಅಂತಾ ತಿಳಿಸಿದ್ದು, ಈ ಬಗ್ಗೆ 4-00 ಪಿ ಎಂ ದಿಂದ 5-00 ಪಿ ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜೂಜುಕೋರರ ವಶದಿಂದ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 7670/- ರೂ ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಮುದ್ದೇಮಾಲು ಮತ್ತು 9 ಜನ ಆರೋಪಿತರನ್ನು ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರಪಡಿಸುತ್ತಿದ್ದು, ಈ ಬಗ್ಗೆ ಎಲ್ಲಾ 10 ಜನ ಆರೋಪಿತರ ಮೇಲೆ ಕಾನೂನು  ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ  ಸದರ ಪಿಎಸ್ಐ ಸಾಹೇಬರು ರವರು ಹಾಜರು ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶ  ಮೇಲಿಂದ ಠಾಣೆ ಗುನ್ನೆ ನಂ: 125/2017 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 28/2017: ಕಲಂ 498(ಎ) 504 323 324 342 354(ಎ) 506 ಸಂಗಡ 34 ಐಪಿಸಿ;-ದಿನಾಂಕ 29/11/2017 ರೆಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಮತಿ ತಾಯಮ್ಮ ಗಂಡ ಮೌನೇಶ ಮುಂಡರಕೇರಿ ವ-23 ವರ್ಷ ಜಾ-ಮಾದಿಗ ಉ-ಕೂಲಿ ಕೆಲಸ ಸಾ-ಅಂಬೇಡ್ಕರ ನಗರ ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಕೊಟ್ಟಿದ್ದು ಸಾರಂಶವೆನಂದರೆ ಪಿರ್ಯಾಧಿಗೆ ಮತ್ತು ಆರೋಪಿ ಮೌನೇಶ ಇವರ ಮಧ್ಯ 5 ವರ್ಷಗಳ ಹಿಮದೆ ಯಾದಗಿರಿ ಲಕ್ಷ್ಮಿ ದೇವಸ್ಥಾನದಲ್ಲಿ ಸಾಮೂಹಿಕ ಮದುವೆ ಕಾಯರ್ಾಕ್ರಮದಲ್ಲಿ ಮದುವೆಯಾಗಿದ್ದು, ಗಂಢ ಹೆಂಡತಿ ಇಬ್ಬರು ಅನೂನ್ಯವಾಗಿ ಇದ್ದು ನಂತರ ಹೊಟ್ಟೆಪಾಡಿಗಾಗಿ ದುಡಿಯಲಿಕ್ಕೆ ಬೆಂಗಳೂರಿಗೆ ಹೋಗಿ ಅಲ್ಲಿ ಆರೋಪಿ ನಂ: 2 ಪ್ರೇಮಾ ಎಂಬುವಳೊಂದಿಗೆ ಆರೋಪಿತನು ಪ್ರೀತಿ ಮಾಡಿ ಅವಳನ್ನು ಸಂಗಡ ಕರೆದುಕೊಂಡು ಯಾದಗಿರಿಗೆ ಬಂದಿದ್ದು, ಯಾದಗಿರಿಯಲ್ಲಿದ್ದ ಪಿರ್ಯಾಧಿ ತಾಯಮ್ಮ ಈಕೆಯು ಬಾಡಿಗೆ ಮನೆಯಲ್ಲಿ ಇದ್ದು ಮನೆಯ ಬಾಡಿಗೆ ಕಟ್ಟು ಅಂತ ಅಂದರೆ ಪಿರ್ಯಾಧಿದಾರಳಿಗೆ ಆರೋಪಿತರೇಲ್ಲರೂ ಕೂಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ.
      ಇಂದು ದಿನಾಂಕ:  29.11.2017 ರಂದು ಬೆಳಿಗ್ಗೆ  6 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾಧಿ ಮನೆಗೆ ಹೋಗಿ ಜಗಳ ಮಾಡಿ ಅವಳಿಗೆ ಅವ್ಯಾಚವಾಗಿ ಬೈದು ಕಡಗಿಯಿಂದ ಮತ್ತು ,ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಮಾವನಾದ ಆರೋಪಿ ಬಸಪ್ಪ ಈತನು  ಮೈಕೈ ಮುಟ್ಟಿ ಲೈಗಿಂಕ ಕಿರುಕುಳ ನೀಡಿದ್ದು ಹಾಗೂ ಆರೋಪಿ ಪ್ರೇಮಾ ಹಾಗೂ ನೀಲಮ್ಮ ಇವರು ಅವಳಿಗೆ ಮನಬಂದತೆ ಬೈದು ಕೈಯಿಮದ ಹೊಡೆಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ ಬಗ್ಗೆ ಅಪರಾಧ
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!