Yadgir District Reported Crimes Updated on 29-11-2017

By blogger on ಬುಧವಾರ, ನವೆಂಬರ್ 29, 2017

                                               

                                                  Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 238/2017 ಕಲಂ 457, 380 ಐಪಿಸಿ;- ದಿನಾಂಕ 28/11/2017 ರಂದು 12 ಪಿಎಂಕ್ಕೆ ಪಿರ್ಯಾದಿ ಶ್ರೀ ಶರಣಬೂಪಾಲರೆಡ್ಡಿ ತಂ. ಗುರುಬಸ್ಸಪ್ಪ ಹೆಗ್ಗನೊರ ಉಃ ಸಹಾಯಕ ನಿಧರ್ೇಶಕರು ಪಶಿಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆ ಯಾದಗಿರಿ ಸಾಃ ವೀರಭದ್ರೇಶ್ವರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ಪಶು ಆಸ್ಪತ್ರೆ ಯಾಧಗಿರಿಯ ಹಳೆಕಟ್ಟದಲ್ಲಿ ಶೇಖರಿಸಲಾದ ದ್ರವ ಸಾರಜನಕ ಜಾಡಿಗಳನ್ನು ಶೇಖರಿಸಿಡಲಾಗಿದ್ದು ದಿಃ26/11/2017 ರಂದು ಬೆಳಿಗ್ಗೆ ನೋಡಿದಾಗ ದಿಃ25/11/2017 ರಂದು ರ ರಾತ್ರಿ ವೇಳೆಗೆ 55(ಲೀಟರ) ಸಾಮಥ್ರ್ಯದ ಒಂದು ದ್ರವ ಸಾರಜನಕ ಜಾಡಿ ಕಳುವಾಗಿರುತ್ತದೆ. ಅದರ ಮೌಲ್ಯ 17200=00 ರೂ.ಆಗಿರುತ್ತದೆ ಹಳೆ ಕಟ್ಟಡದ ಕಿಟಕಿ ಮುರಿದು ಒಳಗೆ ಪ್ರವೇಶ ಮಾಡಿ ಜಾಡಿ ಕಳುವು ಮಾಡಿರುವುದು ಕಂಡು ಬಂದಿರುತ್ತದೆ. ಆದ ಕಾರಣ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ಮಾಡಿ ಕಳುವಾದ ಜಾಡಿಗಳನ್ನು ಹುಡುಕಿ ಕೊಡಲು ಕೋರಲಾಗಿದೆ ಅಮತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.238/2017 ಕಲಂ.457, 380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 239/2017 ???. 110(?)(??) ಸಿ.ಆರ್.ಪಿ.ಸಿ;- ದಿನಾಂಕ 28/11/2017 ರಂದು  ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಯಾರೋ ಇಬ್ಬರು ಯಾದಗಿರಿ ಮದ್ನಾಳ ಪೆಟ್ರೊಲ ಬಂಕ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ನಿಂತು ಹೋಗಿ ಬರುವ ವಾಹನಗಳಿಗೆ ಮತ್ತು ಜನರಿಗೆ ಅಡತಡೆವುಂಟು ಮಾಡಿ ಕುಡಿಯಲು ಹಣ ಕೊಡಿರಿ ಇಲ್ಲದಿದ್ದದ್ದರೆ ಒಬ್ಬೊಬ್ಬರನ್ನು ಒಂದು ಕೈ ನೋಡಿಕೊಳ್ಳತ್ತೆವೆ ಅಂತಾ  ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಿಸಿ-109 ರವರು ಹೋಗಿ ನೋಡಲಾಗಿ ಮೇಲಿನಂತೆ ಇಬ್ಬರು ಹೋಗಿ ಬರುವ ವಾಹನಗಳಿಗೆ ಮತ್ತು ಜನರಿಗೆ ಅಡತಡೆವುಂಟು ಮಾಡಿ ಕುಡಿಯಲು ಹಣ ಕೊಡಿರಿ ಅಂತಾ ಬೈದಾಡುತ್ತಾ ತೊಂದರೆ ಮಾಡುತ್ತಿದ್ದು ಸದರಿಯವರಿಗೆ ಕೂಡಲೇ ಸಿಬ್ಬಂದಿಯವರ ಸಹಾಯದಿಂದ 1-30 ಪಿಎಂಕ್ಕೆ ಹಿಡಿದು ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಸಂತೊಷ ತಂ. ಪಿರಪ್ಪ ಹದ್ದರಗಿ ವಃ23 ಜಾಃ ಕಬ್ಬಲಿಗ ಉಃ ಕೂಲಿಕೆಲಸ  ಸಾಃ ಹೊಸಳ್ಳಿ ಕ್ರಾಸ್ ಯಾದಗಿರಿ 2) ವಿರೇಶ ತಂ. ರಾಚಪ್ಪ ಕಡೆಚೂರ ವಃ28 ಜಾಃ ಲಿಂಗಾಯತ : ಕೂಲಿಕೆಲಸ ಸಾಃ ಚೀರಂಜಿವಿ ನಗರ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಗೆ ಹೀಗೆ ಬಿಟ್ಟಲ್ಲಿ ಮುಂದೆ ಯಾವುದಾದರೊಂದು ಘೋರ ಕೃತ್ಯ ವೆಸಗಿ ಸಾರ್ವಜನಿಕರಿಗೆ ಶಾಂತಿಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಂಬವ ಕಂಡುಬಂದಿದ್ದರಿಂದ ಸಿಬ್ಬಂದಿಯವರ ಸಹಾಯದಿಂದ ಸದರಿಯವನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 2:00 ಪಿಎಂಕ್ಕೆ ತಂದು  ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ಇಂದು ಠಾಣೆ ಗುನ್ನೆ ನಂ: 239/2017 ಕಲಂ. 110(),(ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 284/2017 ಕಲಂ: 376 ಐಪಿಸಿ ;- ದಿನಾಂಕ 28/11/2017 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರಳಾದ ಶ್ರೀಮತಿ  ಭೀಮಮ್ಮ ಗಂಡ ಸಾಬಣ್ಣ ಬುಡ್ಡ ನರಸಣ್ಣನೊರ ಸಾಃ ಬೆಳಗೇರಾ ಇವರು ಹೇಳಿಕೆ ಕೊಟ್ಟ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಹೊಲಮನೆಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನ್ನ ತವರು ಮನೆ ರಾಮಸಮುದ್ರ ಗ್ರಾಮವಿದ್ದು, ಈಗ ಐದು ವರ್ಷಗಳ ಹಿಂದೆ ನನ್ನ ತಂದೆ-ತಾಯಿಯವರು ನನಗೆ ಬೆಳಗೇರಾ ಗ್ರಾಮದ ಸಾಬಣ್ಣ ತಂದೆ ಶರಣಪ್ಪ ಬುಡ್ಡನರಸಣ್ಣನೊರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನನ್ನ ಗಂಡನು ಕೂಡಾ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಾನೆ, ನಮ್ಮ ಮನೆಯಲ್ಲಿ ನಾನು ನನ್ನ ಗಂಡ ಹಾಗೂ ನಮ್ಮ ಮಾವ ಶರಣಪ್ಪ ತಂದೆ ಲಕ್ಷ್ಮಣ, ಅತ್ತೆಯಾದ ಮಲ್ಲಮ್ಮ ಗಂಡ ಶರಣಪ್ಪ ಹಾಗೂ ಮೈದುನರಾದ ಮೋನಪ್ಪ ತಂದೆ ಶರಣಪ್ಪ, ಹುಸೇನಿ ತಂದೆ ಶರಣಪ್ಪ ಇರುತ್ತೆವೆ, ನನ್ನ ಗಂಡನು ಈಗ ಒಂದು ತಿಂಗಳ ಹಿಂದೆ ಕೂಲಿಕೆಲಸ ಮಾಡುವ ಸಲುವಾಗಿ ನನ್ನ ಮಗು ಇನ್ನು ಚಿಕ್ಕದು ಇದ್ದ ಕಾರಣ ನನಗೆ ಇಲ್ಲೆ ಬಿಟ್ಟು ತಾನೊಬ್ಬನೇ ಬೆಂಗಳೂರಿಗೆ ಹೋಗಿರುತ್ತಾನೆ, ಈಗ ಒಂದೂವರೆ ವರ್ಷದ ಹಿಂದೆ ನಮ್ಮ ಅಣ್ಣ-ತಮ್ಮಕಿಯವರಾದ ನರಸಪ್ಪ ತಂದೆ ಸಾಬಣ್ಣ ಬುಡ್ಡನರಸಣ್ಣನೊರ ಇತನು ನಾನು ನಮ್ಮ ಹೊಲದಲ್ಲಿ ಒಬ್ಬಳೇ ಇದ್ದಾಗ ಅವನು ನನ್ನ ಮೈಮುಟ್ಟಲು ಬಂದಾಗ ನಾನು ಈ ವಿಷಯ ನಮ್ಮ ಅತ್ತೆ-ಮಾವ ಮತ್ತು ಗಂಡನಿಗೆ ಹೇಳಿದಾಗ ಎಲ್ಲರೂ ಆತನಿಗೆ ಬುದ್ದಿ ಮಾತು ಹೇಳಿರುತ್ತಾರೆ,
        ಹೀಗಿರುವಾಗ ಇಂದು ದಿನಾಂಕ 28/11/2017 ರಂದು ಮನೆಯಲ್ಲಿ ಬಹಳ ಕೆಲಸವಿದ್ದ ಕಾರಣ ನಮ್ಮ ಅತ್ತೆ ಮಲ್ಲಮ್ಮ ಇವರು ನನಗೆ ನಿಮ್ಮ ಮಾವ ಮತ್ತು ಮೈದುನ ಮೋನಪ್ಪ ಇಬ್ಬರೂ ಕುರಿ ಕಾಯುವದಕ್ಕೆ ಹೋಗಿದ್ದಾರೆ, ನಿನ್ನ ಮೈದುನ ಹುಸೇನಿ ಇತನು ಎತ್ತುಗಳು ಮೇಯಿಸುವದಕ್ಕೆ ಹೋಗಿದ್ದಾನೆ, ನೀನು ನಮ್ಮ ಹೊಲಕ್ಕೆ ಹೋಗಿ ತೊಗರಿ ಬೆಳೆ ನೋಡಿಕೊಂಡು ಬಾ ಅಂತಾ ಹೇಳಿದ್ದರಿಂದ ನಾನೊಬ್ಬಳೇ ನನ್ನ ಒಂದೂವರೆ ವರ್ಷದ ಸಣ್ಣಕೂಸನ್ನು ತೆಗೆದುಕೊಂಡು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮನೆಯಿಂದ ಹೋದೆನು, ನಾನು ಹೊಲಕ್ಕೆ ಹೋಗಿ ಹೊಲದಲ್ಲಿ ಆಕಡೆ ಇಕಡೆ ತಿರುಗಾಡಿ ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ನಮ್ಮ ತೊಗರಿ ಹೊಲದಲ್ಲಿ ಪುಂಡಿಪಲ್ಯಾ ಹರಿಯುತ್ತಿದ್ದಾಗ ನನ್ನ ಹಿಂದುಗಡೆಯಿಂದ ನನಗೆ ಗೋತ್ತಾಗದ ಹಾಗೇ ನರಸಪ್ಪ ತಂದೆ ಸಾಬಣ್ಣ ಬುಡ್ಡನರಸಣ್ಣನೊರ ಇತನು ಬಂದವನೇ ಜೋರಾಗಿ ನನ್ನ ಹೆಡಕು ಹಿಡಿದು ನನ್ನ ಕೈಯಲ್ಲಿದ್ದ ಕೂಸನ್ನು ಕಸಿದು ಬಿಸಾಕಿ ನಾನು ಚೀರಾಡದಂತೆ ನನ್ನ ಸೀರೆ ಸೆರಗಿನಿಂದ ನನ್ನ ಬಾಯಿಯನ್ನು ಬಿಗಿಯಾಗಿ ಹಿಡಿದು ನೆಲಕ್ಕೆ ಕೆಡವಿ ಮೈಮೇಲೆ ಬಿದ್ದಾಗ ನಾನು ಆತನಿಗೆ ಬೇಡ ಮಾವ ನನಗೆ ಅನ್ಯಾಯ ಮಾಡಬೇಡ ನಾನು ನಿನ್ನ ತಮ್ಮನ ಹೆಂಡತಿ ಇದ್ದೆನೆ ನನ್ನ ಶೀಲ ಹಾಳು ಮಾಡಬೇಡ ಅಂತಾ ಎಷ್ಟೆ ಕೇಳಿದರೂ ಆತನು ಏ ಬೋಸಡಿ ಈ ಹಿಂದೆ ನೀನು ನನ್ನ ಕೈಯಿಂದ ತಪ್ಪಿಸಿಕೊಂಡಿದ್ದಿ, ಇವತ್ತು ಹೊಲದಲ್ಲಿ ಯಾರು ಇಲ್ಲ ನಿನಗೆ ಬಿಡುವದಿಲ್ಲ ಅಂತಾ ಅಂದು ನನಗೆ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿದನು, ಆ ಸಮಯದಲ್ಲಿ ನಾನು ಎಷ್ಟೋ ಕಿರುಚಾಡಿದರು, ಆತನು ನನಗೆ ಬಿಡದೇ ಸಂಭೋಗ ಮುಗಿದ ನಂತರ ತೊಗರಿ ಹೊಲದಲ್ಲಿ ಓಡಿ ಹೋದನು, ನಂತರ ನಾನು ನನ್ನ ಕೂಸಿನೊಂದಿಗೆ ಹೊಲದಿಂದ ಕೂಡಲೇ ಮನೆಗೆ ಬಂದು ಈ ವಿಷಯವನ್ನು ನಾನು ನಮ್ಮ ಅತ್ತೆ-ಮಾವ ಮೈದುನರಿಗೆ ಹಾಗೂ ನಮ್ಮ ದೊಡ್ಡ ಅತ್ತೆಯಾದ ಸಿದ್ದಮ್ಮ ಗಂಡ ಮಲ್ಲಯ್ಯ ಬುಡ್ಡ ನರಸಣ್ಣನೊರ ಇವರಿಗೆ ತಿಳಿಸಿ ಠಾಣೆಗೆ ಬಂದಿರುತ್ತೆನೆ, ಈ ರೀತಿಯಾಗಿ ನರಸಪ್ಪ ತಂದೆ ಸಾಬಣ್ಣ ಬುಡ್ಡನರಸಣ್ಣನೊರ ಇತನು ನನಗೆ ನಮ್ಮ ತೊಗರಿ ಹೊಲದಲ್ಲಿ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿದ್ದು, ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 284/2017 ಕಲಂ 376 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.  

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 280/2017 ಕಲಂ: 454, 380 ಐಪಿಸಿ;-ದಿನಾಂಕ 27.11.2017 ರಂದು ಬೆಳ್ಳಿಗೆ 7 ಗಂಟೆಯಿಂದ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಕೇಶ್ವಾರ ಗ್ರಾಮದ ಕೆರೆ ಕಟ್ಟೆಯ ಮೇಲೆ ಇರುವ ಮಹೇಶ್ವರಿ (ಮಶಮ್ಮ) ಗುಡಿಯ ಒಳಗೆ ಇದ್ದ ಯಲಮಾರಿಯಲ್ಲಿರುವ ಗುಡಿಗೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ 1] ಒಂದು ಬೆಳ್ಳಿಯ ಆನೆ 2] ಒಂದು ಬೆಳ್ಳಿಯ ತೊಟ್ಟಿಲು 3] ಒಂದು ಸಿಂಹದ ಮೇಲೆ ೇವಿಯ ಮೂತರ್ಿ ಇದ್ದಿದ್ದು 4] ನಾಲ್ಕು ಹಿತ್ತಾಳೆಯ ಗಂಟೆಗಳು ಎಲ್ಲಾವುಗಳ ಅ.ಕಿ-6000/- ನೇದ್ದವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ ಮೆಲ್ಕಂಡ ಬೆಳ್ಳಿಯ ಸಾಮಾನುಗಳನ್ನು ಪತ್ತೆ ಮಾಡಿ ಕೈಕೊಂಡಲು ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಳ 280/2017 ಕಲಂ: 454, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 217/2017 ಕಲಂ 143,147,148,323,354,504,506 ಸಂಗಡ 149 ಐಪಿಸಿ;- ದಿನಾಂಕ-28-11-2017 ರಂದು ಬೆಳಿಗ್ಗೆ 10-30 ಗಂಟೆಗೆ ನಾವು ನಮ್ಮ ಹೊಸ ಮನೆಯ ಕೆಲಸ ಮಾಡುತ್ತಿರುವಾಗ  1) ಯಂಕೋಬಾ ತಂದೆ ನರಸಿಂಗಪ್ಪ 2) ಮಹಾದೇವಪ್ಪ ತಂದೆ ಭೀಮಣ್ಣ 3) ನರಸಿಂಗಪ್ಪ ತಂದೆ ಬೀಮಣ್ಣ  4) ಹಣಮಂತ್ರಾಯ ತಂದೆ ಭಿಮಣ್ಣ 5) ಸೈದಪ್ಪ ತಂದೆ ಭೀಮಣ್ಣ 6) ಮನೋಹರ ತಂದೆ ನರಸಿಂಗಪ್ಪ 7) ಸುರೇಶ ತಂದೆ ನರಸಿಂಗಪ್ಪ 8) ವಿಶ್ವನಾಥ ತಂದೆ ನರಸಿಂಗಪ್ಪ 9) ಗುರನಾಥ ತಂದೆ ಮಹಾದೇವಪ್ಪ 10) ರವಿಂದ್ರ ತಂದೆ ಹಣಮಂತ್ರಾಯ  11) ವಿಜಯಕುಮಾರ ತಂದೆ ಸೈದಪ್ಪ 12) ವೆಂಕಟೇಶ ತಂದೆ ಸೈದಪ್ಪ ಇವರೆಲ್ಲರು ಗುಂಪು ಕಟ್ಟಿಕೊಂಡು ಮನೆ ಕಟ್ಟಲ್ಲಿಗೆ ಬಂದು ಲೇ ಬೋಸಡಿ ಸೂಳೆರೆ ಯಾರಪ್ಪನ ಮನೆ ಅಂತಾ ಮನೆಯ ಸೆಂಟ್ರಿಂಗ್ ಕೆಲಸ ಮಾಡುತಿದ್ದಿರಿ ರಂಡಿ ಸೂಳೆ ಮಕ್ಕಳೆ ಈ ಮನೆಯಲ್ಲಿ ನಮಗೆ  ಪಾಲು ಬರುತ್ತದೆ  ಮನೆ ಕಟ್ಟಬೇಡ ಅಂತಾ ಹೇಳುತ್ತಾ ಬಂದರು ಸಹ  ಯಾಕೆ ಮನೆಗೆ ಸೆಂಟ್ರಿಂಗ್ ಕೆಲಸ ಮಾಡುತಿದ್ದರಿ ನಿಮಗೆ ನಾಚಿಕೆ ಆದ ಇಲ್ಲಲೆ ಸೂಳೆ ಮಕ್ಕಳೆ ಅಂತಾ ಬೈಯುತ್ತಾ ಬಂದಾಗ ನಾನು ಯಾಕೆ ಬೈಯುತ್ತಿರಿ ಅಂತಾ ಮುಂದೆ ಹೋದಾಗ  ಅವರಲ್ಲಿ ಯಂಕೋಬ ತಂದೆ ನರಸಿಂಗಪ್ಪ, ಇವನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು, ಮಹಾದೇವಪ್ಪ ತಂದೆ ಭೀಮಣ್ಣ ಇತನು ನನಗೆ ಅವಮಾನ ಮಾಡುವ ಉದೇಶದಿಂದ ಕೂದಲು ಹಿಡಿದು ಜಗ್ಗಾಡಿ ನನಗೆ ಕೆಳಗೆ ಬಿಳಿಸಿದನು ಆಗ ನನಗೆ ಹೊಡೆಯುವದನ್ನು ನೋಡಿ ಬಿಡಿಸಲು ಬಂದ ನನ್ನ ಗಂಡ ಭೀಮರಾಯನಿಗೆ ನರಸಿಂಗಪ್ಪ ತಂದೆ ಭೀಮಣ್ಣ, ಹಣಮಂತ್ರಾಯ ತಂದೆ ಬೀಮಣ್ಣ್ಣಿ ಇವರು ನನ್ನ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಈ ಸೂಳೆ ಮಗನಿಗೆ ಎಷ್ಟು ಸಲ ಹೇಳಿದರು ಮನೆ ಕಟ್ಟುವದು ಬಿಡವಲ್ಲ ಲಂಗ ಸೂಳೆ ಮಗ ಅಂತಾ ಬೈದು ಎಳದಾಡಿದರು ಇನ್ನುಳಿದ  ಸೈದಪ್ಪ ತಂದೆ ಭೀಮಣ್ಣ, ಮನೋಹರ ತಂದೆ ನರಸಿಂಗಪ್ಪ, ಸುರೇಶ ತಂದೆ ನರಸಿಂಗಪ್ಪ, ವಿಶ್ವನಾಥ ತಂದೆ ನರಸಿಂಗಪ್ಪ, ಗುರನಾಥ ತಂದೆ ಮಹಾದೇವಪ್ಪ, ರವಿಂದ್ರ ತಂದೆ ಹಣಮಂತ್ರಾಯ, ವಿಜಯಕುಮಾರ ತಂದೆ ಸೈದಪ್ಪ, ವೆಂಕಟೇಶ ತಂದೆ ಸೈದಪ್ಪ ಇವರು ಈ ಸೂಳೇ ಮಕ್ಕಳದ್ದು ಊರಲ್ಲಿ ಬಹಳ ಸೊಕ್ಕು ಆಗಿದೆ ಇವರನ್ನು ಜೀವ ಸಹಿತಿ ಬಿಡಬೇಡಿರಿ ಅಂತಾ ಅವಾಚ್ಯವಾಗಿ ಬೈದು ನಿವು ಹೆಂಗ ಮನೆ ಕಟ್ಟುತ್ತಿರಿ ನೋಡುತ್ತೇವೆಲೆ ರಂಡಿ ಮಕ್ಕಳೆ ಅಂತಾ ಜೀವದ ಬೆದರಿಕೆ ಹಾಕಿದರು ಜಗಳ ಆಗುವದನ್ನು ನೋಡಿ ನಮ್ಮ ಮನೆಯ ಪಕ್ಕದವರಾದ 1) ಭಿಮರಾಯ ತಂದೆ ನರಸಿಂಗಪ್ಪ 3) ತಾಯಣ್ಣ ತಂದೆ ಮಹಾದೇವಪ್ಪ ಇವರು ಬಂದು ಜಗಳ ಬಿಡಿಸಿದರು. ನಮ್ಮ ಅತ್ತೆ ಮಾವನಿಗೆ ವಯಸ್ಸು ಆಗಿದ್ದರಿಂದ ಸುಮ್ಮನೆ ನಿಂತಿದ್ದರು ಜಗಳ ಬಿಡಿಸದೆ ಇದ್ದರೆ ನಮಗೆ ಇನ್ನು ಹೊಡೆ ಬಡೆ ಮಾಡುತಿದ್ದರು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 218/2017 ಕಲಂ 143,147,148,323,354,504,506 ಸಂಗಡ 149 ಐಪಿಸಿ;- ದಿನಾಂಕ-28-11-2017 ರಂದು ಮುಂಜಾನೆ 10-30 ಗಂಟೆಗೆ ನಮ್ಮ ಅಣ್ಣ ತಮ್ಮಕಿಯರು ತುರಕನದೊಡ್ಡಿ ಗ್ರಾಮದ ಮನೆ  ನಂಬರ 1/94 ನೆದ್ದು ಕಟ್ಟಲು ಪ್ರಾರಂಬಿಸಿದಾಗ ನಾವು ಹೋಗಿ ಯಾಕೆ ಮನೆ ಕಟ್ಟಲು ಸುರು ಮಾಡಿದ್ದರಿ ಇದು ಕೊರ್ಟನಲ್ಲಿ ಬಗೆ ಹರಿವರೆಗೂ ಕಟ್ಟಬೇಡಿರಿ ಅಂತಾ ಅಂದಿದ್ದಕ್ಕೆ ಗುಂಪು ಕಟ್ಟಿಕೊಂಡು ನಿಂತಿದ್ದ ನಮ್ಮ ಅಣ್ಣತಮ್ಮಕೀಯರ ಪೈಕಿ 1) ಭೀಮರಾಯ ತಂದೆ ದೊಡ್ಡತಿಪ್ಪಣ್ಣ ಇತನು ನನ್ನ ಮಗನಾದ ಯಂಕೊಬಾ ಇತನಿಗೆ ಏ ಸೂಳೆ ಮಗನೆ ನಿವು ಊರಲ್ಲಿ ಯಾಕ ಜಾಸ್ತಿ ಮಾಡುತಿದ್ದರಿ ಲಂಗ ಸೂಳೆ ಮಗನೆ ಅಂತಾ ಅಂದು ಆತನಿಗೆ ಕೈಯಿಂದ ಬಲಗಡೆ ಭುಜಕ್ಕೆ ಹೊಡೆದನು, ಆಗ ನಾನು ನನ್ನ ಮಗನಿಗೆ ಬಿಡಿಸಲು ಹೋದಾಗ ನನಗೆ 2) ತಿಪ್ಪಣ್ಣ ತಂದೆ ಆಶಣ್ಣ ಇತನು ಲೇ ಸೂಳೆ ನಿನೆ ಎಲ್ಲಾ ಜಗಳ ಹಚ್ಚಿ ಕುಂತಿದಿ ಅಂದು ನನಗೆ ಕೈ ಹಿಡಿದು ಜಗ್ಗಿ ಅವಮಾನ ಮಾಡಿದನು, 3) ತಾಯಣ್ಣ ತಂದೆ ತಿಪ್ಪಣ್ಣ ಇತನು ನನಗೆ ಕೈಯಿಂದ ನೂಕಿ ಕೇಳಗೆ ಬಿಳಿಸಿದಾಗ 4) ತಾಯಣ್ಣ ತಂದೆ ಭೀಮರಾಯ ಇತನು ನನಗೆ ಕಾಲಿನಿಂದ ಬೆನ್ನಿಗೆ ಒದ್ದನು. ಇನ್ನೂಳಿದ 5) ಮಹೇಶ ತಂದೆ ತಾಯಣ್ಣ, 6) ಶಿವರಾಯ ತಂದೆ ಆಶಣ್ಣ, 7) ಸಣ್ಣ ತಿಪ್ಪಣ್ಣ ತಂದೆ ಆಶಣ್ಣ, 8) ರಾಜಶೇಖರ ತಂದೆ ಸಣ್ಣತಿಪ್ಪಣ್ಣ, 9) ಭೀಮರಾಯ ತಂದೆ ಹಣಮಂತ್ರಾಯ, 10) ಯಲ್ಲಾಲಿಂಗ ತಂದೆ ಹಣಮಂತ್ರಾಯ, 11) ಅನಿಲ ತಂದೆ ಶಿವರಾಯ 12) ಹಣಮಂತ್ರಾಯ ತಂದೆ ಆಶಣ್ಣ ಇವರೆಲ್ಲರು ಸೇರಿ ನಮಗೆ ಲೇ ಸೂಳೆ ಮಕ್ಕಳೆ ಇನ್ನೊಂದು ಸಲ ನಮ್ಮ ಮನಿ ಸಮೀಪ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ  ಬೇದರಿಕೆ ಹಾಕುತ್ತಿರುವಾಗ   ಅಲ್ಲೆ ಪಕ್ಕದಲಿದ್ದ ಜಗಳ ನೋಡುತ್ತಾ ನಿಂತಿದ್ದ 1) ವೆಂಕಟೇಶ ತಂದೆ ತಾಯಪ್ಪ 2) ಸಿದಲಿಂಗಪ್ಪ ತಂದೆ ಚಂದ್ರಪ್ಪ ಇವರು ಬಂದು ಜಗಳ ಬಿಡಿಸಿದರು. ಇಲ್ಲದಿದ್ದರೆ  ನಮಗೆ ಇನ್ನು ಹೊಡೆ ಬಡೆ ಮಾಡುತಿದ್ದರು

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 464/2017. ಕಲಂ.379.ಐ.ಪಿ.ಸಿ.44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 28/11/2017 ರಂದು ಬೆಳಿಗ್ಗೆ 9-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ಶಿವಾನಂದ.ಎಮ್.ಜೇವರಗಿ ಆರ್.ಪಿ.ಐ ಡಿ.ಎ.ಆರ್ ಘಟಕ ಯಾದಗಿರಿ ಇವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ, ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರು ಶಹಾಪುರ ಮತ್ತು ಶೋರಾಪುರ ಠಾಣಾ ಹದ್ದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಪೆಟ್ರೋಲಿಂಗ ಕುರಿತು ಹೋಗಲು ಸೂಚಿಸಿದ್ದರಿಂದ ದಿನಾಂಕ: 28/11/2017 ರಂದು ಬೆಳಿಗ್ಗೆ 01.00 ಗಂಟೆಗೆ ನಾನು ಸರಕಾರಿ ಜೀಪ್ ನಂ. ಕೆಎ-33 ಜಿ-228 ನೇದ್ದರಲ್ಲಿ ಚಾಲಕ ಸದ್ದಾಂ ಎಪಿಸಿ-157 ಹಾಗೂ ಗಿರಿಮಲ್ಲ ಎಪಿಸಿ-145, ಪ್ರಭು ಎ.ಪಿ.ಸಿ.105, ಕಾಶಿನಾಥ ಎ.ಪಿ.ಸಿ.62, ರವರೊಂದಿಗೆ ಯಾದಗಿರಿಯಿಂದ ಹೊರಟು ಬೆಳಿಗ್ಗೆ 5.20 ಗಂಟೆಗೆ ಶಹಾಪುರ-ಲಿಂಗಸೂಗುರು ಹೆದ್ದಾರಿಯ ಹತ್ತಿಗುಡೂರ ಹತ್ತಿರ ಇರುವ ಕೆ.ಇ.ಬಿ. ಹತ್ತಿರ ರಸ್ತೆಯ ಮೇಲೆ ನಮ್ಮ ಜೀಪನ್ನು ನಿಲ್ಲಿಸಿ ನಿಂತು ನಾವೆಲ್ಲರೂ ಕೂಡಿ ಮರಳನ್ನು ತುಂಬಿಕೊಂಡು ಬರುವ ವಾಹನಗಳನ್ನು ಕಾಯುತ್ತಿರುವಾಗ ಬೆಳಿಗ್ಗೆ 5-30 ಗಂಟೆಗೆ ಹತ್ತಿಗುಡೂರ ದಿಂದ ಶಹಾಪುರಕ್ಕೆ 4 ಮರಳು ತುಂಬಿದ ಟಿಪ್ಪರಗಳು ಬರುತ್ತಿದ್ದುದನ್ನು ನೋಡಿ ಮರೆಯಲ್ಲಿ ನಿಂತು ಟಿಪ್ಪರಗಳು ಬಂದಾಗ ಸದರಿ ಮರಳು ತುಂಬಿದ ಟಿಪ್ಪರಗಳನ್ನು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ನಾಲ್ಕು ಮರಳು ತುಂಬಿದ ಟಿಪ್ಪರಗಳು ಇದ್ದು 1] ಕೆಎ-33ಎ-6850 ಟಾಟಾ ಕಂಪನಿಯ ಟಿಪ್ಪರ ಇದ್ದು ಅದರ ಅ:ಕಿ: 500000=00ರೂ ಅದರಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ: 6000=00 ರೂ ಅದರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಸಿದ್ದಣ್ಣ ತಂದೆ ಅಂಬ್ಲಪ್ಪ ದೊರಿ ವ|| 40 ಉ|| ಚಾಲಕ ಜಾ|| ಬೇಡರ ಸಾ|| ಬೇವಿನಳ್ಳಿ ತಾ|| ಶಹಾಪೂರ ಅಂತ ತಳಿಸಿದ್ದು ಸದರಿ ಮರಳನ್ನು ತಮ್ಮ ಟಿಪ್ಪರ ಮಾಲಿಕ ಮಲ್ಲೆಶಿ ಇವರು ಹೈಯಾಳ (ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಹೈಯಾಳ(ಬಿ) ಗ್ರಾಮದ ಸಿಮಾಂತರದಲ್ಲಿಯ ಕ್ರಷ್ಣಾ ನದಿಗೆ ಟಿಪ್ಪರನ್ನು ತೆಗೆದುಕೊಂಡು ಹೋಗಿ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಲೋಡಮಾಡಿಕೊಂಡು ಬಂದು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೊರಟಿರುವದಾಗಿ ತಿಳಿಸಿದನು ಆಗ ನಾನು ಸರಕಾರದಿಂದ ಮರಳು ಸಾಗಾಣಿಕೆ ಮಾಡಲು ಪಡೆದ ಅನುಮತಿ ಪತ್ರ ತೋರಿಸಲು ಹೇಳಿದಾಗ ಅವನು ಯಾವದೆ ದಾಖಲೆ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ. 2] ಕೆಎ-28ಸಿ-2539 ಟಾಟಾ ಕಂಪನಿಯ ಟಿಪ್ಪರ ಇದ್ದು ಅದರ ಅ:ಕಿ: 500000=00ರೂ ಅದರಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ: 6000=00 ರೂ ಅದರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಅಲ್ತಾಫ್ ತಂದೆ ದಸ್ತಗಿರಿಸಾಬ ಮುಲ್ಲಾ ವ|| 25 ಉ|| ಚಾಲಕ ಜಾ|| ಮುಸ್ಲಿಂ ಸಾ|| ಮೋರಟಿಗಿ ತಾ|| ಸಿಂದಗಿ ಹಾ|| ರೀಲಾಯನ್ಸ ಫಂಗ್ಸೆನ್ಸ ಹಾಲ್ ಎಂ.ಎಸ್.ಕೆ. ಮಿಲ್ ಕಲ್ಬುಗರ್ಿ ಅಂತ ತಿಳಿಸಿದ್ದು ಸದರಿ ಮರಳನ್ನು ತಮ್ಮ ಟಿಪ್ಪರ ಮಾಲಿಕರು ಹೈಯಾಳ (ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಲೋಡ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಹೈಯಾಳ(ಬಿ) ಗ್ರಾಮದ ಸಿಮಾಂತರದಲ್ಲಿಯ ಕ್ರಷ್ಣಾ ನದಿಗೆ ಟಿಪ್ಪರನ್ನು ತೆಗೆದು ಕೊಂಡು ಹೋಗಿ ಕ್ರಷ್ಣಾ ನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಲೋಡಮಾಡಿಕೊಂಡು ಬಂದು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೋರಟಿರುವದಾಗಿ ತಿಳಿಸಿದನು. ಆಗ ನಾನು ಸರಕಾರದಿಂದ ಮರಳು ಸಾಗಾಣಿಕೆ ಮಾಡಲು ಪಡೆದ ಅನುಮತಿ ಪತ್ರ ತೋರಿಸಲು ಹೇಳಿದಾಗ ಅವನು ಯಾವದೆ ಧಾಖಲೆ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ. 3] ಕೆಎ-28ಸಿ-5169 ಟಾಟಾ ಕಂಪನಿಯ ಟಿಪ್ಪರ ಇದ್ದು ಅದರ ಅ:ಕಿ: 500000=00ರೂ ಅದರಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ: 6000=00 ರೂ ಅದರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಚೆನ್ನಯ್ಯ ತಂದೆ ಈರಯ್ಯ ಮಠಪತಿ ವ|| 35 ಜಾ|| ಜಂಗಮ ಉ|| ಚಾಲಕ ಸಾ|| ದೇವಣಗಾಂವ ತಾ|| ಸಿಂದಗಿ ಅಂತ ತಿಳಿಸಿದ್ದು ಸದರಿ ಮರಳನ್ನು ತಮ್ಮ ಟಿಪ್ಪರ ಮಾಲಿಕರು ಹೈಯಾಳ (ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಲೋಡ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಹೈಯಾಳ(ಬಿ) ಗ್ರಾಮದ ಸಿಮಾಂತರದಲ್ಲಿಯ ಕ್ರಷ್ಣಾ ನದಿಗೆ ಟಿಪ್ಪರನ್ನು ತೆಗೆದು ಕೊಂಡು ಹೋಗಿ ಕ್ರಷ್ಣಾ ನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಲೋಡಮಾಡಿಕೊಂಡು ಬಂದು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೊರಟಿರುವದಾಗಿ ತಿಳಿಸಿದನು. ಆಗ ನಾನು ಸರಕಾರದಿಂದ ಮರಳು ಸಾಗಾಣಿಕೆ ಮಾಡಲು ಪಡೆದ ಅನುಮತಿ ಪತ್ರ ತೋರಿಸಲು ಹೇಳಿದಾಗ ಅವನು ಯಾವದೆ ದಾಖಲೆ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ. 4] ಕೆಎ-51ಎಎ-6696 ಭಾರತ ಬೇಂಜ್ ಕಂಪನಿಯ ಟಿಪ್ಪರ ಇದ್ದು ಅದರ ಅ:ಕಿ: 500000=00ರೂ ಅದರಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ: 6000=00 ರೂ ಅದರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಬಸವರಾಜ ತಂದೆ ಸಾಯಬಣ್ಣ ಪೂಜೇರಿ ವ|| 24 ಜಾ|| ಉಪ್ಪಾರ ಉ|| ಚಾಲಕ ಸಾ|| ಟೊಕಾಪೂರ ತಾ|| ಶಹಾಪೂರ ಅಂತ ತಳಿಸಿದ್ದು ಸದರಿ ಮರಳನ್ನು ತಮ್ಮ ಟಿಪ್ಪರ ಮಾಲಿಕರು ಭೀಮಣ್ಣ ತಂದೆ ನಾಗಪ್ಪ ಸಾ|| ಬಿರನಕಲ್ ಇವರು ಹೈಯಾಳ (ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಲೋಡ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಹೈಯಾಳ(ಬಿ) ಗ್ರಾಮದ ಸಿಮಾಂತರದಲ್ಲಿಯ ಕ್ರಷ್ಣಾ ನದಿಗೆ ಟಿಪ್ಪರನ್ನು ತೆಗೆದು ಕೊಂಡು ಹೋಗಿ ಕ್ರಷ್ಣಾ ನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಲೋಡಮಾಡಿಕೊಂಡು ಬಂದು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೋರಟಿರುವದಾಗಿ ತಿಳಿಸಿದನು. ಆಗ ನಾನು ಸರಕಾರದಿಂದ ಮರಳು ಸಾಗಾಣಿಕೆ ಮಾಡಲು ಪಡೆದ ಅನುಮತಿ ಪತ್ರ ತೋರಿಸಲು ಹೇಳಿದಾಗ ಅವನು ಯಾವದೆ ಧಾಖಲೆ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕರು ಮರಳನ್ನು ಸಾಗಾಣಿಕೆ ಮಾಡಲು ಸರಕಾರದಿಂದ ಯಾವುದೆ ಅನುಮತಿ ಪತ್ರ ಇಲ್ಲದೆ ಕಳ್ಳತನದಿಂದ ಸಾಗಿಸುತ್ತಿದ್ದು ಖಚಿತವಾಗಿದ್ದರಿಂದ ಸದರಿ ಚಾಲಕರಿಗೆ ತಮ್ಮ ಟಿಪ್ಪರಗಳನ್ನು ತೆಗೆದು ಕೊಂಡು ಶಹಾಪುರ ಠಾಣೆಗೆ ಹೋಗಲು ತಿಳಿಸಿದ್ದರಿಂದ ಸದರಿ ಚಾಲಕರು ತಮ್ಮ ತಮ್ಮ ಟಿಪ್ಪರಗಳನ್ನು ತೆಗೆದು ಕೊಂಡು ಶಹಾಪೂರ ಠಾಣೆಗೆ ಬೆಳಿಗ್ಗೆ 8-00 ಗಂಟೆಗೆ ತಂದು ನಿಲ್ಲಿಸಿ ಸದರಿ ಟಿಪ್ಪರ ಚಾಲಕರು ಮತ್ತು ಸದರಿ ಟಿಪ್ಪರಗಳ ಮಾಲಿಕರ ವಿರುದ್ದ ವರದಿಯನ್ನು ತಯ್ಯಾರಿಸಿ ಬೆಳಿಗ್ಗೆ 9-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳುವಂತೆ ಸರಕಾರಿ ತಫರ್ೇ ಫಿಯರ್ಾದಿ ದಾರನಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 464/2017 ಕಲಂ 379 ಐ.ಪಿ.ಸಿ.44 (1) ಕೆ.ಎಂ.ಎಂ.ಸಿ.ಆರ್. ನ್ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 465/2017 ಕಲಂ 143 147 341 323 324 504 506 ಸಂ 149 ಐ.ಪಿ.ಸಿ ;- ದಿನಾಂಕ 28/11/2017 ರಂದು ಮುಂಜಾನೆ 09-00 ಗಂಟೆಗೆ ಫಿರ್ಯಾದಿ ಶ್ರೀ ಮರೆಪ್ಪ ತಂದೆ ತಂದೆ ಮುಕ್ಕಣ್ಣ ನಾಯಕ  ವಯ 60 ಜಾತಿ ಬೇಡರ ಉಃ ಗುತ್ತೆದಾರ ಸಾಃ ಬಿಜಾಸ್ಪೂರ ತಾಃ ಸುರಪೂರ  ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, 2008 ರಿಂದ 2014 ನೇ ಸಾಲಿನವರಗೆ ಆಪಾದಿತ ನಂ 1 ದೇವಿಂದ್ರಪ್ಪಗೌಡ ತಂದೆ ಮಲ್ಲಣ್ಣಗೌಡ ಗೌಡಗೇರಾ ಸಾಃ ಬಸವೇಶ್ವರ ನಗರ ಶಹಾಪೂರ ಈತನೊಂದಿಗೆ ಸೇರಿ ಗುತ್ತೆದಾರ ಕೆಲಸ ಮಾಡುವ ಸಮಯದಲ್ಲಿ  ಸದರಿಯವನು ಫಿರ್ಯಾದಿಗೆ ರೂಪಾಯಿ 1,01,32,000=00 ರೂಪಾಯಿ ಹಣವನ್ನು ಕೊಡಬೇಕಾಗಿದ್ದು, ಸದರಿ ಹಣವನ್ನು ಕೊಡುತ್ತೆನೆ ಅಂತ ದಿನಗಳನ್ನು ಮುಂದಕ್ಕೆ ಹಾಕೊಂಡು ಬಂದು ಹಣ ಕೊಟ್ಟಿರುವುದಿಲ್ಲ. ಹೀಗಿರುವಾಗ ದಿನಾಂಕ 27/11/2017 ರಂದು ಸಾಯಂಕಾಲದ ಸುಮಾರಿಗೆ ಫಿರ್ಯಾದಿ ತನಗೆ ಪರಿಚಯವಿರುವ ಶಹಾಪೂರದ ಅಯ್ಯಪ್ಪ ಕುಲರ್ೆ, ರಾಮಣ್ಣ ನಾಯ್ಕೋಡಿ ಇವರೊಂದಿಗೆ ಸಾಯಂಕಾಲ 5-00 ಗಂಟೆಗೆ ಆಪಾದಿತನ ನಂ 1 ದೇವಿಂದ್ರಪ್ಪಗೌಡ ಈತನ ಮನೆಗೆ ಹೋಗಿ,  ಫಿರ್ಯಾದಿ ತನಗೆ ಹಣ ಬೇಕು ಅಂತ ಕೇಳಿದಾಗ  ಸದರಿ ದೇವಿಂದ್ರಪ್ಪಗೌಡನು  ಯಾವ ಹಣ ಕೊಡಬೇಕಲೇ ಮಗನೇ, ಹಣ  ಕೊಡುವುದಿಲ್ಲ ಏನ್ ಮಾಡ್ಕೋತಿ ಮಾಡ್ಕೋ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು 1]ದೇವಿಂದ್ರಪ್ಪಗೌಡ ಮತ್ತು ಅವನ ಹೆಂಡತಿ 2] ರಂಗಮ್ಮ, ಮಕ್ಕಳಾದ 3] ಕಿಶೋರ, 4] ಕಿರಣ,  ಮಗಳು 5] ಶೃತಿ ಇವರೆಲ್ಲರೂ, ಫಿರ್ಯಾದಿಯನ್ನು ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 463/2017 ಕಲಂ  143 147 341 323 324 504 506 ಸಂ 149 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 205/2017 ಕಲಂ: 143,147,498(ಎ),323,324,504, 506, ಸಂಗಡ 149ಐ.ಪಿ.ಸಿ;- ದಿನಾಂಕ 28/11/2017 ರಂದು 05-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ರೇಣುಕಾ ಗಂಡ ಶರಣಗೌಡ ಮಾಲಿ ಬಿರದಾರ ವಯಾ|| 20 ವರ್ಷ ಜಾ|| ಹಿಂದೂ ಬೇಡರ ಉ|| ಹೊಲಮನೆಕೆಲಸ ಸಾ|| ಗೌಡಗೇರಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ತವರು ಮನೆಯು ಸಹ ಇದ್ದೂರಾದ ಗೌಡಗೇರಾ ಗ್ರಾಮವಾಗಿದ್ದು ನನಗೆ ಸುಮಾರು 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಇದ್ದೂರಿನ ಶರಣಗೌಡ ತಂದೆ ಬೈಲಪ್ಪಗೌಡ ಮಾಲಿಬಿರಾದಾರ ಇವರಿಗೆ ಮದುವೆಯಲ್ಲಿ ಐದು ತೊಲಿ ಬಂಗಾರ ಹಾಗು 50,000 ರೂ ಹಣವನ್ನು ಉಡುಗೊರೆಯಾಗಿ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ಬಳಿಕ ಒಂದು ವರ್ಷದ ತನಕ ನಾನು ಮತ್ತು ನನ್ನ ಗಂಡ ಅನ್ಯೋನ್ಯವಾಗಿ ಇದ್ದೇವು..
  ಹೀಗಿದ್ದು ಸುಮಾರು ಒಂದು ವರ್ಷದಿಂದ ನನ್ನ ಗಂಡ ಹಾಗು ಮನೆಯವರು ನಾನು ಸರಿಯಾಗಿಲ್ಲ ನನಗೆ ಅಡುಗೆ ಮಾಡಲು ಬರುವದಿಲ್ಲ ಮತ್ತು ನನಗೆ ಮಕ್ಕಳು ಆಗುವದಿಲ್ಲ ಅಂತ ಬಹಾಳ ಕಿರುಕುಳ ನೀಡಿದ್ದರಿಂದ  ನಾನು ಸದರಿಯವರ ಕಿರುಕುಳ ತಾಳದೇ  ಸುಮಾರು ಒಂದು ವಾರದ ಹಿಂದೆ ನಮ್ಮ ತವರು ಮನೆಗೆ ಹೋಗಿದ್ದೆನು.
         ಹೀಗಿದ್ದು ದಿನಾಂಕ 26/11/2017 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ತಂದೆ ಭೀಮಣ್ಣ ತಂದೆ ಹಣಮಂತ್ರಾಯ ಚಿಗರಿಹಾಳ ಹಾಗು ತಾಯಿಯಾದ ಮಲ್ಲಮ್ಮ ಗಂಡ ಭೀಮಣ್ಣ ಚಿಗರಿಹಾಳ ತಮ್ಮ ಜಟ್ಟೆಪ್ಪ ಎಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಗೆ ಹೋಗಿ ನಮ್ಮ ತಂದೆ ತಾಯಿಯವರು ನಿಮಗೆ ಎಷ್ಟು ಹಣ ಬಂಗಾರ ಬೇಕು ಹೇಳಿರಿ ಕೊಡುತ್ತೇವೆ ನನ್ನ ಮಗಳಿಗೆ ಯಾಕೇ ಕಿರುಕುಳ ನೀಡಿ  ಹೊಡೆಯುತ್ತೀರಿ ಅಂತ ಕೇಳಿದಾಗ ಮನೆಯಲ್ಲಿದ್ದ ನನ್ನ ಗಂಡನಾದ ಶರಣಗೌಡ ತಂದೆ ಬೈಲಪ್ಪಗೌಡ ಮಾಲಿಬಿರಾದಾರ   ನನ್ನ ಅತ್ತೆಯಾದ ದೇವಕ್ಕೆಮ್ಮ ಗಂಡ ಬೈಲಪ್ಪಗೌಡ ಮಾಲಿಬಿರಾದಾರ, ಮಾವನಾದ ಬೈಲಪ್ಪಗೌಡ ತಂದೆ ಚಂದಪ್ಪಗೌಡ ಮಾಲಿಬಿರಾದಾರ ಮೈದುನನಾದ ರಾಯಪ್ಪಗೌಡ ತಂದೆ ಬೈಲಪ್ಪಗೌಡ ಮಾಲಿ ಬಿರಾದಾರ, ಹಾಗು ನಾದನಿಯಾದ ಹಣಮಂತಿ ಗಂಡ ಶೇಖಪ್ಪ ಹವಲ್ದಾರ ಇನ್ನೊಬ್ಬ ಮಾವನಾದ ದೇವಣಗೌಡ ತಂದೆ ಚಂದಪ್ಪಗೌಡ ಮಾಲಿ ಬಿರದಾರ ಇವರೆಲ್ಲರೂ ಕೂಡಿ ಹೊರಗೆ ಬಂದವರೇ ಈ ಸೂಳೇ ಮಕ್ಕಳ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನಮಗೆ ಕೈಯಿಂದ ಹೊಡೆಯಲಿಕ್ಕೆ ಹತ್ತಿದರು ಆಗ ನಾವು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಭೀಮರಾಯ ತಂದೆ ಹಣಂತ್ರಾಯಗೌಡ ಮೇಟಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ನಂತರ ಸದರಿಯವರೆಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಇನ್ನೊಮ್ಮೆ ನಮ್ಮ ಮನೆಯ ಕಡೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 205/2017 ಕಲಂ 143,147,323,498[ಎ],504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!