Yadgir District Reported Crimes Updated on 27-11-2017

By blogger on ಸೋಮವಾರ, ನವೆಂಬರ್ 27, 2017


                                            Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 282/2017 ಕಲಂ: 376 ಐಪಿಸಿ ಮತ್ತು 4 ಪೋಕ್ಸೋ ಎಕ್ಟ;- ಆರೋಪಿ ಮತ್ತು ಫಿರ್ಯಾಧಿ ಈಗ ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರೂ ಪ್ರೀತಿಸುತ್ತಾ ಬಂದಿದ್ದು, 2016 ನೇ ಸಾಲಿನ ಅಕ್ಟೋಬರ ತಿಂಗಳ 25 ನೇ ತಾರೀಖಿನಂದು ಅಜೀದಾರಳು ಅಪ್ರಾಪ್ತ ವಯಸ್ಕಳು ಅಂತಾ ಗೋತ್ತಿದ್ದರು ಕೂಡಾ ಆರೋಪಿತನು ಆಕೆಗೆ ಪುಸಲಾಯಿಸಿ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಆಕೆಗೆ ಲೈಂಗಿಕ ಸಂಭೋಗ ಮಾಡಿದ್ದು ಇರುತ್ತದೆ, ಮುಂದೆ ಅಜರ್ಿದಾರಳು ಗಭರ್ೀಣಿಯಾಗಿ ಮೊಹರಂ ಹಬ್ಬದ ಸಮಯದಲ್ಲಿ ಆಕೆಗೆ ಹೆಣ್ಣು ಮಗು ಹುಟ್ಟಿದ್ದು, ಅವಳು ತಮ್ಮ ಮಾನ ಮಯರ್ಾದೆಗೆ ಅಂಜಿ ಆ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುವ ಕವಿತಾ ಎಂಬುವವಳಿಗೆ ಕೊಟ್ಟಿದ್ದು, ಕವಿತಾಳು ಆ ಹಸುಗೂಸಿಗೆ ಮಂಗಳೂರಿನ ತನ್ನ ತಮ್ಮನಿಗೆ ಕೊಟ್ಟಿದ್ದಾಗಿ ತಿಳಿಸಿದ್ದು ಇರುತ್ತದೆ, ತದ ನಂತರ ಅಜರ್ಿದಾರಳ ತಂದೆ-ತಾಯಿ ಮತ್ತು ಊರಿನ ಪ್ರಮೂಖರು ಕೂಡಿ ಆರೋಪಿ ಶರಣಪ್ಪನಿಗೆ ಆಗಿದ್ದು ಆಗಿ ಹೋಯಿತು, ನೀನು ಅಜರ್ಿದಾರಳಿಗೆ ಮದುವೆ ಮಾಡಿಕೋ ಅಂತಾ ತಿಳಿಸಿ ಹೇಳಿದರು ಕೂಡಾ ಆರೋಪಿತನು ಮದುವೆ ಮಾಡಿಕೊಳ್ಳಲು ನಿರಾಕರಿಸಿರುತ್ತಾನೆ, ಅಜರ್ಿದಾರಳು ಅಪ್ರಾಪ್ತ ವಯಸ್ಕಳು ಅಮಥಾ ಗೋತ್ತಿದ್ದರು, ಆರೋಪಿತನು ಅವಳಿಗೆ ಮದುವೆ ಮಾಡಿಕೊಳ್ಳುವದಾಗಿ ನಂಬಿಸಿ ಅವಳೊಂದಿಗೆ ಲೈಂಗಿಕ ಸಂಭೋಗ ಮಾಡಿ ಗಭರ್ೀಣಿ ಮಾಡಿದ್ದು ಇರುತ್ತದೆ, ಈ ವಿಷಯದ ಬಗ್ಗೆ ತನ್ನ ತಂದೆ-ತಾಯಿ ಮತ್ತು ಹಿರಿಯರು ಆರೋಪಿತನೊಂದಿಗೆ ತನಗೆ ಮದುವೆ ಮಾಡಿಕೊಡುವ ಸಂಬಂಧ ಆರೋಪಿತನೊಂದಿಗೆ ವಿಚಾರಣೆ ಮಾಡಿ ಠಾಣೆಗೆ ತಡವಾಗಿ ಬಂದು ಅಜರ್ಿ ಕೊಟ್ಟಿದ್ದ ಸಾರಾಂಶದ ಮೇಲಿಂದ ಇಂದು ದಿನಾಂಕ 26/11/2017 ರಂದು ಮದ್ಯಾಹ್ನ 3-30 ಗಂಟೆಗೆ ಗುನ್ನೆ ನಂ 282/2017 ಕಲಂ 376 ಐಪಿಸಿ ಮತ್ತು 4 ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 283/2017 ಕಲಂ 379 ಐಪಿಸಿ ;- ದಿನಾಂಕ 26-11-2017 ರಂದು 3-30 ಪಿ.ಎಂ.ಕ್ಕೆ ಯಡ್ಡಳ್ಳಿ ಗ್ರಾಮದ ಹತ್ತಿರ ಆರೋಪಿತನು ತನ್ನ ಸ್ವರಾಜ್ ಕಂಪನೀಯ ನಂಬರ ಇಲ್ಲದ ಟ್ರಾಕ್ಟರದಲ್ಲಿ ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ  ಅನಧಿಕೃತವಾಗಿ ಮರಳನ್ನು ಕದ್ದು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಿಬ್ಬಂದಿಯವಯಾದ ಸುಭಾಸ ಎ.ಪಿಸಿ-108 ಮತ್ತು ಹಣಮೇಗೌಡ ಎಪಿಸಿ-71 ಇವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದಾಗ ಅಪರಿಚಿತ ಆರೋಪಿ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಉಸುಕು ತುಂಬಿದ ಟ್ರ್ಯಾಕ್ಟರನ್ನು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿದಾರರು ತಮ್ಮ ವರದಿಯೊಂದಿಗೆ 4-30 ಪಿ.ಎಮ್ ಕ್ಕೆ ಹಾಜರಾಗಿದ್ದು ಸದರಿ ವರದಿಯ  ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 283/2017 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.   

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ 279, 337, 338 ಐಪಿಸಿ ;- ದಿನಾಂಕ 26/11/2017 ರಂದು 12-15 ಪಿ.ಎಂ. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇಬ್ಬರು ಕೂಡಿಕೊಂಡು ಯಾದಗಿರಿ ನಗರದ ಕನಕನಗರದ ಹತ್ತಿರ ಇರುವ ಪೊಲೀಸ್ ಕ್ವಾಟರ್ಸ ಮುಂದಿನ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ಹೊರಟಿದ್ದಾಗ ಆರೋಪಿತ ತನ್ನ ಮೊಟಾರು ಸೈಕಲ್ ಬಜಾಜ್ ಪಲ್ಸ್ರ ಮೋ.ಸೈಕಲ್ ನಂ.ಕೆಎ-33, ಕೆ-5297 ಹಾಗೂ ಅದರ ಇಂಜಿನ್ ನಂ.ಆಏಉಃಖಿಊ95520 ಮತ್ತು ಚೆಸ್ಸಿ ನಂ.ಒಆ2ಆಊಆಏಚಚಖಿಅಊ8997 ನೇದ್ದನ್ನು ತನ್ನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಗಂಡನಿಗೆ ನೇರವಾಗಿ  ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಗಾಯಾಳು ಮಲಕರೆಡ್ಡಿ ಇವರಿಗೆ ಅಪಘಾತದಲ್ಲಿ ಬಲಗಾಲು ಮೊಣಕಾಲು ಕೆಳಗೆ ಮುರಿದಿದ್ದು ಮತ್ತು ತಲೆಗೆ ಬಾರೀ ರಕ್ತಗಾಯವಾಗಿದ್ದು, ಬಲಕಿವಿಗೆ ರಕ್ತಗಾಯವಾಗಿದ್ದು ಸೊಂಟಕ್ಕೆ, ಬೆನ್ನಿಗೆ, ಹೊಟ್ಟೆಗೆ ಗುಪ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಆರೋಪಿತನಿಗೆ ಕೂಡ ಹಲ್ಲುಗಳು ಮುರಿದಿದ್ದು ಹಿಂಬದಿ ಕುಳಿತಿದ್ದ ಎಮ್.ಡಿ.ಸುಫಿಯಾನ್ ಈತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ, ಮೋಟಾರು ಸೈಕಲ್ ಸವಾರ ಹಸನೇಮ್ ತಂದೆ ಸಲೀಂ ಮುಜಾವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಅದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ: 279,337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ;- ದಿನಾಂಕ 26/11/2017 ರಮದು 12-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಸವಿತಾ ಗಂಡ ಮಲ್ಲಪ್ಪ ದೊಡಮನಿ ವಯಾ|| 24 ವರ್ಷ ಉ|| ಕೂಲಿಕೆಲಸ ಜಾ|| ಹಿಂದೂ ಹೊಲೆಯರ ಸಾ|| ಅಗತೀರ್ಥ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ದಿನಾಂಕ 21/11/2017 ರಂದು ಸಾಯಂಕಾಲ 06-30 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ಮಾವ ನಂದಪ್ಪ ತಂದೆ ಭೀಮಪ್ಪ ದೊಡಮನಿ ನಾವಿಬ್ಬರೂ ಹೊಲದಿಂದ ಮನೆಗೆ ಬರುವ ಕುರಿತು ನಮ್ಮೂರ ಸ್ಮಶಾನದ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ನನ್ನ ಗಂಡ ಮಲ್ಲಪ್ಪ ತಂದೆ ನಂದಪ್ಪ ದೊಡಮನಿ ಈತನು ಸಹ ತನ್ನ ನಂಬರ ಇಲ್ಲದ ಹೋಂಡಾ ಶೈನ್ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಮುಂದೆ ಹಾದು ಹೊಲಕ್ಕೆ ಹೋಗುವ ಕುರಿತು ಅಗತೀರ್ಥ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅಗತೀರ್ಥ ಕ್ರಾಸ ಕಡೆಯಿಂದ ಬರುತ್ತಿದ್ದ ಒಂದು ಟ್ರ್ಯಾಕ್ಟರ ಇಂಜನ ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಬಲವಾಗಿ ನನ್ನ ಗಂಡನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದನು. ಆಗ ನನ್ನ ಗಂಡನು ತನ್ನ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಆಗ ನಾವು ಓಡಿಹೋಗಿ ನೋಡಲು ನನ್ನ ಗಂಡನಿಗೆ ತಲೆಗೆ, ಎದೆಗೆ ಹಾಗು ಹೊಟ್ಟೆಗೆ ಭಾರೀ ಒಳಪೆಟ್ಟಾಗಿ  ಮಾತನಾಡುತ್ತಿರಲಿಲ್ಲ ನಂತರ ಸದರಿ ನನ್ನ ಗಂಡನಿಗೆ ಅಪಘಾತಪಡಿಸಿದ ಟ್ರ್ಯಾಕ್ಟರ ಇಂಜನ ನಂಬರ ನೋಡಲಾಗಿ  ಕೆಎ-33 ಟಿ-9662 ಅಂತ ಇದ್ದು ಸದರಿ ಟ್ರ್ಯಾಕ್ಟರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ. ಸದರಿಯವನನ್ನು ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ವಾತ್ಸಲ್ಯ ಆಸ್ಪತೆಗ್ರೆ ಕರೆದುಕೊಂಡು ಹೋಗಿ ಅಲ್ಲಿಂದ ಸೊಲ್ಲಾಪೂರದ ಎಸ್ ಪಿ ಯುನ್ಸ್ಟೂಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ನನ್ನ ಗಂಡನೂ ಇಲ್ಲಯವರೆಗೂ ಇನ್ನೂ ಮಾತನಾಡುವ ಸ್ಥಿತಯಲ್ಲಿರದ ಕಾರಣ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಸದರಿ ಚಾಲಕನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 203/2017 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 337/2017 ಕಲಂ: 279, 304(ಎ) ಐಪಿಸಿ;- ದಿನಾಂಕಃ 26/11/2017 ರಂದು 7-30 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಟಿ ಮೃತಳ ಗಂಡನಾದ ಹಯ್ಯಾಳಪ್ಪ ತಂದೆ ಹಯ್ಯಾಳಪ್ಪ ಐಕೂರ ಸಾಃ ಕುಂಬಾರಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನನ್ನ ಹೆಂಡತಿಯಾದ ಅಯ್ಯಮ್ಮ ಹಾಗು ನನ್ನ ತಮ್ಮನ ಹೆಂಡತಿಯಾದ ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಹತ್ತಿರ ಮಲ್ಲಣ್ಣ ಸುರಪೂರ ಇವರ ಹೊಲದಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೋಗಿದ್ದರು. ನಾನು ಮನೆಯಲ್ಲಿದ್ದಾಗ ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕವಡಿಮಟ್ಟಿ ಗ್ರಾಮದ ನಮ್ಮ ಸಂಬಂಧಿಕರಾದ ಹೈಯ್ಯಾಳಪ್ಪ ತಂದೆ ನಿಂಗಪ್ಪ ಕೆಂಗೂರಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ,  ಈಗ್ಗೆ 6-30 ಗಂಟೆಯ ಸುಮಾರಿಗೆ ನಿನ್ನ ಹೆಂಡತಿ ಅಯ್ಯಮ್ಮ ಹಾಗು ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಕಡೆಯಿಂದ ಕುಂಬಾರಪೇಟ ಕಡೆಗೆ ಅಟೋರಿಕ್ಷಾದಲ್ಲಿ ಬರುವಾಗ ಕವಡಿಮಟ್ಟಿ ಗ್ರಾಮದ ಕನಕದಾಸ ಕಟ್ಟೆಯ ಸಮೀಪ ಮುಖ್ಯರಸ್ತೆಯ ಮೇಲೆ ಸುರಪೂರ ಕಡೆಯಿಂದ ವಿ.ಆರ್.ಎಲ್ ಗೂಡ್ಸ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಬಲಕ್ಕೆ ಕಟ್ ಮಾಡಿ ಎದುರಿನಿಂದ ಹೊರಟಿದ್ದ ಟಂ ಟಂ ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ್ದರಿಂದ ಅಟೋರಿಕ್ಷಾದ ಮದ್ಯದ ಸೀಟಿನ ಕೊನೆಯಲ್ಲಿ ಕುಳಿತಿದ್ದ ನಿನ್ನ ಹೆಂಡತಿ ಅಯ್ಯಮ್ಮಳ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ತಿಳಿಸಿದನು. ಆಗ ನಾನು ಗಾಬರಿಯಾಗಿ ಕವಡಿಮಟ್ಟಿ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆ, ಮುಖದ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೆದಳು, ರಕ್ತ ರಸ್ತೆಯ ಮೇಲೆ ಚೆಲ್ಲಿ ಮೃತಪಟ್ಟು ಬಿದ್ದಿದ್ದಳು. ಆಗ ಅಲ್ಲೆ ರಸ್ತೆಯ ಪಕ್ಕದಲ್ಲಿ ನನ್ನ ಹೆಂಡತಿ ಕುಳಿತುಕೊಂಡು ಬರುತ್ತಿದ್ದ ಅಟೋರಿಕ್ಷಾ ನಿಂತಿದ್ದು ಅದರ ನಂಬರ ಕೆ.ಎ 33 - 7293 ಇದ್ದು, ಅಟೋ ಚಾಲಕನ ಹೆಸರು ಮಹಾದೇವಪ್ಪ ಮಾಲಗತ್ತಿ ಅಂತಾ ತಿಳಿಸಿದನು. ಅಪಘಾತ ಪಡಿಸಿದ ವಿ.ಆರ್.ಎಲ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದು ಸಹ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ನಾಗಲಿಂಗ ತಂದೆ ಶಿರಸಪ್ಪ ಕಮ್ಮಾರ ಸಾ: ಬನ್ನಿಗೋಳ್ ತಾ: ಲಿಂಗಸೂಗೂರ ಅಂತಾ ತಿಳಿಸಿರುತ್ತಾನೆ. ಬಳಿಕ ನಾವು ಅಂಬ್ಯೂಲೇನ್ಸ್ ಕರೆಯಿಸಿ ನನ್ನ ಹೆಂಡತಿ ಶವವನ್ನು ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ಸದರಿ ವಿ.ಆರ್.ಎಲ್ ಗೂಡ್ಸ್ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 337/2017 ಕಲಂಃ 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 462/2017.ಕಲಂ 87 ಆ್ಯಕ್ಟ ;- ದಿನಾಂಕ 26/11/2017 ರಂದು ಸಾಯಂಕಾಲ 18-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 4 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 26/11/2016  ರಂದು ಸಾಯಂಕಾಲ 16-00 ಗಂಟೆಗೆ ಸುಮಾರಿಗೆ  ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳಿಸಗರದ ಮರೇಮ್ಮನ ಗುಡಿಯ ಮುಂದೆ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ  ಸಿಬ್ಬಂಧಿಯವರಾದ ಹೋನ್ನಪ್ಪ ಹೆಚ್.ಸಿ 101. ಗಜೆಂದ್ರ ಪಿ.ಸಿ 313, ಶಿವನಗೌಡ ಸಿ.ಪಿ.ಸಿ. 141, ಗೋಕುಲ ಹುಸೇನಿ ಪಿ.ಸಿ.172. ಆಂಜನೆಯ ಪಿ.ಸಿ.257. ದೇವರಾಜ ಪಿ.ಸಿ.282, ಜಡಿಯಪ್ಪ ಪಿ.ಸಿ.350, ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿಕುರಿತು ಠಾಣೆಯ ವಾಹನದಲ್ಲಿ  ಠಾಣೆಯಿಂದ 16-15 ಗಂಟೆಗೆ ಹೊರಟು ಶಹಾಪೂರ ನಗರದ ಹಳೀಸಗರದ ಮರೇಮ್ಮನ ಗುಡಿಹತ್ತಿರ 16-20 ಗಂಟೆಗೆ ಹೋಗಿ  ಜೀಪಿನಿಂದ ಕೆಳಗಡೆ ಇಳಿದು ಅವರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 20 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 20-ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು  ಜೂಜಾಟ  ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, ಸಾಯಂಕಾಲ 16-25 ಗಂಟೆಗೆ  ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಿದಾಗ 04 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ  ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಶರಣಪ್ಪ ತಂದೆ ಹಣಮಂತ ದೋಡ್ಮನಿ ವ|| 45 ಜಾ|| 45 ಉ|| ಮಾದಿಗ ಉ|| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನ  ಅಂಗಶೋಧನೆ ಮಾಡಿದಾಗ  ನಗದು ಹಣ 210/- ರೂಪಾಯಿ ಸಿಕ್ಕವು 2] ಹಣಮಂತ ತಂದೆ ರಾಯಪ್ಪ ತಿಪ್ಪನಟಿಗಿ ವ|| 30 ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು ಹಣ 190/- ರೂಪಾಯಿ ಸಿಕ್ಕವು 3] ರಾಮಣ್ಣ ತಂದೆ ಯಂಕಪ್ಪ ಹಳಿಸಗರ ವ| 47 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು  ಹಣ 180/- ರೂಪಾಯಿ ಸಿಕ್ಕವು 4] ಸಾಯಬಣ್ಣ ತಂದೆ ಭೀಂಣ್ಣ ಟಣಕೆದಾರ ವ|| 35 ಜಾ|| ಬೇಡರ ಉ| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನಿಂದ ನಗದು ಹಣ 160/- ರೂಪಾಯಿ ಸಿಕ್ಕವು. ಕಣದಲ್ಲಿ ಪಣಕ್ಕೆ ಇಟ್ಟ ಹಣ 70 ಸಿಕ್ಕವು ಹೀಗೆ ಒಟ್ಟು 810/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಸಾಯಂಕಾಲ 16-30  ಗಂಟೆಯಿಂದ 17-30 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 04 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 17-40 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 18-00 ಗಂಟೆಗೆ 04 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 87 ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 462/2017 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!