Yadgir District Reported Crimes Updated on 22-11-2017

By blogger on ಬುಧವಾರ, ನವೆಂಬರ್ 22, 2017


                                           Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 451/2017 ಕಲಂ 143 147 341 323 324 354 504 506 ಸಂ 149 ಐ.ಪಿ.ಸಿ ;- ದಿನಾಂಕ 21/11/2017 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿ ಶ್ರೀ ಶಿವಣ್ಣ ತಂದೆ ಗುರಪ್ಪ ಸಿದ್ರಾ ವಯ 65 ವರ್ಷ ಜಾತಿ ಹಿಂದೂ ಗಾಣೀಗ ಉಃ ಒಕ್ಕಲುತನ ಸಾಃ ಸಗರ[ಬಿ] ಹಾಲಿವಸತಿ ಬಾಪುಗೌಡ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಅಂದಾಜು 2013 ನೇ ಸಾಲಿನಲ್ಲಿ ಬಾಪುಗೌಡ ನಿವಾಸಿತನಾದ ಆರೋಪಿ ನಂ 1 ವಿನಾಯಕ ತಂದೆ ಪ್ರಭಾಕರ ಪೊಲಂಪಲ್ಲಿ ಇವರ ಹೆಸರಿನಲ್ಲಿರುವ ನಿವೇಶನ ಸಂಖ್ಯೆ ಎಮ್.ಐ.ಜಿ ಎರಡನೇ ಹಂತ 35 ನೇದ್ದನ್ನು ಖರೀದಿ ಮಾಡಿಕೊಂಸು ಸದರಿ ಮನೆಯನ್ನು ಫಿರ್ಯಾದಿ ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಅಂದಾಜು 3 ವರ್ಷದವರೆಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಪುನಃ  ಫಿರ್ಯಾದಿ ತನ್ನ ಸಂಸಾರದ ಅಡಚಣೆಗೆ ಮನೆಮಾರಾಟ ಮಾಡುವ ತಯ್ಯಾರಿಯಲ್ಲಿದ್ದಾಗ ಪುನಃ ವಿನಾಯಕ ಇವನು ಸದರಿ
ಮನೆಯನ್ನು ನಾನೆ ಖರೀದಿ ಮಾಡುತ್ತೆನೆ ಅಂತ ಹೇಳಿ ರೂಪಾಯಿ 22,00,000=00 ಲಕ್ಷಕ್ಕೆ ಮಾತುಕತೆ ಮಾಡಿ ವಿನಾಯಕ ಈತನು ಸದರಿ ಮನೆಯಲ್ಲಿ ವಾಸವಾಗಿದ್ದನು. ಸದರಿ ವಿನಾಯಕ ಈತನು ಮನೆಯಲ್ಲಿದ್ದುಕೊಂಡು ಸದರಿ ಮನೆ ತನ್ನಹೆಸರಿಗೆ ಮಾಡಿಕೊಳ್ಳದೆ ಮತ್ತು ಹಣ ಕೊಡದೆ ಸತಾಯಿಸುತಿದ್ದಾಗ ಈ ದಿನ ಫಿರ್ಯಾದಿ ಮನೆ ಖಾಲಿ ಮಾಡಲು ಹೇಳಲು ಹೋದಾಗ ಆರೋಪಿತರೆಲ್ಲರೂ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಜೊತೆಯಲ್ಲಿದ್ದವರಿಗೆ ಮನೆಯಲಿ ಬಿಡದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಗುಪ್ತಗಾಯ ಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಮತ್ತು ಫಿರ್ಯಾದಿಯ ಸೊಸೆಗೆ ತಲೆಯ ಕೂದಲು ಹಿಡಿದು ಜಗ್ಗಾಡಿ  ಮೈ ಮೇಲಿನ ಬ್ಲೌಜ ಎಳೆದಾಡಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 451/2017 ಕಲಂ 143 147 341 323 324 354 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 452/2017.ಕಲಂಃ 151.107.ಸಿ.ಆರ್.ಪಿ.ಸಿ.;- ದಿನಾಂಕ 21/11/2017 ರಂದು ಮದ್ಯಾಹ್ನ 15-10 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ಸೋಮಲಿಂಗಪ್ಪ ಎ,ಎಸ್,ಐ, ಶಹಾಫೂರ ಠಾಣೆ ಇವರು 4 ಜನ ಆರೋಪಿರು ಮತ್ತು ಇಂದು ವರದಿ ತಂದು ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ. ನಾನು ಸೋಮಲಿಂಗಪ್ಪ ಎ.ಎಸ್.ಐ. ಶಹಾಫೂರ ಪೊಲೀಸ್ ಠಾಣೆ ವಿನಂತಿಸಿಕೊಳ್ಳುವುದೇನಂದರೆ ನಾನು ಮತ್ತು ರೇಣುಕಾ ಮ.ಪಿ.ಸಿ. 219. ಬಾಬು ಪಿ.ಸಿ. 162 ರವರು ಕುಡಿಕೊಂಡು ಶಹಾಪೂರ ನಗರದ ಬಾಗೌಡ ನಗರದಲ್ಲಿ ದಿನಾಂಕ 21/11/2017 ರಂದು ಮದ್ಯಾಹ್ನ 2-10 ಗಂಟೆಯ ಸುಮಾರಿಗೆ ಮಾನ್ಯ ಪಿ.ಐ.ಸಾಹೇಬರ ಆದೇಶದ ಪ್ರಕಾರ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಬಾಪುಗೌಡ ನಗರಕ್ಕೆ ಹೋದಾಗ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಪೊಲೀಸ್ ಬಾತ್ಮೀ ದಾರರಿಂದ ವಿಚಾರ ಮಾಡಲಾಗಿ ಖಚಿತ ಬಾತ್ಮೀ ತಿಳಿದು ಬಂದಿದ್ದೆನೆಂದರೆ ಪುಷ್ಪಾವತಿ ಗಂಡ ಪ್ರಭಾಕರ ಪೊಲಂಪಲ್ಲಿ ಸಾ|| ಬಾಪುಗೌಡ ನಗರ ಇವರಿಗೆ ದಿನಾಂಕ 19/11/2017 ರಂದು ಬೆಳಿಗ್ಗೆ 8-30 ಗಂಟೆಯ ಸಮಾರಿಗೆ ಮನೆಯ ಆಸ್ತಿಯ ಸಂಬದವಾಗಿ  1] ಲಕ್ಮಣ್ಣ ತಂದೆ ಶಿವಣ್ಣ ಸಿದ್ರಾ ವ|| 42 ಜಾ|| ಗಾಣೀಗ ಸಾ|| ಸಗರ(ಬಿ). ಸಂಗಡ 9 ಜನರು ಕೂಡಿ ಬಂದು ಇದು ನಮ್ಮ ಮನೆ ಇದೆ ಕಾಲಿಮಾಡಿ ಎಂದು ಜಗಳ ಮಾಡಿಕೊಂಡಿದ್ದರಿಂದ ಠಾಣೆಯ ಗುನ್ನೆ 450/2017 ಕಲಂ. 143.147.324.354.448.504.506.ಸಂ.149. ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ಮತ್ತು ಪಿಯರ್ಾದಿ ಶ್ರೀ ಲಕ್ಷ್ಮಣ್ಣ ತಂದೆ ಶಿವಣ್ಣ ಸಾ|| ಸಗರ (ಬಿ) ಇವರು ಹಾಜರಾಗಿ ಗುನ್ನೆಗೆ ಪ್ರತಿ ಗುನ್ನೆ ನಂ 451/2017 ಕಲಂ 143.147.323.324.5-354.504.506. ಸಂ 149 ನ್ನೆದ್ದು ವಿನಾಯಕ ತಂದೆ ಪ್ರಭಾಕರ ಪೊಲಂಪಲ್ಲಿ ಸಂ 5 ಜನರ ಮೇಲೆ ಗುನ್ನೆ ದಾಖಲಾಗಿದ್ದು ಇರುತ್ತದೆ. 1] ಲಕ್ಮಣ್ಣ ಸಂಗಡ ಇತರರು ಸೆರಿ ಅದೆ ವೈಮನಸಿನಿಂದ ಸೆಡು ತಿರಿಸಿ ಕೊಳ್ಳೂವ ಉದ್ದೆಶದಿಂದ ಯಾರಾದರು ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವದಿಲ್ಲಾ ಅಂತ ದ್ವೇಶ ಸಾದಿಸುತ್ತ ಮನೆಯ ಮುಂದೆ ತಿರುಗಾಡುತಿದ್ದು ಯಾವದೆ ಸಮಯದಲ್ಲಿ ಆಸ್ತಿ ಪಾಸ್ತಿ ಹಾಗು ಪ್ರಾಣ ಹಾನಿ ಮಾಡುವ ಸಂಬವ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮವಾಗಿ ನಾಲ್ಕು ಜನರಿಗೆ ಹಿಡಿದು ಇತರು ಓಡಿ ಹೋಗಿದ್ದು ಸದರಿ ಸಿಕ್ಕ ನಾಲ್ಕು ಜನರಿಗೆ ಹೆಸರು ವಿಚಾರಿಸಲಾಗಿ 1] ಲಕ್ಮಣ್ಣ ತಂದೆ ಶಿವಣ್ಣ ಸಿದ್ರಾ ವ|| 42 ಜಾ|| ಗಾಣೀಗ ಸಾ|| ಸಗರ(ಬಿ). 2] ಮಲ್ಲಪ್ಪ ತಂದೆ ಭೀಮಪ್ಪ ಯಳವರ ವ|| 55 ಜಾ|| ಯಳವರ ಸಾ|| ಸಗರ (ಬಿ). 3] ಶ್ರೀದೇವಿ ಗಂಡ ಸಿದ್ದಣ್ಣ ಜಂಬಲದಿಣ್ಣಿ ವ|| 46 ಜಾ|| ಗಾಣಿಗ ಉ|| ಮನೆಕೆಲಸ ಸಾ|| ದೋರನಳ್ಳಿ. 4]  ರೇಣುಕಾ ಗಂಡ ಲಕ್ಷ್ಮಣ್ಣ ಸಿದ್ರಾ ವ|| 38 ಜಾ|| ಗಾಣೀಗ ಉ|| ಒಕ್ಕಲುತನ ಸಾ|| ಸಗರ (ಬಿ) ತಿಳಿಸಿದ್ದು ಸದರಿಯವರಿಗೆ ಠಾಣೆಗೆ ತಂದು ಸುಕ್ತ ಕ್ರಮಕ್ಕಾಗಿ ವರದಿಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 452/2017 ಕಲಂ 151.107 ಸಿ.ಆರ್.ಪಿ.ಸಿ ನ್ನೆದ್ದರಲ್ಲಿ ಗುನ್ನೆ ದಾಖಲಿಸಿ ಕೊಂಡು ತನಿಕೆ ಕೈಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 328/2017 ಕಲಂಃ 279.337.338 ಐಪಿಸಿ ಮತ್ತು 187 ಐ,ಎಂ,ವಿ,ಯ್ಯಾಕ್ಟ ;- ದಿನಾಂಕ:22/11/2017 ರಂದು ಬೆಳಗ್ಗೆ 8-30 ಎ,ಎಂ ಕ್ಕೆ ಠಾಣೆಗೆ  ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಶಿವಣ್ಣ ಮುಷ್ಟುರ ವಯ|| 38 ಉ|| ಕೂಲಿ ಜಾ|| ಕುರುಬರ ಸಾ|| ಮುಷ್ಟುರ ದೊಡ್ಡಿ ಕವಡಿಮಟ್ಟಿ ತಾ|| ಸುರಪೂರ ರವರು ಹಾಜರಾಗಿ  ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ. ನಾನು ಒಕ್ಕಲತನ ಕೆಲಸ ಮಾಡಿಕೊಂಡು ವಾಸಿಸುತ್ತಿರುತ್ತೆನೆ. ಹೀಗಿದ್ದು ಈ ವರ್ಷ ನಮ್ಮ ಹೊಲದಲ್ಲಿ ಬೆಳೆದ ಕವಳಿ ರಾಶಿ ಮಾಡಿ ಅದನ್ನು ಮಾರಾಟ ಮಾಡಲು ಅಡ್ಡಾಮಡ್ಡಿ ದಿಬ್ಬಿಯ ಹತ್ತಿರ ಗುಡ್ಡೆ ಹಾಕಿದ್ದು ದಿನಾಂಕ:17-11-2017 ರಂದು ನಾವು ಸದರಿ ಕವಳಿಯನ್ನು ಮಾರಾಟ ಮಾಡಿ ಲಾರಿ ತುಂಬಿಸಿದ್ದೆವು ಸಾಯಂಕಾಲ ಸದರಿ ಲಾರಿಯನ್ನು ವ್ಹೇ ಬ್ರಿಡ್ಜ ಕಾಟಾ ಮಾಡಿಸಲು ನಾನು ಲಾರಿಯಲ್ಲಿ ಕುಳಿತು ಹೋರಟೆನು. ನಮ್ಮ ಹಿಂದೆ ನಮ್ಮ ತಮ್ಮ ಮಾನಪ್ಪ ಮತ್ತು ನಮ್ಮ ಅಳಿಯ ಪರಷುರಾಮ ತಂದೆ ಮರ್ಚಪ್ಪ ದನಕಾಯಿ ಇಬ್ಬರು ಕೂಡಿ ಹೊಂಡಾಶೈನ್ ಮೊಟಾರ ಸೈಕಲ್ ನಂ.ಕೆಎ-36 ಎಫ್.ಎ-5243  ನದ್ದರ ಮೇಲೆ ಹಸನಾಪೂರ ಕ್ರಾಸ ಸಮೀಪ ಇರುವ ವ್ಹೇಬ್ರಿಡ್ಜ ಕಾಟಾ ಮಾಡಿಸಲು ಬರುತ್ತಿದ್ದರು. ಮೋಟಾರ ಸೈಕಲನ್ನು ನಮ್ಮ ತಮ್ಮ ಮಾನಪ್ಪ ಈತನು ಚಲಾಯಿಸುತ್ತಿದ್ದನು. ಸಾಯಂಕಾಲ 6:00 ಪಿ.ಎಮ್. ಸುಮಾರಿಗೆ ಬೈಪಾಸ ರಸ್ತೆಯ ಎತ್ತಿನ ಮನಿ ಐಲ್ ಮಿಲ್ ದಾಟಿ ರುಕ್ಮಾಪೂರ ಕ್ರಾಸ ಹತ್ತಿರ ಹೊರಟಾಗ ನಮ್ಮ ಎದುರಿನಿಂದ ಒಂದು ಎರಿಟಿಗಾ ಕಾರ ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೆ ನಮ್ಮ ಲಾರಿ ಹಿಂದೆ ಬರುತ್ತಿದ್ದ ನಮ್ಮ ತಮ್ಮನ ಮೊಟಾರ ಸೈಕಲ್ ಗೆ ಡಿಕ್ಕಿಪಡಿಸಿದನು. ಆಗ ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮ ಇಬ್ಬರು ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದರು. ತಕ್ಷಣ ನಮ್ಮ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ನೊಡಲಾಗಿ ಮಾನಪ್ಪನಿಗೆ ಬಲಗಾಲ ತೊಡೆಗೆ ಭಾರಿ ರಕ್ತಗಾಯ, ಬಲಗಾಲ ಮುಂಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿತ್ತು ಮತ್ತು ಎಡಗಾಲ ಮೋಳಕಾಲ ಹತ್ತಿರ ಮುರಿದಂತೆ ಆಗಿತ್ತು  ಎಡಗೈ ಮುಂಗೈಗೆ ಮತ್ತು ಬಲಗೈ ಮುಂಗೈಗೆ ತರಚಿದ ಗಾಯಗಳಾಗಿದ್ದವು. ಮತ್ತು ಅವನ ಹಿಂದೆ ಕುಳಿತಿದ್ದ ಪರಶುರಾಮ ಈತನಿಗೆ ನೋಡಲಾಗಿ ಎರಡೂ ಮೊಳಕಾಲಿಗೆ ತರಚಿದ ರಕ್ತಗಾಯವಾಗಿತ್ತು. ಬಲ ಭುಜಕ್ಕೆ ಒಳಪೆಟ್ಟಾಗಿ. ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿತ್ತು. ನಂತರ ಅಪಘಾತ ಪಡಿಸಿದ ಕಾರ ನಂಬರ ನೋಡಲಾಗಿ ಕೆಎ-33 ಎಮ್- 4709 ಅಂತ ಇದ್ದು ಕಾರ ಚಾಲಕನ ಹೆಸರು ಮಂಜು ತಂದೆ ಅಯ್ಯಪ್ಪ ಕರಿಗಾರ ಸಾ: ತಿಮ್ಮಾಪೂರ ಅಂತಾ ಗೊತ್ತಾಗಿರುತ್ತದೆ. ನಂತರ 108 ಅಂಬ್ಯೂಲೆನ್ಸಗೆ ಪೋನ ಮಾಡಿ ಆಂಬ್ಯುಲೆನ್ಸ ಸ್ಥಳಕ್ಕೆ ಬಂದಾಗ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ  ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಸೇರಿಕೆ ಮಾಡಿ ಅಲ್ಲಿ ಉಪಚಾರ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಮಿರಜ(ಮಹಾರಾಷ್ಟ್ರ ರಾಜ್ಯ) ಕ್ಕೆ ನಾನು ಮತ್ತು ಆನಂದ ತಂದೆ ನಿಂಗಪ್ಪ ಜಂಬಲದಿನ್ನಿ ಇಬ್ಬರೂ ಕೂಡಿ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆೆ. ಮತ್ತು ನಮ್ಮ ತಮ್ಮ ಚಲಾಯಿಸುತ್ತಿದ್ದ ಮೋಟಾರ ಸೈಕಲ ಮತ್ತು ಅಪಘಾತ ಪಡಿಸಿದ ಕಾರ ಅಪಘಾತವಾದ ಸ್ಥಳದಲ್ಲಿಯೇ ಇರುತ್ತವೆ.

    ಕಾರಣ ಗಡಿಬಿಡಿಯಲ್ಲಿ ನನಗೆ ಎನು ತಿಳಿಯದೆ ಮೊದಲು ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಉಪಚಾರ ಕೊಡಿಸಿ ಇಂದು ದಿನಾಂಕ:22/11/2017 ರಂದು ಮಿರಜದಿಂದ ತಡವಾಗಿ ಠಾಣೆಗೆ ಬಂದು ಈ ಅಜರ್ಿಯನ್ನು ಕೊಟ್ಟಿದ್ದು. ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ ಅಪಘಾತ ಪಡಿಸಿದ ಎರಟಿಗಾ ಕಾರ ನಂಃ ಕೆಎ-33 ಎಮ್- 4709 ನೆದ್ದರ ಚಾಲಕ ಮಂಜು ತಂದೆ ಅಯ್ಯಪ್ಪ ಕರಿಗಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:328/2017 ಕಲಂ ಃ 279.337.338.ಐಪಿಸಿ ಮತ್ತು 187 ಐಎಂ ವಿ ಯ್ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.                                   
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!