Yadgir District Reported Crimes Updated on 21-11-2017

By blogger on ಮಂಗಳವಾರ, ನವೆಂಬರ್ 21, 2017


                                              Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 230/2017 ಕಲಂ 379 ಐಪಿಸಿ;-ದಿನಾಂಕ 20/11/2017 ರಂದು 7:00 ಪಿಎಂಕ್ಕೆ ಪಿರ್ಯಾದಿಯು ಬೇರೆಯವರಿಗೆ 2,00,000=00 ರೂ ಕೊಡುವುದು ಇರುವುದರಿಂದ ಇಂದು ದಿನಾಂಕ.20/11/2017 ರಂದು ಮದ್ಯಾಹ್ನ 12-50 ಗಂಟೆ ಸುಮಾರಿಗೆ ಸ್ಟೇಟ ಬ್ಯಾಂಕ ಆಫ್ ಇಂಡಿಯಾ ಬ್ಯಾಂಕ ಸ್ಟೇಷನ್ ರೋಡ ಯಾದಗಿರ ಬ್ಯಾಂಕಿನಿಂದ 2,00,000=00 ರೂ. ಹಣ ಡ್ರಾ ಮಾಡಿಕೊಂಡು ನನ್ನ ಪ್ಯಾಷನ್ ಪ್ರೋ ಮೋ.ಸೈಕಲ್ದಲ್ಲಿ ಸ್ಟೇಟ ಬ್ಯಾಂಕ ಆಫ್ ಇಂಡಿಯಾ ಬ್ಯಾಂಕ ಪಾಸ್ ಬುಕ್ ಹಾಗೂ ಇನ್ನೊಂದು ಬ್ಯಾಂಕ ಆಫ್ ಬರೋಡ ಬ್ಯಾಂಕ ಪಾಸ್ ಬುಕ್ ಇದ್ದು ಶರಣಪ್ಪ ಮಾಸ್ಟರ ಹೆಡಗಿಮದ್ರಿ ಇವರ ಮನೆಯ ಮುಂದೆ ರೋಡಿನ ಮೇಲೆ ಹೋಗುತ್ತಿರುವಾಗ ಯಾರೋ ಇಬ್ಬರು ನನ್ನ ಬಾಜು ಒಂದು ಮೋ.ಸೈಕಲ್ ಮೇಲೆ ಬಂದರು ಮೋ.ಸೈಕಲ್ ಹಿಂದೆ ಕುಳಿತವನು ಕನ್ನಡ ಬಾಷೆಯಲ್ಲಿ ನನಗೆ, ನಿಮ್ಮ ಹಣ ಬಿದ್ದಿವೆ ನೋಡಿ ಅಂತಾ ಅಂದಾಗ ನಾನು ಮೋ.ಸೈಕಲ್ ನಿಲ್ಲಿಸಿ ನನ್ನ ಕಿಸೆಯಲ್ಲಿ ಕೈ ಹಾಕಿ ಪಸರ್ಿನಲ್ಲಿ ನೋಡಿದೆನು. ತದ ನಂತರ ಅವರಿಗೆ ನಾನು ಅವು ನನ್ನ ಹಣ ಅಲ್ಲ ಅಂದೆನು. ಆಗ ಅವರು ಅವು ನಿಮ್ಮ ಹಣನೇ ನಾವು ನಿಮ್ಮ ಪ್ಯಾಂಟಿನ ಕಿಸೆಯಿಂದ ಬಿದ್ದಿದ್ದು ನೋಡಿದ್ದೆವೆ ಅಂತಾ ಅಂದಾಗ ನಾನು ಮೋ.ಸೈಕಲ್ದಿಂದ ಕೆಳಗೆ ಇಳಿದು ಹಣ ಬಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ 100-00 ರೂ  ನಾಲ್ಕು ನೋಟುಗಳು ಬಿದ್ದಿದ್ದು ಅವುಗಳನ್ನು ತೆಗೆದುಕೊಂಡೆನು. ಆಗ ಅವರಿಬ್ಬರು ಕಾಣಿಸಲಿಲ್ಲಾ. ತಮ್ಮ ಮೋ.ಸೈಕಲ್ ಮೇಲೆ ಹೋಗಿದ್ದರು. ನಂತರ ನಾನು ಸ್ವಲ್ಪ ಮುಂದೆ ಇರುವ ನಮ್ಮ ಮನೆಯ ಮುಂದೆ ಹೋಗಿ ಮೋ.ಸೈಕಲ್ ನಿಲ್ಲಿಸಿ ಹಣವನ್ನು ಮನೆಯಲ್ಲಿಟ್ಟು ಬರೋಡ ಬ್ಯಾಂಕಗೆ ಹೋಗಬೇಕೆಂದು ಟ್ಯಾಂಕ ಕವರಿನಲ್ಲಿ ಕೈ ಹಾಕಿದಾಗ ನನ್ನ ಹಣ ಮತ್ತು ಎರಡು ಪಾಸ ಬುಕಗಳು ಕಾಣಿಸಲಿಲ್ಲಾ. ಮನೆಯಲ್ಲಿ ಈ ವಿಷಯ ತಿಳಿಸಿ, ನಾವು ಮರಳಿ ನಾಲ್ಕುನೂರು ರೂಪಾಯಿ ಹಣ ಬಿದ್ದ ಸ್ಥಳಕ್ಕೆ ಬಂದು ನೋಡಲಾಗಿ ಅವರು ಕಾಣಿಸಲಿಲ್ಲಾ. ಮೋ.ಸೈಕಲ್ ಮೇಲೆ ಇಬ್ಬರು ಬಂದವರೆ ನನ್ನ ಕಿಸೆಯಿಂದ ಹಣ ಬಿದ್ದಿವೆ ಅಂತಾ ತಿಳಿಸಿ ನನ್ನ ಗಮನ ಬೇರೆ ಕಡೆ ಸೆಳೆಯಿಸಿ, ನನ್ನ ಹಣ ಅಲ್ಲ ಅಂದರೂ ಕೂಡಾ ನಿಮ್ಮವೇ ಹಣ ಬಿದ್ದಿರುತ್ತವೆ ಎಂದು ಹೇಳಿದಾಗ ನಾನು ರೋಡಿನ ಮೇಲೆ ಬಿದ್ದ ಹಣವನ್ನು ತೆಗೆದುಕೊಳ್ಳಲು ಹೋದಾಗ ಅವರು ನನ್ನ ಮೋ.ಸೈಕಲದಿಂದ 2,00,000=00 ರೂ ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಇಬ್ಬರೂ ಪ್ಯಾಂಟ ಶರ್ಟ ಧರಿಸಿದ್ದರು. ಮೋ.ಸೈಕಲ್ ಯಾವ ಕಂಪನಿಯದ್ದು ಅಂತಾ ಗೋತ್ತಾಗಿರವುದಿಲ್ಲಾ. ಅವರು ಅಪರಿಚಿತ ವ್ಯಕ್ತಿಗಳಿದ್ದು 30 ರಿಂದ 35 ವರ್ಷ ವಯಸ್ಸಿನೊಳಗಿನವರಿರುತ್ತಾರೆ. ಅವರನ್ನು ಮುಂದೆ ನೋಡಿದಲ್ಲಿ ಗುತರ್ಿಸುತ್ತೇನೆ.   ಸದರಿ ಘಟನೆ ಇಂದು ಮದ್ಯಾಹ್ನ 1-10 ಪಿಎಂ ಸುಮಾರಿಗೆ  ಜರುಗಿರುತ್ತದೆ.  ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.230/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 277/2017 ಕಲಂ: 457, 380 ಐಪಿಸಿ;-ದಿನಾಂಕ 19.11.2017 ರಂದು ರಾತ್ರಿ 1-00 ಗಂಟೆಯಿಂದ 04-00 ಗಂಟೆಯ ನಡುವಿನ ಅವಧಿಯಲ್ಲಿ ಹೊಸಳ್ಳಿ(ಕೆ) ಗ್ರಾಮದಲ್ಲಿರುವ ಏರ್ಟೇಲ್ ಟಾವರ್ ಇಂಡಸ್ ನಂ: 1281325 ಐಡಿ ನಂ: ಏಓಊಗಖ-1 ನೇದ್ದರಲ್ಲಿಯ 600 ಂ , -48 ತಟಣ ನ 24 ಬ್ಯಾಟರಿ ಶೇಲ್ಗಳ ಅ.ಕಿ-24,000/-ರೂ ಇರುತ್ತದೆ. ಯಾರೋ ಕಳ್ಳರು ದಿನಾಂಕ ದಿನಾಂಕ 18-19.11.2017 ರ ರಾತ್ರಿ 0100 ಗಂಟೆಯಿಂದ 0400 ಗಂಟೆಯ ನಡುವಿನ ಅವಧಿಯಲ್ಲಿ ಕಳುವಾಗಿದ್ದು ಇರುತ್ತದೆ. ಕಳುವಾದ ಮಾಲು ಕಂಪನಿಯ ಸಿಬ್ಬಂದಿಯವರಾದ ಶರಣು ಹುಗ್ಗಿ ಫೀಲ್ಡ್ ಸಪೋಟ್ ಇಂಜಿನಿಯರ್ ಮತ್ತು ಅಜೀತ್ಕುಮಾರ.ಜಿ. ತಾಂತ್ರಿಕ ನಿವರ್ಾಹಕರು ನೋಡಿದರೆ ಗುರುತಿಸುತ್ತಾರೆ. ಕಳುವಾದ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ 24 ಬ್ಯಾಟರಿ ಶೇಲ್ಗಳನ್ನು ಪತ್ತೆ ಮಾಡಿ ಕೈಕೊಂಡಲು ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಳ 277/2017 ಕಲಂ: 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 498(ಎ), 307 ಸಂಗಡ 34 ಐಪಿಸಿ ಮತ್ತು 302 ಐ ಪಿ ಸಿ ಅಳವಡಿಸಿದೆ.;- ದಿನಾಂಕ-17-11-2017 ರಂದು ರಾಯಚೂರ ರೀಮ್ಸ ಆಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾಗಿದ್ದು ಸದರಿ ಎಮ್.ಎಲ್.ಸಿ ಕುರಿತು ಆಸ್ಪತ್ರೆಗೆ ಭೇಟಿ ನಿಡಿ ನೊಂದ ಅನಿತಾಳು ಮಾತನಾಡ ಸ್ಥತಿಯಲ್ಲಿ ಇಲ್ಲದಿರುವದರಿಂದ ಆಕೆಯ ತಾಯಿಯಾದ ಹುಲಿಮ್ಮ ರವರಿಗೆ ಹೇಳಿಕೆ ಕೊಡಲು ತಿಳಿಸಿದ್ದು ಆಕೆಯ ನನ್ನ ಮಕ್ಕಳಿಗೆ ವಿಚಾರ ಮಾಡಿಕೊಂಡು ಬಂದು ಹೇಳಿಕೆ ನೀಡುತ್ತೇನೆ ಅಂತಾ ಹೇಳಿ ಹೇಳಿಕೆ ನೀಡಲು ನಿರಾಕರಿಸಿದ್ದು. ದಿನಾಂಕ-19-11-2017 ರಂದು ರಾತ್ರಿ 08-30 ಗಂಟೆಗೆ ಶ್ರಿಮತಿ ಹುಲಿಗೇಮ್ಮ ಗಂಡ ಮಾನಶಪ್ಪ ವ|| 55 ವರ್ಷ ಜಾ|| ಮಾದಿಗ ಉ|| ಮೆನೆಕೆಲಸ ಸಾ|| ಜಾಲಹಳ್ಳಿ ತಾ|| ದೇವಗುಗರ್ಾ ಜಿ|| ರಾಯಚೂರ ಇವರು ಠಾಣೆಗೆ ಹಾಜರಾಗಿ ದಿನಾಂಕ-16-11-2017 ರಂದು ರಾತ್ರಿ 7-30 ಗಂಟೆಗೆ ಅನಿತಾಳ ಗಂಡ ಮರಲಿಂಗಪ್ಪ, ಭಾವ ಕಾಶಪ್ಪ, ಮೈದುನ ದುರಗಪ್ಪ, ಅತ್ತೆ ಮರೇಮ್ಮ ಇವರು ಎಲ್ಲರು ಸೇರಿ ನನ್ನ ಮಗಳಿಗೆ ವರದಕ್ಷಿಣ ಕಿರುಕುಳ ನೀಡಿ ಆಕೆಯನ್ನು ಸಾಯಿಸುವ ಸಲುವಾಗಿ ವಿಷ ಕುಡಿಸಿರುತ್ತಾರೆ ತಾವು ಅವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಿ ಅಂತಾ ಕೊಟ್ಟ ಪಿಯರ್ಾಧಿ ಸಾರಂಶದ ಮೇಲಿಂದ ದಿನಾಂಕ:19-11-2017 ರಂದು ರಾತ್ರಿ 08-30 ಗಂಟೆಗೆ ಸೈದಾಪೂರ ಠಾಣೆಯ ಗುನ್ನೆ ನಂ.214/2017 ಕಲಂ.498(ಎ),307 ಸಂಗಡ 34 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಈಗಾಗಲೆ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿ ತನಿಖೆ ಕೈಕೊಂಡಿದ್ದು.
      ಪ್ರಕರಣದ ತನಿಖೆ ಜಾರಿಯಲ್ಲಿದ್ದಂತೆ ಇಂದು ದಿನಾಂಕ-20-11-2017 ರಂದು ಬೆಳಿಗ್ಗೆ 07-20 ಗಂಟೆಗೆ ಸದರಿ ಕೇಸಿನಲ್ಲಿ ನೋದವಳಾದ ಅನಿತಾ ಗಂಡ ಮರಲಿಂಗಪ್ಪ  ವ|| 30 ವರ್ಷ ಸಾ|| ಬಳಿಚಕ್ರ ತಾ|| ಜಿ|| ಯಾದಗಿರಿ ಈಕೆಯು ರಾಯಚೂರ ರೀಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ಈ ಮೇಲ್ ಮೂಲಕ ಡೇತ್ ಎಮ್.ಎಲ್.ಸಿ ವಸೂಲಾಗಿದ್ದು ಇರುತ್ತದೆ. ಸದರಿ ಡೆತ್ ಎಮ್.ಎಲ್.ಸಿಆಧಾರದ ಮೇಲಿಂದ ಸದರಿ ಕೇಸಿನಲ್ಲಿ ಕಲಂ.302 ಐಪಿಸಿಯನ್ನು ಅಳವಡಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಅದೆ. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 449/2017 ಕಲಂ 279, 337, 338, 304[ಎ] ಐ.ಪಿ.ಸಿ ಮತ್ತು 187 ಐ.ಎಂ.ವಿ ಯಾಕ್ಟ;- ದಿನಾಂಕ:20/11/2017 ರಂದು 6.5 ಎ.ಎಂ.ಕ್ಕೆ ಶ್ರೀಮತಿ ಸಾಧಿಖಾ ಗಂಡ ಮಹಿಬೂಬ ಪಟೆಲ್ ಬಿಳವಾರ ಸಾ|| ಇಜೇರಿ ತಾ|| ಜೇವಗರ್ಿ ಹಾ||ವ|| ಖವಾಸಪೂರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯ ಸಾರಾಂಶವೇನೆಂದರೆ ನಿನ್ನೆ ದಿನಾಂಕ: 19/11/2017 ರಂದು ಸಾಯಂಕಾಲ 06:00 ಪಿಎಂ ಸುಮಾರಿಗೆ ನನ್ನ ಗಂಡ ದೇವದುಗರ್ಾಕ್ಕೆ ಕೆಲಸವಿದೆ ಅಂತ ಅವರ ಗೆಳೆಯರಾದ ಅಬ್ದುಲ್ ಮಕ್ಸೂದ್ ಖಾಜಿ ಮತ್ತು ಅಬ್ದುಲ್ ವಾಹಿದ್ ಖುರೇಷಿ ಇವರುಗಳು ಜೊತೆಯಲ್ಲಿ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದನು. ಒಂದು ಕಾರಿನಲ್ಲಿ 3 ಜನರು ಕೂಡಿ ದೇವದುರ್ಗಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಶಹಾಪುರಕ್ಕೆ ಇಂದು ದಿನಾಂಕ: 20/11/2017 ರಂದು 1.30 ಎ.ಎಂ.ಕ್ಕೆ ಬಂದು ಶಹಾಪುರ ಹಳೆ ಬಸ್ ನಿಲ್ದಾಣದ ಹತ್ತಿರ ಬಂದು ಕಾರನ್ನು ಪಾರ್ಕ ಮಾಡಿ ಅಬ್ದುಲ್ ವಾಹಿದ ಇವನು ಮೋಟರ್ ಸೈಕಲ್ ನಂ. ಕೆಎ-32 ಯು-173 ನೇದ್ದರಲ್ಲಿ, ಮಹಿಬೂಬ ಪಟೇಲ್ ಈತನು ಮೋಟರ ಸೈಕಲ್ನ ಚೆಸ್ಸಿ ನಂ. 01ಎ21ಅ32531 ನಡೆಸುತ್ತಿದ್ದು, ಹಾಗೂ ಅಬ್ದುಲ್ ಮಕ್ಸೂದ್ ತಂದೆ ಅಬ್ದುಲ್ ಖುರದುಸ್ ಖಾಜಿ ಈತನು ಮೋಟರ ಸೈಕಲ್ ನಂ. ಕೆಎ-25 ಎಸ್-5836 ನೇದ್ದನ್ನು ನಡೆಸಿಕೊಂಡು ತಮ್ಮ ತಮ್ಮ ಮನೆಗೆ ಹೋಗಲು ಶಹಾಪುರ ಬಸವೇಶ್ವರ ಸರ್ಕಲ ಹತ್ತಿರ ಹೊರಟಿದ್ದಾಗ ಹಿಂದಿನಿಂದ ಒಂದು ಭಾರತ್ ಬೆಂಜ್ ಟಿಪ್ಪರ ನಂ. ಕೆಎ-36 ಬಿ-4890 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಳೆ ಬಸ್ ನಿಲ್ದಾಣದ ಕಡೆಯಿಂದ ಹೋಗುತ್ತಾ ಮುಂದೆ ಹೊರಟಿದ್ದ ಮೇಲ್ಕಾಣಿಸಿದ 3 ಜನರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಿಬೂಬ ಈತನಿಗೆ ಭಾರೀ ಗಾಯಪೆಟ್ಟು ಆಗಿದ್ದು, ಇನ್ನುಳಿದ ಇಬ್ಬರಿಗೆ ಸಾಧಾ ಸ್ವರೂಪದ ಗಾಯಗಳಾಗಿದ್ದು, ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಿಗೆ ಹೋಗುತ್ತಿದ್ದಾಗ ಮಹಿಬೂಬ ಈತನು ಫರತಾಬಾದ ಹತ್ತಿರ 4,00 ಎಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ.
     ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಭಾರತ ಬೆಂಜ್ ಟಿಪ್ಪರ ನಂ. ಕೆಎ-36 ಬಿ-4890 ನೇದ್ದರ ಚಾಲಕ ಅಂಬ್ರೇಶ ತಂ/ ಚಂದ್ರಶೇಖರ ಪೂಜಾರಿ ಸಾ|| ಅರೆಶಂಕರ್ ಇವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಜರ್ಿ ಸಾರಾಂದ ಮೇಲಿಂದ ಠಾಣೆ ಗುನ್ನೆ ನಂ.449/2017 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 450/2017. ಕಲಂ. 143.147.324.354.448.504.506.ಸಂ.149 ಐ.ಪಿ.ಸಿ.;- ದಿನಾಂಕ: 20/11/2017 ರಂದು 20-45 ಪಿ.ಎಮ್ ಕ್ಕೆ ಶ್ರೀಮತಿ ಪುಷ್ಪಾವತಿ ಗಂಡ ಪ್ರಭಾಕರ ಪೋಲಂಪಲ್ಲಿ ಸಾ|| ಬಾಪೂಗೌಡ ನಗರ ಶಹಾಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ. ಇಂದು ದಿನಾಂಕ 19/11/2017 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಲಕ್ಷ್ಮಣ್ಣ ತಂದೆ ಶಿವಣ್ಣ ಸಿದ್ರಾ ಸಾ|| ಸಗರ ಸಂಗಡ ಇನ್ನು 9 ಜನರು ಎಲ್ಲರು ಕೂಡಿ ಬಂದು ಪಿಯರ್ಾದಿಯ ಮನಗೆ ನುಗ್ಗಿ ಬೋಸಡಿ ರಂಡಿ ಹಗ್ಗದ ರಂಡಿ ಅವಾಚ್ಚಶಬ್ದಗಳಿಂದ ಬೈದು ಅಸಯ್ಯರೀತಿಯಿಂದ ಕೈಹಿಡಿದು ಎಳೆದಾಡಿ ಸೀರೆ ಜಗ್ಗಾಡಿ ಮನೆಯಿಂದ ಹೋರಹಾಕಿದರು ಕಬ್ಬಿಣದ ಕಿಲಿ ಕೈಯಿಂದ ಪಿಯರ್ಾದಿಗೆ ಹೋಡೆದು ಬಲವಾದ ಪೆಟ್ಟುಬಿದ್ದ ಕಾರಣ ತಲೆಯಿಂದ ರಕ್ತಗಾಯವಾಗಿದ್ದು ಆಗ ಪಿಯರ್ಾದಿಯ ಹಿರಿಯ ಸೋಸೆ ಮತ್ತು ಪಕ್ಕದ ಮನೆಯವರು ಬಂದು ಜಗಳ ಬಿಡಿಸಿದರು. ಅವರೆಲ್ಲು ಸಾಯಿಸುತ್ತೆವೆ ಅಂತ ಜೀವದ ಭಯ ಹಾಕಿದರು ಅಂತ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ 450/2017 ಕಲಂ. 143.147.324.354.448.504.506.ಸಂ.149 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂ: 504,354,323,506 ಸಂ 34 ಐಪಿಸಿ ;- ದಿನಾಂಕ: 20/11/2017 ರಂದು 6-30 ಪಿಎಮ್ ಕ್ಕೆ ಶ್ರೀಮತಿ ರೋಶನಬೀ ಗಂಡ ಮಹ್ಮದ ಅಲಿ ಸಿಲಾರದವರ, ವ:50, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ಗುಲಸರಂ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಮ್ಮ ಮನೆ ಬಾಜು ಇರುವ ನನ್ನ ಗಂಡನ ಅಣ್ಣತಮ್ಮಕಿಯವರಾದ ಚಾಂದಪಾಷಾ ತಂದೆ ಖಾಜಾಪೀರ ಸಿಲಾರದವರ ಮತ್ತು ಇತರರು ವಿನಾಕಾರಣ ನಮ್ಮ ದೊಡ್ಡಿಯಲ್ಲಿ ದನಗಳನ್ನು ಬಿಡುವುದು ಮಾಡುತ್ತಿರುತ್ತಾರೆ. ನಾವು ದನಗಳನ್ನು ಕಟ್ಟಿಕೊಳ್ಳಿರಿ ಎಂದು ಹೇಳಿದರೆ ನಾವು ಕಟ್ಟಲ್ಲ ನೋಡು ಏನು ಮಾಡಿಕೊತ್ತಿ, ಮಾಡಿಕೊ ಹೋಗು ಎಂದು ಜಗಳಕ್ಕೆ ಬರುವುದು, ನಮಗೆ ಸತಾಯಿಸುವುದು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ: 18/11/2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಸದರಿ ಚಾಂದಪಾಷಾ ಇವರ ದನಗಳು ನಮ್ಮ ದೊಡ್ಡಿಯಲ್ಲಿ ಬಂದಿದ್ದಕ್ಕೆ ನಾನು ದನಗಳನ್ನು ಅವರ ಮನೆಕಡೆ ಓಡಿಸಿ, ನಮ್ಮ ಮನೆ ಅಂಗಳದಲ್ಲಿ ನಿಂತುಕೊಂಡಾಗ 1) ಚಾಂದಪಾಷಾ ತಂದೆ ಖಾಜಾಪೀರ ಸಿಲಾರದವರ, 2) ನಾಜಬೀನ ತಂದೆ ಖಾಜಾಪೀರ ಸಿಲಾರದವರ, 3) ಖಾಜಾಬೀ ಗಂಡ ಖಾಜಾಪೀರ ಸೀಲಾರದವರ ಎಲ್ಲರೂ ಸಾ:ಗುಲಸರಂ ಇವರೆಲ್ಲರೂ ಸೇರಿ ಬಂದವರೆ ನನಗೆ ಯೇ ಛೀನಾಲಿ ಹಮಾರೆ ಗೋರುಂಕೊ ಕ್ಯೂಂ ಮಾರರಹಿ ಹೈ ರಾಂಡ ಎಂದು ಜಗಳ ತೆಗೆದವರೆ ಚಾಂದಪಾಷಾನು ಬಂದು ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಎ ರಂಡಿ ಕಾ ಬಹುತ ಹೋಗಯ್ಯಾ ಛೋಡೊ ನಕೊ ಇಸಕೊ ಎಂದು ಹೇಳಿದಾಗ ನಾಜಬಿನ ಮತ್ತು ಖಾಜಾಬಿ ಇಬ್ಬರೂ ಬಂದಿದ್ದು, ಖಾಜಾಬೀ ನನ್ನ ತೆಲೆ ಮೇಲಿನ ಕೂದಲು ಹಿಡಿದಾಗ ನಾಜಬಿನ ಕೈಯಿಂದ ಬೆನ್ನ ಮೇಲೆ ಹೊಡೆದಳು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಸಲಿಂ ತಂದೆ ರಾಜಾಸಾಬ ಸೀಲಾರದವರ, ಮಹಿಬೂಬಿ ಗಂಡ ಬಾಷಾ ಉಳ್ಳೆಸೂಗೂರದವರ ಇವರು ಬಂದು ಬಿಡಿಸಿಕೊಂಡರು. ಆಗ ಹೊಡೆಯುವುದು ಬಿಟ್ಟ ಅವರು ಆಜ್ ಬಚಗೈ ಛಿನಾಲಿ ಔರ ಎಕ ಬಾರ ಇದರ ಆಯಿತೋ ತೆರೆಕೋ ಖಲಾಸ ಕರತೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನನ್ನ ಗಂಡನು ಯಾದಗಿರಿಗೆ ಹೋಗಿದ್ದು, ಅವರು ಬಂದ ನಂತರ ನಡೆದ ಘಟನೆ ಬಗ್ಗೆ ಅವರಿಗೆ ತಿಳಿಸಿ, ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಅಂತಹ ಪೆಟ್ಟುಗಳಾಗದ ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ. ಆದ್ದರಿಂದ ವಿನಾಕಾರಣ ನನ್ನ ಸೀರೆ ಸೆರಗು ಹಿಡಿದು ಜಗ್ಗಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿರಿಸಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 167/2017 ಕಲಂ: 504,354,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 326/2017 ಕಲಂ: 143,147,148,323,324,336,427, 307,308,504,506 ಸಂ.149 ಐಪಿಸಿ ಮತ್ತು ಕಲಂ. 3(1)(ಡಿ),3(1)() ಖಅ ಖಖಿ ಕಂ ಂಅಖಿ 1989;- ದಿನಾಂಕ : 19-11-2017 ರಂದು 4-40 ಪಿ.ಎಂ.ಕ್ಕೆ ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರಾದ ಶ್ರೀ ಶಂಕರ್ ನಾಯಕ ತಂದೆ ಕೊಂಡಪ್ಪ ನಾಯಕ ಸಾ: ಸುರಪುರ ಇವರು ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ 17.11.2017 ರಂದು ಸಮಯ ಸುಮಾರು 10:30 ಗಂಟೆಗೆ ನಾನು ನನ್ನ ಸ್ನೇಹಿತನ ಇನ್ನವೋ ವಾಹನ( ನಂಬರ್.03 ಎಮ್.ಡಬ್ಲೂ.2727) ವಾಹನದಲ್ಲಿ ಸ್ಥಳಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕರವರ ಮನೆ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಇನ್ವೋ ಕಾರಿಗೆ ಹಿಂದಿನಿಂದ ಏಕಾ ಏಕಿ ಕಲ್ಲುಗಳು ಹೋಡೆದರು.ಆಗ ನಾವು ವಾಹನಕ್ಕೆ ಆದ ಶಬ್ದವನ್ನು ಕೇಳಿ ಅಲ್ಲೇ ವಾಹನ ನಿಲ್ಲಿಸಿದೇವು. ಕೆಳಗಡೆ ಇಳಿದು ನೋಡಿದಾಗ ಇನ್ನವೋ ಕಾರಿನ ಹಿಂದಿನ ಗಾಜು ಪುಡಿ ಪುಡಿಯಾಗಿತ್ತು. ಆಗ ಸ್ವಲ್ಪ ನಾನು ಹಿಂದಕ್ಕೆ ತಿರುಗಿ ನೋಡಿದ ತಕ್ಷಣವೇ ಅಲ್ಲಿ ಸಮೀಪದಲ್ಲಿಯೇ 1) ರಾಜಾ ರೂಪ್ ಕುಮಾರ್ ನಾಯಕ ತಂದೆ ರಂಗಪ್ಪ ನಾಯಕ ಜಾತಿ:ಬೇಡರ ವಯಸ್ಸು:36 ವರ್ಷದವನಿದ್ದು, ವಸಂತ ಮೊಹಲ್ಲಾ ಸುರಪುರ ಇತನು ನನ್ನ ನೋಡಿದ ತಕ್ಷಣವೇ ಕಲ್ಲು ಬಿಸಿದನು ಆ ಕಲ್ಲು ಜೋರಾಗಿ ಹೊಡೆದಿದ್ದರಿಂದ ನನ್ನ ಬಲಗೈಗೆ ಬಡಿಯಿತು ಆಗ ನನ್ನ ಬಲಗೈ ಮುರಿದಿರುತ್ತದೆ. ಆಗ ನಾನು ನನಗೇಕೆ ಹೊಡೆಯುತ್ತಿದ್ದಿರಾ ಎಂದು ಕೇಳಿದಾಗ ಶಂಕ್ಯಾ ನಿಂದು ಬಾಳಾಗ್ಯಾದಲೇ ಸುಳಿ ಮಗನೆ ಈ ರಾತ್ರಿ ನಿನ್ನ ಕೊಲೆ ಮಾಡಿ ಬಿಡುತ್ತೆವೆ ಎಂದು. 2) ರಾಜಾ ಕುಮಾರ ನಾಯಕ ತಂದೆ ಮೌನೇಶ ನಾಯಕ ಜಾತಿ: ಬೇಡರ ವಯಾಸ್ಸು 30 ವಸಂತ ಮಹಲ್ಲ ಸುರಪುರ ಈತನು ತನ್ನ ಕೈಯಲ್ಲಿದ್ದ ಮಚ್ಚನ್ನು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆಗೆ ಸಮಾನವಾಗಿ ಬಿಸಿದಾಗ ಆಗ ನಾನು ಸತ್ತೆನೆಪ್ಪೋ ಅಂತಾ ನೆಲಕ್ಕೆ ಬಗ್ಗಿದೆನು ಇಲ್ಲದಿದ್ದರೆ ಆ ಮಚ್ಚಿನ ಎಟಿನಿಂದ ನನ್ನ ರುಂಡ ಕತ್ತರಿಸಿ ಜೀವ ಹೋಗುವ ಅಪಾಯವಿತ್ತು. ಆಗ ನಾನು ಕೊಲೆ ಆಗದನ್ನು ತಪ್ಪಿಸಿಕೊಂಡು ಕೆಳಗೆ ಬಿದ್ದೆನು. ಆಗ 3) ರಾಕೇಶ ತಂದೆ ನಾರಾಯಣ ಸುಣ್ಣದಮನಿ ಜಾ:ಬೇಡರ ವಯಸ್ಸು:22 ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿರುತ್ತಾನೆ. 4) ಶರಣಪ್ಪ ತಂದೆ ಗೋವಿಂದಪ್ಪ ಸಾ:ದೇವರಗೋನಾಲ ಜಾತಿ:ಬೇಡರ ವಯಸ್ಸು 28 5) ರಾಜಾ ಸುಶಾಂತ ನಾಯಕ ತಂದೆ ರಾಜಾ ಶ್ರೀರಾಮ ನಾಯಕ ಜಾತಿ:ಬೇಡರ ವಯಸ್ಸು 22 ವಸಂತ ಮಹಲ ಸುರಪುರ 6) ಶಿವಕುಮಾರ ತಂದೆ ಬೀಮರಾಯ ಜಾತಿ:ಲಿಂಗಾಯತ ಹಳ್ಳದ ನಗರ ಸಭೆ ಸದಸ್ಯರು ಸಾ:ಕಬಾಡಗೇರಾ ಸುರಪುರ ವಯಸ್ಸು:38 ಇತನು ನನ್ನ ಕುತ್ತಿಗೆ ಹುಸುಕಿ ಕೊಲೆ ಮಾಡಲು ಯತ್ನಿಸಿ ಈ ಬೇಡ ಸುಳೆ ಮಗನದು ಬಹಳ ಆಗ್ಯಾದ ಇವತ್ತ ರಾತ್ರಿ ಇವನದು ಜೀವ ತಗೆದು ಬಿಡಂ'' ಎಂದು ಹೇಳಿದನು ಆಗ ನಾನು ಒದ್ದಾಡಿ ಕುತ್ತಿಗೆಯನ್ನು ಬಿಡಿಸಿಕೊಂಡೆನು. 7) ಶರಣು ತಂದೆ ಮಾನಪ್ಪ ಕಲಬುರಗಿ ಜಾತಿ:ಬೇಡರ ವಯಸ್ಸು 23 ಸಾ:ಡೊಣ್ಣೇಗೇರಿ ಸುರಪುರ ಮತ್ತು 8) ಶಿವರಾಜ ಬೊಮ್ಮನಳ್ಳಿ ಶಾಸಕರ ಆಪ್ತ ಸಹಾಯಕರು ಸುರಪುರ ಜಾತಿ:ಬೇಡರ ವಯಸ್ಸು 40 ಹಾಗೂ 9) ಹಣಮಂತ್ರಾಯ ಮಕಾಶಿ ಶಾಸಕರ ಆಪ್ತ ಸಹಾಯಕರು ಸುರಪುರ ಜಾತಿ:ಬೇಡರ ವಯಸ್ಸು: 37 10) ಪವನ್ಕುಮಾರ ತಂದೆ ಬಿಜರ್ು ಗೋಪಾಲ ರಾಠಿ ಜಾತಿ: ಮಾರವಾಡಿ ವಯಸ್ಸು :25 ಶೇಟ್ಟಿ ಮೊಹಲ್ಲಾ ಸುರಪುರ 11) ಆನಂದ ಗಡಗಡೆ ತಂದೆ ಸುಭಾಸ ಗಡಗಡೆ ಜಾತಿ:ಜೈನ ವಯಸ್ಸು : 25 ಶೇಟ್ಟಿ ಮೊಹಲ್ಲಾ ಸುರಪುರ 12) ಲಕ್ಷ್ಮಣ ತಂದೆ ಗೋಪಣ್ಣ ದೇವರಬಾಯಿ ಹತ್ತಿರ ಸುರಪುರ ಜಾತಿ:ಬೇಡರ ವಯಸ್ಸು:27 13) ಉದಯಕುಮಾರ ತಂದೆ ನಿಂಗಪ್ಪ ದಿವಳಗುಡ್ಡಾ ಜಾತಿ: ಬೇಡರ ವಯಸ್ಸು: 30 ಸಾ:ದೇವರಗೋನಾಲ ಇವರೆಲ್ಲರೂ ಗುಂಪಾಗಿ ಬಂದು ಆನಂದ, ಪವನ್ಕುಮಾರ ಮತ್ತು ಲಕ್ಷ್ಮಣ ನನ್ನನ್ನು ಹಿಡಿದುಕೊಂಡರು ಆಗ ಶಿವರಾಜ ಬೊಮ್ಮನಹಳ್ಳಿ ಮತ್ತು ಹಣಮಂತ್ರಾಯ ಮಕಾಸಿ ಇವರು ತಮ್ಮ ಕೈಯಲಿದ್ದ ಕಲ್ಲುಗಳಿಂದ ನನ್ನ ದೇಹದ ತುಂಬೆಲ್ಲಾ ಜಜ್ಜಿ ಒಳಪೇಟ್ಟು ಮಾಡಿರುತ್ತಾರೆ. ಸದರಿ ಶಿವರಾಜ ಬೊಮ್ಮನಹಳ್ಳಿ ಮತ್ತು ಉದಯಕುಮಾರ ಇವರು ರೌಡಿ ಶಿಟರಗಳಾಗಿರುತ್ತಾರೆ.ಇವತ್ತು ಇವನನ್ನು ಬಿಡಬೇಡಿ ಇವನನ್ನು ಖಲಾಸ್ ಮಾಡಿಬಿಡೋಣ ಈ ಶಂಕ್ಯಾನ ಕೈ ಕಾಲು ಮುರಿದು ಬಿಡೋಣ ಎಂದು ರಾಜಾ ಸುಶಾಂತ ನಾಯಕ ಈತನು ತನ್ನ ಕೈಯಲ್ಲಿದ್ದ ಹಾಕಿ ಸ್ಟೀಕ್ನಿಂದ ದೇಹದ ಮತ್ತು ಕೈಕಾಲುಗಳಿಗೆ ಹೊಡೆದನು. ಆಗ ನಾನು ತಪ್ಪಿಸಿಕೊಂಡಾಗ ಕಲ್ಲಿನಿಂದ ಬಡೆದ ಕೈಗೆ ಬಡಿದು ಕೈ ಮತ್ತೆ ಪುನ:ಗಾಯವಾಗಿದೆ ಮತ್ತೆ ಎಲ್ಲರೂ ಸೇರಿಕೊಂಡು ನೆಲಕ್ಕೆ ಹಾಕಿ ಒದೆಯ ತೋಡಗಿದರು. ಆಗ ನಾನು ಜೋರಾಗಿ ಕಿರುಚಿಕೊಳ್ಳಲು ಆರಂಬಿಸಿದೆನು. ಆಗ ನನ್ನನ್ನು ಬಿಡಿಸಿಕೊಳ್ಳಲಿಕ್ಕೆ ಜಕ್ಕಪ್ಪ ತಂದೆ ಶ್ರೀರಾಮ ಕಟ್ಟಿಮನಿ ಬೋವಿಗಲ್ಲಿ ಸುರಪುರ ಮತ್ತು ರಾಜು ತಂದೆ ರಾಮಣ್ಣ ಶಹಾಪೂರಕರ ಬೋವಿಗಲ್ಲಿ ಸುರಪುರ ಇವರು ನನ್ನನ್ನು ಬಿಡಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಕೊಂಡಿರುತ್ತೆನೆ. ಅಂದು ರಾತ್ರಿ ಅವರು ಜಗಳ ಬಿಟ್ಟು ಹೋಗುವಾಗ  ಎಲೇ ಬೊಸಡಿ ಶಂಕರ್ಯಾ ಸುಳಿ ಮಗನೆ ಇವತ್ತು ನಿನ್ನ ತಾಯಿ ಹೊಟ್ಟಿ ತಣ್ಣಗಾದ ಉಳಿದುಕೊಂಡಿದಿ ಮುಂದೆ ಇಂದಲ್ಲಾ ನಾಳೆ ನಿನ್ನ ಜೀವ ನನ್ನ ಕೈಯಲ್ಲಿದೆ'' ಎಂದು ಜೀವ ಬೇದರಿಕೆ ಹಾಕಿದರು ಅಂದು ನಾನು ಕೃಷ್ಣಾ ತಂದೆ ಸಿದ್ರಾಮ ಪಾಟೀಲ ಉದ್ದಾರ ಓಣಿ ಸುರಪುರ ಈತನ ಮೇಲೆ ಹಲ್ಲೆ ಮಾಡಿದ ಪ್ರಯುಕ್ತ ಸುರಪುರ ಠಾಣೆಗೆ ಅವನ ಪರ ವಹಿಸಿಕೊಂಡು ಆರೋಪಿತರ ವಿರುದ್ದ ದೂರು ಸಲ್ಲಿಸಿದ ಕಾರಣಕ್ಕಾಗಿ ಅದೇ ದ್ವೇಷದಿಂದ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ. ಸದರಿ ಆರೋಪಿಗಳಿಂದ ನನಗೆ ಜೀವ ಬೇದರಿಕೆ ಇರುತ್ತದೆ. ಆದ್ದರಿಂದ ತಾವುಗಳು ಮೇಲಿನ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 327/2017 ಕಲಂಃ 498(ಎ) 323.504.506 ಐಪಿಸಿ;- ದಿನಾಂಕ:20/11/2017 ರಂದು ಮದ್ಯಾಹ್ನ 1-30 ಪಿ,ಎಂ ಕ್ಕೆ ಠಾಣೆಗೆ ಶ್ರೀಮತಿಲಕ್ಷ್ಮೀ ಗಂಡ ವಿಶ್ವನಾಥರಡ್ಡಿ ಕೋಳಿಹಾಳ ವಯ|| 40 ವರ್ಷ ಉ|| ಮನೆಕೆಲಸ ಜಾ|| ಲಿಂಗಾಯತ ಸಾ|| ಜಾಲಿಬೆಂಚಿ ಹಾ|| ವ|| ಏವೂರ ತಾ|| ಸುರಪೂರ ರವರು ಬಂದು ಒಂದು ಲಿಖಿತ ಅಜರ್ಿ ಸಲ್ಲಿಸಿದ್ದೆನೆಂದರೆ ನಮ್ಮ ತಂದೆ-ತಾಯಿಗೆ ನಾವು ಒಟ್ಟು 5 ಜನ ಮಕ್ಕಳಿದ್ದು ನಾನು ಮೂರನೆಯ ಮಗಳಿದ್ದು ನನಗೆ ಈಗ ಸುಮಾರು 27 ವರ್ಷಗಳ ಹಿಂದೆ ಸುರಪೂರ ತಾಲೂಕಿನ ವಿಶ್ವನಾಥರಡ್ಡಿ ತಂದೆ ತಮ್ಮಣ್ಣ ಕೋಳಿಹಾಳ ಇವರೊಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿ ಕೊಟ್ಟಿರುತ್ತಾರೆ.  ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿ ಸುಮಾರು 4, 5 ವರ್ಷಗಳ ವರೆಗೆ ನನ್ನ ಗಂಡ ಮತ್ತು ಅತ್ತೆ ಕುಂಟುಂಬ ಸಮೇತವಾಗಿ ಒಂದೆ ಮನೆಯಲ್ಲಿ ವಾಸವಾಗಿದ್ದು. ನಾನು ನನ್ನ ಗಂಡ ವಿಶ್ವನಾಥರಡ್ಡಿ ಇಬ್ಬರೂ ಅನ್ಯೋನ್ಯವಾಗಿದ್ದೆವು. ನನಗೆ ಒಬ್ಬಳು  ಬಾಗ್ಯ ಅಂತ ಮಗಳಿದ್ದು ಅವಳು 10 ನೇ ತರಗತಿಯಲ್ಲಿ ಓದುತ್ತಿರುತ್ತಾಳೆ ನನ್ನ ಗಂಡ ನನಗೆ ನೀನು ನೋಡಲು ಚೆನ್ನಾಗಿಲ್ಲ ನಿನಗೆ ಮನೆ ಕೆಲಸ ಬರುವದಿಲ್ಲ ಅಂತ ಅವಾಚ್ಯವಾಗಿ ಬೈಯ್ದು ನೀನು ಇಲ್ಲಿ ಇರಬ್ಯಾಡ ನಿನ್ನ ತವರು ಮನೆಗೆ ಹೋಗು ಅಂತ ಸುಮರು ವರ್ಷಗಳಿಂದ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತ ಕೈಯಿಂದ ಹೋಡೆ ಬಡೆ ಮಾಡಿ ನನಗೆ ಆಗಾಗ ತೊಂದರೆ ಕೋಡುತ್ತಿದ್ದರು, ಈ ವಿಷಯವನ್ನು ನಾನು ನನ್ನ ತವರು ಮೆನೆಯವರಿಗೆ ತಿಳಿಸಿದಾಗ ನಮ್ಮ ತಂದೆ-ತಾಯಿ ಅಣ್ಣತಮ್ಮಂದಿರು ನಮ್ಮೂರಿಗೆ ಬಂದು ನನಗೆ ಮತ್ತು ನನ್ನ ಗಂಡನಿಗೆ ಬುದ್ದಿ ಮಾತು ಹೇಳಿ ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಸಂಸಾರ ಮಾಡುವಂತೆ ತಿಳುವಳಿಕೆ ಹೇಳಿ ಹೋದರು. ನನ್ನ ಗಂಡ ಮುಂದೆಯಾದರೂ ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡಬಹುದೆಂದು ತಿಳಿದು ಸಹಿಸಿಕೊಂಡು ಬಂದಿದ್ದೆನು. ಆದರೂ ಆತನು ಸರಿ ಹೋಗದೆ ಪುನಃ ನನಗೆ ನಿನಗೆ ಮನೆ ಕೆಲಸ ಬರುವದಿಲ್ಲ ನೀನು ನೋಡಲು ಚೆನ್ನಾಗಿಲ್ಲ್ಲ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ನೀನು ಮನೆ ಬಿಟ್ಟು ಹೋಗು ಅಂತ ವಿಪರಿತ ತೊಂದರೆ ಕೊಡುತ್ತಿದ್ದರಿಂದ ನಾನು ಕಿರುಕುಳ ತಾಳಲಾರದೆ ಈಗ 6 ತಿಂಗಳ ಹಿಂದೆ ನನ್ನ ತವರು ಮನೆ ಎವೂರಕ್ಕೆ ಬಂದು ನಮ್ಮ ತಂದೆ-ತಾಯಿಯವರ ಜೋತೆಯಲ್ಲಿ ಇದ್ದೆನು. ಹೀಗಿದ್ದು ದಿನಾಂಕ 19/11/2017 ರಂದು ನಮ್ಮ ಹೋಲದಲ್ಲಿ ಹಾಕಿದ ಭತ್ತದ ಬೇಳೆ ಕಟಾವಿಗೆ ಬಂದ ಕಾರಣ ನಮ್ಮ ಹೋಲಕ್ಕೆ ಹೋಗಿ ಭತ್ತ ನೋಡಿಕೊಂಡು ಬಂದರಾಯಿತು ಅಂತ ಜಾಲಿಬೆಂಚಿ ಗ್ರಾಮಕ್ಕೆ ಹೋಗಿ ನಂತರ ಹೋಲಕ್ಕೆ ಹೋಗಿ ಬೇಳೆ ನೋಡಿಕೊಂಡು ಸಾಯಂಕಾಲ 6.00 ಪಿ.ಎಂ ಕ್ಕೆ ನಾನು ನಮ್ಮ ಜಾಲಿಬೆಂಚಿಯ ಮನೆಗೆ ಹೋಗಿ ನಮ್ಮ ಅತ್ತೆಯ ಜೋತೆ ಮಾತನಾಡುತ್ತಾ ಕುಳಿತಾಗ ಅದೆ ಸಮಯಕ್ಕೆ  ನನ್ನ ಗಂಡ ವಿಶ್ವನಾಥರಡ್ಡಿ ಈತನು ಅಲ್ಲಿಗೆ ಬಂದು ಏ ಸೂಳೆ ಮಗಳೆ ಯಾಕ ಬಂದಿದಿ ಮತ್ತ ನಮ್ಮ ಮನೆಗೆ ಬರಬ್ಯಾಡ ಅಂತ ಹೇಳಿಲ್ಲೆನು ನಿನಗೆ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದನು. ಆಗ ನಾನು ಮಗಳ ಸ್ಕೂಲ ಪೀಸ್ ಕಟ್ಟಲಿಕ್ಕೆ ಹಣ ಬೆಕಾಗಿವೆ ಆದ್ದರಿಂದ ಬತ್ತದ ಬೆಳೆ ಬಂದಿದೆ ಹೇಗೆ ನೋಡಿಕೊಂಡು ಹೋಗೊಣ ಅಂತ ಬಂದಿದ್ದೆನೆ ಅಂತ ಹೇಳಿದಾಗ. ಯಾರ ಪೀಸು ನಾನೆಕೆ ಕೋಡಲಿ ಅಂತ ಅಂದು ಕೈಯಿಂದ ಕಪಾಳಕ್ಕೆ ಹೋಡೆದು ಅವಾಚ್ಯವಾಗಿ ಬೈಯುತ್ತಿದ್ದನು, ಅದೆ ಸಮಯಕ್ಕೆ ನಮ್ಮ  ಬಾವ ಮಲ್ಲಣ್ಣ ತಂದೆ ತಮ್ಮಣ್ಣ ಸಾಹುಕಾರ ಹಾಗೂ ಆತನೊಂದಿಗೆ ಬಂದ ನಮ್ಮ ಅಕ್ಕನ ಮಗನಾದ ಶರಣಗೌಡ ತಂದೆ ಬಸನಗೌಡ ಹೋಸಮನಿ ಇಬ್ಬರೂ ಬಂದು ಜಗಳ ನೋಡಿ ಜಗಳ ಬಿಡಿಸಿದರು ಆಗ ನನ್ನ ಗಂಡ ವಿಶ್ವನಾಥ ರಡ್ಡಿ ಈತನು ಈಗ ಉಳದಿದಿ ಮಗಳೆ ಇನ್ನೋಮ್ಮೆ ಸಿಗು ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೊದನು. ಈ ಬಗ್ಗೆ ನಮ್ಮ ಮನೆಯಲ್ಲಿ ಚಚರ್ೆಮಾಡಿ ಇಂದು ದಿನಾಂಕ 20/11/2017 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿ ಸಲ್ಲಿಸುತ್ತಿದ್ದು ನನಗೆ ತೋಂದರೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡ, ವಿಶ್ವನಾಥ ರಡ್ಡಿ ತಂದೆ ತಮ್ಮಣ್ಣ ಕೋಳಿಹಾಳ ಈತನ ಮೇಲೆ ಕಾನೂನು ಕ್ರಮ ಕೈ ಕೊಳ್ಳಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 327/2017 ಕಲಂ 498(ಎ)323.504.506 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!