Yadgir District Reported Crimes Updated on 20-11-2017

By blogger on ಸೋಮವಾರ, ನವೆಂಬರ್ 20, 2017


                                       Yadgir District Reported Crimes

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ: 279,304(ಎ) ಐಪಿಸಿ ಸಂ 187 ಐಎಮ್ವಿ ಎಕ್ಟ್ ;- ದಿನಾಂಕ: 19/11/2017 ರಂದು 6-30 ಎಎಮ್ ಕ್ಕೆ ಶ್ರೀ ದೋಂಢಿಬಾ ತಂದೆ ಶಂಕರ ಚವಾಣ, ವ:45, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಕೋಟಗ್ಯಾಳ ವಾಡಿ ಪೊ:ಗೋಜಿಗಾಂ ತಾ:ಮುಖ್ಖೆಡ ಜಿ:ನಾಂದೇಡ ಮಹಾರಾಷ್ಟ್ರ ರಾಜ್ಯ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಹಿಂದಿಯಲ್ಲಿ ಹೇಳಿದ್ದನ್ನು ನಮ್ಮ ಠಾಣೆಯ ಹೆಚ್.ಸಿ ಗುಂಡಪ್ಪ ರವರ ಮುಖಾಂತರ ಕನ್ನಡಕ್ಕೆ ಅನುವಾದಿಸಿದ್ದು, ಸಾರಾಂಶವೇನಂದರೆ ನನಗೆ ಕಿಶನ ವ:24, ಕೈಲಾಶ ವ:22, ನೀಲಾ ವ:20 ಹೀಗೆ ಇಬ್ಬರೂ ಗಂಡು ಮತ್ತು ಒಬ್ಬಳು ಹೆಣ್ಣುಮಗಳಿರುತ್ತಾಳೆ. ನೀಲಾ ಇವಳಿಗೆ ಲಗ್ನ ಮಾಡಿಕೊಟ್ಟಿರುತ್ತೇವೆ. ನನ್ನ ಹಿರಿಮಗ ಕಿಶನ ಈತನು ಈಗ ಸುಮಾರು 6-7 ತಿಂಗಳದಿಂದ ಲಾರಿ ಮೇಲೆ ಕ್ಲೀನರ ಕೆಲಸ ಮಾಡಿಕೊಂಡಿದ್ದನು. ಲಾರಿಯು ನಮ್ಮೂರ ಸುತ್ತಮುತ್ತ ನಡೆದಾಗ ಕೆಲಸ ಮುಗಿಸಿಕೊಂಡು ಮನೆಗೆ ಬರುವುದು ಹೋಗುವದು ಮಾಡುತ್ತಿದ್ದನು. ಹೀಗಿದ್ದು ಈಗ ಸುಮಾರು 15 ದಿವಸಗಳ ಹಿಂದೆ ನಮ್ಮ ಮಾಲಿಕರು ಲಾರಿಯನ್ನು ಕಬ್ಬು ಸಾಗಾಣಿಕೆ ಮಾಡಲು ಕನರ್ಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ತುಮಕೂರ ಗ್ರಾಮದ ಕೋರ ಗ್ರೀನ ಶುಗರ ಫ್ಯಾಕ್ಟರಿಗೆ ಬಿಟ್ಟಿದ್ದು, ಅಲ್ಲಿ ಕಬ್ಬು ಸಾಗಾಣಿಕೆ ಮಾಡಲು ಹೋಗುವುದಾಗಿ ಹೇಳಿ ಹೋಗಿದ್ದನು. ಹೀಗಿದ್ದು ನಿನ್ನೆ ದಿನಾಂಕ: 18/11/2017 ರಂದು ರಾತ್ರಿ 9 ಗಂಟೆ ಸುಮಾರಿಗೆ ಕೋರ ಗ್ರೀನ ಶುಗರ ಫ್ಯಾಕ್ಟರಿಯ ಕಿಶೋರಕುಮಾರ ಎನ್ನುವರು ಫೋನ ಮಾಡಿ ನಿಮ್ಮ ಮಗ ಕಿಶನ ಈತನು ಕಬ್ಬಿನ ಲಾರಿಯಲ್ಲಿ ಕ್ಲೀನರ ಕೆಲಸ ಮಾಡಿಕೊಂಡು ಬಂದಿದ್ದು, ಈಗ ಸಾಯಂಕಾಲ 7-30 ಪಿಎಮ್ ಸುಮಾರಿಗೆ ಕಬ್ಬು ತುಂಬಿದ ಲಾರಿಯು ಫ್ಯಾಕ್ಟರಿ ಒಳಗಡೆ ಬಂದಿದ್ದು,  ಒಳಗಡೆ ಲೋಡ ಗಾಡಿಗಳನ್ನು ನಿಲ್ಲಿಸುವ ಕಡೆ ನಿಲ್ಲಿಸಲು ಡ್ರೈವರನಿಗೆ ಹೇಳಿದಾಗ ಅವನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮಲೇ ಬಲಕ್ಕೆ ಕಟ್ಟ ಮಾಡಿದ್ದರಿಂದ ಲಾರಿಯು ಎಡಗಡೆ ಕ್ಲೀನರ ಕಡೆಗೆ ಪಲ್ಟಿಯಾಗಿ ಬಿದ್ದು, ಕ್ಲೀನರ ಕುಳಿತಲ್ಲಿಯೇ ಸಿಕ್ಕಿಬಿದ್ದು, ಭಾರಿ ಗಾಯಗಳು ಹೊಮದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಿಮ್ಮ ಮಗನ ಶವವನ್ನು ಲಾರಿಯಿಂದ ಹೊರ ತೆಗೆದು ಜಿಲ್ಲಾ ಸರಕಾರಿ ಆಸ್ಪತ್ರಗೆ ಸಾಗಿಸುತ್ತಿರುವುದಾಗಿ ಹೇಳಿದನು. ಆಗ ಗಾಬರಿಯಾದ ನಾನು, ನನ್ನ ಹೆಂಡತಿ ಸುಮನಬಾಯಿ ಮತ್ತು ಮಗ ಕೈಲಾಶ ಇವರಿಗೆ ಘಟನೆ ತಿಳಿಸಿ, ಅವರೊಂದಿಗೆ ಊರಿಂದ ಹೊರಟು ಇಂದು ದಿನಾಂಕ: 19/11/2017 ರಂದು ಬೆಳಗ್ಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಶವಗಾರ ಕೋಣೆಯಲ್ಲಿದ್ದ ನನ್ನ ಮಗನ ಶವವನ್ನು ನೋಡಿರುತ್ತೇನೆ. ನನ್ನ ಮಗನ ತೆಲೆ, ಮುಖ ಪೂತರ್ಿ ಜಜ್ಜಿದಂತೆಯಾಗಿ ಅಪ್ಪಚ್ಚಿಯಾಗಿರುತ್ತದೆ. ಬಲಗಾಲಿನ ನಾಲ್ಕು ಬೆರಳುಗಳು ಕಟ್ಟ್ ಆಗಿರುತ್ತವೆ. ಎರಡು ತೊಡೆಗಳಿಗೆ ಭಾರಿ ಒಳಪೆಟ್ಟಾಗಿರುತ್ತದೆ. ಕಬ್ಬು ಸಾಗಿಸುತ್ತಿದ್ದ ಲಾರಿ ನಂ. ಎಮ್.ಹೆಚ್ 24 ಜೆ 7609 ನೇದ್ದರ ಚಾಲಕ ರಾಮ ತಂದೆ ನರಸಿಂಹ ಪೊನ್ನಮರ ಸಾ:ವಂಡಗಿರ ಈತನು ಲಾರಿಯನ್ನು ಫ್ಯಾಕ್ಟರಿಯಲ್ಲಿ ಲೋಡ ಗಾಡಿಗಳನ್ನಿ ನಿಲ್ಲಿಸುವ ಸ್ಥಳ (ಫ್ಲ್ಯಾಟ)ದಲ್ಲಿ ಒಯ್ಯುವಾಗ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಒಮ್ಮಲೇ ಬಲಗಡೆಗೆ ಕಟ್ಟ ಮಾಡಿದ್ದರಿಂದ ಲಾರಿಯು ಎಡಗಡೆ ಕ್ಲೀನರ ಸೈಡ ಪಲ್ಟಿಯಾಗಿ ನನ್ನ ಮಗನು ಕ್ಲೀನರ ಸ್ಥಳದಲ್ಲಿ ಕೂತಿದ್ದು, ಅಲ್ಲಿಯೇ ಸಿಕ್ಕಿಬಿದ್ದು, ಭಾರಿ ಗಾಯಗಳನ್ನು ಹೊಂದಿ ಮೃತಪಟ್ಟಿರುತ್ತಾನೆ. ಘಟನೆಯನ್ನು ಅಲ್ಲಿದ್ದ ವಾಚಮೇನ ತೀಲಕ ತಂದೆ ಗಹಿಂಗಾ ಸಾಕಿ ಇವರು ನೋಡಿದ್ದು, ನನಗೆ ಹೇಳಿದ್ದರಿಂದ ಕೇಳಿ ಗೊತ್ತಾಗಿರುತ್ತದೆ. ಕಾರಣ ಲಾರಿ ಚಾಲಕ ರಾಮ ಈತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಪಲ್ಟಿ ಮಾಡಿ ನನ್ನ ಮಗನ ಸಾವಿಗೆ ಕಾರಣಿಭೂತನಾಗಿ ಲಾರಿ ಬಿಟ್ಟು ಓಡಿ ಹೋಗಿದ್ದು, ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 166/2017 ಕಲಂ: 279,304(ಎ) ಐಪಿಸಿ ಸಂ. 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 278/2017 ಕಲಂ: 143, 147, 148, 323, 324, 326, 354, 114, 504, 506 ಸಂ 149 ಐಪಿಸಿ;- ದಿನಾಂಕ 19/10/2017 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿ ಮತ್ತು ಮನೆಯವರು ಕೂಡಿಕೊಂಡು ತನ್ನ ಆರೋಪಿತ ಮನೆ ಹತ್ತಿರ ಹೋಗಿ ತಮ್ಮನ ಹೆಂಡತಿಗೆ ಕೈಹಿಡಿದು ಆರೋಪಿ ಅಜರ್ುನ ಎಳೆದಾಡಿ ಮಾನಭಂಗ ಮಾಡಿದ ವಿಷಯದ ಬಗ್ಗೆ ಕೇಳಲು ಹೋದಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ಕಟ್ಟಿಕೊಂಡು ತಮ್ಮ ಕೈಯಲ್ಲಿ ಕೊಡಲಿ, ಬಡಿಗೆಗಳು ಮತ್ತು ಕಲ್ಲನ್ನು ಹಿಡಿದುಕೊಂಡು ಬಂದು ಫಿರ್ಯಾಧೀಗೆ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಫಿರ್ಯಾಧಿ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಕೊಡಲಿಯಿಂದ, ಬಡಿಗೆಗಳಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಮಾಡಿರುವ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 279/2017 ಕಲಂ: 143,147,148,323,324,326,114,504,506 ಸಂ 149;- ದಿನಾಂಕ 19-11-2017 ರಂದು 10-30 ಎ.ಎಮ ಕ್ಕೆ ಯಾಧಗಿರ ಸರಕಾರಿ ಆಸ್ಪತ್ರೆಯಿಂದ ದೂವಾಣಿ ಮುಖಾಂತರ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾಋ ಪಡೆಯುತ್ತಿದ್ದ ಶ್ರೀ ರಾಜು ತಂದೆ ಸುಭಾಸ ರಾಠೋಡ ವಯ:33 ಜಾತಿ:ಲಬಾಣಿ ಉ:ಒಕ್ಕುಲುತನ ಸಾ: ಸಮನಾಪುರ ದೊಡ್ಡತಾಂಡ ಇವರು ಪಿರ್ಯಾಧೀ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ಈಗ ಎರಡು ಮೂರು ದಿನವಸಳ ಹಿಂದೆ ನಮ್ಮ ತಮ್ಮನಾದ ಅಜರ್ುನ ತಂದೆ ಸುಭಾಸ ರಾಠೋಡ ಈತನು ತಮ್ಮ ತಾಂಡದವರೆ ಆದ ತೇಜ್ಯಾ ತಂದೆ ಚಂದ್ರು ರಾಠೋಡ ಈತನ ಹೆಂಡತಿಯದ ಭಾರತಿಬಾಯಿ ಇವಳು ಹೊಲಕ್ಕೆ ಹೋಗುವಾಗ  ಕೈಹಿಡಿದು ಜಗ್ಗಿದಾನೆ ಆಂತಾಹೀರು ತಂದೆ ಚಂದ್ರು ರಾಠೋಡ ಹಾಗೂ ಅಣ್ಣತಮ್ಮಕಿಯವರು ನಮ್ಮ ಜೋತೆ ಅವರು 2-3 ದಿವಸಳಿಂದ ತಕರಾರು ಮಾಡುತ್ತಾ ಬಂದಿರುತ್ತಾರೆ.  ಅದರಂತೆ ನಿನ್ನೆ ದಿನಾಂಕ 18-11-2017 ರಂದು ರಾತ್ರಿ ಅವರು ಮತ್ತೆ ಅವರು ನಮ್ಮ ಮನೆಯ ಮುಂದೆ ಬಂದು ಮೇಲ್ಕಂಡ ವಿಷಯದಲ್ಲಿ ನಮಗೆ ಅವಾಚ್ಯವಾಗಿ ಬೈದು ಹೊಡೆಯಲು ಬಂದಿದ್ದರು.ಅಷ್ಟಾರದರೂ ನಾವು ಸುಮ್ಮನಿದ್ದೇವು.     ಹೀಗಿದ್ದು ಇಂದು ದಿನಾಂಕ 19-11-2017 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನಾನು ನಮ್ಮ ತಮ್ಮ ಅಜರ್ುನ ತಂದೆ ಸುಭಾಸ ನನ್ನ ದೊಡ್ಡಪ್ಪನ ಮಗನಾದ ವಿಶ್ವನಾಥ ತಂದೆ ಸುರೇಶ ರಾಠೋಡ ಹಾಗೂ ನಮ್ಮ ಅತ್ತಿಗೆಯಾದ ಅನ್ನಿಬಾಯಿ ಗಂಡ ಬಾಸು ರಾಠೋಡ ಎಲ್ಲರೂ ನಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ ನಿನ್ನೆ ನಮ್ಮ ಜೋತೆ ತಕರಾರು ಮಾಡಿಕೊಂಡಿದ್ದ 1) ಹೀರ್ಯಾ ತಂದೆ ಚಂದ್ರು ರಾಠೋಡ 2) ತೇಜ್ಯಾ ತಂದೆ ಚಂದ್ರು ರಾಠೋಡ 3) ರಾಜು ತಂದೆ ಚಂದ್ರು ರಾಠೋಡ 4) ರಡ್ಡಿ ತಂದೆ ಚಂದ್ರು ರಾಠೋಡ 5) ರಾಜು ತಂದೆ ನಾಮು ರಾಠೋಡ 6) ಗೋವಿಂದ ತಂದೆ ನಾಮು ರಾಠೋಡ 7) ಸಂತೋಷ ತಂದೆ ನಾಮು ರಾಠೋಡ 8) ವಿನೋದ ತಂದೆ ನಾಮು ರಾಠೋಡ 9) ಗೋವಿಂದ ತಂದೆ ತೋಲರಾಮ ರಾಠೋಡ 10) ಬಾಸು ತಂದೆ ತೋಲರಾಮ 11) ವಿನೋದ ತಂದೆ ಲಕ್ಷ್ಮಣ ರಾಠೋಡ 12) ಸೋಮು ತಂದೆ ಪತ್ತು ರಾಠೋಡ 13) ಶಾಂತಿಬಾಯಿ ಗಂಡ ಹೀರ್ಯಾ ರಾಠೋಡ 14) ಶಾಣಿಬಾಯಿ ಗಂಡ ಗೋವಿಂದ ರಾಠೋಡ 15) ಹೇಮ್ಲಿಬಾಯಿ ಗಂಡ ನಾಮು ರಾಠೋಡ 16) ಕಮಲಿಬಾಯಿ ಗಂಡ ತೋಳಾರಾಮ ರಾಠೋಡ 17) ರಾಮು ತಂದೆ ಪತ್ತು ರಾಠೋಡ 18) ಅನ್ನಿಬಾಯಿ ಗಂಡ ಸೋಮು ರಾಠೋಡ ಎಲ್ಲರೂ ಬಂದವರೇ ಇವರಲ್ಲಿ 1) ಹೀರ್ಯಾ ತಂದೆ ಚಂದ್ರು ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಮ್ಮ ಅಜರ್ುನ ರಾಠೋಡ ಈತನ ತೆಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು 2) ತೇಜ್ಯಾ ತಂದೆ ಚಂಧ್ರು ಈತನು ಅಜರ್ುನನಿಗೆ ಕೈಮುಷ್ಠಿ ಮಾಡಿ ಎದೆಗೆ ಹೊಟ್ಟಗೆ ಗುದ್ದಿದನು. 3) ರಾಜು ತಂದೆ ಚಂದ್ರು ರಾಠೋಡ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ರಾಜು ತಂದೆ ಸುಭಾಸ ಇತನ ಎಡಗೈ ಹಿಡಕಿ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. 4) ರಡ್ಡಿ ತಂದೆ ಚಂದ್ರು ರಾಠೋಡನ ಈತನು ತನ್ನ ಕೈಯಲಿದ್ದ ಕಲ್ಲಿನಿಂದ ವಿಶ್ವನಾಥ ತಂದೆ ಸುರೇಶ ಈತನ ಬಲಹಿಮ್ಮಡಿಗೆ ಹೊಡೆದು ರಕ್ತಗಾಯ ಮಾಡಿದನು. ಇನ್ನೂಳಿದ 5) ರಾಜು ತಂದೆ ನಾಮು ರಾಠೋಡ 6) ಗೋವಿಂದ ತಂದೆ ನಾಮು ರಾಠೋಡ 7) ಸಂತೋಷ ತಂದೆ ನಾಮು ರಾಠೋಡ 8) ವಿನೋದ ತಂದೆ ನಾಮು ರಾಠೋಡ 9) ಗೋವಿಂದ ತಂದೆ ತೋಲರಾಮ ರಾಠೋಡ 10) ಬಾಸು ತಂದೆ ತೋಲರಾಮ 11) ವಿನೋದ ತಂದೆ ಲಕ್ಷ್ಮಣ ರಾಠೋಡ 12) ಸೋಮು ತಂದೆ ಪತ್ತು ರಾಠೋಡ ಇವರೆಲ್ಲರೂ ನಮ್ಮನ್ನು ಸುತ್ತುವರಿದೂ ನಮಗೆ ನೆಲಕ್ಕೆ ಹಾಕಿ ಇವತ್ತಿಗೆ ಮಕ್ಕಳುಗೆ ಜೀವ ಸಹಿತ ಬಿಡಬಾರದು ಅಂತಾ ಮನಸ್ಸಿಗೆ ಬಂದ ಹಾಗೇ ಕಾಲಿನಿಂದ ಒದ್ದು ಕೈಯಿಂದ ಹೊಡೆದರು. ಆಗ ಅಲ್ಲಿಯೇ ಇದ್ದ ನಮ್ಮ ಅತ್ತಿಗೆಯಾದ ಅನ್ನಿಬಾಯಿ ಗಂಡ ಬಾಸು ರಾಠೋಡ ಇವರು ಜಗಳ ಬಿಡಿಸಲು ಅಡ್ಡ ಬಂದಾಗ ಅವಳಿಗೆ ಶಾಂತಿಬಾಯಿ ಗಂಡ ಹೀರ್ಯಾ ರಾಠೋಢ ಇವಳು ಕಲ್ಲಿನಿಂದ ಅವಳ ತೆಲೆಗೆ ಹೊಡೆದು ರಕ್ತಗಾಯ ಮಾಡಿದಳು. ಇನ್ನೂಳಿದ 14) ಶಾಣಿಬಾಯಿ ಗಂಡ ಗೋವಿಂದ ರಾಠೋಡ 15) ಹೇಮ್ಲಿಬಾಯಿ ಗಂಡ ನಾಮು ರಾಠೋಡ 16) ಕಮಲಿಬಾಯಿ ಗಂಡ ತೋಳಾರಾಮ ರಾಠೋಡ 17) ರಾಮು ತಂದೆ ಪತ್ತು ರಾಠೋಡ 18) ಅನ್ನಿಬಾಯಿ ಗಂಡ ಸೋಮು ರಾಠೋಡ ಇವರೆಲ್ಲರೂ ಈ ಮಕ್ಕಳಿಗೆ ಸೂಮ್ಮನೇ ಬಿಡಬ್ಯಾಡರಿ ಇವತ್ತು ಏನಾದರೂ ಆಗಲಿ ಖಲಾಶ ಮಾಡರಿ ಅಂತಾ ನಮ್ಮನ್ನು ಹೊಡೆಬಡೆ ಮಾಡಲು ಪ್ರಚೋಧನೆ ಮಾಡುತ್ತೀದ್ದರು. ನಮಗೆ ಹೊಡೆಯುತ್ತಿದ್ದನ್ನು ನೋಡಿ ನಮ್ಮ ತಾಂಡದ ಸುರ್ಯಾ ತಂದೆ ಬೋಜು ಜಾಧವ, ಧಾರ್ಯಾ ತಂದೆ ಬಾಲ್ಯಾ ರಾಠೋಡ ಮತ್ತು ಭದ್ರು ತಂದೆ ಗೇಮು ರಾಠೋಡ ಇವರು ಬಂದು ನಮಗೆ ಹೊಡೆಬಡೆ ಮಾಡುವದನ್ನು ಬಿಡಿಸಿಕೊಂಡರು. ನಂತರ ಗಾಯ ಹೊಂದಿದ ನಾವು ಉಪಚಾರಕ್ಕೆ ಯಾದಗಿರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಈ ರೀತಿ ನಮಗೆ ಹೋಡೆಬಡಿ ನನಗೆ ಭಾರಿ ಗಾಯಗೊಳಿಸಿ ಮಾಡಿ ಜೀವದ ಭಯ ಹಾಕಿದ 18 ಜನರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಪಿರ್ಯಾಧಿಯನ್ನು ಪಡೆದುಕೊಂಡು 11-45 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 279/2017 ಕಲಂ 143,147,148,323,324,326,114,504,506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಐ.ಪಿ.ಸಿ
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 143, 147, 148, 323, 324, 354ಎ(1)()(), 504, 506 ಸಂ 149 ಐಪಿಸಿ ;- ದಿನಾಂಕ:12-11-2017ರಂದು ತಮ್ಮ ತಾಂಡಾದ ನಿವಾಸಿಯಾದ ಭೀಮಪ್ಪ ತಂದೆ ಹಣಮಂತ ಚವ್ಹಾಣ ಇವನ ಮನೆಯ ಕಟ್ಟಡದ ಕೆಲಸಕ್ಕೆಂದು ಹೋದಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ಗೌಂಡಿ ಕೆಲಸದವರು ಊಟಕ್ಕೆ ಹೋದಾಗ ಭೀಮಪ್ಪ ಈತನು ತನ್ನ ಹತ್ತಿರ ಬಂದು ನಿಮ್ಮ ಅತ್ತೆ ಬಟ್ಟೆ ತೊಳೆಯಲು ಹೊಗಿದ್ದಾಳೆ ಒಂದು ಕೊಡ ನೀರು ತುಂಬಿಕೊಂಡು ಬಾ ಅಂತಾ ಹೇಳಿ ನೀರು ತುಂಬಿಕೊಂಡು ಕಟ್ಟಡದ ಹತ್ತಿರ ಬಂದಾಗ ಅಲ್ಲಿ ಯಾರು ಜನರು ಇಲ್ಲದನ್ನು ನೋಡಿ ಹತ್ತಿರಕ್ಕೆ ಬಂದ ಭಿಮಪ್ಪನು ಪಿರ್ಯದಿಗೆ ಏನು ಬೇಕು ಕೇಳು ಮೋಬೈಲ್ ಬೇಕಾ? ಅರ್ಧ ತೋಲಿ ಬಂಗಾರ ಬೇಕಾ? ದುಡ್ಡು ಬೇಕಾ? ಬೇಕಾದ್ರೆ ಕೊಡುತಿನಿ ಅಂತಾ ಕೈಯಲ್ಲಿ ದುಡ್ಡು ಹಿಡಿದುಕೊಂಡು ಬಂದಾಗ ಪಿಯರ್ಾದಿಯು ಅವನಿಗೆ ಯಾಕೆ ಇವೆಲ್ಲಾ ಎಂದು ಕೇಳಿದಾಗ ನೀನು ಮನೆಗೆ ಊಟಕ್ಕೆ ಹೊಗಬೇಡ ಹೊಲದಲ್ಲಿ ಜನತಾ ಮನೆಗೆ ಬಾ ನಾವು ಅಲ್ಲಿ ಮಲಗೋಣ ಎಂದು ಕೈ ಹಿಡಿದು ಎಳೆದಾಡಿದ್ದು ಆಗ ಪಿಯರ್ಾದಿಯು ತಾನು ಒಲ್ಲೆ ತಾನು ಅಂತಾವಳಲ್ಲಾ ಕಾಕಾ ಅಣ್ಣನಿಗೆ ಹೇಳುತ್ತಿನಿ ಎಂದು ಕೈ ಬಿಡಿಸಿಕೊಂಡು ಅಳುತ್ತಾ ಮನೆಗೆ ಹೋಗಿ ಮನೆಯಲ್ಲಿ ಈ ಘಟನೆಯ ಬಗ್ಗೆ ತಿಳಿಸಿದ್ದು ನಂತರ ಪಿಯರ್ಾದಿ ತನ್ನ ಸಂಬಂದಿಕರೊಂದಿಗೆ ದಿ:15-11-2017 ಮುಂಜಾನೆ 10-00 ಗಂಟೆಯ ಸುಮಾರಿಗೆ ಭೀಮಪ್ಪನ ಮನೆಗೆ ಹೊಗಿ ಭೀಮಪ್ಪನಿಗೆ ಯಾಕೆ ಹಿಗೆ ಮಾಡಿದಿ ಅಂತಾ ಕೆಳೀದಾಗ ಬೀಮಪ್ಪನು ಇತರ ಆರೋಪಿತರೆಲ್ಲರೂ ಸೇರಿ ಪಿಯರ್ಾದಿಗೆ ಮತ್ತು ಇತರರಿಗೆ ಕೈಯಿಂದ, ಬಡಿಗೆಯಿಂದ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಕಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.   
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 498(ಎ), 307 ಸಂಗಡ 34 ಐಪಿಸಿ;- ದಿನಾಂಕ-19-11-2017 ರಂದು ರಾತ್ರಿ 8.30 ಪಿಎಮ ಕ್ಕೆ ಹುಲಿಗೇಮ್ಮ ಗಂಡ ಮಾನಶಪ್ಪ ವ||55 ವರ್ಷ ಸಾ||ಜಾಲಹಳ್ಳಿ ತಾ||ದೇವದುಗರ್ಾ ಜಿ|| ರಾಯಚೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿಯರ್ಾಧಿ ಸಲ್ಲಿಸಿದ ಸಾರಂಶವೆನೆಂದರೆ ಪಿಯರ್ಾದಿಯ ಮಗಳಿಗೆ ಆಗಾಗ ಕಿಕರುಕುಳ ನೀಡಿ ದಿನಾಂಕ:16-11-2017 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಪಿಯರ್ಾದಿಯ ಮಗಳಿಗೆ ಆಕೆಯ ಗಂಡ, ಬಾವ. ಅತ್ತೆ, ಮೈದುನ ಎಲ್ಲರೂ ಸೇರಿಕೊಂಡು ಸಾಯಿಸುವ ಸಲುವಾಗಿ ಆಕೆಗೆ ವಿಷವನ್ನು ಕುಡಿಸಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!