Yadgir District Reported Crimes Updated on 11-11-2017

By blogger on ಶನಿವಾರ, ನವೆಂಬರ್ 11, 2017


                                               Yadgir District Reported Crimes

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 161/2017 ಕಲಂ: 279,337,338 ಐಪಿಸಿ ;- ದಿನಾಂಕ: 10/11/2017 ರಂದು 5-20 ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಶಿವಪುತ್ರ ಹೆಚ.ಸಿ 82 ರವರು ಜಿಜಿಹೆಚ್ ಯಾದಗಿರಕ್ಕೆ ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಮಾನಪ್ಪ ತಂದೆ ಭಾಗಪ್ಪ ಪೊಲೀಸ್ ಪಾಟಿಲ್, ವ: 25, ಜಾ:ಕಬ್ಬಲಿಗೇರ, ಉ:ಒಕ್ಕಲುತನ ಸಾ:ಕಾಡಂಗೇರಾ ಈತನ ಹೇಳಿಕೆ ಫಿರ್ಯಾದಿ ಪಡೆದುಕೊಂಡು 10-30 ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸದರಿ ಫಿರ್ಯಾಧಿ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ: 09/11/2017 ರಂದು ರಾತ್ರಿ ಐಕೂರು ಗ್ರಾಮದ ಜಾತ್ರೆಯಲ್ಲಿ ಕೈಕುಸ್ತಿ ಪಂದ್ಯಾವಳಿ ಇದ್ದುದ್ದರಿಂದ ನಮ್ಮೂರಿಂದ ನಾನು ಮತ್ತು ಮಹೇಶ ತಂದೆ ಬಸವರಾಜ, ಮಂಜುನಾಥ ತಂದೆ ಖಂಡಪ್ಪಗೌಡ ಮೂರು ಜನರು ಮಹೇಶನ ಮೋಟರ್ ಸೈಕಲ್ ಮೇಲೆ ಐಕೂರಿಗೆ ಬಂದೆವು. ನಮ್ಮ ಅಣ್ಣ ಭೀಮಪ್ಪ ತಂದೆ ಭಾಗಪ್ಪ ಮತ್ತು ಮರೆಪ್ಪ ತಂದೆ ಸಿದ್ದಣ್ಣಗೌಡ ಇವರು ಕೂಡ ಇನ್ನೊಂದು ಮೋಟರ್ ಸೈಕಲ್ ಮೇಲೆ ನಮ್ಮೊಂದಿಗೆ ಬಂದಿದ್ದರು. ಐಕೂರು ಗ್ರಾಮದಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಕೈಕುಸ್ತಿ ಮುಗಿದಿದ್ದರಿಂದ ಕೋನಳ್ಳಿ ಜಾತ್ರೆಯಲ್ಲಿ ಇನ್ನು ಕೈಕುಸ್ತಿ ಇದೆ ಅಲ್ಲಿಗೆ ಹೋಗೋಣ ನಡೆಯಿರಿ ಎಂದು ಹೇಳಿದರು. ಆಗ ಮಹೇಶನ ಮೋಟರ್ ಸೈಕಲ್ ನಂ. ಕೆಎ 33 ಎಲ್ 6042 ನೇದ್ದರ ಮೇಲೆ ಮುಂದೆ ಮಹೇಶ, ಮಧ್ಯದಲ್ಲಿ ಮಂಜುನಾಥ ಅವನ ಹಿಂದೆ ನಾನು ಹೀಗೆ 3 ಜನ ಕುಳಿತೇವು. ಮಹೇಶ ಮೋಟರ್ ಸೈಕಲ್ ಚಲಾಯಿಸುತ್ತಿದ್ದನು. ನಮ್ಮ ಹಿಂದೆ ನಮ್ಮಣ್ಣ ಮತ್ತು ಮರೆಪ್ಪ ತಮ್ಮ ಮೋಟರ್ ಸೈಕಲ್ ಮೇಲೆ ಬರುತ್ತಿದ್ದರು. ದಿನಾಂಕ: 10/11/2017 ರಂದು ರಾತ್ರಿ 2-30 ಗಂಟೆ ಸುಮಾರಿಗೆ ಕೋನಳ್ಳಿಗೆ ಬರುತ್ತಿದ್ದಾಗ ವಡಗೇರಾ-ಕಂಠಿ ತಾಂಡಾ ರೋಡ ಕೆನಾಲ್ ರೋಡಿನ ಸಮೀಪ ಹೋಗುತ್ತಿದ್ದಾಗ ಮಹೇಶನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ನಾವು ನಿಧಾನವಾಗಿ ಹೋಗು ಎಂದು ಹೇಳಿದರು ಕೇಳದೆ ಅದೇ ವೇಗದಲ್ಲಿ ಹೋಗುತ್ತಿದ್ದು, ಅದೇ ಸಮಯಕ್ಕೆ ಎದುರುಗಡೆಯಿಂದ ಒಂದು ಮೋಟರ್ ಸೈಕಲ್ ಮೇಲೆ ಅದರ ಸವಾರನು ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಇಬ್ಬರೂ ಮೋಟರ್ ಸೈಕಲ್ ಸವಾರರು ತಮ್ಮ ತಮ್ಮ ಮೋಟರ್ ಸೈಕಲಗಳ ಮೇಲಿನ ನಿಯಂತ್ರಣ ಕಳೆದುಕೊಂಡು ಬಂದು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೋಟರ್ ಸೈಕಲ್ಗಳ ಸಮೇತ ಕೆಳಗೆ ಬಿದ್ದುಬಿಟ್ಟೆವು. ಅಪಘಾತದಲ್ಲಿ ನನಗೆ ಎದೆಗೆ ಟೊಂಕಕ್ಕೆ ಒಳಪೆಟ್ಟು, ಎಡಗೈ ಉಂಗುರ ಬೆರಳಿಗೆ ತರಚಿದ ರಕ್ತಗಾಯ ಮತ್ತು ಬಲಗಾಲ ಹಿಮ್ಮಡದ ಕೀಲಿನಲ್ಲಿ ಒಳಪೆಟ್ಟಾಗಿರುತ್ತದೆ. ಮಂಜುನಾಥನಿಗೆ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿತ್ತು. ಮೋಟರ್ ಸೈಕಲ್ ಚಲಾಯಿಸುತ್ತಿದ್ದ ಮಹೇಶನಿಗೆ ಬಲಗಡೆ ಗಲ್ಲಕ್ಕೆ ಭಾರಿ ರಕ್ತಗಾಯವಾಗಿ ಬಾಯಿ ತೆರೆಯಲು ಬರದಂತಾಗಿತ್ತು. ಎದುರುಗಡೆಯಿಂದ ಬಂದ ಮೋಟರ್ ಸೈಕಲ್ ನೋಡಲಾಗಿ ಕೆಎ 33 ಕ್ಯೂ 4124 ಇತ್ತು. ಅದರ ಸವಾರನ ಹೆಸರು ಕೇಳಲಾಗಿ ತಿಮ್ಮಣ್ಣ ತಂದೆ ಹಣಮಂತ್ರಾಯ ಆಡಕಾಯಿ ಸಾ:ವಡಗೇರಾ ಎಂದು ಗೊತ್ತಾಗಿದ್ದು, ತಿಮ್ಮಣ್ಣನಿಗೆ ಬಲಗಡೆ ಗಲ್ಲಕ್ಕೆ ಭಾರಿ ರಕ್ತಗಾಯವಾಗಿ ಬಾಯಿಯಿಂದ ರಕ್ತ ಬಂದಿತ್ತು. ಆತನ ಹಿಂದೆ ಕುಳಿತ ಮರೆಪ್ಪ ತಂದೆ ಸಾಬರೆಡ್ಡಿ ಸಾ:ವಡಗೇರಾ ಈತನಿಗೆ ಹಣೆಗೆ ಭಾರಿ ರಕ್ತಗಾಯ, ಎಡಕಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ ಮತ್ತು ಬಲಕಾಲಿಗೆ ತರಚಿದಗಾಯವಾಗಿತ್ತು. ನಮ್ಮ ಹಿಂದೆ ಮೋಟರ್ ಸೈಕಲ್ ಮೇಲೆ ಬರುತ್ತಿದ್ದ ನಮ್ಮಣ್ಣ ಭೀಮಪ್ಪ ಮತ್ತು ಮರೆಪ್ಪ ಇಬ್ಬರೂ ಬಂದು ನಮಗೆ ನೋಡಿ ಎಬ್ಬಿಸಿ, 108 ಅಂಬ್ಯುಲೇನ್ಸ ತರಿಸಿ, ನಮಗೆಲ್ಲರಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಕ್ಕೆ ತಂದು ಸೇರಿಕೆ ಮಾಡಿದರು. ಸದರಿ ಅಪಘಾತವು ದಿನಾಂಕ: 10/11/2017 ರಂದು ರಾತ್ರಿ 2-30 ಗಂಟೆ ಸುಮಾರಿಗೆ ವಡಗೇರಾ-ಕಂಠಿ ತಾಂಡಾ ರೋಡ ಕೆನಾಲ ಸಮೀಪ ಜರುಗಿರುತ್ತದೆ. ಕಾರಣ ನಮ್ಮ ಮೋಟರ್ ಸೈಕಲ್ ಸವಾರ ಮಹೇಶ ಮತ್ತು ಎದುರುನಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರ ತಿಮ್ಮಣ್ಣ ಇಬ್ಬರೂ ಮೋಟರ್ ಸೈಕಲಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲಗಳ ಮೇಲಿನ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದು, ಸದರಿಯವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 161/2017 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 440/2017.ಕಲಂ 143.147.153(2).323.341.352.504.506.ಸಂ.149 ಐ.ಪಿ.ಸಿ.;- ದಿನಾಂಕ 10/11/2017 ರಂದು ಸಾಯಂಕಾಲ 18-00 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಶ್ರೀ ಸುರೇಶ ಕದಂ ಸಿ.ಪಿ.ಸಿ.256 ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಪಿಯರ್ಾದಿ ಶ್ರೀ ಘಂಟೆಪ್ಪ ತಂದೆ ತಿಪ್ಪಣ್ಣ ಸಾಳೇರ್ ವ|| 47 ಉ|| ಖಾಸಗಿಕೆಲಸ ಸಾ|| ಗಾಂದಿ ಚೌಕ ಹತ್ತಿರ ಶಹಾಪೂರ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಫೂರ ರವರಲ್ಲಿ ಕನ್ನಡದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 35/2017 ನ್ನೇದ್ದನ್ನು ತಂದು ಹಾಜರ ಪಡಿಸಿದ್ದ ಸಾರಾಂಶ ವೆನೆಂದರೆ ಪಿಯರ್ಾದಿಯು ದಿನಾಂಕ 30/07/2017 ರಂದು ಜೀವೇಶ್ವರ ಕಲ್ಯಾಣ ಮಂಡಪದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರಾದ ಮಲ್ಲಿಕಾಜೂನ್ ತಂದೆ ಕೃಷ್ಣಾಜಿ ಸಂಗಡ ಇನ್ನು 15 ಜನರು ಸೇರಿ ಅವಾಚ್ಚ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿಹಿಡುದುಕೋಂಡು ಹೋರಗಡೆ ತಂದು ಕಲ್ಯಾಣ ಮಂಡಪ್ಪಕೆ ಬೀಗ ಹಾಕಿ ಜೀವದ ಭಯ ಹಾಕಿದ್ದು ಇರುತ್ತದೆ ಅಂತ ಇತ್ಯಾದಿ ಖಾಸಗಿ ಪಿಯರ್ಾದಿ ಇದ್ದು. ಸದರಿ ಖಾಸಗಿ ಪಿಯರ್ಾದಿ ಆಧಾರದ ಮೇಲೆ ಆರೋಪಿತರ ವಿರುದ್ದ ಗುನ್ನೆ ನಂ 440/2017 ಕಲಂ  143.147.153(2).323.341.352.504.506.ಸಂ.149 ಐ.ಪಿ.ಸಿ. ನ್ನೇದ್ದರಲ್ಲಿ  ಪ್ರಕರಣದಾಖಲಿಸಿಕೊಂಡು ತನಿಕೆ ಕೈಕೊಂಡೆನು.        
ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ. 315/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ;- ದಿನಾಂಕ:10-11-2017 ರಂದು 4:45 ಪಿ.ಎಮ್.ಕ್ಕೆ ಇಂದು ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಮರಳು ತುಂಬಿದ ಒಂದು ಲಾರಿಯನ್ನು ತಂದು ಹಾಜರು ಪಡಿಸಿದ್ದು ಸದರಿ ವರದಿಯ ಸಾರಾಂಶವೇನಂದರೆ ಇಂದು ದಿನಾಂಕ: 10-11-2017 ರಂದು 01:30 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಕನರ್ಾಳ ಸೀಮಾಂತರದ ಕೃಷ್ಣಾನದಿಯಿಂದ ಯಾರೋ ತಮ್ಮ ಲಾರಿಗಳಲ್ಲಿ ಮರಳನ್ನು  ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ   ಇಬ್ಬರು ಪಂಚರಾದ 1) ಎಮ್.ಡಿ. ಮಹೆಬೂಬ ತಂದೆ ಮುಸ್ತಾಪಾ ಮಕ್ಕಾ ವಯ: 26 ವರ್ಷ ಜಾ: ಮುಸ್ಲಿಂ ಉ: ಡ್ರೈವರ 2) ಕಾಶಿನಾಥ ತಂದೆ ಹಣಮಂತ ದೊಡ್ಡಮನಿ ವಯ: 45 ವರ್ಷ ಜಾ: ಎಸ್.ಸಿ. ಉ: ಒಕ್ಕಲುತನ ಸಾ: ಬೋನಾಳ ತಾ:ಸುರಪೂರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಪರಮೇಶ ಪಿ.ಸಿ.142 ಮತ್ತು ನಾಗರೆಡ್ಡಿ ಎ.ಪಿ.ಸಿ.160 ರವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 02:00 ಪಿ.ಎಮ್.ಕ್ಕೆ ಹೊರಟು 02:30 ಗಂಟೆಗೆ ಕನರ್ಾಳ ಸೀಮಾಂತರದ ಕೃಷ್ಣಾ ನದಿಯಲ್ಲಿ ಹೋಗಿ ನೋಡಲಾಗಿ  ಒಂದು ಲಾರಿ ಮರಳು ತುಂಬುಕೊಂಡು   ಹೊರಡಲು ಚಾಲೂ ಮಾಡಿ ನಿಂತಿದ್ದು ಅದರ ಹತ್ತಿರ ಹೋದಾಗ ಅದರ ಚಾಲಕ ಮತ್ತು ಇನ್ನೊಬ್ಬ ಇಬ್ಬರೂ ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋದರು.  ಸದರಿ ಲಾರಿ ನಂ. ನೋಡಲಾಗಿ ಎ.ಪಿ.12/ವಿ-7487 ಇದ್ದು ಅದರಲ್ಲಿ ಮರಳು ತುಂಬಿದ್ದು ಇದೆ. ಸದರಿ ಟಿಪ್ಪರದಲ್ಲಿ ಅಂದಾಜು 10 ಘನ ಮೀಟರ ಮರಳು ಇದ್ದು ಅದರ ಅ.ಕಿ.8000/- ಆಗುತ್ತದೆ. ಓಡಿ ಹೋದ ಚಾಲಕನ ಹೆಸರು ನಾಸಿರ ಅಂತಾ ಗೊತ್ತಾಗಿದೆ.  ಸದರಿ ಲಾರಿಯ ಚಾಲಕ ಮತ್ತು ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡಲು ಕಳ್ಳತನದಿಂದ ತುಂಬಿಕೊಂಡು  ಹೊರಟಿದ್ದು ಇರುತ್ತದೆ. ಸದರಿ ವಾಹನವನ್ನು  ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 02:45 ಪಿ.ಎಮ್ ದಿಂದ 03:45 ಪಿ.ಎಮ್ ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ  ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪಂಚನಾದ ಎಮ್.ಡಿ. ಮಹೆಬೂಬಸಾಬ ಈತನ ಸಹಾಯದಿಂದ  ಠಾಣೆಗೆ  ತಂದಿದ್ದು  ಸದರಿ ಲಾರಿಯ ಚಾಲಕ, ಮಾಲಿಕರ  ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.315/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ. 316/2017 ಕಲಂ: 341,323.,504,506 ಸಂ 34 ಐಪಿಸಿ;- ದಿನಾಂಕ 10/11/2017 ರಂದು ಸಾಯಂಕಾಲ 6-15ಪಿ,ಎಂ ಕ್ಕೆ ಠಾಣೆಗೆ ಪಿಯಾದಿ ಶ್ರೀ ಸಂಗಪ್ಪಾ ತಂದೆ ಸಿದ್ದಣ್ಣ ಡೊಳ್ಳಿ ವಯ|| 35 ಉ|| ಒಕ್ಕಲತನ ಜಾ|| ಕುರುಬರ ಸಾ|| ಚಿಕ್ಕನಳ್ಳಿ ತಾ|| ಸುರಪೂರ ರವರು ಹಾಜರಾಗಿ ಒಂದು ಲಿಖಿತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ ಮೇಲ್ಕಂಡ ವಿಳಾಸದಲ್ಲಿ ನಾನು ಒಕ್ಕಲತನ ಕೆಲಸ ಮಾಡಿಕೊಂಡು ವಾಸಿಸುತ್ತಿರುತ್ತೇನೆ. ನಾನು ಮೂಲತ ಮುದ್ದೆಬಿಹಾಳ ತಾಲೂಕಿನ ಬಳವಾಟ ಗ್ರಾಮದ ನಿವಾಸಿತನಿದ್ದು ಬಳಬಾಟ ಗ್ರಾಮದಲ್ಲಿ ನಮ್ಮದು 12 ಎಕರೆ ಜಮೀನು ಪಿತ್ರಾಜರ್ಿತ ಆಸ್ತಿ ಇದ್ದು ಆ ಜಮೀನು ನಮ್ಮ ತಂದೆ ಹಾಗೂ ನಮ್ಮ ದೊಡ್ಡಪ್ಪನಾದ ಯಲಗುರದಪ್ಪ ತಂದೆ ಚನಮಲ್ಲಪ್ಪ ಡೊಳ್ಳಿ ಇವರಿಬ್ಬರ ಜಂಟಿಯಾಗಿ ಅವರಿಬ್ಬರ ಹೆಸರಿನಲ್ಲಿರುತ್ತದೆ. ನಾನು ನಮ್ಮ ತಂದೆಯವರಿಗೆ ಒಬ್ಬನೆ ಮಗನಿದ್ದು ನನ್ನ ಸಂಸಾರ ಮಾಡಿಕೊಂಡು ಹೋಗುವದು ಕಷ್ಟವಾಗುತ್ತಿದ್ದರಿಂದ ನಮ್ಮ ದೊಡ್ಡಪ್ಪನಿಗೆ ನಮ್ಮ ಪಿತ್ರಾಜರ್ಿತ ಆಸ್ತಿಯಲ್ಲಿ ನಮಗೆ ಬರುವ ಪಾಲು ಅಂದರೆ 6 ಎಕರೆ ಜಮೀನು ಕೊಡು ಅಂತ ಈಗ ಸುಮಾರು ದಿನಗಳಿಂದ ಕೇಳಿದರು ನಮ್ಮ ದೊಡ್ಡಪ್ಪ ನಮಗೆ ಆಸ್ತಿ ಕೊಟ್ಟಿರುವದಿಲ್ಲ. ಈ ಬಗ್ಗೆ ನಾನು ನನಗೆ ಬರಬೇಕಾದ ಆಸ್ತಿಯನ್ನು ಪಡೆದುಕೊಳ್ಳಲು ಮುದ್ದೆಬಿಹಾಳ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ಇರುತ್ತದೆ. ಆದ್ದರಿಂದ ನಿನ್ನೆ ದಿನಾಂಕ: 09/11/2017 ರಂದು ಸಾಯಂಕಾಲ 6-00 ಪಿ,ಎಂ ಕ್ಕೆ ನಾನು ಚಿಕ್ಕನಳ್ಳಿ ಗ್ರಾಮದ ನಮ್ಮ ಮನೆಯಿಂದ ಅಗಸಿ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಬಳವಾಟ ಗ್ರಾಮದ ನನ್ನ ದೊಡ್ಡಪ್ಪ 1) ಯಲಗುರದಪ್ಪ ತಂದೆ ಚನ್ನಮಲ್ಲಪ್ಪ ಡೊಳ್ಳಿ ಅವರ ಮಗನಾದ 2) ನಾಗಪ್ಪ ತಂದೆ ಯಲಗುರದಪ್ಪ ಡೊಳ್ಳಿ ದೊಡ್ಡಪ್ಪನ ಮೊಮ್ಮಗನಾದ 3) ಶಿವಕುಮಾರ ತಂದೆ ಮಹಾಂತಪ್ಪ ವರ್ಕನಳ್ಳಿ ನಮ್ಮ ದೊಡ್ಡಪ್ಪನ ಹೆಂಡತಿಯಾದ 4) ನೀಲಮ್ಮ ಗಂಡ ಯಲಗುರದಪ್ಪ ಡೊಳ್ಳಿ ಸಾ|| ಎಲ್ಲರೂ ಬಳವಾಟ ನಾಲ್ಕು ಜನರು ನಮ್ಮ ಮನೆಯ ಹತ್ತಿರ ಬಂದವರೇ ನನಗೆ ತಡೆದು ನಿಲ್ಲಿಸಿ, ಎಲ್ಲರೂ ಸೇರಿ ಲೇ ಸಂಗ್ಯಾ ಸುಳೆ ಮಗನೆ ನಿನಗ ಆಸ್ತಿ ಬೇಕಾ ಸೂಳೆ ಮಗನೆ ಆಸ್ತಿ ಸಲುವಾಗಿ ಮುದ್ದೆಬಿಹಾಳ ಕೊರ್ಟನಲ್ಲಿ ದಾವಾ ಹೂಡತಿಯಾ ಸುಳೆ ಮಗನೆ ಅಂತ ಅಂದವರೆ ಅವರಲ್ಲಿ ನಮ್ಮ ದೊಡ್ಡಪ್ಪ ಮತ್ತು ಅವನ ಮಗ ಹಾಗೂ ಅವರ ಮೊಮ್ಮಗ ಮೂರು ಜನರು ನನಗೆ ಕೈಯಿಂದ ಮುಖಕ್ಕೆ ಬೆನ್ನಿಗೆ ಕಪಾಳಕ್ಕೆ ಹೊಡೆದರು. ಆಗ ನಮ್ಮ ದೊಡ್ಡಮ್ಮ ನೀಲಮ್ಮ ಇವಳು ಹೊಲ ಬೇಕಾ ಹಾಟ್ಯಾನ ಮಗನಾ ಅಂತ ಅವಾಚ್ಯವಾಗಿ ಬೈಯ್ದಳು ಆಗ ನಾನು ಅವರಿಗೆ ನಮ್ಮ ಪಾಲಿನ ಹೊಲ ನಮಗೆ ಕೋಡಲು ನಿಮಗ್ಯಾಕೆ ತೊಂದರೆ ಅಂತ ಅಂದೆನು ಆಗ ಅವರು ಕೋಡುವದಿಲ್ಲ ಅಂತಿಯಾ ಸೂಳೇ ಮಗನೇ ಇವತ್ತು ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಹೊಡೆಯಲು ಬರುತ್ತಿದ್ದಾಗ ಆಗ ಅಲ್ಲಿಯೇ ಇದ್ದ ನಮ್ಮ ಪಕ್ಕದ ಮನೆಯವರಾದ 1) ಬಸನಗೌಡ ತಂದೆ ಸಂಗನಬಸಪ್ಪಗೌಡ ಪೊಲೀಸ್ ಪಾಟಿಲ ಮತ್ತು ಅವರ ಗೆಳೆಯನಾದ 2) ರಂಗಣ್ಣ ತಂದೆ ಭೀಮಪ್ಪ ಸುಗೂರ ಸಾ|| ಇಬ್ಬರೂ ಚಿಕ್ಕನಳ್ಳಿ ರವರು ಬಂದು ಜಗಳ ಬಿಡಿಸಿದರು. ಆಗ ಅವರೆಲ್ಲರೂ ಈಗ ಉಳಿದಿದಿ ಸೂಳೆ ಮಗನೆ ಇನ್ನೋಮ್ಮೆ ಸಿಗು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಈ ಬಗ್ಗೆ ನಾನು ನಮ್ಮ ತಂದೆಯವರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ 10/11/2017 ರಂದು ಸಾಯಂಕಾಲ 6-15 ಪಿಎಂ ಠಾಣೆಗೆ ಬಂದು ಈ ಅಜರ್ಿ ಸಲ್ಲಿಸಿದ್ದು ನನಗೆ ತಡೆದು ನಿಲ್ಲಿಸಿ ಕೈಯಿಂದ ಹೋಡೆದು ಅವಾಚ್ಯವಾಗಿ ಬೈಯ್ದು ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 316/2017 ಕಲಂ: 341,323,504,506, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!