Yadgir District Reported Crimes Updated on 09-10-2017

By blogger on ಸೋಮವಾರ, ಅಕ್ಟೋಬರ್ 9, 2017Yadgir District Reported Crimes


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 139/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ;- ದಿನಾಂಕ: 08/10/2017 ರಂದು 12-30 ಪಿಎಮ್ ಕ್ಕೆ ಶ್ರೀ ಮೌನೇಶ್ವರ ಮಾಲಿಪಾಟಿಲ್ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಈ ದಿನ ನಾನು ಪೆಟ್ರೋಲಿಂಗ ಹಾಗೂ ಬೀಟ ಕಮೀಟಿ ಸದಸ್ಯರ ಸಭೆ ಕುರಿತು ಹಾಲಗೇರಾ ಗ್ರಾಮಕ್ಕೆ ಹೋಗಿದ್ದು, ಅಲ್ಲಿ ಬಾತ್ಮಿದಾರರಿಂದ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಸಿಕ್ಕಿದ್ದು, ನಂತರ ನಾನು ಅಲ್ಲಿ ಹೋಗಿ ನೋಡಲಾಗಿ ಸಾಬಣ್ಣ ಭಾಗಪ್ಪ ನಾಯ್ಕೋಡಿ ಇವರ ಜಮೀನದಲ್ಲಿ ಸುಮಾರು 10-12 ಟ್ರ್ಯಾಕ್ಟರ ಟ್ರ್ಯಾಲಿಗಳಷ್ಟು ಮರಳು ಕಂಡು ಬಂದಿದ್ದು, ನಾನು ಅಲ್ಲಿ ಭೇಟಿ ನೀಡಿದಾಗ ಸುಮಾರು 11:00 ಎಎಮ್ ಆಗಿದ್ದು, ಅಲ್ಲಿದ್ದ ಮರಳನ್ನು ಸದರಿ ಮಾಲಿಕರು ಎಲ್ಲಿಂದಲೋ ಅಕ್ರಮವಾಗಿ ಸಾಗಿಸಿ, ಸಂಗ್ರಹಿಸಿಕೊಂಡಿದ್ದು, ಸದರಿ ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಜರುಗಿಸುವುದು ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 504,341,324,323,506 ಸಂ 34 ಐಪಿಸಿ;- ದಿನಾಂಕ: 08/10/2017 ರಂದು 4-30 ಪಿಎಮ್ ಕ್ಕೆ ಶ್ರೀ ಮೌಲಾನಾ ಮಹಿಬೂಬ ಆಲಂ ತಂದೆ ಮಹ್ಮದ ಖಾಜಾ ನಾಯಕ ಪೇಶ ಇಮಾಮ ಜಾಮಾ ಮಸ್ಜಿದ ತುಮಕೂರ, ವ:64, ಜಾ:ಮುಸ್ಲಿಂ, ಉ: ಮುಖ್ಯ ಗುರುಗಳಾದ ರಜಾ ಜಾಮಾ ಮಸ್ಜೀದ ಪೇಶ ಇಮಾಮ ಸಾ:ತುಮಕೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಮ್ಮೂರಿನ ರಜಾ ಜಾಮಾ ಮಸ್ಜಿದ ಮುಖ್ಯಗುರುಗಳು ಪೇಶ ಇಮಾಮ ಎಂದು ಸದರಿ ಗ್ರಾಮದ ಇಸ್ಲಾಮಿಕ ಧರ್ಮದ ಪ್ರಕಾರ ಎಲ್ಲಾ ಕಾರ್ಯಕ್ರಮಗಳನ್ನು ಕೈಕೊಂಡು ಇಮಾವತ ಕಾರ್ಯ ನಿರ್ವಹಿಸುತ್ತಿದ್ದೇನೆ. ಸದರಿ ಮಸೀದಿ ಮತ್ತು ಸಂಬಂಧಪಟ್ಟ ಆಸ್ತಿಗಳು ಫೈಜಾನೆ ಎ ಇಮಾಮ ಅಹ್ಮದ ರಜಾ ನೂರಿ ಟ್ರಸ್ಟ್ ತುಮಕೂರಿಗೆ ಸಂಬಂಧಪಟ್ಟಿದ್ದು ಇರುತ್ತದೆ. ಆದರೆ ಗ್ರಾಮದಲ್ಲಿಯ ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ ಹಾಗೂ ಸಂಗಡಿಗರು ಜಾಮಾ ಮಸೀದಿಯಲ್ಲಿ ತಮಗೂ ಮುಲ್ಲಾಗಿರಿ ಮಾಡುವುದು ಪಾಲುದಾರಿಕೆ ಇದೆ ನಮಗೆ ಕೊಡು ಎಂದು ಆಗಾಗ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದು, ದಿನಾಂಕ: 04/07/2017 ರಂದು ನಮಾಜ ಮಾಡಿಸುವ ಸಂಬಂದ ಅಕ್ರಮಕೂಟ ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಈಗಾಗಲೇ ಅವರ ಮೇಲೆ ದಿನಾಂಕ: 06/07/2017 ರಂದು ಪ್ರಕರಣ ದಾಖಲಾಗಿರುತ್ತದೆ. ಸದರಿಯವರು ನಮ್ಮ ಗ್ರಾಮದಲ್ಲಿ ಎರಡು ಗುಂಪುಗಳನ್ನು ಮಾಡಿ ತಮ್ಮ ಬೆಂಬಲಿಗರೊಂದಿಗೆ ತಾವು ಪ್ರತ್ಯೆಕವಾಗಿ ಪೀರಲ ದೇವರು ಕೂಡಿಸುವ ಅಸರಖಾನಾದಲ್ಲಿ ಪತ್ರಾಸ ಹಾಕಿಕೊಂಡು ಅದರಲ್ಲಿ ನಮಾಜ ಮಾಡುತ್ತಾ ಬರುತ್ತಿದ್ದಾರೆ. ಸದರಿ ಮಸೀದಿಯಲ್ಲಿ ನಮಾಜ ಮಾಡಿಸಲು ಪಶ್ಚಿಮ ಬಂಗಾಲದಿಂದ ಈ ಹಿಂದೆ ನಾವು ನಮ್ಮ ಮಸೀದಿಗೆ ಕರೆಸಿದ್ದ ಮಹ್ಮದ ಕಾಸಿಂ ಈತನಿಗೆ ಕರೆಸಿ, ನಮಾಜ ಮಾಡಿಸುತ್ತಿದ್ದಾರೆ. ಆದ್ದರಿಂದ ನಾನು ನಮ್ಮ ಜನರಿಗೆ ಈ ಹಿಂದೆ ನಮ್ಮ ಮಸೀದಿಗೆ ನಮಾಜ ಮಾಡಿಸಲು ಬಂದಿದ್ದ ಪಶ್ಚಿಮ ಬಂಗಾಲದ ಮಹ್ಮದ ಕಾಸಿಂನು ಆಗ ಊರಲ್ಲಿ ನಮ್ಮ ನಮ್ಮಲ್ಲಿಯೇ ಜಗಳ ಹಚ್ಚಿ ಎರಡು ಗುಂಪು ಮಾಡಿ ಹೋಗಿರುತ್ತಾನೆ. ಈಗ ಅವರ ಮಸೀದಿಯಲ್ಲಿ ನಮಾಜ ಮಾಡಿಸಲು ಬಂದಿರುತ್ತಾನೆ ಅವನಿಂದ ಹುಷಾರಾಗಿ ಇರ್ರಿ ಅವನು ಮತ್ತೆ ಊರಲ್ಲಿ ಜಗಳ ಹಚ್ಚುತ್ತಾನೆ ಎಂದು ಹೇಳಿದ್ದೇನು. ಹೀಗಿದ್ದು ಇಂದು ದಿನಾಂಕ: 08/10/2017 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಮನೆಯಿಂದ ಬಂದು ಹೊರಗೆ ಹೋಗಬೇಕೆನ್ನುವಷ್ಟರಲ್ಲಿ ನಮ್ಮೂರಿನವರಾದ 1) ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ, 2) ಬಾಷಾ ತಂದೆ ಮಹಿಮೂದ ಮುಲ್ಲಾ, 3) ದಾವಲಸಾಬ ತಂದೆ ಇಮಾಮಸಾಬ ಮಳ್ಡಿ, 4) ಮಹ್ಮದ ಕಾಸಿಂ ಪಶ್ಚಿಮ ಬಂಗಾಲ ಹಾ:ವ: ತುಮಕೂರ ಇವರೆಲ್ಲರೂ ಸೇರಿ ಬಂದವರೆ ಏ ಮಗನೆ ಮೌಲಾನಾ ಎಲ್ಲಿಗೆ ಹೋಗುತ್ತಿ ನಿಲ್ಲು ಮಗನೆ ಎಂದು ಅವಾಚ್ಯ ಬೈದು ನನಗೆ ತಡೆದು ನಿಲ್ಲಿಸಿ, ಮಗನೆ ನಮ್ಮ ಮಸೀದಿಯಲ್ಲಿ ನಮಾಜ ಮಾಡಿಸುವ ಮಹ್ಮದ ಕಾಸಿಂಸಾಬನಿಗೆ ಬೈದಿರುವಿಯಂತ ಏನು ನಿನ್ನ ಸುದ್ದಿ ಎಂದು ಇಬ್ರಾಹಿಂ ಈತನು ಅಲ್ಲೆ ಬಿದ್ದ ಕಟ್ಟಿಗೆ ತೆಗದುಕೊಂಡು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಇನ್ನುಳಿದ ಬಾಷಾ ಮತ್ತು ದಾವಲಸಾಬ ಇವರು ಕೈಯಿಂದ ಮೈ ಕೈಗೆ ಹೊಡೆದರು, ಮಹ್ಮದ ಕಾಸಿಂ ಪಶ್ಚಿಮ ಬಂಗಾಲ ಈತನು ನನಗೆ ಬೈದಿರುತ್ತಾನೆ ಇವನಿಗೆ ಬಿಡಬೇಡಿರಿ ಎಂದಾಗ ಅವರೆಲ್ಲರೂ ಈ ಸೂಳೆ ಮಗನ ಸೊಕ್ಕು ಬಹಳ ಆಗಿದೆ ನಮಗೆ ನಮಾಜ ಓದಿಸುವವನಿಗೆ ಬೈಯುತ್ತಾನೆ ಇವನಿಗೆೆ ಖಲಾಸ ಮಾಡಿ ಬಿಡೋಣ ಎಂದು ಜೀವದ ಬೆದರಿಕೆ ಹಾಕಿದರು. ಆಗ ಮನೆಯಲ್ಲಿ ಇದ್ದ ನನ್ನ ಮಗ ಅಬ್ದುಲ್ ಖದೀರ ತಂದೆ ಮೌಲಾನ ಮೆಹಬೂಬ ಆಲಂ ಮತ್ತು ಆಜುಬಾಜುದವರಾದ ನಜೀರಸಾಬ ತಂದೆ ಬಾಷುಮಿಯಾ, ರಹಿಂಸಾಬ ತಂದೆ ಮಹ್ಮದ ಹುಸೇನ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ವಿನಾಕಾರಣ ಬಂದು ನಮಾಜ ಮಾಡಿಸುವವನಿಗೆ ಬೈದಿರುತ್ತೆನೆ ಎಂದು ಎಲ್ಲರೂ ಸೇರಿ ಬಂದು ಜಗಳ ತೆಗೆದು ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 140/2017 ಕಲಂ: 504,341,324,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ: 143, 147, 148, 323,324,307,504,506 ಸಂಗಡ 149 ಐಪಿಸಿ ;-
ದಿ: 08/10/17 ರಂದು 12.45 ಪಿಎಮ್‌ಕ್ಕೆ ಪಿರ್ಯಾದಿ ಅರ್ಜಿದಾರರಾದ ಶ್ರೀ ಲಾಳೆಮಶಾಕ ತಂದೆ ಮಕ್ತುಮಸಾಬ ವಡಕೇರಿ ಸಾ|| ಎಸ್‌ಬಿಸಿ ಕೆಂಭಾವಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿ: 05/10/17 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಮಗನಾದ ಶಮೀರ ವಯ|| 16 ವರ್ಷ ಈತನಿಗೆ ನಾಶಿರ ತಂದೆ ಉಸ್ಮಾನಸಾಬ ಪೇಶಮಾಮ ಸಂಗಡ ಇತರ 7 ಜನ ಕೂಡಿ ಕೊಲೆ ಮಾಡುವ ಉದ್ದೇಶದಿಂದ ಪೀರಾಪುರ ರೋಡಿನ ಜಾಕವೆಲ್‌ಗೆ ಕರೆದುಕೊಂಡು ಹೋಗಿ ಕೊಡಲಿ ಕಾವು, ಕಬ್ಬಿಣದ ರಾಡು ಹಾಗೂ ಸೈಕಲ್ ಚೈನ್‌ಗಳಿಂದ ಬೆನ್ನಿಗೆ ಬಲವಾಗಿ ಹೊಡೆದು ರಕ್ತ ಕಂಡುಗಟ್ಟಿದ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೆಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 173/17 ಕಲಂ: 147, 147, 148, 323, 324, 307, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 143, 147, 323, 504, 506  ಸಂಗಡ 149 ಐಪಿಸಿ ಮತ್ತು 8 ಪೋಕ್ಸೋ ಕಾಯಿದೆ 2012 ;- ದಿನಾಂಕ 08/10/17 ರಂದು 09-30 ಪಿ.ಎಂಕ್ಕೆ ಪಿಯರ್ಾದಿ ಶ್ರೀ ಶಿರಾಜುದ್ದೀನ ತಂದೆ ಉಸ್ಮಾನಸಾಬ ಪೇಶಮಾಮ್ ಸಾ|| ಸಂಜೀವ ನಗರ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಏನೆಂದರೆ, ತನ್ನ ಅಣ್ಣನ ಮಗಳಾದ ಕುಮಾರಿ ರುಷಿನಾಬೇಗಂ ತಂದೆ ನಾಶಿರ ಅಹ್ಮದ ವಯಾ|| 15 ಇವಳು ಶಾಲೆಗೆ ಹೋಗುವಾಗ ಆರೋಪಿ ಶಮೀರ ಈತನು ಅವಳಿಗೆ ತಡೆದು ಕೈಹಿಡಿದು ಜಗ್ಗಾಡುವದು ಮತ್ತು ಚುಡಾಯಿಸುವದು ಮಾಡಿದ್ದಕ್ಕೆ ಪಿರ್ಯಾದಿದಾರರು ಆರೋಪಿ ಶಮೀರ ಹಾಗೂ ಆತನ ತಂದೆಗೆ ತಿಳಿ ಹೇಳಿದ್ದರ ವಿಷಯವಾಗಿ ಆರೋಪಿತರು ದಿನಾಂಕ: 05/10/17 ರಂದು 11.00 ಪಿಎಮ್ಕ್ಕೆ ಪಿರ್ಯಾದಿಯ ಅಂಗಡಿಗೆ ಹೋಗಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಅಂತ ಅಜರ್ಿಯನ್ನು ನೀಡಿದ ಮೇರೆಗೆ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 174/2017 ಕಲಂ. 143, 147, 323, 504, 506  ಸಂಗಡ 149 ಐಪಿಸಿ ಮತ್ತು 8 ಪೋಕ್ಸೋ ಕಾಯಿದೆ 2012  ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.   
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 284/2017 ಕಲಂ: 279, 338 .304(ಎ) ಐಪಿಸಿ ;- ದಿನಾಂಕ: 08-10-2017 ರಂದು 5:15 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ಶರಣಪ್ಪ ತಂದೆ ಗಾಳೆಪ್ಪ  ವಯ: 40 ವರ್ಷ ಜಾ: ಎಸ್.ಸಿ. ಉ: ಒಕ್ಕಲುತನ ಸಾ: ಪರತಪುರ ತಾ: ದೇವದುರ್ಗ ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಅದರ ಸಾರಾಂಶ ವೇನಂದರೆ ಇಂದು ದಿನಾಂಕ: 08-10-2017 ರಂದು ನಾನು ಮತ್ತು ನಮ್ಮ ಸಂಭಂದಿಕರಾದ ಯಮನಪ್ಪ ತಂದೆ ನಾಗಪ್ಪ ಬಂಢಾರಿ ವಯ: 30 ವರ್ಷ ಜಾ: ಎಸ್.ಸಿ. ಉ: ಟ್ರ್ಯಾಕ್ಟರ ಚಾಲಕ ಸಾ: ಕೋನಾಳ ತಾ:ಸುರಪೂರ ಇಬ್ಬರೂ ಕೂಡಿ ಮೊಟಾರ ಸೈಕಲ್ ಮೇಲೆ ಕೋನಾಳ ಗ್ರಾಮದಿಂದ ನಮ್ಮೂರಿನಿಂದ ಶಹಾಪೂರಕ್ಕೆ ಹೊರಟಿದ್ದೆವು ಹೀಗೆ ಹೊರಟಾಗ 2:00 ಪಿ.ಎಮ್. ಸುಮಾರಿಗೆ ಕುಂಬಾರಪೇಟದಿಂದ  ಹಸನಾಪೂರಕ್ಕೆ ಹೊಗುವ ಬೈಪಾಸ ರಸ್ತೆಯ ಎತ್ತಿನ ಮನಿ ಐಲ್ಮಿಲ್ ಹತ್ತಿರ ರುಕ್ಮಾಪುರ ಕ್ರಾಸದಲ್ಲಿ ಹೊರಟಾಗ ನಮ್ಮ ಅಳಿಯನಾದ ಕರಿಯಪ್ಪ ತಂದೆ ಬಸಪ್ಪ ಸಾ: ಪರತಪುರ ಈತನು ತನ್ನ ಮೊಟಾರ ಸೈಕಲ್ ನಂ. ಕೆ.ಎ.33 ವಿ./2836 ನೇದ್ದರ ಮೇಲೆ ಹೊರಟಿದ್ದನು. ನಾವು ಆತನಿಗೆ ನಿಲ್ಲಿಸಿ ಮಾತನಾಡಿಸಲಾಗಿ ಆತನು ಹುಣಸಗಿ ಗ್ರಾಮಕ್ಕೆ ಮೊಟಾರ ಸೈಕಲ ಸವರ್ಿಸಿಂಗ ಮಾಡಿಸಲು ಹೊರಟಿದ್ದೇನೆ ಅಂತ ತಿಳಿಸಿದನು. ನಂತರ ಆತನು ಹೋದನು ನಾವು ಕುಡಾ ಮುಂದೆ ಹೊರಟೆವು ಒಂದೆರಡು ನಿಮಿಷದಲ್ಲಿ  ಹಿಂದೆ ಶಬ್ದಕೇಳಿದಾಗ ಮರಳಿ ನೋಡಲಾಗಿ ಐಲ್ ಮಿಲ್ ಮುಂದಿನ ರಸ್ತೆಯ ಮೇಲೆ ಕರಿಯಪ್ಪನಿಗೆ ಎದುರಿನಿಂದ ಒಂದು ದೊಡ್ಲಾ ಹಾಲಿನ ಲಾರಿಯ ಚಾಲಕನು ನಿರ್ಲಕ್ಷತನದಿಂದ ವಾಹನ ನಡೆಸಿಕೊಂಡು ಬಂದು ಡಿಕ್ಕಿಪಡಿಸಿತ್ತು. ನಾವು ಓಡಿ ಹೋಗಿ ನೋಡಲಾಗಿ ಕರಿಯಪ್ಪನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದನು. ಕರಿಯಪ್ಪನಿಗೆ ಮುಖಕ್ಕೆ ಭಾರಿ ರಕ್ತಗಾಯ , ತಲೆಗೆ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬರುತಿದ್ದು ಆತನಿಗೆ ಉಪಚಾರಕ್ಕಾಗಿ ಆರಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಲಾರಿಯ ನಂಬರ ನೋಡಲಾಗಿ ಎ.ಪಿ.27/ಟಿ.ವೈ-0864 ಇದ್ದು ಅದರ ಚಾಲಕನ ಹೆಸರು ಜಿ.ಭೋಗಿರಾಜ ತಂದೆ ಜಗ್ಗಾರಾವ ಗೇದಲೆ ಸಾ:ಮೆಟ್ಟಾವೀಧಿಗಲ್ಲಿ ರಂಗೋಯಿ ಪಾಲಸಾ ಜಿ: ಶ್ರೀಕುಲಂ ಆಂದ್ರಪ್ರದೇಶ ಅಂತಾ ಗೊತ್ತಾಗಿದೆ. ಕರಿಯಪ್ಪನನ್ನು ಆಸ್ಪತ್ರೆಗೆ ಸೇರಿಸಿದಾಗ ಉಪಚಾರ ಪಡೆಯುತ್ತಾ 3:00 ಪಿ.ಎಮ್.ಕ್ಕೆ ಮೃತಪಟ್ಟಿರುತ್ತಾನೆ.  ನಾನು ಸದರಿ ಕರಿಯಪ್ಪನ ತಾಯಿ ಮತ್ತು ಹೆಂಡತಿಗೆ ವಿಷಯವನ್ನು ಪೋನ ಮಾಡಿ ತಿಳಿಸಿದ್ದು ದೂರುಕೊಡಲು ಬಂದಿದ್ದೇನೆ. ಅಫಘಾತಕ್ಕೀಡಾದ ವಾಹನಗಳು ಸ್ಥಳದಲ್ಲೇ ಇರುತ್ತವೆ.
       ಸದರಿ ಲಾರಿ ನಂ. ಎ.ಪಿ.27/ಟಿ.ವೈ.0864 ನೇದ್ದರ ಚಾಲಕನಾದ ಜಿ.ಭೋಗಿರಾಜ ತಂದೆ ಜಗ್ಗಾರಾವ ಗೇದಲೆ ಸಾ:ಮೆಟ್ಟಾವೀಧಿ ಗಲ್ಲಿ ರಂಗೋಯಿ ಪಾಲಸಾ ಜಿ: ಶ್ರೀಕುಲಂ ಆಂದ್ರಪ್ರದೇಶ ಈತನು 2:15 ಪಿ.ಎಮ್.ಸುಮಾರಿಗೆ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಎದುರಗೆ ಹೊರಟಿದ್ದ ನಮ್ಮ ಅಳಿಯನಾದ ಕರಿಯಪ್ಪ ತಂದೆ ಬಸಪ್ಪ ಈತನಿಗೆ ಡಿಕ್ಕಿಪಡಿಸಿ ಭಾರೀ ಗಾಯಪಡಿಸಿದ್ದು ಅದರಿಂದ ಉಪಚಾರಕ್ಕಾಗಿ ಆತನನ್ನು ಆಸ್ಪತ್ರೆಗೆ ಸೇರಿಸಿದಾಗ ಉಪಚಾರ ಫಲಿಸದೇ ಮೃತಪಟ್ಟಿರುತ್ತಾನೆ ಆದ್ದರಿಂದ ಸದರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಫಿಯರ್ಾದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.284/2017 ಕಲಂ.279, 338, 304 (ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ: 457, 380, ಐ ಪಿ ಸಿ;- ದಿನಾಂಕ 08/10/2017 ರಂದು ಮದ್ಯಾಹ್ನ 1:30 ಗಂಟೆಗೆ ಪಿಯರ್ಾದಿ ಶ್ರೀ ರಮೇಶ ತಂದೆ ಮಲ್ಲಾರರಾವ ಕುಲಕಣರ್ಿ ವ:36 ವರ್ಷ ಜಾ:ಬ್ರಾಹ್ಮಣ ಉ:ಅಜಿಂ ಪ್ರೇಮಜಿ ಪೌಂಡೇಶನದಲ್ಲಿ ಟಿ ಎಲ್ ಸಿ ಸಂಯೋಜಕ ಸಾ:ಬೀರನೂರ ತಾ:ಶಹಾಪೂರ ಹಾ:ವ: ಕಕ್ಕೇರಾ ತಾ:ಸುರಪೂರ ಇದ್ದು ಕಕ್ಕೇರಾ ಶಿಕ್ಷಕಕರ ಕಲಿಕಾ  ಕೇಂದ್ರದಲ್ಲಿ 5 ವರ್ಷಗಳಿಂದ ಮಾರ್ಗದರ್ಶಕರು ಅಂತಾ ಕೆಲಸ ಮಾಡುತ್ತಿದ್ದು ನಾನು ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ದಿನಾಲು ರಾತ್ರಿ 8-30 ಗಂಟೆಯ ವರೆಗೆ ಇದ್ದು ನಂತರ ಕಿಲಿಕಾ  ಕೇಂದ್ರಕ್ಕೆ ಕೀಲಿ ಹಾಕಿಕೊಂಡು ಮನೆಗೆ ಹೋಗುತ್ತೆನೆ ಹಿಗೀರುವಾಗ ಇಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಕಲಿಕಾ ಕೇಂದ್ರದ ಹತ್ತಿರ ಶಟಲ್ ಕಾಕ ಹಾಡಲು ಹೋಗಿದ್ದ ಶಿಕ್ಷಕರಾದ ಶ್ರೀ ಗುರುಮೂತರ್ಿ ಶಿಕ್ಷಕರು ಹೆಚ್.ಪಿ ಎಸ್ ಬನದೊಡ್ಡಿ ಇವರು ನನ್ನ ಪೋನಗೆ ಕರೆಮಾಡಿ ಕಲಿಕಾ ಕೇಂದ್ರದ ಬಾಗೀಲು ಮುರಿದ ಬಗ್ಗೆ ತಿಳಿಸಿದ್ದು ಕೂಡಲೇ ನಾನು ಶಿಕ್ಷಕರ ಕಲಿಕಾ ಕೇಂದ್ರಕ್ಕೆ ಹೋಗಿ ನೋಡಲಾಗಿ ಶಿಕ್ಷಕರ ಕಲಿಕಾ ಕೇಂದ್ರದ ಬಾಗಿಲ ಕೊಂಡಿ ಮುರಿದಿದ್ದು ಕಂಡುಬಂದಿದ್ದು ನಾನು ಮತ್ತು ಗುರುಮೂತರ್ಿ ಶಿಕ್ಷಕರು ಒಳಗೆ ಹೋಗಿ ನೋಡಲಾಗಿ ಕಲಿಕಾ ಕೇಂದ್ರಕ್ಕೆ ಅಜಿಂ ಪ್ರೇಮಜಿ ಪೌಂಡಶೇನ್ ರವರಿಂದ ವಿತರಿಸಿದ ಂಅಇಖ ಕಂಪನಿಯ ಕಂಪ್ಯುಟರ ಸಿಸ್ಟಮ್ ಹಾಗೂ ಅದಕ್ಕೆ ಜೋಡಿಸಿದ ಹೋಮ್ ಥೆಟರ ಹಾಗೂ ಒಂದು ಕ್ರಿಡಾ ಟ್ರೋಪಿಯನ್ನು ಕಳವುಮಾಡಿಕೊಂಡು ಹೋಗಿದ್ದು ಕಂಡುಬಂದಿದ್ದು ಇವುಗಳ ಅಂದಾಜು ಕಿಮ್ಮತ್ತು 23500/- ರೂ ಆಗುತ್ತಿದ್ದು ನಮ್ಮ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಇಟ್ಟಿದ್ದ ಕಂಪ್ಯುಟರ ಸಿಸ್ಟಮ್ ಅದಕ್ಕೆ ಜೋಡಿಸಿದ್ದ ಹೊಮ್ ಥೆಟರ ಹಾಗೂ ಕ್ರಿಡಾ ಟ್ರೋಪಿಯನ್ನು ಯಾರೋ ಕಳ್ಳರು ಕಲಿಕಾ ಕೇಂದ್ರದ ಬಾಗಿಲ ಕೊಂಡಿಯನ್ನು ದಿನಾಂಕ 7,8/10/2017 ರ ರಾತ್ರಿ ವೇಳೆಯಲ್ಲಿ ಮುರಿದು ಒಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವಾದ ಕಲಿಕಾ ಕೇಂದ್ರದ ಸಾಮಾನುಗಳನ್ನು ನಾನು ನೋಡದಲ್ಲಿ ಗುತರ್ಿಸುತ್ತಿದ್ದು ಕಳವುಮಾಡಿದ ಕಳ್ಳರನ್ನು ಹಾಗೂ ಕಳವುಆದ ಸಾಮಾನುಗಳನ್ನು ಪತ್ತೆಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿಲು ವಿನಂತಿ  ನಾನು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ಈಗ ತಡವಾಗಿ ಬಂದು ದೂರು ಕೊಡುತ್ತಿರುವೇನು ದಿನಾಂಕ 7/10/2017 ರಂದು ರಾತ್ರಿ 8-30 ಪಿ ಎಂ ದಿಂದ ದಿನಾಂಕ 08/10/2017 ರ ಬೇಳಗಿನ 5-30 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 105/2017 ಕಲಂ: 457, 380, ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ, 87 ಕೆ.ಪಿ.ಆ್ಯಕ್ಟ್ ;- ದಿನಾಂಕ: 08/10/2017 ರಂದು 6-30 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 05 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 08/10/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 04-00 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದರಿಯಾಪೂರ ಗ್ರಾಮದ ಹನುಮಾನ ದೇವರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 04-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 05 ಜನ ಆರೋಪಿತರು ಮತ್ತು ಒಟ್ಟು 1560=00 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 04-45 ಪಿಎಮ್ ದಿಂದ 05-45 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-30 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 158/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 390/2017. ಕಲಂ 279, 304(ಎ) ಐ.ಪಿ.ಸಿ.;- ದಿನಾಂಕ: 08/10/2017 ರಂದು 8.00 ಪಿ.ಎಂ.ಕ್ಕೆ ಶ್ರೀ.  ಗುರಭೀಮರಾಯ ತಂದೆ ಹಣಮಂತ್ರಾಯ ಹೊಸಮನಿ ವ|| 25 ಜಾ|| ಹೋಲೆಯ ಉ|| ಒಕ್ಕಲುತನ ಸಾ|| ಮುನಮುಟಗಿ ತಾ|| ಶಹಾಪೂರ ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ನೀಡಿದ್ದರ ಸಾರಾಂಶವೇನೆಂದರೆ, ಇಂದು ರಜಾವಿದ್ದಕಾರಣ ನಮ್ಮ ತಮ್ಮ ಗಿರಿಮಲ್ಲಣ್ಣ ಈತನು ನನ್ನ ಜೋತೆ ನಮ್ಮ ಹತ್ತಿಹೊಲಕ್ಕೆ ಕ್ರಿಮಿನಾಶಕ ಔಷದ ಹೋಡೆಯಲು ಹೊಲಕ್ಕೆ ಬಂದಿದ್ದು ಔಷದಿ ಹೊಡೆದು 04:00 ಪಿಎಂ ಸುಮಾರಿಗೆ ನಮ್ಮ ತಮ್ಮನು ತನಗೆ ತಲೆ ಸುತ್ತುತಿದೆ ಅಂತಾ ತಿಳಿಸಿ ಮನೆಗೆ ಹೋಗಿ ಮರಳಿ ನಮ್ಮ ತಾಯಿ ಯಲ್ಲಮ್ಮ ಮತ್ತು ನಮ್ಮ ತಮ್ಮ ಇಬ್ಬರು ಕೂಡಿ ಹತ್ತಿಗುಡುರ ಸರಕಾರಿ ಆಸ್ಪತ್ರೆಗೆ ಹೋಗುವಾಗ ಸುಮಾರು 06:00 ಸುಮಾರಿಗೆ ಹತ್ತಿಗುಡುರ-ಹಯ್ಯಾಳ(ಬಿ) ಮುಖ್ಖೆ ರಸ್ತೆಯ ಸೊಲಾರ ಪ್ಲಾಂಟ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸ್ಕೀಡ್ಡಾಗಿ ರೋಡಿನ ಮೇಲೆ ರೋಡಿನ ಮೇಲೆ ಎಡಗಡೆ ಬಿದ್ದದರಿಂದ ನಮ್ಮ ತಮ್ಮ ಗಿರಿಮಲ್ಲಣ್ಣ ಈತನಿಗೆ ಮೂಗಿನ ಕೇಳಗೆ, ಗದ್ದಕ್ಕೆ ತರಚಿದ ಗಾಯ ಮತ್ತು ಎದೆಗೆ ಬಾರಿ ಗುಪ್ತಾಯ ಹೋಂದಿ ಮತ್ತು ನಮ್ಮ ತಾಯಿ ಯಲ್ಲಮ್ಮ ಇವಳಿಗೆ ಎಡಗೈ ಮೋಳಕೈ ಹತ್ತಿರ ತರಚಿದ ಗಾಯ, ಗಾಯಾಳುದಾರರಿಗೆ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿದ್ದು ವೈದ್ಯಾದಿಕಾರಿಗಳು ಮಾರ್ಗ ಮದ್ಯದಲ್ಲಿಯೇ ಮೃತ ಪಟ್ಟಿರುತಾನೆ ಅಂತ ತಿಳಿಸಿದ್ದು ಅಪಘಾತಕ್ಕಿಡಾದ ಮೋಟರ ಸೈಕಲ್ ನಂ. ಕೆಎ-33 ಹೆಚ್-7082 ಅಂತ ಪಿಯರ್ಾದಿ ಸಾರಂಶ ಇರುತ್ತದೆ. ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 390/2017 ಕಲಂ 279. 304(ಎ) ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!