Yadgir District Reported Crimes Updated on 27-10-2017

By blogger on ಶುಕ್ರವಾರ, ಅಕ್ಟೋಬರ್ 27, 2017



Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ  32, 34 ಕೆ.ಇ ಆಕ್ಟ್ ;- ದಿನಾಂಕ 26/10/2017 ರಂದು 5 ಪಿಎಂಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು (ಕಾಸು) ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿಸಲ್ಲಿಸಿದ್ದರ ಸಾರಾಂಶವನೆಂದರೆ ಇಂದು ದಿನಾಂಕ 26/10/2017 ರಂದು 03-00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಯಾರೋ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧೀಕೃತ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ 78, ಪಿ.ಸಿ 261 ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ ಬಾಲರಾಜ ತಂದೆ ವೀರಭದ್ರಪ್ಪ ಸಾ|| ಮೀನಹಾಬಾಳ ತಾ|| ಸೇಡಂ ಈತನನ್ನು ಹಿಡಿದು 03-45 ಪಿ.ಎಂದಿಂದ 4-45 ಪಿ.ಎಂ ವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿತನ ತಾಬೆಯಲ್ಲಿದ್ದ 90 ಎಂ.ಎಲ್ದ ಒಟ್ಟು 29 ಓರಜಿನಲ್ ಚೊಯ್ಸ್ ಪೌಚ್ ಒಂದಕ್ಕೆ 28.13 ರೂ|| ಅಂತೆ ಒಟ್ಟು 29 ಪೌಚ್ ಕಿಮ್ಮತ್ತು 815.77 ರೂ|| ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಅದರಲ್ಲಿ ಒಂದನ್ನು ಪೌಚ್ನ್ನು ಎಫ್.ಎಸ್.ಎಲ್ ಕುರಿತು ಪಂಚರ ಸಮಕ್ಷಮ ಬಿಳಿ ಅರೆಬೆಯಿಂದ ಕಟ್ಟಿ ಅರಗಿನಲ್ಲಿ ವೈ.ಟಿ ಅಂತಾ ಶಿಲ್ ಹಾಕಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ಮುದ್ದೆಮಾಲು ಜಪ್ತಿ ಪಂಚನಾಮೆಯೊಂದಿಗೆ ಮರಳಿ 5 ಪಿಎಂಕ್ಕೆ  ಠಾಣೆಗೆ ಮುಂದಿನ ಕ್ರಮಕ್ಕಾಗಿ ಈ ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.206/2017 ಕಲಂ.32, 34 ಕೆ.ಇ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 207/2017 ಕಲಂ 379 ಐಪಿಸಿ;- ದಿನಾಂಕ 26/10/2017 ರಂದು 6-45 ಪಿಎಂಕ್ಕೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾಸು) ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಹಾಗೂ ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸದಾರಾಂಶವೆನೆಂದರೆ ಇಂದು ದಿನಾಂಕ:26/10/2017 ರಂದು  ಬೆಳಿಗ್ಗೆ 9-00 ಗಂಟೆಗೆ ನಾನು ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆಯಿದ್ದು ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯ ಕುರಿತು ನಾನು ಮತ್ತು ಜಗದೀಶ ಪಿಸಿ-388 ರವರ ಕೂಡಿಕೊಂಡು ಠಾಣಾ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯ ಮಾಡುತ್ತಾ 9-30 ಎಎಂಕ್ಕೆ ಹಳೆ ಬಸ್ ನಿಲ್ದಾಣದ ಹತ್ತಿರ ಹೋದಾಗ ಹಳೇ ಬಸ್ ನಿಲ್ದಾಣದ ಮುಂದೆ ಒಂದು ಟಾಟಾ ಕಂಪನಿಯ ಟಿಪ್ಪರ ನಂ.ಕೆಎ-33-ಎ-5763 ಇದ್ದು ಅದರಲ್ಲಿ ಮರಳು ತುಂಬಿಕೊಂಡು ನಿಂತಿದ್ದು ಚಾಲಕನಾಗಲಿ, ಮಾಲಿಕರಾಗಲಿ ಇರಲಿಲ್ಲಾ. ಸುತ್ತ ಮುತ್ತ ನೋಡಲಾಗಿ ಯಾರೂ ಕಾಣಿಸಲಿಲ್ಲಾ. ಅಲ್ಲಿದ್ದ ಜನರಿಗೂ ವಿಚಾರಿಸಲು ಚಾಲಕನ ಬಗ್ಗೆ ತಿಳಿದುಬರದ ಕಾರಣ ಭೀಮಾ ವಾಹನವನ್ನು ಬರಮಾಡಿಕೊಂಡು ಸದರಿ ವಾಹನಕ್ಕೆ  ಕಾವಲಿಡಲಾಯಿತು. ನಂತರ ಸಾಯಂಕಾಲ 5-30 ಗಂಟೆಯಾದರು ಮರಳು ತುಂಬಿದ ಟಿಪ್ಪರ ಚಾಲಕರು ಮಾಲಿಕರು ಬರದ ಕಾರಣ ಸದರಿ ಮರಳನ್ನು ಟಿಪ್ಪರ ಚಾಲಕ ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಕದ್ದು ಸಾಗಿಸುತ್ತಿದ್ದಾರೆ ಅಂತಾ ಖಾತ್ರಿಯಾಯಿತು. ಚಾಲಕ ಮತ್ತು ಮಾಲಿಕನ ಇರದ ಕಾರಣ ಹಸೆರು ಗೊತ್ತಾಗಿರುವುದಿಲ್ಲಾ. ನಂತರ ನಾನು ಸದರಿ ಟಿಪ್ಪರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತೆಗೆದುಕೊಂಡು ಹೋಗುವ ಕುರಿತು ಒಬ್ಬ ಲಾರಿ ಚಾಲಕನಿಗೆ ಬರಮಾಡಿಕೊಂಡು ಠಾಣೆಗೆ 6-30 ಪಿಎಂಕ್ಕೆ ಠಾಣೆಗೆ ತಂದು ನಿಲ್ಲಿಸಿದ್ದು ನಂತರ ಠಾಣಾಧಿಕಾರಿಗಳಿಗೆ ಮರಳು ತುಂಬಿದ ಟಾಟಾ ಕಂಪನಿಯ ಟಿಪ್ಪರ ನಂ.ಕೆಎ-33-ಎ-5763 ಒಪ್ಪಿಸಿ ಠಾಣೆಯ ಕಂಪ್ಯೂಟರದಲ್ಲಿ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ.190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ವರದಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 6-45 ಪಿಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ  ವರದಿಯನ್ನು ಹಾಜರ ಪಡಿಸಿದ್ದರ ಮೇಲಿಂದ ಠಾಣೆ ಗುನ್ನೆ ನಂ.207/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 406/2017.ಕಲಂ 78(3) ;- ದಿನಾಂಕ 26/10/2017 ರಂದು ಮದ್ಯಾಹ್ನ 15-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 26/10/2017 ರಂದು ಮದ್ಯಾಹ್ನ 13-00 ಗಂಟೆಗೆ  ನಾನು  ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಪಾಲ್ಕಮ್ಮನ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ತಿಳಿಸಿದ್ದರಿಂದ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್.ಸಿ. 162, ಶರಣಪ್ಪ ಹೆಚ್.ಸಿ. 164, ಗಜೇಂದ್ರ ಪಿ.ಸಿ.313, ದೇವರಾಜ ಪಿ.ಸಿ.282, ಶಿವಣ್ಣ ಗೌಡ ಪಿ.ಸಿ.141 ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ  ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಪಂಚರಂತ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 13-20  ಗಂಟೆಗೆ ಹೊರಟು ಶಹಾಪೂರ ನಗರ ಪಾಲ್ಕಮ್ಮನ ಗುಡಿಯ ಮುಂದೆ ಮದ್ಯಾಹ್ನ 13-25 ಗಂಟೆಗೆ ಹೋಗಿ ಅಂಗಡಿಗಳ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಪಾಲ್ಕಮ್ಮ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿ ಕೊಂಡು ಮದ್ಯಾಹ್ನ 13-30 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ  ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶಾಬೀರ್ ತಂದೆ ಜಾಫರ್ ವನದುರ್ಗ ವ|| 35 ವರ್ಷ ಉ|| ಗೌಂಡಿಕೆಲಸ ಜಾ|| ಮುಸ್ಲಿಂ ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 1040=00 ರೂಪಾಯಿ, ಮತ್ತು  ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 13-30 ಗಂಟೆಯಿಂದ 14-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಮದ್ಯಾಹ್ನ 14-40 ಗಂಟೆಗೆ ಬಂದು ವರದಿ ತಯ್ಯಾರಿಸಿ 15-00  ಗಂಟೆಗೆ ಮುಂದಿನ  ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 15-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 406/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 248/2017 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 26/10/2017 ರಂದು 3-30 ಪಿ.ಎಮ್ ಕ್ಕೆ ಖಾನಳ್ಳಿ ಗ್ರಾಮದಲ್ಲಿ ಆರೋಪಿತನು ತನ್ನ ಕಿರಾಣಿ ಅಂಗಡಿಯಲ್ಲಿ  1919/- ರೂಪಾಯಿ ಕಿಮ್ಮತ್ತಿನ 28 ಓಲ್ಡಟವರಿನ 180 ಎಮ್.ಎಲ್. ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಅನದೀಕ್ರತವಾಗಿ ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿದ್ದು ಇರುತ್ತದೆ.         

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ 32, 34 ಕೆ.ಇ. ಆ್ಯಕ್ಟ ;- ದಿನಾಂಕ 26/10/2017 ರಂದು 5-00 ಪಿ.ಎಮ್ ಕ್ಕೆ ಖಾನಳ್ಳಿ ಗ್ರಾಮದಲ್ಲಿ ಆರೋಪಿತನು ತನ್ನ ಕಿರಾಣಿ ಅಂಗಡಿಯಲ್ಲಿ 1904/- ರೂಪಾಯಿ ಕಿಮ್ಮತ್ತಿನ 28 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ಮಧ್ಯದ ಬಾಟಲಿಗಳು ಅನದೀಕ್ರತವಾಗಿ ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿದ್ದು ಇರುತ್ತದೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 258/2017 ಕಲಂ: 78() ಕೆ.ಪಿ. ಆಕ್ಟ್ ;- ದಿನಾಂಕ 26.10.2017 ರಂದು ಸಂಜೆ 5-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ ಸಾರಾಂಶವೆನೆಂದರೆ ಕಾಲಂ: 07 ರಲ್ಲಿಯ ಆರೋಪಿತನು ಕಾಲಂ: 05 ರಲ್ಲಿಯ ಸ್ಥಳದಲ್ಲಿ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಜನರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ  ಬಂದ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಸಂಜೆ 4-30 ಗಂಟೆಗೆ ದಾಳಿ ಮಾಡಿ ಆತನ ವಶದಲ್ಲಿದ್ದ 540/- ರೂ ನಗದು ಹಣ, ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಹಾಗೂ ಒಂದು ಬಾಲ್ ಪೆನ್ ಜಪ್ತಿ ಪಡಿಸಿಕೊಂಡು ನಂತರ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 258/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ ;- ದಿನಾಂಕ-26-10-2017 ರಂದು 07-10 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು ಸ್ಟೇಶನ ಸೈದಾಪೂರದಲ್ಲಿ ಸಿಂದಿ ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತನನ್ನು ಮತ್ತು ಸಿಂದಿ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-185/2017 ಕಲಂ 32,34 ಕೆ.ಇ ಯಾಕ್ಟ್ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 186/2017 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ;- ದಿನಾಂಕ-26-10-2017 ರಂದು 08-30 ಪಿ.ಎಮ್ ಕ್ಕೆ ಮಾನ್ಯ ಸಾಯಿಬಣ್ಣ ಎ.ಎಸ್.,ಐ ಸಾಹೇಬರು ಸ್ಟೇಶನ ಸೈದಾಪೂರದಲ್ಲಿ ಸಿಂದಿ ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತನನ್ನು ಮತ್ತು ಸಿಂದಿ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-186/2017 ಕಲಂ 32,34 ಕೆ.ಇ ಯಾಕ್ಟ್ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ 279,  337 ಐಪಿಸಿ ;- ದಿನಾಂಕ 25/10/2017 ರಂದು ರಾತ್ರಿ 8 ಪಿ.ಎಂ. ಸುಮಾರಿಗೆ ಫಿಯರ್ಾದಿಯು ಆರೋಪಿತನ ಜೀಪ್ ನಂಬರ ಕೆಎ-42, 6912 ನೆದ್ದರಲ್ಲಿ ಯಾದಗಿರಿಯಿಂದ ಬಂದಳ್ಳಿಗೆ ಹೊರಟಿದ್ದಾಗ ಮಾರ್ಗ ಮದ್ಯೆ ಬಂದಳ್ಳಿ ಗ್ರಾಮದ ಸಮೀಪ ಬರುವ ಬಿಸಿಎಮ್ ವಸತಿ ನಿಲಯದ ಮುಂದಿನ ಮುಖ್ಯ ರಸ್ತೆಯ ಮೇಲೆ ಜೀಪ್ ಚಾಲಕನಾದ ತಿಮ್ಮಯ್ಯ ಈತನು ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಜೀಪ್ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಬದಿಗೆ ಪಲ್ಟಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಎಡಕಿವಿಗೆ ರಕ್ತಗಾಯ, ಎಡ ಮೆಲಕಿಗೆ, ಬಲಭುಜಕ್ಕೆ, ಬೆನ್ನಿಗೆ ಗುಪ್ತಗಾಯವಾಗಿರುತ್ತದೆ. ಚಾಲಕ ತಿಮ್ಮಯ್ಯ ಈತನಿಗೆ ಯಾವುದೇ ಗಾಯವಾಗಿರುವುದಿಲ್ಲ. ಸದರಿ ಅಪಘಾತದಲ್ಲಿ ಜೀಪ್ನ ಬಿಡಿ-ಭಾಗಗಳು ಕೂಡ ಲುಕ್ಸಾನ ಆಗಿದ್ದರ ಬ್ಗಗೆ ಫಿಯರ್ಾದಿ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 145/2017 ಕಲಂ: 32,34 ಕೆ.ಇ ಎಕ್ಟ್ 1965 ;- ದಿನಾಂಕ: 26/10/2017 ರಂದು 6-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 26/10/2017 ರಂದು ಸಾಯಂಕಾಲ 4 ಪಿಎಮ್ ಕ್ಕೆ ನಾನು ಮತ್ತು ಗಂಗಾಧರ ಪಾಟಿಲ್ ಎ.ಎಸ್.ಐ, ಪ್ರಕಾಶ ಹೆಚ್.ಸಿ 18, ಶೇಖ್ ಖುಷರ್ಿದ ಹೆಚ್.ಸಿ 72 ಎಲ್ಲರೂ ಠಾಣೆಯಲ್ಲಿದ್ದಾಗ ನಾಯ್ಕಲ್ ಗ್ರಾಮದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಮತ್ತು ಕ್ವಾಟರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ಬಾತ್ಮಿ ಬಂದ ವಿಷಯ ತಿಳಿಸಿ, ಅವನ ಮೇಲೆ ದಾಳಿ ಮಾಡಿದಾಗ ಸಹಕರಿಸಿ, ಜಪ್ತಿ ಪಂಚನಾಮೆ ಬರೆಸಿಕೊಡಲು ಕೇಳಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 4-30 ಪಿಎಮ್ ಕ್ಕೆ ನಾಯ್ಕಲ್ ಗ್ರಾಮದ ಹೊರಗಡೆ ಹೋಗಿ ಗುಡ್ಡದ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಸ್ವಲ್ಪ ಮುಂದೆ ಬಂದು ಒಂದು ಕಲ್ಲು ಗುಂಡಿನ ಮರೆಯಲ್ಲಿ ನಿಂತು ನೋಡಲಾಗಿ ಒಂದು ಪಾನ ಡಬ್ಬಾದ ಮುಂದುಗಡೆ ಖಾಲಿ ಜಾಗದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 150 ರೂ. ಗೆ ಒಂದು ತಣ್ಣನೆ ಬೀಯರ್, 40 ರೂ. ಗೆ ಒಂದು ಪೌಚ ಬ್ರಾಂಡಿ ಸೆರಿ ಇದೆ ಬನ್ನಿರಿ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅವನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಭಾಗಪ್ಪ ತಾಯಿ ಮರೆಮ್ಮ ಭಂಡಾರಿ, ವ:45, ಜಾ:ಹೊಲೆಯ (ಎಸ್.ಸಿ), ಉ:ಕೂಲಿ ಸಾ:ನಾಯ್ಕಲ್ ತಾ:ಶಹಾಪೂರ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ ಕಿಂಗಫಿಶಯರ ಬೀಯರ 20 ಬಾಟಲಿಗಳು ಮತ್ತು ಓರಿಜಿನಲ್ ಚಾಯ್ಸ್ 90 ಎಮ್.ಎಲ್ ದ 21 ಪೌಚುಗಳು ಇದ್ದವು, ಸದರಿಯವುಗಳಲ್ಲಿಂದ ರಸಾಯನಿಕ ಪರೀಕ್ಷೆ ಕುರಿತು ಒಂದು 750 ಎಮ್.ಎಲ್ ದ ಕಿಂಗಫಿಶಯರ ಬಿಯರ ಮತ್ತು ಒಂದು 90 ಎಮ್.ಎಲ್ ಓರಿಜಿನಲ್ ಚಾಯ್ಸ್ ಪೌಚನ್ನು ಪ್ರತ್ಯೇಕವಾಗಿ ಪಡೆದುಕೊಂಡು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿ ಪಡಿಸಿಕೊಂಡು, ಉಳಿದ ಎಲ್ಲಾ ಬಿಯರ ಬಾಟಲಿಗಳು ಹಾಗೂ ಓರಿಜಿನಲ್ ಚಾಯ್ಸ ಪೌಚುಗಳನ್ನು ಕೂಡ ಕೇಸಿನ ಮುಂದಿನ ಪುರವೆ ಕುರಿತು ತಾಬಕ್ಕೆ ಪಡೆದುಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2017 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ 78[3] ಕೆಪಿ ಯ್ಯಾಕ್ಟ ;- ದಿನಾಂಕ 26/10/2017 ರಂದು 5-25 ಪಿಎಮ್ ಕ್ಕೆ ಮುಡಬೂಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ  ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ  ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 690=00, 2) 1 ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5-30 ಪಿಎಮ್ ದಿಂದ 6-30 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 7-00  ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7-45 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 102/2017 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 297/2017 ಕಲಂಃ  302, 304(ಬಿ) ಸಂ. 34 ಐಪಿಸಿ ಮತ್ತು 3, 4 ಡಿ.ಪಿ ಆಕ್ಟ್ ;- ದಿನಾಂಕಃ 26/10/2017 ರಂದು 1-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಚಂದ್ರಶೇಖರ ತಂದೆ ಭೀಮರಾಯ ಗೂಗಲ್ ಸಾ: ಕಿರದಳ್ಳಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನನ್ನ ಹಿರಿಯ ಮಗಳಾದ ಮಲ್ಲಮ್ಮ @ ಪುಷ್ಪಾಳನ್ನು ದಿನಾಂಕಃ 15/03/2017 ರಂದು ಸುರಪೂರ ತಾಲೂಕಿನ ಬಾಚಿಮಟ್ಟಿ ಗ್ರಾಮದ ಈರಣ್ಣ ತಂದೆ ತಿರುಪತಿಗೌಡ ಹುಲಿಗೇರ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿರುತ್ತೇವೆ. ಮದುವೆ ಸಮಯದಲ್ಲಿ ವರದಕ್ಷಿಣೆ ಅಂತಾ 20 ತೊಲೆ ಬಂಗಾರ, 5 ಲಕ್ಷ ರೂಪಾಯಿ ಹಣ ಹಾಗು 3 ಲಕ್ಷ ರೂಪಾಯಿ ಬೆಲೆಬಾಳುವ ಬಾಂಡೆಸಾಮಾನುಗಳನ್ನು ವರನ ಮನೆಯವರಿಗೆ ಕೊಟ್ಟಿರುತ್ತೇವೆ. ಮದುವೆ ನಂತರ ನಮ್ಮ ಮಗಳು ಸುಮಾರು ಒಂದು ತಿಂಗಳು ತನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರೀಕ ಜೀವನ ನಡೆಸಿದ್ದು, ತದನಂತರ ಆಕೆಯ ಗಂಡನಾದ 1) ಈರಣ್ಣ ತಂದೆ ತಿರುಪತಿಗೌಡ ಹುಲಿಗೇರ 2) ಅತ್ತೆ ಲಕ್ಷ್ಮೀಬಾಯಿ ಗಂಡ ತಿರುಪತಿಗೌಡ ಹುಲಿಗೇರ 3) ಮಾವ ತಿರುಪತಿಗೌಡ ಹುಲಿಗೇರ ಮತ್ತು ಅವರ ಸಂಬಂಧಿಯಾದ 4) ಸಿದ್ದಣ್ಣ ಇವರು ನನ್ನ ಮಗಳಿಗೆ ದಿನನಿತ್ಯ ವರದಕ್ಷಿಣೆ ವಿಷಯದಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕಳ ನೀಡಲು ಪ್ರಾರಂಭಿಸಿದ್ದು, ಆಗ ನನ್ನ ಮಗಳು ತವರು ಮನೆಗೆ ಬಂದು ತಿಳಿಸಿದಾಗ ನಾವು ನಿಮ್ಮ ಮನೆಗೆ ಬಂದು ನಿನ್ನ ಗಂಡ, ಅತ್ತೆ-ಮಾವನವರಿಗೆ ಹೇಳುತ್ತೇವೆ ಅಂತಾ ಸಮಾಧಾನ ಪಡಿಸಿ ಕಳಿಸಿದ್ದೇವು. ನಂತರ ನಾನು ನಮ್ಮೂರಿನ ಹಿರಿಯರಾದ ಅಮೀನರೆಡ್ಡಿಗೌಡ, ಹಣಮಂತ್ರಾಯ ನಗನೂರ ಇವರೊಂದಿಗೆ ಬಾಚಿಮಟ್ಟಿ ಗ್ರಾಮಕ್ಕೆ ಹೋಗಿ ನನ್ನ ಅಳಿಯ ಹಾಗು ಆತನ ತಂದೆ-ತಾಯಿಯವರಿಗೆ ಭೇಟಿಮಾಡಿ ಅವರಿಗೆ ನಮ್ಮ ಮಗಳಿಗೆ ಸರಿಯಾಗಿ ನಡೆಸಿಕೊಳ್ಳಿ, ನೀವು ಕೇಳಿದ 5 ಲಕ್ಷ ರೂಪಾಯಿಯನ್ನು ನನಗೆ ಕೊಡಲು ಆಗುವದಿಲ, ಈಗ್ಗೆ ಒಂದು ತಿಂಗಳ ಹಿಂದೆಯೇ ಮದುವೆ ಸಮಯದಲ್ಲಿ ಸಾಕಷ್ಟು ಹಣ, ಬಂಗಾರ ಕೊಟ್ಟಿರುತ್ತೇವೆ ಅಂತಾ ಹೇಳಿದಾಗ, ಅವರು ಹಾಗಿದ್ದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗು ಅಂತಾ ಹೆದರಿಸಿದಾಗ ನನ್ನೊಂದಿಗೆ ಬಂದ ಹಿರಿಯರು ನನ್ನ ಬೀಗರಿಗೆ ಇನ್ನು 15-20 ದಿನಗಳಲ್ಲಿ 2 ಲಕ್ಷ ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಸಮಾಧಾನಪಡಿಸಿ  ನಂತರ 2 ಲಕ್ಷ ರೂಪಾಯಿ ಮುಟ್ಟಿಸಿದಾಗ, ಇನ್ನುಳಿದ 3 ಲಕ್ಷ ರೂಪಾಯಿಗಳನ್ನು ಬೇಗ ಕೊಡುವಂತೆ ಹೇಳಿ ಕಳಿಸಿದ್ದರು. ಆ ಬಳಿಕ ನನ್ನ ಮಗಳೊಂದಿಗೆ ಒಂದು ತಿಂಗಳು ಚೆನ್ನಾಗಿ ವೈವಾಹಿಕ ಜೀವನ ನಡೆಸಿದ್ದು, ಮತ್ತೆ ತಿಂಗಳಾದ ಬಳಿಕ 3 ಲಕ್ಷ ರೂಪಾಯಿ ಹಣ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕಳ ನೀಡಿರುತ್ತಾರೆ. ಆದ್ದರಿಂದ ನಾನು ಇನ್ನೇನು ಡಿಸೆಂಬರ ತಿಂಗಳಲ್ಲಿ ಫಸಲು ಬರುತ್ತದೆ ಆಗ ಕೊಡುತ್ತೇನೆ ಅಂತಾ ಹೇಳಿ ನನ್ನ ತಾಯಿಯಾದ ತಿಪ್ಪಮ್ಮ ಇವಳನ್ನು ಬಾಚಿಮಟ್ಟಿ ಗ್ರಾಮಕ್ಕೆ ತಿಂಗಳ ಹಿಂದೆಯೇ ಕಳಿಸಿಕೊಟ್ಟಿದ್ದೇನು. ನಂತರ ನಿನ್ನೆ ದಿ: 25/10/2017 ರಂದು ಬಾಚಿಮಟ್ಟಿ ಗ್ರಾಮದಲ್ಲಿ ನನ್ನ ಮಗಳಿಗೆ ನನ್ನ ಅಳಿಯ ಹಾಗು ಆಕೆಯ ಅತ್ತೆ-ಮಾವ ಮತ್ತು ಅವರ ಸಂಬಂಧಿ ಸಿದ್ದಣ್ಣ ಎಲ್ಲರೂ ವರದಕ್ಷಿಣೆ ಸಂಬಂಧ ಕಿರುಕಳ ನೀಡಿ ಹೊಡೆಬಡೆ ಮಾಡಿರುವದಲ್ಲದೇ, ಇಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅವರೆಲ್ಲರೂ ಕೂಡಿ ನನ್ನ ಮಗಳ ಕುತ್ತಿಗೆಯನ್ನು ಒತ್ತಿ ಹಿಡಿದು ಹಿಚುಕಿಸಿ ಹೊತ್ತುಕೊಂಡು ಹೋಗಿ ಬಾಯಿಯಲ್ಲಿ ಹಾಕಿ ಕೊಲೆ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 297/2017 ಕಲಂ: 302 304(ಬಿ), ಸಂಗಡ 34 ಐಪಿಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!