Yadgir District Reported Crimes Updated on 16-10-2017

By blogger on ಸೋಮವಾರ, ಅಕ್ಟೋಬರ್ 16, 2017


Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ 147,148,326,307,504  ಸಹಿತ 149 ಐಪಿಸಿ;- ದಿನಾಂಕ-15-10-2017 ರಂದು ರಾತ್ರಿ 12-30 ಗಂಟೆಗೆ ನಮ್ಮ ಠಾಣೆಯ ಹೆಚ್,ಸಿ-95 ರವರು ರಾಯಚೂರ ರೀಮ್ಸ ಆಸ್ಪತ್ರೆ ರಾಯಚೂರ ದಿಂದ ಗಾಯಾಳುವಾದ ತಾಯಪ್ಪ ತಂದೆ ನರಸಿಂಹಲು ಇತನ ತಂದೆಯಾದ ನರಸಿಂಹಲು ತಂದೆ ನಾಗಪ್ಪ ಪಸಲೊರ ಸಾ|| ಅಜಲಾಪೂರ ಇವರ ಹೇಳಿಕೆ ಪಡೆದುಕೊಂಡು ಬಂದ ಸಾರಂಶವೆನೆಂದರೆ ಇಂದು ನಾನು ನನ್ನ ಮಗ ತಾಯಪ್ಪ ಮತ್ತು ನಮ್ಮ ಅಣ್ಣನ ಮಗ ವಿಶ್ವನಾಥ 3 ಜನರು ಕೂಡಿ ಹೊಲದ ಕೆಲಸಕ್ಕೆ ಹೋದಾಗ ಸುಮಾರು 4 ಪಿಎಮ್ ಕ್ಕೆ ನನ್ನ ಮಗ ಎತ್ತುಗಳಿಗೆ ಮೇವು ಮಾಡುವ ಕಾಲಕ್ಕೆ ನಮ್ಮ ಹೊಲದಲ್ಲಿ ಆರೋಪಿತರು ಬಂದು ನನ್ನ ಮಗನಿಗೆ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಕೊಯದು ಹೋಗಿರುತಾರೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-180/2017 ಕಲಂ 147,148,326,307,504,ಸಂಗಡ 149 ಐಪಿಸಿ ನೆದ್ದರಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 256/2017 ಕಲಂ: 379 ಐ.ಪಿ.ಸಿ;- ದಿನಾಂಕ 15.10.2017 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪಿರ್ಯಾಧಿ ವಿಶ್ರಾಂತಿಯಲ್ಲಿದ್ದಾಗ ಕೊಂಕಲ ಕಡೆಯಿಂದ ಗುರುಮಠಕಲ ಕಡೆಗೆ ಒಬ್ಬ ವ್ಯಕ್ತಿ ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಬಗ್ಗೆ  ಖಚಿತ ಭಾತ್ಮೀ ಬಂದ ಮೇರೆಗೆ ಠಾಣೆಗೆ ಬಂದು ಸಿಬ್ಬಂದಿಯನ್ನು ಮತ್ತು ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ದಾಳಿಯ ಬಗ್ಗೆ ವಿವರಸಿ ಸಮಯ ಬೆಳಿಗ್ಗೆ 5.30 ಎ.ಎಂ ಕ್ಕೆ ಠಾಣೆಯಿಂದ ಬೋರಬಂಡ ಗ್ರಾಮದ ಕಡೆಗೆ ಹೊರಟು ಸಮಯ 5.45 ಎ.ಎಂಕ್ಕೆ ಬೂದುರ ಕ್ರಾಸನಲ್ಲಿ ಬೋರಬಂಡ ಕಡೆಯಿಂದ ಗುರುಮಠಕಲ ಕಡೆಗೆ ಒಂದು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ಜೀಪಿನಿಂದ ಕೆಳಗೆ ಇಳಿದು ನೋಡಲು ಸದರಿ ಟ್ರ್ಯಾಕ್ಟರ ಚಾಲಕ ಪಿರ್ಯಾಧಿ ಮತ್ತು ಸಿಬ್ಬಂದಿಯನ್ನು ನೋಡಿ ತನ್ನ ಟ್ರ್ಯಾಕ್ಟರನ್ನು 100-150 ಮೀಟರ ಅಂತರ ದೂರದಲ್ಲಿ ನಿಲ್ಲಿಸಿ ಓಡಿ ಹೋಗಿದ್ದು ಆತನು ಬೆನ್ನು ಹತ್ತಿ ಹಿಡಿಯಲು ಯತ್ನಿಸಿದರು ಸಹ ಸಿಕ್ಕಿರುವುದಿಲ್ಲ. ಸದರಿ  ಟ್ರ್ಯಾಕ್ಟರ ಇಂಜೀನ್ ನಂ. ಎಪಿ-26-ಎಎ-9329 ಟ್ರ್ಯಾಲಿ ನಂ. ಎಪಿ-37-ಎವಾಯ್-6270 ಅಂತಾ ಇದ್ದು, ಚಾಲಕನು ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬಿದ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತನ್ನ ಸ್ವಂತ ಲಾಭಗೋಸ್ಕರ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಅಪರಾಧ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 396/2017.ಕಲಂ 279, 338 ಐ.ಪಿ.ಸಿ.;- ದಿನಾಂಕ: 15/10/2017 ರಂದು 8.30 ಪಿ.ಎಂಕ್ಕೆ ಫಿರ್ಯಾದಿ ಶ್ರೀ ಶರಣಪ್ಪ ತಂ/ ಚಂದ್ರಾಮಪ್ಪ ಶಹಾಪುರ ವ|| 42 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೇವಿನಹಳ್ಳಿ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 15/10/2017 ರಂದು ಬೆಳಿಗ್ಗೆ 6.00 ಗಂಟೆಗೆ ನಾನು ಮತ್ತು ನನ್ನ ಅಣ್ಣತಮಕೀಯ ಕುಮಾರ ತಂ/ ದೇವಿಂದ್ರಪ್ಪ ಶಹಾಪುರ, ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ಮತ್ತು ನಮ್ಮ ಓಣಿಯ ಶೇಖರ ತಂ/ ಬಸಣ್ಣ ದೊಡ್ಡಸಗರ 4 ಜನರು ಕೂಡಿಕೊಂಡು ಕುಮಾರ ಈತನ ಕಿರಾಣಿ ಅಂಗಡಿ ಬಾಕಿ ವಸೂಲ ಮಾಡಲು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮತ್ತು ಶೇಖರ ಇಬ್ಬರು ಒಂದು ಮೋಟರ ಸೈಕಲದಲ್ಲಿ ಹಾಗೂ ಇನ್ನೊಂದು ಮೋಟರ ಸೈಕಲದಲ್ಲಿ ತಿಪ್ಪಣ್ಣ ಮತ್ತು ಕುಮಾರ ಇಬ್ಬರು ಕುಳಿತುಕೊಂಡಿದ್ದರು. ತಿಪ್ಪಣ್ಣನು ಮೋಟರ ಸೈಕಲ ನಡೆಸುತ್ತಿದ್ದನು. 8.30 ಎ.ಎಂ ಸುಮಾರಿಗೆ ಕನ್ಯಾಕೊಳ್ಳೂರ-ಹಳಿಸಗರ ಮೇನ್ ರೋಡ್ನಲ್ಲಿರುವ ಫಾರೆಸ್ಟ ಆಫೀಸ್ ದಾಟಿ ಮುಂದೆ ಇರುವ ಬ್ರಿಜ್ ಹತ್ತಿರ ಹೊರಟಿದ್ದಾಗ ತಿಪ್ಪಣ್ಣನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ರೋಡಿನಲ್ಲಿ ಒಂದು ನಾಯಿ ಅಡ್ಡ ಬಂದಿದ್ದರಿಂದ ಮೋಟರ ಸೈಕಲ್ ನಿಯಂತ್ರಣ ತಪ್ಪಿದ್ದರಿಂದ ಒಮ್ಮೆಲೆ ಮೋಟರ ಸೈಕಲನ್ನು ರೋಡಿನ ಎಡ ಸೈಡಿಗೆ ಕಟ್ ಮಾಡಿದನು ಆಗ ಮೋಟರ ಸೈಕಲ್ ಸ್ಕಿಡ್ಡಾಗಿ ರೋಡಿನ ಎಡ ಸೈಡಿನಲ್ಲಿ ಮೋಟರ ಸೈಕಲ್ ಬಿದ್ದಿತು. ಹಿಂದೆ ಬರುತ್ತಿದ್ದ ನಾನು ಮತ್ತು ಶೇಖರ ಇಬ್ಬರು ಹತ್ತಿರ ಹೋಗಿ ನೋಡಲಾಗಿ ಮೊಟರ ಸೈಕಲ್ ಹಿಂದೆ ಕುಳಿತಿದ್ದ ಕುಮಾರನಿಗೆ ಎಡಗಣ್ಣಿನ ಹತ್ತಿರ ತರಚಿದ ಗಾಯ, ಎಡ ಬುಜಕ್ಕೆ ಭಾರೀ ಒಳಪೆಟ್ಟಾಗಿತ್ತು, ಮೋಟರ ಸೈಕಲ್ ನಡೆಸುತ್ತಿದ್ದ ತಿಪ್ಪಣ್ಣನಿಗೆ ಯಾವುದೇ ಗಾಯವಗೈರೆ ಆಗಿರಲಿಲ್ಲ. ತಿಪ್ಪಣ್ಣನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆಎ-33 ಯು-9744 ಅಂತಾ ಇರುತ್ತದೆ.
    ನಂತರ ಗಾಯಾಳು ಕುಮಾರನಿಗೆ ಉಪಚಾರ ಕುರಿತು ಅದೆ ಮೋಟರ ಸೈಕಲದಲ್ಲಿ ಕೂಡಿಸಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಮಾರನಿಗೆ ಕಲಬುಗರ್ಿಯ ಕಾಮರಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು 8.30 ಪಿ.ಎಂ.ಕ್ಕೆ ಠಾಣೆಗೆ ತಡವಾಗಿ ಬಂದಿರುತ್ತೇನೆ.
 ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಮೋಟರ ಸೈಕಲ್ ನಂ. ಕೆಎ-33 ಯು-9744 ನೇದ್ದರ ಚಾಲಕ ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ವ|| 38 ವರ್ಷ ಸಾ|| ಬೇವಿನಳ್ಳಿ ತಾ|| ಶಹಾಪುರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 396/2017 ಕಲಂ 279. 338 ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!