Yadgir District Reported Crimes Updated on 11-10-2017

By blogger on ಬುಧವಾರ, ಅಕ್ಟೋಬರ್ 11, 2017


Yadgir District Reported Crimes

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ: 109, 114, 120(ಬಿ), 420, 354, 494, 504, 506 ಸಂಗಡ 34 ಐಪಿಸಿ ;- ದಿನಾಂಕ: 10/10/2017 ರಂದು 7-15 ಪಿಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಠಾಣೆಯ ಶ್ರೀ ವಿಠೋಬಾ ಹೆಚ್.ಸಿ-91 ರವರು ಮಾನ್ಯ ಹೆಚ್ಚುವರಿ ಜೆ.ಎಮ್.ಎಪ್.ಸಿ ನ್ಯಾಯಾಲಯದಿಂದ ಖಾಸಗಿ ಪಿರ್ಯಾದಿ ಸಂಖ್ಯೆ: 18/2017 ನೇದ್ದನ್ನು ಹಾಜರ್ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಆರೋಪಿ ನಂ: 01 ನೇದ್ದವನೊಂದಿಗೆ ಮದುವೆಯಾಗಿದ್ದು ಆದರೆ ಆರೋಪಿ ನಂ: 01 ನೇದ್ದವನು ಈ ಮೊದಲೆ ರೇಣಮ್ಮ ಎಂಬುವಳೊಂದಿಗೆ ಮದುವೆಯಾಗಿದ್ದು ನನಗೆ ಹೇಳದೇ ಮೋಸದಿಂದ ಮದುವೆ ಮಾಡಿಕೊಂಡಿದ್ದು ಅವಳಿಗೆ ತೊಂದರೆ ಕೊಟ್ಟಂತೆ ನನಗೂ ತೊಂದರೆ ಕೊಡುತ್ತಿದ್ದು ಅದಕ್ಕೆ ಅವರ ಮನೆಯವರು ಪ್ರಚೋದನೆ ಮಾಡಿ ತನಗೆ ಅವಾಚ್ಯ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಾರಾಂಶದ ಅಜರ್ಿಯ ಜೊತೆಗೆ ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತ ಖಾಸಗಿ ಪಿರ್ಯಾಧಿ ವಸೂಲಾಗಿದ್ದರ ಮೇರೆಗೆ ಠಾಣೆ ಗುನ್ನೆ ನಂ: 160/2017 ಕಲಂ, 109, 114, 120(ಬಿ), 420, 354, 494, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ 283 ಐಪಿಸಿ ಮತ್ತು  190(ಎ) 196 ಐಎಂವಿ ಆ್ಯಕ್ಟ್;-ದಿನಾಂಕ 10/10/2017 ರಂದು 5 ಪಿ.ಎಂ.ಕ್ಕೆ  ಶ್ರೀ ಜಗದೀಶ ಎಚ್.ಸಿ-144 ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಮಾನ್ಯರೆ ನಾನು ಜಗದೀಶ ಎಚ್.ಸಿ-144 ಸಂಚಾರಿ ಪೊಲೀಸ ಠಾಣೆ ಆಗಿದ್ದು ತಮ್ಮಲ್ಲಿ ಮೂಲಕ ವರದಿ ಸಲ್ಲಿಸುವುದೇನೆಂದರೆ ಇಂದು ದಿನಾಂಕ: 10/10/2017 ರಂದು ಮದ್ಯಾಹ್ನ 4-30 ಪಿ.ಎಂ. ಸುಮಾರಿಗೆ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯ ಸುಭಾಷ್ ಸರ್ಕಲ್ ಹತ್ತಿರ ನಾನು ಮಾನ್ಯ ಪಿಐ ಸಾಹೇಬರ ಆದೇಶದಂತೆ  ಕರ್ತವ್ಯದಲ್ಲಿರುವಾಗ  ಯಾದಗಿರ ಸುಭಾಸ  ಚೌಕ ಹತ್ತಿರ ಯಾದಗಿರಿ-ಚಿತ್ತಾಪುರ ಮುಖ್ಯ ರಸ್ತೆಯ ಮೇಲೆ  ಒಂದು ಟಾಟಾ ಎಸಿ ಮ್ಯಾಜಿಕ್ ನಂಬರ ವಾಹನ  ನಂಬರ ಕೆಎ-33, -4233 ನೇದ್ದರ ಚಾಲಕನು ಮುಖ್ಯ ರಸ್ತೆಯ ಮೇಲೆ ವಾಹನಗಳ ಸಂಚಾರಕ್ಕೆ ಅಪಾಯಕರವಾದ ರೀತಿಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ತನ್ನ ಟಾಟಾ ಮ್ಯಾಜಿಕ್ ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದನ್ನು ಕಂಡು ಸದರಿ ವಾಹನದ ಚಾಲಕನಿಗೆ ನಾನು ಹೆಸರು, ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಪ್ರಕಾಶ ತಂದೆ ಸಾಬಯ್ಯ ಕಲಾಲ್ ವಯಾ:27 ವರ್ಷ, : ಟಾಟಾ ಮ್ಯಾಜಿಕ್ ವಾಹನ ಕೆಎ-33, -4233 ನೇದ್ದರ ಡ್ರೈವರ ಮತ್ತು ಮಾಲೀಕ ಜಾತಿ:ಕಬ್ಬಲಿಗ ಸಾ:ಯರಗೋಳ  ಅಂತಾ ತಿಳಿಸಿದ್ದು ಇರುತ್ತದೆಸದರಿ ವಾಹನ ಚಾಲಕನ ವಾಹನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲಿಸಲು ವಾಹನದ ಇನ್ಶುರೆನ್ಸ್, ವಾಯು ಮಾಲಿನ್ಯ ಪ್ರಮಾಣ ಪತ್ರ ಇಲ್ಲದಿರುವ ಬಗ್ಗೆ ಗೊತ್ತಾಗಿರುತ್ತದೆ ಮತ್ತು ಸದರಿ ಚಾಲಕನು ತನ್ನ ವಾಹನವನ್ನು ಮುಖ್ಯ ರಸ್ತೆಯ ಮೇಲೆ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಓಡಾಡುವಾಗ ತೊಂದರೆಯಾಗುವಂತೆ ಅಪಾಯಕರವಾದ ರೀತಿಯಲ್ಲಿ ನಿಲ್ಲಿಸಿದ್ದರಿಂದ  ಸದರಿ ವಾಹನವನ್ನು  ಚಾಲಕನ ಸಮೇತ ಠಾಣೆಗೆ ತಂದು  ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿಸಿಕೊಳ್ಳಲಾಗಿದೆ  ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 54/2017 ಕಲಂ 283 ಐಪಿಸಿ ಸಂಗಡ 196, 190(2) ಐಎಂವಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 279,  338  ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 09/10/2017 ರಂದು ರಾತ್ರಿ 11-40 ಪಿ.ಎಂ.ಕ್ಕೆ ಈ ಕೇಸಿನ ಗಾಯಾಳು ಗಣೆಶ @ ಗಣ್ಯಾ ತಂದೆ ಗೋಪಾಲ ಚವ್ಹಾಣ ಈತನು ತನ್ನ ಮೋಟಾರು ಸೈಕಲ್ ನಂ.ಕೆಎ-33, ಎಸ್-8363 ನೆದ್ದನ್ನು ತೆಗೆದುಕೊಂಡು ಪೀಕಲ್ಯಾ ಯಾದಗಿರಿಯಿಂದ ಎಲ್ಹೆರಿ ತಾಂಡಾಕ್ಕೆ ಹೋಗುವಾಗ ಮಾರ್ಗ ಮದ್ಯೆ ಕೆ.ಎಸ್.ಆರ್.ಟಿ.ಸಿ ವಕರ್್ ಶಾಪ್ ಹತ್ತಿರ ಒಬ್ಬ ಆಟೋ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ತನ್ನ ಆಟೋವನ್ನು ಚಲಾಯಿಸಿಕೊಂಡು ಬಂದವನೆ ಮೋಟಾರು ಸೈಕಲ್ಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಗಾಯಾಳು ಗಣೆಶ @ ಗಣ್ಯಾ ಮತ್ತು ಪೀಕಲ್ಯಾ ಇಬ್ಬರು ಮೋಟಾರು ಸೈಕಲ್ ಮೇಲಿಂದ ರಸ್ತೆಯ ಮೇಲೆ ಬಿದ್ದಾಗ ಆಟೋ ಚಾಲಕನು ಹಾಗೆಯೇ ಆಟೋವನ್ನು ನಿಲ್ಲಿಸದೇ ಹಾಗೆ ಆಟೋದೊಂದಿಗೆ ಸ್ಥಳದಿಂದ ಓಡಿ ಹೋಗಿರುತ್ತಾನೆ. ಆಟೋ ನಂಬರ್ ಗೊತ್ತಾಗಿರುವುದಿಲ್ಲ, ಸದರಿ ಅಪಗಾತದಲ್ಲಿ ಪೀಕಲ್ಯಾ ಈತನಿಗೆ ಸಣ್ಣ-ಪುಟ್ಟ ತರಚಿದ ಗಾಯವಾಗಿದ್ದು ಮತ್ತು ಗಣೇಶ @ ಗಣ್ಯಾ ಈತನಿಗೆ  ಬಲಗಾಲಿನ ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದಿದ್ದು ಹಾಗೂ ತಲೆಗೆ , ಮುಖಕ್ಕೆ ಬಾರೀ ಗುಪ್ತಗಾಯ, ತರಚಿದ ರಕ್ತಗಾಯವಾಗಿದ್ದರ ಬಗ್ಗೆ  ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಇಂದು ದಿನಾಂಕ 10/10/2017 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ತಡವಾಗಿ ಠಾಣೆಗೆ ಬಂದು ಫಿಯರ್ಾದಿ ನೀಡಿದ್ದು ಇರುತ್ತದೆ.


ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 253/2017 ಕಲಂ: 323, 324, 504, 506 ಸಂಗಡ 149 ಐಪಿಸಿ;- ದಿನಾಂಕ 09.10.2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾದಿ ತಾವ್ಯ ರಾಠೋಡ ಈತನು ತನ್ನ ಗೆಳೆಯರೊಂದಿಗೆ ತನ್ನ ದೊಡ್ಡಪ್ಪನ ಮನೆಯ ಮುಂದೆ ಮಾತನಾಡುತ್ತ ಕುಳಿತ್ತಿದ್ದಾಗ ದೂರದಲ್ಲಿ 4-5 ಜನರು ನಡೆದುಕೊಂಡು ಹೋಗುತ್ತಿರುವುದನ್ನು ಕಂಡ ತಾವ್ಯನ ಗೆಳೆಯ ರಾಜ ರಾಠೋಡ ಇತನು ದೂರದಲ್ಲಿ ಹೋಗುವ ಜನರು ಯಾರು ಅಂತಾ ನೋಡಿಕೊಂಡು ಬರುವಂತೆ ತಿಳಿಸಿದ್ದರಿಂದ ಪಿರ್ಯಾದಿ ಅಲ್ಲಿಗೆ ಹೋಗಿ ನೋಡಿದ್ದಕ್ಕೆ ಆರೋಪಿತರು ಅವಾಚ್ಯವಾಗಿ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ತಾಂಡಾದಲ್ಲಿ ಹಿರಿಯರೊಂದಿಗೆ ವಿಚಾರಿಸಿ ಇಂದು ದಿನಾಂಕ 10.10.2017 ರಂದು ಸಂಜೆ 6 ಗಂಟೆಗೆ ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 253/2017 ಕಲಂ: 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ 279,337,338 ಐ.ಪಿ.ಸಿ;- ದಿನಾಂಕ:03/10/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಗಾಯಾಳು ನಾಣಿ ತಂದೆ ಕೆ. ಸತ್ಯನಾರಾಯಣ ಈತನು ಇಬ್ರಾಹಿಂಪೂರ ತಾಂಡಾದ ರವಿ ತಂದೆ ಚಂದ್ರುನಾಯಕ ರಾಠೋಡ ಈತನ ಮೋಟರ್ ಸೈಕಲ್ ನಂ:ಕೆಎ-33, ಯು-3005 ನೇದ್ದರ ಮೇಲೆ ಕುಳಿತು ತಮ್ಮ ಹೊಲದ ಕಡೆಗೆ ಶಿರವಾಳ-ಇಬ್ರಾಹಿಂಪೂರ ರೋಡ ಮೇಲೆ ಹೊರಟಾಗ ಅವರ ಎದುರಿನಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣ ತಪ್ಪಿ ರವಿ ಈತನ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಆಗ ಫಿಯರ್ಾದಿ ಸ್ಥಳಕ್ಕೆ ಹೋಗಿ ನೋಡಲಾಗಿ ರವಿ ಈತನ ಬಲಗಾಲ ಮುಂಗಾಲ ಹತ್ತಿರ ಭಾರಿ ರಕ್ತಗಾಯವಾಗಿ ಎಲುಬು ಮುರಿದಂತೆ ಕಂಡು ಬರುತ್ತಿತ್ತು. ನಾಣಿ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದು, ಎಡಗಣ್ಣಿಗೆ ಮತ್ತು ಎಡಗಣ್ಣಿನ ಮೇಲ್ಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಡಿಕ್ಕಿ ಹೊಡೆದು ಅಪಘಾತಪಡಿಸಿದ ಮೋಟರ್ ಸೈಕಲ್ ಹೊಂಡಾ ಯುನಿಕಾರ್ನ ಇದ್ದು ಅದರ ನಂ:ಕೆಎ-32, ಇಪಿ-3112 ಅಂತಾ ಬರೆದಿದ್ದು ಅದರ ಚಾಲಕನ ಹೆಸರು ರವಿ ತಂದೆ ನಾಗಮೂತರ್ಿ ವಿಶ್ವಕರ್ಮ ಸಾ:ಕೊಲ್ಲೂರ ತಾ:ಚಿತ್ತಾಪುರ ಅಂತಾ ಗೊತ್ತಾಗಿದ್ದು ಅವನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ. ಫಿಯರ್ಾದಿಯು ಇಲ್ಲಿಯವರೆಗೆ ಆಸ್ಪತ್ರೆಯಲ್ಲಿದ್ದು ನಾಣಿ ಈತನಿಗೆ ಉಪಚಾರ ಮಾಡಿಸಿ ಇಂದು ಭೀ.ಗುಡಿ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದು ಕಾರಣ ಅಪಘಾತಪಡಿಸಿದ ಮೋಟರ್ ಸೈಕಲ್ ನಂ:ಕೆಎ-32, ಇಪಿ-3112 ನೇದ್ದರ ಚಾಲಕನಾದ ರವಿ ತಂದೆ ನಾಗಮೂತರ್ಿ ವಿಶ್ವಕರ್ಮ ಸಾ:ಕೊಲ್ಲೂರ ತಾ:ಚಿತ್ತಾಪುರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.
 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 285/2017 ಕಲಂ: 78(111) ಕೆ.ಪಿ ಆಕ್ಟ;- ದಿನಾಂಕ:10/10/2017 ರಂದು 12-00 ಪಿ.ಎಮ್.ಕ್ಕೆ ಸಿದ್ದಾಪೂರ-ಕೆಂಬಾವಿ ರಸ್ತೆಯ ಸಿದ್ದಾಪೂರ ಗ್ರಾಮದ ಅಂಬಿಗರ ಚೌಡಯ್ಯನ ಕಟ್ಟೆಯ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನು ನಿಂತು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಜನರಿಗೆ ಕೈಬಿಸಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಫಿಯರ್ಾದಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 1) ನಗದು ಹಣ 1250=00, 2) ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00 3) ಒಂದು ಬಾಲ್ ಪೆನ್ ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ್ ;- ದಿನಾಂಕ:10/10/2017 ರಂದು ಬೆಳಿಗ್ಗೆ 06-30 ಗಂಟೆಗೆ ಪಿಯರ್ಾದಿ ಶ್ರೀ ರಾಮನಗೌಡ ತಂದೆ ಸಂಗನಗೌಡ ಗೌಡರ  ವ:53 ವರ್ಷ ಉ:ಒಕ್ಕಲುತನ ಜಾ:ಹಿಂದೂ ಕುರುಬರ ಸಾ:ಕಮಲದಿನ್ನಿ ತಾ:ಹುನಗುಂದ  ಜಿ:ಬಾಗಲಕೊಟ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖೀತ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶ ವೇನೆಂದರೆ ನನ್ನ ಖಾಸಾ ಅಣ್ಣನಾದ ಶಂಕರಗೌಡ ಅವರ ಮಗನಾದ ಬಸನಗೌಡ ಇವರು ಸುರಪೂರ ತಾಲೂಕಿನ ಉಪ್ಪಲದಿನ್ನಿ ತಾಂಡಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಕರು ಅಂತಾ ಕೆಲಸ ಮಾಡಿಕೊಂಡಿದ್ದು ಅವನು ಉಪ್ಪಲದಿನ್ನಿ ತಾಂಡಾದಲ್ಲಿ ರೂಂ ಮಾಡಿಕೊಂಡು ಇದ್ದು ಅವರದು ಒಂದು ಸೈಕಲ ಮೊಟರ ನಂ: ಕೆ.ಎ-29 ಇ.ಡಿ-2376 ನಂಬರ ಇದ್ದು ಆಗಾಗೆ ಶಾಲೆ ಸೂಟಿ ಇದ್ದಾಗ ಮೋಟರ ಸೈಕಲ್ ಮೇಲೆ ಊರಿಗೆ ಬಂದು ಹೊಗುವುದು ಮಾಡುತ್ತಾನೆ. ಹಿಗಿರುವಾಗ ನಿನ್ನೆ ದಿನಾಂಕ :09/10/2017 ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಣ್ಣನ ಮಗನಾದ ಸಂಗನಗೌಡ ರವರು ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿದ್ದಾಗ ನಮಗೆ ಪರಿಚಯದ ನಾರಾಯಣಪೂರ ಗ್ರಾಮದ ಶಶಿಕಾಂತ ತಂದೆ ಬಸಪ್ಪ ವಣಕಿಹಾಳ ಇವರು ನಮಗೆ ಫೋನ ಮಾಡಿ ತಿಳಿಸಿದ್ದೆನೆಂದರೇ, ನಾನು ನನ್ನ ಕೆಲಸದ ಸಲುವಾಗಿ ಜಾವೂರಿಗೆ ಹೊಗಿ ಮರಳಿ ನಾರಾಯಣಪೂರಿಗೆ ಬರಲು ಲಿಂಗಸ್ಗೂರ-ನಾರಾಯಣಪೂರ ರಸ್ತೆಯ ಮೇಲೆ ನಾರಾಯಣಪೂರ ಡ್ಯಾಂ ಬ್ರಿಡ್ಜ ಹತ್ತಿರ ನನ್ನ ಸೈಕಲ್ ಮೋಟರ ಮೇಲೆ ಹೊಗುತ್ತಿದ್ದಾಗ ನನಗಿಂತಲು ಸ್ವಲ್ಪ ಮುಂದೆ ಇನ್ನೊಂದು ಸೈಕಲ್ ಮೋಟರ ಮೇಲೆ ಒಬ್ಬ ಸವಾರನು ರಾತ್ರಿ 8-30 ಸುಮಾರಿಗೆ ಹೊಗುತ್ತಿದ್ದ ಅದೆ ವೇಳೆಗೆ ಎದುರಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ಬಸ್ಸನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾಡ್ಡಿಯಾಗಿ ನಡೆಸಿಕೊಂಡು ಬಂದವನೆ ನನಗಿಂತಲು ಸ್ವಲ್ಪ ಮುಂದೆ ಇದ್ದ ಮೋಟರ ಸೈಕಲ್ ಸವಾರನಿಗೆ ಡಿಕ್ಕಿ ಪಡಿಸಿದ್ದು ಇದರಿಂದ ಮೋಟರ ಸೈಕಲ್ ಸವಾರನು ಮೋಟರ ಸೈಕಲ್ ಸಮೇತ ಬಿದ್ದಿದ್ದು ನಂತರ ನಾನು ನನ್ನ ಮೋಟರ ಸೈಕಲ್ ನಿಲ್ಲಿಸಿ ಹೊಗಿ ನೊಡಲಾಗಿ ನನಗೆ ಪರಿಚಯದ ನಿಮ್ಮ ಅಣ್ಣನ ಮಗ ಬಸನಗೌಡ ತಂದೆ ಶಂಕರಗೌಡ ಗೌಡರ ರವರು ಇದ್ದು ನೋಡಲಾಗಿ ಬಸನಗೌಡನ ತಲೆಯ ಹಿಂಭಾಗ್ಕಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗಾಲಿನ ಹಿಮ್ಮಡಿಯ ಮೇಲೆ, ಬಲಗಾಲ ಮೋಣಕಾಲ ಕೆಳಗೆ, ಬಲಗೈ ಮಣಿಕಟ್ಟಿನ ಹತ್ತಿರ, ಬಲಗಡೆ ಹಣೆಯ ಮೇಲೆ ಗಾಯಗಳಾಗಿ ಸ್ಥಳದಲ್ಲಿಯೆ ಸತ್ತಿದ್ದು ಬಸನಗೌಡನ ಮೋಟರ ಸೈಕಲ್ಲ ನಂ: ಕೆ.ಎ-29 ಇ.ಡಿ-2376 ಇದ್ದು ಅಪಘಾತ ಪಡಿಸಿದ ಬಸ್ಸ ನಂ: ಕೆ.ಎ.-28 ಎಫ್-1733 ಇದ್ದು ಬಸ್ಸ ಚಾಲಕ ಮತ್ತು ನಿವರ್ಾಹಕರಿಗೆ ಹೆಸರು ವಿಳಾಸ ಕೆಳಿದ್ದು ಚಾಲಕನು ತನ್ನ ಹೆಸರು ತಿಪ್ಪನಗೌಡ ತಂದೆ ಹಣಮಗೌಡ ಗೌಡರ ಮುದ್ದಿಬಿಹಾಳ ಕೆ.ಎಸ್.ಆರ್.ಟಿ.ಸಿ ಡಿಪೋ ಅಂತಾ ಹಾಗೂ ನಿವರ್ಾಹಕನು ತನ್ನ ಹೆಸರು ವಿವೇಕಾನಂದ ತಂದೆ ಶಿವಲಿಂಗಪ್ಪ ಬಿರಾದಾರ ಅಂತಾ ತಿಳಿಸಿ ಅಲ್ಲಿಂದ ಓಡಿ ಹೊಗಿದ್ದು. ಕೂಡಲೆ ನೀವು ಬರಬೇಕು ಅಂತ ತಿಳಿಸಿದ್ದರಿಂದ ನಾನು ಮತ್ತು ಬಸನಗೌಡನ ತಾಯಿ ಶಾತಂಮ್ಮ ಹಾಗೂ ನನ್ನ ಮಕ್ಕಳಾದ ಸಂಗನಗೌಡನ ತಂದೆ ಶೀವನಗೌಡ, ಯಂಕನಗೌಡ ಸಿ ಗೌಡರ ಹಾಗೂ ಸಂಭಂದಿ ಅಣ್ಣನ ಮಗ ಹಣಮಗೌಡ ತಂದೆ ಧೂಳನಗೌಡ ಗೌಡರ ಹಾಗೂ ಇತರರು ಕೂಡಿ ನಮ್ಮ ಅಣ್ಣನನಿ ಮಗನಿಗೆ ಅಪಘಾತವಾದ ಸ್ಥಳಕ್ಕೆ ಬಂದು ನೊಡಲಾಗಿ ಅಫಘಾತ ಸ್ಥಳದಲ್ಲಿ ಬಸನಗೌಡನ ಶವ ಇದ್ದು ಅಫಘಾತ ಪಡಿಸಿದ ಬಸ್ಸ ಮತ್ತು ಅಫಘಾತಕ್ಕಿಡಾದ ನನ್ನ ಮಗನ ಮೋಟರ ಸೈಕಲ್ ಇದ್ದು ಅಲ್ಲಿ ನನಗೆ ಫೋನ ಮಾಡಿದ ಶಶಿಕಾಂತ ವನಕಿಹಾಳ ರವರು ಹಾಗೂ ಇತರರು ಇದ್ದು ನಾವೂ ನನ್ನ ಅಣ್ಣನ ಮಗನಾಗಬೇಕಾದ ಬಸನಗೌಡ ಗೌಡರ ವ:45 ವರ್ಷ ಇವರ ಶವವನ್ನು ನೊಡಲಾಗಿ ಶಶಿಕಾಂತ ರವರು ಫೋನಿನಲ್ಲಿ ತಿಳಿಸಿದಂತೆ ಅರ್ಫಆತದಲ್ಲಿ ಗಾಯಗಳಾಗಿ ಸತ್ತಿದ್ದು. ಈ ಅಫಘಾತವು ಕೆ.ಎಸ್.ಆರ್.ಟಿ.ಸಿ ಬಸ್ಸ ನಂ:- ಕೆ.ಎ.-28 ಎಫ್-1733 ರ ಚಾಲಕ ತಿಪ್ಪನಗೌಡ ತಂದೆ ಹಣಮಗೌಡ ಗೌಡರ ರವರ ನಿರ್ಲಕ್ಷತನದಿಂದಲೆ ಸಂಭವಿಸಿದ್ದು ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ನಂತರ ನಾವೂ ನನ್ನ ಅಣ್ಣನ ಮಗನ ಶವವನ್ನು ಅಫಗಾತ ಸ್ಥದಿಂದ ನಾರಾಯಣಪೂರ ಸರಕಾರಿ ಆಸ್ಪತ್ರೆಗೆ ಒಯ್ದು ಆಸ್ಪತ್ರೆಯಲ್ಲಿ ಹಾಕಿದ್ದು ನಮ್ಮ ಸಂಭಂದಿರರೊಂದಿಗೆ ವಿಚಾರ ಮಾಡಿ ಈದಿವಸ ತಡವಾಗಿ ಬಂದು ದೂರು ಕೊಡುತ್ತಿರುವೆನು ಅಂತಾ ಸಾರಂಶದ ಮೇಲಿಂದ ಠಾಣ್ಣೆ ಗುನ್ನೆ ನಂ:47/2017 ಕಲಂ:279 304 (ಎ) ಸಂಗಡ 187 ಐ.ಎಮ್.ವ್ಹಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಖೆ ಕೈ ಕೊಳ್ಳಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 393/2017 ಕಲಂ 78[3] ಕೆ.ಪಿ ಆಕ್ಟ  ;- ದಿನಾಂಕ 10/10/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸೋಮಲಿಂಗಪ್ಪ   ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಫಕಿರೇಶ್ವರ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 44 ನೇದ್ದರ ಸಿಬ್ಬಂದಿ ಶ್ರೀ ಬಸವರಾಜ ಸಿ.ಪಿ.ಸಿ 180 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 2010=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 393/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!