Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 222/2017 ಕಲಂ: 341, 323, 324, 504, ಸಂ 34 ಐಪಿಸಿ ;- ದಿನಾಂಕ 03/09/2017 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿ ಮತ್ತು ಆತನ ತಂದೆ ಇಬ್ಬರೂ ಕೂಡಿಕೊಂಡು ತಮ್ಮ ಹೊಲದಿಂದ ಮನೆ ಕಡೆಗೆ ಬರುವ ಕುರಿತು ನಡೆದುಕೊಂಡು ಆರೋಪಿತರ ಹೊಲದಿಂದ ಬರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನಿನ್ನೆ ನೀನು ವಿಧ್ಯುತ್ ವಾಯರ ನಿಮ್ಮ ಹೊಲದಿಂದ ತೆಗೆದು ಹಾಕು ಅಂತಾ ಈ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿರುತ್ತಿರಿ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಕಟ್ಟಿಗೆ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಕಾಲಿನಿಂದ ಒದ್ದಿರುವ ಬಗ್ಗೆ ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ. ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 279, 337, 338 ಐಪಿಸಿ;- ದಿನಾಂಕ 04/09/2017 ರಂದು ಬೆಳಿಗ್ಗೆ 11-30 ಎ.ಎಂ.ಕ್ಕೆ ಫಿಯರ್ಾದಿ ಮತ್ತು ತನ್ನ ಸಂಗಡ ಗಾಯಾಳು ರುಕ್ಮದ್ದೀನ್ ಕೂಡಿಕೊಂಡು ಮೊಟಾರು ಸೈಕಲ್ ನಂ.ಕೆಎ-33, ಎಲ್-4209 ನೆದ್ದರ ಮೇಲೆ ತಮ್ಮ ಕೆಲಸ ಮುಗಿಸಿಕೊಂಡು ಗಾಂಧಿ ಚೌಕ್ನಿಂದ ತಮ್ಮ ಮನೆಗೆ ಬರುವಾಗ ಮಾರ್ಗ ಮದ್ಯೆ ಯಾದಗಿರಿ ಕೋಟರ್ು ಹತ್ತಿರ ಮುಖ್ಯ ರಸ್ತೆಯ ಮೇಲೆ ಫಿಯರ್ಾದಿಯ ಮುಂದೆ ಹೊರಟಿದ್ದ ಕಾರ್ ನಂ.ಕೆಎ-33, ಎಮ್-1714 ನೆದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಒಮ್ಮೊಲೆ ಬ್ರೆಕ್ ಹಾಕಿದಾಗ ಮೋ.ಸೈಕಲ್ ಕಾರ್ಗೆ ಡಿಕ್ಕಿಯಾಗಿ ಅಪಗಾತವಾಗಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಬಲಗಾಲಿನ ಪಾದದ ಮೇಲೆ ಬಾರೀ ರಕ್ತಗಾಯವಾಗಿ ಮುರಿದಿದ್ದು ಹಾಗು ಮುಖದ ಮೇಲೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮತ್ತು ಮೋ ಸೈಕಲ್ ಸವಾರನಿಗೆ ಟೊಂಕಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2017 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using