Yadgir District Reported Crimes Updated on 28-09-2017

By blogger on ಗುರುವಾರ, ಸೆಪ್ಟೆಂಬರ್ 28, 2017


Yadgir District Reported Crimes

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್ ;- ದಿನಾಂಕ:27/09/2017 ರಂದು ರಾತ್ರಿ 12.15 ಎಎಮ್ ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಭಾಸ್ಕರರಾವ ಮುಡಬೂಳ ಇವರ ಹೊಲದ ಹತ್ತಿರ ಮೃತ ಮಹಾಂತೇಶ, ಆಂಜನೇಯ ಇಬ್ಬರೂ ಕೂಡಿ ಸುನಿಲಕುಮಾರ ಈತನ ಅಟೋ ಟಂಟಂ ನಂ:ಕೆಎ-33, 9184 ನೇದ್ದರ ಕುಳಿತು ಹೊರಟಾಗ ಎದುರಿನಿಂದ ಅಟೋ ಟಂಟಂ ನಂ;ಕೆಎ-33, ಎ-5592 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದರಿಂದ ಸದರಿ ಅಟೋ ಚಾಲಕನ ನಿಯಂತ್ರಣ ತಪ್ಪಿ ಸದರಿ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಮಹಾಂತೇಶ ಈತನು ಅಟೋದಿಂದ ಕೆಳಗೆ ಬಿದ್ದಾಗ ಸದರಿ ಅಟೋ ಮಹಾಂತೇಶನ ತಲೆಯ ಮೇಲೆ ಬಿದ್ದಿದ್ದರಿಂದ ತಲೆ ಒಡೆದು ಭಾರಿ ರಕ್ತಗಾಯವಾಗಿ, ಬಲ ರಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಆಂಜನೇಯ ಮತ್ತು ಸುನಿಲಕುಮಾರ ಇವರಿಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ. ಅಪಘಾತಪಡಿಸಿ ಓಡಿ ಹೋದ ಅಟೋ ಟಂಟಂ ಮತ್ತು ಅಟೋ ಚಾಲಕನಿಗೆ ರಸ್ತೆಯ ಮೇಲೆ ಓಡಾಡುವ ಇತರ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಅಟೋ ಟಂಟಂ ನಂ:ಕೆಎ-33, ಎ-5592 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ಈತನೇ ಕಾರಣನಿದ್ದು ಸದರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2017 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಎಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 379/2017.ಕಲಂ 379.ಐ.ಪಿ.ಸಿ.;- ದಿನಾಂಕ 27/09/2017 ರಂದು ಬೆಳಿಗೆ 07-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಶಹಾಫೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಗು ಒಂದು ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 27/09/52017 ರಂದು ಬೆಳಿಗ್ಗೆ 5-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಬಸವರಾಜ ಸಿಪಿ.ಸಿ. 180 ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ಹೋರಟು ಶಹಾಪೂರ ನಗರದ ಅಮಾನ ಧಾಬಾದ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ  ನಿಂತಿದ್ದಾಗ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ಯಾಕ್ಟರ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ಹೇಳಿದ್ದು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿದನು. ಸದರಿ ಮರಳು ತುಂಬಿದ ಟ್ಯಾಕ್ಟರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೇಂದ್ರ ಕಂಪನಿಯ 415 ಆ ಕೆಂಪು ಬಣ್ಣದ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ-ಚಎಚಉ00558 ಅದಕ್ಕೆ ಹೊಂದಿಕೊಂಡಿರುವ ನೀಲಿ ಬಣ್ಣದ ಟ್ರಾಲಿ, ನಂಬರ ಇರುವದಿಲ್ಲಾ.  ಅ:ಕಿ:1,50000/- ರೂ ಮತ್ತು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ:ಕಿ:1500=00 ರೂ ಸದರಿ ಟ್ಯಾಕ್ಟರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಯಂಕಪ್ಪ ದೋರಿ ವ|| 30 ಉ|| ಚಾಲಕ ಜಾ|| ಬೇಡರ ಸಾ|| ಯಕ್ಷಂತಿ ಅಂತ ಹೇಳಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ರಾಮಣ್ಣ ತಂದೆ ಹಣಮಂತ ಸಾ|| ಯಕ್ಚಿಂತಿ ಇವರು ನಮ್ಮ ಊರಿನ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು.  ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರ & ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 7-00 ಗಂಟೆಗೆ ಬಂದು ಆರೋಪಿತರ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ಮುಂದಿನ ಕ್ರಮಕ್ಕಾಗಿ 7-30 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 379/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 380/2017 ಕಲಂ 78(3) ಕೆ.ಪಿ.ಯಾಕ್ಟ  ;- ದಿನಾಂಕ: 27/09/2017 ರಂದು 1.30 ಪಿ.ಎಂಕ್ಕೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಎ.ಎಂ.ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10.00 ಎ.ಎಂ.ಕ್ಕೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಠಾಣೆಯ ಸುಧಾರಿತ ಗ್ರಾಮ ಗಸ್ತು ಬೀಟ್ ನಂ.02 ನೇದ್ದರ ಸಿಬ್ಬಂಧಿ ಶ್ರೀ ಬಸಯ್ಯ ಸಿಪಿಸಿ-242 ರವರು ದೋರನಳ್ಳಿ ಗ್ರಾಮದ ಮರೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಠಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರು ಹಾಗೂ ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ 11.25 ಎ.ಎಂಕ್ಕೆ ದಾಳಿ ಮಾಡಿ ಒಬ್ಬ ಆರೋಪಿಗೆ ಹಿಡಿದು ಅವನಿಂದ ನಗದು ಹಣ 1730=00 ರೂಪಾಯಿ, ಎರಡು ಮಟಕಾ ಚೀಟಿ ಮತ್ತು ಒಂದು ನೀಲಿ ಬಾಲಪೆನ್ ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮಧ್ಯಾಹ್ನ 1.30 ಪಿ.ಎಂಕ್ಕೆ ಫಿಯರ್ಾದಿದಾರರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 380/2017 ಕಲಂ ಕಲಂ 78(3) ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 381/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 27/09/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಗಂಗಾ ನಗರ ಏರಿಯಾದಲ್ಲಿ ಬರುವ  ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 41 ನೇದ್ದರ ಸಿಬ್ಬಂದಿ ಶ್ರೀ ಗಜೇಂದ್ರ  ಸಿ.ಪಿ.ಸಿ 313 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 4630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 381/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!