Yadgir District Reported Crimes Updated on 14-09-2017

By blogger on ಗುರುವಾರ, ಸೆಪ್ಟೆಂಬರ್ 14, 2017


Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ 363 ಐಪಿಸಿ;-ದಿನಾಂಕ 03.09.2017 ರಂದು ಮದ್ಯಾಹ್ನ 4.30 ಗಂಟೆಗೆ ಪಿರ್ಯಾಧಿ ಮಗ ಕಾಂತು @ ಕಾಂತೇಶ 13 ವರ್ಷ ಈತನು ಹೊಲದಿಂದ ಮನೆಗೆ ಹೋಗುತ್ತೇನೆ ಅಂತಾ ಪಿರ್ಯಾಧಿಯಾದ ಆತನ ತಂದೆಗೆ ತಿಳಿಸಿ ಹೊಲದಿಂದ ಮನೆಗೆ ಕಡೆ ಬಂದನು. ನಂತರ ಸಾಯಂಕಾಲ 6 ಗಂಟೆ ಸುಮಾರಿಗೆ ಪಿರ್ಯಾಧಿ ಆತನ ಹೆಂಡತಿ ಬಂದು ನೋಡಲು ಮನೆಯಲ್ಲಿ  ಮಗ ಕಾಣಲಿಲ್ಲ ಅದನ್ನು ನೋಡಿ ಪಿರ್ಯಾಧಿ ಮತ್ತು ಆತನ ಭಾಮೈದ ಕೂಡಿ ಎಲ್ಲಾ ಕಡೆ ಹುಡುಕಾಡಿದರು ಕಾಣೆಯಾದ ಮಗನ ಬಗ್ಗೆ ಸುಳಿವು ಸಿಗದೆ ಇದ್ದುದ್ದರಿಂದ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಕಾಣೆಯಾದ ನನ್ನ ಮಗನು ಹುಡುಕಿ ಕೋಡಬೇಕು ಅಂತಾ ಪಿರ್ಯಾದಿ ಇರುತ್ತದೆ. 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 87 ಕೆ.ಪಿ ಎಕ್ಟ್ 1963;- ದಿನಾಂಕ.13/09/2017 ರಂದು 6-15 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡಿದ್ದು ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ ಇಂದು ದಿನಾಂಕ. 13/09/2017 ರಂದು 12-45 ಪಿಎಂಕ್ಕೆ ಸಿ.ಪಿ.ಐ ಸಾಹೇಬರು ಆಪೀಸಿನಲ್ಲಿದ್ದಾಗ ಯಾದಗಿರಿ ನಗರದ ಬಿ.ಇ.ಓ ಆಫೀಸ್ ಮತ್ತು ಹನುಮಾನ ಮಂದಿರದ ಹಿಂದುಗಡೆ ಇರುವ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಕೆಲವರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೆಬರು ಮತ್ತು ಸಿಬ್ಬಂದಿಯವರು, ಪಂಚರು ಕೂಡಿಕೊಂಡು ಹೋಗಿ 1-30 ಪಿಎಂಕ್ಕೆ ದಾಳಿ ಮಾಡಲಾಗಿ 1) ವಿಶ್ವನಾಥ ತಂ. ಮಾಣಿಕರೆಡ್ಡಿ ಬೆನಕನಳ್ಳಿ ವಃ24 ಜಾಃ ಲಿಂಗಾಯತ ಉಃ ಅಟೋ ಚಾಲಕ ಸಾಃ ಶಾಸ್ತ್ರೀ ನಗರ ಯಾದಗಿರಿ ಅಂತಾ ತಿಳಿಸಿದ್ದು ಅಂಗಶೋದನೆ ಮಾಡಲಾಗಿ ಸದರಿಯವನ ಹತ್ತಿ 1020-00 ನಗದು ಹಣ ಮತ್ತು 22 ಇಸ್ಪೀಟ ಎಲೆಗೆಳು ಸಿಕ್ಕವು 2) ವೆಂಕಟರೆಡ್ಡಿ ತಂ. ಬಸವರಾಜಪ್ಪ ಮೊಕಾಶಿ ವಃ 30 ಉಃ ಚಾಲಕ ಜಾಃ ಲಿಂಗಾಯತ ಸಾಃ ನಾಯ್ಕಲ್ ತಾಃಶಹಾಪೂರ ಈತನ ಹತ್ತಿ 2230-00 ರೂ ಹಣ ಸಿಕ್ಕವು 3) ಆನಂದಕುಮಾರ ತಂ. ರೂಪ್ಲಾ ಚವ್ಹಾಣ ವಃ 26 ಜಾಃ ಲಂಬಾಣಿ ಉಃ ಚಾಲಕ ಸಾಃ ಬಸಂತಪುರ ತಾಂಡ ತಾಃಯಾದಗಿರಿ ಈತನ ಹತ್ತಿರ 1400-00 ರೂ ಸಿಕ್ಕಿದ್ದು 4) ಅರುಣಕುಮಾರ ತಂ. ಸಿದ್ರಾಮಪ್ಪ ಬೇಟಿ ವಃ 29 ಜಾಃ ಹೊಲೆಯ ಉಃ ಚಾಲಕ ಸಾಃ ಸ್ಟೇಷನ್ ಏರಿಯಾ ಯಾದಗಿರಿ ಈತನ ಹತ್ತಿರ 2300-00 ರೂ ಸಿಕ್ಕಿದ್ದು, 5) ರವಿಕುಮಾರ ತಂ. ಮಲ್ಲಿಕಾಜರ್ುನ ಸುಂಗಲಕರ ವಃ39 ಉಃ ಚಾಲಕ ಜಾಃ ಹೊಲೆಯ ಸಾಃ ಅಂಬೇಡ್ಕರ ನಗರ ಯಾದಗಿರಿ ಈತನ ಹತ್ತಿ 2000-00 ರೂ ಸಿಕ್ಕಿದ್ದು 6) ರವಿ ತಂ. ವಿಶ್ವನಾಥ ಚವ್ಹಾಣ ವಃ31 ಉಃ ಚಾಲಕ ಜಾಃ ಲಂಬಾಣಿ ಸಾಃ ಸ್ಟೇಷನ್ ಏರಿಯಾ ಯಾದಗಿರಿ ಈತನ ಹತ್ತಿರ 1180-00 ರೂ ಸಿಕ್ಕಿದ್ದು 7) ಪ್ರಕಾಶ ತಂ. ಗೋಪಾಲ ಚವ್ಹಾಣ ವಃ32 ಜಾಃ ಲಂಬಾಣಿ ಉಃ ಚಾಲಕ ಸಾಃ ಗಾಂಧಿ ನಗರ ತಾಂಡಾ ಯಾದಗಿರಿ ಈತನ ಹತ್ತಿರ 1110-00 ರೂ. ಸಿಕ್ಕಿದ್ದು ಇರುತ್ತದೆ. ಮತ್ತು ಕೆಳಗೆ ನೆಲದ ಮೇಲೆ ಬಿದ್ದ 30 ಇಸ್ಪೀಟ ಎಲೆಗಳು ಸಿಕ್ಕವು. ಒಟ್ಟು ನಗದು ಹಣ 11240-00 ಮತ್ತು 52 ಇಸ್ಪೀಟ ಎಲೆಗಳು ಅಂಕಿ.00-00 ರೂ ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡಿದ್ದು ಜಪ್ತಿ ಪಂಚಾನಾಮೆಯನ್ನು 1-30 ಪಿ.ಎಮ್ ದಿಂದ 2-30 ಪಿ.ಎಮ್ ದವರೆಗೆ ಕೈಕೊಂಡು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ 3-00 ಪಿಎಂಕ್ಕೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ.171/2017 ಕಲಂ. 87 ಕೆಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂ 379 ಐಪಿಸಿ;- ದಿನಾಂಕ 13/09/2017 ರಂದು ಸಾಯಂಕಾಲ 07-30 ಗಂಟೆಗೆ ಫಿಯರ್ಾಧಿ ಶ್ರೀ ಮಹ್ಮದ್ ಶರೀಫ್ ತಂದೆ ಬಾಬುಮೀಯಾ ವಯಾ 26 ವರ್ಷ, ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ಕನಕ ನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಈ ಮೂಲಕ ದೂರು ಅಜರ್ಿ ನೀಡುವುದೇನೆಂದರೆ, ನನ್ನ ಹೆಸರಿನ ಮೇಲೆ ಒಂದು ಸಿಲವರ್ ಬಣ್ಣದ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು, ಮೋಟರ್ ಸೈಕಲ್ ನಂ ಕೆ.ಎ 33 ಆರ್ 0746 ಇರುತ್ತದೆ. ಅದರ ಇಂಜಿನ್ ನಂ-ಊಂ10ಇಎಇಊಅ30025, ಚೆಸ್ಸಿ ನಂ-ಒಃಐಊಂ10ಂಒಇಊಅ05231, ಇದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/- ರೂ|| ಇರುತ್ತದೆ. ದಿನಾಂಕ 03/09/2017 ರಂದು ಸಾಯಂಕಾಲ 08-20 ಗಂಟೆಗೆ ನಾನು ಮತ್ತು ನನ್ನ ಗೆಳೆಯನಾದ ನಾಗಪ್ಪ ತಂದೆ ಮಲ್ಲಪ್ಪ ಅರಿಕೇರಿ ಸಾ|| ಗಚ್ಚಿಬಾವಡಿ ಯಾದಗಿರಿ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ತೆಗೆದುಕೊಂಡು ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಶ್ರೀನಿವಾಸ ಬಾರ ಪಕ್ಕದಲ್ಲಿ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ಅಲ್ಲಿಯೇ ಪಕ್ಕದಲ್ಲಿ ಇರುವ ಖಾನಾವಳಿಯಲ್ಲಿ ಊಟ ಮಾಡಲು ಹೋದೆವು. ಮರಳಿ ರಾತ್ರಿ 09-00 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ಮತ್ತು ನಾಗಪ್ಪ ಅರಿಕೇರಿ ಇಬ್ಬರು ಗಾಭರಿಯಾಗಿ ಸುತ್ತ ಮುತ್ತ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಕಾರಣ ನನ್ನ ಮೋಟರ್ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಾನ್ಯರವರು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಇಲ್ಲಿಯ ವರೆಗೆ ಅಲ್ಲಿ ಇಲ್ಲಿ ಹುಡುಕಾಡಿ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 172/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್;- ದಿನಾಂಕ 13.09.2017 ರಂದು ಸಂಜೆ 4-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಹೆಂಡವನ್ನು ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಂಜೆ 4-40 ಗಂಟೆಗೆ ಅಲ್ಲಿಗೆ ಹೋಗಿ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ 18 ಲೀಟರ ಹೆಂಡವನ್ನು ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮ 18 ಲೀಟರ ಹೆಂಡವನ್ನು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಆರೋಪಿತನ ವಿರುದ್ಧ ಕ್ರಮಕ್ಕಾಗಿ ಜಪ್ತಿಪಂಚನಾಮೆ, ಮುದ್ದೆಮಾಲು ಹಾಜರುಪಡಿಸಿ ವರದಿ ನೀಡಿದ್ದು ಸದರಿ ಜಪ್ತಿಪಂಚನಾಮೆ ಹಾಗೂ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 244/2017 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ 87 ಕೆಪಿ ಯ್ಯಾಕ್ಟ ;- ದಿನಾಂಕ 13/09/2017 ರಂದು 05.00 ಪಿಎಮ್ ಕ್ಕೆ ಆರೋಪಿತರೆಲ್ಲರೂ   ಹೊತಪೇಟ ದಿಬ್ಬಿ ತಾಂಡಾದ ಶಾಂತಗೌಡ ಹುಲಕಲ್ ಇವರ ಗಿರಣಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 3180/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 05.00 ಪಿಎಮ್ ದಿಂದ 06.00 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 06.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ:94/2017 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ. 363/2017.ಕಲಂ 78(3);- ದಿನಾಂಕ 13/09/2017 ರಂದು ಸಾಯಂಕಾಲ 19-00 ಗಂಟೆಗೆ ಶ್ರೀ ಅಂಬಾರಾರಯ ಕಮಾನಮನಿ ಪಿ.ಐ.ಸಾಹೇಬರು ಠಾಣೆಗೆ ಬಂದು ಇಬ್ಬರು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 13/09/2017 ರಂದು ಮದ್ಯಾಹ್ನ 16-00 ಗಂಟೆಗೆ ಠಾಣೆಯಲ್ಲಿದ್ದಾಗ ನಮ್ಮ ಠಾಣೆಯ ಬಸಯ್ಯ ಸ್ವಾಮಿ ಪಿ.ಸಿ.242 ರವರಿಗೆ ಹಂಚಿಕೆಯಾದ ದೋರನಳ್ಳಿ ಗ್ರಾಮದ ಭೀಟ್ನಲ್ಲಿ ದೋರನಳ್ಳೀ ಗ್ರಾಮದ ಬಸ್ಸ್ ನಿಲ್ದಾಣದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನಗನ್ನು ಬರೆದುಕೊಳ್ಳುತಿದ್ದಾರೆ ಅಂತ ತನಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದ ಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಶಿವನಗೌಡ ಸಿ.ಪಿ.ಸಿ 141, ಭೀಮಣ್ಣಗೌಡ ಪಿ.ಸಿ.402, ಮತ್ತು ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169 ಇವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಶಿವನಗೌಡ ಸಿ.ಪಿ.ಸಿ 141 ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ ಮೇರೆಗೆ ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವರ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು  ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 16-20 ಗಂಟೆಗೆ ಹೊರಟು ದೋರನಳ್ಳಿಯ ಬಸ್ಸ ನಿಲ್ದಾಣದ ಹತ್ತಿರ 16-50 ಗಂಟೆಗೆ ಹೋಗಿ ಮನೆಗಳ ಗೊಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಬಸ್ಸ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು ಇನ್ನೊಬ್ಬನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತಿದ್ದನು,  ಆಗ ನಾವು ಸದರಿಯವರು ಇದು ಬಾಂಬೆ ಮಠಕಾ ಅಂತ ಹೇಳಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸುತ್ತುವರೆದು ಮದ್ಯಾಹ್ನ 17-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಹಣ ಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ ಮತ್ತು ಸಾರ್ವಜನಿಕರಿಗೆ ಹೇಳುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು ಭೀಮರಾಯ ತಂದೆ ಹಣಮಂತ ಬಾಗಲಿ ವ|| 26 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕೋಡಾಲ ತಾ|| ಶಹಾಪೂರ ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 830/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಅಂ:ಕಿ: 00-00 ರೂ ಮತ್ತು ಸಾರ್ವಜನಿಕರಿಗೆ ಹೇಳುತ್ತಿದ್ದ ಇನ್ನೊಬ್ಬನು ತನ್ನ ಹೆಸರು ಶರಣಪ್ಪ ತಂದೆ ಹಳ್ಳೆಪ್ಪ ಗುಂಟುರ ವ|| 46 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ದೋರನಳ್ಳಿ ಅಂತ ತಿಳಿಸಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 590/- ರೂಪಾಯಿ ಈಗೆ ಇಬ್ಬರು ಹತ್ತಿರ ಒಟ್ಟು 1] ನಗದು ಹಣ 1420/- ರೂಪಾಯಿ 2] ಒಂದು ಬಾಲ್ ಪೆನ್ ಅ:ಕಿ: 00=00 ರೂ 3] ಎರಡು ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಅ:ಕಿ: 00=00 ರೂ ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಸಾಯಂಕಾಲ 17-00 ಗಂಟೆಯಿಂದ 18-00 ಗಂಟೆಯವರೆಗೆ  ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಇಬ್ಬರು ವ್ಯೆಕ್ತಿಗಳೊಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 18-30 ಗಂಟೆಗೆ ಬಂದು ವರದಿ ತಯ್ಯಾರಿಸಿ 19-00 ಘಂಟೆಗೆ ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು  19-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 363/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಕ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 226/2017 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 14/09/2017 ರಂದು 8-00 ಎ.ಎಮ್ ಕ್ಕೆ ಆರೋಪಿತನು ತನ್ನ ಅಂಗಡಿಯಲ್ಲಿ  ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 80 ಮೆಗಡೊಲ ರಮ್ 90 ಎಮ್.ಎಲ್. ನ ಮಧ್ಯದ ಬಾಟಲಿಗಳು 3133/ರೂ, 8 ಕೆ.ಎಫ್. ಸ್ಟ್ರಾಂಗ ಬಿಯರ 650 ಎಮ್.ಎಲ್. ಬಾಟಲಿಗಳು 1000/ರೂ, 5 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ಬಾಟಲಿಗಳು 340/ರೂ ಒಟ್ಟು 4473/ರೂ ಕಿಮ್ಮತ್ತಿನ ಮಧ್ಯದ ಬಾಟಲಿಗಳನ್ನು ಮಾಲು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!