Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 246/2017.ಕಲಂಃ 109 .ಆರ್.ಪಿ.ಸಿ. ;- ದಿನಾಂಕ 13/07/2017 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ಸ|| ತ|| ಶ್ರೀ ಹಣಮಂತು ಎಚ್.ಸಿ. 52 ಶಹಾಪೂರ ಪೊಲೀಸ್ ಠಾಣೆ ಇವರು ಒಂದು ಆರೋಪಿಯನ್ನು ತಂದು ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವರನರಂದರೆ. ದಿನಾಂಕ 12/07/2017 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಪಿ,ಐ, ಸಾಹೇಬರ ಆದೇಶದ ಮೇರೆಗೆ ನಗರದಲ್ಲಿ ರಾತ್ರಿ ಗಸ್ತು ಕರ್ತವ್ಯ ಕುರಿತು ನಾನು ಮತ್ತು ಪಿ.ಸಿ.365 ಲಿಂಗಣ್ಣ ಗೌಡ ಇಬ್ಬರು ಕೂಡಿ ಹೊರಟೆವು . ನಗರದಲ್ಲಿ ರಾತ್ರಿ ಗಸ್ತು ಕರ್ತವ್ಯ ಮಾಡುತ್ತಾ 13/07/2017 ರಂದು ಬೆಳಗಿನ ಜಾವ 04-40 ಗಂಟೆಗೆ ಶಹಾಪೂರ ನಗರದ ಗ್ಯಾರೆಜೆ ಲೈನ್ ಕಡೆಗೆ ಹೊದಾಗ ಹಿಂದುಸ್ತಾನ ಗ್ಯಾರೆಜ್ ಮುಂದೆ ಕಾಂಪ್ಲೇಕ್ಸ ಎದರುಗಡೆ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗ್ಯಾಡುತ್ತಾ ಬೀಗ್ ಹಾಕಿದ ಅಂಗಡಿಯ ಶಟರಗಳನ್ನು ನೋಡುತ್ತಿದ್ದನು ಆಗ ಸದರಿಯವನು ನಾವು ಸಮವಸ್ತ್ರದಲ್ಲಿರುವುದನ್ನು ನೋಡಿ ತಮ್ಮ ಮುಖ ಮರೆಮಾಚಿಕೊಳ್ಳುತಿದ್ದಾಗ ನಾವು ಸದರಿಯವನ ಮೇಲೆ ಸಂಶಯ ಬಂದು ಅವನ ಹತ್ತಿರ ಹೋಗುತಿದ್ದಾಗ ಅವನು ಅಲ್ಲಿಂದ ಓಡಲಾರಂಬಿಸಿದನು. ಅವನನ್ನು ಹಿಂಬಾಲಿಸಿ ಶಹಾಪೂರದ ಸಿಣ್ಣುರ ಆಸ್ಪತ್ರೆ ಹತ್ತಿರ 04-50 ಗಂಟೆಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅಪ್ರಾ-ತಪ್ರಾ ಹೇಳಲಾರಂಬಿಸಿದನು. ಪುನಃ ಚೌಕಾಸಿ ಮಾಡಲಾಗಿ ತನ್ನ ಹೆಸರು ಮೈಹಿಬೂಬ ತಂದೆ ಇಬ್ರಾಹಿಂಸಾಬ ಸಗರ ವಾಲೆ ವ|| 35 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ದೋರನಳ್ಳಿ ತಾ|| ಶಹಾಪೂರ, ಅಂತ ಹೇಳಿದನು. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಮುಂಜಾಗ್ರತ ಕ್ರಮವಾಗಿ ತಾಬೆಗೆ ತೆಗೆದುಕೊಂಡು ಬೆಳಗಿನ ಜಾವ 05-00 ಗಂಟೆಗೆ ಠಾಣೆಗೆ ಬಂದು ಸದರಿಯವನನ್ನು ವಿಚಾರಣೆ ಮಾಡಿ 5-30 ಗಂಟೆಗೆ ಸದರಿ ವ್ಯಕ್ತಿಯನ್ನು ಹಾಜರು ಪಡಿಸಿ ಸರಕಾರಿ ತಫರ್ೇ ಫಿರ್ಯಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 246/2017 ಕಲಂ 109 ಸಿ.ಆರ.ಪಿ.ಸಿ. ಅಡಿಯಲ್ಲಿ ಪ್ರಕರಣ ದಧಾಖಲಿಸಿ ಕೊಂಡು ತನಿಕೇ ಕೈಕೋಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 112-2017 ಕಲಂ 87 ಕೆಪಿ ಯಾಕ್ಟ;- ದಿನಾಂಕಃ13/07/2017 ರಂದು ಹೆಬ್ಬಾಳ(ಕೆ) ಸೀಮಾಂತರದ ಪರಮಾನಂದ ಗುಡ್ಡದಲ್ಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬದ ಇಸ್ಪೀಟ್ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಅಧಿಕಾರಿ & ಸಿಬ್ಬಂದಿಯಾದ ಹೆಚ್.ಸಿ-159, ತಾಯಪ್ಪ ಪಿಸಿ-152, ಅಯ್ಯುಬಖಾನ ಪಿಸಿ-305, ಪ್ರಭುಗೌಡ ಪಿಸಿ-300, ಸಣ್ಣಕೆಪ್ಪ ಪಿಸಿ-297, ಹಣಮಂತ ಸಿಪಿಸಿ-292 ಹಾಗೂ ಜೀಪ್ ಚಾಲಕ ಎಪಿಸಿ-144 ರವರೊಂದಿಗೆ ದಾಳಿ ಮಾಡಲು 8 ಜನರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 6529=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು, ಹಾಗೂ 4 ವಿವಿಧ ಕಂಪನಿಯ ಮೊಬೈಲ್ ಫೋನ್ಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 144/2017 ಕಲಂ: 143, 147 323, 324, 504, 506 ಸಂ: 149 ಐಪಿಸಿ ;- ದಿನಾಂಕ: 07-07-2017 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನಾನು ಮತ್ತು ಬಂದಪ್ಪ ತಂದೆ ಬಸಪ್ಪ ಕಟ್ಟಿಮನಿ ಇಬ್ಬರೂ ಕೂಡಿಕೊಂಡು ನಮ್ಮೂರ ಹಳೇ ಶಾಲೆಯ ಮುಂದೆ ಇರುವಾಗ ನಮ್ಮೂರಿನ ನಿಂಗಪ್ಪ ತಂದೆ ಯಲ್ಲಪ್ಪ ಬಡಿಗೇರ ಇತನು ಬಂದನು ಆಗ ನಾನು ಏ ನಿಂಗಪ್ಪ ಬಾ ಅಂತಾ ಕರೆದು ನಾನು ನನ್ನ ಗೆಳೆಯನಾದ ಬಂದಪ್ಪ ತಂದೆ ಬಸಪ್ಪ ಕಟ್ಟಿಮನಿ ಇತನಿಗೆ ಹಿಂದೆ ಅವಾಚ್ಯವಾಗಿ ಬೈದಿರುತ್ತೆನೆ ಅಂತಾ ಅವನಿಗೆ ಹೇಳಿದೆ ಅಂತಾ ಯಾಕೆ ಅಂತಾ ಕೇಳಿದೆನು, ಆಗ ರಾಜು ಇತನು ಏ ರಂಡಿ ಮಗನೇ ರಾಜ್ಯಾ ನೀನು ಅವನಿಗೆ ನನ್ನ ಎದುರು ಬೈದಿದಿ ಅದೇ ವಿಷಯ ನಾನು ಅವನಿಗೆ ಹೇಳಿದ್ದೆನೆ, ನೀನು ಏನು ಮಾಡಿಕೊಳ್ಳತಿ ಅಂತಾ ಅವಾಚ್ಯವಾಗಿ ನನಗೆ ಬೈಯ್ಯುತ್ತಿದ್ದನು, ಆಗ ಅವನಿಗೂ ಮತ್ತು ನನಗೂ ಬಾಯಿ ಮಾತಿನ ತಕರಾರು ನಡೆದಾಗ ಅವನ ಮನೆಯವರಿಗೆ ವಿಷಯ ಗೋತ್ತಾಗಿ 2)ಜೋತರ್ಿಲಿಂಗ ತಂದೆ ಯಲ್ಪಪ್ಪ ಬಡಿಗೇರ 3)ಉಮೇಶ ತಂದೆ ಯಲ್ಲಪ್ಪ ಬಡಿಗೇರ 4)ಯಲ್ಲಪ್ಪ ತಂದೆ ಮಾರ್ತಂಡಪ್ಪ ಬಡಿಗೇರ 5)ವಿಶ್ವ ತಂದೆ ಶಾಂತಪ್ಪ ಟಪ್ಪದ ಸಾಃ ಯಾಗಾಪೂರ 6)ಭೀಮರಾಯ ತಂದೆ ಭೀಮರಾಯ ಪೂಜಾರಿ ಗಾದೆನೊರ ಸಾಃ ಬಂದಳ್ಳಿ 7)ವಿಶ್ವರಾಧ್ಯ ತಂದೆ ಭಾಗಪ್ಪ ಪುಟಗಿ ಸಾಃ ಕಾನಳ್ಳಿ 8)ದೇವಕ್ಕೆಮ್ಮ ಗಂಡ ಯಲ್ಲಪ್ಪ ಬಡಿಗೇರ 9)ಲಕ್ಷ್ಮಿ ಗಂಡ ಜೋತರ್ಿಲಿಂಗ ಬಡಿಗೇರ 10)ಶರಣಮ್ಮ ಗಂಡ ಜೊತರ್ಿಲಿಂಗ ಬಡಿಗೇರ ಮತ್ತು 11)ರೇಣುಕಾ ಗಂಡ ರಂಗಪ್ಪ ಸಾಃ ಚಾಮನಳ್ಳಿ ಇವರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಸಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಬಂದವರೇ ನೀನು ನಮ್ಮ ನಿಂಗಪ್ಪನ ಜೋತೆಗೆ ತಕರಾರು ಮಾಡುತ್ತಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕುತ್ತಿದ್ದರು, 1)ನಿಂಗಪ್ಪ ತಂದೆ ಯಲ್ಲಪ್ಪ ಬಡಿಗೇರ ಇತನು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದನು, 2)ಜೋತರ್ಿಲಿಂಗ ತಂದೆ ಯಲ್ಪಪ್ಪ ಬಡಿಗೇರ 3)ಉಮೇಶ ತಂದೆ ಯಲ್ಲಪ್ಪ ಬಡಿಗೇರ ಇವರಿಬ್ಬರೂ ಕೂಡಿಕೊಂಡು ನನ್ನನ್ನು ಎತ್ತಿ ನೆಲದ ಮೇಲೆ ಹಾಕಿ ಕಾಲಿನಿಂದ ಒದೆಯುತ್ತಿದ್ದರು, 4)ಯಲ್ಲಪ್ಪ ತಂದೆ ಮಾರ್ತಂಡಪ್ಪ ಬಡಿಗೇರ ಇತನು ಕೈ ಮುಷ್ಠಿ ಮಾಡಿ ನನ್ನ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಮಾಡಿದನು, ಆಗ ನಾನು ಚೀರಾಡುತ್ತಿರುವಾಗ ನನ್ನ ತಾಯಿ ಶೇಖಮ್ಮ ಗಂಡ ಹಣಮಂತ ಯಡ್ಡಳ್ಳಿ ಮತ್ತು ನನ್ನ ಹೆಂಡತಿ ರಂಜಿತಾ ಇವರು ಬಂದು ಜಗಳ ಬಿಡಿಸುತ್ತಿರುವಾಗ 5)ವಿಶ್ವ ತಂದೆ ಶಾಂತಪ್ಪ ಟಪ್ಪದ 6)ಭೀಮರಾಯ ತಂದೆ ಭೀಮರಾಯ ಇವರಿಬ್ಬರೂ ಕೂಡಿಕೊಂಡು ಕೈಯಿಂದ ನನ್ನ ತಾಯಿಗೆ ಮತ್ತು ನನ್ನ ಹೆಂಡತಿಗೆ ಹೊಡೆದಿರುತ್ತಾರೆ, 7)ವಿಶ್ವರಾಧ್ಯ ತಂದೆ ಭಾಗಪ್ಪ ಪುಟಗಿ ಇತನು ಕಲ್ಲಿನಿಂದ ನನ್ನ ಬೆನ್ನಿಗೆ ಎದೆಗೆ ಹೊಡೆದಿರುತ್ತಾನೆ, 8)ದೇವಕ್ಕೆಮ್ಮ ಗಂಡ ಯಲ್ಲಪ್ಪ ಬಡಿಗೇರ 9)ಲಕ್ಷ್ಮಿ ಗಂಡ ಜೋತರ್ಿಲಿಂಗ ಬಡಿಗೇರ 10)ಶರಣಮ್ಮ ಗಂಡ ಜೊತರ್ಿಲಿಂಗ ಬಡಿಗೇರ ಮತ್ತು 11)ರೇಣುಕಾ ಗಂಡ ರಂಗಪ್ಪ ಬಡಿಗೇರ ಇವರೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಯ ಮತ್ತು ನನ್ನ ತಾಯಿಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮನಬಂದಂತೆ ಹೊಡೆದಿರುತ್ತಾರೆ, ಅವರೆಲ್ಲರೂ ಕೂಡಿಕೊಂಡು ಇನ್ನು ಹೊಡೆಯುತ್ತಿರುವಾಗ ನಾವು ಚೀರಾಡುತ್ತಿರುವಾಗ ನಮ್ಮೂರಿನ 1)(ಶಿವಯೋಗಿ ತಂದೆ ಚಂದಪ್ಪ ಬಡಿಗೇರ ಮತ್ತು 2)ಬಸಲಿಂಗ ತಂದೆ ಯೇಸುಮಿತ್ರ ಬಡಿಗೇರ ಇವರು ಬಂದು ಜಗಳ ನೋಡಿ ಬಿಡಿಸಿರುತ್ತಾರೆ, ಈ ಜಗಳವು ದಿನಾಂಕ 07/07/2017 ರಂದು ಬೆಳಿಗ್ಗೆ 9-00 ಗಂಟೆಗೆ ನಮ್ಮೂರ ಶಾಲೆ ಹತ್ತಿರ ರೋಡಿನ ಮೇಲೆ ನಡೆದಿರುತ್ತದೆ, ಈ ವಿಷಯದ ಬಗ್ಗೆ ನಾವು ಅಲ್ಲೆ ಊರಲ್ಲಿ ನಮ್ಮ ಹಿರಿಯರ ಸಮಕ್ಷಮ ನ್ಯಾಯ ಪಂಚಾಯತಿ ಮಾಡಿಕೊಂಡು ಬಗೆಹರಿಸಿಕೊಳ್ಳೋಣ ಅಂತಾ ನಾವು ಗ್ರಾಮದಲ್ಲಿಯೇ ಇದ್ದೆವು, ಅವರು ನ್ಯಾಯಕ್ಕೆ ಒಪ್ಪದೆ ಇದ್ದುದರಿಂದ ಇಂದು ದಿನಾಂಕ 13/07/2017 ರಂದು ಉಪಚಾರಕ್ಕಾಗಿ ಸರಕಾರಿ ದವಾಖಾನೆಗೆ ಸೇರಿಕೆಯಾಗಿರುತ್ತೆವೆ, ಆದ ಕಾರಣ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೆಕು ಅಂತಾ ಫಿರ್ಯಾಧೀ ಮೇರೆಗೆ ಗುನ್ನೆ ನಂ 144/2017 ಕಲಂ 143, 147, 323, 324, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಆಗಿರುತ್ತದೆ
Hello There!If you like this article Share with your friend using