Yadgir District Reported Crimes Updated on 10.-07-2017

By blogger on ಸೋಮವಾರ, ಜುಲೈ 10, 2017Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 191/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್:- ದಿನಾಂಕ:10-05-2017 ರಂದು 1.30 ಪಿ.ಎಮ್.ಕ್ಕೆ ಮಾನ್ಯ ಶ್ರೀ ಶರಣಪ್ಪ ಪಿ,ಎಸ್,ಐ ಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ, ಇಂದು ದಿನಾಂಕ: 10/07/2017 ರಂದು 10.15 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಶೆಳ್ಳಗಿ ಕಡೆಯಿಂದ ಸುರಪೂರ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟಿಪ್ಪರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 10.25 ಎ.ಎಮ್ಕ್ಕೆ ಹೊರಟು 10.45 ಎ.ಎಮ್ ಕ್ಕೆ ಕುಂಬಾರ ಪೇಟ ಕ್ರಾಸ ಹತ್ತಿರ ಹೊರಟಾಗ ಕವಡಿಮಟ್ಟಿ ಕಡೆಯಿಂದ 3 ಟಿಪ್ಪರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ಮೂರು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು. ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂಬರ ಕೆ.ಎ.51 ಡಿ-9229 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ.  ಟಿಪ್ಪರ ನಂಬರ ಎಂಹೆಚ್-06 ಎಸಿ-9777 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ. ಟಿಪ್ಪರ ನಂಬರ ಕೆಎ-01 ಎಜಿ-0194 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ. ಸದರಿ ಟಿಪ್ಪರಗಳ ಚಾಲಕರು ಮತ್ತು  ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ ಟ್ರ್ಯಾಕ್ಟರಗಳನ್ನು  ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 10.55 ಎ.ಎಮ್ ದಿಂದ 12.55 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 3 ಟಿಪ್ಪರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 3 ಮರಳು ತುಂಬಿದ ಟಿಪ್ಪರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.191/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 163/2017 ಕಲಂ: 379 ಐ.ಪಿ.ಸಿ ;- ದಿನಾಂಕ: 09.07.2017 ರಂದು ಬೆಳಗಿನ ಜಾವ 06.00 ಎ.ಎಂಕ್ಕೆ ಖಚಿತ ಬಾತ್ಮಿ ಮೇರೆಗೆ ಕೊಂಕಲ್ ಗ್ರಾಮದ ಹಳ್ಳದಿಂದ 6 ಟ್ಯಾಕ್ಟರ್ ವಾಹನಗಳಲ್ಲಿ ಅನಾಧಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ನಜರಾಪುರ ಮಾರ್ಗವಾಗಿ ಸಾಗಿಸುತ್ತಿದ್ದಾರೆ ಅಂತ ಮಾಹಿತಿ ಮೇರೆಗೆ ಬಂದಿದ್ದರಿಂದ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮೇತ ಐ.ಟಿ.ಐ ಕಾಲೇಜಿನ ಹತ್ತಿರ 6.45 ಎ.ಎಂಕ್ಕೆ ಹೋಗಿ ಅಲ್ಲಿ ಪರಿಶೀಲಿಸಿ ನೋಡಲಾಗಿ 7 ಎ.ಎಂಕ್ಕೆ ದಾಳಿ ಮಾಡಿ ಮರಳು ತುಂಬಿರುವ 6 ಟ್ಯಾಕ್ಟರ್ಗಳನ್ನು  ಮತ್ತು ಮೋಟಾರ ಸೈಕಲನ್ನು  ಹಿಡಿದು ಬೆಳಿಗ್ಗೆ 7 ಎ.ಎಂದಿಂದ 8 ಎ.ಎಂದವರಗೆ ಪಂಚನಾಮೆ ಕೈಕೊಂಡು 4 ಜನ ಆರೋಪಿತರೊಂದಿಗೆ ಮರಳು ತುಂಬಿದ 6 ಟ್ಯಾಕ್ಟರ್ಗಳ ಸಮೇತ ಪಿ.ಎಸ್.ಐ ರವರು ಠಾಣೆಗೆ 8.30 ಎ.ಎಂಕ್ಕೆ ಬಂದು  ಸಕರ್ಾರಿ ತಫರ್ೆ ಪಿರ್ಯಾಧಿದಾರನಾಗಿ ಮುಂದಿನ ಕ್ರಮಕ್ಕಾಗಿ ಆರೋಪಿತರ ಮೇಲೆ ಕ್ರಮ ಕೈಕೊಳ್ಳಲು ವರದಿ ನೀಡಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆನಂ: 163/2017 ಕಲಂ; 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 142/2017 ಕಲಂ: 323.498(ಎ).302,304(ಬಿ),504,506 ಐಪಿಸಿ ;- ಆರು ತಿಂಗಳ ಹಿಂದೆ ಅಂದರೆ ದಿನಾಂಕ 22/12/2016 ರಂದು ಮೃತಳ ಮದುವೆಯೂ ಯರಗೋಳ ಗ್ರಾಮದ ಸಾಬಣ್ಣ ತಂದೆ ಮಲ್ಲಿಕಾಜರ್ುನ ಭಜಂತ್ರಿ ಇವನೊಂದಿಗೆ ಹಿರಿಯರ ಸಮಕ್ಷಮ ಯಾದಗಿರಿಯ ವಿಧ್ಯಾ ಮಂಗಲ ಕಾಯರ್ಾಲಯದಲ್ಲಿ ಜರುಗಿರುತ್ತದೆ. ಆರೋಫಿತನು ಬೆಂಗಳೂರಿನಲ್ಲಿ ಟೊಯಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ ಅವನು ಮೃತಳೊಂದಿಗೆ ತನಗೆ ಇನ್ನು ವರದಕ್ಷಿಣೆ ರೂಪದಲ್ಲಿ ಹಣ ಮತ್ತು ಬಂಗಾರ ನಿನ್ನ ತವರು ಮನೆಯಿಂದ ಕೊಡೆಸುವಂತೆ ಮದುವೆಯಾದಾಗಿನಿಂದ ಇಲ್ಲಿಯವರೆಗೆ  ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು, ಅದಕ್ಕೆ ಫಿರ್ಯಾಧಿದಾರರು ನಾವು ಬಡವರಿದ್ದು ಆದರೂ ಕೂಡಾ ಕೆಲವು ದಿವಸಗಳಲ್ಲಿ ಕೊಡುವದಾಗಿ ಆರೋಪಿತನಿಗೆ ತಿಳಿಸಿದರೂ ಕೂಡಾ ಅವನು ಮೃತಳಿಗೆೆ ಇಂದು ದಿನಾಂಕ 08/07/2017 ರಂದು ಬೆಂಗಳೂೂರಿನಿಂದ ಯಾದಗಿರಿಗೆ ಬಂದು ಯಾದಗಿರಿಯಿಂದ ಮೋಟಾರ ಸೈಕಲ ಮೇಲೆ ಯರಗೋಳ ಗ್ರಾಮಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಯರಗೋಳ ಸಮೀಪ ಆಕೆಯೊಂದಿಗೆ ಜಗಳ ತೆಗೆದು ಕೈಯಿಂದ ಮೋಟಾರ ಸೈಕಲ ಮೇಲಿಂದ ಕುತ್ತಿಗೆ ಹಿಡಿದು ದಬ್ಬಿಕೊಟ್ಟಾಗ ಮೃತ ಅಶ್ವಿನಿ ಇವಳು ಅಂಗಾತವಾಗಿ ರೋಡಿನ ಮೇಲೆ ಬಿದ್ದು ತಲೆಯ ಹಿಂಬದಿಗೆ ಭಾರಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದಗಾಯಗಳು ಆಗಿ ಅದರಿಂದಲೇ ಮೃತಪಟ್ಟಿದ್ದು ಇರುತ್ತದ ಅಂತಾ ಫಿರ್ಯಾಧಿಯ ಸಾರಾಂಶವಿದೆ.,

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ  ;- ದಿನಾಂಕ 08-07-2017 ರಂದು 01.30 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ಶರಣಮ್ಮ ಗಂಡ ಸಿದ್ರಾಮರೆಡ್ಡಿ ಸಗರ ವಯಾ||21ವರ್ಷ ಉ|| ಮನೆಗೆಲಸ ಜಾ|| ಹಿಂದೂ ರೆಡ್ಡಿ ಸಾ|| ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದು ಎನೆಂದರೆ, ಆರೋಪಿತರು ಪಿರ್ಯಾದಿಗೆ ಈ ಮೊದಲು ಮದುವೆಯಲ್ಲಿ 21 ತೊಲಿ ಬಂಗಾರ ಕೊಟ್ಟರೂ ಮತ್ತೆ ಹಣ ಬಂಗಾರ ಕೊಡು ಅಂತ ಕಿರುಕುಳ ನೀಡಿದ್ದಲ್ಲದೆ ಇಂದು ದಿ: 08/7/17 ರಂದು ಪಿರ್ಯಾದಿಯ ತವರುಮನೆಯಾದ ನಗನೂರ ಗ್ರಾಮಕ್ಕೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ   ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ 283 279. 304(ಎ) ಐಪಿಸಿ  ಮತ್ತು ಕಲಂ 122 ಸಂ 177 ಐಎಮ್.ವಿ ಆಕ್ಟ ;- ದಿನಾಂಕ:08/07/2017 ರಂದು ಬೆಳಗಿನ ಜಾವ 04-15 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಪರಿಚಯನಾದ  ಮಂಜುನಾಥ ತಂ/ ಮಲ್ಲಿನಾಥ ಬುಶೆಟ್ಟಿ ಸಾ|| ಆಳಂದ ಈತನು ಪೋನ್ ಮಾಡಿ ನಾನು ಮತ್ತು ಸಂತೋಷ ಇಬ್ಬರೂ ಹತ್ತಿಗೂಡುರಕ್ಕೆ ನಮ್ಮ ಕೆಲಸದ ನಿಮಿತ್ಯ ಹೋಗಿ ಮರಳಿ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದೆವು. ಶಹಾಪೂರ-ಹತ್ತಿಗೂಡುರ ರೋಡಿನ ಮೇಲೆ ಹತ್ತಿಗೂಡುರ ಕೆ.ಇ.ಬಿ ದಾಟಿ 300 ಮೀಟರ್ ಅಂತರದಲ್ಲಿ ಬರುತ್ತಿದ್ದಾಗ ಬೆಳಗಿನ ಜಾವ 04-00 ಗಂಟೆಗೆ ಸುಮಾರಿಗೆ ರೋಡಿನ ಬಲಬದಿಗೆ ಯಾವುದೇ ಮುಂಜಾಗ್ರತ ಕ್ರಮ ಕೈಕೊಳ್ಳದೆ ರೋಡಿನ ಮೇಲೆ ನಿಲ್ಲಿಸಿದ ಒಂದು ಲಾರಿ ನಂಬರ ಒಕ-09 ಊಉ-0747 ನೇದ್ದಕ್ಕೆ  ನಿಮ್ಮ ಅಳಿಯ ಶಿವಲಿಂಗಪ್ಪ ಈತನು ಬಜಾಜ ಪಲ್ಸರ ಮೋಟರ ಸೈಕಲ್ ನಂಬರ ಏಂ-32 ಇಓ-6390  ನೇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಭಾಗಕ್ಕೆ ಡಿಕ್ಕ ಮಾಡಿದರಿಂದ  ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರಗಡೆ ಬಂದಿದ್ದು, ಮತ್ತು ಎಡಗಣ್ಣಿಗೆ ಭಾರಿ ರಕ್ತಗಾಯವಾಗಿದ್ದು, ಎಡ ತೊಡೆಗೆ, ಎಡ ರಟ್ಟೆಗೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ವಿಷಯ ತಿಳಿಸಿದಾಗ ಫಿರ್ಯಾದಿಯವರು ತಮ್ಮ ಸಂಬಂಧಿಕರು ಹಾಗೂ ಗ್ರಾಮಸ್ತರೊಂದಿಗೆ ಬಂದು ಮೃತ ಶಿವಲಿಂಗಪ್ಪ ಈತನಿಗೆ ನೋಡಿದ್ದು. ಕಾರಣ ಮೃತ ಶಿವಲಿಂಗಪ್ಪ ತಂ/ ಮಲ್ಲಿಕಾಜರ್ುನ ಕಲಶೆಟ್ಟಿ ಈತನು ಮೋಟರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಕ್ರಮವಹಿಸದೆ ರೋಡಿನಲ್ಲಿ ನಿಲ್ಲಿಸಿದ್ದ ಲಾರಿ ನಂ. ಒಕ-09 ಊಉ-0747 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ಜರುಗಿದ್ದರಿಂದ ಮೃತ ಶಿವಲಿಂಗಪ್ಪ ಮತ್ತು ಲಾರಿ.ನಂ. ಒಕ-09 ಊಉ-0747 ನೇದ್ದರ ಚಾಲಕ ರಮೇಶ ತಂ/ ಶಾಮರಾವ ಅಮೋದೆ ಸಾ|| ಜಲಗಾಂವ(ಮಹಾರಾಷ್ಟ್ರ) ಇವರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 234/2017 ಕಲಂ 283, 279, 304[ಎ] ಐ.ಪಿ.ಸಿ ಮತ್ತು ಕಲಂ 122, ಸಂ 177 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.         ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!