Yadgir District Reported Crimes Updated on 04-07-2017

By blogger on ಮಂಗಳವಾರ, ಜುಲೈ 4, 2017


                                           Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ: 498(ಎ), 323, 504, 506 ಐ.ಪಿ.ಸಿ ;- ಪಿರ್ಯಾಧಿ ಶ್ರೀಮತಿ ಸೀತಿಬಾಯಿ ಗಂಡ ಲೊಕೇಶ ಈಕೆಗೆ 1 ವರ್ಷದ ಹಿಂದೆ ಇಲ್ಮಾಪುರ ತಾಂಡ ಲೊಕೇಶ ತಂದೆ ಪಾಂಡು ಈತನೊಂದಿಗೆ ಮದುವೆಯಾಗಿದ್ದು ಸದರಿ ಅರೋಪಿತನು ಪಿರ್ಯಾಧಿಗೆ ಮದುವೆಯಾಗಿ 6 ತಿಂಗಳು ಮಾತ್ರ ಸರಿಯಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆಕೆಯನ್ನು ನೀನು ಸರಿಯಾಗಿ ಇಲ್ಲ ನಿನಗೆ ಅಡುಗೆ ಮಾಡಲಿಕ್ಕೆ ಬರಲ್ಲ ನೀನು ನನ್ನ ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗು ಅಂತ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು ಅಲ್ಲದೇ ಸದರಿಯವಳಿಗೆ ಅವ್ಯಾಚವಾಗಿ ಬೈದು ಜೀವಧ ಭಯ ಹಾಕಿದ ಬಗ್ಗೆ ಪ್ರಕರಣ 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂಃ 78(3) ಕೆ.ಪಿ ಆಕ್ಟ್;- ದಿನಾಂಕಃ 03/07/2017 ರಂದು 11-45 ಎ.ಎಮ್ ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನಂದರೆ ಸುರಪರ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಂಬೇಡ್ಕರ ವೃತ್ತದ ಪಕ್ಕದಲ್ಲಿ ಝೇಂಡದಕೇರಾ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ: ವೆಂಕಟಾಪೂರ, 2) ಜಲಾಲಸಾಬ ತಂದೆ ಬಡೆಸಾಬ ಚೌಧರಿ ಸಾ: ದೇವಾಪುರ ಹಾಗು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 105, ಪಿ.ಸಿ-184, ಪಿಸಿ 235 ರವರೊಂದಿಗೆ ಹೋಗಿ ಝೇಂಡದಕೇರಾ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಒಬ್ಬ ವ್ಯಕ್ತಿಯು ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿರಿ, 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಅವರಿಗೆ ಚೀಟಿ ಬರೆದುಕೊಟ್ಟು ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿತನಿಗೆ ಹಿಡಿದು ಹೆಸರು, ವಿಳಾಸ ವಿಚಾರಿಸಿ ಆತನ ಅಂಗಶೋಧನೆ ಮಾಡಿ 1) ನಗದು ಹಣ, 1870/- ರೂ.ಗಳು 2) ಒಂದು ಮಟಕಾ ನಂಬರ್ ಬರೆದ ಚೀಟಿ 3) ಒಂದು ಬಾಲ್ ಪೆನ್ ಅ.ಕಿ 00=00 ರೂ.ಗಳು ನೇದ್ದವುಗಳು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಒಪ್ಪಿಸಿದ್ದರಿಂದ ಠಾಣೆ ಗುನ್ನೆ ನಂಬರ 172/2017 ಕಲಂ: 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957;- ದಿನಾಂಕ: 03/07/2017 ರಂದು 8-30 ಎಎಂ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆರವರು ಒಂದು ಮರಳು ತುಂಬಿದ ಟಿಪ್ಪರ ಸಮೇತ ಠಾಣೆಗೆ ಬಂದು ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ದಿನಾಂಕ: 01/07/2017 ಮತ್ತು 02/07/2017 ರಂದು ಎರಡು ದಿನಗಳ ಕಿರುಕುಳ ರಜೆ ಮುಗಿಸಿಕೊಂಡು ಮರಳಿ ಕೇಂದ್ರಸ್ಥಾನಕ್ಕೆ ಬರುತ್ತಿದ್ದಾಗ ಇಂದು ದಿನಾಂಕ 03/07/2017 ರಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ವಡಗೇರಾ ಕ್ರಾಸ ಹತ್ತಿರ ಠಾಣಾ ಬೀಟ ಸಂಖ್ಯೆ 06 ನೇದ್ದರ ಬೀಟ್ ಹೆಡ್ ಕಾನ್ಸಟೇಬಲ್ ಶ್ರೀ ಶೇಖ್ ಖುಷರ್ಿದ ಹೆಚ್.ಸಿ 72 ವಡಗೇರಾ ಠಾಣೆ ರವರು ಬಂದಿದ್ದು, ಹುಲಕಲ್ (ಜೆ) ಗ್ರಾಮದ ಹಳ್ಳದಿಂದ ಯಾರೋ ಆಕ್ರಮವಾಗಿ ಮತ್ತು ಕಳ್ಳತನದಿಂದ ಟಿಪ್ಪರನಲ್ಲಿ ಮರಳು ತುಂಬಿಕೊಂಡು ಗುರುಸಣಗಿ ಗ್ರಾಮದ ಮೇಲಿನಿಂದ ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದಿರುವುದಾಗಿ ಸದರಿ ಹೆಚ್.ಸಿ 72 ರವರು ತಿಳಿಸಿದ ಮೇರೆಗೆ ಸರಕಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೆಚ್.ಸಿ 72 ಮತ್ತು ಹೆಚ್.ಸಿ 18 (ಪಿ) ರವರೊಂದಿಗೆ ಹೊರಟು 6-15 ಎಎಮ್ ಸುಮಾರಿಗೆ ಗುರುಸಣಗಿ ಕ್ರಾಸ ಹತ್ತಿರ ನಿಂತುಕೊಂಡಾಗ ಗುರುಸಣಗಿ ಕಡೆಯಿಂದ ಒಂದು ಟಿಪ್ಪರ ಬರುತ್ತಿದ್ದು, ನಾವು ಜೀಪಿನಿಂದ ಇಳಿದು ಟಿಪ್ಪರನ್ನು ನಿಲ್ಲಿಸಿದೆವು. ಸದರಿ ಟಿಪ್ಪರ ಚಾಲಕನು ಟಿಪ್ಪರ ನಿಲ್ಲಿಸಿದವನೆ ಇಳಿದು ಓಡಿ ಹೊದನು. ಬೆನ್ನತ್ತಿದರು ಸಿಗಲಿಲ್ಲ. ಟಿಪ್ಪರ ನಂಬರ ನೋಡಲಾಗಿ ನೊಂದಣಿ ಸಂ. ಕೆಎ 33 ಎ 2838 ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇವರು ಸಕರ್ಾರದಿಂದ ಪಡೆದುಕೊಂಡ ರಾಯಲ್ಟಿಯಾಗಲಿ ಮತ್ತು ಸಕರ್ಾರದ ಪರವಾನಿಗೆಯಾಗಲಿ ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೆ ಮರಳನ್ನು ಆಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಯಿತು. ಮರಳು ತುಂಬಿದ ಟಿಪ್ಪರನ್ನು ಸಿಬ್ಬಂದಿಯವರಿಂದ ಚಲಾಯಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 8-30 ಎಎಂಕ್ಕೆ ವರದಿ ಕೊಟ್ಟಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಪ್ರಕಾರ ಸದರಿ ವರದಿ ಆದಾರದ ಮೇಲಿಂದ ಇಂದು ದಿನಾಂಕ: 03/07/2017 ರಂದು 8-45 ಎಎಮ್ ಕ್ಕೆ ಠಾಣೆ ಗುನ್ನೆ ನಂ. 91/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ: 143,147,504,341,323,506 ಸಂ 149 ಐಪಿಸಿ;- ದಿನಾಂಕ: 03/07/2017 ರಂದು 6-45 ಪಿಎಮ್ ಕ್ಕೆ ಶ್ರೀ ಲಾಲ ಅಹ್ಮದ ತಂದೆ ಇಮಾಮಸಾಬ ನಾಯ್ಕೋಡಿ, ವ:50, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಶಿರವಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಮ್ಮಣ್ಣ ಬಾಷುಮಿಯಾ ಈಗ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ಆತನ ಹೆಂಡತಿ ಬುರಾನ ಬೀ ಇವಳು ಮಾನಸಿಕವಾಗಿ ದುರ್ಬಲವಾಗಿರುತ್ತಾಳೆ. ಹೀಗಾಗಿ ಅವರ ಮಕ್ಕಳಾದ ದೌಲಸಾಬ ಮತ್ತು ರಜಿಯಾ ಬೇಗಂ ಇವರಿಬ್ಬರೂ ನಮ್ಮ ಮನೆ ಹತ್ತಿರ ಬೇರೆ ಮಾಡಿಕೊಂಡು ಇರುತ್ತಾರೆ. ಹೀಗಿದ್ದು, ನಮ್ಮಣ್ಣನ ಮಗಳಾದ ರಜಿಯಾ ಬೇಗಂ ಇವಳು ಈಗ ಸುಮಾರು 2 ವರ್ಷಗಳಿಂದ ನಾಯ್ಕಲ್ ಗ್ರಾಮದ ಮಹ್ಮದ ಜಲಾಲ ತಂದೆ ರಸೂಲಸಾಬ ರಾಮಗಿರಿ ಈತನೊಂದಿಗೆ ಪ್ರೀತಿ ಮಾಡುತ್ತಿದ್ದು, ಅವನು ಮೊದಲು ರಜಿಯಾ ಬೇಗಂಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಬಂದಿದ್ದು, ಈಗ ಮದುವೆ ಮಾಡಿಕೊಳ್ಳುವುದಿಲ್ಲವೆಂದು ನಿರಾಕರಿಸುತ್ತಿದ್ದಾನೆ. ಹೀಗಿದ್ದು ಇಂದು ದಿನಾಂಕ: 03/07/2017 ರಂದು ಸಾಯಂಕಾಲ 4-30 ಪಿಎಮ್ ಸುಮಾರಿಗೆ ನಾನು ಮತ್ತು ಅಬ್ದುಲ್ ಬಾಷಾ ತಂದೆ ಲಾಲಸಾಬ, ಬಾಬು ಸನ್ನತಿ, ಶೇಖ್ ಹುಸೇನಸಾಬ ಗೂಡುರು, ರಾಜಅಹ್ಮದ ತಂದೆ ಖಾಸಿಂಸಾಬ, ಮಹಿಮೂದ ತಂದೆ ಮುಲಕಸಾಬ, ಇಸ್ಮಾಯಿಲ ತಂದೆ ರಸೂಲಸಾಬ, ಲಾಲ ಅಹ್ಮದ ತಂದೆ ಮಹಿಬೂಬಸಾಬ ಹಾಗೂ ಇತರರು ಸೇರಿ ನಾಯ್ಕಲ್ ಗ್ರಾಮಕ್ಕೆ ಬಂದು ರಜಿಯಾಳಿಗೆ ಪ್ರೀತಿ ಮಾಡಿದ ಮಹ್ಮದ ಜಲಾಲ ಇವರ ಮನೆಗೆ ಹೋಗಿ ಅವರ ತಂದೆಯಾದ ರಸೂಲಸಾಬ ತಂದೆ ಕಾಸಿಂಸಾಬ ರಾಮಗಿರಿ, ತಾಯಿ ಬೇಗಂ ಗಂಡ ರಸೂಲಸಾಬ ರಾಮಗಿರಿ ಮತ್ತು ಇತರರಿಗೆ ಹುಡುಗ-ಹುಡುಗಿ ಒಬ್ಬರಿಗೊಬ್ಬರೂ ಪ್ರೀತಿ ಮಾಡಿರುತ್ತಾರೆ ಜಲಾಲನು ರಜಿಯಾಳಿಗೆ ಮದುವೆ ಮಾಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟಿರುತ್ತಾನೆ. ಅದಕ್ಕೆ ಇಬ್ಬರಿಗೆ ಮದುವೆ ಮಾಡಿಸಿದರೆ ಎಲ್ಲಾ ಚನ್ನಾಗಿ ಆಗುತ್ತದೆ ಎಂದು ಹೇಳಿದಾಗ 1) ರಸೂಲಸಾಬ ತಂದೆ ಕಾಸಿಂಸಾಬ ರಾಮಗಿರಿ, 2) ಬೇಗಂ ಗಂಡ ರಸೂಲಸಾಬ ರಾಮಗಿರಿ, 3) ಮಹ್ಮದ ಜಲಾಲ ತಂದೆ ರಸೂಲಸಾಬ ರಾಮಗಿರಿ, 4) ಇಮಾಮಬೀ ತಂದೆ ರಸೂಲಸಾಬ ರಾಮಗಿರಿ ಎಲ್ಲರೂ ಸಾ:ನಾಯ್ಕಲ್ 5) ಮಜೀದ ತಂದೆ ಬಾವಾಸಾಬ ಬಿಳ್ಹಾರ, 6) ತಸ್ಲಿಮ ಗಂಡ ಮಜೀದ ಬಿಳ್ಹಾರ ಇಬ್ಬರೂ ಸಾ:ವಡಗೇರಾ ಮತ್ತು ಇತರರು ಸೇರಿ ಬಂದವರೆ ನಮ್ಮ ಹುಡುಗನಿಗೆ ರಜಿಯಾಳೊಂದಿಗೆ ನಾವು ಮದುವೆ ಮಾಡಿಸುವುದಿಲ್ಲ. ನೀವು ಏನು ಮಾಡುತ್ತಿರಿ, ಭೊಸಡಿ ಮಕ್ಕಳೆ ನಮ್ಮ ಮನೆತನಕ ಬರುವಷ್ಟು ಧೈರ್ಯ ಬಂತೆ ನಿಮಗೆ ಎಂದು ಜಗಳ ತೆಗೆದವರೆ ರಸೂಲಸಾಬನು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿದಾಗ, ಇಮಾಮಬೀ ಇವಳು ಕೈಯಿಂದ ಮುಷ್ಠಿ ಮಾಡಿ ನನ್ನ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದಳು. ನಮ್ಮ ಅಣ್ಣತಮ್ಮಕೀಯ ಅಬ್ದುಲ್ ಬಾಷಾ ಈತನಿಗೆ ಮಜೀದನು ಕೈಯಿಂದ ಮುಷ್ಟಿ ಮಾಡಿ ಹೊಡೆದನು. ರಜಿಯಾ ಇವಳು ನಾನು ಇದೇ ಮನೆಯಲ್ಲಿ ಇರುತ್ತೇನೆ ಎಂದು ಅವರ ಮನೆ ಒಳಗಡೆ ಹೋಗುವಾಗ ಬೇಗಂ ಮತ್ತು ತಸ್ಲಿಮ ಇಬ್ಬರೂ ತಡೆದು ನಿಲ್ಲಿಸಿ, ಕೈಯಿಂದ ಹೊಡೆದಿರುತ್ತಾರೆ. ಆಗ ಜಗಳವನ್ನು ರಾಜಅಹ್ಮದ ತಂದೆ ಖಾಸಿಂಸಾಬ, ಮಹಿಮೂದ ತಂದೆ ಮುಲಕಸಾಬ, ಇಸ್ಮಾಯಿಲ ತಂದೆ ರಸೂಲಸಾಬ, ಲಾಲ ಅಹ್ಮದ ತಂದೆ ಮಹಿಬೂಬಸಾಬ ಇವರುಗಳು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಮನೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಎಲ್ಲರೂ ಸೇರಿ ಜೀವ ಬೆದರಿಕೆ ಹಾಕಿದರು. ಕಾರಣ ನಮ್ಮ ಅಣ್ಣನ ಮಗಳಿಗೆ ಜಲಾಲನು ಪ್ರೀತಿ ಮಾಡಿದ್ದು, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಈಗ ಮದುವೆ ಮಾಡಿಕೊಳ್ಳಲು ನಿರಾಕಸುತ್ತಿದ್ದರಿಂದ ಮನೆಗೆ ಹೋಗಿ ಕೇಳಿದರಾಯಿತು ಅಂತಾ ಕೇಳಲು ಹೋದರೆ ನಮಗೆ ಆಕ್ರಮಕೂಟ ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿ, ಅವಾಚ್ಯ ಬೈದು, ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ನನಗೆ ಅಂತಹ ಪೆಟ್ಟುಗಳಾದ ಕಾರಣ ಆಸ್ಪತ್ರೆಗೆ ಉಪಚಾರಕ್ಕೆ ಹೋಗುವುದಿಲ್ಲ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2017 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!