Yadgir District Reported Crimes Updated on 09-06-2017

By blogger on ಶುಕ್ರವಾರ, ಜೂನ್ 9, 2017


                                                    Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 30/2017 ಕಲಂ 279, 337, 338, IPC ಸಂ. 187 ಐ.ಎಂ.ವಿ ಆ್ಯಕ್ಟ್ ;- ದಿನಾಂಕ 08/06/2017 ರಂದು ಫಿಯರ್ಾದಿ ಮತ್ತು ಅವರ ಮಗನಾದ ಅರುಣ ಇಬ್ಬರು ಕೂಡಿಕೊಂಡು ತಮ್ಮ ಮೋಟಾರು ಬೈಕ್ ನಂ.ಕೆಎ-32, ಇಎಫ್.-8703 ನೇದ್ದನ್ನು ತೆಗೆದುಕೊಂಡು ಬನ್ನಟ್ಟಿ ಗ್ರಾಮಕ್ಕೆ ಹೋಗುವಾಗ  ಯಾದಗಿರಿಯಲ್ಲಿನ ಸುಭಾಷ ಸರ್ಕಲ್ ದಾಟುತ್ತಿದ್ದಾಗ  ಆರೋಪಿತನು ತನ್ನ  ಮೋಟಾರು ಸೈಕಲ್ ಸವಾರನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಫಿಯರ್ಾದಿಯ ಮೋಟರು ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಪಿಯರ್ಾದಿಗೆ ಸದರಿ ಅಪಘಾತದಲ್ಲಿ ನನಗೆ ಎಡಗೈ ಮೊಣಕೈಗೆ, ಮುಂಗೈಗೆ ತರಚಿದ ರಕ್ತಗಾಯ, ಎಡಮೊಣಕಾಲಿಗೆ ಭಾರೀ ಗುಪ್ತಗಾಯವಾಗಿರುತ್ತದೆ ಫಿಯರ್ಾದಿ ಮಗ ಅರುಣ ಈತನಿಗೆ ಎಡಮೊಣಕೈಗೆ, ಎಡ ಅಂಗೈಗೆ ತರಚಿದ ರಕ್ತಗಾಯ, ಎಡಮೊಣಕಾಲಿಗೆ ಭಾರೀ ಗುಪ್ತಗಾಯವಾಗಿದ್ದು, ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನು ತನ್ನ ವಾಹನವನ್ನು ನಿಲ್ಲಿಸಿದೇ ಸ್ಥಳದಿಂದ ಮೋಟಾರು ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಫಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 30/2017 ಕಲಂ 279, 337, 338 ಐಪಿಸಿ ಸಂ. 187 ಐ.ಎಂ.ವಿ ಆ್ಯಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 31/2017 ಕಲಂ 279,337,338, ಐಪಿಸಿ:-ದಿನಾಂಕ 09/06/2017 ರಂದು 1-15 ಎ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಆರ್,ಟಿ,ಎ /ಎಮ್.ಎಲ್.ಸಿ ವಸುಲಾಗಿದ್ದರ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಫಿಯರ್ಾದಿ ಗಾಯಾಳು ಶ್ರೀ ಮಲ್ಲರೆಡ್ಡಿ ತಂದೆ ಶಿವರಾಜ್ ಕಲಮನಿ ವಯ;30ವರ್ಷ, ಜಾ;ಲಿಂಗಾಯತ್ ರೆಡ್ಡಿ, ಉ;ಲೇಬರ್ ಸುಪರ್ ವೈಜರ್, ಸಾ;ಮಾಚನೂರ ತಾ;ಶಹಾಪುರ, ಜಿ;ಯಾದಗಿರಿ ಇವರು ತಮ್ಮ ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಲೇಬರ್ ಸೂಪರ್ ವೈಜರ್ ಆಗಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ಹೊಸದಾಗಿ ನಿಮರ್ಾಣವಾಗುವ ಕಟ್ಟಡಗಳಿಗೆ ಬೇಕಾಗುವ ಕಲ್ಲುಗಳು, ಬಾಂಡ್ ಕಲ್ಲುಗಳನ್ನು ಗುತ್ತಿಗೆ ಹಿಡಿದು ಮಾರಾಟ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ನಾನು ಯಾದಗಿರಿಯಲ್ಲಿ ಒಬ್ಬರಿಗೆ ಬಾಂಡ್ ಕಲ್ಲುಗಳನ್ನು ತಂದು ಹಾಕುವ ಗುತ್ತಿಗೆ ಹಿಡಿದಿದ್ದೆನು. ಅದಕ್ಕಾಗಿ ನಿನ್ನೆ ದಿನಾಂಕ 08/06/2017 ರಂದು ಬೆಳಿಗ್ಗೆ ಸುಮಾರಿಗೆ ನಾನು ವಾಡಿಗೆ ಬಂದು ನಮಗೆ ಪರಿಚಯವಿರುವ ಲಾರಿ ಮಾಲೀಕರಾದ ಆನಂದ ತಂದೆ ಹಣಮಂತ ಆಂದೋಲಾ ಸಾ;ಲಕ್ಷ್ಮೀಪುರ ವಾಡಿ ಇವರ ಲಾರಿ ನಂ. ಎಮ್.ಎಚ್.-25, ಬಿ-7805 ನೇದ್ದು ಬಾಡಿಗೆ ತೆಗೆದುಕೊಂಡು ಅವರ ಲಾರಿಯ ಲೇಬರ್ಗಳಾದ ಮಲ್ಲಿಕಾಜರ್ುನ ತಂದೆ ದುರ್ಗಪ್ಪ ರಾಯಚೂರ, ಲಕ್ಷ್ಮಣ ತಂದೆ ಲಚಮಯ್ಯ ಚಿತ್ತಾಪುರ ಸಾ;ಇಬ್ಬರು ಲಕ್ಷ್ಮೀಪುರ, ವಾಡಿ ಇವರಿಗೆ ಕರೆದುಕೊಂಡು ಲಾರಿಗೆ ಬಾಂಡ ಕಲ್ಲುಗಳನ್ನು ಲೋಡ್ ಮಾಡಿದೆವು. ನಂತರ ವಾಡಿಯಲ್ಲಿಯೇ ಊಟ ಮಾಡಿಕೊಂಡು ರಾತ್ರಿ 10-30 ಪಿ.ಎಂ.ಕ್ಕೆ ವಾಡಿಯಿಂದ ಯಾದಗಿರಿಗೆ ಹೊರಟೆವು. ಲಾರಿ ಚಾಲಕ ಮಹೆಶ ತಂದೆ ಹಣಮಂತ ಆಂದೋಲಾ ಈತನು ಲಾರಿಯನ್ನು ನಡೆಸಿಕೊಂಡು ಹೊರಟಿದ್ದನು. ನಾನು ಮತ್ತು ಲೇಬರ್ಗಳಾದ ಮಲ್ಲಿಕಾಜರ್ುನ, ಲಕ್ಷ್ಮಣ ಸೇರಿಕೊಂಡು ಲಾರಿಯ ಕ್ಯಾಬಿನ್ ಒಳಗೆ ಕುಳಿತುಕೊಂಡಿದ್ದೆವು. ಮಾರ್ಗ ಮದ್ಯೆ ಬರುವಾಗ ಲಾರಿಯನ್ನು ಮಹೇಶ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೊರಟಾಗ ನಾವೆಲ್ಲರೂ ಮಹೇಶನಿಗೆ ಸ್ವಲ್ಪ ನಿಧಾನವಾಗಿ ಓಡಿಸು ಅಂತಾ ಹೇಳಿದರೂ ಕೇಳದೇ ಅದೇ ವೇಗದಲ್ಲಿ ಹೊರಟಿದ್ದಾಗ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಕಂಚಗಾರಹಳ್ಳಿ ಗೇಟ್ ಕ್ರಾಸ್ ಹತ್ತಿರ ನಮ್ಮ ಎದುರಿಗೆ ಬರುತ್ತಿದ್ದ ಒಂದು ಲಾರಿಯ ಚಾಲಕನು ಕೂಡ ಮುಖ್ಯ ರಸ್ತೆಯ ಮೇಲೆ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದವನೇ ನೋಡು ನೋಡುತ್ತಿದ್ದಂತೆೆ ಎರಡು ಲಾರಿ ಚಾಲಕರುಗಳು ತಮ್ಮ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನೇರವಾಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಅಪಘಾತ ಮಾಡಿದರು ಸದರಿ ಅಪಘಾತದಲ್ಲಿ ನನಗೆ ಬಲಗಣ್ಣಿನ ಮೇಲೆ ಹಣೆಗೆ ರಕ್ತಗಾಯ, ಬಲಮೊಣಕಾಲಿಗೆ ಗುಪ್ತಗಾಯವಾಗಿದ್ದು, ಮಲ್ಲಿಕಾಜರ್ುನ ಈತನಿಗೆ ಬಲಗಾಲಿನ ಹಿಮ್ಮಡಿಗೆ ಬಾರೀ ರಕ್ತಗಾಯ ಅಲ್ಲಲ್ಲಿ ತರಚಿದ ರಕ್ತಗಾಯ ವಾಗಿರುತ್ತವೆ, ಲಕ್ಷ್ಮಣ ಈತನಿಗೆ ಎದೆಯ ಬಲಬಾಗಕ್ಕೆ ಬಾರೀ ಗುಪ್ತಗಾಯವಾಗಿ ಎದೆ ಉಬ್ಬಿಕೊಂಡಿರುತ್ತದೆ ಮತ್ತು ನಮ್ಮ ಲಾರಿ ಚಾಲಕ ಮಹೇಶ ಈತನಿಗೆ ಬಲಗೈ ಮೊಣಕೈಗೆ, ಹಣೆಗೆ ತರಚಿದ ರಕ್ತಗಾಯವಾಗಿದ್ದು, ಎಡಗಾಲು ಮೊಣಕಾಲಿಗೆ, ಕುತ್ತಿಗೆಗೆ ಮತ್ತು ಬಾರೀ ಗುಪ್ತಗಾಯವಾಗಿ ಬೇವುಶ್ ಆಗಿರುತ್ತಾನೆ. ನಾನು ಮತ್ತು ಮಲ್ಲಿಕಾಜರ್ುನ ಲಾರಿಯಿಂದ ಕೆಳಗೆ ಇಳಿದು ನಮಗೆ ಅಪಘಾತಪಡಿಸಿದ ಲಾರಿ ಎದುರಿಗೆ ನಿಂತಿದ್ದು ಅದರ ನಂಬರ್ ನೋಡಲಾಗಿ ಎಮ್.ಎಚ್.-26, ಎಡಿ-7258 ನೇದ್ದು ಇದ್ದು ಅದರ ಚಾಲಕ ಅಲ್ಲೇ ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಲಕ್ಷ್ಮಣ ತಂದೆ ಮಾಧವರಾವ್ ನಾಗರಬಂಡಿ ಸಾ;ಮಾಲಕವಾಡಿ (ಮಹಾರಾಷ್ಟ್ರ) ಅಂತಾ ತಿಳಿಸಿರುತ್ತಾನೆ. ನಾನು ಸದರಿ ಘಟನೆಯ ಬಗ್ಗೆ ಮಹೇಶ ಈತನ ಅಣ್ಣನಾದ ರಾಜು ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿ ಯಾದಗಿರಿ ಆಸ್ಪತ್ರೆಗೆ ಬರಲು ತಿಳಿಸಿದೆನು. ಆಗ ಸ್ಥಳಕ್ಕೆ 108 ಅಂಬುಲೆನ್ಸ್ ಬಂದು ನಮಗೆಲ್ಲರಿಗೂ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ನೀಡಿರುತ್ತಾರೆ. ನಂತರ ಆಸ್ಪತ್ರೆಗೆ ಶ್ರೀ ರಾಜು ತಂದೆ ಹಣಮಂತ ಆಂದೊಲಾ, ಶ್ರೀ ಬಾಬು ತಂದೆ ಶ್ಯಾಮರಾವ್ ಚಿತ್ತಾಪುರ ಸಾ;ಲಕ್ಷ್ಮೀಪುರ ವಾಡಿ, ಶ್ರೀ ಸಿದ್ದಪ್ಪ ತಂದೆ ನಾಗಪ್ಪ ಗದ್ವಾಲ್ ಸಾ;ಚಿತ್ತಾಪುರ ಇವರು ಬಂದಿರುತ್ತಾರೆ. ಕಾರಣ ನಿನ್ನೆ ದಿನಾಂಕ 08/06/2017 ರಂದು ಸಮಯ ಅಂದಾಜು ರಾತ್ರಿ 11-30 ಪಿ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಕಂಚಗಾರ ಹಳ್ಳಿ ಗೇಟ್ ಕ್ರಾಸ್ ಹತ್ತಿರ ಘಟನೆ ಜರುಗಿದ್ದು, ಸದರಿ ಅಪಘಾತವು ಇಬ್ಬರು ಲಾರಿ ಚಾಲಕರ  ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಎರಡು ಲಾರಿ ಚಾಲಕರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 2-30 ಎ.ಎಂ.ಕ್ಕೆ ಬಂದು ಫಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 31/2017 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  


ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ: 341,323,324,504,506 ಸಂ 34 ಐ.ಪಿ.ಸಿ;- ಈ ಹಿಂದೆ ಫಿಯರ್ಾದಿ ತಂಗಿ ಸಿದ್ದಮ್ಮ ಗಂಡ ಮಲ್ಲಪ್ಪ ಈಕೆಯು ಕಾಣೆಯಾದ ಬಗ್ಗೆ ಸದರಿ ಫಿಯರ್ಾದಿಯು ದೂರು ದಾಖಲಿಸಿದ್ದು ಇ ಹಿನ್ನಲೆಯಲ್ಲಿ ದಿ: 05-06-2017 ರಂದು ಫಿಯರ್ಾದಿಯು ಮರಗಪ್ಪ ಈತನ ಅಂಗಡಿಯ ಮುಂದೆ ನಡೆದುಕೊಂಡು ಬರುವಾಗ ಆರೋಪಿತರು ತಡೆದು ನಿಲ್ಲಿಸಿ ಬೋಸಡಿ ಮಗನೆ ನಿನ್ನ ತಂಗಿಗೆ ಹಟ್ಟಿವಿ ನಿನ್ನ ಹೆಂಡತಿಗೆ ಕೂಡ ಹಡತಿವಿ ಅಂತಾ ಕುಡಿದ ಅಮಲಿನಲ್ಲಿ ಅವಾಚ್ಚವಾಗಿ ಬೆಯ್ದು ಜಗಳಮಾಡಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾದ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 101/2017 ಕಲಂ 379 ಐಪಿಸಿ ;- ದಿನಾಂಕ 08/06/2017 ರಂದು ಸಾಯಂಕಾಲ 5-00 ಪಿ.ಎಂ.ಕ್ಕೆ ಓರುಂಚಾ ಗ್ರಾಮದ  ಸೀಮೆಯಲ್ಲಿ ಬರುವ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ ಚಾಲಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-6847 ಮತ್ತು ಟ್ರ್ಯಾಲಿ ನಂ 6848 ನೆದ್ದರಲ್ಲಿ ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 188/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 08/06/2017 ರಂದು ಮದ್ಯಾಹ್ನ 13-45 ಗಂಟೆಗೆ ಸರಕಾರಿ ತರ್ಪೆ ಫಿರ್ಯಾದಿ ಶ್ರೀ ಅಂಬಾರಾಯ ಎಂ ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಮೂರು ಜನರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 08/06/2017 ರಂದು ಮುಂಜಾನೆ 11-30 ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ನಗರದ ಮಮದಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಸಾರ್ವಜನಿಕರಿಂದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿಯ ಮೇರೆಗೆ ಫಿರ್ಯಾದಿಯವರು ತಮ್ಮ ಸಂಗಡ ಸಿಬ್ಬಂದಿ ಹಾಗೂ -ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮೂರು ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 2500=00 ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ 4 ಮಟಕಾ ಚೀಟಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದು ಸದರಿ ವರದಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮದ್ಯಾಹ್ನ 14-15 ಗಂಟೆಗೆ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 188/2017 ಕಲಂ 78[3] ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 189/2017 ಕಲಂ 78 (3) ಕೆ.ಪಿ ಆಕ್ಟ;- ದಿನಾಂಕ; 08/06/2017 ರಂದು ಮಧ್ಯಾಹ್ನ 3.15 ಪಿ.ಎಂಕ್ಕೆ ಇಬ್ಬರು ವ್ಯಕ್ತಿಗಳು, ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಹಾಜರಾಗಿ ವರದಿ ಕೊಟ್ಟಿದ್ದು ವರದಿ ಸಾರಾಂಶವೇನೆಂದರೆ ಇಂದು ಮಧ್ಯಾಹ್ನ 12.15 ರಂದು ಮಧ್ಯಾಹ್ನ ಠಾಣೆಯಲ್ಲಿದ್ದಾಗ ಶಹಾಪುರ ಗುತ್ತಿಪೇಟ ಕಮಿಟಿ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಪಿ.ಐ ಸಾಹೇಬರ ಆಧೇಶದನ್ವಯ ಸಿಬ್ಬಂದಿ ಹಾಗೂ ಪಂಚರೊಂದಿಗೆ ಶಹಾಪುರ ಗುತ್ತಿಪೇಟ ಕಮಿಟಿಹಾಲ ಹತ್ತಿರ ಹೋಗಿ ಅಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 1500=00 ರೂಪಾಯಿ, ಒಂದು ಮಟಕಾ ಚೀಟಿ ಹಾಗೂ ಒಂದು ಬಲಪೆನನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದರಿಂದ ಸದರಿ ಪ್ರಕರಣವು ಅಸಜ್ಞೆಯ ಅಪರಾಧವಾಗುತ್ತಿದ್ದರಿಂದ ಪ್ರಕರಣ ದಾಖಲಿಸಲು ಅನುಮತಿ ಕುರಿತು ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯ ಶಹಾಪುರ ರವರಲ್ಲಿ ಪತ್ರ ವ್ಯವಹಾರ ಮಾಡಿ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ. 189/2017 ಕಲಂ 78(3) ಕೆ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 190/2017 ಕಲಂ 379 ಐ.ಪಿ.ಸಿ ;- ದಿನಾಂಕ 08/06/2017 ರಂದು ಸಾಯಂಕಾಲ 17-45 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಿವಶರಣಪ್ಪ ಕಣ್ಣಿ  ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು ಅಕ್ರಮವಾಗಿ ಮರಳು ಸಾಗಿಸುತಿದ್ದ ಎರಡು ಟ್ಯಾಕ್ಟರ ವಾಹನಗಳನ್ನು ಠಾಣೆಗೆ ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 14-00 ಗಂಟೆಗೆ  ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ ನಗರದಲ್ಲಿ ಪೇಟ್ರೋಲಿಂಗ ಕರ್ತವ್ಯ ಕುರಿತು ಜೊತೆಯಲಿ ಹೊನ್ನಪ್ಪ ಹೆಚ್.ಸಿ 101 ಇವರೊಂದಿಗೆ  ಮೋಟರ ಸೈಕಲ ಮೇಲೆ ನಗರದಲ್ಲಿ ಹೋಗಿ ಕರ್ತವ್ಯ ನಿರ್ವಹಿಸುತ್ತಾ ಸಾಯಂಕಾಲ  17-00 ಗಂಟೆಗೆ ಶಹಾಪೂರ-ವಿಭೂತಿಹಳ್ಳಿ ರೋಡಿನ ಮೇಲೆ ಚಾಂದ ಪೇಟ್ರೋಲ್ ಪಂಪ ಹತ್ತಿರ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ವಿಭೂತಿಹಳ್ಳಿ ಗ್ರಾಮದ ಕಡೆಯಿಂದ ಎರಡು ಟ್ಯಾಕ್ಟರ ವಾಹನಗಳಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ವಾಹನಗಳನ್ನು ರೋಡಿನ ಬದಿಗೆ ಸಹರಾ ಮೋಟರ್ಸ ಬಿಲ್ಡಿಂಗ್ ಎದರುಗಡೆ ನಿಲ್ಲಿಸಿ ನೋಡಲಾಗಿ 1] ಮಹಿಂದ್ರಾ 475 ಡಿ.ಐ ಕಂಪನಿಯ ಕೆಂಪು ಬಣ್ಣದ ಇಂಜಿನ್ ಇದ್ದು ಅದರ ನಂಬರ ಪ್ಲೇಟ್ ಇರುವುದಿಲ್ಲ ಅದರ ಇಂಜಿನ್ ನಂಬರ ಓಅಃ02101  ಅಂತ ಇರುತ್ತದೆ. ಅಂ.ಕಿ 1 ಲಕ್ಷ ರೂಪಾಯಿ ಮತ್ತು ಟ್ಯಾಕ್ಟರ ಇಂಜಿನಿಗೆ  ಹೊಂದಿಕೊಂಡಿರುವ ಕೆಂಪು  ಬಣ್ಣದ ಟ್ರಾಲಿಗೆ ನಂಬರ  ಪ್ಲೇಟ್ ಇರುವುದಿಲ್ಲ   ಅಂ.ಕಿ 50,000/- ರೂಪಾಯಿ ಮತ್ತು ಸದರಿ ಟ್ಯಾಕ್ಟರ ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ನಷ್ಟು ಮರಳು ಇದ್ದು ಅದರ ಅಂ.ಕಿ 1500/- ರೂಪಾಯಿ  ಟ್ಯಾಕ್ಟರ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲು  ಹೈಯ್ಯಾಳಪ್ಪ ತಂದೆ ದೇವಿಂದ್ರಪ್ಪ ಪರಮಣ್ಣನೋರ ಸಾಃ ವಿಭೂತಿಹಳ್ಳಿ ಅಂತ ಹೇಳಿದನು. ಇನ್ನೊಂದು ಟ್ಯಾಕ್ಟರ ಪರಿಶೀಲಿಸಿನೋಡಲಾಗಿ 2] ಮಹಿಂದ್ರಾ 475 ಡಿ.ಐ ಕಂಪನಿಯ ಕೆಂಪು ಬಣ್ಣದ ಇಂಜಿನ ಇದ್ದು ನಂಬರ ಪ್ಲೇಟ್ ಇರುವುದಿಲ್ಲ. ಇಂಜಿನ್ ನಂಬರ ಖಇಓಘ4454 ಅಂತ ಇದ್ದು, ಅಂ.ಕಿ 1 ಲಕ್ಷ ರೂಪಾಯಿ ಮತ್ತು ಟ್ಯಾಕ್ಟರ ಇಂಜಿನಿಗೆ  ಹೊಂದಿಕೊಂಡಿರುವ ಕೆಂಪು ಬಣ್ಣದ ಟ್ರಾಲಿಗೆ ನಂಬರ  ಪ್ಲೇಟ್ ಇರುವುದಿಲ್ಲ   ಅಂ.ಕಿ 50,000/- ರೂಪಾಯಿ ಮತ್ತು ಸದರಿ ಟ್ಯಾಕ್ಟರ ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ನಷ್ಟು ಮರಳು ಇದ್ದು ಅದರ ಅಂ.ಕಿ 1500/- ರೂಪಾಯಿ  ಟ್ಯಾಕ್ಟರ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲು  ಶಿವಪ್ಪ ತಂದೆ ಭೀಮಣ್ಣ ಬೇವಿನಹಳ್ಳಿ ಸಾಃ ವಿಭೂತಿಹಳ್ಳಿ ಅಂತ ಹೇಳಿದನು. ಸದರಿ ಎರಡು ಟ್ಯಾಕ್ಟರ  ವಾಹನದ ಚಾಲಕರಿಗೆ  ಮರಳು ಎಲ್ಲಿಂದ  ಲೋಡ ಮಾಡಿಕೊಂಡು ಬಂದಿದ್ದು ಅಂತ ವಿಚಾರಿಸಿದ್ದು ಸದರಿ ಇಬ್ಬರೂ ಜನರು ಹೈಯ್ಯಾಳ[ಬಿ] ಗ್ರಾಮದ ಸಿಮಾಂತರದಲ್ಲಿ ಬರುವ ಕೃಷ್ಣಾ ನದಿಯಲ್ಲಿ ಮರಳು ಪರವಾನಿಗೆ ಪತ್ರ ಪಡೆಯದೆ ಮರಳು ಲೋಡ ಮಾಡಿಕೊಂಡು ಅದನ್ನು ಮಾರಾಟ ಮಾಡಲು ಶಹಾಪೂರಕ್ಕೆ ತೆಗೆದುಕೊಂಡು ಬರುತಿದ್ದೆವು ಅಂತ ಹೇಳಿದರು. ಸದರಿ ಟ್ಯಾಕ್ಟರ ವಾಹನ ಚಾಲಕರು ಮತ್ತು ಮಾಲಿಕರು ಸೇರಿ  ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ  ವಾಹನ ಚಾಲಕರಿಗೆ ತಮ್ಮ ತಮ್ಮ ಟ್ಯಾಕ್ಟರ ವಾಹನಗಳನ್ನು ಶಹಾಪೂರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ  ಇಬ್ಬರೂ ಟ್ಯಾಕ್ಟರ ವಾಹನ ಚಾಲಕರು ಚಾಂದ ಪೇಟ್ರೋಲ್ ಪಂಪ್ನಿಂದ ತಮ್ಮ ತಮ್ಮ ಟ್ಯಾಕ್ಟರ ವಾಹನವನ್ನು ಚಲಾಯಿಸಿಕೊಂಡು ಶಹಾಪೂರ ಪೊಲೀಸ್ ಠಾಣೆಗೆ ಬರುತಿದ್ದಾಗ  ಠಾಣೆಯ ಎದರುಗಡೆ  ಮಚಗರ ಗಡ್ಡಿಯ ಸಮೀಪ ಬಂದಾಗ ಇಬ್ಬರೂ ವಾಹನ ಚಾಲಕರು ಸದರಿ ವಾಹನವನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದು ರೋಡಿನ ಬದಿಗೆ ನಿಲ್ಲಿಸಿ ವಾಹನ ಬಿಟ್ಟು ಓಡಿ ಹೋಗಿದ್ದು, ಹಿಂಬಾಲಿಸಿದರು ಸಿಕ್ಕಿರುವುದಿಲ್ಲ.  ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕ್ರಮ ಕೈಕೊಳ್ಳುವಂತೆ ವರದಿಯ ಮೂಲಕ ಸೂಚಿಸಿದ ಪ್ರಕಾರ ಠಾಣೆ ಗುನ್ನೆ ನಂಬರ 190/2017 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!