Yadgir District Reported Crimes Updated on 03-06-2017

By blogger on ಶನಿವಾರ, ಜೂನ್ 3, 2017


                                                         Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂಃ 498(ಎ), 306 ಸಂಗಡ 34 ಐಪಿಸಿ;- ದಿನಾಂಕ 02.06.2017 ರಂದು 10-30 ಎ.ಎಮ್ ಕ್ಕೆ ಯಂಕಟಪ್ಪ ತಂದೆ ಆಶಣ್ಣ ಮಾರೆಮ್ಮೋಳ ಸಾ||ಕೊಂಕಲ್ ಇವರು ಲಿಖೀತ ಫಿರ್ಯಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಅಂದರೆ ಯಂಕಟಪ್ಪ ತಂದೆ ಆಶಣ್ಣ ಮಾರೆಮ್ಮೊಳ ವ|| 55 ವರ್ಷ ಜಾ||ಕಬ್ಬಲಿಗ ಉ|| ಒಕ್ಕಲುತನ ಸಾ|| ಕೊಂಕಲ್ ಗ್ರಾಮ ಇದ್ದು ಈ ಅಜರ್ಿಯ ಮೂಲಕ ಬರೆದುಕೊಡುವುದೆನೇಂದರೆ, ನನಗೆ 1] ಶ್ರೀನಿವಾಸ, 2] ಶ್ರಿಮತಿ ಅನೀತಾ, 3] ಸಾವಿತ್ರಮ್ಮ, 4] ರಾಮಲಿಂಗಮ್ಮ ಅಂತಾ ನಾಲ್ಕು ಜನ ಮಕ್ಕಳಿರುತ್ತಾರೆ. ನನ್ನ ದೊಡ್ಡ ಮಗಳಾದ ಅನೀತಾ ಇವಳನ್ನು ನಮ್ಮೂರಲ್ಲಿ  ನಮ್ಮ ಸಂಬಂಧಿಕರಾದ ನರಸಪ್ಪ ಮಲ್ಲಪೊಳ್ ಈತನ ಮಗನಾದ ಆನಂದ ಈತನಿಗೆ 9 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು ಅವರಿಗೆ ನರಸಪ್ಪ 7 ವರ್ಷ, ಗೀತಾ 2 ವರ್ಷ ಇಬ್ಬರು ಮಕ್ಕಳಿರುತ್ತಾರೆ. ಮದುವೆ ಆದಾಗಿನಿಂದ ನನ್ನ ಅಳಿಯ ಮಗಳು ಅನೂನ್ಯವಾಗಿದ್ದರು. ಇತ್ತೀಚಿನ ದಿನಗಳಲ್ಲಿ ನನ್ನ ಅಳಿಯ ಆನಂದ ಕುಡಿತದ ಚಟಕ್ಕೆ ಬಿದ್ದು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಹೊಡೆ-ಬಡೆ ಮಾಡುತ್ತಿದ್ದನು. ತನ್ನ ಗಂಡ ಮತ್ತು ಅತ್ತೆ ನಿಂಗಮ್ಮ ಮತ್ತು ಮೈದುನರಾದ ನಿಂಗಪ್ಪ, ಸಾವಪ್ಪ ಇವರುಗಳು ತನಗೆ ಇನ್ನಿಲ್ಲದ ಮಾನಸೀಕ ಹಿಂಸೆಯನ್ನು ನೀಡುತ್ತಿದ್ದಾರೆ ನನಗೆ ಅವರು ಕೊಡುವ ಹಿಂಸೆ ತಾಳಿಕೊಳ್ಳು ಆಗುತ್ತಿಲ್ಲ ಅಂತಾ ಇತ್ತಿತ್ತಲಾಗಿ ನನ್ನ ಮಗಳು ತವರು ಮನೆಗೆ ಬಂದಾಗ ನಮ್ಮ ಮುಂದೆ ಹೇಳುತ್ತಿದ್ದಳು. ನಿನ್ನೆ ದಿನಾಂಕ 01.06.2017 ರಂದು ರಾತ್ರಿ ನನ್ನ ಮಗಳಿಗೆ ಕ್ಷುಲ್ಲಕ ಕಾರಣಕ್ಕೆ ನನ್ನ ಅಳಿಯ ಕೋಪಮಾಡಿಕೊಂಡು ಕೈ ಮಾಡಿಕೊಂಡಿರುವ ವಿಷಯ ಗೊತ್ತಾಗಿ ನಾನು ಮತ್ತು ನನ್ನ ಹೆಂಡತಿ ನನ್ನ ಅಳಿಯನ ಮನೆಗೆ ಹೋಗಿ ಬುದ್ಧಿ ಹೇಳಿ ಬಂದಿದ್ದೆವು.
ಇಂದು ದಿನಾಂಕ 02.06.2017 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ಹನುಮಾನ್ ದೇವರ ಗುಡಿಗೆ ಹೋಗಿ ಮನೆಗೆ ಬರುತ್ತಿದ್ದಾಗ ನನ್ನ ಮಗಳು ಅನೀತಾಳ ಮನೆ ಕಡೆಗೆ ಹೋಗೆ ಬರುತ್ತಿದೆ ಅಂತಾ ಜನರು ಓಡುತ್ತಿದ್ದರು ಅದನ್ನು ನೋಡಿದ ನಾನು ಏನಾಗಿದೆ ಅಂತಾ ಮಗಳ ಮನೆ ಕಡೆಗೆ ಹೋದೆನು. ಮನೆಯ ಮೊದಲನೆ ಮಹಾಡಿಯಿಂದ ಹೊಗೆ ಬರುತ್ತಿತ್ತು. ನಾನು ಮತ್ತು ನಮ್ಮೂರಿನ ಇತರರು ಸೇರಿ ಮಾಳಿಗೆಯ ಮೇಲೆ ಹೋಗಬೇಕು ಅನ್ನುವಷ್ಟರಲ್ಲಿ ಸಣ್ಣಭೀಮಪ್ಪ ಹತ್ತಿಕುಣಿ ಈತನು ನನ್ನ ಮೊಮ್ಮಗ ನರಸಪ್ಪನಿಗೆ ಎತ್ತಿಕೊಂಡು ಮನೆಯ ಹಿಂದುಗಡೆಯಿಂದ ಬಂದನು. ನಾವು ಮೇಲೆ ಹೋಗಿ ನೋಡಿದಾಗ ನನ್ನ ಮಗಳು ನಾನು ಮಲಗಿರುವ ರೂಮಿಗೆ ಒಳಗಡೆಯಿಂದ ಕೊಂಡಿ ಹಾಕಿಕೊಂಡಿದ್ದು ಇರುತ್ತದೆ. ರೂಮಿನ ಓಳಗಡೆಯಿಂದ ದಟ್ಟವಾದ ಹೊಗೆ ಬರುತ್ತಿತ್ತು. ಎಲ್ಲಾರು ಕೂಡಿ ಬಾಗಿಲನ್ನು ನೂಕಿಸಿ ಕೊಟ್ಟು ಒಳಗೆ ಹೋದೆವು. ಅದಾಗಲೇ ನನ್ನ ಮಗಳು ಅನೀತಾ ಮತ್ತು ಮೊಮ್ಮಗಳು ಗೀತಾ ಸುಟ್ಟ ಗಾಯಗಳಿಂದ ಸತ್ತು ಬಿದ್ದಿದ್ದರು. ನನ್ನ ಮೊಮ್ಮಗ ನರಸಪ್ಪನಿಗೆ ಬಲಗೈ ಮುಂಗೈ ಮತ್ತು ಬಲ ಕಿವಿ ಹತ್ತಿರ ಸುಟ್ಟ ಗಾಯಳಗಾಗಿದ್ದವು. ಘಟನೆಯ ಬಗ್ಗೆ ನನ್ನ ಮೊಮ್ಮಗ ನರಸಪ್ಪನಿಗೆ ವಿಚಾರಿಸಿದಾಗ ಅವನು ತಿಳಿಸಿದ್ದೆನೇಂದರೆ ಇಂದು ಬೆಳಿಗ್ಗೆ ತನ್ನ ತಂದೆ ಮತ್ತು ಅಜ್ಜಿ ಹಾಗೂ ಚಿಕ್ಕಪ್ಪನವರು ಹೊರಗಡೆ ಹೋಗಿದ್ದರು. ಆಗ ನಮ್ಮ ತಾಯಿ ಅನೀತಾ ನನಗೆ ಮತ್ತು ನನ್ನ ತಂಗಿಗೆ ಜೊತೆಗೆ ಕರೆದುಕೊಂಡು ಕೆಳಗಡೆ ಮನೆಯಿಂದ ಸೀಮೆ ಎಣ್ಣೆ ಡಬ್ಬಿಯನ್ನು ಕೈಯಲ್ಲಿ ಹಿಡಿದುಕೊಂಡು ಮಾಳಿಗೆ ಮೇಲಿದ್ದ ರೂಮಿಗೆ ಕರೆದುಕೊಂಡು ಹೋದಳು. ರೂಮಿಗೆ ಕೊಂಡಿ ಹಾಕಿ ಗ್ಯಾಸ್ ಎಣ್ಣೆಯನ್ನು ತಂಗಿ ಗೀತಾ ಮತ್ತು ನನ್ನ ಮೇಲೆ ಹಾಕಿ ನಂತರ ತನ್ನ ಮೇಲೆ ಹಾಕಿಕೊಂಡಳು. ಕಡ್ಡಿಕೊರೆದು ತಂಗಿಗೆ ಹಚ್ಚಿ ನನಗೆ ಹಚ್ಚಲು ಬಂದಳು, ನಾನು ತಪ್ಪಿಸಿಕೊಂಡು ಮೂಲಿಗೆ ಓಡಿ ಹೋಗಿ ನಂತರ ಕಿಡಿಕಿಯಲ್ಲಿ ಕುಂತೆನು. ಆ ಮೇಲೆ ನಮ್ಮ ತಾಯಿ ಬೆಂಕಿ ಹಚ್ಚಿಕೊಂಡಳು ಆಗ ಸಮಯ ಬೆಳಿಗ್ಗೆ 7 ಗಂಟೆ ಆಗಿರಬಹುದು ನಾನು ಕಿಡಕಿಯಲ್ಲಿ ಕುಳೀತು ಚೀರುವುದನ್ನು ನೋಡಿ ಮನೆಯ ಹಿಂದೆ ಇದ್ದ ಭೀಮಪ್ಪ ಹತ್ತಿಕುಣಿ ಓಡಿ ಬಂದು ನಮ್ಮ ಮನೆಯ ಕಿಡಕಿ ಹತ್ತಿರ ಬಂದನು. ಆತನು ಜೋರಾಗಿ ಚೀರಿ ಜನರನ್ನು ಕರೆದನು. ಒಬ್ಬರ ಮೇಲೆ ಒಬ್ಬರು ನಿಂತು ನನಗೆ ಕೆಳಗಡೆ ಇಳಿಸಿಕೊಂಡರು ಅಂತಾ ತಿಳಿಸಿದನು.
    ನನ್ನ ಮಗಳು ಅನೀತಾ ತನ್ನ ಗಂಡ ಹಾಗೂ ಅವರ ಮನೆಯವರು ಕೊಡುವ ಕಿರುಕುಳ ತಾಳಲಾರದೇ ಹಾಗೂ ಅವಳು ಸತ್ತರೆ ತಮಗೆ ಸಮಾಧಾನ ಆಗುತ್ತದೆ ಅಂತಾ ಪದೇ-ಪದೇ ನನ್ನ ಮಗಳು ಸಾಯಲು ಪ್ರಚೋದಿಸಿದ ಅಳಿಯ ಆನಂದ, ಅತ್ತೆ ನಿಂಗಮ್ಮ, ಮತ್ತು ನನ್ನ ಮಗಳ ಮೈದುನರಾದ ನಿಂಗಪ್ಪ, ಸಾವಪ್ಪ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಹೇಳಿದನ್ನು ನಮ್ಮೂರಿನ ಸಾಯಿಬಣ್ಣ ತಂದೆ ಹಣಮಂತು ಪಲ್ಲೇನೋಳ ಈತನು ಬರೆದು ಪುನಃ ನನಗೆ ಓದಿ ಹೇಳಿದನು. ಅದು ನಾನು ಹೇಳಿದಂತೆ ಸರಿ ಇರುತ್ತದೆ ಅಂತಾ ಅಜರ್ಿ ಹಾಜರಪಡಿಸಿದ್ದು ಸಾರಾಂಶದ ಮೇಲಿಂದ ನಾನು ಪಿ.ಎಸ್.ಐ ಗುರುಮಠಕಲ್ ಠಾಣೆ ಗುನ್ನೆ ನಂ: 128/2017 ಕಲಂಃ 498(ಎ), 306 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ 302, 307 ಐಪಿಸಿ;- ದಿನಾಂಕ 02.06.2017 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಕರಣದ ಪಿರ್ಯಾಧಿದಾರಳ ಮಗಳು ತನ್ನ ಗಂಡ ಹಾಗೂ ಅವರ ಮನೆಯವರು ಕೋಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳದೆ ಕೊಂಕಲ ಗ್ರಾಮದ ತನ್ನ ಗಂಡನ ಮನೆಯಲ್ಲಿ ತನ್ನ ಇಬ್ಬರ ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ತಾನು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ  ತಾನು ಸಹ ಹಚ್ಚಿಕೊಂಡಿದ್ದು ಇರುತ್ತದೆ.  ಸದರಿ ಘಟನೆಯಲ್ಲಿ ಅಪಾಧಿತೆ ಹಾಗೂ ತನ್ನ ಎರಡು ವರ್ಷದ ಮಗಳು ಗೀತಾ ಸುಟ್ಟ ಗಾಯಗಳಿಂದ ಮೃತಪಟ್ಟಿರುತ್ತಾರೆ. ಇನ್ನೊಬ್ಬ ಮಗ ನರಸಪ್ಪ 7 ವರ್ಷ ಈತನಿಗೆ ಸುಟ್ಟ ಗಾಯಗಳಿಂದ ದುಖಪತಃ ಗೊಂಡಿರುತ್ತಾನೆ. ಅಂತಾ ವಗೈರೆ ಪಿರ್ಯಾಧಿ.   
 
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ: 279.338 ಐಪಿಸಿ & 187 ಐ.ಎಮ.ವಿ ಕಾಯ್ದೆ;- ದಿನಾಂಕ 02/06/2017 ರಂದು 11:30 ಎ.ಎಮಕ್ಕೆ ಗಾಯಾಳು ಪಿರ್ಯಾಧಿ  ಶ್ರೀ ರಾಮಣ್ಣ ತಂದೆ ದೇವಪ್ಪ ಚಿಕ್ಕಬನೋರ ವಯ:40 ವರ್ಷ ಉ; ಕೂಲಿ ಜಾತಿ:ಕಬ್ಬಲಿಗ ಸಾ:ಯರಗೋಳ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಪಿರ್ಯಾಧಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಅಟೋದಲ್ಲಿ ಕುಳಿತುಕೊಂಡು ಯರಗೋಳ ಹೊಸಬಸ ನಿಲ್ದಾಣ ಹತ್ತಿರ ರಾತ್ರಿ 7:40 ಪಿ.ಎಮ ಸುಮಾರಿಗೆ ಬರುತ್ತಿರುವಾಗ ಆಗ ಯಾದಗಿರ ಕಡೆಯಿಂದ ಒಂದು ಕಾರ  ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡಿಸಿಕೊಂಡು ಬಂದವನೇ ಅಟೋಕ್ಕೆ ಡಿಕ್ಕಿಪಡಿಸಿ ಅಟೋದಲ್ಲಿ ಬಲಗಡೆ ಕುಳಿತ ನನಗೆ ಎಡಗಾಲ ತೋಡೆಗೆ ಭಾರಿ ಗುಪ್ತಗಾಯ, ಮತ್ತು ತೆಲೆಗೆ ರಕ್ತಗಾಯ, ಎಡಗಾಲ ಹಿಮ್ಮಡಿಗೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತವು ಯಾದಗಿರ ವಾಡಿ ಮುಖ್ಯೆ ರಸ್ತೆಯ ಮೇಲೆ ಯರಗೋಳ ಹೊಸಬಸನಿಲ್ದಾಣದ ರೋಡಿನ ಮೇಲೆ ದಿನಾಂಕ 01-06-2017 ರಂದು ರಾತ್ರಿ 7-40 ಪಿ.ಎಮ ಸುಮಾರಿಗೆ ಜರುಗಿದ್ದು ಇರುತ್ತದೆ. ಸದರಿ ಅಪಘಾತ ಪಡಿಸಿದ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಅಪಘಾತ ಪಡಿಸಿದ ಕಾರನ್ನು ನೋಡಲಾಗಿ ಬಿಳಿ ಬಣ್ಣದ ಪೋರ್ಡ ಕಂಪನಿಯ ಎಕೋಸ್ಪೋಟ್ಸ ಕಾರ ನಂ ಕೆ.ಎ-33 ಎಮ್-4063 ನೇದ್ದು ಇರುತ್ತದೆ. ಕಾರ ಚಾಲಕ ಹೆಸರು ವಿಳಾಸ ಗೋತ್ತಾಗಿರುವದಿಲ್ಲ. ಆತನನ್ನು ನಾನು ನೋಡಿದರೆ ಗುರುತ್ತೀಸುತ್ತೇನೆ.ಸದರಿ ಅಪಘಾತ ಸುದ್ದಿ ಕೇಳಿದ ನಮ್ಮೂರಿನ ಬಾಲದಂಡಪ್ಪ ತಂದೆ ಯಂಕಪ್ಪ ಸಾ:ಯರಗೋಳ, ನಿಂಗಾರಡ್ಡಿ ತಂದೆ ದೇವಪ್ಪ ಸಾ: ಯರಗೋಳ ಇಬ್ಬರೂ ಸ್ಥಳಕ್ಕೆ ಬಂದು ಗಾಯಹೊಂದಿದ್ದ ನಾನು ರಾಮಣ್ಣ ತಂದೆ ದೇವಪ್ಪ ಚಿಕ್ಕಬಾನೋರ ಆದ ನನಗೆ 108 ಅಂಬುಲೇನ್ಸ ವಾಹನದಲ್ಲಿ ಉಪಚಾರ ಕುರಿತು ಜಿಜಿಹೆಚ್ ಯಾದಗಿರ ತಂದು ಸೇರಿಕೆ ಮಾಡಿರುತ್ತಾರೆ. ಸದರಿ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿಕೊಂಡು ತಡವಾಗಿ ಇಂದು ದಿನಾಂಕ 02-06-2017 ರಂದು 11:30 ಎ.ಎಮ ಕ್ಕೆ ಬಂದು ಪಿರ್ಯಾಧಿ ನೀಡುತ್ತಿದ್ದು, ನನಗೆ ಅಪಘಾತ ಪಡಿಸಿದ ಕಾರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 95/2017 ಕಲಂ 279,338 ಐ.ಪಿ.ಸಿ ಮತ್ತು 187 ಐ.ಎಮ ವಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 151/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್;- ದಿನಾಂಕಃ 02/06/2017 ರಂದು 9-30 ಎ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಬೆಳಗಿನ ಜಾವ 4.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮೇಲಾಧಿಕಾರಿಗಳಾದ  ಸಹಾಯಕ ಆಯುಕ್ತರು ಯಾದಗೀರ,  ತಹಸಿಲ್ದಾರರು ಸುರಪೂರ ಹಾಗೂ ಶ್ರೀ ಆರ್ ಎಫ್ ದೇಸಾಯಿ ಪಿ.ಐ ಶೋರಾಪೂರ ಎಲ್ಲರೂ ಅಕ್ರಮ ಮರಳು ತಡೆ ಕಾಯರ್ಾಚರಣೆಯಲ್ಲಿದ್ದಾಗ ಕನರ್ಾಳ ಗ್ರಾಮದ ಸೀಮಾಂತರದಲ್ಲಿ ಬರುವ ಕೃಷ್ಣಾ ನದಿಯಲ್ಲಿ ಯಾರೋ ತಮ್ಮ ಲಾರಿಗಳಲ್ಲಿ ಮರಳನ್ನು  ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾವೆಲ್ಲರೂ ನಮ್ಮ ನಮ್ಮ ಜೀಪಗಳಲ್ಲಿ ಇಬ್ಬರು ಪಂಚರೊಂದಿಗೆ ಕನರ್ಾಳ ಕ್ರಾಸದಿಂದ ಕೃಷ್ಣಾ ನದಿಯಲ್ಲಿ ಹೋಗಿ ನೋಡಲಾಗಿ ಒಂದು ಹಿಟಾಚಿ ಇದ್ದು ಸದರಿ ಹಿಟಾಚಿ ನದಿಯಲ್ಲಿನ ಮರಳನ್ನು ಟಿಪ್ಪರಗಳಿಗೆ ಅಕ್ರಮವಾಗಿ ಕಳ್ಳತನದಿಂದ ತುಂಬುಲು ತಂದು ನಿಲ್ಲಿಸಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ನಮ್ಮನ್ನು ನೋಡಿದ ಹಿಟಾಚಿ ಆಪರೇಟರ ಓಡಿ ಹೋದನು. ನಾವು ಹೋಗಿ ನೋಡಲಾಗಿ ಖಿಂಖಿಂ210ಗಿ0028  ಕಂಪನಿಯ ಹಿಟಾಚಿ  ಇರುತ್ತದೆ. ಸದರಿ ಹಿಟಾಚಿಯ ಅ.ಕಿ. 15,00,000/- ರೂ.ಗಳು ಆಗುತ್ತದೆ. ಸದರಿ ಹಿಟಾಚಿ ಆಪರೇಟರ ಮತ್ತು ಮಾಲಿಕ ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿರುವದರಿಂದ ಜಪ್ತಿ ಪಡಸಿಕೊಂಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2017 ಕಲಂ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ 279,337,338, ಐಪಿಸಿ;- ತಿಪ್ಪಣ್ಣ ತಂದೆ ಯಂಕಪ್ಪ ಚೌಹಾಣ ವ|| 20 ವರ್ಷ ಜಾ|| ಲಮಾಣಿ ಉ|| ಒಕ್ಕಲುತನ  ಸಾ||  ಗೌಡಿಗರಿ ತಾಂಡ ತಾ|| ಜಿ|| ಯಾದಗಿರಿ  ಹೇಳಿ ಲ್ಯಾಪಟಪನಲ್ಲಿ ಟೈಪ್ ಮಾಡಿಸಿದ ಹೇಳಿಕೆ.  ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸಿತನಿದ್ದು ನಮ್ಮ ತಂದೆ ತಾಯುಯೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ.     ನಾವು ನಮ್ಮ ತಂದೆ ತಾಯಿಗೆ ನಾನು, ಶಂಕರ, ಮೋತಿಬಾಯಿ, ಜೋತಿ ಅಂತಾ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇರುತ್ತೆವೆ .ದಿನಾಂಕ-01/03/2017 ರಂದು ಮದ್ಯಾಹ್ನ 3 ಗಂಟೆಗೆ ಹೊಲದಲ್ಲಿ ಬಿಟ್ಟ ನಮ್ಮ ಚಿಕ್ಕಪ್ಪನ 2 ಹೋತ ಮರಿಗಳು ಕಳೆದಿದ್ದು ಇರುತ್ತದೆ, ಅದಕ್ಕೆ ನಮ್ಮ ಚಿಕ್ಕಪ್ಪ ಮತ್ತು ನಮ್ಮ ತಂದೆಯವರು ನಿನ್ನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರಲಿಲ,್ಲ   ಇಂದು ದಿನಾಂಕ 03/06/2017 ರಂದು ನಮ್ಮ ಚಿಕ್ಕಪ್ಪನ ಹೋತಮರಿಗಳನ್ನು ಹುಡಕಲು ನಾನು ನಮ್ಮ ಅತ್ತೆಯ ಮಗನಾದ ಗೋಪಾಲ ಮತ್ತು ನಮ್ಮ ಚಿಕ್ಕಪ್ಪ ಹಣಮಂತ ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರೆಡ್ಡಿ ನಾವೆಲ್ಲರು ಕೂಡಿ ಇಂದು ಬೆಳಿಗ್ಗೆ 7 ಗಂಟೆಗೆ ನಮ್ಮ ಅತ್ತೆಯ ಮಗನಾದ ವಿಶ್ವನಾಥ ಇವರ ಆಟೋ ನಂ-ಕೆಎ-33 9642 ನೆದ್ದರಲ್ಲಿ ಕುಳಿತುಕೊಂಡು ನಮ್ಮೂರ ತಾಂಡದಿಂದ ಬಳಿಚಕ್ರ ಕಡೆಗೆ ಹೊಗಿ ಬಳಿಚಕ್ರದಲ್ಲಿ ಮತ್ತು ಬಳಿಚಕ್ರ ಅಡವಿಯಲ್ಲಿ ಹುಡುಕಾಡಲು ಹೊತ ಮರಿಗಳು ಸಿಗಲಿಲ್ಲ. ಆಗ ನಮ್ಮ ಚಿಕ್ಕಪ್ಪ ಹಣಮಂತ ಇತನು ಹೊತ್ತಾಯಿತು ಹಸಿವೆ ಆಗಿದೆ ಊಟ ಮಾಡಿ ಬಂದರಾಯಿತು ಅಂತಾ ಅಂದು ನಮ್ಮ ಚಿಕ್ಕಪ್ಪ ಹಣಮಂತ ನಿವು ಊಟ ಮಾಡಿಕೊಂಡು ಬರ್ರಿ ನಾನು ಇನ್ನು ಹುಡುಕಾಡುತ್ತೆನೆ ಅಂತಾ ಹೇಳಿ ಆತನು ಬಳಿಚಕ್ರ ಗೇಟಿಗೆ ಆಟೋದಿಂದ ಇಳಿದುಕೊಂಡನು ಆಗ ನಾನು ಮತ್ತು ನಮ್ಮ ಚಿಕ್ಕಪ್ಪನ ಮಗ ರೆಡ್ಡಿ ಆಟೊದಲ್ಲಿ ಕುಳಿತಿದ್ದೆವು ಆಟೋವನ್ನು ಗೊಪಾಲ ಇತನು ನಡೆಸುತಿದ್ದನು ರಾಯಚೂರ- ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬೆಳಿಗ್ಗೆ 9-30 ಗಂಟೆಗೆ ಬಳಿಚಕ್ರ ಶಂಕ್ರಪ್ಪಗೌಡ ಇವರ ಹೊಲದ ಹತ್ತಿರ ನಬಳಿಚಕ್ರದಿಂದ ನಮ್ಮೂರಿಗೆ ಬರುತ್ತಿರುವಾಗ ನಮ್ಮ ಎದುರಿನಿಂದ ರಾಯಚೂರ ಕಡೆಯಿಂದ ಬರುತ್ತಿರುವ ಮಾರುತಿ ಸುಜಕಿ ವಾಜನರ ಕಾರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಆಟೋಗೆ ಡಿಕ್ಕಿ ಪಡಿಸಿದ್ದರಿಂದ ಆಟೋ ಪಲ್ಟಿಯಾಗಿ ನಾವೆಲ್ಲರು ಬಿದ್ದೆವು ಆಗ ನಾವು ಎದ್ದು ನೊಡಲಾಗಿ ನನಗೆ ತಲೆಗೆ ಬಾರಿ ರಕ್ತಗಾಯವಾಗಿ ರಕ್ತ ಬರುತಿತ್ತು ಮತ್ತು ರೆಡ್ಡಿ ಇತನಿಗೆ ಕಾಲಿಗೆ ಬಾರಿ ರಕ್ತಗಾಯ ಮತ್ತು ಮುಖದ ಬಾಯಿಗೆ ರಕ್ತಗಾಯವಾಗಿತ್ತು, ಮತ್ತು ಗೋಪಾಲ ಇತನಿಗೆ ಬಲಗಾಲಿಗೆ ರಕ್ತಗಾಯ ಎಡಗೈ ಮುಷ್ಟಿ ಮೇಲೆ ರಕ್ತಗಾಯ ಬೆನ್ನಿಗೆ ತರಚಿದ ಗಾಯ ತಲೆಯ ಹಿಂದೆ ರಕ್ತಗಾಯವಾಗಿತ್ತು ನಮ್ಮಂತೆ ಕಾರಿನಲ್ಲಿ ಇರುವ ಜನರಿಗೆ ಕೂಡ ಪೆಟ್ಟಾಗಿದ್ದವು ಕಾರಿನ ಚಾಲಕ ನ ಹೆಸರು ವಿಳಾಸ ಕೆಳಲಾಗಿ ಆತನು ಶಿರಣ್ಣ ತಂದೆ ಶರಣಪ್ಪ ಬೆಟ್ಟಿಗೆರಿ ಸಾ|| ಶಕ್ತಿನಗರ ಅಂತಾ ತಿಳಿಸಿದನು ಆಗ ಕಾರ ನೋಡಲಾಗಿ ಅದರ ನಂ.ಕೆಎ-51 ಎಮ್ 7716 ಇತ್ತು ಆಗ ಯಾರೋ ಅಂಬುನೆನ್ಸಗೆ ಪೊನ್ ಮಾಡಿದಾಗ ಅಂಬುನೆನ್ಸ ಬಂತು ಆಗ ಸುದ್ದಿ ತಿಳಿದು ನಮ್ಮ ಚಿಕ್ಕಪ್ಪ ಮತ್ತು ನಮ್ಮ ಅತ್ತೆ ದಾನಮ್ಮ ಸ್ಥಳಕ್ಕೆ ಬಂದರು ನಮಗೆ ನಮ್ಮ ಚಿಕ್ಕಪ್ಪ ಹಣಮಂತ ಮತ್ತು ನಮ್ಮ ಅತ್ತೆ ದಾನಮ್ಮ ಇಬ್ಬರು ಕೂಡಿ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ .

   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 181/2017.ಕಲಂಃ 323.324.504.506. ಸಂ34 .ಐ.ಪಿ.ಸಿ.;- ದಿನಾಂಕ 02/06/2017 ರಂದು ರಾತ್ರಿ 20-30 ಗಂಟೆಗೆ ಶ್ರೀ ಬಾಬುಸಾಬ ತಂದೆ ಜಲಾಲ್ ಸಾಬ ಮಕಾಸಿ ವ|| 27 ಉ|| ಒಕ್ಕಲುತನ ಜಾ|| ಮುಸ್ಲಿಂ ಸಾ|| ಟೊಕಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು ಅದರಿ ಅಜರ್ಿಯ ಸಾರಾಂಶ ವೆನೆಂದರೆ. ದಿನಾಂಕ 01/06/2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ನನ್ನ ಜ್ಯಾರೆಜ ಮುಂದೆ ಕುಳಿತಾಗ  ನಮ್ಮುರ 1] ಖಾಜಾಸಾಬ ತಂದೆ ರಾಜಾಸಾಬ ಮಕಾಸಿ, 2] ಅಲಿಸಾಬ ತಂದೆ ರಾಜಾಸಾಬ ಮಕಾಸಿ, 3] ಅಬಿಬ್ ತಂದೆ ಶ್ಯಾಲುಮ್ ಸಾಬ ಗಾದಿಮನಿ, 4] ಖಾಸಿಂ ಸಾಬ ತಂದೆ ರಾಜಾಸಾಬ ಮಕಾಸಿ,  ಎಲ್ಲುರು ಕೂಡಿ  ನ್ನನ ಗ್ಯಾರೆಜ ಹತ್ತಿರ ಹಳೆಯ ದ್ವೇಶದಿಂದ ಬಂದು ಅವರಲ್ಲಿ ಖಾಜಾಸಾಬನು ಎಲೆ ಬಾಬ್ಯಾ ಸೂಳಿ ಮಗನೆ, ರಂಡಿ ಮಗನೆ ನಮ್ಮ ಜೋತೆ ಯಾವಾಗಲು ತಕರಾರು ಮಾಡುತ್ತಿ ಮಗನೆ ಅಂತಾ  ಅವಾಚ್ಚವಾಗಿ ಬೈದನು. ಖಾಜಾಸಾಬ ಇತನು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈಗೆೆ ಹೊಡೆದು ಗುಪ್ತಗಾಯ ಮಾಡಿದನು. ಅಲಿಸಾಬ ಇತನು ತನ್ನ ಕೈಯಿಂದ ನನ್ನ ಬಲಗೈಗೆ ಗುದ್ದಿದನು. ಅಬಿಬ್ ಮತ್ತು ಖಾಸಿಂ ಇಬ್ಬರು ಕೂಡಿ  ನನಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ನನ್ನ ಬಲಗಾಲ ಹಿಮ್ಮಡಿಗೆ, ಎಡಗಾಲ ಮೋಳಕಾಲಿಗೆ ತರಚಿದ ಗಾಯವಾಗಿದ್ದು ಇರತ್ತದೆ. ಖಾಸಿಂನು ಕೈಯಿಂದ ನನ್ನ ಬಲಗಡೆ ಜುಬ್ಬಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿಓದರು. ರಾತ್ರಿ ಯಾಗಿದ್ದರಿಂದ ಬೆಳಿಗ್ಗೆ ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಮಾಡಿಕೊಂಡು ನಮ್ಮ ಗ್ರಾಮದ ಹಿರಿಯರೋದಿಗೆ ವಿಚಾರ ಮಾಡಿ ಬಂದು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾನೆಯ ಗುನ್ನೆ ನಂ 181/2017 ಕಲಂ 323.324.504.506.ಸಂ.34 ಐ.ಪಿ.ಸಿ. ನ್ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
  
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 70/2017 ಕಲಂ 379 ಐಪಿಸಿ;- ದಿನಾಂಕ: 03/06/17 ರಂದು 8.30 ಗಂಟೆಗೆ ಪಿಯರ್ಾದಿದಾರರಾದ ಶ್ರೀ ಅಬ್ದುಲ್ ಅಮೀದ ತಂದೆ ಯಾಶೀನ್ಸಾಬ ನಬೂಜೀ (ಡೆಕ್ಕನ್) ವಯ:64 ಜಾ:ಮುಸ್ಲಿಂ  ಉ:ವ್ಯಾಪಾರ ಸಾ:ಹುಣಸಗಿ ಠಾಣೆಗೆ ಬಂದು ನೀಡಿದ ಹೇಳಿಕೆ ಸಾರಾಂಶವೇನಂದರೆ, ತನ್ನದೊಂದು ಸ್ವಂತ   ಮಹೇಂದ್ರಾ ಪಿಕಪ್ ಗೂಡ್ಸ ನಂ. ಕೆ.ಎ-28 ಎ-7798 ಇದ್ದು ಮನೆಯ ಕೆಲಸಕ್ಕಾಗಿ ವಾಹನವನ್ನು ಉಪಯೋಗಿಸುತ್ತಿದ್ದು, ದಿನಾಂಕ:28/05/17 ರಂದು ರಾತ್ರಿ ನನ್ನ ವಾಹನವನ್ನು ಮಲ್ಲಪಪ್ಪ ಸಾಹುಕಾರ ಕಟ್ಟಿಗೆ ಅಡ್ಡಾದಲ್ಲಿ ನಿಲ್ಲಿಸಿ ಹೋಗಿದ್ದು ಬೆಳಿಗ್ಗೆ ಬಂದು ನೋಡಲಾಗಿ ನನ್ನ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ನನ್ನ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!