Yadgir District Reported Crimes Updated on 29-06-2017

By blogger on ಗುರುವಾರ, ಜೂನ್ 29, 2017


                           Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ: 323,324,504, 506 ಸಂ 34 ಐಪಿಸಿ ;- ದಿನಾಂಕ 28/06/2017 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯಾದಿಯ ಹೆಂಡತಿಬೂದೆಮ್ಮ ಇವಳು ತನ್ನ ಮನೆಯ ಮುಂದೆ ಬಟ್ಟೆ ತೊಳೆದ ನೀರನ್ನು ತನ್ನ ಮನೆಯ ಮುಂದೆ ಇರುವ ಕಲ್ಲುಗಳ ಮೇಲೆಯಿರುವ ಕಟ್ಟಿಗೆ ಚೆಕ್ಕೆಗಳ ಮೇಲೆ ಚೆಲ್ಲಿದ್ದರಿಂದ ಆರೋಪಿತರು ಎಲ್ಲರೂ ಬಂದು ಫಿರ್ಯಾಧಿ ಮತ್ತು ಅವನ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ, ಗುಪ್ತಗಾಯ, ತರಚಿದಗಾಯಗಳು ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ: 341, 323,504, 506 ಸಂ 34 ಐಪಿಸಿ;- ದಿನಾಂಕ 28/06/2017 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಆರೋಪಿತಳಾದ ಬೂದೆಮ್ಮ ಇವಳು ತನ್ನ ಮನೆಯ ಮುಂದೆ ಬಟ್ಟೆ ತೊಳೆದ ನೀರನ್ನು ತನ್ನ ಮನೆಯ ಮುಂದೆ ಇರುವ ಕಲ್ಲುಗಳ ಮೇಲೆಯಿರುವ ಕಟ್ಟಿಗೆ ಚೆಕ್ಕೆಗಳ ಮೇಲೆ ಚೆಲ್ಲಿದ್ದರಿಂದ ಫಿರ್ಯಾಧಿ ಬಂದು ಇಲ್ಲಿ ರೈತರ ಕೆಲಸ ಮಾಡುತ್ತೆವೆ, ನೀನು ಇಲ್ಲಿ ನೀರು ಚೆಲ್ಲಿದರೆ ನನಗೆ ರೈತರ ಕೆಲಸ ಮಡಲು ಬರುವದಿಲ್ಲ ಯಾಕೆ ನೀರು ಚಲ್ಲಿದ್ದಿ ಅಂತಾ ಕೇಳಿದಕ್ಕೆ ಆರೋಪಿತರಿಬ್ಬರೂ ಕೂಡಿ ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವನ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಗುಪ್ತಗಾಯ, ತರಚಿದಗಾಯಗಳು ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.                      

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ: 143, 147, 148, 323, 324, 504, 506, 427, 109 ಸಂ: 149 ಐಪಿಸಿ ;- ದಿನಾಂಕ 28-06-2017 ರಂದು ಸಾಯಂಕಾಲ 4 ಪಿ.ಎಮ್ದ ಸುಮಾರಿಗೆ ನಾನು ಶ್ರೀಮತಿ ಸಾವಿತ್ರಮ್ಮ ಗಂಡ ಭಿಮರಾಯ ನಮ್ಮ ಹೊಸಮನೆ ಕಟ್ಟದ ಹತ್ತಿರ ಇರುವಾಗ 1) ನರಸಿಂಗಪ್ಪ ತಂದೆ ಭೀಮಣ್ಣ, 2) ಮನೋಹರ ತಂದೆ ನರಸಿಂಗಪ್ಪ, 3) ಸುರೇಶ ತಂದೆ ನರಸಿಂಗಪ್ಪ, 4) ವಿಶ್ವನಾಥ ತಂದೆ ನರಸಿಂಗಪ್ಪ, 5) ಮಹಾದೇವಪ್ಪ ತಂದೆ ಭೀಮಣ್ಣ, 6) ಗುರುನಾಥ ತಂದೆ ಮಹಾದೇವಪ್ಪ, 7) ಹಣಮಂತ್ರಾಯ ತಂದೆ ಭೀಮಣ್ಣ, 8) ರವಿ ತಂದೆ ಹಣಮಂತ್ರಾಯ, 9) ಸೈದಪ್ಪ ತಂದೆ ಭಿಮಣ್ಣ, 10) ವೆಂಕಟಪ್ಪ ತಂದೆ ಸೈದಪ್ಪ, 11) ವಿಜಯ ತಂದೆ ಸೈದಪ್ಪ ಇವರೆಲ್ಲರು ಕೂಡಿಕೊಂಡು 12) ಯಂಕೊಬ ತಂದೆ ನರಸಿಂಗಪ್ಪ ಇವರ ಪ್ರಚೋದನೆಯಿಂದ ಬಂದು ಈ ಸೂಳಿ ಕಟ್ಟಡ ಕಟ್ಟಿಸ ಬೇಡಾ ಅಂದರೆ ಮತ್ತೆ ಕಟ್ಟಲಿಕ್ಕೆ ಪ್ರರಂಭ ಮಾಡಿದಾಳೆ ಇವಳ ಸೊಕ್ಕು ಬಹಳಾ ಆಗಿದೆ ಭೋಸಡಿ ಅಂತಾ ಬೈಯ್ದು, ಎಲ್ಲರು ಕಟ್ಟುತ್ತಿರುವ ಮನೆಯ ಛತ್ ಹಾಕಲು ಸಿದ್ದತೆಮಾಡಿದ ಸೆಂಟ್ರಿಂಗ್ನ್ನು ಕಿತ್ತಿ ಹಾಕಿದ್ದು ಮತ್ತು ಕಾಲಂನ್ನು ಮುರಿದು ಲುಕಸ್ಸಾನೆ ಮಾಡಿದ್ದು. ನಾನು ಕೆಳಲಿಕ್ಕೆ ಹೊದರೆ ನನಗೆ ಎಲ್ಲರು ಕೂಡಿ ನೂಕಿಸಿಕೊಟ್ಟು ಕೈಯಿಂದ ಹೊಡೆಬಡೆಮಾಡಿದರು. ಆಗ ಬಿಡಿಸಲಕ್ಕೆ ಬಂದ ನನ್ನ ಮಾವನಾದ ಸಣ್ಣ ತಿಪ್ಪಣ್ಣ ತಂದೆ ಆಶಣ್ಣ ಕೋತೆರ್ ಇತನಿಗೆ ಮಹಾದೇವಪ್ಪ ದಳಪತಿ ಇವನು ಕಟ್ಟಿಗೆಯಿಂದ ಎಡಗೈಗೆ ಹೊಡೆದಾಗ ಕಿರು ಬೆರಳಿಗೆ ರಕ್ತಗಾಯವಾಯಿತು. ಆಗ ಜಗಳದ ಸಪ್ಪಳ ಕೆಳಿ ನಮ್ಮೂರ ನರಸಿಂಗಪ್ಪ ತಂದೆ ಗಿರಿಯಣ್ಣ ಬೊಂಬಯಿ, ತಾಯಣ್ಣ ತಂದೆ ಮಹಾದೇವಪ್ಪ ಸಂಬರ, ಖತಲಸಾಬ ತಂದೆ ಖಾಜಾಹುಸೇನ ಕಟ್ಟಿಮನಿ ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡರು. ಇವರು ಬಂದು ಜಗಳ ಬಿಡಿಸಿಕೊಂಡು ಅಂತ ಇಂದು ನೀವು ಉಳಿದಿರಿ ಇಲ್ಲಾ ಅಂದರೆ ನಿಮ್ಮಗೆ ಜೀವಸಹಿತ ಹೊಡೆಯುತ್ತಿದ್ದೆವು ನೀವು ಇನ್ನುಮುಂದೆ ಊರಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ಅಂತ ನೋಡುತ್ತೆವೆ ಅಂತ ಜೀವದ ಬೆದರಿಕೆ ಹಾಕಿದರು. ಆಗ ನಾವು ಅವರಿಗೆ ಅಂಜಿ ಠಾಣೆಗೆ ಬಂದಿರುತ್ತೆವೆ.

       ಕಾರಣ ನಮಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೆಕು ಅಂತ ಹೇಳಿ   ಟೈಪ್ ಮಾಡಿಸಿದ ಹೇಳಿಕೆ ಫಿಯರ್ಾದಿ ಮೇಲಿಂದ ಠಾಣಾ ಗುನ್ನೆ ನಂ 112/2017 ಕಲಂ 143,147,148,323,324,504,506,427,109 ಸಂಗಡ 149 ಐಪಿಸಿ. ರಿತ್ಯ ಗುನ್ನೆ ದಾಖಲಿಸಲಾಗಿದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 93-2017 ಕಲಂ 143 147 148 324, 307, 504, 506 ಸಂಗಡ 149 ಐ.ಪಿ.ಸಿ.;- ದಿನಾಂಕ:21/06/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಬಲಶೆಟ್ಟಿಹಾಳ ಗ್ರಾಮದ ಜುಬೇದಾ ಇವರ ಚಹಾದ ಅಂಗಡಿಯಲ್ಲಿ ಫಿರ್ಯಾಧಿ ಕುಳಿತುಕೊಂಡಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಕೈಯಲ್ಲಿ ಕೊಡ್ಲಿ, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲೆ ತುರುಕ ಸೂಳೆಮಗನೆ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಾ ಕೈಯಲ್ಲಿದ್ದ ಕೊಡಲಿಯನ್ನು ಎತ್ತಿ ಹೊಡೆಯಲು ಯತ್ನಿಸಿದಾಗ ಅಲ್ಲಿಯೆ ಇದ್ದ ಖಾಸಿಂ ತಂದೆ ಜಂಗಲಿಸಾಬ, ಮತ್ತು ಚಹಾದ ಅಂಗಡಿ ಮಾಲೀಕಳಾದ ಜುಬೇದಾ, ಮುತರ್ುಜಾ ತಂದೆ ದರವೇಶಮಹ್ಮದ ಇವರೆಲ್ಲರೂ ಸೇರಿ ಬಿಡಿಸಿಕೊಂಡಿದ್ದು, ಇಲ್ಲದಿದ್ದರೆ ಆ ಏಟಿನಿಂದ ನನ್ನ ಕೊಲೆಯಾಗುತ್ತಿತ್ತು. ಉಳಿದವರು ನನಗೆ ಬಡಿಗೆ ಕಲ್ಲುಗಳಿಂದ ಹೊಡೆಬಡೆ ಮಾಡುತ್ತಿದ್ದಾಗ ನನಗೆ ಅಂಗಡಿಯ ಒಳಗಡೆ ಹಾಕಿ ಶೆಟರ್ ಹಾಕಿದರು. ಹೋಗುವಾಗ ಆರೋಪಿತರೆಲ್ಲರೂ ಮಗನೆ ಇವತ್ತು ಉಳಿದಿದಿ ಇನ್ನೊಂದು ಸಲ ಸಿಕ್ಕರೆ ಜೀವಸಹಿತ ಬಿಡುವುದಿಲ್ಲ ಅಂತಾ ಒದರಾಡಿ ಹೋಗಿರುತ್ತಾರೆ. ಫಿರ್ಯಾಧಿಗೆ ಜೀವದ ಬೆದರಿಕೆ ಇರುವುದರಿಂಧ ಈ ಬಗ್ಗೆ ನ್ಯಾಯ ಮಾಡಬೇಕೆಂದು ಸುರಪುರಕ್ಕೆ ಹೋಗಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಮೇಲ್ಕಂಡ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ವಗೈರೆ ಫಿರ್ಯಾಧು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.  
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!