Yadgir District Reported Crimes Updated on 26-06-2017

By blogger on ಸೋಮವಾರ, ಜೂನ್ 26, 2017


                                                    Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ 323,324,498(ಎ),354,504 ಐಪಿಸಿ;- ದಿನಾಂಕ: 25/06/2017 ರಂದು 2.30 ಗಂಟೆಗೆ ಫಿಯರ್ಾದಿಯು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಾರಾಂಶವೇನೆಂದರೆ, ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 2-3 ವರ್ಷಗಳ ವರೆಗೆ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದು, ಒಂದು ಹೆಣ್ಣು ಮಗು ಇರುತ್ತದೆ. ನಂತರ ಫಿಯರ್ಾದಿಯ ಗಂಡ ಫಿಯರ್ಾದಿಗೆ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರಿಂದ ಫಿಯರ್ಾದಿಯು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಅಜರ್ಿ ಹಾಕಿದಾಗ ಆರೋಪಿತನು ಇನ್ನು ಮುಂದೆ ಚನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗದಿದ್ದು, ಸಧ್ಯ 8 ತಿಂಗಳ ಗಬರ್ಿಣಿ ಇದ್ದು, ದಿನಾಂಕ 23/06/2017 ರಂದು ಫಿಯರ್ಾದಿಗೆ ಹೊಟ್ಟೆ ನೋವು ಕಂಡು ಬಂದಿದ್ದರಿಂದ ಶಹಾಪುರ ಸುಶಿಲಾ ಆಸ್ಪತ್ರೆಗೆ ಸೇರಿಕೆಯಾಗಿ 2 ದಿವಸವಾದರೂ ಆರೋಪಿ ಫಿಯರ್ಾದಿಗೆ ಕರೆದುಕೊಂಡು ಹೋಗಲು ಬರದಿದ್ದಾಗ ಇಂದು ದಿನಾಂಕ: 25/06/2017 ರಂದು ಫಿಯರ್ಾದಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿ ಮನೆಗೆ ಹೋಗುವಾಗ ಫಿಯರ್ಾದಿಯ ತಂದೆ, ತಾಯಿ, ಅಕ್ಕ, ತಮ್ಮ ಇವರು ಫಿಯರ್ಾದಿಯ ಗಂಡನ ಮೆನಗೆ ಕರೆದುಕೊಂಡು ಹೋದಾಗ ಆರೋಪಿಯು ಎಲ್ಲರಿಗೆ ಅವಾಚ್ಯವಾಗಿ ಬೈದು ಫಿಯರ್ಾದಿಯ ಅಕ್ಕ ಇವಳ ಸೀರೆ ಇಡಿದು ಜಗ್ಗಾಡಿ ಬಿಡಿಸಲು ಬಂದ ಫಿಯರ್ಾದಿಯ ಹೊಟ್ಟೆಗೆ ಒದ್ದು, ಫಿಯರ್ಾದಿ ತಮ್ಮನಿಗೆ ಒಂದು ಕಬ್ಬಿಣದ ರಾಡಿನಿಂದ ಹೊಡೆದಿದ್ದು, ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-214/2017 ಕಲಂ 323,324,498(ಎ),354, 504 ಐಪಿಸಿ ಪ್ರಕಾರ ಗುನ್ನೆ ದಾಕಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 279,338,304(ಎ)ಐ.ಪಿ.ಸಿ ಮತ್ತು 187 ಐ.ಎಮ್.ವಿ ಕಾಯ್ದೆ;- ದಿನಾಂಕ: 25/06/2017 ರಂದು 10:30 ಎ.ಎಮ್.ಕ್ಕೆ ಶಖಾಪೂರ ತಾಂಡ ಕ್ರಾಸ್ ಹತ್ತಿರ ಮೃತ ಕು: ಧನರಾಜ ತಂದೆ ಟೋಪು ನಾಯಕ ಹಾಗೂ ರೋಹಿತಕುಮಾರ ಇವರು ಕೂಡಿ ತಮ್ಮ ಸೈಕಲ್ ಮೇಲೆ ತಾಂಡಾದಿಂದ ಭೀ.ಗುಡಿಗೆ ಬರುತ್ತಿರುವಾಗ ಜೇವಗರ್ಿ ಮುಖ್ಯ ರಸ್ತೆ ಕಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಬಾಜು ಹೊರಟಿದ್ದ ಧನರಾಜ ಈತನ ಸೈಕಲಗೆ ಡಿಕ್ಕಿ ಹೊಡೆದಿದ್ದು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ನಂಬರ ಇರುವುದಿಲ್ಲ. ಟ್ರಾಕ್ಟರ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಅಪಘಾತದಲ್ಲಿ ಧನರಾಜನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟದ್ದು ಇರುತ್ತದೆ. ರೋಹಿತಕುಮಾರನಿಗೆ ಭಾರಿ ರಕ್ತಗಾಯವಾಗಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂಃ 279.338 ಐಪಿಸಿ;- ದಿನಾಂಕ 24/06/2017 ರಂದು ಸಾಯಂಕಾಲ 5 .00 ಪಿ.ಎಂ ಕ್ಕೆ ಲಿಂಗಸೂರು ಹರ್ಷವರ್ದನ ಆಸ್ಪತ್ರೆಯಿಂದ ಎಂ.ಎಲ್,ಸಿ ವಸೂಲಾಗದ ಮೇರೆಗೆ ನಾನು ರಾತ್ರಿ 8.00 ಪಿ,ಎಂ ಕ್ಕೆ ಆಸ್ಪತ್ರೆಗೆ ಬೇಟಿ ಮಾಡಿ ಉಪಚಾರ ಹೋಂದುತ್ತಿದ್ದ ಸದರಿ ಪಿರ್ಯಾದಿ ಹೇಳಿಕೆಯನ್ನು ಪಡೆಯಲಾಗಿ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮತ್ತು ನಮ್ಮ ತಮ್ಮ ರಫೀಕ ಇಬ್ಬರೂ ಕೂಡಿ ನಮ್ಮ ಮೋಟರ ಸೈಕಲ ನಂ ಕೆಎ-04 ಹೆಚ್ ಕ್ಯೂ -0944 ನೇದ್ದರ ಮೇಲೆ  ದಿನಾಂಕ 23/06/2017 ರಂದು ಸಾಯಂಕಾಲ 6.30 ಪಿ,ಎಂ ಸುಮಾರಿಗೆ ಲಿಂಗಸೂರಿನಿಂದ ನಮ್ಮ ಊರಿಗೆ ಬರುವಾಗ ನಮ್ಮ ಮೋಟಾರ ಸೈಕಲ ಮೇಲೆ  ನಾನು ಮತ್ತು ನಮ್ಮ ತಮ್ಮ ಬರುತ್ತಿದ್ದು ಮೋಟಾರ ಸೈಕಲ ನಮ್ಮ ತಮ್ಮ ರಫಿಕ ಈತನು ನಡೆಯಿಸುತ್ತಿದ್ದನು. ಲಿಂಗಸೂರ- ಸುರಪೂರ ಮುಖ್ಯರಸ್ತೆಯ ಅರಳಳ್ಳಿ ಕ್ರಾಸ ಹತ್ತಿರ  ಬರುತ್ತಿದ್ದಾಗ ಎದುರಿನಿಂದ ಸುರಪೂರ ಕಡೆಯಿಂದ ಕಾರ ನಂ ಕೆಎ- 29 ಎಂ -6132 ನೇದ್ದರ ಚಾಲಕ ನರಸರಡ್ಡಿ ತಂದೆ ವೀರುಪಾಕ್ಷಪ್ಪ ಪಾಟೀಲ ಸಾ|| ಗದ್ರಟಗಿ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ  ಸೈಕಲಕ್ಕೆ ಡಿಕ್ಕಿ ಪಡಿಸಿದನು ಪರಿಣಾಮ  ನನಗೆ ಬಲಗಾಲ ಮೋಳಕಾಲ ಕೆಳಗೆ ಗುಪ್ತಗಾಯವಾಗಿ ಕಾಲು ಮರಿದಂತಾಗಿರುತ್ತದೆ. ನಮ್ಮ ತಮ್ಮನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ, ಕಾರಣ ಮಾನ್ಯರವರು ನನಗೆ ಅಪಗಾತ ಪಡಿಸಿದ ಕಾರ ಚಾಲಕನ ಮೇಲೆ ಕ್ರಮ ಜರುಗಿಸಬೆಕು ಅಂತ ಹೇಳಿಕೆ ಕೊಟ್ಟಿದ್ದು ಸದರಿ ಹೇಳಿಕೆಯನ್ನು 8.00 ಪಿಎಂ ದಿಂದ 9.00 ಪಿಎಂ ದ ವರೆಗೆ  ಪಡೆದುಕೊಂಡು ಇಂದು ದಿನಾಂಕ 25/06/2017 ರಂದು 12.30 ಎ.ಎಂ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಪಿರ್ಯಾದಿ ಸಾರಾಂಶದ  ಮೇಲಿಂದ ಠಾಣಾ ಗುನ್ನೆ ನಂ 165/2017 ಕಲಂ 279,338 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂಃ 379 ಐಪಿಸಿ;- ದಿನಾಂಕಃ 22/06/2017 ರಂದು 02-00 ಎ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಮನೆಯ ಮುಂದೆ ನಿಲ್ಲಿಸಿದ ಹೊಂಡಾಶೈನ್ ಮೋಟರ ಸೈಕಲ ನಂ: ಕೆ.ಎ 33 ಆರ್ 0217 ಅ||ಕಿ|| 25,000/- ರೂ.ಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿಯರ್ಾದಿಯು ಈ ಬಗ್ಗೆ ತನ್ನ ಮೋಟರ ಸೈಕಲ ಹುಡುಕಾಡಿ ಸಿಗಲಾರದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದರಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂಃ 87 ಕೆ.ಪಿ ಆಕ್ಟ್;- ದಿನಾಂಕ: 25/06/2017 ರಂದು 5-15 ಪಿ.ಎಮ್ ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು 8ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 2-45 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಟಿ.ಬೊಮ್ಮನಳ್ಳಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರು ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 8 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 4500/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 167/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 96-2017 ಕಲಂ, 87 ಕೆ.ಪಿ.ಆ್ಯಕ್ಟ್;- ದಿನಾಂಕ: 25/06/2017 ರಂದು 6-45 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 06 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 25/06/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 3-45 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೂದನೂರ ಗ್ರಾಮದ ಆಸ್ಪತ್ರೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 4-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 06 ಜನ ಆರೋಪಿತರು ಮತ್ತು ಒಟ್ಟು 1530/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 5-00 ಪಿಎಮ್ ದಿಂದ 6-00 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-45 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-45 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 96/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!