Yadgir District Reported Crimes Updated on 19-06-2017

By blogger on ಸೋಮವಾರ, ಜೂನ್ 19, 2017


                                                   Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 100/2017  ಕಲಂ 279, 304 (ಎ) ಐಪಿಸಿ ;- ದಿನಾಂಕ-18/06/2017 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ರಾಯಚೂರದಿಂದ ಸೈದಾಪೂರಕ್ಕೆ ಕೀರಾಯಿ ಇದೆ ನಾನು ಹೋಗುತ್ತೇನೆ ಅಂತಾ ನನಗೆ ಮತ್ತು ಮನೆಯಲ್ಲಿ ತಿಳಿಸಿ ಆಟೋ ತೆಗೆದುಕೊಂಡು ಹೋದನು. ರಾತ್ರಿಯಾದರೂ ಮನೆಗೆ ಬರಲಿಲ್ಲ  ಅಂತಾ ನಾವೂ ದಾರಿ ಕಾಯುತಿದ್ದಾಗ ನಿನ್ನೆ ರಾತ್ರಿ 9  ಗಂಟೆ ಸುಮಾರಿಗೆ ನಮ್ಮೂರ ಬಾಸ್ಕರ ತಂದೆ ಚಂದ್ರಪ್ಪ ಕಲಾಲ ಇತನು ನನಗೆ ಪೊನ್ ಮಾಡಿ ನಿನ್ನ ಮಗ ಶಂಕರ ಇತನು ಸೈದಾಪೂರ ದಿಂದ ಕುಣಚಿ ಗ್ರಾಮದ ಕಡೆ ಹೋಗುವಾಗ ರಾತ್ರಿ ಅಂದಾಜು 7-30 ಗಂಟೆಗೆ ಶಟ್ಟಿಹಳ್ಳಿ - ರಾಚನಳ್ಳಿ ಮದ್ಯೆ ರಾಯಚೂರ - ಯಾದಗಿರಿ ಮುಖ್ಯ ರಸ್ತೆಯ ಮೇಲೆ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ಆಟೋ ಪಲ್ಟಿಯಾಗಿದ್ದು ಆಟೋ ಆತನ ಎದೆಯ ಮೇಲೆ ಬಿದ್ದು ಎದೆಗೆ ಬಾರಿ ಗುಪ್ತಗಾಯವಾಗಿ ಮತ್ತು ಮೈಗೆ ಅಲ್ಲಲ್ಲಿ ತರಚಿದಂತ ಗಾಯಗಳಾಗಿ ಅಪಘಾತಸ್ಥಳದಲ್ಲಿ ಸತ್ತಿರುತ್ತಾನೆ ಅಂತಾ ತಿಳಿಸಿದನು, ಆಗ ನಾನು ಮತ್ತು ನಮ್ಮೂರ ಮಾಹಾದೇವಪ್ಪ ತಂದೆ ದೊಡ್ಡಹಣಮಂತ ಕಾವಲಿ, ಶೇಖರಪ್ಪ ತಂದೆ ದೇವಪ್ಪ ಉಪ್ಪಾರ ಕೂಡಿಕೊಂಡು ಒಂದು ಖಾಸಗಿ ಜೀಪ್ ಮಾಡಿಕೊಂಡು ಸ್ಥಳಕ್ಕೆ ಬಂದು ನೋಡಲು ಆಟೋ ರೋಡಿನ ಎಡಗಡೆ ಬಿದ್ದಿದ್ದು ಆದರೆ ನನ್ನ ಮಗನ ಶವ ಇರಲಿಲ್ಲ ನಂತರ ವಿಚಾರಿಸಲು 108 ಅಂಬುಲೆನ್ಸ ನವರು ಬಂದು ಶವವನ್ನ ಹಾಕಿಕೊಂಡು ಸೈದಾಪೂರ ಸರಕಾರಿ ಆಸ್ಪತ್ರೆೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಗೊತ್ತಾಯಿತು ಆಗ ನಾವು ಸೈದಾಪೂರ ಸರಕಾರಿ ಆಸ್ಪತ್ರೆಯಲ್ಲಿ ಶವಗಾರಕೊಣೆಯಲ್ಲಿ ಹಾಕಿದ್ದ ಶವವನ್ನು ನೋಡಲಾಗಿ ಎದೆಗೆ ತರಚಿದಂತೆಯಾಗಿ ಭಾರಿ ಗುಪ್ತಗಾಯವಾಗಿದ್ದು ಕಂಡು ಬಂದಿದ್ದು ಹಾಗೂ ಮೈಗೆ ಅಲ್ಲಲ್ಲಿ ತರಚಿದಂತ ಗಾಯಗಳಾಗಿ ಸತ್ತಿರುತ್ತಾನೆ. ನನಗೆ ನನ್ನ ಮಗ ಸತ್ತ ನಂತರ ಏನು ಮಾಡಬೇಕು ಅಂತಾ ಗೊತ್ತಾಗದೆ ಇರುವದರಿಂದ ಊರವರ ಕಡೆಯಿಂದ ವಿಚಾರಿಸಿಕೊಂಡು ಇಂದು ದಿನಾಂಕ-19/06/2017 ರಂದು ಬೇಳಿಗ್ಗೆ 7 ಗಂಟೆಗೆ ತಡವಾಗಿ ಠಾಣೆಗೆ ಬಂದು ಪಿಯರ್ಾಧಿ ಹೇಳಿಕೆಯನ್ನು ನೀಡಿರುತ್ತೇನೆ. ಕಾರಣ ನನ್ನ ಮಗ ಆಟೋವನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಆಟೋದ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದಿದ್ದರಿಂದ ನನ್ನ ಮಗ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಲು ಹೇಳಿ ಗಣಕಿಕರಿಸಿದ ಪಿಯರ್ಾಧಿ ಹೇಳಿಕೆ ಇರುತ್ತದೆ 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ: 403, 406, 420, 427  ಐ.ಪಿ.ಸಿ;- ದಿನಾಂಖ 18/06/17ರಂದು 6 ಪಿ.ಎಂಕ್ಕೆ ಫೀಯರ್ಾದಿ ಶ್ರೀ ಅಮರೇಶ ತಂದೆ ಅಡಿವೆಪ್ಪ ಮರಾಠ ಸಾ. ಜಾಲಿಬೆಂಚಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೆಂದರೆ, ದಿ: 29/05/2017 ರಂದು ಕೆಲಸದ ನಿಮಿತ್ಯ ಸುರಪೂರಕ್ಕೆ ಬಂದು ಮರಳಿ 4 ಪಿ.ಎಂಕ್ಕೆ ಜಾಲಿಬೆಂಚಿಗೆ ಮೋಟಾರ ಸೈಕಲ್ ಮೇಲೆ ಹೋಗುವಾಗ ಮದ್ಯದಲ್ಲಿ ತನ್ನ ಅಂಗಿಯ ಪಾಕಿಟದಲ್ಲಿದ್ದ ಡೈರಿ ಹಾಗೂ ಎ.ಟಿ.ಎಂ ಖಾರ್ಡಗಳು ಆಕಶ್ಮಿಕವಾಗಿ ಎಲ್ಲೋ ಕಳೆದುಕೊಂಡಿದ್ದು ಮತ್ತು ಎ.ಟಿ.ಎಂ ಗಳ ಪಿನ್ ನಂಬರ ಬರೆದ ಡೈರಿ ಕಳೆದುಕೊಂಡಿದ್ದು ಸದರಿ ಎ.ಟಿ.ಎಂ ಖಾರ್ಡ ಗಳನ್ನು ಬಳಸಿ ಯಾರೋ ದುಷ್ಕಮರ್ಿಗಳು ಫಿಯರ್ಾದಿದಾರರ ಖಾತೆಯಲ್ಲಿ ಒಟ್ಟು ಹಣ 204513/- ನೇದ್ದವುಗಳನ್ನು ಡ್ರಾ ಮಾಡಿಕೊಂಡ ಬಗ್ಗೆ  ಫಿಯರ್ಾದಿ ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 101/2017 ಕಲಂ 379 ಐಪಿಸಿ;- ದಿನಾಂಕ: 18/06/2017 ರಂದು ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269,  ಜಗದೀಶ ಪಿಸಿ 388 ಜೀಪ ಚಾಲಕ ಇವರೊಂದಿಗೆ ಯಾದಗಿರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಠಾಣೆಯಿಂದ 9-15 ಎಎಂಕ್ಕೆ ಹೊರಟು ಅಂಬೇಡ್ಕರ ಚೌಕ್, ಚರ್ಚ ಕ್ರಾಸ್ ಮುಖಾಂತರ ಶಾಸ್ತ್ರೀ ಚೌಕ ಕಡೆಗೆ ಹೋಗುತ್ತಿರುವಾಗ ನಮ್ಮ ಎದುರಗಡೆ ಒಬ್ಬನು ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು ಸಿಬ್ಬಂದಿಯವರ ಸಹಾಯದಿಂದ ಟ್ರ್ಯಾಕ್ಟರನ್ನು ನಿಲ್ಲಿಸಿ ಚಾಲಕನನ್ನು 10:00 ಎಎಂಕ್ಕೆ ಶಾಸ್ತ್ರೀ ಚೌಕದಲ್ಲಿ ಹಿಡಿದುಕೊಂಡು ವಿಚಾರಿಸಲು ತನ್ನ ಹೆಸರು ಭಿಮರಾಯ ತಂ. ಹಣಮಂತ ದನಕಾಯರ ವಃ 30 ಜಾಃ ಮಾದಿಗ ಉಃ ಟ್ರ್ಯಾಕ್ಟರ ಚಾಲಕ ಸಾಃ ಖಾನಳ್ಳಿ ತಾಃಜಿಃ ಯಾದಗಿರಿ ಅಂತಾ ತಿಳಿಸಿದನು. ಸದರಿಯವನಿಗೆ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದರ ಬಗ್ಗೆ ಕೇಳಿದ್ದಕ್ಕೆ ಯಾವುದೇ ಪರವಾನಿಗೆ ಮತ್ತು ಕಾಗದ ಪತ್ರಗಳು ಇರುವುದಿಲ್ಲಾ, ಎಲ್ಲಿಂದ ಮರಳನ್ನು ತುಂಬಿಕೊಂಡು ಬಂದಿದ್ದು ಅಂತಾ ವಿಚಾರಿಸಲು ಯಾದಗಿರಿಯ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಇರುವ ಹಳ್ಳದಲ್ಲಿ ತುಂಬಿಕೊಂಡು ಬಂದಿರುತ್ತೆನೆ ಅಂತಾ ತಿಳಿಸಿದನು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರು ಮರಳನ್ನು ಅಕ್ರಮವಾಗಿ ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರಗೆ ನೊಂದಣಿ ಸಂಖ್ಯೆ ಇರುವುದಿಲ್ಲಾ. ಟ್ರ್ಯಾಕ್ಟರ ಇಂಜಿನ್ ನಂ. ಖ325.1ಊ21813 ಚೆಸ್ಸಿ ನಂ. ಒಇಂ8ಅಅಂ1ಈಉ2098138 ಟ್ರಾಲಿ ಚೆಸ್ಸಿ ನಂ. 21/2016 ಇದ್ದು ಅದರಲ್ಲಿ ಮರಳು ತುಂಬಿದ್ದು ಸಿಬ್ಬಂದಿ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಆರೋಪಿ ಸಮೇತ ಯಾದಗಿರಿ ನಗರ ಠಾಣೆಗೆ 10-45 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರದಲ್ಲಿ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ. 190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ವರದಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 11-15 ಎಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ. ಎಂದು ಕೊಟ್ಟ   ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 101/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 204/2017 ಕಲಂ 457 380 ಐ.ಪಿ.ಸಿ;- ದಿನಾಂಕ 18/06/2017 ರಂದು 13-00 ಗಂಟೆಗೆ ಫಿರ್ಯಾದಿ ಶ್ರೀಮತಿ ಯಶೋಧಾ ಗಂಡ ಮಾನಪ್ಪ ಚಳಮಾರ ವಯ 30 ವರ್ಷ ಜಾತಿ ಪರಿಶಿಷ್ಟ ಜಾತಿ ಉಃ ಮನೆ ಕೆಲಸ ಸಾಃ ನಗನೂರ ಹಾಲಿವಸತಿ ಬಸವೇಶ್ವರ ನಗರ ಶಹಾಪೂರ ಕೇರ್/ಆಪ್ ಅಯ್ಯಪ್ಪ ತಂದೆ ಮಲ್ಲಪ್ಪ ರವರ ಮನೆ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರದ ಬಸವೇಶ್ವರ ನಗರ ಏರಿಯಾದ ಅಯ್ಯಪ್ಪ ಇವರ ಮನೆಯಲ್ಲಿ ಫಿರ್ಯಾದಿಯು ಸುಮಾರು 5 ತಿಂಗಳಿನಿಂದ ತನ್ನ ಕುಟುಂಬ ಸಮೇತ ವಾಸವಾಗಿದ್ದು, ಹೀಗಿರುವಾಗ ದಿನಾಂಕ 15/06/2017 ರಂದು ಬೆಳಗಿನ ಜಾವ 06-00 ಗಂಟೆಗೆ ಫಿರ್ಯಾದಿಯವರು ಎದ್ದಾಗ ತಮ್ಮ ಪಕ್ಕಕ್ಕೆ ಇದ್ದ ಸಮಸಂಗ್ ಗೇಲಾಕ್ಸಿ ಮೋಬಾಯಿಲ್ ಕಾಣಲಿಲ್ಲ ಆಗ ಫಿರ್ಯಾದಿಯವರು ಮನೆಯಲ್ಲಿ ಹುಡಕಾಡುತ್ತಾ ಮನೆಯ ಹೊರಗಡೆ ನಿಗಾ ಮಾಡಿ ನೋಡಿದಾಗ  ತಮ್ಮ ಮನೆಯ ಆಲ್ ಮಾರಿಯಲ್ಲಿಟ್ಟಿದ್ದ ಪಸ೵ ಹೊರಗಡೆ ಬಿದ್ದಿದ್ದನ್ನು ಕಂಡು ಮನೆಯ ಒಳಗಡೆ ಬಂದು ಆಲ್ ಮಾರಿ ನೋಡಲಾಗಿ ಬೀಗ್ ಹಾಕುವ ಜಾಗದಲ್ಲಿ ಡೊಂಕಾಗಿದ್ದನ್ನು ಕಂಡು ಗಾಬರಿಗೊಂಡು ಆಲ್ ಮಾರಿ ಒಳಗಡೆ ನೋಡಲಾಗಿ 34 ಗ್ರಾಂ ಬಂಗಾರದ ಆಭರಣಗಳು ಅಂ.ಕಿ 85,000=00 ರೂಪಾಯಿ ಮತ್ತು ಪರ್ಸನಲ್ಲಿಟ್ಟಿದ್ದ ನಗದು ಹಣ 30,000=00 ರೂಪಾಯಿ ಮತ್ತು ಒಂದು ಸಮಸಂಗ್ ಗೇಲಾಕ್ಸಿ ಮೋಬಾಯಿಲ್ ಅಂ.ಕಿ 1000=00 ರೂಪಾಯಿ ಹೀಗೆ ಒಟ್ಟು 1,16,000=00 ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ದಿನಾಂಕ 15/06/2017 ರಂದು ಬೆಳಗಿನ ಜಾವ 03-30 ಗಂಟೆಯಿಂದ  06-00 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕ್ರಮ ಕೈಕೊಂಡು ಕಳುವಾದ  ಬಂಗಾರ ನಗದು ಹಣ ಮತ್ತು ಮೋಬಾಯಿಲ್ ಪತ್ತೆ ಹಚ್ಚಿಕೊಡಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 204/2017 ಕಲಂ 457 380  ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 205/2017 143,147,323,447,354,504,506 ಸಂಗಡ 149 ಐಪಿಸಿ;- ದಿನಾಂಕ 18/06/2017 ರಂದು 15:00 ಗಂಟೆ ಸುಮಾರಿಗೆ ಶ್ರೀಮತಿ ಯಲ್ಲಮ್ಮ ಗಂಡ ದೇವಿಂದ್ರಪ್ಪ ತೆಲಗರ ಇವರು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ದೂರ ಹಾಜರ ಪಡಿಸದ್ದು ದೂರಿನ ಸಾರಂಶವೆನಂದರೆ ನಿನ್ನೆ ದಿನಾಂಕ: 17/06/2017 ರಂದು ಮುಂಜಾನೆ 09:00 ಎಎಮ್ ಸುಮಾರಿಗೆ ನನ್ನ ಹಿರಿಯ ಸೋಸೆ ನಿರ್ಮಲಾ ಗಂಡ ಮರೆಪ್ಪ ತೆಲಗರ ಇವಳು ನಾವು ಬಹಳ ವರ್ಷಗಳಿಂದ ಬಿತ್ತಣಿಕೆ ಮಾಡಿಕೊಂಡು ಬರುತ್ತಿದ್ದ ಗೌಂಟಾಣಿ ಹೊಲದಲ್ಲಿ ಬಿತ್ತಿದ್ದ ಹೆಸರು ಬೆಳೆಗಳನ್ನು ದನಕರುಗಳು ಬಂದು ತಿನ್ನುವ ಸಂಬವ ಇದ್ದುದರಿಂದ ಹೊಲ ಕಾಯಲು ಹೊಗಿದ್ದಳು. 10:00 ಗಂಟೆ ಸುಮಾರಿಗೆ ನನ್ನ ಸೊಸೆ ನಿರ್ಮಲ ಇವಳು ನನ್ನ ಮಗ ಶೇಖಪ್ಪ ಇತನಿಗೆ ಪೋನ ಮಾಡಿ ನಮ್ಮ ಹೊಲದಲ್ಲಿ ಸಣ್ಣ ಬಾಷಾ, ಚಾಂದ ತಂದೆ ಇಮಾಮಸಾಬ ಮಾಸಬಾವಿ, ಮಾಬಾಣಿ ಗಂಡ ಸಣ್ಣ ಬಾಷಾ, ದೋಡ್ಡ ಬಾಷಾ ತಂದೆ ಇಮಾಮಸಾಬ ಮಾಸಬಾವಿ ಮತ್ತು ಇಮಾಮಸಾಬ ಇವರೆಲ್ಲರು ಕೂಡಿಕೊಂಡು ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿದ್ದಾರೆ ಅಂತ ಪೊನ ಮಾಡಿ ತಿಳಿಸಿದ ಕೂಡಲೆ ನಾನು ಮತ್ತು ನನ್ನ ಮಗ ಶೇಖಪ್ಪ ಇಬ್ಬರು ಕೂಡಿ ಹೊಲಕ್ಕೆ 11:00 ಎಎಂಕ್ಕೆ ಹೋಗಿ ನೋಡಲಾಗಿ ಸಣ್ಣ ಬಾಷಾ ಹಾಗೂ ಇತರರು ನಮ್ಮ ಹೋಲದಲ್ಲಿ ಗಳೆ ಹೊಡೆಯುತ್ತಿದ್ದದನ್ನು ನೋಡಿ ಅವರಿಗೆ ಯಾಕೆ ನಮ್ಮ ಹೋಲದಲ್ಲಿ ಗಳೆ ಹೊಡೆಯುತ್ತಿರಿ ಅಂತ ಕೇಳಿದ್ದಕ್ಕೆ ಏ ಸೂಳೆ ಮಕ್ಕಳೆ ನಿಮ್ಮದು ಸೋಕ್ಕು ಬಹಳ ಆಗಿದೆ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ ಅಂತ ಅನ್ನುತ್ತಾ ಚಾಂದ ಬಾಷಾ ಇತನು ಕೈಯಿಂದ ನನ್ನ ಬೆನ್ನಿಗೆ ಹೊಡೆದು ಹಿಡಿದು ಜಗ್ಗಾಡಿದನು ಮತ್ತು ಮಾಬಾಣಿ ಇವಳು ನನ್ನ ಸೊಸೆ ನಿರ್ಮಲಾ ಇವಳಿಗೆ ಕೈಯಿಂದ ಕಪಾಳಕ್ಕೆ ಹೊಡೆದಳು, ಸಣ್ಣ ಬಾಷಾ ಇವನು ಕೂಗಲು ಹಿಡಿದು ಜಗ್ಗಾಡಿದನು. ನನ್ನ ಮಗ ಶೇಖಪ್ಪನಿಗೆ ದೊಡ್ಡ ಬಾಷಾ ಇತನು ಕಪಾಳಕ್ಕೆ ಹೊಡೆಯುತ್ತಿದ್ದಾಗ ಇಮಾಮಸಾಬ ಇವನು ಹೊಡೆದು ಖಲ್ಲಾಸ ಮಾಡಿರಿ ಅಂತ ಅನ್ನುತ್ತಿದ್ದಾಗ ಅಲ್ಲೆ ಹೋರಟಿದ್ದ ಸೋಮಶೇಖರ ತಂದೆ ಮರೆಪ್ಪ ರಡ್ಡಿ ಮತ್ತು ಮಲ್ಲಿಕಾಜರ್ುನ ತಂದೆ ಗಿರೆಪ್ಪ ಬಾಡದವರ ಇವರುಗಳು ಬಂದು ಜಗಳ ಬಿಡಿಸಿದ್ದು, ಆರೋಪಿತರೆಲ್ಲರೂ ಸೂಳೆ ಮಕ್ಕಳೆ ಇಗ ಉಳಿದ್ದಿರಿ ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ. ಘಟನೆಯಲ್ಲಿ ನಮಗೆ ಯಾವುದೆ ಗಾಯ ಪೆಟ್ಟುಗಳು ಆಗದರಿಂದ ನಾವು ಆಸ್ಪತ್ರೆಗೆ ಹೋಗಿರುವದಿಲ್ಲ. ಈ ಬಗ್ಗೆ ನಾವು ನಮ್ಮ ಹಿರಿಯರಲ್ಲಿ ವಿಚಾರಣೆ ಮಾಡಿ ತಡವಾಗಿ ಬಂದಿರುತ್ತೆವೆ. ಕಾನೂನು ಕ್ರಮ ಜರಗಿಸಲು ವಿನಂತಿ ಅಂತ ಕೊಟ್ಟ ಅಜರ್ಿಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 205/2017 ಕಲಂ: 143, 147, 323, 447, 354, 504, 506 ಸಂಗಡ 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!