Yadgir District Reported Crimes Updated on 12-06-2017

By blogger on ಸೋಮವಾರ, ಜೂನ್ 12, 2017


                                                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ 87  ಕೆ.ಪಿ ಆಕ್ಟ ;- ದಿನಾಂಕ 11/06/2017  ರಂದು ಮದ್ಯಾಹ್ನ 15-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸೋಮಲಿಂಗಪ್ಪ  ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 8 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 13-15 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಎಸಿ ಗೋದಾಮ ಏರಿಯಾದ ಬೀಟ್ ಸಿಬ್ಬಂದಿ ಹೋನ್ನಪ್ಪ ಹೆಚ್.ಸಿ 101 ರವರಿಗೆ ಎಸಿ ಗೋಧಾಮಿನ  ಹತ್ತಿರ ಇರುವ ಕೋಳಿ ಪಾರಂದ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಜೂಜಾಟ ಆಡುತಿದ್ದ ಬಗ್ಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 8 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 10,200 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 16-00 ಗಂಟೆಗೆ ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 195/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 89-2017 ಕಲಂ, 498(ಎ), 324, 504, 506 ಐಪಿಸಿ ;- ದಿನಾಂಕ: 11/06/2017 ರಂದು 11-00 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ದೊಡ್ಡಲಕ್ಷ್ಮೀ ಗಂಡ ದೊಡ್ಡಮಾನಯ್ಯಾ ಬೇವಿನಕಟ್ಟಿ ಸಾ|| ಬಾಣತಿಹಾಳ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಆರೋಪಿತನೊಂದಿಗೆ ಈಗ ಸುಮಾರು 30 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ. ಹೀಗಿದ್ದು ಆರೋಪಿತನು ಈಗ ಸುಮಾರು 10 ವರ್ಷಗಳಿಂದ ಪ್ರತಿ ದಿನ ಕುಡಿದು ಬಂದು ತೊಂದರೆ ಕೊಡುತ್ತಿದ್ದು ಪಿರ್ಯಾದಿಯು ಸಹಿಸಿಕೊಂಡು ಬಂದಿದ್ದು ಇರುತ್ತದೆ.  ಹೀಗಿದ್ದು ನಿನ್ನೆ ದಿನಾಂಕ: 10/06/2017 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ನೆಗಣ್ಣಿ ಮಹಾದೇವಿ ಮತ್ತು ಮಗಳು ಮರೆಮ್ಮ ಇವರೊಂದಿಗೆ ಹೊಲಕ್ಕೆ ಹೋಗಿ ಮರಳಿ ಮಲ್ಲಪ್ಪ ಮೇಟಿ ಇವರ ಹೊಲದ ಬಾಜು ರಸ್ತೆಯ ಮೇಲೆ ಬರುವಾಗ ಬಂದು ಅವಾಚ್ಯ ಬೈದು ಕಲ್ಲಿನಿಂದ ಎಡಗೈಗೆ ಒಳಪೆಟ್ಟು ಮತ್ತು ಎಡಹಣೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಆಗ ಮಹಾದೇವಿ ಮತ್ತು ಮರೆಮ್ಮ ಇವರು ಬಿಡಿಸಿಕೊಂಡಿದ್ದು ಆರೋಪಿತನು ಹೊಡೆದು ಹೋಗುವಾಗ ಜೀವದ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 89/2017 ಕಲಂ, 498(ಎ), 324, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 90-2017 ಕಲಂ, 498(ಎ), 324, 504, 506 ಐಪಿಸಿ;- ದಿನಾಂಕ: 11/06/2017 ರಂದು 8-30 ಪಿಎಮ್ಕ್ಕೆ ಅಜರ್ಿದಾರಳಾದ ಶ್ರೀಮತಿ ಲಕ್ಷ್ಮೀ ಗಂಡ ಗೋಪಾಲ  ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಆರೋಪಿತನೊಂದಿಗೆ ಈಗ ಸುಮಾರು 14 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳು ಇರುತ್ತಾರೆ. ಹೀಗಿದ್ದು ಆರೋಪಿತನು ಈಗ ಸುಮಾರು ಮೂರು ನಾಲ್ಕು ವರ್ಷಗಳಿಂದ ಪ್ರತಿ ದಿನ ಕುಡಿದು ಬಂದು ನಾನು ದುಡಿದ ಹಣ ಕೊಡು ಅಂತಾ ಜಗಳ ಮಾಡುತ್ತಾ ಬಂದಿದ್ದು ನಾನು ಇಲ್ಲಿಯವರೆಗೂ ಸಹಿಸಿಕೊಂಡು ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 11/06/2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕಸ ತೆಗೆಯುತ್ತಾ ಕುಳಿತಾಗ ನನ್ನ ಗಂಡನು ಬಂದವನೇ ` ಏನಲೇ ಸೂಳಿ ಮನೆಯಲ್ಲಿ ಅಡುಗೆ ಯಾಕೆ ಮಾಡಿಲ್ಲಾ ' ಅಂತಾ ಅಂದಿದ್ದು ಆಗ ನಾನು ನನ್ನ ಕೈ ಮುರದ್ಯಾದ ಅದಕ್ಕೆ ಅಡುಗೆ ಮಾಡಿಲ್ಲಾ ಅಂತಾ ಅಂದಿದ್ದು ಆಗ ನನ್ನ ಗಂಡನು ಅಡುಗೆ ಮಾಡಲು ಬರಲ್ಲಾ ಹೊಲದಲ್ಲಿ ಕಸ ತೆಗೆಯಲು ಬರುತ್ತದೇನ್ ಅಂತಾ ಅಂದವನೇ ನಮ್ಮ ಹೊಲದಲ್ಲಿರುವ ಮನೆಯೊಳಗೆ ಹೋಗಿ ಮಜ್ಜಿಗೆ ಮಾಡುವ ಕಡಗೋಲ್ ತೆಗೆದುಕೊಂಡು ಬಂದು ನನಗೆ ಎಡಗೈಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ.  ಆಗ ಅಲ್ಲೇ ದಾರಿಯ ಮೇಲೆ ಬರುತ್ತಿದ್ದ  ಲಾಲು ತಂದೆ ಗೇನು ಜಾದವ, ಹಾಗೂ ನಮ್ಮ ಅತ್ತೆ ಲಾಲಿಬಾಯಿ ಗಂಡ ಡಾಕು, ನೆಗಣ್ಣಿಯಾದ ಲಲಿತಾ ಗಂಡ ಗೋವಿಂದ ಜಾದವ ಇವರು ನನಗೆ ಹೊಡೆಯುವುದನ್ನು ನೋಡಿ ಜಗಳ ಬಿಡಿಸಿಕೊಂಡರು. ಆಗ ನನ್ನ ಗಂಡನು ರಂಡಿ ಇವತ್ತ ಉಳದೀದಿ ನಿನಗೆ ಒಂದಿಲ್ಲಾ ಒಂದು ದಿವಸ  ಜೀವ ಹೊಡೆದು ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿ ಹೋದನು.  ಕಾರಣ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಅವಾಚ್ಯ ಬೈದು, ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 90/2017 ಕಲಂ, 498(ಎ), 324, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.  

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 31/2017 ಕಲಂ: 143, 147, 323, 504, 506 ಸಂ 149 ಐಪಿಸಿ;- ದಿನಾಂಕ||10/06/2017 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಎಣ್ಣಿವಡಗೇರದಿಂದ ನಾರಾಯಣಪೂರಕ್ಕೆ ಬರುವಾಗ ಆರೋಪಿ ಮಲ್ಲೇಶಪ್ಪಗೌಡ ಪಾಟೀಲ್ ಇವನು ತನ್ನ ಡಿಸ್ಕವರಿ ಬೈಕನಲ್ಲಿ ಬಂದು ಪಿರ್ಯಾದಿಗೆ  ಅಡ್ಡಗಟ್ಟಿ ಪಿರ್ಯಾದಿಗೆ ಮತ್ತು ಅವರ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿದ್ದು ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ನಿಮ್ಮನ್ನು ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದು ನೀವು ಊರಲ್ಲಿ ಇರಬಾರದೆಂದು ಜೀವಭೇದರಿಕೆ ಹಾಕಿದ್ದು ಇರುತ್ತದೆ. ಇವರತ ಆರೋಪಿತರು ಸಹ ಪಿಯರ್ಾದಿಗೆ ಮತ್ತು ಪಿರ್ಯಾದಿಯ ಹೆಂಡತಿಗೆ ಸಂಪೂರ್ಣವಾಗಿ ಹೊಡೆ-ಬಡೆ ಮಾಡಿದ್ದು ಮನೆಯಲ್ಲಿ ಇರಲು, ಬದುಕಲು ಇವರಿಂದ ಜೀವಬೇದರಿಕೆ ಇದ್ದು ಸದರಿಯವರ ವಿರುಧ್ದ ಕಠಿಣ ಕ್ರಮ ಜರುಗಿಸಬೇಕೆಂದು ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!