Yadgir District Reported Crimes Updates on 26-05-2017

By blogger on ಶುಕ್ರವಾರ, ಮೇ 26, 2017

                        

                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 85/2017 ಕಲಂ. 78 (3) ಕೆ.ಪಿ. ಆಕ್ಗಟ;- ದಿನಾಂಕ:24/05/2017 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಯಾದಗಿರಿ ನಗರದ ಹಳೆಯ ಬಸ್ಸ್ಟ್ಯಾಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಯಾದಗಿರಿ ನಗರ ಠಾಣೆಗೆ ಬಂದು ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ಸದರಿ ಪಂಚರು ಮತ್ತು ಯಾದಗಿರಿ ನಗರ ಠಾಣೆಯ ಶ್ರೀ ಸುನೀಲ್ ಮೂಲಿಮನಿ ಪಿ.ಎಸ್.ಐ(ಕಾ.ಸು) ಮತ್ತು ಸಿಬ್ಬಂದಿಯಾದ ಮತ್ತು ರವಿ ರಾಠೋಡ ಪಿ.ಸಿ 269 ಹಾಗೂ ಡಿ.ಸಿ.ಬಿ ಘಟಕದ ಸಿಬ್ಬಂದಿಯವರಾದ ಸೈಯದ ಶಫೀಯುದ್ದೀನ್ ಹೆಚ್.ಸಿ ನಂ 97, ಗುಂಡಪ್ಪ ಹೆಚ್.ಸಿ 115, ಶ್ರೀಮಂತ ಸಿಂಘೆ ಹೆಚ್.ಸಿ. 141, ಹರಿನಾಥರೆಡ್ಡಿ ಪಿಸಿ 267, ರವರಿಗೆ ಹಾಗೂ ಪಂಚರಿಗೆ ದಾಳಿ ಮಾಡುವ ಬಗ್ಗೆ ವಿಷಯ ತಿಳಿಸಿದೆನು. ನಂತರ ನಾನು ಎಲ್ಲರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 65 ನೇದ್ದರಲ್ಲಿ ದಾಳಿ ಕುರಿತು ಹೊರಟು 7-15 ಪಿಎಂಕ್ಕೆ ಸ್ಥಳಕ್ಕೆ ಹೋಗಿ ಹಳೆ ಬಸ್ ನಿಲ್ದಾಣದ ಹತ್ತಿರ ಐ.ಬಿಯ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು  ನಡೆದುಕೊಂಡು ಹೋಗಿ ಬಸ್ ನಿಲ್ದಾಣದ ಎದುರುಗಡೆ ಇದ್ದ ಒಂದು ಬೆಕರಿಯ ಹತ್ತಿರ ಮರೆಯಾಗಿ ನಿಂತು ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ತನ್ನ ಮೊಬೈಲದಲ್ಲಿ, ಹಾಗೂ ಚೀಟಿಯಲ್ಲಿ  ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು  ಸಿದ್ದಲಿಂಗಪ್ಪ ತಂ.ತಾಯಪ್ಪ ಮಡಿವಾಳ ವಃ 42 ಜಾಃ ಅಗಸರ ಉಃ ಕಿರಾಣಿ ವ್ಯಾಪಾರ ಮಟ್ಕಾ ಬರೆದುಕೊಳ್ಳುವುದು ಸಾ|| ಬೀರನಾಳ ತಾಃ ಶಹಾಪೂರ ಅಂತಾ ಹೇಳಿದ್ದು, ಸದರಿಯವನಿಂದ 1) ಮಟ್ಕಾ ಜೂಜಾಟದ 19,400=00 ರೂ. ನಗದು ಹಣ, 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅ.ಕಿ.00-00 3) ಒಂದು ಬಾಲಪೆನ ಅ.ಕಿ.00-00 4) ಒಂದು ಎಲ್ಜಿ ಕಂಪನಿಯ ಮೊಬೈಲ್ (ಸ್ಕ್ರೀನ್ ಒಡೆದಿದ್ದು) ಅ:ಕಿ: 1000=00 ರೂ. 5) ಒಂದು ಲಾವಾ ಕಂಪನಿಯ ಮೋಬೈಲ್ ಅ.ಕಿ.500-00 ರೂ. ಈ ಮೋಬೈಲದಲ್ಲಿ ಮಟ್ಕಾ ಅಂಕಿ ಸಂಖ್ಯೆಗಳು ಇರುತ್ತವೆ. ಇವುಗಳನ್ನು ಜಪ್ತಿ ಮಾಡಿಕೊಂಡು 7-30 ಪಿಎಮ್ ದಿಂದ 8-30 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 25/05/2017 ರಂದು 8-50 ಎಎಂಕ್ಕೆ ಗುನ್ನೆ ನಂ.85/2017 ಕಲಂ.78(3)ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ 379 ಐ.ಪಿ.ಸಿ;- ದಿನಾಂಕ 25/05/2017 ರಂದು 10-30 ಎಎಂಕ್ಕೆ ಪಿರ್ಯಾದಿ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದರೆ ನಾನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವಡಗೇರಾದಲ್ಲಿ ವ್ಯವಸ್ಥಾಪಕರು ಅಂತಾ ಕೆಲಸ ಮಾಡಿ, ದಿನಾಂಕ 31/01/2017 ರಂದು ನಾನು ಸೇವೆಯಿಂದ ನಿವೃತ್ತಿ ಹೊಂದಿರುತ್ತೇನೆ. ನನ್ನದೊಂದು ಸ್ವಂತ ಬಜಾಜ ಕಂಪನಿಯ ಕಪ್ಪು ಬಣ್ಣದ ಮೋಟರ್ ಸೈಕಲ್ ಇದ್ದು, ಮೋ.ಸೈಕಲ್ ನಂ ಏಂ 32 ಖ 5195, ಚೆಸ್ಸಿ ನಂ ಒಆ2ಆಆಆಗಚಚಒಘಏ69384, ಇಂಜಿನ್ ನಂ ಆಗಒಃಒಏ27487,ಅಂತಾ ಇರುತ್ತದೆ. ಸದರಿ ವಾಹನದ ಅ.ಕಿ 20,000=00 ರೂಪಾಯಿಗಳು. ನಮ್ಮ ಅಳಿಯ ಅಂದರೆ, ನಮ್ಮ ಸೋದರ ಅತ್ತೆಯ ಮಗಳ ಮಗನಾದ ದೇವಿಂದ್ರ ತಂದೆ ಶರಣಪ್ಪ ಮಣ್ಣೂರು ಸಾ|| ಬುಡಬುಡಕೆರ ಓಣಿ ಯಾದಗಿರಿ ಇವರು ಯಾದಗಿರಿಯಲ್ಲಿ ವಾಸವಾಗಿದ್ದರಿಂದ ಇವರ ಯೋಗ ಕ್ಷೇಮ ವಿಚಾರ ಮಾಡಲು ನಾನು ದಿನಾಂಕ 15/03/2017 ರಂದು ಯಾದಗಿರಿಗೆ ಬಂದಿದ್ದೆನು. ಯಾದಗಿರಿಗೆ ಬಂದು ದಿನಾಂಕ 15/03/2017 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ನಂ. ಏಂ 32 ಖ 5195 ನೇದ್ದನ್ನು ತೆಗೆದುಕೊಂಡು ಯಾದಗಿರಿ ನಗರದ ಪೂಜಾ ಹೋಟೆಲ್ ಹತ್ತಿರ ನಿಲ್ಲಿಸಿ ಟೀ, ನಾಷ್ಟಾ ಮಾಡಲು ಹೋದೆನು. ನಂತರ ನಾನು 09-30 ಪಿ.ಎಂ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನಮ್ಮ ಅಳಿಯ ದೇವಿಂದ್ರ ತಂದೆ ಶರಣಪ್ಪ ಮಣ್ಣೂರು ಈತನಿಗೆ ಪೋನ್ ಮಾಡಿ ವಿಷಯ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಇಬ್ಬರು ಕೂಡಿ ಸುತ್ತ ಮುತ್ತ ನೋಡಲಾಗಿ ನಮ್ಮ ಗಾಡಿ ಕಾಣಲಿಲ್ಲ. ಕಾರಣ ದಿನಾಂಕ 15/03/2017 ರಂದು ರಾತ್ರಿ 09 ಗಂಟೆಯಿಂದ, ಅಂದೇ ರಾತ್ರಿ 09-30 ಗಂಟೆಯ ಅವಧಿಯಲ್ಲಿ ಯಾದಗಿರಿ ನಗರದ ಪೂಜಾ ಹೊಟೆಲ್ ಮುಂದೆ ನಿಲ್ಲಿಸಿದಾಗ ನನ್ನ ಮೋಟರ್ ನಂ. ಏಂ 32 ಖ 5195 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕು. ನಾವು ಇಲ್ಲಿಯ ವರೆಗೆ ಅಲ್ಲಿ ಅಲ್ಲಿ ಹುಡುಕಾಡಲಾಗಿ ನಮ್ಮ ಮೋಟರ್ ಸೈಕಲ್ ಪತ್ತೆ ಯಾಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.86/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ 279,338 ಐಪಿಸಿ  ಸಂ 187 ಐಎಮ್ವಿ ಎಕ್ಟ;- ದಿನಾಂಕ: 25/05/2017 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ.ಎಲ್.ಸಿ ಸ್ವಿಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಡ್ಡೆಲಿಂಗಪ್ಪ ತಂದೆ ಬಸವರಾಜ ಸಂಗಣ್ಣೊರ ಸಾ:ಬೆಂಡೆಬೆಂಬಳ್ಳಿ ಇವರ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ: 24/05/2017 ರಂದು ನನ್ನ ಹೆಂಡತಿ ತವರೂರಾದ ತಿಪ್ಪನಳ್ಳಿಯಿಂದ ನಮ್ಮೂರಿಗೆ ಮೋಟರ್ ಸೈಕಲ್ ನಂ. ಕೆಎ 33 ಆರ್ 5662 ನೇದ್ದರ ಮೇಲೆ ಊರಿಗೆ ಬರುತ್ತಿದ್ದಾಗ ಬೆಳಗ್ಗೆ 7-30 ಗಂಟೆ ಸುಮಾರಿಗೆ ರಸ್ತೆ ಮೇಲೆ ತುಮಕೂರ ಕ್ರಾಸ ಹತ್ತಿರ ಮುಂದೆ ಒಂದು ಲಾರಿ ನಂ. ಕೆಎ 22 ಎ 3799 ನೇದ್ದು ಹೋಗುತ್ತಿತ್ತು. ನಾನು ಅದರ ಹಿಂದೆ ಹೋಗುತ್ತಿದ್ದಾಗ ಲಾರಿ ಚಾಲಕನು ನನಗೆ ಸೈಡ ಕೊಟ್ಟಂತೆ ಮಾಡಿದಾಗ ನಾನು ಸೈಡಿನಿಂದ ಹೋಗುತ್ತಿದ್ದಾಗ ಒಮ್ಮಲೇ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಲಗಡೆಯಿಂದ ಲಾರಿಯನ್ನು ಡಿಕ್ಕಿಪಡಿಸಿದ್ದರಿಂದ ನಾನು ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದಾಗ ನನ್ನ ಬಲಗಾಲ ಹೆಬ್ಬೆರಳಿಗೆ ಮತ್ತು ಪಾದಕ್ಕೆ ಭಾರಿ ರಕ್ತಗಾಯವಾಯಿತು. ಯಾರೋ ದಾರಿಯಲ್ಲಿ ಹೋಗುವವರು ನನಗೆ ಸೈದಾಪೂರಕ್ಕೆ ತಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿರುತ್ತಾರೆ. ನಂತರ ನಾನು ನಮ್ಮ ಮಾವ ಬಸವರಾಜಗೌಡ ಇವರಿಗೆ ಫೊನ ಮಾಡಿ ಹೇಳಿದಾಗ ಅವರು ಬಂದು ನನಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 73/2017 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 173/2017.ಕಲಂಃ 143.147.148.323.324.504.506 ಸಂ149.ಐ.ಪಿ.ಸಿ.;- ದಿನಾಂಕ 25/05/2017 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪಮಾಡಿಸಿದ ಅಜರ್ಿ ಅಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ 24/05/2017 ರಂದು ಬೆಳಿಗ್ಗೆ 7-30 ಸುಮಾರಿಗೆ ಹೋಲದಲ್ಲಿ ಕಸ ತೆಗೆಯುತ್ತಿರುವಾಗ ನಮ್ಮ ಅಣ್ಣ ತಮಕಿಯವರಾದ 1] ಯಂಕಣ್ಣ ತಂದೆ ಚಂದ್ರಾಮಪ್ಪ 2] ನಿಂಗಣ್ಣ ತಂದೆ ಚಂದ್ರಾಮಪ್ಪ , 3] ಹಣಮಂತ್ರಾಯ ತಂದೆ ಬೈಲಪ್ಪ ಗೌಡಗೇರ , 4] ಬಸಮ್ಮ ಗಂಡ ಚಂದ್ರಾಮಪ್ಪ, 5] ಲಕ್ಷ್ಮೀ ಗಂಡ ಯಂಕಣ್ಣ, 6] ನಾಗಮ್ಮ ಗಂಡ ನಿಂಗಣ್ಣ 7} ಶರಣವಸವ ತಂದೆ ಯಂಕಣ್ಣ ಇವರೆಲ್ಲು ಕೂಡಿಕೊಂಡು ಕೈಯಲ್ಲಿ ಬಡಿಗೆ ಹಿಡಿದು ಕೂಡಿ ಬಂದವರೆ ಯಂಕಣ್ಣ ಇತನು ಲೇ ಚನ್ನಬಶ್ಯಾ ಸೂಳಿ ಮಗನೆ ಈ ಹೋಲದ ತಂಟೆಗೆ ಬರಬೆಡ,  ಕಸ ತೆಗೆಯ ಬೆಡ ಅಂತ ಹೇಳಿದರು ಬಂದಿರುವೆ ಸೂಳಿಮಗನೆ  ಇವತ್ತು ನಿನಗೆ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದವನೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಹಣಮಂತ್ರಾಯನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನಗೆ ಎಡಕಿಗೆ, ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು, ನಿಂಗಣ್ಣನು ತನ್ನ ಕೈಯಲ್ಲಿದ್ದ ಬಡಿಗೆ ಯಿಂದ ವೆಂಕಟೇಶನ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ಯಂಕಣ್ಣನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಿಮ್ಮಣ್ಣನಿಗೆ ಹೆಡಕಿಗೆ  ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು ಶರಣಬಸವ ಇತನು ಕೈಯಿಂದ ತಿಮ್ಮನ್ನನಿಗೆ ತುಟಿಗೆ ಗುದ್ದಿದ್ದನು ಬಸಮ್ಮ ಕೈಯಿಂದ ಮಾನಮ್ಮಳಗೆ ಹಿಂದಿನ ಡುಬ್ಬಕ್ಕೆ ಹೊಡೆದಳು ನಾಗಮ್ಮ ತನ್ನ ಕೈಯಿಂದ ಮಾನಮ್ಮಳ ಎದೆಗೆ ಹೊಡೆದಳು ಲಕ್ಷ್ಮೀ ಇವಳು ಮಾನಮ್ಮಳ ಕೂದಲು ಹಿಡಿದು ಜಗ್ಗಾಡಿದಳು. ಆಗ ನಾವು ಚಿರ್ಯಾಡುವದನ್ನು ನೋಡಿ ನನ್ನ ತಾಯಿ ಬಸಮ್ಮ ನಮ್ಮ ಗ್ರಾಮದವರಾದ ವೆಂಕಟೇಶ ತಂದೆ ಯಂಕಣ್ಣ, ಭೀಮಣ್ಣ ತಂದೆ ಯಂಕಣ್ಣ ಇವರು ಬಂದು ಜಗಳವನ್ನು ಬಿಡಿಸಿದರು ನಂತರ ಎಲ್ಲರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯುತ್ತೆವೆ ಸೂಳೀಮಕ್ಕಳೆ ಅಂತ ಜೀವದ ಭಯ ಹಾಕಿ ಹೋದರು  ನಂತರ ನಾವೆಲ್ಲರು ಒಂದು ಆಟೊದಲ್ಲಿ ಕುಳಿತುಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೆರಿಕೆ ಯಾಗಿದ್ದೆವು. ಆಗ ನಮ್ಮ ಊರಿನ ಹಿರಿಯರ ಜೊತೆ ಮಾತನಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದು ಇರುತ್ತದೆ
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ 143, 147, 148, 341, 504, 506 ಸಂ 149 ಐಪಿಸಿ;- ದಿನಾಂಕ; 25/05/2017 ರಂದು 8.15 ಎ.ಎಂಕ್ಕೆ ಫಿಯರ್ಾದಿದಾರರಾದ ಶ್ರೀ ಶಿವ ಪ್ರಕಾಶ ದೇವರಾಜು. ಐ.ಪಿ.ಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಲ್ಲಿಸಿದ್ದು, ಸದರಿ ಫಿಯರ್ಾದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 25/05/2017 ರಂದು ಬೆಳಿಗ್ಗೆ 6-30 ಗಂಟೆಗೆ ಜಾಗಿಂಗ್ ಕುರಿತು ನಾನು ಮತ್ತು ನಮ್ಮ ವಾಹನ ಚಾಲಕನಾದ ಲಕ್ಷ್ಮೀಕಾಂತ ಎ.ಪಿ.ಸಿ-135  ಇಬ್ಬರೂ ಕೂಡಿ ಕಛೇರಿಯಿಂದ ನಮ್ಮ ಸರಕಾರಿ ಜೀಪ್ ನಂ: ಕೆ.ಎ-33 ಜಿ-0163 ನೇದ್ದರಲ್ಲಿ ಬೆಳಿಗ್ಗೆ 06:45 ಗಂಟೆಗೆ ಸುರಪೂರ ಪಟ್ಟಣದಲ್ಲಿರುವ ಪ್ರಭು ಕಾಲೇಜ್ ಗ್ರೌಂಡಿಗೆ ಹೋಗಿ, ಇಬ್ಬರೂ ಗ್ರೌಂಡಿನಲ್ಲಿರುವ ರನ್ನಿಂಗ್ ಟ್ರ್ಯಾಕ್ ನಲ್ಲಿ ರನ್ನಿಂಗ್ ಮಾಡುತ್ತಿರುವಾಗ, ಸದರಿ ಗ್ರೌಂಡನಲ್ಲಿ ಆರ್.ಎಸ್.ಎಸ್ ನವರು ಬಿದುರಿನ ಬಡಿಗೆ ಹಿಡಿದುಕೊಂಡು ಕವಾಯಿತು ಮಾಡುತ್ತಿದ್ದದ್ದು ಇರುತ್ತದೆ. ನಮ್ಮ ಚಾಲಕನಾದ ಲಕ್ಷ್ಮೀಕಾಂತ ಇವನು ಮೈದಾನದ ಮೂಲೆಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಅವನಿಗೆ ಆರ್.ಎಸ್.ಎಸ್ ನವರು ನೀವು ಇಲ್ಲಿ ವ್ಯಾಯಾಮ ಮಾಡಬೇಡಿ ನಮ್ಮ ಹುಡುಗರು ನಿಮಗೆ ನೋಡುತ್ತಾರೆ ನೀವು ಆಕಡೆ ಹೋಗಿರಿ ಅಂತಾ ಬೆದರಿಸಿ ಕಳುಹಿಸಿದ್ದು ಇರುತ್ತದೆ. ಹೀಗಿದ್ದು 07:15 ಗಂಟೆ ಸುಮಾರಿಗೆ ನಾನು ರನ್ನಿಂಗ್ ಟ್ರ್ಯಾಕ್ ನಲ್ಲಿ ಓಡುತ್ತಿರುವಾಗ ಆರ್.ಎಸ್.ಎಸ್ ಲೀಡರ ಆದ ಹಣಮಂತಂತ್ರಾಯ ಪಾಟೀಲ್ ಇವರು ನನಗೆ ಇಲ್ಲಿ ಓಡಬೇಡಿರಿ ಅಂತಾ ಅಂದಾಗ ನಾನು ಅವರಿಗೆ ನಾನು ಎ.ಎಸ್.ಪಿ ಇದ್ದೇನೆ ಅಂತಾ ಅಂದಾಗ ನನಗೆ ಅವರು ನೀವು ಏನಾದರೂ ಇರಿ ನಮಗೇನು ಅಂತಾ ಅಂದಾಗ, ನಾನು ಮುಂದಕ್ಕೆ ಹೋಗುತ್ತಿದ್ದಾಗ ಆರ್.ಎಸ್.ಎಸ್ ನವನಾದ ಇನ್ನೋಬ್ಬ ವ್ಯಕ್ತಿಯು ನನ್ನ ಹತ್ತಿರ ಬಂದವನೇ ನನಗೆ ತಡೆದು ನಿಲ್ಲಿಸಿ, ನಮ್ಮ ಲೀಡರನಿಗೆ ಎದರು ಮಾತನಾಡುತ್ತಿ ಏನಲೇ ಅಂತಾ ಅವಾಚ್ಯವಾಗಿ ಬೈದು ಎದೆಯ ಮೇಲಿನ ಟಿ ಶರ್ಟ ಹಿಡಿದು ಎಳೆದಾಡಿದಾಗ, ಲಕ್ಷ್ಮೀಕಾಂತ ಇವನು ಬಿಡಿಸಲು ಬಂದಾಗ ಅವನಿಗೂ ಸಹ ಸದರಿ ವ್ಯಕ್ತಿಯೂ ಲಕ್ಷ್ಮೀಕಾಂತನ ಎದೆಯ ಮೇಲಿನ ಟಿ ಶರ್ಟ ಹಿಡಿದು ಎಳೆದಾಡಿದನು. ಆಗ ಹಣಮಂತ್ರಾಯ ಪಾಟೀಲ ಇವರು ಇವರಿಗೇ ಬಿಡಬೇಡಿರಿ ಹೊಡೆಯಿರಿ ಈ ಪೊಲೀಸರಿಗೆ ಅಂತಾ ಅನ್ನುತ್ತಿದ್ದಾಗ ಅಲ್ಲಿ ಕವಾಯಿತು ಮಾಡುತ್ತಿದ್ದ ಎಲ್ಲಾ ಹುಡುಗರು ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಹೊಡೆಯಲು ಬಂದರು. ಆಗ ನಮ್ಮ ಚಾಲಕನಾದ ಲಕ್ಷ್ಮೀಕಾಂತನು ನನಗೆ ಕರೆದುಕೊಂಡು ವಾಹನದಲ್ಲಿ ಕುಡಿಸಿ ಕಛೇರಿಗೆ ಕರೆದುಕೊಂಡು ಬರುವಾಗ, ಸದರಿಯವರೆಲ್ಲರೂ ನಮಗೆ ಈ ಪೊಲೀಸನವರು ನಮಗೆ ಏನು ಮಾಡಿಕೊಳ್ಳುವುದಕ್ಕೆ ಆಗುವದಿಲ್ಲ, ಅವರು ಮುಂದೆ ನಮಗೆ ಏನಾದರೂ ಮಾಡಿದರೇ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದರು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!