Yadgir District Reported Crimes Updated on 31-05-2017

By blogger on ಬುಧವಾರ, ಮೇ 31, 2017


                                                    Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ ಮನುಷ್ಯ ಕಾಣೆಯಾದ ಬಗ್ಗೆ;- ದಿನಾಂಕ 30/05/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀಮತಿ ಅನ್ನಪೂರ್ಣ ಗಂ. ಅಂಬ್ರೇಶ ಆಂದೇಲಿ  ನಗರ ಸಭೆ ಸದಸ್ಯರು  ಯಾದಗಿರಿ ಸಾ: ಪಟೇಲ ವಾಡಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಕೊಟ್ಟಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಾನು ಮತ್ತು ನನ್ನ ಗಂಡನಾದ ಅಂಬ್ರೇಶ ತಂ. ಶಿವಣ್ಣ ಆಂದೇಲಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿರುತ್ತೇವೆ. ಹಿಗಿದ್ದು ದಿನಾಂಕ 26/05/2017 ಶುಕ್ರುವಾರ ಮುಂಜಾನೆ 11-30 ಗಂಟೆಗೆ ನನ್ನ ಗಂಡನು ನಗರ ಸಭೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಇರುತ್ತದೆ. ಸದರಿ ನನ್ನ ಗಂಡನ ಬಳಿ ಮೋಬೈಲ್ ಪೊನ ಇರುವುದಿಲ್ಲಾ. ಸದರಿ ದಿನಾಂಕ ಮತ್ತು ಸಮಯದಿಂದ ನನ್ನ ಗಂಡನು ನಾಪತ್ತೇಯಾಗಿದ್ದು ಇರುತ್ತದೆ. ಸದರಿ ನನ್ನ ಗಂಡನ ಬಗ್ಗೆ ನಾವು ನಮ್ಮ ಎಲ್ಲಾ ಸಂಭಂದಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದ್ದು ಮತ್ತು ನಾವು ಕೂಡಾ ಎಲ್ಲಾ ಕಡೆ ಹುಡುಕಾಡಿದ್ದು ಇರುತ್ತದೆ. ಆದರೆ ಅವರ ಸುಳಿವು ಸಿಕ್ಕಿರುವುದಿಲ್ಲಾ. ಆದ್ದರಿಂದ ಇಂದು ತಡವಾಗಿ ಬಂದು ಪಿರ್ಯಾದಿ ಸಲ್ಲಿಸುತ್ತಿದ್ದು ನಾಪತ್ತೆಯಾದ ನನ್ನ ಗಂಡನಾದ ಅಂಬ್ರೇಶ ತಂದೆ ಶಿವಣ್ಣ ಆಂದೇಲಿ ಇವರನ್ನು ಹುಡುಕಿಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.88/2017 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 27/2017 ಕಲಂ 279,337,338, IPC ಸಂ 187 ಐ.ಎಮ್.ವಿ ಆಕ್ಟ್ ;- ದಿನಾಂಕ 30/05/2017 ರಂದು 12-20  ಪಿ.ಎಂ.ಕ್ಕೆ ಫಿಯರ್ಾದಿ ತನ್ನ ಟಿ.ವಿ.ಎಸ್. ಸ್ಟಾರ್ ಸಿಟಿ ಮೊಟಾರು ಸೈಕಲ್ ನಂ.ಕೆಎ-33, ಕೆ-7046 ನೇದ್ದನ್ನು ತೆಗೆದುಕೊಂಡು ತಮ್ಮೂರಿನಿಂದ ಯಾದಗಿರಿಗೆ ಬಂದು ತನ್ನ ಮಗಳಿಗೆ ಹಾಸ್ಟೆಲ್ನಿಂದ ಕರೆದುಕೊಂಡು ನ್ಯೂ ಕನ್ನಡ ಕಾಲೇಜಿಗೆ ಅಡ್ಮಿಷನ್ ಮಾಡಿಸಿ ತಾನು ತನ್ನ ಮಗಳು ಕವಿತಾ ಕೂಡಿಕೊಂಡು ಮರಳಿ ಹಾಸ್ಟಲಗೆ ಹೊರಟಾಗ ಮಾರ್ಗ ಮದ್ಯೆ ಬಿ.ಎಸ್.ಎನ್.ಎಲ್. ಕಚೇರಿ ಹತ್ತಿರ ಇರುವ ಹಾಸ್ಟೆಲ್ ಕ್ರಾಸ್ನಲ್ಲಿ ಮೋಟಾರು ಸೈಕಲ್ನ್ನು ಬಲಗಡೆ ಟರ್ನ ಮಾಡುತ್ತಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂ.ಕೆಎ-33, ಜೆ-9013 ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಪಿಯರ್ಾದಿಗೆ ಬಲಗಾಲು ಮುರಿದಂತಾಗಿ ಭಾರಿ ರಕ್ತಗಾಯವಾಗಿದ ಬಗ್ಗೆ ಅಪರಾಧ

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ: 494,323,504,506 ಸಂ 149 ಐಪಿಸಿ;- ದಿನಾಂಕ: 30/05/2017 ರಂದು 3-30 ಪಿಎಮ್ ಕ್ಕೆ ನಮ್ಮ ಠಾಣೆಯ ಕೋರ್ಟ ಕರ್ತವ್ಯದ ಹೆಚ್.ಸಿ 57 ಭೋಜು ರವರು ಮಾನ್ಯ ಜೆಎಮ್ಎಫ್ಸಿ ನ್ಯಾಯಲಯ ಶಹಾಪೂರ ರವರ ಖಾಸಗಿ ಫಿರ್ಯಾಧಿ ಸಂ. 13/2017 ನೇದ್ದನ್ನು ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ಫಿರ್ಯಾಧಿಯ ಸಂಕ್ಷೀಪ್ತ ಸಾರಾಂಶವೇನಂದರೆ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ವ:27, ಉ:ಮನೆಕೆಲಸ ಸಾ:ಕಾಡಂಗೇರಾ (ಬಿ) ಇವರಿಗೆ ಈಗ ಸುಮಾರು 8 ವರ್ಷಗಳ ಹಿಂದೆ ಮಲ್ಲಿಕಾಜರ್ುನನೊಂದಿಗೆ ಕಾಡಂಗೇರಾದ ಪಡಸಿದ್ದೇಶ್ವರ ದೇವಸ್ಥಾನದಲ್ಲಿ ಗುರು-ಹಿರಿಯರ ಸಮಕ್ಷಮ ಹಿಂದೂ ಸಂಪ್ರದಾಯದ ಪ್ರಕಾರ ಲಗ್ನವಾಗಿದ್ದು ಇರುತ್ತದೆ. ಮದುವೆಯಾದಾಗಿನಿಂದ ಸುಮಾರು 3-4 ವರ್ಷಗಳ ಕಾಲ ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ಕಳೆದಿದ್ದು, ಅವರಿಗೆ ಒಂದು ಹೆಣ್ಣು ಮಗು ಕೂಡ ಆಗಿರುತ್ತದೆ. ನಂತರ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನ, ಮಾವ ಸಿದ್ದಲಿಂಗಪ್ಪ, ಅತ್ತೆ ದೇವಿಂದ್ರಮ್ಮ ಮತ್ತು ಮೈದುನ ಶಿವರಾಜ ಇವರು ಸೇರಿಕೊಂಡು ಮೋಟರ್ ಸೈಕಲ ಖರೀದಿ ಮಾಡಲು 50 ಸಾವಿರ ರೂ ಹಣವನ್ನು ತನ್ನ ತವರು ಮನೆಯಿಂದ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡಲಾರಂಭಿಸಿದರು. ಹಿರಿಯರು ಮತ್ತು ಸಂಬಂಧಿಕರು ಕೂಡಿಸಿಕೊಂಡು ಈ ರೀತಿ ಮಾಡುವುದು ಸರಿ ಅಲ್ಲ ಎಂದು ಬುದ್ದಿ ಮಾತು ಹೇಳಿದರು ಕೇಳದೆ ಅವಳಿಗೆ ಅದೇ ರೀತಿ ಕಿರುಕುಳ ಕೊಡುತ್ತಾ ಬರುತ್ತಿದ್ದರು. ದಿನಾಂಕ: 20/01/2017 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನನು ತನ್ನ ತಂದೆ, ತಾಯಿ ಮತ್ತು ತಮ್ಮ ಶಿವರಾಜ ಇವರೊಂದಿಗೆ ಬಂದು ಗಭರ್ೀಣಿ ಇರುವ ಫಿರ್ಯಾಧಿದಾರಳಿಗೆ ಹೊಡೆದು ಅವಾಚ್ಯ ಬೈದು ನಾವು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇವೆ ಎಂದು ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಆಗ ಫಿರ್ಯಾಧಿದಾರಳು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟ ಮೇರೆಗೆ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ: 323,498(ಎ),504 ಸಂ 34 ಐಪಿಸಿ ಮತ್ತು 3 & 4 ಡಿಪಿ ಎಕ್ಟ್ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಆಗಿನಿಂದ ಫಿರ್ಯಾಧಿದಾರಳು ತವರು ಮನೆ ಕಾಡಂಗೇರಾ (ಬಿ) ಗ್ರಾಮದಲ್ಲಿ ವಾಸ ಇರುತ್ತಾಳೆ. ದಿನಾಂಕ: 09/04/2017 ರಂದು ಮದ್ಯಾಹ್ನ 12-30 ಪಿಎಮ್ ಸುಮಾರಿಗೆ ಸಾಕ್ಷೀದಾರರಾದ 1) ಭೀಮಪ್ಪ ತಂದೆ ಹಣಮಂತ ಹಿರೆನೂರ, 2) ಶರಣಪ್ಪ ತಂದೆ ಬಸವರಾಜ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಕಾಡಂಗೇರಾ ಇವರು ಶ್ರೀರಂಗಪೂರದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಮಾಡಲು ಹೋದಾಗ ಅಲ್ಲಿ ಮದುವೆ ತಯಾರಿ ನಡೆದಿದ್ದು, ನೋಡಿ ಸಮೀಪ ಹೋದಾಗ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನನು ಲಕ್ಷ್ಮೀ ಎಂಬುವಳೊಂದಿಗೆ ಎರಡನೆ ಮದುವೆ ಮಾಡಿಕೊಳ್ಳುತ್ತಿದ್ದು, ಅದರ ಅಕ್ಕಿಕಾಳನ್ನು ಇವರಿಗೆ ಕೊಟ್ಟರು. ಫಿರ್ಯಾಧಿ ಮಲ್ಲಮ್ಮಳ ಅತ್ತೆ, ಮಾವ, ಮತ್ತು ಮೈದುನ ಹಾಗೂ ಮೈದುನನ ಹೆಂಡತಿ ಮಲ್ಲಮ್ಮ ಮತ್ತು ಲಕ್ಷ್ಮೀ ಇವಳ ತಂದೆ ಬುಗ್ಗಪ್ಪ ಹಾಗೂ ಅಣ್ಣ ಶರಣಪ್ಪ ಇವರೆಲ್ಲರೂ ಇದ್ದು, ಮದುವೆ ಏಪರ್ಾಡು ಮಾಡಿ ಕಾರ್ಯಕ್ರಮದಲ್ಲಿ ಓಡಾಡುತ್ತಿದ್ದರು. ಆಗ ಭೀಮಪ್ಪ ಮತ್ತು ಶರಣಪ್ಪ ಇಬ್ಬರೂ ಅವರಿಗೆ ಈಗಾಗಲೇ ಮಲ್ಲಿಕಾಜರ್ುನನಿಗೆ ಮಲ್ಲಮ್ಮಳೊಂದಿಗೆ ಮದುವೆಯಾಗಿದೆ ಮತ್ತೆಕೆ ಎರಡನೆ ಮದುವೆ ಮಾಡುತ್ತಿದ್ದಿರಿ ಇದು ಸರಿ ಅಲ್ಲ ಎಂದು ಹೇಳಿದರೆ ಅವರು ಕಿವಿ ಮೇಲೆ ಹಾಕಿಕೊಳ್ಳದೆ ತಿರಸ್ಕರಿಸಿದರು. ಲಕ್ಷ್ಮೀ ಇವಳ ತಂದೆ ಮತ್ತು ಅಣ್ಣನಿಗೂ ಕೂಡ ಹೇಳಿದರು ಕೇಳದೆ ಎಲ್ಲರೂ ಸೇರಿ ಭೀಮಪ್ಪ ಮತ್ತು ಶರಣಪ್ಪ ಇಬ್ಬರಿಗೆ ಅವಾಚ್ಯ ಬೈದು ಕೈಯಿಂದ ಹೊಡೆದು ದೇವಸ್ಥಾನದಿಂದ ಹೊರಗಡೆ ಹಾಕಿ ಈ ವಿಷಯ ಪೊಲೀಸ್ ಠಾಣೆ ಅಥವಾ ಯಾರಿಗಾದರೂ ಹೇಳಿದರೆ ನಿಮಗೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕಳಿಸಿರುತ್ತಾರೆ. ನಂತರ ಸಾಕ್ಷೀದಾರರು ಗ್ರಾಮಕ್ಕೆ ಬಂದು ನಡೆದ ಸಂಗತಿಯನ್ನು ಫಿರ್ಯಾಧಿದಾರಳಿಗೆ ತಿಳಿಸಿದಾಗ ಫಿರ್ಯಾಧಿದಾರಳು ದಿನಾಂಕ: 14/04/2017 ರಂದು  ತನ್ನ ಸಂಬಂಧಿಕರು ಮತ್ತು ಸಾಕ್ಷೀದಾರೊಂದಿಗೆ ತನ್ನ ಗಂಡನ ಮನೆಗೆ ಕೇಳಲು ಹೋದಾಗ ಗಂಡ ಮಲ್ಲಿಕಾಜರ್ುನನು ಹೌದು ನಾನು ಲಕ್ಷ್ಮೀಯೊಂದಿಗೆ ಎರಡನೆ ಲಗ್ನ ಮಾಡಿಕೊಂಡಿದ್ದೇನೆ ನೀನೆನು ಮಾಡುತ್ತಿ ಎಂದು ಅವಾಚ್ಯ ಬೈದು ಗಂಡ, ಎರಡನೆ ಹೆಂಡತಿ ಲಕ್ಷ್ಮೀ, ಅತ್ತೆ-ಮಾವ ಮತ್ತು ಮೈದುನ, ಮೈದುನನ ಹೆಂಡತಿ ಎಲ್ಲರೂ ಸೇರಿ ಕೈಯಿಂದ ಹೊಡೆದು ಅವಾಚ್ಯ ಬೈದು ಮನೆಯಿಂದ ಹೊರಗೆ ಹಾಕಿ ಪೊಲೀಸರಿಗೆ ಅಥವಾ ಯಾರಿಗಾದರೂ ಹೇಳಿದಲ್ಲಿ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಈಗಾಗಲೇ ಫಿರ್ಯಾಧಿದಾರಳೊಂದಿಗೆ ಲಗ್ನವಾಗಿದ್ದರು, ಲಕ್ಷ್ಮೀ ಎಂಬುವಳೊಂದಿಗೆ ಎರಡನೆ ಲಗ್ನ ಮಾಡಿಕೊಂಡಿದ್ದಲ್ಲದೆ ಕೇಳಲು ಹೊದರೆ ಅವಾಚ್ಯ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾಧಿ ಸಲ್ಲಿಸಿದ್ದು ಇರುತ್ತದೆ. ಸದರಿ ಖಾಸಗಿ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 75/2017 ಕಲಂ: 494,323,504,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 150/2017 ಕಲಂಃ 87 ಕೆ.ಪಿ ಆಕ್ಟ್ ;- ದಿನಾಂಕ: 30/05/2017 ರಂದು 1-30 ಪಿ.ಎಮ್ ಕ್ಕೆ ಶ್ರೀ ಆರ್. ಎಫ್ ದೇಸಾಯಿ ಪಿ.ಐ ಸಾಹೇಬರು 5ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 10-30 ಎ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಶಾಂತಪೂರ ಗ್ರಾಮದ ಸೋಪಣ್ಣ ಮುತ್ಯಾ ದಗರ್ಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.105, ಹೆಚ್.ಸಿ-170, ಪಿ.ಸಿ.142, ಪಿಸಿ-235, ಪಿಸಿ-376 ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 5 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 1740/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 150/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ: 323, 324, 504, 506, 354,355, ಖ/ಘ 34  ಕಅ;- ದಿನಾಂಕ 31.05.2017 ರಂದು ಬೇಳಿಗ್ಗೆ 10:00 ಗಂಟೆಗೆ ಪಿಯರ್ಾದಿ ಶ್ರೀಮತಿ ಶ್ರೀದೇವಿ ಗಂಡ ಸಂಗಯ್ಯ ಮುತ್ತಗಿ ವ:36 ವರ್ಷ ಉ:ಮನೆ ಕೆಲಸ ಜಾ:ಹಿಂದು ಲಿಂಗಾಯತ ಸಾ:ಕೊಡೆಕಲ್ಲ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 24.05.2017 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಕೊಡೆಕಲ್ಲ ಗ್ರಾಮದ ಊರೊಳಗಿನ ಬಸವಣ್ಣ ದೇವರ ಗುಡಿಯ  ಹತ್ತಿರದಲ್ಲಿ ಇರುವ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಸಂಗಯ್ಯ ಅತ್ತೆ ನೀಲಮ್ಮ ಮೈದುನ ಕಪ್ಪಡಿ ಸಂಗಯ್ಯ ಮತ್ತು ಅವರ ಹೆಂಡತಿಯಾದ ನೀಲಮ್ಮನವರು ಎಲ್ಲರೂ ಮನೆಯಲ್ಲಿ ಟಿವಿನೋಡುತ್ತಾ ಕುಳಿತಿದ್ದು ಆ ವೇಳೆಗೆ ಯಾರೋ ನಮ್ಮ ಮನೆಯ ಬಾಗಿಲು ಪಡೆಯುಸ ಸಪ್ಪಳ ಕೇಳಿ ನನ್ನ ಮೈದುನ ಕಪ್ಪಡಿ ಸಂಗಯ್ಯನವರು ಹೋಗಿ ಬಾಗಿಲು ತೆರೆದು ನೋಡಲಾಗಿ ಅವರು ನಮ್ಮೂರ ರಮೇಶ ತಂದೆ ಹಣಮಂತ್ರಾಯಗೌಡ ದೋರಿ(ಹೊರಟ್ಟಿ) ಮತ್ತು ಪರಶುರಾಂ ತಂದೆ ಸಂಗಪ್ಪ ದೋರಿಗೋಳ(ಆರುಬಳ್ಳ) ರವರು ಇದ್ದು ಅವರಿಗೆ ನನ್ನ ಮೈದುನನು ಈ ವೇಳೆಯಲ್ಲಿ ಇಲ್ಲಿಗೆ ಯಾಕೆ ಬಂದು ನಮ್ಮ ಮನೆಯ ಬಾಗಿಲು ಬಡಿಯುತ್ತಿರಿ ಎಂದು ಕೇಳಿದ್ದಕ್ಕೆ ಅವರಿಬ್ಬರು ಏ ಬೋಸುಡಿ ಮಗನೇ ಕಪ್ಪಡಿ ಸಂಗ್ಯಾ ನಿನ್ನ ಹತ್ತಿರ ನನ್ನದೇನು ಕೆಲಸವಿರುತ್ತದೆ ನಿನ್ನ ತಂಗಿಯನ್ನು ಕರಿ ಅವಳಜೊತೆ ಮಾತನಾಡುವದಿದೆ ಅಂತಾ ಅಂದಿದ್ದು ಅದಕ್ಕೆ ನನ್ನ ಮೈದುನ ಮತ್ತು ನನ್ನ ಗಂಡ ಸಂಗಯ್ಯನವರು ನಮ್ಮ ತಂಗಿಯ ಹತ್ತಿರ ನಿನ್ನದೇನು ಕೆಲಸವಿರುತ್ತದೆ ಇಲ್ಲಿಂದ ಹೋಗಿರಿ ಅಂತಾ ಅಂದಾಗ ಏ ಬೋಸುಡಿ ಮಕ್ಕಳೆ ನಮಗೆ ಎದುರು ಮಾತನಾಡುತ್ತಿರೇನಲೇ ಅಂತಾ ಅಂದವರೇ ಮೈದುನ ಕಪ್ಪಡಿ ಸಂಗಯ್ಯನವರಿಗೆ ಪರಶುರಾಮನು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಬಡಿಗೆಯಿಂದ ಬೆನ್ನಿನ ಮೇಲೆ ಮತ್ತು ಕಪಾಳದ ಮೇಲೆ ಹೊಡೆದಿದ್ದು ಇದರಿಂದ ಗುಪ್ತಪೆಟ್ಟುಗಳಾಗಿದ್ದು ನನ್ನ ಗಂಡ ಸಂಗಯ್ಯನವರಿಗೆ ಕೈಯಿಂದ ಎಡಗಡೆ ಬುಜದ ಮೇಲೆ ಬೆನ್ನಿನ ಮೇಲೆ ರಮೇಶನು ಹೊಡೆದಿದ್ದು ಪರಶುರಾಮನು ನನ್ನ ಗಂಡ ಮತ್ತು ಮೈದುನರಿಗೆ ಈ ಸುಳೆ ಮಕ್ಕಳದ್ದು ಬಹಳ ಆಗಿದೆ ಅಂತಾ ಬೈದು ನನ್ನ ಮೈದುನನಿಗೆ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಹೊಡೆಯಲು ಬೀಸಿದ್ದು ಅದರಿಂದ ನನ್ನ ಮೈದುನನು ತಪ್ಪಿಸಿಕೊಂಡಿದ್ದು ನನ್ನ ಗಂಡ ಮತ್ತು ಮೈದುನರಿಗೆ ರಮೇಶ ಮತ್ತು ಪರಶುರಾಮ ರವರು ಹೊಡೆಯುವದನ್ನು ನೋಡಿ ನಾನು ಮತ್ತು ನನ್ನ ಅತ್ತೆ ಸಣ್ಣ ನೀಲಮ್ಮ ಮತ್ತು ಮೈದುನನ ಹೆಂಡತಿಯಾದ ನೀಲಮ್ಮ ರವರು ಬಿಡಿಸಲು ಹೋದಾಗ ನಮ್ಮೆಲ್ಲರಿಗೂ ರಮೇಶ ಮತ್ತು ಪರಶುರಾಮ ರವರು ಈ ಸುಳೇರದು ಬಹಳ ಆಗಿದೆ ಅಂತಾ ಬೈದು ನನಗೆ ಪರಶುರಾಮನು ನೂಕಿಕೊಟ್ಟಿದ್ದು ರಮೇಶನು ನನ್ನ ಕೈಹಿಡಿದು ಜಗ್ಗಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಚಪ್ಪಲಿಯಿಂದ ನನ್ನ ಮುಖದ ಮೇಲೆ ಬೆನ್ನಿನ ಮೇಲೆ ಹೊಡೆದಿದ್ದು ಹಾಗೂ ನನ್ನ ಅತ್ತೆ ಸಣ್ಣ ನೀಲಮ್ಮನವರಿಗೂ ರಮೇಶನು ಕೈಹಿಂದ ಮುಖದ ಮೇಲೆ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು ನನ್ನ ನೆಗೇಣಿ ನೀಲಮ್ಮ ರವರಿಗೆ ಪರಶುರಾಮನು ಮೈಮೇಲಿನ ಬಟ್ಟೆಹಿಡಿದು ಜಗ್ಗಾಡಿ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು ಆಗ ನಾವು ಚೀರಾಡಲು ನಮ್ಮ ಪಕ್ಕದ ಮನೆಯ ಬಸವರಾಜ ತಂದೆ ವೀರಸಂಗಯ್ಯ ಕೊಡೆಕಲ್ಲಮಠ ಹಾಗೂ ಎದುರು ಮನೆಯ ದೇವಮ್ಮ ಗಂಡ ಶ್ರೀಕಾಂತ ಪತ್ತಾರ ರವರು ಬಂದು ನೋಡಿ ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೇ ರಮೇಶ ಮತ್ತು ಪರಶುರಾಮ ರವರು ನಮ್ಮೇಲ್ಲರಿಗೂ ಇನ್ನು ಹೊಡೆಬಡೆ ಮಾಡುತ್ತಿದ್ದರು ಹೋಗುವಾಗ ರಮೇಶ ಮತ್ತು ಪರಶುರಾಮ ರವರು ಸುಳಿಮಕ್ಕಳೆ ಈ ಬಗ್ಗೆ ನಿವೇನಾದರೂ ಪೊಲೀಸ್ ಠಾಣೆಗೆ ಹೋಗಿ ಕೇಸುಗಿಸು ಅಂತಾ ಮಾಡಿದರೇ ನಿಮಗೆ ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿದ್ದು ಇವರಿಬ್ಬರನ್ನು ನಾವು ಲೈಟಿನ ಬೇಳಕಿನಲ್ಲಿ ಗುತರ್ಿಸಿದ್ದು ನಮಗಾರಿಗೂ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಹೋಗುವದಿಲ್ಲ ನಾವು ರಮೇಶ ಮತ್ತು ಪರಶುರಾಮರವರಿಗೆ ಅಂಜಿ ಇಲ್ಲಿಯವರೆಗೂ ಮನೆಯಲ್ಲಿ ಇದ್ದು ಹಿರಿಯರೊಂದಿಗೆ ವಿಚಾರಿಸಿ ಈ ದಿವಸ ತಡವಾಗಿ ಬಂದು ಪಿಯರ್ಾದಿ ಕೊಡುತ್ತಿದ್ದು ವಿನಾಕಾರಣ ನಮ್ಮ ಮನೆಯವರೇಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ,ಚಪ್ಪಲಿಯಿಂದ ಹೊಡೆದು ಕೈಹಿಡಿದು ಬಟ್ಟೆಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ ಇಬ್ಬರ ಮೇಲೂ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶ
   
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 51/2017  ಕಲಂ 376,504, ಸಂಗಡ 34 ಐಪಿಸಿ ಮತ್ತು ಕಲಂ 4 ಪೋಕ್ಸೊ ಕಾಯ್ದೆ ಸಂಗಡ 3(1), (R), (S), (w). SC/ST PA Act 1989;- ದಿನಾಂಕ 31.05.2017 ರಂದು 14:30 ಗಂಟೆಗೆ ಪಿಯರ್ಾದಿ ಕುಮಾರಿ ವಿಜಯಲಕ್ಷ್ಮಿ ತಂದೆ ಪರಸಪ್ಪ ಬಿರಾದಾರ ವ:17 ವರ್ಷ ಉ:ವಿದ್ಯಾಥರ್ಿ ಜಾ:ಹಿಂದು ಬೇಡರ (ಎಸ್ ಟಿ)ಸಾ:ಕಡದರಾಳ ಹಾ:ವ:ಬೂದಿಹಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಸ್ವಂತ ಊರು ಕಡದರಾಳ ಆಗಿದ್ದು ನನ್ನ ಅಜ್ಜಿಯಾದ ಶಿವಬಸಮ್ಮ ಗಂಡ ಗದ್ದೆಪ್ಪ ನಾಟಿಕಾರ ಸಾ:ಬೂದಿಹಾಳ (ನನ್ನ ತಾಯಿಯ ತಾಯಿ)ಇವರ ಮನೆಯಲ್ಲಿ ನಾನು ನಾಲ್ಕು ವರ್ಷವದಳಿದ್ದಾಗಿನಿಂದಲೇ ವಾಸವಾಗಿದ್ದು 1 ರಿಂದ 7 ನೇ ತರಗತಿವರೆಗೆ ಬೂದಿಹಾಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಬ್ಯಾಸಮಾಡಿದ್ದೇನೆ 8 ನೇ ತರಗತಿಯನ್ನು ಕೊಡೆಕಲ್ಲದ ಸರಕಾರಿ ಪ್ರೌಡಶಾಲೆಯಲ್ಲಿ 9 ರಿಂದ 10 ನೇ ತರಗತಿಯನ್ನು ಮುದ್ದೆಬಿಹಾಳದ ವಿ.ಬಿ.ಸಿ ಪ್ರೌಡಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ್ದೇನೆ. ದಿನಾಂಕ 18.05.2017 ಗುರುವಾರ ಬೆಳಗಿನ 10-30 ರ ಸುಮಾರಿಗೆ ಕೊಡೆಕಲ್ಲಗೆ ಬಟ್ಟೆಖರಿದಿಗೆಂದು ಬಂದಿದ್ದೆ ಮರಳಿ ಬೂದಿಹಾಳಕ್ಕೆ ಹೋಗುವಾಗ ಸಮಯ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಕೊಡೆಕಲ್ಲ ಗ್ರಾಮದ ಶ್ರೀ ಗದ್ದೆಮ್ಮ ದೇವಿಕಟ್ಟೆಯ ಕ್ರಾಸಗೆ ವಾಹನ ವಿಲ್ಲದ ಕಾರಣ ಅಲ್ಲಿ ನಿಂತು ಕಾಯುತ್ತಿದ್ದಾಗ ಅದೇ ಸಮಯಕ್ಕೆ ಯಲ್ಲಾಲಿಂಗ ತಂದೆ ಜೆಟ್ಟೆಪ್ಪ ಪೂಜಾರಿ ಸಾ:ಬೂದಿಹಾಳ ಜಾ:ಹಿಂದು ಕುರಬರ ಎಂಬಾತನು ನಾನು ವಾಹನ ಕಾಯುತ್ತಿರುವ ಸ್ಥಳಕ್ಕೆ ಬೈಕಿನಲ್ಲಿ ನನ್ನ ಹತ್ತಿರಕ್ಕೆ ಬಂದು ಎಲ್ಲಿಗೆ ಹೋಗುತ್ತಿದ್ದಿಯಾ ಎಂದು ಕೇಳಿದ ಆಗ ನಾನು ಬೂದಿಹಾಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದೆ ಅದಕ್ಕವನು ನಾನು ಬೂದಿಹಾಳಕ್ಕೆ ಹೋರಟ್ಟಿದ್ದೇನೆ ಎಂದು ಹೇಳಿದ ಆತನು ನನ್ನ ಬೈಕಿನಲ್ಲಿ ಬನ್ನಿ ಎಂದು ಕೇಳಿದ ವಾಹನಕ್ಕಾಗಿ ಕಾದು ಕುಳಿತ ನಾನು ಬೇಸರವಾಗಿದ್ದು ಅವನ ಗಾಡಿಯಲ್ಲಿ ಹೋಗಲು ನಿರ್ದರಿಸಿದೆ ಅವನ ಜೋತೆ ಬೈಕಿನಲ್ಲಿ ಹೊರಟೆ ಮುಂದೆ ದಾರಿಯಲ್ಲಿ ಹೋಗುತ್ತಿರುವಾಗ ಹೋಗಬೇಕಾದ ದಾರಿಗೆ ಹೋಗದೆ ಕೊಡೆಕಲ್ಲಿನ ಶ್ರೀ ಶರಣಮ್ಮನವರ ಮಠದಿಂದ ಮುಖ್ಯ ಕಾಲುವೆಗೆ ಹೋಗುವ ಮಾರ್ಗಕ್ಕೆ ಗಾಡಿಯನ್ನು ತಿರುಗಿಸಿದಾಗ ನಾನು ಗಾಬರಿಗೊಂಡು ಈ ಕಡೆ ಯಾಕೆ ಹೋಗುತ್ತಿದ್ದಾರಾ ಎಂದು ಕೇಳಿದ ಗಾಡಿಯನ್ನು ನಿಲ್ಲಿಸು ಎಂದು ತರಾಟೆಗೆ ತಗೆದುಕೊಂಡು ಅದಕ್ಕವನು ನನ್ನ ಮಾತನ್ನು ಲೆಕ್ಕಿಸದೇ ವೇಗವಾಗಿ ಬೈಕನ್ನು ಹೋಡಿಸುತ್ತಾ ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಬೈಕನ್ನು ನಿಲ್ಲಿಸಿದ ಇಲ್ಲಿ ಯಾಕೆ ಗಾಡಿಯನ್ನು ನಿಲ್ಲಿಸಿದೇ ಎಂದು ಕೇಳಿದಾಗ ಆತನು ನಿನ್ನಮೇಲೆ ಸುಮಾರು ದಿನಗಳಿಂದ ಮೋಹಿಸುತ್ತಿದ್ದೇನೆ ಈಗ ನೀನು ನನ್ನ ಲೈಂಗಿಕ ಆಸೆಯನ್ನು ಈಡೇರಿಸದರೇ ಮಾತ್ರ ನಿನ್ನನ್ನು ಬಿಡುತ್ತೇನೆ ಇಲ್ಲದಿದ್ದರೇ ಬಿಡಲ್ಲ ಎಂದನು ಆಗ ನಾನು ಭಯಗೊಂಡು ಅಳುತ್ತಾ ನಮ್ಮ ಮನೆಯಲ್ಲಿ ಹೇಳುತ್ತೇನೆ ಎಂದು ಅಳುತ್ತಾ ಪರಪರಿಯಾಗಿಕೇಳಿಕೊಂಡರೂ ಸಹ ಒತ್ತಾಯ ಪೂರ್ವಕವಾಗಿ ನನ್ನ ಕೈಯನ್ನು ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ನಾನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ ಆದರೂ ನನ್ನನ್ನು ಬಿಗಿದಪ್ಪಿ ಹಿಡಿದು ಯಾರು ಇಲ್ಲದ ಹೊಲದಲ್ಲಿ ಎಳದೋಯ್ದು  ಬಲತ್ಕಾರದಿಂದ ನನ್ನ ಬಟ್ಟೆ ಬಿಚ್ಚಿ ಎಷ್ಟೆ ಅಳುತ್ತಿದ್ದರೂ ಕೇಳದೆ ನನ್ನ ಜೊತೆಗೆ ಸಂಬೋಗಮಾಡಿ ಏನು ಮಾಡುತ್ತಿಯಾ ಮಾಡು ನಿನ್ನ ಮಾವರನ್ನು ನೋಡಿದ್ದೇನೆ ನಿಮ್ಮ ಬೇಡರ ಜಾತಿಯನ್ನು ನೋಡಿದ್ದೇನೆ ನನ್ನ ಶೆಂಟ ಅರಕ್ಕೊಂತಾರ ಅರಕ್ಕೊಳಿ ಅಂತಾಅಂದು ಜಾತಿ ಎತ್ತಿ ಹಿಯಾಳಿಸಿ ಬೈದನು ಈ ಕೃತ್ಯವನ್ನು ಎಸಗಿದ ಆತನು ನನ್ನನ್ನು ಅಲ್ಲಿಯೇ ಬಿಟ್ಟು ಹೊರಟು ಹೋದ ಆಗ ನಾನು ಒಬ್ಬಳೆ ಘಟನೆ ನಡೆದ ಸ್ಥಳದಿಂದ ನಡೆದುಕೊಂಡು ಮನೆಗೆ ಹೊದವಳೆ ನನ್ನ ಅಜ್ಜಿಗೆ ಮತ್ತು ಮಾವನಾದ ಶರಣಪ್ಪನಿಗೆ ಈ ವಿಷಯವನ್ನು ತಿಳಿಸಿದೇನು ಆಗ ಅಜ್ಜಿ ಮತ್ತು ಮಾವ ನನ್ನ ಮೇಲೆ ಅತ್ಯಾಚಾರ ವೆಸಗಿದವನ ತಂದೆಯಾದ ಜೆಟ್ಟೆಪ್ಪ ತಂದೆ ನೀಲಪ್ಪ ಪೂಜಾರಿ ಇವರನ್ನು ಕರೆಯಿಸಿ ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದಾಗ ಆತನು ನನ್ನಮಗ ಮಾಡಿದರೂ ಮಾಡಿರಬಹುದು ಈಗ ಏನು ಮಾಡುತ್ತಿರಿ ಕೇಸು ಮಾಡತಿರಾ ಮಾಡಿ ಏನ ಕಿತ್ತೊಗಿಂತಿರಿ ಎಂದು ಅವನು ಮತ್ತು ಅವಳ ಅಳಿಯನಾದ ಬಸವರಾಜ ವಜ್ಜಲ ಸಾ:ಬೂದಿಹಾಳ ಇವರಿಬ್ಬರು ಕೂಡಿ ಬಾಯಿಗೆ ಬಂದ ಆಗೆ ಅವಾಚ್ಯ ಶಬ್ದಗಳಿಂದ ಬೈದು ಹೋದರು ನಮಗೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕೇಸು ಮಾಡಲು ನಿರ್ದರಿಸಿದ್ದು ಆದಕಾರಣ ತಾವು ನನ್ನ ದೂರನ್ನು ಗಂಬಿರವಾಗಿ ಪರಿಗಣಿಸಿ ಅನ್ಯಾಯವಾಗಿರುವ ನನಗೆ ನ್ಯಾಯಕೊಡಿಸಬೇಕು ಅತ್ಯಾಚಾರವೆಸಗಿದವನ ವಿರುದ್ದ ಹಾಗೂ ಅವನ ತಂದೆ ಮತ್ತು ಬಸವರಾಜ ವಜ್ಜಲ ರವರ ಮೇಲೆ ಕಾನೂನು ರೀತಿ ಕ್ರಮ  ಕೈಕೊಳ್ಳಬೇಕೆಂದು ಈ ದಿವಸ ತಡವಾಗಿ ಬಂದಿರುವೇನು ಅಂತಾ ಸಾರಾಂಶ 
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!