Yadgir District Reported Crimes Updated on 29-05-2017

By blogger on ಸೋಮವಾರ, ಮೇ 29, 2017


                                                     Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 87/2017 ಕಲಂ:504,354 ಐಪಿಸಿ;- ದಿನಾಂಕ.28/05/2017 ರಂದು 5 ಪಿಎಂಕ್ಕೆ  ಶ್ರೀಮತಿ ವಸೀಮಾ ಫಾತೀಮಾ ಗಂ. ಆದಿಲ್ ಹುಸೇನ ಕಡೆಚೂರವಾಲೇ ವಯಸ್ಸು 27, ಜಾ: ಮುಸ್ಲಿಂ, ಉ: ಮನೆಕೆಲಸ ಸಾ: ಮಾರೆಪ್ಪ ಗಾರ್ಡನ ಜೆ.ಸಿ ನಗರ ಬೆಂಗಳೂರು ಹಾ:ವ: ಮನೆ ನಂ. 4-10-90 ಸದರ ದರವಾಜಾ ಯಾದಗಿರಿ.  ಇವರ ಒಂದು ಹೇಳಿಕೆ ವಸೂಲಾಗಿದ್ದು ಸದರಿ ಸಾರಾಂಶವೆನೆಂದರೆ  ನಾನು ಮೇಲಿನ ವಿಳಾಸದವಳಿದ್ದು ಮನೆಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ತವರು ಮನೆ ಸದರ ಯಾದಗಿರಿಯ ದರವಾಜಾ ಇದ್ದು, ನನಗೆ ದಿನಾಂಕ: 02/09/2015 ರಂದು ರಾಯಚೂರು ಸ್ವಂತ ವಿಳಾಸ ಇದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಆದಿಲ್ ಹುಸೇನ ತಂದೆ ತಜಮ್ಮುಲ್ ಹುಸೇನ ಇವರೊಂದಿಗೆ ನನ್ನ ತಂದೆ-ತಾಯಿಯವರು ಗುರುಹಿರಿಯರ ಸಮಕ್ಷಮ ನಮ್ಮ ಮುಸ್ಲಿಂ ಸಂಪ್ರದಾಯದ ಪ್ರಕಾರ ರಾಯಚೂರಿನಲ್ಲಿ ಲಗ್ನ ಮಾಡಿಕೊಟ್ಟಿರುತ್ತಾರೆ. ಲಗ್ನವಾದ ನಂತರ ನನ್ನ ಗಂಡನ ಸ್ವಂತ ಮನೆ ನಂ. 20/4 1 ನೇ ಮಹಡಿ, 1 ನೇ ಅಡ್ಡ ರಸ್ತೆ ಮಾರೆಪ್ಪ ಗಾರ್ಡನ ಜೆ.ಸಿ ನಗರ ಬೆಂಗಳೂರು ಇಲ್ಲಿಗೆ ಹೋಗಿ ವಾಸ ಇರಲಾರಂಭಿಸಿದೆವು. ನಮ್ಮೊಂದಿಗೆ ನಮ್ಮ ಅತ್ತೆ ವಿಖಾರ ಸುಲ್ತಾನಾ, ಮೈದುನ ಆಸೀಫ್ ಹುಸೇನ ಇವರು ಎಲ್ಲರೂ ಇದ್ದರು. ನನಗೆ ನಮ್ಮ ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳದ ಕಾರಣ ನಾನು ಆರು ತಿಂಗಳಿಂದ ನನ್ನ ತವರು ಮನೆಯಾದ ಯಾದಗಿರದಲ್ಲಿ ಇರುತ್ತೆನೆ. ಹೀಗಿದ್ದು ದಿನಾಂಕ 13/05/2017 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ನನ್ನ ತವರು ಮನೆಯಾದ ಯಾದಗಿರದ ನಮ್ಮ ತಾಯಿಯ ಮನೆಯಲ್ಲಿದ್ದಾಗ  ನನ್ನ ಮೈದುನನಾದ ಆಸೀಫ್ ಹುಸೇನ್ ತಂ. ತಜಮುಲ್ ಹುಸ್ಸೇನ ಕಡೇಚೂರವಾಲೇ ಈತನು ಬೆಂಗಳೂರಿನಿಂದ ನಮ್ಮ ಮನೆಯ ಹತ್ತಿರ ಬಂದು ನನಗೆ ಹೊರೆಗೆ ಬಾ ಅಂತಾ ಕರೆದಾಗ ನಾನು ನಮ್ಮ ತಮ್ಮ ಅಹೆಮದ ಸಲೀಂ ಇಬ್ಬರೂ ಮನೆಯಿಂದ ಹೊಎಗೆ ಬಂದಾಗ ನನ್ನ ಮೈದುನ ಆಸೀಪ್ ಹುಸೆನ ಈತನು '' ಏ ಚಿನಾಲ್ ಕಿತ್ತೆ ದಿನತಕ ಯಹಾ:ರಹತೆ ಮೆರೇ ಬಯ್ಯಾಕೂ ಶ್ಯಾದೀ ಕರಲೆಕೋ ಯಹಾ: ಕ್ಯೂ ರಹತೆ ಅಂತಾ ಅವಾಚ್ಯವಾಗಿ ಬೈಯ್ಯತ್ತಿರುವಾಗ '' ನಾನು ಅವನಿಗೆ ನಿಮ್ಮ ನಿಮ್ಮ ಅಣ್ಣ ಹೊರಗಿನ ದೇಶದಾಗ ಇದ್ದಾನೆ ನಾನು ಅಲ್ಲಿಗೆ ಬಂದು ಏನು ಮಾಡಲೀ ನಿಮಗೆ ನನಗೆ ಅಗಿಬರಲ್ಲ ಅಂತಾ ಅಂದಿದ್ದಕ್ಕೆ ಅವನು ನನಗೆ ಕೈ ಹಿಡಿದು ಎಳೆದಾಡಿ ಮಾನಬಂಗಕ್ಕೆ ಪ್ರಯತ್ನಿಸುತ್ತಿರುವಾಗ ನಾನು ಚೀರಾಡುತ್ತಿರುವಾಗ ನಮ್ಮ ತಮ್ಮ ಮತ್ತು ಅಬ್ದುಲ್ ರಹೀಮ ತಂ. ಅಬ್ದುಲ್ ಗಫರ ಖಾನ್, ಅಬ್ದುಲ ನಬೀ ಇಷರ್ಾದ ತಂ. ಅಬ್ದುಲ್ ಅಮೀನ ಚುನ್ನೆಕಾರ ಇವರು ಜಗಳಾ ಬಡಿಸಿದರು. ಸದರಿ ಘಟನೆ ಯಾದಗಿರಿಯ ನಮ್ಮ ಮನೆಯ ಮುಂದೆ  ಜರುಗಿರುತ್ತದೆ.ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2017 ಕಲಂ.504,354 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ 279 , 304(A) IPC ;- ದಿನಾಂಕ-27/05/2017 ರಂದು ಸಾಯಂಕಾಲ ರೇಣುಕಮ್ಮ ಗಂಡ ಮತ್ತು ನಮ್ಮೂರ ನಮ್ಮ ಸಂಬಂಧಿ ರುಕ್ಮೋಜಿ ತಂದೆ ಖಾಜಪ್ಪ ಜಮಾಲಪೂರ ಇಬ್ಬರು ಕೂಡ ದೊಡ್ಡಸಂಬ್ರಕ್ಕೆ ಹೊಗಿ ನಾಳೆ ರವಿವಾರ ಇದೆ ಬ್ಯಾಟಿ ತರೊಣ ಅಂತಾ ಇಬ್ಬರು ಕೂಡಿ ನಮ್ಮ ಮೈದುನ ಮೌನೇಶನ ಸೈಕಲ್ ಮೋಟರ ನಂಬರ- ಕೆಎ-36 ಎಲ್ 3084 ನೆದ್ದರ ಮೇಲೆ ಕುಳಿತು ಹೋದರು ನನ್ನ ಗಂಡನಿಗೆ ಸೈಕಲ್ ಮೋಟರ ನಡೆಸಲು ಬರುವದಿಲ್ಲ ಆತ ಹಿಂದೆ ಕುಳಿತಿದ್ದ ರುಕ್ಮೋಜಿ ಇವರು ಮೋಟರ ಸೈಕಲನ್ನು ಚಲಾಯಿಸಿಕೊಂಡು ಹೋದರು.  ದಿನಾಂಕ-27/05/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮೈದುನ ಮೌನೇಶ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಅಣ್ಣ ಶೇಖಪ್ಪ @ ಚಂದ್ರಶೇಖರ ಮತ್ತು ರುಕ್ಮೋಜಿ ದೊಡ್ಡಸಂಬ್ರದಿಂದ ಬ್ಯಾಟಿಯನ್ನು (ಕುರಿಯನ್ನು)ತೆಗೆದುಕೊಂಡು  ಬರುವಾಗ ದೊಡ್ಡಸಂಬ್ರ ಮತ್ತು ಸಣ್ಣಸಂಬ್ರ ಮದ್ಯೆ ಹೊಡಪೆಟೆ ಯಲ್ಲಪ್ಪ ಇವರ ಹೊಲದ ಯಲ್ಲಮ್ಮ ಗುಡಿಯ ಹತ್ತಿರದಲ್ಲಿ 7-15 ಪಿ,ಎಮ್ ಕ್ಕೆ ರುಕ್ಮೊಜಿ ಇತನು ಸೈಕಲ್ ಮೋಟರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಸೈಕಲ್ ಮೋಟರ ಕೆಳಗೆ ಬಿದ್ದಿದ್ದು ಇದರಿಂದ ನಮ್ಮ ಅಣ್ಣ ಶೇಖಪ್ಪನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಕೀವಿಯಿಂದ ರಕ್ತಬರುತ್ತಿದೆ. ಉಪಚಾರಕ್ಕೆ ನಾನು ಮತ್ತು ಯಮನಪ್ಪ ತಂದೆ ಗಂಗಪ್ಪ ಕರೆದುಕೊಂಡು ಹೊರಟಿದ್ದೆವೆ ಅಂತಾ ತಿಳಿಸಿದರು.ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮೈದುನನಾದ ಮೌನೇಶ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಅಣ್ಣ ಶೇಖಪ್ಪ ಇತನಿಗೆ ಸೈದಾಪೂರ ಆಸ್ಪತ್ರೆಯಿಂದ ರಾಯಚೂರ ರಿಮ್ಸ ಆಸ್ಪತ್ರೆಗೆ ಉಪಚಾರಕ್ಕೆ ತಂದಾಗ ರಾತ್ರಿ 10-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು ದಿನಾಂಕ-27/05/2017 ರಂದು 7-15 ಪಿಎಮ್ ಕ್ಕೆ ರುಕ್ಮೊಜಿ ಇತನು ಸೈಕಲ್ ಮೋಟರ ನಂಬರ- ಕೆಎ-36 ಎಲ್ 3084    ನೆದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಓಡಿಸಿ ಅಪಘಾತಡಿಸಿದ್ದರಿಂದ  ಹಿಂದೆ ಕುಳಿತ ನನ್ನ ಗಂಡ ಕೆಳಗೆ ಬಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿರುತ್ತಾನೆ ನಿನ್ನೆ ರಾತ್ರಿ ಯಾವುದೆ ವಾಹನದ ಸೌಲಭ್ಯ ಇಲ್ಲದ ಕಾರಣ ಮತ್ತು ನನಗೆ ತೊಚದೆ ಇಂದು ಮುಂಜಾನೆ ತಡವಾಗಿ ಬಂದಿದ್ದು ಸೈಕಲ್ ಮೋಟರ ಮತ್ತು ಚಾಲಕ ರುಕ್ಮೋಜಿ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಪಿಯರ್ಾಧಿ ಹೇಳಿಕೆ ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ 379  ಐಪಿಸಿ ;- ಹಣಮಂತ್ರಾಯ ತಂದೆ ಭಿಮಣ್ಣ ದೊಡ್ಡಮನಿ ಸಾ|| ಗೌಡಿಗೆರಿ ಇದ್ದು ನಾನು ದಿನಾಂಕ-27/05/2017 ರಂದು ಸಾಯಮಕಾಲ 7-55 ಗಂಟೆಗೆ ಹೊಲಕ್ಕೆ ಹೊದಾಗ ನನ್ನ ನಿಂಗರಿ ದಾರನ ಹೊಲದಲ್ಲಿ ರಘುಪತಿ ತಂದೆ ಶರಣಪ್ಪ ಯಂಕಣ್ಣನೋರ ಮತ್ತು ದೇವಪ್ಪ ತಂದೆ ಶರಣಪ್ಪ ಯಂಕಣ್ಣೋರ ಟ್ರ್ಯಾಕ್ಟರ ಚಾಲಕ ಇವರು ನಮ್ಮ ಹೊಲದಲ್ಲಿ ಈಗ್ಗೆ ಕಳ್ಳತನದಿಂದ ಸುಮಾರು 8 ದಿನಗಳಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ತಮ್ಮ ಟ್ರ್ಯಾಕ್ಟರ ನಂಬರ ಕೆಎ-33 ಟಿಎಸ್ 7541 ಟೆಯಾಲಿ ನಂಬರ ಕೆಎ-33 ಟಿಎಸ್ 7806 ನೀಲಿ ಬಣ್ಣದ ಟ್ರ್ಯಾಲಿಯಲ್ಲಿ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ಗೌಡಿಗೆರಿ ಗ್ರಾಮದಿಂದ ನಾಗರಬಂಡಿ ಮಾರ್ಗವಾಗಿ ಯಾದಗಿರಿಗೆ ಸಾಗಿಸುತ್ತಾರೆ. ನಾನು ನಿನ್ನೆ ದಿನಾಂಕ-27/05/2017 ರಂದು ನಮ್ಮ ನಿಂಗೆರಿ ದಾರಿ ಹೊಲಕ್ಕೆ ಸಾಯಂಕಾಲ 7-55 ಗಂಟೆಗೆ ಹೋಗಿದ್ದು ಆಗ ನನ್ನ ಹೊಲದಲ್ಲಿ ಈ ಮೆಲ್ಕಾಣಿಸಿದ ವ್ಯಕ್ತಿಗಳು ನಮ್ಮ ಹೊಲದಲ್ಲಿ ಕಳ್ಳತನದಿಂದ ಮರಳು ತುಂಬುವಾಗ ಅವರನ್ನು ಮತ್ತು ಟ್ರ್ಯಾಕ್ಟರನ್ನು ಹಿಡುದು ನಿಲ್ಲಿಸಿ ಸೈದಾಪೂರ ಪಿ.ಎಸ್.ಐ ಗೆ ಕರೆ ಮಆಡಿ ವಿಷಯ ತಿಳಿಸಿದೆನು ಅವರು ಬರುವಷ್ಟರಲ್ಲಿ ನನಗೆ ಕಣ್ಣು ತಪ್ಪಿಸಿ ಮರಳು ತುಂಬಿದ ಟ್ರ್ಯಾಕ್ಟರ ತೆಗೆದುಕೊಂಡು ಓಡಿ ಹೋಗಿರುತ್ತಾರೆ. ಈ ಮೆಲ್ಕಾಣಿಸಿದ ವ್ಯಕ್ತಿಗಳು ನನ್ನ ಹೊಲದಲ್ಲಿ ಅ|| ಕಿ|| 23000 ರೂಪಾಯಿ ಬೆಲೆ ಬಾಳುವ ಮರಳನ್ನು ನನ್ನ ಹೊಲದಿಂದ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೆಕೆಂದು ಲಿಖಿತ ದೂರು ಇರುತ್ತದೆ
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 457.380 ಐಪಿಸಿ;- ದಿನಾಂಕ: 28.05.2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾಧಿ ಶ್ರೀ ಬಸವರಾಜ ತಂದೆ ತಿಪ್ಪಣ್ಣ ಅವಂಟಿ ಸಾ|| ಗುರುಮಠಕಲ್ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂದರೆ ದಿನಾಂಕ: 27.05.2017 ರಂದು ರಾತ್ರಿ 9.30 ಗಂಟೆಗೆ ನಾನು ಮತ್ತು ನನ್ನ ಕುಟುಂಬದವರು ಊಟ ಮಾಡಿ ಮನೆಯ ಮಾಳಿಗೆ ಮೇಲೆ ರಾತ್ರಿ 10.30 ಪಿ.ಎಂಕ್ಕೆ ಕುಟುಂಬದ ಸಮೇತ ಹೋಗಿ ಮಲಗಿದ್ದೇವು. ಬೆಳಿಗ್ಗೆ 5.30 ಎ.ಎಂಕ್ಕೆ ನನ್ನ ತಾಯಿಯಾದ ಗೌರಮ್ಮ ಗಂಡ ತಿಪ್ಪಣ್ಣ ಇವರು ಎದ್ದು ಕೆಳಗೆ ಬಂದು ನೋಡಲಾಗಿ ಮನೆಯ ಬಾಗಿಲದ ಕೀಲಿ ಕೊಂಡಿ ಮುರಿದಿದ್ದು ನೋಡಿ ಗಾಬರಿಯಾಗಿ ನನಗೆ ಬಂದು ವಿಷಯ ತಿಳಿಸಿದರು. ಆಗ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ ಮಗಳು ಶ್ವೇತಕಿರಣಂ ಕೂಡಿ ಕೆಳಗಡೆ ಬಂದು ನೋಡಲಾಗಿ ಮನೆಯ ಬಾಗಿಲದ ಕೀಲಿಕೊಂಡಿ ಮುರಿದಿದ್ದು ಕಂಡು ಬಂದಿದ್ದು ನಾವೇಲ್ಲರೂ ಮನೆಯ ಒಳಗಡೆ ಹೋಗಿ ನೋಡಲಾಗಿ ಬೆಡ್ರೂಮಿನ ಒಳಗಡೆ ಇರುವ 2 ಅಲಮಾರಿಯ ಕೀಲಿ ಮುರಿದಿದ್ದು ನೋಡಿ ಗಾಬರಿಯಾಗಿ ಅಲಮಾರಿಯಲ್ಲಿ ಇಟ್ಟಿದ್ದ ಸಾಮಾನುಗಳಾದ ನಗದು ಹಣ 50.000 ರೂ ಮತ್ತು 2 ತೊಲೆ ಬಂಗಾರದ ನಕ್ಲೇಸ್ , ಅರ್ಧ ತೊಲಿ ಹುಡುಗನ ಲಾಕೇಟ್ , 3 ಗ್ರಾಂ ಕಿವಿ ಓಲೆ, 5 ಗ್ರಾಂನ 2 ಉಂಗುರುಗಳು, 5 ಗ್ರಾಂನ ಸಣ್ಣ ಉಂಗುರುಗಳು, ಒಟ್ಟು 38 ಗ್ರಾಂ ಬಂಗಾರ ಸಾಮಾನುಗಳ ಅ.ಕಿ - 76.000 ರೂ (ಎಪ್ಪತ್ತಾರು ಸಾವಿರ ರೂ) ಹಾಗೂ 5 ತೊಲೆಯ ಬೆಳ್ಳಿತಟ್ಟೆ , ಬೆಳ್ಳಿಯ ಕುಂಕುಮ ಡಬ್ಬಿಗಳು 12 ತೊಲೆಯವು, ಬೆಳ್ಳಿಯ 2 ಲಿಂಗದ ಕಾಯಿಗಳು 5 ತೊಲೆಯವು, 3 ಬೆಳ್ಳಿಯ ಉಡಿದಾರಗಳು ಒಟ್ಟು 7 ತೊಲೆ , 5 ತೊಲೆಯ ಪಂಚಪಾಳಿ ಒಟ್ಟು 34 1/2  ತೊಲೆ ಬೆಳ್ಳಿ ಸಾಮಾನುಗಳ ಅ.ಕಿ-6.900 ರೂ (ಆರು ಸಾವಿರ ಒಂಬೈನೂರು ರೂ) ಗಳನ್ನು ಮತ್ತು 50.000 ರೂ ನಗದು ಸೇರಿ ಒಟ್ಟು 1.32.900 ರೂಗಳ ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯ ಒಳಗಡೆ ಪ್ರವೇಶ ಮಾಡಿ ಅಲಮಾರಿ ಕೀಲಿ ಮುರಿದು ಈ ಮೇಲೆ ತೋರಿಸಿದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಇತ್ಯಾಧಿ ದೂರಿನ ಸಾರಂಶದ ಮೇಲಿಂದ ಠಾಣೆಯಲ್ಲಿ ಈ ಮೇಲಿನಂತೆ ಪ್ರಕರಣ ದಾಖಲಾಗಿದ್ದು ಇರುತ್ತದೆ.  
   
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್;- ದಿನಾಂಕ 27.05.2017 ರಂದು ರಾತ್ರಿ ಫಿರ್ಯಾದಿಯ ಭಾಮೈದನೂ ಗುರುಮಠಕಲ್ ನಲ್ಲಿ ಮೃತಪಟ್ಟಿದ್ದರಿಂದ ಅಂತ್ಯಾಸಂಸ್ಕಾರಕ್ಕೆಂದು ಫಿರ್ಯಾದಿಯು ತನ್ನ ಮಗ ಆರೋಪಿತನಿಗೆ ಕರೆದುಕೊಂಡು ಗಾಯಾಳುಗಳೊಂದಿಗೆ ಮಲ್ಕಾಪಲ್ಲಿಯಿಂದ ಗುರುಮಠಕಲ್ ಪಟ್ಟಣಕ್ಕೆ ಬರುತ್ತಿದ್ದಾಗ ಗುರುಮಠಕಲ್ ಪಟ್ಟಣದ ಬಿ.ಎಸ್.ಎನ್.ಎಲ್ ಆಫೀಸ್ ನ ಮುಂದಿನ ರಸ್ತೆಯ ಮೇಲೆ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಓಮ್ಮಿದೊಮ್ಮೆಲೆ ಬ್ರೇಕ್ ಹಾಕಿದ್ದರಿಂದ ಟ್ರ್ಯಾಕ್ಟರನಲ್ಲಿಯ ಫಿರ್ಯಾದಿ ಹಾಗೂ ಗಾಯಾಳುಗಳಿಗೆ ಭಾರಿರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಮತ್ತು ಗುಪ್ತಗಾಯಗಳಾಗಿದ್ದು ಟ್ರ್ಯಾಕ್ಟರ ಚಾಲಕ ಆರೋಪಿತನು  ಓಡಿ ಹೋಗಿದ್ದರ ಬಗ್ಗೆ ಹೇಳಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 177 ಕಲಂ ಮಹಿಳೆ ಕ್ಫಣೆ;- ದಿನಾಂಕ 28/05/2017 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿ ಶ್ರೀ ಶಿವಪ್ಪ ತಂದೆ ಬಸಪ್ಪ ಗೋಗಿ ಸಾ: ಇಂದ್ರನಗರ ಶಹಾಪೂರ ತಾ: ಶಹಾಪೂರ  ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಂಶವೇನಂದರೆ ದಿನಾಂಕ 18/05/2017 ರಂದು  ಪಿರ್ಯಾದಿ ಹೆಂಡತಿ ಲಿಲತಾ ಇವಳು ಅವರ ಅಕ್ಕನ ಮನೆ ರಂಗನಪೇಟಕ್ಕೆ  ಹೋಗಿ ಬರತ್ತೆನೆ ಅಂತಾ ಹೇಳಿ ಲಿಲತಾ ಇವಳು ಮಕ್ಕಳಾದ ಸಂಜು ವಯಾ 03 ವರ್ಷ ಮತ್ತು ಅಕ್ಷರ 02ವರ್ಷ  ಕರೆದುಕೊಂಡು  ಮದ್ಯಾಹ್ನ 12:00 ಗಂಟೆಗೆ ಸುಮಾರಿಗೆ  ಹೋಗಿದ್ದು  ಇರುತ್ತದೆ ನಂತರ ಅವಳ  ಅಕ್ಕ ಗೌರಮ್ಮಳಿಗೆ ಪೊನ ಮಾಡಿ ಕೇಳಲಾಗಿ  ಬಂದಿರುವದಿಲ್ಲಾ ಅಂತಾ ತಿಳಿಸಿದ್ದು.  ನಂತರ ನಾನು ನಮ್ಮ ಸಂಬಂಧಿಕರಿವ  ಊರುಗಳಿಗೆ ಹೋಗಿ ಮತ್ತು ಪೋನ ಮಾಡಿ ವಿಚಾರ ಮಾಡಿದಾಗ ಎಲ್ಲಿಯೂ ನನ್ನ ಹೆಂಡತಿ ಇರುವ ಬಗ್ಗೆ ಮಾಹಿತಿ ಸಿಗಲಿಲ್ಲಾ  ಅಲ್ಲದೇ ನನ್ನ ಹೆಂಡತಿಯಾದ ಲಿಲತಾ ಇವಳು ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ  ಕಾಣೆಯಾದ ದಿವಸದಿಂದ ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯು ಸಿಕ್ಕಿರುವುದಿಲ್ಲಾ. ಆದ್ದರಿಂದ ಇಂದು ಠಾಣೆಗೆ ಬಂದು ದೂರು ಸಲ್ಲಿಸದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 177/2017  ಕಲಂ ಮಹಿಳೆ ಕಾಣೆ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ;- ದಿನಾಂಕ 28/05/2017 ರಂದು 1-30 ಪಿ.ಎಂಕ್ಕೆ ಫಿಯರ್ಾದಿದಾರರಾದ  ಶ್ರೀಮತಿ ಶ್ರೀಮತಿ ತಾರಿಬಾಯಿ ಗಂಡ ಲಚಮು ಜಾಧವ ವಯಾ|| 42 ಜಾ|| ಲಂಭಾಣಿ ಉ|| ಕೂಲಿ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಫಿಯರ್ಾದಿ ಹಾಗು ಆರೋಪಿತರ ಎರಡು ಮನೆಗಳು ಅಕ್ಕಪಕ್ಕದಲ್ಲಿದ್ದು. ಹೀಗಿದ್ದು ಇಂದು ದಿನಾಂಕ 28/05/2017 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಫಿಯರ್ಾದಿ ಹಾಗು ಅಜರ್ಿದಾರರ ಮದ್ಯ ವಿನಾಕಾರಣ ಜಗಳಾವಾಗಿ ಒಬ್ಬರಿಗೊಬ್ಬರೂ ಕೈಯಿಂದ ಹಾಗು ಬಡಿಗೆಯಿಂದ ಹೊಡೆದಾಡಿಕೊಂಡು ಸಣ್ಣ ಪುಟ್ಟ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಆರೋಪಿತರು ಫಿಯರ್ಾದಿಗೆ ಜೀವದ ಭಯ ಹಾಕಿದ್ದು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 93/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ;- ದಿನಾಂಕ 28/05/2017 ರಂದು 2-45 ಪಿ.ಎಂಕ್ಕೆ ಫಿಯರ್ಾದಿದಾರರಾದ  ದೇವಿಬಾಯಿ ಗಂಡ ಡಾಕುಸಿಂಗ ಜಾಧವ ವಯಾ|| 30 ಜಾ|| ಲಂಭಾಣಿ ಉ|| ಕೂಲಿ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಫಿಯರ್ಾದಿ ಹಾಗು ಆರೋಪಿತರ ಎರಡು ಮನೆಗಳು ಅಕ್ಕಪಕ್ಕದಲ್ಲಿದ್ದು. ಹೀಗಿದ್ದು ಇಂದು ದಿನಾಂಕ 28/05/2017 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಫಿಯರ್ಾದಿ ಹಾಗು ಅಜರ್ಿದಾರರ ಮದ್ಯ ವಿನಾಕಾರಣ ಜಗಳಾವಾಗಿ ಒಬ್ಬರಿಗೊಬ್ಬರೂ ಕೈಯಿಂದ ಹಾಗು ಬಡಿಗೆಯಿಂದ ಹೊಡೆದಾಡಿಕೊಂಡ ಪ್ರಯುಕ್ತ ಸಣ್ಣ ಪುಟ್ಟ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಆರೋಪಿತರು ಫಿಯರ್ಾದಿಗೆ ಜೀವದ ಭಯ ಹಾಕಿದ್ದು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 94/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!