Yadgir District Reported Crimes Updated on 18-05-2017

By blogger on ಗುರುವಾರ, ಮೇ 18, 2017

                                                    

                             Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 158/2017  ಕಲಂಃ 323,324,326,504,506 ಸಂ 34. ಐಪಿಸಿ;- ದಿನಾಂಕ 17/05/2017 ರಂದು ಬೆಳಿಗ್ಗೆ 00-30 ಕ್ಕೆ ಶಹಾಪೂರ ಸರಾರಿ ಆಸ್ಪತ್ರೆಯಿಂದ ಬೇಟಿನಿಡಿ ಗಾಯಾಳು ಚಂದ್ರಶೇಖರ್ ತಂದೆ ಭೀಮರಾಯ ಹೇಳಿಕೆ ಪಡೆದು ಕೊಂಡು ಬಂದ ಸಾರಾಂಶವೆನೆಂದರೆ ನಿನ್ನೆ ದಿನಾಂಕ 16/05/2017 ರಂದು ರಾತ್ರಿ ಸುಮಾರು 10-30 ಗಂಟೆಗೆ ನಾನು ನಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದೆನು. ಅದೇ ಸಮಯಕ್ಕೆ ನನ್ನ ಅಣ್ಣ ಬಸವಾರಾಜ, ತಮ್ಮ ಸಂಗಪ್ಪ, ಅತ್ತಿಗೆ ಲಲೀತಾ ಗಂಡ ಬಸವರಾಜ, ತಾಯಿ ಈರಮ್ಮ ಗಂಡ ಭೀಮರಾಯ ಇವರು ಮನೆಯಿಂದ ಹೊರಗೆ ಬಂದವರೆ, ಸದರಿಯವರೆಲ್ಲರು ಏಲೇ ಮಗನೆ ಚಂದ್ರ್ಯಾ ನಿನಗೆ ಬಹಳ ಸೊಕ್ಕು ಬಂದಿದೆ ದಿನಾಲು ಆಸ್ತಿಯ ಸಂಬಂದ ಏಕೆ ತಕರಾರು ಮಾಡುತ್ತಿರುವಿ ಬೊಸಡಿ ಮಗನೆ ಅಂತಾ ಇತ್ತ್ಯಾದಿ ಅವಾಚ್ಚ ಶಬ್ದಗಳಿಂದ ಬೈಯುತ್ತ ಅವರಲ್ಲಿಯ  ಬಸವರಾಜನು ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ನನ್ನ ತಲೆಗೆ, ಬಲಗೈ ಹಸ್ತದ ಮೇಲೆ, ಬಲಗಾಲ ಮೋಳಕಾಲಿಗೆ ಹೊಡೆದು ಭಾರಿ ರಕ್ತಗಾಯ ಮಾಡಿದನು ನ್ನನ ತಮ್ಮ ಸಂಗಪ್ಪ ಇತನು ಅಲ್ಲೆ ಬಿದ್ದ ಒಂದು ಬಡಿಗೆಯನ್ನು ತೆಗೆದು ಕೊಂಡು ನನ್ನ ತಲೆಯ ಮೇಲೆ ಹೊಡೆದನು. ಲಲೀತಾ ಇವಳು ಕಾರದ ಪುಡಿ ಕಣ್ಣೀಗೆ ಎರಚಿದಳು.  ನನ್ನ ತಾಯಿ ಈರಮ್ಮ ಇವಳು ಕೈಯಿಂದ ಕಪಾಳಕ್ಕೆ  ಹೊಡೆದಳು. ಜಗಳವನ್ನು ನೊಡಿ ಹೋನ್ನಪ್ಪ ತಂದೆ ಬಸ್ಸಪ್ಪ ಕೋಲ್ಕರ, ಭೀಮರಾಯ ತಂದೆ ಮಲ್ಲಪ್ಪ ಹೇಳವಾರ ಇವರು ಜಗಳ ಬಿಡಿಸಿದಕೂಡಲೆ ಮತ್ತೆ ಅವರೆಲ್ಲರು ನನ್ನಗೆ ಇನ್ನೊಮ್ಮೆ ಆಸ್ತಿಯ ಬಗ್ಗೆ ತಕರಾರು ಮಾಡಿದರೆ ನಿನ್ನ ಜಿವ ಹೊಡೆಯುತ್ತೆವೆ ಎಂದು ಜೀವದ ಭಯಹಾಕಿದರು. ಜಗಳದಲ್ಲಿ ನನಗೆ  ಭಾರಿ ಗಾಯ ಪೆಟ್ಟು ಹೊಂದಿದ್ದರಿಂದ ಉಪಚಾರಕ್ಕೆಂದು ಆಸ್ಪತ್ರೆಗೆ ಬಂದು ಸೆರಿಕೆ ಆಗಿರುತ್ತೆನೆ. ಅಂತ ಹೇಳಿಕೆಯ ಸಾರಾಂಶದ ನಿಡಿದ್ದರ ಮೇಲಿಂದ ಠಾಣೇಯ ಗುನ್ನೆ ನಂ 158/2017 ಕಲಂ 323.324.326.504.506.ಸಂ.34 ಐ.ಪಿ.ಸಿ ನ್ನೇದ್ದರಲ್ಲಿ  ಪ್ರಕರಣ ದಾಕಲಿಸಿ ಕೊಂಡು ತನಿಕೆ ಕೈಕೊಂಡೆನು.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ 279. 304(ಎ) ಐಪಿಸಿ ಮತ್ತು 187 ಐ ಎಂವಿ ಯಾಕ್ಟ;- ದಿನಾಂಕ 17/05/2017 ರಂದು ಮುಂಜಾನೆ 09-30 ಗಂಟೆಗೆ ಫಿರ್ಯಾದಿ ಶ್ರೀ. ಹಾಜಿಸಾಬ ತಂದೆ ಮಕಬೂಲ್ಸಾಬ ಕೊರಬಾ ವಯ 34 ವರ್ಷ ಜಾತಿ ಮುಸ್ಲಿಂ, ಉಃ ಮೆಕ್ಯಾನಿಕ್ ಸಾಃ ದೋರನಹಳ್ಳಿ ತಾಃ ಶಹಾಪೂರ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 17/05/2017 ರಂದು ಮುಂಜಾನೆ 07-00 ಗಂಟೆಗೆ ಸುಮಾರಿಗೆ ಫಿರ್ಯಾದಿಯ ಅಣ್ಣ ತಾನು ಲಿಜಿಗೆ ಹಾಕಿಕೊಂಡ ಹೋಲಕ್ಕೆ ನೇಗಿಲು ಹೋಡೆಯುವ ಸಲುವಾಗಿ ನಮ್ಮೂರಿನ ನಿಂಗನಗೌಡ ತಂದೆ ಚಂದಪ್ಪ ಕಾನಗೊಂಡ ಇವರ ಟ್ರ್ಯಾಕ್ಟರ ನಂಬರ ಏಂ-33-ಖಿಂ-5614 ನೇದ್ದನ್ನು ಬಾಡಿಗೆಗೆ ಮುಗಿಸಿಕೊಂಡು ಮುಂಜಾನೆ 7 ಗಂಟೆಯ ಸುಮಾರಿಗೆ ಮನೆಯಿಂದ ಟ್ರ್ಯಾಕ್ಟರದಲ್ಲಿ ಹೊಲಕ್ಕೆ ಹೊರಟಿದ್ದನು. ಸದರಿ ಟ್ರ್ಯಾಕ್ಟರ ಚಾಲಕನಾಗಿ ಅಬ್ದುಲ್ ಬಾಷಾ ತಂದೆ ಮಹಿಬೂಬ ಅಲಿ ಸಾ|| ದೋರನಹಳ್ಳಿ ಇವರು ನಡೆಸುತ್ತಿದ್ದರು. ನಾನು ಮತ್ತು ನಬಿಸಾಬ ತಂದೆ ಬಾಷುಮಿಯಾ ಬೈಚಬಾಳ ಇಬ್ಬರೂ ಮೆಕ್ಯಾನಿಕ್ ಕೆಲಸ ನಿಮಿತ್ಯ ಅವರ ಟ್ರ್ಯಾಕ್ಟರ ಹಿಂದೆಗಡೆ ಮೋಟರ ಸೈಕಲ್ ಮೇಲೆ ಶಿರವಾಳ ಗ್ರಾಮಕ್ಕೆ ಹೊರಟಿದ್ದೇವು. ನನ್ನ ಅಣ್ಣನ ಹೊಲಕ್ಕೆ ನೇಗಿಲು ಹೊಡೆಯಲು ಹೊರಟಿದ್ದ ಟ್ರ್ಯಾಕ್ಟರ ಏಂ-33-ಖಿಂ-5614 ನೇದ್ದರ ಚಾಲಕನಾದ ಅಬ್ದುಲ್ ಬಾಷಾ ತಂದೆ ಮಹಿಬೂಬ ಅಲಿ ಇತನು ತನ್ನ ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತ ಮುಂಜಾನೆ 7-20 ಗಂಟೆಯ ಸುಮಾರಿಗೆ ದೋರನಹಳ್ಳಿ-ಶಿರವಾಳ ರಸ್ತೆಯ ಮೇಲೆ ರಾಜು ಬಳ್ಳೊಳ್ಳಿ ಇವರ ಹೊಲದಲ್ಲಿ ಬರುವ ರಸ್ತೆಯ ತಿರುವಿನಲ್ಲಿ ಅತಿವೇಗದಲ್ಲಿ ನಿಷ್ಕಾಳಜಿತನದಿಂದ ಟ್ರ್ಯಾಕ್ಟರ ಕಟ್ ಮಾಡಿದ್ದರಿಂದ ಟ್ರ್ಯಾಕ್ಟರ ಆತನ ನಿಯಂತ್ರಣ ತಪ್ಪಿ ಡಾಂಬರ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದ ಚಾಲಕನ ಪಕ್ಕದಲ್ಲಿ ಕುಳಿತಿದ್ದ ನನ್ನ ಚಾಲಕನು ಟ್ರ್ಯಾಕ್ಟರದಲ್ಲಿಂದ ಜಿಗಿದು ಓಡಿ ಹೋದನು. ತಕ್ಷಣ ಅಲ್ಲೆ ಹಿಂದುಗಡೆ ಹೊರಟಿದ್ದ ನಾನು ಮತ್ತು ನಬಿಸಾಬ ಇಬ್ಬರೂ ಓಡಿ ಹೋಗಿ ನನ್ನ ಅಣ್ಣನಿಗೆ ನೋಡಲಾಗಿ ಆತನ ತಲೆಯ ಹಿಂಭಾಗದಲ್ಲಿ ಭಾರಿಗುಪ್ತಗಾಯವಾಗಿ ಮೂಗಿನಿಂದ ರಕ್ತಬರತಿತ್ತು. ಹಾಗು ಎದೆಗೆ ಮತ್ತು ಎರಡು ಪಕ್ಕಡಿಗೆಗಳಿಗೆ, ಬೆನ್ನಿಗೆ, ಬಲಕಪಾಳಕ್ಕೆ ಭಾರಿ ಗುಪ್ತಗಾಯಗಳಾಗಿ ಕಂದುಗಟ್ಟಿದಂತಾಗಿರುತ್ತದೆ. ನನ್ನ ಅಣ್ಣನಿಗೆ ನಾನು ನೀರು ಕುಡಿಸಿರೂ ಕುಡಿಯದೇ ಅಪಘಾತದಲ್ಲಿ ಗಾಯಗಳಿಂದಾಗಿ ಒದ್ದಾಡುತ್ತ 7-30 ಎ.ಎಮ್ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಆಗ ನಾವು ಫೋನ್ ಮುಖಾಂತರ ನನ್ನ ಅಣ್ಣನ ಹೆಂಡತಿಯಾದ ಬಿಜಾನಬೀ ಇವರಿಗೆ ವಿಷಯ ತಿಳಿಸಿದಾಗ, ನನ್ನ ಅಣ್ಣನ ಹೆಂಡತಿ ಹಾಗು ನಮ್ಮ ಸಮಾಜದವರಾದ ಅಜೀಜಸಾಬ ತಂದೆ ಹೈದರಸಾಬ ಕಾನಳ್ಳಿ ಇವರು ಅಬ್ದುಲ್ ಖಾದರ ತಂದೆ ದಸ್ತಗಿರಸಾಬ ಜಮಾದಾರ ಇವರ ಅಟೋದಲ್ಲಿ ಸ್ಥಳಕ್ಕೆ ಬಂದ ಬಳಿಕ ನಾವೆಲ್ಲರೂ ಕೂಡಿ ನನ್ನ ಅಣ್ಣನ ಶವವನ್ನು ಅಬ್ದುಲ್ ಖಾದರ ಇವರ ಅಟೋದಲ್ಲಿ ಹಾಕಿಕೊಂಡು ಶಹಾಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಮೃತನ ಸಾವಿಗೆ ಆಟೋ ಚಾಲಕನ ಅತಿ ವೇಗ ಮತ್ತು ಅಲಕ್ಷತನದಿಂದ ಈ ಅಪಘಾತವಾಗಿರುತ್ತದೆ ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 159/2017 ಕಲಂ 279, 304[ಎ] ಐ.ಪಿ.ಸಿ ಮತ್ತು ವ187 ಐಎಂವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.      
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ: 323, 324, 355, 504, 506, ಸಂ 34 ಐ.ಪಿ.ಸಿ ಮತ್ತು 3(1)(ಖ) 3(1)(ಊ) ಎಸ್.ಸಿ ಎಸ್.ಟಿ ಯಾಕ್ಟ;- ದಿನಾಂಕ 17-05-2017 ರಂದು 11 ಎ.ಎಂಕ್ಕೆ ಠಾಣೆಗೆ ಶ್ರೀ ಪರಶುರಾಮ ತಂದೆ ಮಹಾದೇವಪ್ಪ ವಯಸ್ಸು 25 ವರ್ಷ ಜಾತಿ: ಹೊಲೆಯ ಉ: ಕೂಲಿ ಸಾ: ಹೂವಿನಳ್ಳಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ  ಒಂದು ಲಿಖಿತ ಅಜರ್ಿಯನ್ನು ನೀಡಿದ್ದೆನೆಂದರೆ ದಿನಾಂಕ 14/05/2017 ರಂದು 8.00 ಪಿ.ಎಮ್ ಕ್ಕೆ ಫಿಯರ್ಾದಿಯು ಟ್ರ್ಯಾಕ್ಟರ ಮಾಲೀಕರ ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಟ್ರ್ಯಾಕ್ಟರನಲ್ಲಿ ಡಿಜೆ ಹಚ್ಚಿಕೊಂಡು ಟ್ರ್ಯಾಕ್ಟರ ನಡೆಸಿಕೊಂಡು ಹೋಗುತ್ತಿದ್ದಾಗ ಆರೋಪಿತರು ಫಿಯರ್ಾದಿಗೆ ಎಲೇ ಹೊಲೇ ಸುಳೆ ಮಗನೇ ಟ್ರ್ಯಾಕ್ಟರ ಸಾವಕಾಶವಾಗಿ ನಡೆಸು ಅಂತಾ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಬಡಿಗೆಯಿಂದ ಹಾಗೂ ಚಪ್ಪಲಿಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತ ಅಜರ್ಿ ನೀಡಿದ್ದರ ಮೇರೆಗೆ ಗುನ್ನೆ ನಂ
84/2017 ಕಲಂ 323,324,355,504,506 ಸಂ 34 ಐ.ಪಿ.ಸಿ ಮತ್ತು 3(1)(ಡಿ) 3(1)() ಎಸ್.ಸಿ ಎಸ್.ಟಿ ಯಾಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 85/2017 ಕಲಂ: 447,323,354,504,506, ಸಂ 34 ಐಪಿಸಿ;- ದಿನಾಂಕ 17/05/2017 ರಂದು 1.00 ಪಿ.ಎಮ್ ಕ್ಕೆ ಅಜರ್ಿದಾರರಾದ ಬಸನಗೌಡ ತಂದೆ ರಾಮಪ್ಪ ಬಿರಾದಾರ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿಯರ್ಾದಿ ಮತ್ತು ಅರೋಪಿತರ ಮಧ್ಯ ದಾರಿಯ ವಿಷಯದಲ್ಲಿ ಬಹಳ ದಿನಗಳ ಹಿಂದಿನಿಂದ ವೈಷಮ್ಯ ಇದ್ದು ದಿನಾಂಕ 14/05/2017 ರಂದು 5.00 ಪಿ.ಎಮ್ ಸುಮಾರಿಗೆ ಫಿಯರ್ಾದಿ ಮತ್ತು ಆತನ ಹೆಂಡತಿಯಾದ ಶಾಂತಮ್ಮ ಇಬ್ಬರೂ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಫಿಯರ್ಾದಿಗೆ ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದಾಗ ಜಗಳ ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿಗೆ ಕೂದಲು ಹಿಡಿದು ಎಳೆದಾಡಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 85/2017 ಕಲಂ 447,323,354,504,506, ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ: 143, 147, 323, 504, 506, ಸಂ 149 ಐ.ಪಿ.ಸಿ ಮತ್ತು 3(1)(ಡಿ) 3(1)()ಎಸ್.ಸಿ/ಎಸ್.ಟಿ ಯಾಕ್ಟ ;- ದಿ: 17/05/2017 ರಂದು 11.30 ಪಿ.ಎಮ್ ಕ್ಕೆ ಅರ್ಜಿದಾರರಾದ ಗೋಪಾಲ ತಂದೆ ಭೀಮರಾಯ ದೋರಿ ಸಾ|| ಅಮಲಿಹಾಳ ಇವರು ಠಾಣೆಗೆ ಬಂದು ಒಂದು ಅರ್ಜಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ಅರ್ಜಿದಾರನು ದಿ: 17/05/2017 ರಂದು 4.00 ಪಿ.ಎಮ್ ಸುಮಾರಿಗೆ ಹೂವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೂವಿನಹಳ್ಳಿ ಗ್ರಾಮದ ಶೇಖರಗೌಡ ಪಾಟೀಲ ಮತ್ತು ಸಾಹೇಬಗೌಡ ಸಾಹುಕಾರ ಇವರೊಂದಿಗೆ ಮಾತನಾಡುತ್ತ ಕುಳಿತಿದ್ದಾಗ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿಗೆ ಎಲೇ ಬ್ಯಾಡ ಸೂಳೆ ಮಗನೇ ಗೋಪ್ಯಾ ನಿಮ್ಮದು ಸೊಕ್ಕು ಜಾಸ್ತಿಯಾಗಿದೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜಾತಿನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 86/2017 ಕಲಂ 143,147,323,504,506 ಸಂ 149 ಐಪಿಸಿ ಮತ್ತು 3(1)(r) 3(1)(h) ಎಸ್.ಸಿ ಎಸ್.ಟಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ, 323, 324, 504, 506  ಸಂ/ 34 ಐಪಿಸಿ;- ದಿನಾಂಕ: 17/05/2017 ರಂದು 8-30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ ಮಲ್ಲಯ್ಯ ತಂದೆ ಕತಲಸಾ ಇಳಗೇರ ವಯಾ: 47 ವರ್ಷ ಉ: ಕೂಲಿ ಕೆಲಸ ಜಾ: ಇಳಗೇರ ಸಾ: ನಡಿಹಾಳ ತಾ: ಶಹಾಪೂರ ಈತನು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿಯು ತನ್ನ ಮಗಳಿಗೆ ಕರೆದುಕೊಂಡು ಹೊಗಿರಿ ಅಂತ ಕೇಳಲು ದಿನಾಂಕ: 15/05/2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಆರೋಪಿತರ ಮನೆಯ ಹತ್ತಿರ ಹೋದಾಗ ಆರೋಪಿತರು ಪಿರ್ಯಾದಿಗೆ ಅವಾಚ್ಯವಾಗಿ ಬೈದು ಕಲ್ಲಿನಿಂದ, ಬಡಿಗೆಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ ಅಂತಾ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2017 ಕಲಂ, 323, 324, 504, 506 ಸಂ/ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!