Yadgir District Reported Crimes Updated on 12-05-2017

By blogger on ಶುಕ್ರವಾರ, ಮೇ 12, 2017

                                          

                         Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ- 323,498(?),504,,ಸಂಗಡ 34 ಐಪಿಸಿ ;- ಮಲ್ಲಮ್ಮ ಗಂಡ ಶಿವಪ್ಪ ತೇಕರಾಳ ವ|| 40 ವರ್ಷ ಜಾ|| ಕುರಬರ ಉ|| ಹೊಲಮನೆಕೆಲಸ ಸಾ|| ತೆಕರಾಳ ತಾ|| ಶಹಾಪೂರ ಜಿ|| ಯಾದಗಿರಿ.    ನಾನು ಈ ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು ಹೊಲಮನೆಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ  ನನ್ನ  ತವರು ಮನೆ ಕೊಂಗಂಡಿ ಇದ್ದು ನಾವಿಬ್ಬರು ಅಕ್ಕತಂಗಿಯರಿದ್ದು ನನ್ನ ಅಕ್ಕ ಎಂಬುವವಳನ್ನು ಗೊನಾಳದ  ಮರೆಪ್ಪ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದು ಅವರಿಬ್ಬರು ಗಂಡ ಹೆಂಡತಿ ತೀರಿಕೊಂಡಿರುತ್ತಾರೆ ಅವರ ಮಗಳಾದ ಲಕ್ಷ್ಮಿ ಈಕೆಯನ್ನು ಬದ್ದೆಪಲ್ಲಿ ಗ್ರಾಮದ ಸಾಬಣ್ಣನ ಮಗನಾದ ಮಲ್ಲಣ್ಣ ಎಂಬಾತನಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 2 ಜನ ಹೆಣ್ಣು ಮಕ್ಕಳಿದ್ದು ಕುಟುಂಬದೊಂದಿಗೆ ಹೊಲ ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಾರೆ ಮಲ್ಲಣ್ಣ ಇವರು 3 ಜನ ಅಣ್ಣ ತಮ್ಮಂದಿರಿದ್ದು 3 ಜನರು ಬೇರೆ ಬೇರೆ ಯಾಗಿರುತ್ತಾರೆ ಮತ್ತು ಹೊಲದಲ್ಲಿ ಕೂಡ 3 ಜನರು ಪಾಲು ಮಾಡಿಕೊಂಡಿರುತ್ತಾರೆ ಅದರಲ್ಲಿ 3 ಜನರಿಗೆ ಹೊಲ ಹಂಚಿಕೆ ಮಾಡುವ ಸಮಯದಲ್ಲಿ ಅರ್ಧ ಎಕರೆ ಹೊಲವನ್ನು ಅವರ ಅಣ್ಣಂದಿರಿಗೆ 25 ಸಾವಿರು ರೂಪಾಯಿಗಳು ಕೊಟ್ಟು ಮಲ್ಲಣ್ಣನೆ ತೆಗೆದುಕೊಂಡಿರುತ್ತಾನೆ ಲಕ್ಷ್ಮಿ ಈಕೆಯು ನಮ್ಮ ಊರಿಗೆ ಬಂದಾಗ ನಮ್ಮ ಮಾವ ಮತ್ತು ಆತನ ಹೆಂಡತಿ ಹೋಲದ ಸಂಬಂದ ಕೀರಿ ಕೀರಿ ಮಾಡುತ್ತಾಳೆ ಅಂತಾ ಹೇಳಿತಿದ್ದಳು ಆಗಲಿ ಸುಮ್ಮನಿರು ಅಂತಾ ಹೇಳಿ ಕಳುಹಿಸುತಿದ್ದೆನು. ದಿನಾಂಕ-09/05/2017 ರಂದು ಬದ್ದೆಪಲ್ಲಿಯಲ್ಲಿ ಜಾತ್ರೆ ಇದ್ದ ನಿಮಿತ್ತ ಮಲ್ಲಣ್ಣ ಅಣ್ಣಂದಿರಾದ ಮೈಲಾರಿ ತಂದೆ ಸಾಬಣ್ಣ, ಮಾಳಪ್ಪ ತಂದೆ ಸಾಬಣ್ಣ ಇವರು  ಜಾತ್ರೆಗಂತ ಬೆಂಗಳೂರದಿಂದ ಬದ್ದೆಪಲ್ಲಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ-09/05/2017 ರಂದು ಜಾತ್ರೆ ಮುಗಿದ ನಂತರ ರಾತ್ರಿ 9 ಗಂಟೆಗೆ ಲಕ್ಷ್ಮಿ ಮನೆಯಲಿದ್ದಾದ 1] ಮೈಲಾರಿ ತಂದೆ ಸಾಬಣ್ಣ, 2] ಪೋಲಮ್ಮ ಗಂಡ ಮೈಲಾರಿ ಸಾ|| ಇಬ್ಬರು ಬದ್ದೆಪಲ್ಲಿ ಇವರು ಲಕ್ಷ್ಮಿ ಮನೆಗೆ ಬಂದು ಆಕೆಗೆ ನಾವು ಬಿಟ್ಟ ಅರ್ಧ ಎಕರೆ ಹೊಲವನ್ನು ನಿನು ನಮಗೆ ಏನು ಕೊಡದೆ ಸಾಗುವಳಿ ಮಾಡಿಕೊಳುತಿದ್ದಿ ಈಗ ಆ ಹೊಲ ಯಾಂಗ್ ಸಾಗುವಳಿ ಮಾಡುತಿ ನೋಡಣ ಅಂತಾ ಅಂದು ಅವಾಚ್ಯವಾಗಿ ಬೋಸಡಿ ರಂಡಿ ಅಂತಾ ಬೈದು ಪೊಲಮ್ಮ ಈಕೆಯು ಕೈಯಿಂದ ಲಕ್ಷ್ಮಿಗೆ ತಲೆಗೆ ಹೊಡೆದು  ಹೊಲ ಹೆಂಗ್ ಸಾಗುವಳಿ ಮಾಡುತ್ತಿರಿ ನೋಡೊಣ ಅಂತಾ ಬೈದು ಆಕೆಗೆ ಮಾನಸಿಕ ದೈಹಿಕ ಹಿಂಸೆ ನೀಡಿರುತ್ತಾರೆ ಅಲ್ಲಿ ಇದ್ದ ಲಕ್ಷ್ಮಿ ಅತ್ತೆ ಮಾವ ಮತ್ತು ಲಕ್ಷ್ಮಿಯ ಗಂಡ ಜಗಳ ಬಿಡಿಸಿರುತ್ತಾರೆ. ದಿನಾಂಕ-10/05/2017 ರಂದು ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ತನ್ನ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ರಾತ್ರಿ ಎಲ್ಲರು ಮಲಗಿರುವಾಗ 1-00 ಎಮ್ ಎಮ್ ಸುಮಾರಿಗೆ ಬೆಳಗೆ ಹೊಡೆಯುವ ಕ್ರೀಮಿನಾಶಕ ಔಷಧ ಸೇವನೆ ಮಾಡಿ ಒದ್ದಾಡಿ ವಾಂತಿ ಮಾಡಿಕೊಳುತ್ತಿರುವಾಗ ಆಕೆಯ  ಗಂಡ ಮಲ್ಲಣ್ಣ ಇತನು ಎದ್ದು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಿವಂ ಆಸ್ಪತ್ರೆ ರಾಯಚೂರದಲ್ಲಿ ತಂದು ಸೇರಿಕೆ ಮಾಡಿರುತ್ತಾರೆ ಈ ವಿಷಯ ನನಗೆ ಮಲ್ಲಣ್ಣ ಇತನು ಪೋನ್ ಮಾಡಿ ತಿಳಿಸಿದ್ದರಿಂದ ನಾನು ಶಿವಂ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಉಪಚಾರ ಪಡೆಯುತಿದ್ದು ಆಕೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಆಕೆಯ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ಕೊಟ್ಟ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ವಿಷ ಸೇವನೆ ಮಾಡಿರುತ್ತಾಳೆ
    ಕಾರಣ ನನ್ನ ಅಕ್ಕನ ಮಗಳ ಜೊತೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು   ದೈಹಿಕ ಮತ್ತು ಮಾನಸಿಕ ಹಿಂಸೆ ನಿಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ಹೆಳಿ ಲ್ಯಾಪ್ ಟ್ಯಾಪ್ ನಲ್ಲಿ ಗಣಕೀಕರಣ ಮಾಡಿಸಿದ ಹೇಳಿಕೆ ಇರುತ್ತದೆ
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 154/2017  ಕಲಂ: 110(ಇ&ಜಿ) ಸಿ.ಆರ್.ಪಿ.ಸಿ);- ದಿನಾಂಕ 11/05/2017 ರಂದು 10-15 ಎ.ಎಮ್ ಕ್ಕೆ ಶ್ರೀ ವೆಂಕಣ್ಣ ಎ.ಎಸ್.ಐ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಪೆಟ್ರೋಲಿಂಗ್ ಕರ್ತವ್ಯ ಕುರಿತು ಶಹಾಪೂರ ನಗರದಲ್ಲಿ ಹೊರಟು 9-45 ಗಂಟೆಯ ಸುಮಾರಿಗೆ ಬಸವೇಶ್ವರ ವೃತ್ತದ ಹತ್ತಿರ ಬಂದಾಗ ವೆಂಕಟೇಶ್ವರ ಹೊಟೇಲ್ ಮುಂಭಾಗದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ ಒಂದು ಕೈ ನೋಡೆ ಬಿಡುತ್ತೇನೆ ಅಂತಾ ರೌಡಿ ಪ್ರವೃತ್ತಿ ಪ್ರದಶರ್ಿಸಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿತ್ತಿರುವದನ್ನು ಕಂಡು ಅವನ ಹತ್ತಿರ ಹೋಗಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ತನ್ನ ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಹಿಡಿದುಕೊಂಡು ಮರಳಿ ಠಾಣೆಗೆ ಬಂದು ವರದಿ ತಯ್ಯಾರಿಸಿ 10-15 ಎ.ಎಮ್ ಕ್ಕೆ ಒಪ್ಪಿಸಿ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ. 154/2017 ಕಲಂ. 110(ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.          
 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ: 279, 304(ಎ) ಐಪಿಸಿ ;- ದಿನಾಂಕ 11/05/2017 ರಂದು 7.30 ಎ.ಎಮ್ಕ್ಕೆ ಅಜರ್ಿದಾರರಾದ ಶ್ರೀ ಬಸವರಾಜ ತಂದೆ ಸಾಯಬಣ್ಣ ನಾಯ್ಕೋಡಿ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 30/04/2017 ರಂದು 6 ಪಿಎಮ್ ಸುಮಾರಿಗೆ ಬಸವರಾಜನ ಅಣ್ಣನ ಮಗನಾದ ಮೃತ ಸಾಯಬಣ್ಣ ತಂದೆ ಈರಪ್ಪ ನಾಯ್ಕೋಡಿ ವಯಾ|| 28 ವರ್ಷ ಜಾ|| ಕುರುಬರ ಈತನು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಪರಸನಳ್ಳಿಯಿಂದ ಕೆಂಭಾವಿಗೆ ತನ್ನ ಮೋಟಾರ ಸೈಕಲ್ ನಂ ಕೆಎ 33 ಕೆ 3381 ನೇದ್ದರಲ್ಲಿ ಮೋಟಾರ ಸೈಕಲನ್ನು ತಾನೇ ಸ್ವತ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಕೆಂಭಾವಿ ಪರಸನಳ್ಳಿ ರಸ್ತೆಯ ಸದಾನಂದ ಬಾಬಾ ಮಹಾರಾಜರ ಮಠದ ಹತ್ತಿರ ರಸ್ತೆಯ ಮೇಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೆಂಭಾವಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 10/05/2017 ರಂದು ರಾತ್ರಿ 10.15 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 74/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!