Yadgir District Reported Crimes
ಯಾದಗಿರಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ 379
ಐಪಿಸಿ;- ದಿನಾಂಕ 30/04/2017 ರಂದು 11-30 ಎಎಂಕ್ಕೆ ಶ್ರೀ ಸುನೀಲ. ವ್ಹಿ. ಮೂಲಿಮನಿ ಪಿ.ಎಸ್.ಐ ಸಾಹೇಬರು ಯಾದಗಿರಿ ನಗರ ಠಾಣೆಗೆ
ಬಂದು ಮುದ್ದೆಮಾಲು ಸಮೇತ ಒಂದು ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸಿದ್ದರ
ಸಾರಾಂಶವೆನೆಂದರೆ ಇಂದು ದಿನಾಂಕ: 30/04/2017 ರಂದು ನಾನು ಮತ್ತು ಸಂಗಡ ಸಿಬ್ಭಂದಿಯವರಾದ ಮಹಾಂತೇಶ ಎಪಿಸಿ-48, ಜೀಪ ಚಾಲಕ ಹಾಗೂ ಪ್ರಕಾಶ ಪಿಸಿ-303 ರವರನ್ನು ಕರೆದುಕೊಂಡು ಯಾದಗಿರಿ ನಗರ ದಲ್ಲಿ
ಪೆಟ್ರೊಲಿಂಗ ಕರ್ತವ್ಯ ಕುರಿತು ಪೊಲೀಸ್ ಠಾಣೆಯಿಂದ ಬೆಳಿಗ್ಗೆ 10-00 ಎ.ಎಂಕ್ಕೆ ಸಕರ್ಾರಿ ಜೀಪ ನಂ.ಕೆಎ-32-ಜಿ-416
ನೇದ್ದರಲ್ಲಿ ಹೊರಟು ಹತ್ತಿಕುಣಿ ಕ್ರಾಸ್ ಮೂಲಕ ಗಂಗಾನಗರ ಹತ್ತಿರ ಹೋಗುತ್ತಿರುವಾಗ ಗಂಗಾನಗರ-ವಾಡಿ ಬೈಪಾಸ ರೋಡಿನ ಕ್ರಾಸಿನಲ್ಲಿ 10-30 ಎಎಂ ಸುಮಾರಿಗೆ ಒಬ್ಬನು ಒಂದು ಟ್ರ್ಯಾಕ್ಟರದಲ್ಲಿ
ಮರಳು ತುಂಬಿಕೊಂಡು ಬರುತ್ತಿದ್ದು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಟ್ರ್ಯಾಕ್ಟರನ್ನು
ಬಿಟ್ಟು ಓಡಿ ಹೋದನು. ನಾವು ಟ್ರ್ಯಾಕ್ಟರ ಹತ್ತಿರ
ಹೋಗಿ ನೋಡಲಾಗಿ ಟ್ರ್ಯಾಕ್ಟರದ ಟ್ರಾಲಿಯಲ್ಲಿ ಉಸುಕು ತುಂಬಿದ್ದು ಟ್ರ್ಯಾಕ್ಟರ ಇಂಜಿನ್ ನಂಬರ
ಕೆಎ-33-ಟಿಎ-2655 ಇದ್ದು ಮತ್ತು ಟ್ರ್ಯಾಲಿ ನಂ.ಕೆಎ-33-ಟಿ-1675 ಇದ್ದು ಚಾಲಕನು ಓಡಿ ಹೋಗಿದ್ದರಿಂದ ಹೆಸರು ಗೊತ್ತಾಗಿರುವುದಿಲ್ಲಾ. ಟ್ರ್ಯಾಕ್ಟರ ಚಾಲಕ
ಮತ್ತು ಮಾಲಿಕ ಕೂಡಿಕೊಂಡು ಆಕ್ರಮವಾಗಿ ಮರಳನ್ನು ಕದ್ದು, ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು
ಮರಳು ತುಂಬಿದ ಟ್ರ್ಯಾಕ್ಟರನ್ನು ಮಹಾಂತೇಶ
ಎಪಿಸಿ-48 ರವರ ಸಹಾಯದಿಂದ ಠಾಣೆಗೆ 11-00 ಎಎಮ್ ಕ್ಕೆ ನಗರ ಪೊಲೀಸ್ ಠಾಣೆಗೆ ಬಂದು ಠಾಣೆಯ ಮುಂದೆ
ತಂದು ನಿಲ್ಲಿಸಿದ್ದು ಠಾಣೆಯ ಗಣಕಯಂತ್ರ ಸಿಬ್ಬಂದಿಯಾದ ಮೊನಪ್ಪ ಪಿಸಿ-263 ಇವರಿಂದ ಕಂಪ್ಯೂಟರನಲ್ಲಿ ವರಧಿಯನ್ನು ಮಾಡಿಸಿ, ನಾನು
ಸಹಿ ಮಾಡಿ ಸದರಿ ನನ್ನ ವರದಿಯನ್ನು 11-30 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ
ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ಮುಂದಿನ ಕ್ರಮಕ್ಕಾಗಿ ವರದಿ ಕೊಟ್ಟಿದ್ದರ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ.65/2017
ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 71/2017 ಕಲಂ. 392
ಐಪಿಸಿ;- ದಿನಾಂಕ 30.04.2017 ರಂದು 4
ಪಿ.ಎಮ್ಕ್ಕೆ ಫಿರ್ಯಾದಿ ಶ್ರೀ ವೇಂಕಟೇಶ ತಂ. ನರಸಿಂಹಲು ಜಾಂಗ ವಃ 29 ಜಾಃ ಕಬ್ಬಲಿಗ ಉಃ ಚಾಲಕ ಸಾಃ ತಿಪ್ಪರಾಜ ಪಲ್ಲಿ, ಮಂಡಲಃ ಉಟ್ಕೂರ, ತಾಃ ನಾರಾಯಣಪೇಠ ಜಿಃ ಮಹಿಬೂಬ ನಗರ (ತೆಲಂಗಾಣ) ಇವರು ಠಾಣೆಗೆ
ಹಾಜರಾಗಿ ಹೇಳಿಕೆ ಕೊಟ್ಟಿದರ ಸಾರಾಂಶವೆನೇಂದರೆ, ನಾನು ಮೇಲ್ಕಂಡ ವಿಳಾಸದವನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಇರುತ್ತೇನೆ. ಹೀಗಿದ್ದು
ಇಂದು ದಿನಾಂಕ 30.04.2017 ರಂದು
ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನನ್ನ
ಮತ್ತು ನಮ್ಮೂರಿನ ನರಸಿಂಹಲು ತಂದೆ ನರಸಿಂಗಪ್ಪ ಮಾಡಗಾರಿ ಮತ್ತು ಅವನ ಚಿಕ್ಕಪ್ಪನಾದ ಉಷಪ್ಪ ತಂದೆ
ಆಶಪ್ಪ ಮಾಡಗಾರಿ ಇವರ ಹತ್ತಿ ಮಾರಾಟ ಕುರಿತು ನನ್ನ ಟಾಟಾ ಎ.ಸಿ.ಇ ಗೂಡ್ಸ ಟಂ ಟಂ ನಂ: ಎಪಿ-22-ಎಕ್ಸ್-7653 ರಲ್ಲಿ ಹಾಕಿಕೊಂಡು ನಾನು ಮತ್ತು ನರಸಿಂಹಲು ಇಬ್ಬರು ಕೂಡಿಕೊಂಡು
ಯಾದಗಿರಿಗೆ ಬಂದು, ಶ್ರೀ ರಾಜೇಂದ್ರ
ಆಗ್ರೋ ಇಡಸ್ಟ್ರೀಜ್ನಲ್ಲಿ ಹತ್ತಿ ಮಾರಾಟ ಮಾಡಿದ್ದು, ನನ್ನದು ಒಟ್ಟು
ಹತ್ತಿ 8 ಕ್ವಿಂಟಲ್ 60 ಕೆಜಿ ಆಗಿದ್ದು ಹತ್ತಿ ಮಾರಾಟದಿಂದ ಬಂದ ಹಣ 47,536/-
ರೂ ಮತ್ತು ನರಸಿಂಹಲು ಈತನ 3 ಕ್ವಿಂಟಲ್ 10 ಕೆಜಿ ಒಟ್ಟು 17300/- ರೂ ಹಾಗೂ ಅವರ ಚಿಕ್ಕಪ್ಪ ಉಷಪ್ಪನ ಹತ್ತಿ 25 ಕೆಜಿಗೆ 1500/- ರೂ ಪಟ್ಟಿ ಮತ್ತು ಹಣ ತೆಗೆದುಕೊಂಡು ಮರಳಿ ನಮ್ಮೂರಿಗೆ ಹೋಗುವ
ಕುರಿತು ನನ್ನ ಮೇಲ್ಕಂಡ ಟಾಟಾ ಎ.ಸಿ.ಇ ನೇದ್ದರಲ್ಲಿ ನಾನು ಮತ್ತು ನರಸಿಂಹಲು ಇಬ್ಬರು ಯಾದಗಿರಿ
ದಿಂದ ಮಧ್ಯಾಹ್ನ 12-00 ಗಂಟೆಯ
ಸುಮಾರಿಗೆ ಹೊರಟೆವು. ದಾರಿ ಮಧ್ಯದಲ್ಲಿ ಬರುವ ರಾಮಸಮುದ್ರ ಗ್ರಾಮದಲ್ಲಿ ಅರ್ದ ಡಜನ್ ಬಾಳೆ ಹಣ್ಣು
ತೆಗೆದುಕೊಂಡು ತಿನ್ನುತ್ತ ನಾರಾಯಣಪೇಟ್ ಕಡೆಗೆ ಹೋಗುತ್ತಿರುವಾಗ ಅರಕೇರಾ(ಕೆ) ಗೇಟ್ ಇನ್ನು
ಮುಂದೆ ಇರುವಂತೆ ನೀರಿನ ಫಿಲ್ಟರ್ ಬೆಡ್ ಹತ್ತಿರ ರೋಡಿನ ಮೇಲೆ ಒಬ್ಬನು ನಮ್ಮ ಗಾಡಿಗೆ ಕೈ ಮಾಡಿ ನಿಲ್ಲುವಂತೆ
ಸೂಚನೆ ಮಾಡುತ್ತಿರುವಾಗ ನಾನು ನನ್ನ ಟಾಟಾ ಎ.ಸಿ.ಇ ನಿಲ್ಲಿಸಿದೆನು. ನೋಡಿದರೆ ಅವರು ಆಫಿಸರ್ ತರಹ
ಕಾಣಿಸುತ್ತಿದ್ದರು. ನಾವು ಯಾರೋ ಆಫಿಸರ್ ಇರಬಹುದು ಅಂತಾ ತಿಳಿದು ನಾನು ಮತ್ತು ನರಸಿಂಹಲು
ಇಬ್ಬರು ಗಾಡಿಯಿಂದ ಕೆಳಗೆ ಇಳಿದಾಗ ಅಲ್ಲಿ ಒಂದು ಸಿಲವರ್ ಬಣ್ಣದ ಸ್ವೀಫ್ಟ್ ಕಾರ್ ನಾರಾಯಣಪೇಟ್
ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು ಅದರಲ್ಲಿ ಕೂಡ ಇಬ್ಬರು ವ್ಯಕ್ತಿಗಳು ಕುಳಿತ್ತಿದ್ದರು. ಕೆಳಗೆ
ನಿಂತಿದ್ದ ಒಬ್ಬನು ನನಗೆ ನಿನ್ನ ಐಡೆಂಟಿ ಕಾಡರ್್ ಮತ್ತು ಲೈಸನ್ಸ್ ತೋರಿಸು ಅಂತಾ ಕೇಳಿದನು.
ನಾನು ನನ್ನ ಹತ್ತಿರ ಏನು ಇಲ್ಲ ಅಂತಾ ಹೇಳಿದೆನು. ಆಗ ಅವನು ಒಮ್ಮೇಲೆ ನನ್ನ ಪ್ಯಾಂಟಿನ ಹಿಂದಿನ
ಜೇಬಿಗೆ ಕೈ ಹಾಕಿ ನನ್ನ ಪಸರ್್ ಮತ್ತು ಅದರೊಳಗಿದ್ದ ಹತ್ತಿ ಮಾರಾಟದಿಂದ ಬಂದ ಹಣ 47,536/-
ರೂ ಮತ್ತು ನನ್ನ ಹತ್ತಿರ ಈ ಮುಂಚೆ ಇದ್ದ 5000/-
ರೂ ಒಟ್ಟು 52,536/- ರೂ.ಗಳನ್ನು ಕಿತ್ತಿಕೊಂಡನು. ನಂತರ ನರಸಿಂಹಲು ಈತನ
ಜಾಂಗ್(ಚಡ್ಡಿ) ಜೇಬಿಗೆ ಕೈ ಹಾಕಿ ಪಟ್ಟಿ ಮತ್ತು ಹತ್ತಿ ಮಾರಾಟದಿಂದ ಬಂದ ಹಣ 17300/- ರೂ ಮತ್ತು ಅವನ ಚಿಕ್ಕಪ್ಪನ ಹತ್ತಿ ಮಾರಾಟದಿಂದ ಬಂದ ಹಣ
1500/- ರೂ ಒಟ್ಟು 18,800/- ರೂ ಗಳು ಮತ್ತು ಹತ್ತಿ ಮಾರಾಟದ ಪಟ್ಟಿಗಳನ್ನು
ಕಿತ್ತಿಕೊಂಡನು. ನಾವು ಅವನಿಗೆ ಯಾಕೆ ದುಡ್ಡು ಕಿತ್ತುಕೊಂಡಿ ಕೊಡು ಅಂತಾ ಕೇಳಿದಕ್ಕೆ ಅವನು
ನಾರಾಯಣಪೇಟ್ಗೆ ಬಾ ಅಲ್ಲೇ ಕೊಡುತ್ತೇವೆ ಅಂತಾ ಕಾರಿನಲ್ಲಿ ಕುಳಿತುಕೊಳ್ಳುತ್ತಿರುವಾಗ ನಾವು ಕೂಡ
ನಿಮ್ಮ ಕಾರಿನಲ್ಲಿಯೇ ಬರುತ್ತೇವೆ ಅಂತಾ ಅಂದಾಗ ಅವನು ನೀನು ಆಫಿಸರ್ ಏನ್ ಲೇ ರಂಡಿ ಮಗನೆ ಅಂತಾ
ಅವಾಚ್ಯಾವಾಗಿ ಬೈದು ತಮ್ಮ ಕಾರಿನಲ್ಲಿ ನಾರಾಯಣಪೇಟ್ ರೋಡಿನ ಮೇಲೆ ಹೋದರು. ಯಾವ ಕಡೆಗೆ ಹೋದರು
ಅಂತಾ ಗೊತ್ತಾಗಿರುವುದಿಲ್ಲ ಮತ್ತು ಕಾರಿಗೆ ನೊಂದಣಿ ಸಂಖ್ಯೆ ಇರಲಿಲ್ಲ ಸದರಿ 3 ಜನರು 35 ರಿಂದ 40
ರ ವಯಸ್ಸಿನೊಳಗಿನವರಿದ್ದು ಸಾದಾ ನೀಲಿ ಜೀನ್ಸ್ ಪ್ಯಾಂಟ್ ಮತ್ತು ಬಿಳಿ ಚಕ್ಸ್ ಶಟರ್್ ಧರಿಸಿದ್ದು
ಕನ್ನಡದಲ್ಲಿ ಮಾತನಾಡುತ್ತಿದ್ದನು. ಅವರಿಗೆ ಬೆನ್ನು ಹತ್ತಿದರು ಕೂಡ ಸಿಕ್ಕಿರುವುದಿಲ್ಲ. ಸದರಿ
ಘಟನೆಯು ಮಧ್ಯಾಹ್ನ 12-30 ಗಂಟೆ
ಸುಮಾರಿಗೆ ಜರುಗಿದ್ದು ಇರುತ್ತದೆ. ಅವರಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಕಾರಣ ನಾವು ಹತ್ತಿ
ಮಾರಾಟ ಮಾಡಿ ಬಂದ ಹಣ 71,336/- ರೂ
ಗಳನ್ನು ಬಲವಂತವಾಗಿ ನಮ್ಮ ಕಿಸೆಯಿಂದ ಕಿತ್ತಿಕೊಂಡು ಹೋದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ
ಜರುಗಿಸಿರಿ ಅಂತಾ ನಾನು ತೆಲುಗು ಭಾಷೆಯಲ್ಲಿ ಹೇಳಿದ ಹೇಳಿಕೆಯನ್ನು ಪಿ.ಎಸ್.ಐ ಸಾಹೇಬರು
ಕನ್ನಡದಲ್ಲಿ ಅನುವಾದ ಮಾಡಿಕೊಂಡು ಮಹ್ಮದ ಶರೀಫ್ ಪಿಸಿ-226 ರವರು ಗಣಕಯಂತ್ರದಲ್ಲಿ ನನ್ನ ಫಿರ್ಯಾಧಿಯನ್ನು ಟೈಪ್
ಮಾಡಿರುತ್ತಾರೆ ಅಂತಾ ಕೊಟ್ಟ ಫಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 71/2017 ಕಲಂ: 392 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 72/2017
ಕಲಂ: 323.324.504.506.
ಸಂ/34 ಐ.ಪಿ.ಸಿ;- ಪಿಯರ್ಾಧಿ
ಮತ್ತು ಆರೋಪಿತರು ಖಾಸ ಅಣ್ಣತಮ್ಮಂದಿರಿದ್ದು ಸುಮಾರು ವರ್ಷಗಳಿಂದ ಜಮೀನು ಹಂಚಿಕೆಯಲ್ಲಿ ಫಿ|ಗೆ ಸರಿಯಾಗಿ ಪಾಲು ಸಿಕ್ಕಿಲ್ಲ ಅಂತ ಅನೇಕ ಸಲ ತಕರಾರು
ಮಾಡಿಕೊಂಡಿದ್ದು ಇರುತ್ತದೆ. ದಿನಾಂಕ: 28.04.2017 ರಂದು ಮದ್ಯಾಹ್ನ 3 ಗಂಟೆಗೆ ಪಿರ್ಯಾಧಿ ತನ್ನ ಕವಳಿ ಗದ್ದೆಗೆ ಕವಳಿ ಕಟಾವು ಮಾಡಲು
ಮಸೀನ ತೆಗೆದುಕೊಂಡು ಹೋಗಿದ್ದು ಕವಳಿ ಕಟಾವು ಮಾಡುವಾಗ
ಆರೋಪಿತರ ಹೊಲದಲ್ಲಿದ್ದ ಮಸೀನಿನಿಂದ ಸೋಲಾರ ತಂತಿಯು ಹರಿದು ಹೋಗಿದ್ದರಿಂದ ಪಿರ್ಯಾಧಿ ಹೊಲವನ್ನು ಪಾಲಿಗೆ ಮಾಡಿದ ವ್ಯಕ್ತಿಗೆ
ಆರೋಪಿ ಸಾಬಣ್ಣ ಈತನು ಬೈದಿದಕ್ಕೆ ಫೀ|| ಯಾಕೆ
ಬೈಯುತ್ತಿದ್ದಿ ಅಂತ ಕೇಳಿದ್ದಕ್ಕೆ ಜಗಳ ಮಾಡಿ ಬಡಿಗೆಯಿಂದ ಕೈಯಿಂದ ಹೊಡೆದು ಅವ್ಯಾಚವಾಗಿ ಬೈದು
ಜೀವದ ಭಯ ಹಾಕಿದ್ದು ಅಲ್ಲದೇ ಪಿರ್ಯಾಧಿಯ ಹೆಂಡತಿಗೂ ಕೂಡ ಅವ್ಯಾಚವಾಗಿ ಬೈದು ಹೊಡೆಬಡೆ ಮಾಡಿದ
ಬಗ್ಗೆ ಪ್ರಕರಣ
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ 379
ಐ.ಪಿ.ಸಿ ಮತ್ತು 21(3), 21(4), 22 ಎಮ್ಎಮ್ಡಿಆರ್ ಎಕ್ಟ್ ;- ದಿನಾಂಕ:30/04/2017 ರಂದು 2.00 ಪಿಎಮ್ ಸುಮಾರಿಗೆ ಯಮನೂರು ಗ್ರಾಮದ ಪಂಚಾಯತಿ ಕಛೇರಿ ಮುಂದೆ ರೋಡಿನಲ್ಲಿ ಕೃಷ್ಣಾ ನದಿ
ದಂಡೆಯಿಂದ ಆರೋಪಿತನು ತನ್ನ ಟಿಪ್ಪರದಲ್ಲ್ಲಿ ಸಕರ್ಾರದಿಂದ ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ರಾಜಧನ ಕಟ್ಟದೇ ಅಕ್ರಮವಾಗಿ ಮರಳನ್ನು
ತುಂಬಿಕೊಂಡು ಸಾಗಿಸುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ
ದಾಳಿ ಮಾಡಿ ಹಿಡಿದು ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆರೋಪಿತನ ವಿರುಧ್ಧ ಸೂಕ್ತ
ಕಾನೂನು ಕ್ರಮ ಜರುಗಿಸಿದ ಬಗ್ಗೆ.
ನಾರಾಯಣಪೂರ
ಪೊಲೀಸ್ ಠಾಣೆ ಗುನ್ನೆ ನಂ. 21/2017 ಕಲಂ: 143, 147, 341, 323, 354,
504, 506 ಸಂ 149 ಐ.ಪಿ.ಸಿ. ;- ದಿನಾಂಕ:27/04/2017ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ತನ್ನ ಗಂಡನೊಂದಿಗೆ ಹೊರಟ್ಟಿ
ಸೀಮಾಂತರದಲ್ಲಿರುವ ತಮ್ಮ ಹೊಲದ ಕಡೆಗೆ ಹೋಗುತ್ತಿದ್ದಾಗ ಬಂದ ಹೊರಟ್ಟಿ ಗ್ರಾಮದವರಾದ ಆರೋಪಿತರು
ಪಿರ್ಯಾದಿಗೆ ಎನಲೇ ಭೋಸೂಡಿ ಸೂಳಿ ನಿನ್ನ ಹೊಲಕ್ಕೆ ಹೋಗಲು ಇಲ್ಲಿ ದಾರಿ ಇಲ್ಲ ನಾನು ಕೋರ್ಟನಿಂದ ಸ್ಟೇ
ತಂದಿದ್ದೇನೆ ಇವತ್ತಿನಿಂದ ನೀವು ಈ ದಾರಿಯಿಂದ ತಿರುಗಾಡ ಬ್ಯಾಡ ಅಂತಾ ಬೈದು ಜಗಳ ತೆಗೆದು ಸೀರೆ
ಹಿಡಿದು ಜಗ್ಗಾಡಿ ಕೈಯಿಂದ ಹೊಡೆ-ಬಡೆ ಮಾಡಿ ಜೀವ ಬೇಧರಿಕೆ ಹಾಕಿರುತ್ತಾರೆ ಅಂತಾ ಪಿರ್ಯಾದಿಯ
ಲಿಖಿತ ದೂರಿನ ಸಾರಾಂಶ ಇರುತ್ತದೆ.
ದಿನಾಂಕ 01/05/2017 ರಂದು
ಬೆಳಿಗ್ಗೆ 7-15 ಎ.ಎಂ ಕ್ಕೆ ಚಾಮನಳ್ಳಿ
ಗ್ರಾಮದ ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 70/2017
ಕಲಂ 379
ಐ.ಪಿ.ಸಿ;-
ಹಳ್ಳದಲ್ಲಿ ಆರೋಪಿತರು ತಮ್ಮ ಒಂದು
ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-3165 ಮತ್ತು ಟ್ರ್ಯಾಲಿ ನಂ ಕೆಎ-33-ಟಿಎ-0725 ನೆದ್ದರಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬರುವಾಗ ರಾಚೋಟಿ
ವೀರಣ್ಣ ದೇವರ ಕ್ರಾಸ್ ಹತ್ತಿರ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಪಂಚರ ಸಮಕ್ಷಮ ಒಂದು ಮರಳು ತುಂಬಿದ
ಟ್ಯ್ರಾಕರನ್ನು ವಶಪಡಿಸಿಕೊಂಡಿದ್ದು, ಮುಂದಿನ
ಕ್ರಮಕ್ಕಾಗಿ ಠಾಣೆಗೆ ಬಂದು ವರದಿ, ಜಪ್ತಿ
ಪಂಚನಾಮೆಯ ಸಾರಂಶದ ಮೇಲಿನಂತೆ ಗುನ್ನೆ
ದಾಖಲಾಗಿದ್ದು ಇರುತ್ತದೆ,
Hello There!If you like this article Share with your friend using