Yadgir District Reported Crimes

By blogger on ಬುಧವಾರ, ಏಪ್ರಿಲ್ 12, 2017



Yadgir District Reported Crimes
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ: 324, 323, 302 ಸಂಗಡ 34 ಐ.ಪಿ.ಸಿ;- ದಿನಾಂಕ 08-04-2017 ರಂದು 6 ಪಿಎಮ್ಕ್ಕೆ ಕಲಬುರಗಿ ಬಸವೇಶ್ವರ ಆಸ್ಪತ್ರೆಯಿಂದ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ದಿ:08/04/17 ರಂದು 9 ಪಿಎಮ್ಕ್ಕೆ ಭೆಟಿ ನೀಡಿ ಅಲ್ಲಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ತಂದೆ ಶಾಂತಗೌಡ ಇವರು ಅಜರ್ಿ ನೀಡಿದ್ದು ಸಾರಾಂಶವೇನೆಂದರೆ, ನನ್ನ ಮಗನಾದ ಗುರುಪ್ರಸಾದ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ಕೆಲಸದ ಆಯಾಸದಲ್ಲಿ ದೈನಂದಿನವಾಗಿ ಸ್ವಲ್ಪ ಮದ್ಯಪಾನ ಸೇವಿಸಿ ದಣಿವಾರಿಸಿಕೊಳ್ಳುತ್ತಿದ್ದನು ಹೀಗಿದ್ದು ನಿನ್ನೆ ದಿ:07/04/17 ರಂದು ಮುಂಜಾನೆ ನನ್ನ ಮಗನಿಗೆ ಟ್ರಾಕ್ಟರ ಕಂತು ಕಟ್ಟಿಬರಲು ಹಣಕೊಟ್ಟು ಕಳುಹಿಸಿದ್ದು, ಗುರುಪ್ರಸಾದನು ಸಾಯಂಕಾಲವಾದರೂ ಮನೆಗೆ ಬಂದಿರಲಿಲ್ಲ ಆಗ ಗವಾರಮಾ ಇವಳು ಸಾಯಂಕಾಲ 7 ಗಂಟೆಗೆ ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ನಿಮ್ಮ ಮಗ ಗುರುಪ್ರಸಾದನು ಕುಡಿದು ನಶೆಯಲ್ಲಿ ನಮ್ಮ ಮನೆಯಲ್ಲಿಯೇ ಮಲಗಿದ್ದಾನೆಅಂತ ಹೇಳಿದಾಗ ನಾವು ಗುರುಪ್ರಸಾದನ ಹತ್ತಿರ ಹೋಗಿ ನೋಡಲಾಗಿ ಅವನ ಮೈ ತೇವಾಂಶವಾಗಿದ್ದುಮತ್ತು ಎರಡೂ ಪಾದಗಳಿಗೆ ಒಲೆಯ ಬೂದಿಹಚ್ಚಿದ್ದು ಕಂಡುಬಂದಿತು ಆಗ ನಮಗೆ ಸಂಶಯ ಬಂದು ನನ್ನ ಮಗನಿಗೆ ಎಬ್ಬಿಸಲಾಗಿ ಅವನು ಏಳಲಿಲ್ಲಾ ಪ್ರಜ್ಞಾಹೀನನಾಗಿದ್ದನು. ಆಗ ನಮಗೆ ಕಂಡುಬಂದಿದ್ದೇನೆಂದರೆ ಆರೋಪಿತರು ನನ್ನ ಮಗನಿಗೆ ಕೈಯಿಂದ ಮೈಮೇಲೆ ಹೊಡೆದು, ತಲೆಯನ್ನು ಗೋಡೆಗೆ ಇರಿದು ಹಾಗೂ ಹೊಟ್ಟೆಗೆ ಕೈಯಿಂದ ಗುದ್ದಿದ್ದು ತಲೆಗೆ ಒಳಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದ್ದು ಇರುತ್ತದೆ ಆಗ ನಾವು ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ದಾಖಲುಮಾಡಿರುತ್ತೇವೆ ಅಂತ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 47/2017 ಕಲಂ: 323, 324, ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
        ಇಂದು ದಿನಾಂಕ:12/04/2017 ರಂದು 11:00 ಎ.ಎಮ್.ಕ್ಕೆ ಸದರಿ ಪ್ರಕರಣದ ಫಿಯರ್ಾದಿ ಶಾಂತಗೌಡ ತಂದೆ ಗುರುಬಸಪ್ಪಗೌಡ ಯೆವೂರಕರ ವಯಾ||65ಜಾ|| ರಡ್ಡಿ ಸಾ||ಯಡಿಯಾಪುರಇವರು ಠಾಣೆಗೆ ಹಾಜರಾಗಿ ಅಜರ್ಿ ಹಾಜರಪಡಿಸಿದ್ದೇನೆಂದರೆ, ಗಾಯಗೊಂಡ ತನ್ನ ಮಗನಾದ ಗುರುಪ್ರಸಾದ ತಂದೆ ಶಾಂತಗೌಡ ಯೆವೂರಕರ ವಯಾ||35 ಜಾ||ಹಿಂದೂ ರಡ್ಡಿ ಉ|| ಒಕ್ಕಲುತನ ಸಾ|| ಯಡಿಯಾಪುರ ಈತನಿಗೆ ಉಪಚಾರಕ್ಕಾಗಿ ಗುಲಬಗರ್ಾದ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ನಂತರ ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ದಿನಾಂಕ:10/04/2017 ರಂದು ಮನೆಗೆ ಕರೆದುಕೊಂಡು ಬಂದಿದ್ದು, ಇಂದು ಬೆಳಗ್ಗೆ 03 ಗಂಟೆಯ ಸುಮಾರಿಗೆ ನನ್ನ ಮಗನಾದ ಗುರುಪ್ರಸಾದ ಈತನು ಮೃತಪಟ್ಟಿರುತ್ತಾನೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಮೇರೆಗೆ ಸದರಿ ಪ್ರಕರಣದಲ್ಲಿ ಕಲಂ:302 ಐ.ಪಿ.ಸಿ. ಅಳವಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಿದ್ದು ಇರುತ್ತದೆ.
 ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 48/2017 ಕಲಂ: 110(ಇ)&(ಜಿ) ಸಿ.ಆರ್.ಪಿ.ಸಿ ;- ಸದರಿ ವ್ಯಕ್ತಿಯು  ಕೆಂಭಾವಿ ಪಟ್ಟಣದ ಸಂಜೀವ ನಗರ ಕ್ರಾಸ್ ಹತ್ತಿರ ಹೋಗಿ ಬರುವ ಸಾರ್ವಜನಿಕರಿಗೆ  ತೊಂದರೆ ಕೊಡುತ್ತಿದ್ದು, ಈತನನ್ನು ಹಾಗೇ ಬಿಟ್ಟಲ್ಲಿ ಸಾರ್ವಜನಿಕರ ಶಾಂತತೆ ಭಂಗ ಉಂಟು ಮಾಡುವ ಸಂಭವ ಇರುವದರಿಂದ ಈತನನ್ನು ಹಿಡಿದು ಮುಂಜಾಗ್ರತೆ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 59/2017 ಕಲಂ 379 ಐ.ಪಿ.ಸಿ;- ದಿನಾಂಕ 11/04/2017 ರಂದು ಬೆಳಿಗ್ಗೆ 10-00 ಎ.ಎಂ ಕ್ಕೆ ಮಲ್ಹಾರ ಗ್ರಾಮದ ನದಿಯಲ್ಲಿ ಆರೋಪಿತರು ತಮ್ಮ ಒಂದು ಟ್ಯ್ರಾಕ್ಟರ ನಂ ಕೆ.ಎ-33-ಟಿಎ-5329 ಮತ್ತು ಟ್ರ್ಯಾಲಿ ನಂ ಕೆ.ಎ-33-ಟಿಎ-5330 ನೆದ್ದರಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬರುವಾಗ ಮಲ್ಹಾರ ಗ್ರಾಮದ ನದಿಯಲ್ಲಿ ಸಿಬ್ಬಂಧಿಯವರ ಸಹಾಯದಿಂದ  ದಾಳಿ ಮಾಡಿ ಪಂಚರ ಸಮಕ್ಷಮ ಒಂದು ಮರಳು ತುಂಬಿದ ಟ್ಯ್ರಾಕರನ್ನು ವಶಪಡಿಸಿಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ವರದಿ, ಜಪ್ತಿ ಪಂಚನಾಮೆಯ ಸಾರಂಶದ  ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 51/2017ಕಲಂ 279, 304(ಎ) ಐಪಿಸಿ ಮತ್ತು ಕಲಂ 187 ಐ.ಎಂ.ವಿ ಆ್ಯಕ್ಟ್;- ದಿನಾಂಕ 11/04/2017 ರಂದು ಸಾಯಂಕಾಲ 6 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀಮತಿ ಲಕ್ಷ್ಮೀ ಗಂಡ ಮಲ್ಲಪ್ಪ ಬಾಗಲಕೋಟೇರ ಸಾ;ವಡಗೆರಾ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಫಿಯರ್ಾದು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಹೊಲಮನಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮ ತಂದೆ ತಾಯಿಗೆ ಒಟ್ಟು 05 ಜನ  ಮಕ್ಕಳಿದ್ದು ಅವರಲ್ಲಿ ಒಬ್ಬ ಗಂಡು ಮತ್ತು  ನಾಲ್ಕು ಜನ  ಹೆಣ್ಣು ಮಕ್ಕಳಿರುತ್ತೇವೆ. ನನ್ನ ತಮ್ಮನಾದ ಸಂಗಪ್ಪ ಮತ್ತು ಆತನ ಹೆಂಡತಿ ಕೂಲಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿರುತ್ತಾರೆ. ನನ್ನ ತಮ್ಮ ಸಂಗಪ್ಪನ ಮಗನಾದ ಕುಮಾರ ವಿಶ್ವಾರಾಧ್ಯ ವಯಸ್ಸು 11 ವರ್ಷ, ಈತನಿಗೆ ನಮ್ಮೂರಿನ ಮಾರಿಕಾಂಬಾ ದೇವಿಯ  ಜಾತ್ರೆಯ ಪ್ರಯುಕ್ತ ಕರೆಯಿಸಿಕೊಂಡಿದ್ದೆವು. ವಡಗೇರಾ ಗ್ರಾಮದ ಶುಗರ್ ಪ್ಯಾಕ್ಟರಿ ಹತ್ತಿರ ನಮ್ಮ ಹೊಲವಿದ್ದು, ಆ ಹೊಲದಲ್ಲಿಯೇ  ನಮ್ಮ ಮನೆಯನ್ನು ನಿಮರ್ಿಸಿಕೊಂಡು ಅಲ್ಲೇ ವಾಸವಾಗಿರುತ್ತೇವೆ. ಹೀಗಿದ್ದು ಇಂದು ದಿನಾಂಕ 11/04/2017 ರಂದು ಸಾಯಂಕಾಲ 4-30 ಪಿ.ಎಂ. ದ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಬೀರಪ್ಪ, ಮಾಳಿಂಗರಾಯ, ಮತ್ತು ನನ್ನ ತಮ್ಮನ ಮಗನಾದ ವಿಶ್ವರಾಧ್ಯ ಎಲ್ಲರೂ ಕೂಡಿಕೊಂಡು ವಡಗೆರಾದ ಮಾರಿಕಾಂಬಾ ದೇವಿಯ ಜಾತ್ರಗೆ ಹೋಗುವ ಸಲುವಾಗಿ ತಯಾರಾಗಿ ತುಮಕುರ ಶುಗರ್ ಪ್ಯಾಕ್ಟರಿ ಹತ್ತಿರದ ಕ್ರಾಸ್ದಲ್ಲಿ ನಿಂತಿದ್ದೆವು. ಆಗ ತುಮಕೂರ ಕಡೆಯಿಂದ ವಡಗೆರಾ ಕಡೆಗೆ ಹೊರಟಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ವಾಹನದ ಮೇಲಿನ ತನ್ನ ಚಾಲನಾ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಕ್ರಾಸದಲ್ಲಿ ನಿಂತಿದ್ದ ನಮ್ಮವರಲ್ಲಿ ನನ್ನ ತಮ್ಮನ ಮಗನಾದ ವಿಶ್ವಾರಾಧ್ಯ ಈತನಿಗೆ ಒಮ್ಮೊಲೆ ಬಂದವನೇ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು, ಆಗ ವಿಶ್ವಾರಾಧ್ಯನು ಕುಸಿದು ನೆಲಕ್ಕೆ ಬಿದ್ದಾಗ ಸದರಿ ಅಪಘಾತದಲ್ಲಿ ಆತನಿಗೆ ತಲೆಗೆ ಭಾರೀ ರಕ್ತಗಾಯ, ಎಡಗೈಗೆ ತರಚಿದ ರಕ್ತಗಾಯ, ಎಡಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನು ಅಪಘಾತ ಪಡಿಸಿ ಸ್ಥಳದಿಂದ ತನ್ನ ಮೋಟಾರು ಸೈಕಲ್ ಸಮೆತ ಓಡಿ ಹೋಗಿದ್ದು, ಆತನ ಮೋಟಾರು ಸೈಕಲ್ ಬಜಾಜ್ ಪಲ್ಸರ್ ಕರಿ ಬಣ್ಣದ್ದು ಇದ್ದು, ಅದರ ನಂಬರ್ ಗೊತ್ತಾಗಿರುವುದಿಲ್ಲ ಮೋಟಾರು ಸೈಕಲ್ ಸವಾರನ  ಹೆಸರು, ವಿಳಾಸ ಅಲ್ಲಿದ್ದ ಜನರಿಂದ ತಿಳಿದುಕೊಂಡಿದ್ದು ಆತನ ಹೆಸರು ಜಯಪ್ಪ ತಂದೆ ಚಂದ್ರಪ್ಪ ಹೊಸಮನಿ (ಗೋಗಿ) ಸಾ;ವಡಗೇರಾ ಅಂತಾ ಗೊತ್ತಾಗಿರುತ್ತದೆ. ಸದರಿ ಅಪಘಾತವು ತುಮಕುರ-ವಡಗೇರಾ ಮುಖ್ಯ ರಸ್ತೆಯ ತುಮಕುರ ಶುಗರ್ ಪ್ಯಾಕ್ಟರಿ ಮುಂದೆ ಬರುವ  ಮುಖ್ಯ ರಸ್ತೆಯ ಮೇಲೆ ಇಂದು ಸಾಯಂಕಾಲ ಅಂದಾಜು 5 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ನನ್ನ ಮಗ ಬೀರಪ್ಪನು ಸದರಿ ವಿಷಯವನ್ನು ನನ್ನ ಗಂಡನಾದ ಮಲ್ಲಪ್ಪ ಮತ್ತು ನಮ್ಮ ಸಂಬಂಧಿಕರಾದ ಬೀರಪ್ಪ ತಂದೆ ಮಲ್ಲಪ್ಪ ಜಡಿ, ಸಿದ್ದಪ್ಪ ತಂದೆ ಗಂಗಣ್ಣ ಬೀರನಾಳ ಇವರಿಗೆ ಪೋನ್ ಮೂಲಕ ಮಾಹಿತಿ ತಿಳಿಸಿ ಅವರಿಗೆ ವಡಗೇರಾ ಸಕರ್ಾರಿ ಆಸ್ಪತ್ರೆಗೆ ಬರಲು ತಿಳಿಸಿರುತ್ತಾನೆ ನಂತರ ನಾನು ಮತ್ತು ನನ್ನ ಮಕ್ಕಳು ವಿಶ್ವಾರಾಧ್ಯನಿಗೆ ಉಪಚಾರಕ್ಕಾಗಿ ಒಂದು ಖಾಸಗಿ ಆಟೋದಲ್ಲಿ ವಡಗೇರಾ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಷ್ಟರಲ್ಲಿಯೇ  ನನ್ನ ಗಂಡನಾದ ಮಲ್ಲಪ್ಪ, ಸಂಬಂಧಿಕರಾದ ಬೀರಪ್ಪ, ಸಿದ್ದಪ್ಪರವರು ಆಸ್ಪತ್ರೆಗೆ ಬಂದು ನೋಡಿರುತ್ತಾರೆ. ವಿಶ್ವಾರಾಧ್ಯನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೇ ಸಮಯ 5-30 ಪಿ.ಎಂ.ಕ್ಕೆ ರಸ್ತೆ ಅಪಘಾತದಲ್ಲಿ ಆದ ಬಾರೀ ರಕ್ತಗಾಯಗಳಿಂದ ಮೃತಪಟ್ಟಿರುತ್ತಾನೆ. ನಾನು ನನ್ನ ತಮ್ಮನಾದ ಸಂಗಪ್ಪನಿಗೆ  ವಿಶ್ವಾರಾಧ್ಯನಿಗೆ ಆದ ಅಪಗಾತದ ಬಗ್ಗೆ ಪೋನ್ ಮೂಲಕ ಮಾಹಿತಿ ತಿಳಿಸಿರುತ್ತೇನೆ. ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರನಾದ ಜಯಪ್ಪ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2017 ಕಲಂ 279, 304(ಎ) ಐಪಿಸಿ ಮತ್ತು ಕಲಂ 187 ಐಎಂವಿ ಆ್ಯಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 111/2017ಕಲಂ 379 ಮತ್ತು ಕಲಂ 44(1) ಕೆ. ಎಮ್.ಎಮ್.ಸಿ ಆರ್ ;- ದಿನಾಂಕ 11/04/2017 ರಂದು 3.00 ಪಿ ಎಮ್ ಕ್ಕೆ ಹತ್ತಿಗೂಡುರು - ಶಹಾಪೂರ ಮೇನ ರೋಡ ಶಹಾಪೂರ ನಗರದ ಚಾಂದ ಪೆಟ್ರೊಲ್ ಬಂಕ ಹತ್ತಿರ  ರೋಡಿನಲ್ಲಿ  ಟ್ರ್ಯಾಕ್ಟರ ನಂ ಕೆಎ.33ಟಿಎ.6865 ಮತ್ತು ಟ್ರ್ಯಾಲಿ  ನಂಬರ ಇರುವದಿಲ್ಲಾ ನೇದ್ದರ ಚಾಲಕನಾದ  ಹಣಮಂತ ತಂದೆ ಯಮನಪ್ಪ ಗುತ್ತಿಪೇಟ ವಯಾ:25 ಉ:ಚಾಲಕ ಜಾತಿ: ಮಾದರ ಸಾ:ಬೆನಕನಳ್ಳಿ ಇತನು ಠಾಣಾ ವ್ಯಾಫ್ತಿಯಲ್ಲಿ ಬರುವ ಹೈಯ್ಯಾಳ(ಬಿ) ಗ್ರಾಮದ ಕೃಷ್ಣಾನದಿ ತೀರದಲ್ಲಿ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರದಲ್ಲಿ ಒಂದು ಮರಳು  ತುಂಬಿಕೊಂಡು ಶಹಾಪೂರಕ್ಕೆ ಮಾರಟ ಮಾಡುಲು ಬರುತ್ತಿರುವಾಗ್ಗೆ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದ ಠಾಣೆ ಶ್ರೀ ಶಿವಪುತ್ರ ಎ.ಎಸ್.ಐ ಸಂ ಪಿಸಿ 141 ನೇವರು ಬಾತ್ಮಿ ಆಧಾರದ ಮೇಲೆ ಟ್ರ್ಯಾಕ್ಟರ ನಿಲ್ಲಿಸಿ ವಿಚಾರಿಸಿ ಪಂಚರ ಸಮಕ್ಷಮ ಸದರ ಟ್ರ್ಯಾಕ್ಟರ ನಂ ಕೆಎ.33ಟಿಎ.6865 ಮತ್ತು ಟ್ರ್ಯಾಲಿ  ಅ.ಕಿ 100000/- ರೂ  ಒಂದು ಬ್ರಾಸ್ ಮರಳು  ಅ.ಕಿ 1500/ ರೂ ಕಿಮ್ಮತನದ್ದು ಆರೋಪಿನಿಂದ ಜಪ್ತಿ ಮಾಡಿಕೊಂಡಿದ್ದು ಅಂತಾ ಇತ್ಯಾದಿ ವರದಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 46/2017  ಕಲಂ 110 (ಇ),(ಜಿ)  ಸಿ ಆರ್ ಪಿ ಸಿ;- ದಿನಾಂಕ 11/04/2017 ರಂದು 11:00 ಎಎಂಕ್ಕೆ ಶ್ರಿ ಪ್ರೇಮಸಿಂಗ್ ಸಿ.ಪಿ.ಸಿ 318 ರವರು  ಠಾಣೆಗೆ ಹಾಜರಾಗಿ ಒಂದು ವರದಿ ಕೊಟ್ಟಿದ್ದರ ಸಾರಂಶವೆನೆಂದರೆ ಇಂದು ದಿನಾಂಕ 11/04/2017 ರಂದು ನಾನು ಪ್ರೇಮಸಿಂಗ್ ಸಿಪಿಸಿ-318 ನಮ್ಮ ಠಾಣೆಯ ಶ್ರೀ. ಜಗದೀಶ 286 ಇಬ್ಬರು ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದಂತೆ ನಾಗನಟಗಿ ಬೋರುಕಾ ಕಡೆಗೆ ಹೊರಟಿದ್ದಾಗ  ಬೆಳಗಿನ 10:30 ಗಂಟೆ ಸುಮಾರಿಗೆ ಗೋಗಿ(ಕೆ) ಗ್ರಾಮದ ಸರಕಾರಿ ಆಸ್ಪತ್ರೆ ಎದುರುಗಡೆ ಇಬ್ಬರೂ ವ್ಯಕ್ತಿಗಳು ರೋಡಿನಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡೆ ತಡೆ ಉಂಟು ಮಾಡುತ್ತಾ ಅವಾಚ್ಯವಾಗಿ ಬೈಯುತ್ತಾ ಗುಂಡಾ ರೀತಿಯಲ್ಲಿ ವತರ್ಿಸುತ್ತಿರುವದನ್ನು ನೋಡಿ ಸದರಿಯವರನ್ನು ಹಿಡಿದು ವಿಚಾರಿಸಲಾಗಿ ಸದರಿಯವರು ತಮ್ಮ ಹೆಸರು 1) ಸದ್ದಾಮ ತಂದೆ ರಾಜಾಸಾಬ ಗಟ್ಟದ ವಯಾ: 23 ವರ್ಷ ಜಾ: ಮುಸ್ಲೀಂ ಉ: ಕೂಲಿ ಕೆಲಸ ಸಾ: ಹಟ್ಟಿ ಚಿನ್ನದ ಗಣಿ ತಾ: ಲಿಂಗಸೂಗುರ ಜಿ: ರಾಯಚೂರ. 2) ಮಹ್ಮದ್ ಉಸ್ಮಾನ ತಂದೆ ರಸೂಲ್ ಸಾಬ ಡ್ರೈವರ್ ವ:19ವರ್ಷ ಉ:ಕೂಲಿ ಕೆಲಸ ಸಾ||ಹಟ್ಟಿ ಚಿನ್ನದ ಗಣಿ ತಾ: ಲಿಂಗಸೂಗುರ ಜಿ: ರಾಯಚೂರ. ಅಂತ ತಿಳಿಸಿದ್ದು ಸದರಿ ಇಬ್ಬರನ್ನು  ಹಾಗೆ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕರಿಗೆ ಜೀವ ಹಾನಿ ಹಾಗೂ ಆಸ್ತಿ ಹಾಣಿ ಮಾಡುವ ಸಂಬವ ಕಂಡು ಬಂದಿದ್ದರಿಂದ ಸದರಿಯವರನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದಾಗ ಸದರಿಯವರ ವಶದಲ್ಲಿ ನಗದು ಹಣವಾಗಲಿ ಯಾವುದೇ ಬೆಲೆಬಾಳುವ ವಸ್ತುವಾಗಲಿ ಇರಲಿಲ್ಲಾ. ಕಾರಣ ಸದರಿ ಆರೋಪಿತರು ರೋಡಿನಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡೆ ತಡೆ ಉಂಟು ಮಾಡುತ್ತಾ ಅವಾಚ್ಯವಾಗಿ ಬೈಯುತ್ತಾ ಗುಂಡಾ ರೀತಿಯಲ್ಲಿ ವತರ್ಿಸುತ್ತಿರುವದನ್ನು ನೋಡಿ ಮರಳಿ ಠಾಣೆಗೆ 11:00 ಎಎಮ್ ಕ್ಕೆ ಬಂದು ಸದರಿಯವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಕಲಂ 110 (ಇ),(ಜಿ) ಸಿ.ಆರ್.ಪಿ.ಸಿ ನೇದ್ದರಂತೆ ಪ್ರಕರಣ ದಾಖಲಿಸಲು ಈ ವರದಿ ಸಲ್ಲಿಸಲಾಗಿದೆ ಅಂತಾ ವಿನಂತಿ ಅಂತಾ ವರದಿ ಕೊಟ್ಟಿದ್ದರ ಮೇಲಿಂದ ಠಾಣೆ ಗುನ್ನೆ ನಂ. 46/2017 ಕಲಂ 110 (ಇ),(ಜಿ) ಸಿ.ಆರ್.ಪಿ.ಸಿ ರ ಅನ್ವಯ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ಪ್ರ.ವ.ವರದಿಯನ್ನು ಮಾನ್ಯರವರ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!