Yadgir District Reported Crimes

By blogger on ಶನಿವಾರ, ಏಪ್ರಿಲ್ 1, 2017



 Yadgir District Reported Crimes


ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 17/2017 ಕಲಂ 279 ಐಪಿಸಿ ಮತ್ತು 190(2), 192(ಎ) ಐ.ಎಮ್.ವಿ ಆಕ್ಟ್ ;- ದಿನಾಂಕ: 31-03-2017 ರಂದು ಮಧ್ಯಾಹ್ನ 2-15 ಪಿ.ಎಮ್ ಸುಮಾರಿಗೆ ಪಿಯರ್ಾದಿ ನಗರದ ವಾಲ್ಮೀಕಿ ಚೌಕ್ ಹತ್ತಿರ ಕರ್ತವ್ಯದಲ್ಲಿರುವಾಗ ಸುಭಾಸ ಚೌಕ ಕಡೆಯಿಂದ ಕಡೆಯಿಂದ ಟಂಟಂ ಆಟೊ ನಂಬರ ಕೆಎ-334598 ನೇದ್ದರ ಚಾಲಕನು ತನ್ನ ಟಂಟಂ ಆಟೊ ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರಿತಿಯಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬರುತ್ತಿರುವದನ್ನು ನೋಡಿ ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ವಿಚಾರಿಸಲು ಸದರಿ ವಾಹನದ ವಾಯು ಮಾಲೀನ್ಯ ಪ್ರಮಾಣ ಪತ್ರ ಹೊಂದಿರುವದಿಲ್ಲ. ವಾಹನದಲ್ಲಿ ಪರವಾನಿಗೆ ಉಲ್ಲಂಘನೆ ಮಾಡಿ 10 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ ಸದರಿ ವಾಹನವನ್ನು ಚಾಲಕನು ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ವಾಹನವನ್ನು ಮುಂದಿನ ಕ್ರಮ ಜರಿಗಿಸುವ ಕುರಿತು ಠಾಣೆಗೆ ತಂದು ಹಾಜರು ಪಡಿಸಿದ್ದರಿಂದ ಈ ಮೇಲಿನ ಗುನ್ನೆ ಧಾಖಲು ಮಾಡಿಕೊಳ್ಳಲಾಗಿದೆ. 
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ 379 ಐ.ಪಿ.ಸಿ;- ದಿನಾಂಕ 31/03/2017 ರಂದು ಬೆಳಿಗ್ಗೆ 10-30 ಎ.ಎಂ ಕ್ಕೆ ಯಡ್ಡಳ್ಳಿ ಗ್ರಾಮದ ಹಳ್ಳದಲ್ಲಿ ಆರೋಪಿತರು ತಮ್ಮ ಒಂದು ಟ್ಯ್ರಾಕ್ಟರದಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬೇರೆ ಕಡೆಗೆ ಸಾಗಣೆ ಮಾಡುತ್ತಿರುವಾಗ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ ಪಂಚರ ಸಮಕ್ಷಮ ಒಂದು ಮರಳು ತುಂಬಿದ ಟ್ಯ್ರಾಕ್ಟರನ್ನು ವಶಪಡಿಸಿಕೊಂಡಿದ್ದು,  ಆರೊಪಿತರು ಮರಳು ತುಂಬಿದ ಟ್ಯ್ರಾಕ್ಟರಗಳನ್ನು ಅಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾರೆ. ವಶಪಡಿಸಿಕೊಂಡ ಒಂದು ಟ್ಯ್ರಾಕ್ಟರನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿ ಸಾರಂಶದ ಮೇಲಿಂದ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ 279 337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ;- ದಿನಾಂಕ 31/03/2017 ಬೆಳಗಿನ ಜಾವ 05-30 ಗಂಟೆಗೆ ಶಹಾಪೂರ ನಗರದ ಏಪೇಕ್ಸ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಜೊತೆಯಲಿ ಸಿದ್ರಾಮಯ್ಯ ಸಿ.ಪಿ.ಸಿ 258 ಇಬ್ಬರೂ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುದಾರ ಫಿರ್ಯಾದಿ ಶ್ರೀ ಹಣಮಂತ ತಂದೆ ರಾಮಣ್ಣ ಬಜಂತ್ರಿ ವಯ 38 ಸಾಃ ಮರೋಳ ತಾಃ ಹುನಗುಂದ ಇವರಿಗೆ ವಿಚಾರಣೆ ಮಾಡಿ ಹೇಳಿಕೆ ಮಾಡಿದ್ದು ಸದರಿಯವರ  ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ 30/03/2017 ರಂದು ರಾತ್ರಿ 11-30 ತಮ್ಮ ತೋಟದಲ್ಲಿ ಬೆಳೆದ ಸೌವತೆಕಾಯಿಯನ್ನು  ಟಾಟಾ ಎಸಿ ವಾಹನ ನಂಬರ ಕೆಎ-29-9068 ನೇದ್ದರಲ್ಲಿ ಲೋಡ ಮಾಡಿಕೊಂಡು ಶಹಾಪೂರದಲ್ಲಿ ಶುಕ್ರವಾರ ಸಂತೆ ಇದ್ದುದ್ದರಿಂದ ಮಾರಾಟ ಮಾಡಿಕೊಂಡು ಬರಲು ಶಹಾಪೂರಕ್ಕೆ ಬರುತಿದ್ದಾಗ ಟಾಟಾ ಎಸಿ ವಾಹನ ಚಾಲಕ ವಿರೇಶ ತಂದೆ ಶೇಖರಪ್ಪ ಹಗೆದಾಳ ಈತನು  ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಇಂದು ದಿನಾಂಕ 31/03/2017 ರಂದು ಬೆಳಗಿನ ಜಾವ 05-00 ಗಂಟೆಗೆ ಶಹಾಪೂರ ನಗರದ ಪೇಟ್ರೋಲ್ ಪಂಪ ಹತ್ತಿರ ರೋಡಿನ ಮೆಲೆ ಯಾವುದೇಮುನ್ಸೂಚನೆ ಇಂಡಿಕೆಟರ್ ಹಾಕದೆ ನಿಲ್ಲಿಸಿದ ಮಹಿಂದ್ರಾ 475 ಡಿ.ಐ ಕಂಪನಿಯ ಟ್ಯಾಕ್ಟರ ಇಂಜಿನ್  ನಂಬರ ಚಎಘಿಃ01693 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ತನಗೆ  ಎಡಗಾಲ ಮೋಳಕಾಲ ಕೆಳಗೆ ರಕ್ತಗಾಯ ಮತ್ತು ಎಡಗಾಲ ತೊಡೆಯ ಹತ್ತಿರ ತರಚಿದ ರಕ್ತಗಾಯ, ಮತ್ತು ಬಲಗಾಲ ಮೋಳಕಾಲ ಹತ್ತಿರ ಗುಪ್ತಗಾಯಗಳಾಗಿರುತ್ತವೆ. ಟಾಟಾ ಎಸಿ ಚಾಲಕ ವಿರೇಶನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ. ಸದರಿ ಟ್ಯಾಕ್ಟರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು ಸದರಿ ಅಪಘಾತಕ್ಕೆ ಇಬ್ಬರ ಚಾಲಕರ ನಿರ್ಲಕ್ಷತನದಿಂದ ಈ ಘಟನೆ ಜರುಗಿರುತ್ತದೆ ಅಂತ  ನೀಡಿದ ಹೇಳಿಕೆಯನ್ನು ಸಿದ್ರಾಮಯ್ಯ ಸಿ.ಪಿ.ಸಿ 258 ರವರ ಮುಖಾಂತರ ಲ್ಯಾಪ್ ಟಾಪನಲ್ಲಿ ಟೈಪ ಮಾಡಿಸಿಕೊಂಡು ಮರಳಿ ಠಾಣೆಗೆ 07-00 ಗಂಟೆಗೆ ಬಂದು ಫಿರ್ಯಾದಿಯವರು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 100/2017 ಕಲಂ 279, 337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                        
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 43-2017 ಕಲಂ, 78(3) ಕೆ.ಪಿ.ಆ್ಯಕ್ಟ್ ;- ದಿನಾಂಕ: 31/03/2017 ರಂದು 7-30 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 31-03-2017 ರಂದು 4-30 ಪಿಎಮ್ ಕ್ಕೆ ಠಾಣೆಯಲ್ಲಿದ್ದಾಗ ದರಿಯಾಪೂರ ಗ್ರಾಮದ ವಿಶ್ವರಾಧ್ಯ ಮಠದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು ಸಾರ್ವಜನಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಳೆ ಅಂತಾ ಭಾತ್ಮೀ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದರಿಯಾಪೂರ ಗ್ರಾಮದ ವಿಶ್ವರಾಧ್ಯ ಮಠದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬನು ವಿಶ್ವರಾಧ್ಯ ಮಠದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು 5-15 ಪಿಎಮ್ ಕ್ಕೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಸಾಹೇಬಗೌಡ ಗುಡಿಹಳ್ಳಿ ವಯ|| 35 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ದರಿಯಾಪೂರ ಅಂತಾ ತಿಳಿಸಿದ್ದು ಸದರಿಯವನ ಅಂಗ ಪರಿಶೀಲಿಸಲಾಗಿ ನಗದು ಹಣ 750/- ರೂ ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 5-30 ಪಿಎಮ್ ದಿಂದ 6-30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಜಪ್ತಿ ಪಡಿಸಿಕೊಂಡಿದ್ದು  ಇರುತ್ತದೆ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 43/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 279,337,338, ಐಪಿಸಿ;- ದಿನಾಂಕ-31/03/2017 ರಂದು 7  ಗಂಟೆ ಸುಮಾರಿಗೆ ನಾನು ಮನೆಯಲಿದ್ದಾಗ ನಮ್ಮ ಅಳಿಯನಾದ ಸಣ್ಣತಾಯಪ್ಪ ತಂದೆ ಸಾಬಯ್ಯ ದಾನಮ್ಮನೋರ ಈತನು ತನ್ನ ಮೋಟರ ಸೈಕಲ್ ನಂಬರ ಕೆಎ-50-ಡ್ಬ್ಲೂ 7254 ಪ್ಯಾಶನ್ ಪ್ರೋ ಸೈಕಲ್ ಮೋಟರ ಮೇಲೆ ನಾಗಲಾಪೂರ ದಿಂದ ರಾಮಸಮುದ್ದರಕ್ಕೆ ತನ್ನ ಚಿಕ್ಕಮ್ಮಳಾದ ಲಕ್ಷ್ಮಿ ಇವರ ಹತ್ತಿರ ಹೋಗಿ ಬರುತ್ತೆನೆಂದು ನಾಗಲಾಪೂರದಿಂದ ಹೊಗಿದ್ದು ಇರುತ್ತದೆ ನಾನು 7-00 ಗಂಟೆ ಸುಮಾರಿಗೆ ಮನೆಯಲಿದ್ದಾಗ ನಮ್ಮೂರಿನ ಜನರಿಂದ ತಿಳಿದು ಬಂದಿದ್ದೆನೆಂದರೆ ನಮ್ಮ ಅಳಿಯ ಸಣ್ಣ ತಾಯಪ್ಪ ಇತನಿಗೆ ನಾಗಲಾಪೂರ ವಾಟರ ಸಪ್ಲಯ ಹತ್ತಿರ ಯಾದಗಿರಿ - ರಾಯಚೂರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿದೆ ಅಮತಾ ಸುದ್ದಿ ತಿಳಿದು ನಾನು ನಮ್ಮ ಗೆಳೆಯ ಬುಡ್ಡಪ್ಪ ತಂದೆ ಲಕ್ಷ್ಮಪ್ಪ ಇವರ ಸೈಕಲ್ ಮೋಟರ ಮೇಲೆ ಇಬ್ಬರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಇಬ್ಬರು ಅಂದರೆ ನನ್ನ ಅಳಿಯ ಸಣ್ಣ ತಾಯಪ್ಪ ತಂದೆ ಸಾಬಯ್ಯ ಈತನು ಮತ್ತು ಕೆಎ-33 ಎಸ್ 5209 ನೆದ್ದರ ಚಾಲಕ ಇಬ್ಬರು ಒಬ್ಬರಿಗೊಬ್ಬರು ಡಿಕಿ ಪಡಿಸಿಕೊಂಡು ಅಪಗಾತವಾಗಿ ಪೆಟ್ಟಾಗಿ ಬಿದ್ದಿದ್ದರು ಮತ್ತು 2 ವಾಹನಗಳು ಜಖಂ ಗೊಂಡು ಸ್ಥಳದಲ್ಲಿ ಬಿದ್ದಿದ್ದವು ಆಗ ನನ್ನ ಅಳಿಯ ಸಣ್ಣತಾಯಪ್ಪನಿಗೆ ಪರಿಶಿಲಿಸಿ ನೋಡಲಾಗಿ ಬಲಗಡೆ ಕಣ್ಣಿನ ಉಬ್ಬಿನ ಮೇಲೆ ರಕ್ತಗಾಯ, ಕಣ್ಣಿನ ಮಏಲೆ ಕಂದು ಗಟ್ಟಿದ ಗಾಯ , ಬಲಗಣ್ಣಿನ ಮೆಲೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗಣ್ಣಿನ ಕೆಳಗೆ ಗುಪ್ತಗಾಯವಾಗಿದ್ದು ಬಾಯಿಯಿ ಮೇಲಿನ ತುಟಿಗೆ ರಕ್ತಗಾಯ ಬಲಭುದ ಮೇಲೆ ರಕ್ತಗಾಯ ಎಡಗಡೆ ರಟ್ಟೆಯ ಮೇಲೆ ಗುಪ್ತಗಾಯ ಆಗಿದ್ದು ಇರುತ್ತದೆ ನಮ್ಮ ಅಳಿಯನಂತೆ ಇನ್ನೊಬ್ಬ ಕೆಎ-33 ಎಸ್ 5209 ನೆದ್ದರ ಮೋಟರ ಸೈಕಲ್ ಚಾಲಕನಾದ ಮಾರ್ತಂಡಪ್ಪ ತಂದೆ ಚನ್ನಬಸಪ್ಪ ಕಡಿಪೌಂಟಗಿ ಸಾ|| ಮೈಲಾಪೂರ ಇತನಿಗೂ ಕೂಡ ಭಾರಿ ಮತ್ತು ಸಣ್ಣಪುಟ್ಟಗಾಯಗಳಾಗಿದ್ದು ಇರುತ್ತದೆ ಮತ್ತು ಇಬ್ಬರು ಚಾಲಕರು ಮಾತಾನಾಡುತಿರಲಿಲ್ಲ ನಮ್ಮಳಿಯನಿಗೆ ನಾನು ಮತ್ತು ಚಂದ್ರು ತಂದೆ ಸಣ್ಣರಾಚಪ್ಪ ಕೂಡಿಕೊಂಡು ನಮ್ಮೂರಿನ ಕಾಳೆಶ ತಂದೆ ಮಲ್ಲರೆಡ್ಡಿ ಕಟ್ಟಿಮನಿ ಇವರ ಆಟೋದಲ್ಲಿ ಹಾಕಿಕೊಂಡು ಹೋಗಿ 8-51 ಪಿ ಎಮ್ ಕ್ಕೆ ಸರಕಾರಿ ಆಸ್ಪತ್ರೆ ಯಾದಗಿರಿಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತೆವೆ ನಮ್ಮಂತೆ ಮಾರ್ತಂಡಪ್ಪ ಇತನ ಸಂಬಂಧಿಕರು ಕೂಡ ಉಪಚಾರ ಕುರಿತು ಕರೆದುಕೊಂಡು ಹೋಗಿರುತ್ತಾರೆ ನನ್ನ ಅಳಿಯನಾದ ಸಣ್ಣ ತಾಯಪ್ಪ ಮತ್ತು ಮಾರ್ತಂಡಪ್ಪ ಇಬ್ಬರು ತಮ್ಮ ಮೋಟರ ಸೈಕಲನನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಒಬ್ಬರಿಗೊಬ್ಬರು ಸಾಯಂಕಾಲ 7-15 ಗಂಟೆಗೆ ನಾಗಲಾಪೂರ ವಾಟರ ಸಪ್ಲಯ ಹತ್ತಿರ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಅಪಘಾತ ಪಡಿಸಿಕೊಂಡು ಗಾಯಗೊಂಡಿದ್ದು ಇರುತ್ತದೆ ಸದರಿ ಇಬ್ಬರು ಚಾಲಕರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ನನ್ನ ಅಳಿಯ ಸಣ್ಣ ತಾಯಪ್ಪ ಇತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನೇ ಹೇಳಿಕೆ ನಿಡಿದ್ದು ಇರುತ್ತದೆ ಅಂತಾ ಹೆಳಿ ಬರೆಯಿಸಿದ ಹೇಳಿಕೆ ಇರುತ್ತದೆ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!