Yadgir District Reported Crimes Updated on 25-04-2017

By blogger on ಮಂಗಳವಾರ, ಏಪ್ರಿಲ್ 25, 2017
Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 62/2017 ಕಲಂ 379 ಐಪಿಸಿ;- ದಿನಾಂಕ: 24/04/2017 ರಂದು 06:15 ಎಎಮ್ ಕ್ಕೆ ಶ್ರೀ ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಮುದ್ದೆ ಮಾಲು ಮತ್ತು ವರದಿಯನ್ನು ಮುಂದಿನ ಕ್ರಕ್ಕಾಗಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ:23/04/2017 ರಂದು ನಾನು ಮತ್ತು ಸಂಗಡ ಬಸಣ್ಣ ಪಿಸಿ 109 ಜೀಪ ಚಾಲಕ ಹಾಗೂ ಪ್ರಕಾಶ ಪಿಸಿ-303 ರವರನ್ನು ಕರೆದುಕೊಂಡು ಎನ್.ಆರ್.ಸಿ ಕರ್ತವ್ಯ ಕುರಿತು ನಮ್ಮ ಸರಕಾರಿ ವಾಹನ ನಂ. ಕೆಎ 33 ಜಿ 0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಮಾಡುತ್ತಾ ಹೋರಟು ಇಂದು ದಿನಾಂಕ 24/04/2017 ರಂದು ಬೆಳಿಗ್ಗೆ 05:00 ಎಎಂಕ್ಕೆ ಗಂಜ ಕ್ರಾಸಿನಲ್ಲಿರುವಾಗ ಹೈದ್ರಾಬಾದ ರೋಡಿನ ಕಡೆಯಿಂದ ಒಬ್ಬನು ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಟ್ರ್ಯಾಕ್ಟರನ್ನು ಬಿಟ್ಟು  ಓಡಿ ಹೋದನು ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಟ್ರ್ಯಾಕ್ಟರದ ಟ್ರಾಲಿಯಲ್ಲಿ ಉಸುಕು ತುಂಬಿದ್ದು ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜಿನ್ ನಂಬರ ಮತ್ತು ಟ್ರ್ಯಾಲಿಗೆ ನೋಂದಣಿ ನಂಬರ ಇರಲಿಲ್ಲ. ಕೆಂಪು ಬಣ್ಣದ ಮೆಸ್ಸಿ ಫಗರ್ುಶನ್ ಕಂಪನಿಯ ಟ್ರ್ಯಾಕ್ಟರ ಇದ್ದು ಇಂಜಿನ್ ನಂ. ಒಇಂ9085ಊಇ2016526 ಇದ್ದು ಟ್ರಾಲಿ ಚೆಸ್ಸಿ ನಂ.29/2014 ಇದ್ದು ಚಾಲಕನು ಓಡಿ ಹೋಗಿದ್ದರಿಂದ ಹೆಸರು ಗೊತ್ತಾಗಿರುವುದಿಲ್ಲಾ. ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಕೂಡಿಕೊಂಡು ಆಕ್ರಮವಾಗಿ ಮರಳನ್ನು ಕದ್ದು, ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಮರಳು ತುಂಬಿದ ಟ್ರ್ಯಾಕ್ಟರನ್ನು ಬಸಣ್ಣ ಪಿಸಿ 109 ರವರ ಸಹಾಯದಿಂದ ಠಾಣೆಗೆ 5-30 ಎಎಮ್ ಕ್ಕೆ ನಗರ ಪೊಲೀಸ್ ಠಾಣೆಗೆ ಬಂದು ಠಾಣೆಯ ಮುಂದೆ ತಂದು ನಿಲ್ಲಿಸಿದ್ದು ಠಾಣೆಯ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ. 190 ಇವರಿಗೆ ಪೋನ ಮೂಲಕ ಠಾಣೆಗೆ ಬರಮಾಡಿಕೊಂಡು ಇವರಿಂದ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಠಾಣೆಯಲ್ಲಿಯೇ ನಾನು ಸಹಿ ಮಾಡಿ ಸದರಿ ನನ್ನ ವರದಿಯನ್ನು 6:15 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ  ಮುಂದಿನ ಕ್ರಮಕ್ಕಾಗಿ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ 57-2017 ಕಲಂ 143, 147, 148, 341, 323, 354, 504, 506 ಸಂ: 149  ಐಪಿಸಿ ;- ದಿನಾಂಕ 24/04/2017 ರಂದು 01.30 ಪಿಎಂ ಕ್ಕೆ  ಶ್ರೀ. ಮಾಳಪ್ಪ ತಂದೆ ಅಮಲಪ್ಪ ತಳವಾರ ವಯಾ: 25 ವರ್ಷ ಜಾ: ಕಬ್ಬಲಿಗ ಉ: ಅಟೋ ಡ್ರೈವರ ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಅದರ ಸಾರಂಶ ಏನಂದರೆ,  ನಿನ್ನೆ ದಿನಾಂಕ:23/04/2017 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ನಾನು ಶಹಾಪೂರ ದಿಂದ ನನ್ನ ಅಟೋವನ್ನು ತಗೆದುಕೊಂಡು ಬಂದು ತಮ್ಮ ಮನೆಯ ಪಕ್ಕದ ಅಮರಪ್ಪ ಲಕ್ಕೂರ ಇವರ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗುತ್ತಿದ್ದಾಗ 1) ಮಾಳಪ್ಪ ತಂದೆ ಬೀರಪ್ಪ ಬಾಣತಿಹಾಳ 2) ಯಲ್ಲಪ್ಪ ತಂದೆ ನಿಂಗಪ್ಪ ಬಾಣತಿಹಾಳ ಇವರು ಇಬ್ಬರು ಕೂಡಿ ಬಂದು ಮನೆಯಲ್ಲಿ ಹೊರಟಿದ್ದ ನನಗೆ ತಡೆದು ನಿಲ್ಲಿಸಿ ಮಾಳಪ್ಪ ಈತನು ನನಗೆ ಅಟೋ ತಾಗಿಸಿ ಬರುತ್ತೇನಲೇ ಸೂಳೆ ಮಗನೆ ಅಂತಾ ಬೈದು ಇಬ್ಬರು ಕೈಯಿಂದ ಹೊಡೆಯ ತೊಡಗಿದರು ಆಗ ಬಾಬು ತಂದೆ ಸಾಯಿಬಣ್ಣ ತಳವಾರ, ದೇವಪ್ಪ ತಂದೆ ಸಾಯಿಬಣ್ಣ ತಳವಾರ, ಪರಶುರಾಮ ತಂದೆ ದ್ಯಾವಪ್ಪ, ನಮ್ಮ ಆಯಿ ಹಳ್ಳೆಮ್ಮ ಗಂ ಭೀಮರಾಯ, ನಾಗಮ್ಮ ಗಂ ದೇವಪ್ಪ ತಳವಾರ ಮತ್ತು ಸಿದ್ದಮ್ಮ ಗಂಡ ಅಂಬ್ಲಪ್ಪ ತಳವಾರ ಇವರುಗಳು ಬಿಡಿಸಲು ಬಂದಾಗ 3) ಹಣಮಂತ ತಂದೆ ನಿಂಗಪ್ಪ ಲಕ್ಕೂರ, 4) ಭೀಮಣ್ಣ ತಂದೆ ಶಿವಣ್ಣ ಲಕ್ಕೂರ 5) ಪರಶುರಾಮ ತಂದೆ ಶಿವಣ್ಣ ಲಕ್ಕೂರ ಎಲ್ಲರೂ ಕೂಡಿ ಬಂದು ನನಗೆ ಮತ್ತು ಜಗಳ ಬಿಡಸಲು ಬಂದ ಬಾಬು, ದೇವಪ್ಪ, ಪರಶುರಾಮ ತಳವಾರ, ನಮ್ಮ ಆಯಿ ಹಳ್ಳೆಮ್ಮ, ನಾಗಮ್ಮ ಮತ್ತು ಸಿದ್ದಮ್ಮ ಎಲ್ಲರಿಗೂ ಕೈಯಿಂದ ಹೊಡೆ ಬಡೆ ಮಾಡಿದರು ಆಗ ಯಲ್ಲಪ್ಪ ಈತನು ನಮ್ಮ ಆಯಿ ಸೀರೆ ಸೆರಗು ಹಿಡಿದು ಎಳೆದು ಈ ಮುದಿ ಸೂಳೆದು ಬಹಳ ಆಗಿದೆ ಅಂತಾ ಬೈಯುತ್ತಿದ್ದಾಗ ರಾಮಸ್ವಾಮಿ ತಂದೆ ರಾಯಪ್ಪ ಮತ್ತು ಮಲ್ಲಪ್ಪ ತಂದೆ ಭೀಮಶಾ ಇವರು ಬಂದು ಜಗಳ ಬಿಡಿಸಿದರು. ಆಗ ಆರೋಪಿತರೆಲ್ಲರೂ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ್ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೊದರು. ನಮಗೆ ಒಳಪೆಟ್ಟಾಗಿದ್ದರಿಂದ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಹೊಗಿ ಉಪಚಾರ ಪಡೆದುಕೊಂಡು ನಮ್ಮ ಹಿರಿಯರಿಗೆ ವಿಚಾರ ಮಾಡಿ ಇಂದು ದಿನಾಂಕ: 24/03/2017 ರಂದು 01.30 ಪಿಎಂ ಕ್ಕೆ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ನಮಗೆ ಹೊಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹೇಳಿಕೆ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:57/2017 ಕಲಂ 143, 147, 148. 341, 323, 354, 504, 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 58-2017 ಕಲಂ, 78(3) ಕೆ.ಪಿ.ಆ್ಯಕ್ಟ್ ;- ದಿನಾಂಕ: 24/04/2017 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ:24/04/2017 ರಂದು 04.30 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ರಾಜಾಪೂರ ಗ್ರಾಮದ ಹಳ್ಳೆರ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಮಹಿಳೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಳೆ ಅಂತಾ ಬಾತ್ಮೀ ಬಂದಿದ್ದು ಇಬ್ಬರು ಪಂಚರಾದ 1) ಮರೆಪ್ಪ ತಂದೆ ಚಂದಪ್ಪ ರಸ್ತಾಪೂರ ವಯ|| 35 ವರ್ಷ ಜಾ|| ಹರಿಜನ ಉ|| ಕೂಲಿ ಸಾ|| ಗೋಗಿ (ಕೆ) ತಾ||  ಶಹಾಪೂರ 2) ಜಾಪರಸಾಬ ತಂದೆ ಮಹ್ಮದ ಹುಸೇನ್ ಕಂಬಾರ ವಯ|| 42 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಗೋಗಿಪೇಠ ತಾ|| ಶಹಾಪೂರ ಇವರನ್ನು ಠಾಣೆಗೆ ಕರೆಯಿಸಿ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಶಹಾಪೂರ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪ್ರೇಮಸಿಂಗ್ ಪಿಸಿ-318, ಸರಮ್ಮ ಮಪಿಸಿ-348, ಜಿಂದಾವಲಿ ಹೆಚ್.ಸಿ-161 ಹಾಗೂ ಚಾಲಕ ಮಂಜುನಾಥ ಸಿಪಿಸಿ-323 ರವರೊಂದಿಗೆ ಹಾಗೂ ನಮ್ಮೊಂದಿಗೆ ಠಾಣಾ ಜೀಪ್ ನಂ: ಕೆಎ-32 ಜಿ-392 ನೇದ್ದರಲ್ಲಿ 05.00 ಪಿಎಮ್ ಕ್ಕೆ ಹೋರಟು ರಾಜಾಪೂರ ಗ್ರಾಮದ ಹಳ್ಳೆರ ಕಿರಾಣಿ ಅಂಗಡಿ ಸಮೀಪ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬಳು ಕಿರಾಣೀ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಬಾಂಬೆ, ಕಲ್ಯಾಣ ಮಟಕಾ ಆಡಿರಿ 10 ರೂ ಜೋಯಿಂಟ್ ಹತ್ತಿದರೆ 800 ರೂಪಾಯಿ ಕೊಡುತ್ತೇವೆ 01 ರೂ ಓಪನ ಹತ್ತಿದರೆ 80 ರೂ. ಕೊಡುತ್ತೇನೆ ಅಂತಾ ಕೂಗಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 5-30 ಪಿಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವಳ ಹೆಸರು ವಿಳಾಸ ವಿಚಾರಿಸಲಾಗಿ 01) ಮಾನಮ್ಮ ಗಂಡ ಮುದೆಪ್ಪ ಹಳ್ಳೆರ ವಯಾ:58 ವರ್ಷ ಉ: ಕಿರಾಣಿ ಅಂಗಡಿ ವ್ಯಾಪಾರ ಜಾ: ಕುರುಬರ ಸಾ: ರಾಜಾಪೂರ  ಅಂತಾ ತಿಳಿಸಿದ್ದು, ಸದರಿಯವಳನ್ನು ಮಹಿಳಾ ಸಿಬ್ಬಂದಿಯವರಾದ ಕುಮಾರಿ ಸರಮ್ಮ ಮಪಿಸಿ-348 ರವರಿಂದ ಅಂಗ ಪರಿಶೀಲಿಸಲಾಗಿ ನಗದು ಹಣ 850/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಮಾಡಿಕೊಂಡಿದ್ದು ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 58/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 125/2017  ಕಲಂ 279  ಐಪಿಸಿ;- ದಿನಾಂಕಃ 24/04/2017 ರಂದು 7-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಕೆಲಸಕ್ಕಾಗಿ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 6212 ನೇದ್ದನ್ನು ಖರಿದಿಸಿದ್ದು, ಟ್ರ್ಯಾಕ್ಟರ ಚಾಲಕನಾಗಿ ನಮ್ಮೂರಿನ ಶರಬಣ್ಣ ತಂದೆ ಸಾಯಬಣ್ಣ ಕಾವಲಿ ಇವರು ಕೆಲಸ ಮಾಡುತ್ತಿದ್ದಾರೆ. ಇಂದು ದಿನಾಂಕಃ 24/04/2017 ರಂದು ಮದ್ಯಾಹ್ನ ನಾನು ನಮ್ಮ ಟ್ರ್ಯಾಕ್ಟರ ಚಾಲಕನಿಗೆ ಶಹಾಪೂರಕ್ಕೆ ಹೋಗಿ ರಾಸಾಯನಿಕ ಗೊಬ್ಬರ ಹಾಗು ಡಿಸೇಲ್ ಹಾಕಿಸಿಕೊಂಡು ಬರುವಂತೆ ತಿಳಿಸಿದ್ದರಿಂದ ಆತನು ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 6212 ಹಾಗು ಅದರೊಂದಿಗಿರುವ ಟ್ರ್ರಾಲಿ ನಂಬರ ಕೆ.ಎ 33-941 ನೇದ್ದನ್ನು ತಗೆದುಕೊಂಡು ಮದ್ಯಾಹ್ನ 3-30 ಗಂಟೆಗೆ ನಂದಿಹಳ್ಳಿ(ಜೆ) ಗ್ರಾಮದಿಂದ ಶಹಾಪೂರಕ್ಕೆ ಹೊರಟಿದ್ದಾಗ 4-10 ಪಿ.ಎಮ್ ಸುಮಾರಿಗೆ ರಾಕಂಗೆರಾ ಕ್ರಾಸ್ ಹತ್ತಿರ ಎದುರುಗಡೆಯಿಂದ ಲಾರಿ ನಂಬರ ಎಮ್.ಹೆಚ್ 14 ಸಿ.ಪಿ 7167 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ ಇಂಜಿನ್ನಿನ ಹಿಂದಿನ ದೊಡ್ಡ ಬಲಗಾಲಿಗೆ ಡಿಕ್ಕಿಪಡಿಸಿದ್ದರಿಂದ ಟ್ರ್ಯಾಕ್ಟರ ಇಂಜಿನ್ ಗೇರಬಾಕ್ಸ್ ಭಾಗದಿಂದ ಎರಡು ತುಂಡಾಗಿರುತ್ತದೆ. ಹಾಗು ಇಂಜಿನ್ ಹಿಂದಿನ ದೊಡ್ಡ ಬಲಗಾಲಿಯ ಡಿಸ್ಕ್ ಹಾಗು ಬ್ಯಾಟರಿ ಬಾಕ್ಸ್ ಜಖಂಗೊಡಿರುತ್ತದೆ. ಮತ್ತು ಟ್ರ್ಯಾಲಿಯ ಬಲಗಡೆ ಪಾಟಾ ಮತ್ತು ಚೆಸ್ಸಿ ಬೆಂಡಾಗಿರುತ್ತದೆ. ಚಾಲಕನಿಗೆ ಯಾವುದೇ ಗಾಯಗಳಾಗಿರುವದಿಲ್ಲ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2017 ಕಲಂ 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ: 143, 147, 148, 323, 324,354, 504, 506,149 ಐಪಿಸಿ ;- ದಿ: 24/04/17 ರಂದು 7ಪಿಎಮ್ಕ್ಕೆ ಶ್ರೀಮತಿ ಶರಣಮ್ಮ ಗಂಡ ತಿರುಪತಿ ಟಣಕೆದಾರ ವಯಾ|| 26 ವರ್ಷ ಸಾ|| ಕಿರದಳ್ಳಿ ತಾ|| ಸುರಪೂರ  ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಈಗ್ಗೆ 4 ದಿನಗಳ ಹಿಂದೆ ಬುಧವಾರ ದಿನಾಂಕ 19/04/2017 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಸಜ್ಜೆ ಬೆಳೆ ಕೊಯ್ಯುತ್ತಿರುವಾಗ ನಮ್ಮ ಹೊಲದ ಪಕ್ಕದ ಹೊಲದವರಾದ ತಿರುಪತಿ ಯಂಕಂಚಿರವರ ಆಡುಗಳು ನಮ್ಮ ಹೊಲದಲ್ಲಿನ ಸಜ್ಜೆ ಬೆಳೆಯಲ್ಲಿ ಬಂದು ಬೆಳೆ ಮೇಯುತ್ತಿರುವುದನ್ನು ಕಂಡು ನಾನು ತಿರುಪತಿ ಮತ್ತು ಅವರ ಮನೆಯವರಿಗೆ ನಿಮ್ಮ ಆಡುಗಳು ನಮ್ಮ ಹೊಲದಲ್ಲಿ ಬಂದಿವೆ ಅವುಗಳನ್ನು ಹೊಡೆಯಿರಿ ಅಂದಾಗ ಅವರು ಅಂದರೆ ತಿರುಪತಿ ತಂದೆ ಭೀಮಣ್ಣ ಯಂಕಂಚಿ, ಬಾಲಪ್ಪ ತಂದೆ ಚಂದ್ರಪ್ಪ ಯಂಕಂಚಿ, ವೆಂಕಟೇಶ ತಂದೆ ಮಾನಪ್ಪ ಯಂಕಂಚಿ, ದೇವಮ್ಮ ಗಂಡ ತಿರುಪತಿ ಯಂಕಂಚಿ ಮತ್ತು ಚಂದ್ರಪ್ಪ ತಂದೆ ಬಾಲಪ್ಪ ಯಂಕಂಚಿ ಇವರೆಲ್ಲರೂ ಕೂಡಿ ಬಂದು ನನಗೆ ಏನಲೇ ಶಾಣವ್ವ ನಿನಗೆ ಸೊಕ್ಕು ಜಾಸ್ತಿಯಾಗಿದೆನಾ ನಿಮ್ಮ ಹೊಲದಲ್ಲಿ ಆಡುಗಳು ಹೊಕ್ಕರೆ ಏನಾಯಿತು ಅಂತಾ ಅಂದು ಅವಾಚ್ಯವಾಗಿ ಬೈದು ತಿರುಪತಿ ಈತನು ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಬಾಲಪ್ಪನು ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ವೆಂಕಟೇಶನು ನನ್ನ ಬೆನ್ನಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ದೇವಮ್ಮಳು ನನ್ನ ಕೂದಲು ಹಿಡಿದು ಎಳೆದಾಡಿದ್ದು ಚಂದ್ರಪ್ಪನು ಅವಾಚ್ಯವಾಗಿ ಬೈಯುತ್ತ ಬಿಡಬೇಡಿರಿ ಈ ಸೂಳೆಗೆ ಹೊಡೆದು ಹಾಕಿರಿ ಅಂತಾ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂಡಿ ನನಗೆ ಹೊಡೆಯುತ್ತಿದ್ದಾಗ ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಸಾಯಬಣ್ಣ ಟಣಕೆದಾರ ಮತ್ತು ಸಾಯಬಣ್ಣ ತಂದೆ ಹಣಮಂತ್ರಾಯ ಟಣಕೆದಾರ ಇವರು ಬಂದು ಜಗಳ ಬಿಡಿಸಿದರು ಮತ್ತು ನನಗೆ ಒಂದು ಸೈಕಲ್ ಮೋಟಾರನಲ್ಲಿ ಕೂಡಿಸಿಕೊಂಡು ಬಂದು ದವಾಖಾನೆಗೆ ತಂದು ಸೇರಿಕೆ ಮಾಡಿದ್ದು ಕೆಂಭಾವಿ ದವಾಖಾನೆಯಲ್ಲಿ ತೋರಿಸಿಕೊಂಡು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಬಂದು ಅಜರ್ಿ ಕೊಟ್ಟರಾಯಿತು ಅಂತಾ ಅಂದು ಊರಿಗೆ ಹೋಗಿ ಊರಲ್ಲಿದ್ದಾಗ ಮತ್ತೆ ನನಗೆ ಆದ ಗಾಯಗಳಿಂದ ನೋವು ಜಾಸ್ತಿಯಾಗಲು ಪ್ರಾರಂಭಿಸಿದ್ದರಿಂದ ನಾವು ಗುಲಬಗರ್ಾ ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆದು ಇಂದು ದಿನಾಂಕ 24/04/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನನಗೆ ಹೊಡೆದು ಗಾಯಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕ್ರಮ ಜರುಗಿಸಬೇಕು ಅಂತಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 55/2017 ಕಲಂ 143,147,148,323,324,354(ಎ),504,506 ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 56/2017 ಕಲಂ: 143, 147, 148, 323, 324,354, 504, 506,149 ಐಪಿಸಿ ;- ದಿನಾಂಕ 24/04/2017 ರಂದು 8.30 ಪಿ.ಎಮ್ ಕ್ಕೆ ಅಜರ್ಿದಾರರಾದ ದೇವಮ್ಮ ಗಂಡ ತಿರುಪತಿ ಯಂಕಂಚಿ ವಯಾ|| 26 ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಸಾ|| ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದು ಅಜರ್ಿಯ ಸಾರಾಂಶವೇನೆಂದರೆ ನಾನು ಈಗ್ಗೆ 4 ದಿನಗಳ ಹಿಂದೆ ಬುಧವಾರ ದಿನಾಂಕ 19/04/2017 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸುತ್ತಿದ್ದಾಗ ನಮ್ಮ ಆಡುಗಳು ಮೇಯುತ್ತ ಪಕ್ಕದ ಹೊಲದವರಾದ ತಿರುಪತಿ ಟಣಕೆದಾರ ಇವರ ಹೊಲದಲ್ಲಿ ಹೋದವು ಆಗ ನಾನು ಅವುಗಳನ್ನು ಹೊಡೆದುಕೊಂಡು ಬರಲು ಹೋದಾಗ ಇವರೆಲ್ಲರೂ ಕೂಡಿ ಬಂದು ನನಗೆ ಏನಲೇ ದೇವಿ ನಿಮಗೆ ಸೊಕ್ಕು ಜಾಸ್ತಿಯಾಗಿದೆ ಬೇಕೆಂತಲೇ ನಮ್ಮ ಬೆಳೆ ಹಾಳು ಮಾಡಬೇಕು ಅಂತ ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸುತ್ತಿದ್ದಿರಿ ಅಂತಾ ಅಂದು ಅವಾಚ್ಯವಾಗಿ ಬೈದು 1)ಬಸವರಾಜ ತಂದೆ ಸಾಯಬಣ್ಣ ಟಣಕೆದಾರ 2)ತಿರುಪತಿ ತಂದೆ ಭೀಮರಾಯ ಟಣಕೆದಾರ 3)ಶಿವಪ್ಪ ತಂದೆ ಸಾಯಬಣ್ಣ ಟಣಕೆದಾರ 4)ಹಣಮಂತ ತಂದೆ ಬಸಪ್ಪ ಟಣಕೆದಾರ 5)ಶರಣಮ್ಮ ಗಂಡ ತಿರುಪತಿ ಟಣಕೆದಾರ 6)ದೇವಪ್ಪ ತಂದೆ ಭಿಮರಾಯ ಏವೂರ ಮತ್ತು 7)ಗುರುಲಿಂಗಪ್ಪ ತಂದೆ ಭೀಮರಾಯ ಏವೂರ ಇವರೆಲ್ಲರೂ ಕೂಡಿ ಬಂದು ನನಗೆ ಕೈಯಿಂದ ಮತ್ತು ಬಡಿಗೆಯಿಂದ ನನ್ನ ತಲೆಗೆ,ಬೆನ್ನಿಗೆ ಮತ್ತು ಕಾಲಿಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈಯುತ್ತ ಬಿಡಬೇಡಿರಿ ಈ ಸೂಳೆಗೆ ಹೊಡೆದು ಹಾಕಿರಿ ಅಂತಾ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂಡಿ ನನಗೆ ಹೊಡೆಯುತ್ತಿದ್ದಾಗ ನಮ್ಮ ಸಂಬಂಧಿಕರಾದ ಕೃಷ್ಣಪ್ಪ ತಂದೆ ಭೀಮರಾಯ ಕಕ್ಕಸಗೇರಾ ಮತ್ತು ಗೌಡಪ್ಪ ತಂದೆ ಹಣಮಂತ್ರಾಯ ಯಂಕಂಚಿ ಇವರು ಬಂದು ಜಗಳ ಬಿಡಿಸಿದರು ನಂತರ ನನಗೆ ಕೆಂಭಾವಿ ದವಾಖಾನೆಗೆ ಕರೆದುಕೊಂಡು ಬಂದು ತೋರಿಸಿಕೊಂಡಿದ್ದು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಬಂದು ಅಜರ್ಿ ಕೊಟ್ಟರಾಯಿತು ಅಂತಾ ಅಂದು ಊರಿಗೆ ಹೋಗಿ ಊರಲ್ಲಿದ್ದಾಗ ಮತ್ತೆ ನನಗೆ ಆದ ಗಾಯಗಳಿಂದ ನೋವು ಜಾಸ್ತಿಯಾಗಲು ಪ್ರಾರಂಭಿಸಿದ್ದರಿಂದ ನಾವು ಗುಲಬಗರ್ಾದ ಸರಕಾರಿ ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆದು ಇಂದು ದಿನಾಂಕ 24/04/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನನಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 56/2017 ಕಲಂ 143,147,148,323,324,354(ಎ),504,506 ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
     
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 52-2017 ಕಲಂ.323,324,355,504,506 ಸಂ.34 ಐ.ಪಿ.ಸಿ ಮತ್ತು 3(1)(R)(S) SC/ST POA.ACT-1989ದಿ::25/04/2017 ರಂದು ಸಾಯಾಂಕಾಲ 4 ಗಂಟೆಗೆ ಫಿರ್ಯಾದಿದಾರನಾದ ಕೃಷ್ಣಪ್ಪ ತಂ.ಯಮನಪ್ಪ ಮಾಳಿ ವ:18ಜಾ:ಪ.ಜಾತಿ ಉ:ಕೂಲಿಕೆಲಸ ಸಾ:ಕಚಕನೂರ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದರ ಸಾರಂಶವೆನಂದರೆ ದಿ:24/04/2017 ರಂದು ಸಮಯ 12 ಗಂಟೆಯ ಸುಮಾರಿಗೆ ನಾನು ನಮ್ಮ ಊರಿನ ನಿವಾಸಿಗಳಾದ 1) ಆನಂದ ತಂ.ಪರ್ವತಗೌಡ ವ:22 ಜಾ:ಹಿಂದುರೆಡ್ಡಿ  ಸಾ:ಕಚಕನೂರ 2)ಪರ್ವತಗೌಡ ತಂ.ಬಸನಗೌಡ  ಪೋ.ಪಾಟೀಲ್  ವ:40 ಜಾ:ಹಿಂದುರೆಡ್ಡಿ ಇವರ ಬೀಳು ಬಿದ್ದ ಹೊಲದಲ್ಲಿ ನಮ್ಮ ಹಲವಾರು ಧನಗಳು ಮೈಹಿಸುತ್ತಿರುವಾಗ  ನಾನು ಆ ಹೊಲದಲ್ಲಿ ಯಾವದೇ ಬೆಳೆ ಇಲ್ಲವೆಂದು ಅದೇ ಹೊಲದಲ್ಲಿ ನಮ್ಮ ಧನಗಳನ್ನು ಮೈಹಿಸುತ್ತಿರುವಾಗ ಇದನ್ನು ನೋಡಿ ಹೊಲದಮಾಲಿಕರಾದ ಆನಂದ ಎಂಬಾತನು ಇವರ ತಂದೆಯಾದ ಪರ್ವತಗೌಡ ದೌಡಾಸಿ ಎಲೇ ಮಾದಿಗ ಎನ್ನುತ್ತಾ ಜೋರಾಗಿ ಕೂಗಾಡುತ್ತಾ ನನ್ನ ಹತ್ತಿರ ಬಂದು  ಇಂದು ಮುಂದೆ ನೋಡದೇ ಚಪ್ಪಲಿ ಮತ್ತು ಕಟ್ಟಿಗೆಯಿಂದ ಹೊಡೆದು ಎಲೇ ಮಗನೇ ಮಾದಿಗ ಎನ್ನುತ್ತಾ  ಹಿಗ್ಗಾ ಮುಗ್ಗಾ ಹೊಡೆಯಹತ್ತಿದರು, ಗೌಡ್ರೆ ಹೊಡೆಯಬೇಡಿ ನಿಮ್ಮ ಕಾಲು ಹಿಡಿದುಕೊಳ್ಳುತ್ತೇನೆ ದಯಮಾಡಿ ಎಂದು ಕೂಗಿಕೊಂಡರು, ಎಲೇ ಮಾದಿಗ ನಿನಗೆ ಎಷ್ಟು ಸೊಕ್ಕು ಸೂಳೆ ಮಗನೇ ನನ್ನ ಹೊಲದಲ್ಲಿ  ಧನ ಬಿಡುವದಕ್ಕೆ ಎಷ್ಟು ಸೊಕ್ಕು ಎನ್ನುತ್ತಾ ಮನಬಂದಂತೆ ಹೊಡೆಯ ಹತ್ತಿದರು, ಆದರೂ ಸಮಯದಲ್ಲಿ ನಾನು ಜೀವ ಬೇದರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನನ್ನ ಬೆನ್ನಹತ್ತಿ ಓಡಿ ಬರುತ್ತಾ ಲೇ ಮಾದಿಗ  ನಿನ್ನನ್ನು ಇವತ್ತು ಕೊಲೆ ಮಾಡುವದು ಕಚಿತ  ಎಂದು ಅದು ಎಷ್ಟು  ಮಾದಿಗರು ಬರುತ್ತಾರೆ ಬರಲಿ ಎಲ್ಲರನ್ನು ಸಹ ಕೊಲೆ ಮಾಡುತ್ತೇವೆ ಎಂದು ಕೋಡಲಿ ಮತ್ತು ಕೂಡುಗೊಲು ತೆಗೆದುಕೊಂಡು ಬೆನ್ನಹತ್ತಿದರು, ಸದರಿ ಹೊಲದಲ್ಲಿ ಧನ ಮೇಯಿಸುತ್ತಿದ್ದ ನನ್ನ ಜನಾಂಗದವರಾದ 1)ಮಲ್ಲಣ್ಣ ತಂ ಪರಮಣ್ಣ ಕಟ್ಟೀಮನಿ 2)ಭೀಮಣ್ಣ ತಂ ಪರಮಣ್ಣ ಮಾದರ ಇವರಿಬ್ಬರೂ ನಾನು ಚೀರ್ಯಾಡುವದನ್ನು  ಕಂಡು ಬಯಬೀತಿಯಿಂದ ನನ್ನ ಹತ್ತಿರ ಬಂದು ನನಗೆ  ಹೊಡೆಯುವದನ್ನು ಬಿಡಿಸಿದರು.  ಆದ್ದರಿಂದ ದಯಾಳುಗಳಾದ ತಾವುಗಳು ಈ ಮೇಲೆ ತೊರಿಸಿದ ಆರೋಪಿಸ್ಥರನ್ನು ಕಂಡು ಇವರ ಮೇಲೆ ಸರಿಯಾದ ಕಾನೂನ ಕ್ರಮ ತೆಗೆದುಕೊಳ್ಳಬೇಕು ಅಂತಾ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ.323,324,355,504,506 ಸಂ.34 ಐ.ಪಿ.ಸಿ ಮತ್ತು3(1)(ಖ)(ಖ) ಖಅ/ಖಖಿ ಕಔಂ.ಂಅಖಿ-1989 ಅಡಿಯಲ್ಲಿ ಪ್ರಕರಣದಾಖಲಿಸಿಕೊಂಡಿದ್ದು ಇರುತ್ತದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 78[3] ಕೆಪಿ ಯ್ಯಾಕ್ಟ;- ದಿನಾಂಕ:25/04/2017 ರಂದು 1 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆಯುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರಾದ 1) ಶ್ರೀ ಶಿವಲಿಂಗಪ್ಪ ಪಿಸಿ.90 2) ಶ್ರೀ ಹುಸೇನ ಪಿಸಿ 236 3) ತಮ್ಮಣ್ಣ ಪಿಸಿ 193  ರವರಿಗೆ ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1)  ನಿಂಗಪ್ಪ ತಂದೆ ಮರೆಪ್ಪ ಆಂದೋಲಾ ಸಾ||ಶಕಾಪೂರ 2) ಶಂಕರ ತಂದೆ ನರಸಿಂಗ್ ಪವಾರ ವ|| 36 ಜಾ|| ಲಂಬಾಣಿ ಉ|| ಕೂಲಿ ಸಾ|| ಹೋತಪೇಟ ದಿಬ್ಬಿತಾಂಡಾ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಹಾಗೂ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಕರ್ಾರಿ ಜೀಪ್ ನಂ. ಕೆಎ-33 ಜಿ-0101 ನೇದ್ದರಲ್ಲಿ ಠಾಣೆಯಿಂದ 01-30 ಪಿಎಮ್ ಕ್ಕೆ ಹೊರಟು 2-00 ಪಿಎಮ್ ಕ್ಕೆ ಶಿರವಾಳ ಗ್ರಾಮಕ್ಕೆ ತಲುಪಿ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಕಟ್ಟೆಯ ಪಕ್ಕದಲ್ಲಿ  ಮರೆಯಾಗಿ ನಿಂತು ನೋಡಲಾಗಿ ಪಂಚಾಯತ  ಮುಂದೆ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ  ನಂಬರ ದೈವದ ಆಟ ಬರ್ರಿ 1 ರೂಪಾಯಿಗೆ  80 ರೂಪಾಯಿ ಬರುತ್ತದೆ.  ಅಂತ ಕೂಗುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2-05 ಪಿಎಮ್ ಕ್ಕೆ ದಾಳಿ ಮಾಡಿ, ಸದರ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ನಾಗಪ್ಪ ತಂದೆ ಸಿದ್ದಲಿಂಗಪ್ಪ ಸಿರನೆತ್ತಿ ವ|| 65 ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಶಿರವಾಳ ತಾ|| ಶಹಾಪೂರ ಅಂತ ತಿಳಿಸಿ ತಾನು ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ಆದರೆ ನಾನು ಬರೆದುಕೊಂಡ ಹಣವನ್ನು ನಮ್ಮೂರ ಸುಧಾಕರ ಕಂಬಾರ ಹಾಗು ರಾಜಶೇಖರ ತಂದೆ ಬಸವಂತಪ್ಪ ಕೋಲ್ಕರ ಇವರಿಗೆ ಕೊಡುತ್ತೆನೆ ಸದರಿಯವರು ನನಗೆ ಕಮಿಷನ್ ರೂಪದಲ್ಲಿ ಹಣ ಕೊಡುತ್ತಾರೆ ಅಂತಾ ತಿಳಿಸಿದನು. ಸದರಿಯವನ ಅಂಗ ಪರಿಶೀಲಿಸಲಾಗಿ 1) ನಗದು ಹಣ ರೂಪಾಯಿ 1100=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ 4) ಒಂದು ಕಾರ್ಬನ್ ಕಂಪನಿಯ ಸಾದಾ ಮೊಬೈಲ ಅ.ಕಿ: 200/- ರೂ ದೊರಕಿದ್ದು 2-05 ಪಿ.ಎಂ ದಿಂದ 03-05 ಪಿ.ಎಂ ದವರಗೆ ಪಂಚರ ಸಮಕ್ಷಮ ಸದರ ಮುದ್ದೆಮಾಲನ್ನು ವಶಪಡಿಸಿಕೊಂಡು ಈ ಮೇಲೆ ನಮೂದಿಸಿದ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 04-15 ಪಿ.ಎಂ ಕ್ಕೆ ಠಾಣೆಗೆ ಬಂದಿದ್ದು.ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಠಾಣೆ ಗುನ್ನೆ ನಂ 42/2017 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ.;- 57/2017 ಕಲಂ: 143,147,148,504,324,323 ಸಂ 149 ಐಪಿಸಿ;- ದಿನಾಂಕ: 25/04/2017 ರಂದು 11 ಎಎಮ್ ಕ್ಕೆ ಶ್ರೀ ಮರಿಲಿಂಗ ತಂದೆ ಮಲ್ಲಪ್ಪ ರಂಗಪೂರ ಸಾ:ಉಳ್ಳೆಸೂಗೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮೂರು ಸೀಮಾಂತರದಲ್ಲಿ ನಮ್ಮದೊಂದು ಬಾವಿ ಹೊಲ ಇರುತ್ತದೆ. ನಮ್ಮ ಹೊಲಕ್ಕೆ ಹತ್ತಿಕೊಂಡು ನಮ್ಮ ಎರಡನೆ ಅಣ್ಣತಮ್ಮಕಿಯವರ ಹೊಲ ಇರುತ್ತದೆ. ಅವರು ಈಗ ಸುಮಾರು ದಿವಸಗಳಿಂದ ನಮ್ಮ ಹೊಲದಲ್ಲಿ ತಮಗೆ 3-4 ದಿಂಡು ಹೊಲ ಬರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದರು. ನಾವು ಸವರ್ೆ ಮಾಡಿಸಿ ನಿಮಗೆ ಎಲ್ಲಿ ಬರುತ್ತದೆ ಅಲ್ಲಿ ತಗೊಂಡು ಬಿಡಿ ಎಂದು ಹೇಳಿದರು ಕೇಳದೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ಇಂದು ದಿನಾಂಕ: 25/04/2017 ರಂದು ನಾನು ಮತ್ತು ನಮ್ಮ ತಂದೆ ಮಲ್ಲಪ್ಪ, ತಾಯಿ ಸಿದ್ದಮ್ಮ ಹಾಗೂ ತಮ್ಮ ನಿಂಗಪ್ಪ ನಾಲ್ಕು ಜನರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮ ಬಾಜು ಹೊಲದ ಅಣ್ಣತಮ್ಮಕಿಯವರಾದ 1) ತಿಪ್ಪಣ್ಣ ತಂದೆ ನಾಗಪ್ಪ ರಂಗಪೂರ, 2) ದೇವಪ್ಪ ತಂದೆ ತಿಪ್ಪಣ್ಣ ರಂಗಪೂರ, 3) ಸಾಬಣ್ಣ ತಂದೆ ಸಿದ್ದಪ್ಪ ರಂಗಪೂರ, 4) ಭೀಮಣ್ಣ ತಂದೆ ಮಹಾಂತಪ್ಪ ರಂಗಪೂರ, 5) ಬಸಪ್ಪ ತಂದೆ ಮಹಾಂತಪ್ಪ ರಂಗಪೂರ, 6) ನಿಂಗಯ್ಯ ತಂದೆ ಸಿದ್ದಪ್ಪ ರಂಗಪೂರ, 7) ಹಳ್ಳೆಪ್ಪ ತಂದೆ ನಾಗಪ್ಪ ರಂಗಪೂರ, 8) ನಾಗಮ್ಮ ಗಂಡ ತಿಪ್ಪಣ್ಣ ರಂಗಪೂರ ಮತ್ತು 9) ಮಲ್ಲಮ್ಮ ಗಂಡ ಸಿದ್ದಪ್ಪ ರಂಗಪೂರ ಎಲ್ಲರೂ ಸಾ:ಉಳ್ಳೆಸೂಗೂರು ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡ್ಲಿ ಬಡಿಗೆ ಹಿಡಿದುಕೊಂಡು ಬಂದವರೆ ನಮ್ಮ ಬಾವಿ ಹೊಲದ ಡ್ವಾಣದ ಮೇಲೆ ಬಂದು ನಮಗೆ 3-4 ದಿಂಡು ಹೊಲ ಬರುತ್ತದೆ ಹರಗುತ್ತೆವೆ ಎಂದು ಡ್ವಾಣ ಕೆಡಿಸಲು ಮುಂದಾದಾಗ ನಾವು ಎಲ್ಲರೂ ಅಡ್ಡ ಹೋಗಿ ಹೀಗೆ ಡ್ವಾಣ ಕೆಡಿಸುವುದು ಸರಿ ಅಲ್ಲ. ನೀವು ಹೊಲ ಸವರ್ೆ ಮಾಡಿಸಿ, ನಿಮಗೆ ಎಲ್ಲಿ ಹೊಲ ಬರುತ್ತದೆ ಅಲ್ಲಿಗೆ ಹರಗಿಕೊಳ್ಳಿರಿ ಎಂದು ಹೇಳಿದರೆ ಕೇಳದೆ ಏ ಮಕ್ಕಳೆ ನಿಮ್ಮದು ಬಹಳ ಆಗಿದೆ ಇವತ್ತು ಊರಲ್ಲಿ ನೀವಾದರೂ ಇರಬೇಕು ಇಲ್ಲ ನಾವಾದರೂ ಇರಬೇಕು. ನಿಮಗೆ ಬಿಡುವುದಿಲ್ಲವೆಂದು ಜಗಳ ತೆಗೆದವರೆ ತಿಪ್ಪಣ್ಣನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನಮ್ಮ ತಂದೆ ಮಲ್ಲಪ್ಪನ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ದೇವಪ್ಪನು ಬಡಿಗೆಯಿಂದ ಬಲಗೈ ಮುಡ್ಡಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಹೊದ ನನಗೆ ಸಾಬಣ್ಣನು ಜಾಡಿಸಿ ನೆಲಕ್ಕೆ ದಬ್ಬಿಸಿಕೊಟ್ಟು ಬಿಳಿಸಿದ್ದರಿಂದ ಎಡಗಡೆ ಚೆಪ್ಪಿಗೆ ತರಚಿದ ಒಳಪೆಟ್ಟು ಆಗಿರುತ್ತದೆ. ದೇವಪ್ಪನು ಬಡಿಗೆಯಿಂದ ಎಡಗಾಲ ಕಪಗಂಡಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ನನ್ನ ತಮ್ಮ ನಿಂಗಪ್ಪನಿಗೆ ಭೀಮಣ್ಣನು ಬಡಿಗೆಯಿಂದ ತೆಲೆ ಹಿಂಭಾಗಕ್ಕೆ ಮತ್ತು ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ನಮ್ಮ ತಾಯಿ ಸಿದ್ದಮ್ಮಳಿಗೆ ನಾಗಮ್ಮ ಮತ್ತು ಮಲ್ಲಮ್ಮ ಇಬ್ಬರೂ ಸೇರಿ ಬಲಗೈ ಹಿಡಿದು ತಿರುವಿ ಒಳಪೆಟ್ಟು ಮಾಡಿ ಕೈಯಿಂದ ಟೊಂಕಕ್ಕೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಬಸಪ್ಪ, ನಿಂಗಯ್ಯ ಮತ್ತು ಹಳ್ಳೆಪ್ಪ ಈ 3 ಜನರೂ ಸೇರಿ ನಮಗೆಲ್ಲರಿಗೆ ಕೈಗಳಿಂದ ಮುಷ್ಠಿ ಮಾಡಿ ಮೈಕೈಗೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ ತಂದೆ ನಾಗಪ್ಪ ಯಲಗುಂಡಿ, ಮಾನೆಗಾರ ಬುಡ್ಡ ತಂದೆ ಜಲಾಲಸಾಬ ಮತ್ತು ನಮ್ಮ ಹೊಲದ ಹತ್ತಿರ ದಾರಿ ಮೇಲೆ ಹೋಗುತ್ತಿದ್ದ ದೇವಪ್ಪ ತಂದೆ ಮಾರ್ತಂಡಪ್ಪ ದುಪ್ಪಲ್ಲಿ ಇವರು ಬಂದು ಜಗಳವನ್ನು ಬಿಡಿಸಿದರು. ಕಾರಣ ಹೊಲದ ಸಂಬಂಧ ನಮ್ಮೊಂದಿಗೆ ಜಗಳ ತೆಗೆದು ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2017 ಕಲಂ: 143,147,148,504,324,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!