::ಪತ್ರಿಕಾ
ಪ್ರಕಟಣೆ::
ದಿನಾಂಕ:22-04-2017
ದಿನಾಂಕ:11.04.2017 ರ ರಾತ್ರಿ 11 ಗಂಟೆಯಿಂದ 12.04.2017 ರ ಬೆಳಿಗ್ಗೆ 9 ಗಂಟೆಯ ನಡುವೆ
ಬೂದಿಹಾಳ ಗ್ರಾಮದ ಫಿಯರ್ಾದಿ ಮನೆಯ ಮುಂದಿನ ಅಂಗಳದಲ್ಲಿ ಮಲಗಿದ ಸಮಯದಲ್ಲಿ ಭೂಮಿಕಾ ತಂದೆ
ಕಾಶಿನಾಥ ವಯ:01 ವರ್ಷ
ಇವಳನ್ನು ಯಾರೋ ಎತ್ತಿಕೊಂಡು ಹೋಗಿ, ಅವಳೇ ಧರಿಸಿದ್ದ ಪ್ಯಾಂಟ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಹೊರಟ್ಟಿ
ಬ್ರಿಡ್ಜ್ ಕೆಳಗಡೆ ಎಸೆದು ಹೋಗಿದ್ದು ಇರುತ್ತದೆ. ಈ ಬಗ್ಗೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ
ಫಿಯರ್ಾದಿದಾರರಾದ ಲಕ್ಷ್ಮಿ ಗಂಡ ಕಾಶಿನಾಥ ಚಲವಾದಿ ಫಿಯರ್ಾದಿ ನೀಡಿದ ಮೇರೆಗೆ ಗುನ್ನೆ ನಂ:26/2017 ಕಲಂ. 143, 109, 366 506, 302, ಸಂ. 149 ಐಪಿಸಿ ಮತ್ತು 3(1)(ಆರ್), 3(1)(ಎಸ್), (ಒ) ಎಸ್.ಸಿ/ಎಸ್.ಟಿ
ಕಾಯಿದೆ ಅಡಿಯಲ್ಲಿ ಪ್ರಕರಣವು ದಾಖಲಾಗಿದ್ದು ಇರುತ್ತದೆ.
ಸದರಿ
ಪ್ರಕರಣದ ತನಿಖೆಯನ್ನು ಶೋರಾಪೂರ ಪೊಲೀಸ್ ಉಪವಿಭಾಗದ ಎ.ಎಸ್.ಪಿ ರವರಾದ ಶ್ರೀ ಶಿವಪ್ರಕಾಶ
ದೇವರಾಜು ಐ.ಪಿ.ಎಸ್ ಇವರು ತನಿಖೆಯನ್ನು ಕೈಕೊಂಡಿದ್ದು, ಆರೋಪಿತರನ್ನು ಪತ್ತೆ ಹಚ್ಚಲು ತನಿಖಾಧಿಕಾರಿಯವರು ತಂಡ ರಚನೆ
ಮಾಡಿದ್ದು, ದಿಃ22.04.2017 ರಂದು ಸದರಿ ಪ್ರಕರಣದ
ಆರೋಪಿತರಾದ ಮೃತಳ ತಂದೆ ಕಾಶಿನಾಥ ತಂದೆ ಬಸಪ್ಪ ಚಲವಾದಿ, ಬಸಪ್ಪ ತಂದೆ ಭೀಮಣ್ಣ ಚಲವಾದಿ ಸಾ: ಇಬ್ಬರೂ ಬೂದಿಹಾಳ
ಇವರನ್ನು ದಸ್ತಗಿರಿ ಮಾಡಲಾಗಿದೆ. ಸದರಿ ಪ್ರಕರಣದ ಆರೋಪಿತನಾದ ಕಾಶಿನಾಥ ಇವನು ಎರಡನೇ
ಮದುವೆಯಾಗಿದ್ದರಿಂದ ಮೊದಲನೇ ಹೆಂಡತಿಯ ಮೃತ ಮಗುವಿಗೆ ಆಸ್ತಿ ನೀಡಬೇಕಾಗುತ್ತದೆ ಎಂಬ ಕಾರಣದಿಂದ
ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಸದರಿ ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ತಂಡದಲ್ಲಿ ಪೊಲೀಸ್ ಅಧಿಕಾರಿಯವರಾದ ಸಿಪಿಐ ಹುಣಸಗಿ ವೃತ್ತ. ಪಿ.ಎಸ್.ಐ ಕೊಡೇಕಲ್, ಪಿ.ಎಸ್.ಐ ಹುಣಸಗಿ
ಹಾಗೂ ಸಿಬ್ಬಂದಿಯವರಾದ ಮುಖ್ಯ ಪೇದೆ ನಾರಾಯಣ, ಬಸನಗೌಡ, ಪ್ರಕಾಶ ಪೇದೆಗಳಾದ ತಾಯಪ್ಪ, ವೆಂಕಟರಮಣ, ವಿಷ್ಣುವರ್ಧನ, ಲಿಂಗಪ್ಪ, ಶ್ವೇತಾ ಮ.ಪಿ.ಸಿ ಇವರುಗಳು ಆರೋಪಿತರನ್ನು ಪತ್ತೆ ಹಚ್ಚಿ ಪ್ರಕರಣ
ಭೇದಿಸಲು ತನಿಖಾಧಿಕಾರಿಯವರಿಗೆ ಸಹಾಯ ಮಾಡಿರುತ್ತಾರೆ ಅಂತಾ ಪತ್ರಿಕೆಯಲ್ಲಿ ಪ್ರಕಟಿಸಲು
ನೀಡಲಾಗಿದೆ.
ಪೊಲೀಸ್
ಅಧೀಕ್ಷಕರು,
ಯಾದಗಿರ.
Hello There!If you like this article Share with your friend using