Yadgir District Reported Crimes Updated on 26-04-2017

By blogger on ಬುಧವಾರ, ಏಪ್ರಿಲ್ 26, 2017
Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 379 ಐ.ಪಿ.ಸಿ;- ದಿನಾಂಕ 25/04/2017 ರಂದು 7-30 ಪಿಎಂಕ್ಕೆ ಪಿರ್ಯಾದಿ ಶ್ರೀ ಮರಿಲಿಂಗ ತಂ. ಜುಬಲಪ್ಪ ಹೊಸಮನಿ ವಃ 30 ಜಾಃ ಹೊಲೆಯ(ಪ.ಜಾತಿ) ಉಃ ಎನ್.ಜಿ.ಓ ದಲ್ಲಿ ಕೆಲಸ ಸಾಃ ಲಕ್ಕಿ ನಗರ ಯಾದಗಿರಿ ಇವರು ಒಂದು ಹೇಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ನಾನು ಮೇಲಿನ ವಿಳಾಸದವನಿದ್ದು ಎನ್.ಜಿ.ಓ ದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನದೊಂದು ಹೊಂಡಾ ಶೈನ್ ಕಂಪನಿಯ ಮೋ.ಸೈಕಲ್ ನಂ.ಕೆಎ-33-ಆರ್.1377 ಇದ್ದು ನಾನೇ ನಡಿಸಿಕೊಂಡು ಇರುತ್ತೇನೆ. ಹೀಗಿದ್ದು ನಾನು ದಿನಾಂಕ:28/03/2017 ರಂದು ರಾತ್ರಿ 10;00 ಗಂಟೆ ಸಮಯಲ್ಲಿ ನನ್ನ ಮನೆಯ  ಮುಂದೆ ನನ್ನ ಮೇಲ್ಕಂಡ ಮೋ.ಸೈಕಲ್ ನಿಲ್ಲಿಸಿದ್ದೆನು. ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾನು ಮನೆಯಿಂದ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಹೊಂಡಾ ಶೈನ್ ಕಂಪನಿಯ ಮೋ.ಸೈಕಲ್ ನಂ.ಕೆಎ-33-ಆರ್.1377 ಮೋ.ಸೈಕಲ್ ಕಾಣಿಸಲಿಲ್ಲಾ ಸುತ್ತ ಮುತ್ತ ನೋಡಲಾಗಿ ಎಲ್ಲಿಯೂ ಕಾಣಿಸಲಿಲ್ಲಾ. ನಂತರ ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ. ಕಾರಣ ಹೊಂಡಾ ಶೈನ್ ಕಂಪನಿಯ ಮೋಟರ ಸೈಕಲ್ ನಂ.ಕೆಎ-33-ಆರ್.1377 ಅಂ.ಕಿ.40,000/-ರೂ. ಸದರಿ ಮೋ.ಸೈಕಲ್ (ಚೆಸ್ಸಿ ನಂ. ಒಇ4ಎಅ36ಎಆಇಖಿ037814, ಇಂಜಿನ್ ನಂ. ಎಅ36ಇಖಿ7062300) ನೇದ್ದನ್ನು ದಿನಾಂಕ 28/03/2017 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 29/03/2017 ರಂದು ಬೆಳಿಗ್ಗೆ 7 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಕಾರಣ ಕಳ್ಳರನ್ನು ಪತ್ತೆ ಮಾಡಿ ನಮ್ಮ ಮೋ.ಸೈಕಲ್ನ್ನು ದೊರಕಿಸಿಕೊಟ್ಟು ಕಳ್ಳರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ಇಂದು ತಡವಾಗಿ ಠಾಣೆಗೆ ಬಂದು ನನ್ನ ಒಂದು ಪಿರ್ಯಾದಿ ಹೇಳಿಕೆಯನ್ನು ಟೈಪ ಮಾಡಿಸಿರುತ್ತೇನೆ. ಅಂತಾ ಕೊಟ್ಟ ಹೇಲೀಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.63/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 66/2017 ಕಲಂ 87 ಕೆ.ಪಿ ಆಕ್ಟ್ ;- ದಿನಾಂಕ 25/04/2017 ರಂದು 5-30 ಪಿ.ಎಂ ಕ್ಕೆ  ಆರೋಪಿತರು  ಇಸ್ಪಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯಡ್ಡಳ್ಳಿ ಸೀಮಾಂತರದ ಹಜರತ ಖಾಜಾ ಭಾಯಿ ದಗರ್ಾದ ಹತ್ತಿರ ಖುಲ್ಲಾ ಜಾಗೆಯಲ್ಲಿ ಹೋಗಿ ಪಂಚರು ಹಾಗೂ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು 5200/-ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು,  ಆರೋಪಿತರಿಂದ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ  ಈ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 12/2017 ಕಲಂ 376 504 506 ಐ.ಪಿ.ಸಿ. ಮತ್ತು 5 &6 ಪೊಸ್ಕೊ ಕಾಯಿದೆ -2012;- ದಿನಾಂಕ 17/04/2017 ರಂದು ಸೋಮವಾರದಂದು ನನ್ನ ಮೊದಲನೆಯ ಮಗಳಾದ ಭಾರತಿ ಗಂಡ ರಮೇಶ ಇವಳ ಮೊದಲನೆಯ ಹೆರಿಗೆ ಮಾಡಿಸುವ ಸಲುವಾಗಿ ತೇಲಾಂಗಣ ರಾಜ್ಯದ ಮೈಹಿಬೂಬ ನಗರ ಸಕರ್ಾರಿ ಆಸ್ಪತ್ರೆಗೆ ಹೋಗಿ  ಮಗಳ ಹೆರಿಗೆ ಆದ ನಂತರ ನಾನು ಮರಳಿ ದಿನಾಂಕ 18/04/2017 ರಂದು 4 ಪಿ.ಎಮ್. ದ ಸಮಾರಿಗೆ ನಮ್ಮೂರಾದ ಏಡಿಪಲ್ಲಿಗೆ ಬಂದು ಮನೆಯಲ್ಲಿ ನಾನು ನನ್ನ ಗಂಡ ಮಕ್ಕಳಾದ ಕ್ರಿಷ್ಟಮ್ಮ, ರಾಜು ಶೇಖರ ನಾವು ಎಲ್ಲಾರು ಮನೆಯಲ್ಲಿದ್ದಾಗ ಕ್ರಿಷ್ಟಮ್ಮಳು ಸಾಯಾಂಕಾಲ ಬೈರದಸಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದಳು ಹೋದ ಸ್ವಲ್ಪ ಸಮಯದಲ್ಲಿ ಮನೆಯ ಹಿಂದಿನ ದೋಡ್ಡಿಯಲ್ಲಿ ಅಳುವದು ಚಿರಾಡುವ ಶಬ್ದ ನಮಗೆ ಕೇಳಿ ಬಂದಾಗ ಆಗ ನಾನು ನನ್ನ ಗಂಡ ಗಾಬರಿಯಿಂದ ಹೋಗಿ ನೋಡಲಾಗಿ ನಮ್ಮೂರಿನ ಭೀಮಶಪ್ಪ ತಂದೆ ಆಶಣ್ಣ ನಕ್ಕ ವ|| 32 ಇತನು ನನ್ನ ಮಗಳು ಕ್ರಿಷ್ಟಮ್ಮಳಿಗೆ ಕೆಳಗೆ ಕೆಡವಿ ಅವಳ ಮೇಲೆ ಬಿದ್ದು ಜಭರಿ ಸಂಭೋಗ ಮಾಡುತ್ತಿದ್ದನು ನಮ್ಮನು ನೋಡಿ ಓಡಿ ಹೋದನು ಆಗ ಸಮಯ ಸಾಯಾಂಕಾಲ 4.30 ಗಂಟೆ ಆಗಿತ್ತು ನಮ್ಮ ಮಗಳು ಅಳುತ್ತಿದ್ದವಳನ್ನು ಸಮದಾನ ಪಡಿಸಿ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ನಾನು ಬೈಯರದಸಿಗೆ ಹೋಗುತ್ತಿದ್ದಾಗ ನಮ್ಮೂರ ಭೀಮಶಪ್ಪ ಇತನು ನಮ್ಮ ದೋಡ್ಡಿಗೆ ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ನನಗೆ ಬಲ್ಕಾರವಾಗಿ ಸಂಬೋಗ ಮಾಡಿರುತ್ತಾನೆ. ಮತ್ತು ಹೋದ ಮಂಗಳವಾರ 11/04/2017 ರಂದು ಈ ರೀತಿ ಬೈಯರದಸಿಗೆ ಹೋಗುತ್ತಿದ್ದಾಗ  ಅವಾತು ಕೂಡಾ ಸಂಜೆ 5 ಗಂಟೆಯ ಸುಮಾರಿಗೆ ನನ್ನ ಬಾಯಿ ಒತ್ತಿ ಹಿಡಿದು ಜಭರಿ ಸಂಬೋಗ ಮಾಡಿರುತ್ತಾನೆ ಈ ವಿಷಯ ನಿಮ್ಮ ಮನೆಯವರಗೆ ತಿಳಿಸಿದರೆ ನಿನಗೆ ಜೀವ ಸಮೇತ ಬಿಡುವುದಿಲ್ಲಾ ಅಂತ ಹೆರಿಸಿದರಿಂದ ನಾನು ತಮ್ಮ ಮುಂದೆ ಹೇಳಿರುವುದಿಲ್ಲ. ಅಂತ ನಮ್ಮ ಮಗಳು ತಿಳಿಸಿದಳು ನಾನು ನನ್ನ ಗಂಡ ಕೂಡಿ ಸದರಿ ಭೀಮಶಪ್ಪನ ವಿರುದ್ದ ದೂರು ನೀಡವ ಕುರಿತು ಗುರಮಿಟ್ಕಲ್ ಠಾಣೆಗೆ ಹೋದಾಗ ಇದು ಕೇಸ್ ನಮಗೆ ಬರುವುದಿಲ್ಲ ಯಾದಗಿರಿ ಮಹಿಳಾ ಠಾಣೆಗೆ ಹೋಗಿ ಕೇಸ್ ಕೊಡಲು ತಿಳಿಸಿದ್ದರಿಂದ ಅಂದು ಸಂಜೆ ಆಗಿದ್ದರಿಂದ ನಾವು ಮರಳಿ ಮನೆಗೆ ಬಂದಿರುತ್ತೇವೆ. ಅದೆ ದಿನ ರಾತ್ರಿ 8 ಗಂಟೆಯ ಸುಮಾರಿಗೆ  ಭೀಮಶಪ್ಪ ಇತನು ನಮ್ಮ ಮನೆಗೆ ಬಂದು ನೀವು ಗುರುಮಿಟ್ಕಲ ಠಾಣೆಗೆ ಹೋಗಿ  ನನ್ನ ವಿರುದ್ದ ದೂರ ಕೊಡಲು ಹೋಗಿದ್ದಿರಿ ಅಂತ ಅಂದು ನನಗೆ ಮತ್ತು ನನ್ನ ಮಗಳಿಗೆ ಮತ್ತು ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ನೀವು ಯಾದಗಿರಿಗೆ ಹೋಗಿ ನನ್ನ ವಿರುದ್ದ ದೂರ ಕೊಟ್ಟರೆ ನಿನ್ನ ಮಗಳನ್ನು ಮತ್ತು ನಿಮ್ಮನ್ನು ಜೀವಸಮೇತ ಉಳಿಸುವದಿಲ್ಲ ಅಂತ ಜೀವ ಬೇದರಿಕೆ ಹಾಕಿರುತ್ತಾನೆ. ಭೀಮಶಪ್ಪನಿಗೆ ಅಂಜಿ ಇಲ್ಲಿಯ ವರೆಗೆ ಠಾಣೆಗೆ ಬಂದು ದೂರು ನೀಡಿರಲ್ಲಿಲ್ಲ ನಾನು ಇಂದು ನಮ್ಮ ಅಣ್ಣ ತಮ್ಮಂದಿರಿಗೆ ವಿಚಾರಿ ಯಾದಗಿರಿ ಮಹಿಳಾ ಠಾಣೆ ಬಂದು ತಡವಾಗಿ ದೂರು ಸಲ್ಲಿಸಿರುತ್ತೇನೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ 379 ಐಪಿಸಿ ;- ದಿನಾಂಕ 25/04/2017 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿ ಶ್ರೀಮತಿ ಕುಸ್ಮಾವತಿ ಗಂಡ ರವಿ ಎತ್ತಿನಮನಿ ವಯ 35 ವರ್ಷ ಜಾತಿ ಲಿಂಗಾಯತ ಸಾಃ ರಂಗಪೇಠ ತಾಃ ಸುರಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 25/04/2017 ರಂದು ಸಾಯಂಕಾಲ 5 ಗಂಟೆಗೆ ತನ್ನ ಕುಟುಂಬದೊಂದಿಗೆ ತನ್ನ ತವರೂರಾದ ಮದ್ರಕಿ ಗ್ರಾಮದಿಂದ ರಂಗಪೇಠಕ್ಕೆ ಹೋಗುವ ಸಂಬಂಧ ಕ್ರೋಜರ ಜೀಪ್ನಲ್ಲಿ ಶಹಾಪೂರ ಹಳೆ ಬಸ್ ನಿಲ್ದಾಣಕ್ಕೆ ಬಂದು ಶಹಾಪೂರ ಬಸ್ ನಿಲ್ದಾಣದಲ್ಲಿ ಸುರಪೂರಕ್ಕೆ ಹೋಗುವ ಬಸ್ಸಿಗೆ ಸಾಯಂಕಲ 5-45 ಗಂಟೆಗೆ ನೂಕು ನೂಗ್ಗಲುದಲ್ಲಿ ಬಸ್ ಹತ್ತುವಾಗ ಫಿರ್ಯಾದಿಯ ವೆನಿಟಿ ಬ್ಯಾಗಿನ ಪರ್ಸನಲ್ಲಿಟ್ಟ 19 ತೊಲೆಯ ಬಂಗಾರದ ಸಾಮಾನುಗಳಾದ 1] 50 ಗ್ರಾಂ ಬಂಗಾರದ ಸರ ಅಂ.ಕಿ 1,25,000=00 ರೂಪಾಯಿ 2] 50 ಗ್ರಾಂ ಬಂಗಾರ ನಾನ್ ಚೈನ್ ಅಂ.ಕಿ 1,25,000=00 ರೂಪಾಯಿ 3] 40 ಗ್ರಾಂ ಬಂಗಾರದ ಬಿಲ್ವಾರ್ 1,00,000=00 ರೂಪಾಯಿ 4] 30 ಗ್ರಾಂ ಬಂಗಾರದ ಕಂಗನ್ ಅಂ.ಕಿ 75,000=00 ರೂಪಾಯಿ 5] 5 ಗ್ರಾಂ ಬಂಗಾರದ ಉಂಗುರ ಅಂ.ಕಿ 12,500=00 ರೂಪಾಯಿ 6] 10 ಗ್ರಾಂನ ಎರಡು ಜೊತೆ ಕಿವಿಯೊಲೆ ಅಂ.ಕಿ 25,000=00 ರೂಪಾಯಿ 7] 5 ಗ್ರಾಂ ಬಂಗಾರದ ಲಾಕೇಟ್ ಅಂ.ಕಿ 12,500=00 ಅಂದಾಜು ಕಿಮ್ಮತ್ತು 4,75,000=00 ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಮತ್ತು ಫಿರ್ಯಾದಿಯ ಹತ್ತುವ ಬಸ್ಸಿನಲ್ಲಿಯೇ ಒಬ್ಬ ಮಹಿಳೆ ಸುಜಾತ ಇವಳ ಕೊರಳಲ್ಲಿದ್ದ ಅರ್ಧತೊಲೆಯ ಕರಿಮಣಿಯ ಮಾಂಗಲ್ಯ ಸರ ಅದರಲ್ಲಿ ಅರ್ಧತೊಲೆಯ ಬಂಗಾರದ ಗುಂಡುಗಳು ಅಂ.ಕಿ 12,500=00 ರೂಪಾಯಿ ಕಿಮ್ಮತ್ತಿನ ಸಾಮಾನು ಯಾರೋ ಕಳ್ಳರು ಕಳ್ಳತನ ಮಾಡಿದ್ದು ಹೀಗೆ ಒಟ್ಟು 195 ಗ್ರಾಂ ಬಂಗಾರ ಅಂದಾಜು ಕಿಮ್ಮತ್ತು 4,87,500=00 ರೂಪಾಯಿ ಕಿಮ್ಮತ್ತಿನ  ಬಂಗಾರದ ಸಾಮಾನುಗಳು ಕಳ್ಳತನ ಮಾಡಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 126/2017 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ: 143,147,148,504,324,323 ಸಂ 149 ಐಪಿಸಿ ;- ದಿನಾಂಕ: 25/04/2017 ರಂದು 11 ಎಎಮ್ ಕ್ಕೆ ಶ್ರೀ ಮರಿಲಿಂಗ ತಂದೆ ಮಲ್ಲಪ್ಪ ರಂಗಪೂರ ಸಾ:ಉಳ್ಳೆಸೂಗೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮೂರು ಸೀಮಾಂತರದಲ್ಲಿ ನಮ್ಮದೊಂದು ಬಾವಿ ಹೊಲ ಇರುತ್ತದೆ. ನಮ್ಮ ಹೊಲಕ್ಕೆ ಹತ್ತಿಕೊಂಡು ನಮ್ಮ ಎರಡನೆ ಅಣ್ಣತಮ್ಮಕಿಯವರ ಹೊಲ ಇರುತ್ತದೆ. ಅವರು ಈಗ ಸುಮಾರು ದಿವಸಗಳಿಂದ ನಮ್ಮ ಹೊಲದಲ್ಲಿ ತಮಗೆ 3-4 ದಿಂಡು ಹೊಲ ಬರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದರು. ನಾವು ಸವರ್ೆ ಮಾಡಿಸಿ ನಿಮಗೆ ಎಲ್ಲಿ ಬರುತ್ತದೆ ಅಲ್ಲಿ ತಗೊಂಡು ಬಿಡಿ ಎಂದು ಹೇಳಿದರು ಕೇಳದೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ಇಂದು ದಿನಾಂಕ: 25/04/2017 ರಂದು ನಾನು ಮತ್ತು ನಮ್ಮ ತಂದೆ ಮಲ್ಲಪ್ಪ, ತಾಯಿ ಸಿದ್ದಮ್ಮ ಹಾಗೂ ತಮ್ಮ ನಿಂಗಪ್ಪ ನಾಲ್ಕು ಜನರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮ ಬಾಜು ಹೊಲದ ಅಣ್ಣತಮ್ಮಕಿಯವರಾದ 1) ತಿಪ್ಪಣ್ಣ ತಂದೆ ನಾಗಪ್ಪ ರಂಗಪೂರ, 2) ದೇವಪ್ಪ ತಂದೆ ತಿಪ್ಪಣ್ಣ ರಂಗಪೂರ, 3) ಸಾಬಣ್ಣ ತಂದೆ ಸಿದ್ದಪ್ಪ ರಂಗಪೂರ, 4) ಭೀಮಣ್ಣ ತಂದೆ ಮಹಾಂತಪ್ಪ ರಂಗಪೂರ, 5) ಬಸಪ್ಪ ತಂದೆ ಮಹಾಂತಪ್ಪ ರಂಗಪೂರ, 6) ನಿಂಗಯ್ಯ ತಂದೆ ಸಿದ್ದಪ್ಪ ರಂಗಪೂರ, 7) ಹಳ್ಳೆಪ್ಪ ತಂದೆ ನಾಗಪ್ಪ ರಂಗಪೂರ, 8) ನಾಗಮ್ಮ ಗಂಡ ತಿಪ್ಪಣ್ಣ ರಂಗಪೂರ ಮತ್ತು 9) ಮಲ್ಲಮ್ಮ ಗಂಡ ಸಿದ್ದಪ್ಪ ರಂಗಪೂರ ಎಲ್ಲರೂ ಸಾ:ಉಳ್ಳೆಸೂಗೂರು ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡ್ಲಿ ಬಡಿಗೆ ಹಿಡಿದುಕೊಂಡು ಬಂದವರೆ ನಮ್ಮ ಬಾವಿ ಹೊಲದ ಡ್ವಾಣದ ಮೇಲೆ ಬಂದು ನಮಗೆ 3-4 ದಿಂಡು ಹೊಲ ಬರುತ್ತದೆ ಹರಗುತ್ತೆವೆ ಎಂದು ಡ್ವಾಣ ಕೆಡಿಸಲು ಮುಂದಾದಾಗ ನಾವು ಎಲ್ಲರೂ ಅಡ್ಡ ಹೋಗಿ ಹೀಗೆ ಡ್ವಾಣ ಕೆಡಿಸುವುದು ಸರಿ ಅಲ್ಲ. ನೀವು ಹೊಲ ಸವರ್ೆ ಮಾಡಿಸಿ, ನಿಮಗೆ ಎಲ್ಲಿ ಹೊಲ ಬರುತ್ತದೆ ಅಲ್ಲಿಗೆ ಹರಗಿಕೊಳ್ಳಿರಿ ಎಂದು ಹೇಳಿದರೆ ಕೇಳದೆ ಏ ಮಕ್ಕಳೆ ನಿಮ್ಮದು ಬಹಳ ಆಗಿದೆ ಇವತ್ತು ಊರಲ್ಲಿ ನೀವಾದರೂ ಇರಬೇಕು ಇಲ್ಲ ನಾವಾದರೂ ಇರಬೇಕು. ನಿಮಗೆ ಬಿಡುವುದಿಲ್ಲವೆಂದು ಜಗಳ ತೆಗೆದವರೆ ತಿಪ್ಪಣ್ಣನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನಮ್ಮ ತಂದೆ ಮಲ್ಲಪ್ಪನ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ದೇವಪ್ಪನು ಬಡಿಗೆಯಿಂದ ಬಲಗೈ ಮುಡ್ಡಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಹೊದ ನನಗೆ ಸಾಬಣ್ಣನು ಜಾಡಿಸಿ ನೆಲಕ್ಕೆ ದಬ್ಬಿಸಿಕೊಟ್ಟು ಬಿಳಿಸಿದ್ದರಿಂದ ಎಡಗಡೆ ಚೆಪ್ಪಿಗೆ ತರಚಿದ ಒಳಪೆಟ್ಟು ಆಗಿರುತ್ತದೆ. ದೇವಪ್ಪನು ಬಡಿಗೆಯಿಂದ ಎಡಗಾಲ ಕಪಗಂಡಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ನನ್ನ ತಮ್ಮ ನಿಂಗಪ್ಪನಿಗೆ ಭೀಮಣ್ಣನು ಬಡಿಗೆಯಿಂದ ತೆಲೆ ಹಿಂಭಾಗಕ್ಕೆ ಮತ್ತು ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ನಮ್ಮ ತಾಯಿ ಸಿದ್ದಮ್ಮಳಿಗೆ ನಾಗಮ್ಮ ಮತ್ತು ಮಲ್ಲಮ್ಮ ಇಬ್ಬರೂ ಸೇರಿ ಬಲಗೈ ಹಿಡಿದು ತಿರುವಿ ಒಳಪೆಟ್ಟು ಮಾಡಿ ಕೈಯಿಂದ ಟೊಂಕಕ್ಕೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಬಸಪ್ಪ, ನಿಂಗಯ್ಯ ಮತ್ತು ಹಳ್ಳೆಪ್ಪ ಈ 3 ಜನರೂ ಸೇರಿ ನಮಗೆಲ್ಲರಿಗೆ ಕೈಗಳಿಂದ ಮುಷ್ಠಿ ಮಾಡಿ ಮೈಕೈಗೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ ತಂದೆ ನಾಗಪ್ಪ ಯಲಗುಂಡಿ, ಮಾನೆಗಾರ ಬುಡ್ಡ ತಂದೆ ಜಲಾಲಸಾಬ ಮತ್ತು ನಮ್ಮ ಹೊಲದ ಹತ್ತಿರ ದಾರಿ ಮೇಲೆ ಹೋಗುತ್ತಿದ್ದ ದೇವಪ್ಪ ತಂದೆ ಮಾರ್ತಂಡಪ್ಪ ದುಪ್ಪಲ್ಲಿ ಇವರು ಬಂದು ಜಗಳವನ್ನು ಬಿಡಿಸಿದರು. ಕಾರಣ ಹೊಲದ ಸಂಬಂಧ ನಮ್ಮೊಂದಿಗೆ ಜಗಳ ತೆಗೆದು ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2017 ಕಲಂ: 143,147,148,504,324,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 78[3] ಕೆಪಿ ಯ್ಯಾಕ್ಟ ;- ದಿನಾಂಕ:25/04/2017 ರಂದು 1 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆಯುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರಾದ 1) ಶ್ರೀ ಶಿವಲಿಂಗಪ್ಪ ಪಿಸಿ.90 2) ಶ್ರೀ ಹುಸೇನ ಪಿಸಿ 236 3) ತಮ್ಮಣ್ಣ ಪಿಸಿ 193  ರವರಿಗೆ ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1)  ನಿಂಗಪ್ಪ ತಂದೆ ಮರೆಪ್ಪ ಆಂದೋಲಾ ಸಾ||ಶಕಾಪೂರ 2) ಶಂಕರ ತಂದೆ ನರಸಿಂಗ್ ಪವಾರ ವ|| 36 ಜಾ|| ಲಂಬಾಣಿ ಉ|| ಕೂಲಿ ಸಾ|| ಹೋತಪೇಟ ದಿಬ್ಬಿತಾಂಡಾ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಹಾಗೂ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಕರ್ಾರಿ ಜೀಪ್ ನಂ. ಕೆಎ-33 ಜಿ-0101 ನೇದ್ದರಲ್ಲಿ ಠಾಣೆಯಿಂದ 01-30 ಪಿಎಮ್ ಕ್ಕೆ ಹೊರಟು 2-00 ಪಿಎಮ್ ಕ್ಕೆ ಶಿರವಾಳ ಗ್ರಾಮಕ್ಕೆ ತಲುಪಿ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಕಟ್ಟೆಯ ಪಕ್ಕದಲ್ಲಿ  ಮರೆಯಾಗಿ ನಿಂತು ನೋಡಲಾಗಿ ಪಂಚಾಯತ  ಮುಂದೆ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ  ನಂಬರ ದೈವದ ಆಟ ಬರ್ರಿ 1 ರೂಪಾಯಿಗೆ  80 ರೂಪಾಯಿ ಬರುತ್ತದೆ.  ಅಂತ ಕೂಗುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2-05 ಪಿಎಮ್ ಕ್ಕೆ ದಾಳಿ ಮಾಡಿ, ಸದರ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ನಾಗಪ್ಪ ತಂದೆ ಸಿದ್ದಲಿಂಗಪ್ಪ ಸಿರನೆತ್ತಿ ವ|| 65 ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಶಿರವಾಳ ತಾ|| ಶಹಾಪೂರ ಅಂತ ತಿಳಿಸಿ ತಾನು ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ಆದರೆ ನಾನು ಬರೆದುಕೊಂಡ ಹಣವನ್ನು ನಮ್ಮೂರ ಸುಧಾಕರ ಕಂಬಾರ ಹಾಗು ರಾಜಶೇಖರ ತಂದೆ ಬಸವಂತಪ್ಪ ಕೋಲ್ಕರ ಇವರಿಗೆ ಕೊಡುತ್ತೆನೆ ಸದರಿಯವರು ನನಗೆ ಕಮಿಷನ್ ರೂಪದಲ್ಲಿ ಹಣ ಕೊಡುತ್ತಾರೆ ಅಂತಾ ತಿಳಿಸಿದನು. ಸದರಿಯವನ ಅಂಗ ಪರಿಶೀಲಿಸಲಾಗಿ 1) ನಗದು ಹಣ ರೂಪಾಯಿ 1100=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ 4) ಒಂದು ಕಾರ್ಬನ್ ಕಂಪನಿಯ ಸಾದಾ ಮೊಬೈಲ ಅ.ಕಿ: 200/- ರೂ ದೊರಕಿದ್ದು 2-05 ಪಿ.ಎಂ ದಿಂದ 03-05 ಪಿ.ಎಂ ದವರಗೆ ಪಂಚರ ಸಮಕ್ಷಮ ಸದರ ಮುದ್ದೆಮಾಲನ್ನು ವಶಪಡಿಸಿಕೊಂಡು ಈ ಮೇಲೆ ನಮೂದಿಸಿದ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 04-15 ಪಿ.ಎಂ ಕ್ಕೆ ಠಾಣೆಗೆ ಬಂದಿದ್ದು.ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 43/2017 ಕಲಂ 279,337,338 ಐಪಿಸಿ;- ದಿನಾಂಕ: 24-04-2017 ರಂದು ಕೆಲಸದ ನಿಮಿತ್ಯ ಶಹಾಪೂರಕ್ಕೆ ನಾನು ಹಾಗೂ ಬಾಷು  ತಂದೆ ಮೈನುದ್ದಿನ್ ಖರೇಷಿ ಇಬ್ಬರೂ ಕೂಡಿಕೊಂಡು ವೆಂಕಟೇಶ ತಂದೆ ಗೋಪಣ್ಣ ಪೂಜಾರಿ ಇವರ ಮೋ.ಸೈ.ನಂ. ಕೆ-33 ಯು-4849 ನೇದ್ದರಲ್ಲಿ ಬಂದು ಕೆಲಸ ಮುಗಿದ ನಂತರ ನಾವು ಮೂರು ಜನರು ಸದರಿ ಮೋ.ಸೈ.ಮೇಲೆ ಮರಳಿ ಊರಿಗೆ ಹೋಗುವ ಕುರಿತು ಅಂದಾಜು ರಾತ್ರಿ  11-45 ಗಂಟೆ ಸುಮಾರಿಗೆ ಮದ್ರಕಿ ಗ್ರಾಮದ ಹಳ್ಳದ ಬ್ರಿಡ್ಜ್ ಹತ್ತಿರ ಹೊರಟಾಗ ನಾವು ಕುಳಿತ ಮೋಟಾರ ಸೈಕಲ್ ಚಾಲಕ ವೆಂಕಟೇಶ ಈತನಿಗೆ ನಾವು ಮೋಟಾರ ಸೈಕಲ್ ನಿಧಾನವಾಗಿ ಓಡಿಸು ಅಂತಾ ಕೇಳಿಕೊಂಡರು ಸಹ ಆತನು ನಮ್ಮ ಮಾತು ಕೇಳದೇ ಅತೀ ವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದಾಗ ಅದೆ ಸಮಯಕ್ಕೆ ಎದುರಿನಿಂದ ಜೇವಗರ್ಿ ಕಡೆಯಿಂದ ಒಬ್ಬ ಮಿನಿ ಅಟೋ ಚಾಲಕನು ತನ್ನ ಅಟೋವನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದಿದ್ದರಿಂದ ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ನಾವು ಮೂರು ಜನರು ಮೋಟಾರ ಸೈಕಲ್ನಿಂದ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಹಗೂ ವೆಂಕಟೇಶ ಹಾಗೂ ಬಾಷು ಇವರಿಗೆ ಗುಪ್ತಗಾಯ ಹಾಗು ರಕ್ತಗಾಯಗಳಾಗಿರುತ್ತವೆ. ನಂತರ ನಮ್ಮ ಮೋಟರ ಸೈಕಲ್ಗೆ ಡಿಕ್ಕಿಪಡಿಸಿದ ಅಟೋ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಜೀವನ ತಂದೆ ನೀಲಕಠ ಜಾಧವ ಸಾ||ಭವಾನಿ ನಗರ ಕಲಬುರಗಿ ಅಂತಾ ಹೇಳಿದ್ದು ಸದರಿಯವನಿಗೂ ಸಹ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತಪಡಿಸಿದ ಅಟೋ ನಂಬರ ನೋಡಲಾಗಿ ಕೆಎ-32ಬಿ-1024 ಅಂತಾ ಇರುತ್ತದೆ. ನಂತರ ನಾವೇಲ್ಲರೂ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೇರಿಕೆ ಆಗಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿ ಹಾಗೂ ಸಕರ್ಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.;- 59-2017 ಕಲಂ 143, 147, 341, 323, 504, 506 ಸಂ: 149  ಐಪಿಸಿ;- ದಿನಾಂಕ 25/04/2017 ರಂದು 08.30 ಪಿಎಂ ಶ್ರೀ ಮಲ್ಲಣ್ಣ ಹೆಚ್.ಸಿ-100 ರವರು ಎ.ಎಸ್.ಎಂ ಆಸ್ಪತ್ರೆ ಕಲಬುರಗಿಯಲ್ಲಿ ಗಾಯಾಳು  ಕಿಶನ ತಂದೆ ಬದ್ದು ರಾಟೊಡ ವಯಾ: 30 ವರ್ಷ ಉ: ಜೀಪಚಾಲಕ ಜಾ: ಲಮಾಣಿ ಸಾ: ನಾಗನಟಗಿ ಭೀಮಲು ನಾಯಕ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ  ಇವರ ಹೇಳೀಕೆಯನ್ನು ಪಡೆದುಕೊಂಡು ಬಂದು ಹಾಜರ ಪಡೆಸಿದ್ದು ಸದರಿ ಹೇಳಿಕೆ ಸಾರಂಶ ಏನಂದರೆ,  ನಿನ್ನೆ ದಿನಾಂಕ: 24/04/2017 ರಂದು ರಾತ್ರಿ 09.30 ಗಂಟೆಗೆ ಊಟ ಮಾಡಿ ನಮ್ಮ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದೆನು. ಮದ್ಯ ರಾತ್ರಿ 11.45 ರಿಂದ 12.00 ಗಂಟೆಯ ಅವಧಿಯಲ್ಲಿ ನಮ್ಮ ಭೀಗರಾದ 1) ಪೋಮು ತಂದೆ ಸೋಮ್ಲು ಚವ್ಹಾಣ ಮತ್ತು ಅವರ ಮಕ್ಕಳಾದ 2) ಗೋವಿಂದ ತಂದೆ ಪೋಮು ಚವ್ಹಾಣ 3) ಚಂದು ತಂದೆ ಪೋಮು ಚವ್ಹಾಣ 4) ಗಣೇಶ ತಂದೆ ಪೋಮು ಚವ್ಹಾಣ ಹಾಗೂ ಇನ್ನು ಇತರ 4 ಜನರು ಸಾ: ಎಲ್ಲರೂ ಈರಪ್ಪನ ತಾಂಡಾ ದೇವದುಗರ್ಾ ಎಲ್ಲರು ಕೂಡಿ ಬಂದು ನನಗೆ ಎಬ್ಬಿಸಿ ಕೆಳಗಡೆ ಬರಲು ಹೇಳೀದರು ನಾನು ಈ ರಾತ್ರಿ ವೇಳೆಯಲ್ಲಿ ಇಷ್ಟು ಜನ ಯಾಕೆ ಬಂದಿದ್ದಾರೆ ಅಂತಾ ಮ್ಯಾಳಗಿ ಮೇಲಿಂದ ಕೆಳಗಡೆ ಇಳಿದು ಅಂಜಿ ನಮ್ಮ ಮನೆಯಲ್ಲಿ ಮನೆಯಲ್ಲಿ ಹೊಗುತ್ತಿದ್ದಾಗ ಗೋವಿಂದ ಮತ್ತು ಚಂದು ಇವರು ನನಗೆ ತಡೆದು ನಿಲ್ಲಿಸಿ ಕೈ ಹಿಡಿದು ಎಳೆದು ಅಂಗಳದಲ್ಲಿ ತಂದು ಎಲ್ಲರು ಕೂಡಿ ನನಗೆ ಸೂಳೆ ಮಗನೆ ನಮ್ಮ ಲಕ್ಷ್ಮೀಗೆ ಹೋಡಿತೇನಲೆ ಅಂತ ಅವಾಶ್ಚವಾಗಿ ಬೈಯ್ದು ಕೈಯಿಂದ ಹೊಟ್ಟೆಗೆ, ಕುತ್ತಗಿಗೆ ಮತ್ತು ಬೆನ್ನಿಗೆ ಹೊಡೆದರು ಗಣೇಶ ಮತ್ತು ಪೋಮು ಇವರು ಕಾಲಿನಿಂದ ಬೆನ್ನಿಗೆ ಒದ್ದಿರುತ್ತಾರೆ. ಆಗ ನಾನು ಚೀರಾಡುವದನ್ನು ಕೇಳಿ ನಮ್ಮ ಅಣ್ಣ ಶಿವು ತಂದೆ ಬದ್ದು ರಾಟೋಡ. ನಮ್ಮ ಅತ್ತಿಗೆ ಸೀತಾಬಾಯಿ ಗಂಡ ಶೀವು ಇವರು ಬಂದು ನನಗೆ ಹೊಡೆಯುವದನ್ನು ಲೈಟಿನ ಬೆಳಕಿನಲ್ಲಿ ನೋಡಿ ಬಿಡಿಸಿಕೊಂಡರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಸದರಿಯವರೆಲ್ಲರು ಹೊಡೆದು ಹೋಗುವಾಗ ಇವತ್ತು ಉಳಕೊಂಡಿದಿ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕರೆ ನಿನಗೆ ಖಲಾಸ್ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೊದರು. ನನಗೆ ಒಳಪೆಟ್ಟಾಗಿದ್ದರಿಂದ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರಗಿಯ ಎ.ಎಸ್.ಎಂ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೆನೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 53-2017 ಕಲಂ 323 341  324 504 506 ಸಂ. 34 ಐಪಿಸಿ;- ದಿ:24/04/2017 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಫಿರ್ಯಾಧಿ ಆನಂದಗೌಡ ಈತನು ತನ್ನ ತಂದೆಯಾದ ಪರ್ವತಗೌಡ ಈತನೊಂದಿಗೆ ತಮ್ಮ ಹೊಲದಲ್ಲಿ ಕವಳಿ ರಾಶಿ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರು ಫಿರ್ಯಾಧಿ ಕವಳಿ ಹೊಲದಲ್ಲಿ ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾಗ ಫಿರ್ಯಾದಿ ಆರೋಪಿತರಿಗೆ ನಮ್ಮ ಕವಳಿ ಹೊಲದಲ್ಲಿ ಯಾಕೆ ದನಗಳನ್ನು ಬಿಟ್ಟು ಮೇಯಿಸುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಫಿರ್ಯಾದಿಗೆ ಆರೋಪಿತರು ಕೂಡಿಕೊಂಡು ಅವಾಚ್ಯ ಶಬ್ದಳಿಂದ ಬೈದು ಕೈಯಿಂದ ಮತ್ತು  ಬಡಿಗೆಯಿಂದ ಹೊಡೆಬಡೆ ಮಾಡಿ ಬಿಡಿಸಲು ಬಂದ ಫಿರ್ಯಾದಿ ತಂದೆ ಕೈಯಿಂದ ದಬ್ಬಿಕೊಟ್ಟು ತಡೆದು ನಿಲ್ಲಿಸಿ ಇನ್ನೊಂದು ಸಲ ಸಿಕ್ಕರೆ ಜೀವಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುವುದಾಗಿ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:53/2017 ಕಲಂ: 323 341  324 504 506 ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!