Yadgir District Reported Crimes Updated on 20-04-2017

By blogger on ಗುರುವಾರ, ಏಪ್ರಿಲ್ 20, 2017

Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ: 302, 201 ಐಪಿಸಿ;- ದಿನಾಂಕ:20-04-2017 ರಂದು ಫಿಯರ್ಾದಿ ಶ್ರೀ ಸುರೇಂದ್ರನಾಯಕ @ ಪಪ್ಪು ತಂದೆ ಭೀಮಪ್ಪ ಮಲ್ಲೇಗೋಳ ಸಾ: ರುಕ್ಮಾಪೂರ ಇವರು  ಠಾಣೆಗೆ ಬಂದು ಒಂದು ಫಿಯರ್ಾದಿ ನೀಡಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ:19/04/2017 ರಂದು ರಾತ್ರಿ ಅಂದಾಜು 9:00 ಗಂಟೆಗೆ ನಾನು ಮತ್ತು ಅಂಬ್ಲಪ್ಪ ತಂದೆ ಭೀಮರಾಯ ಬಂದೊಡ್ಡಿ ಸಾ: ರುಕ್ಮಾಪೂರ, ಬಸವರಾಜ ತಂದೆ ಚಂದಪ್ಪ ಸಲೈಗಾರ ಸಾ: ರುಕ್ಮಾಪೂರ ಮೂರು ಜನರು ಕೂಡಿ ನಮ್ಮೂರ ಬಸವರಾಜ ತಂದೆ ಕೃಷ್ಣಪ್ಪ ಅಡ್ಡೊಡಗಿ ಇವರ ಶೆಳ್ಳಿಗಿ ಸೀಮಾಂತರದಲ್ಲಿರುವ ಹೊಲದಲ್ಲಿನ ಗುಡಿಸಲಿನಲ್ಲಿ ಊಟ ಮಾಡಲು ಹೋಗಿದ್ದೆವು. ಅಂದಾಜು 10.00 ಗಂಟೆ ಸುಮಾರಿಗೆ ನಾವು ಊಟ ಮಾಡಿ ಗುಡಿಸಲು ಹೊರಗಡೆ ಕುಳಿತಾಗ ಯಾವುದೋ ಒಂದು ಬಿಳಿ ಬಣ್ಣದ ವಾಹನವು ನಾವು ಕುಳಿತ ಗುಡಿಸಲಿನ ಮುಂದಿನ ಕೆನಾಲ ರೋಡಿನಲ್ಲಿ ಪೂರ್ವದಿಂದ ಕಡೆಯಿಂದ ಕವಡಿಮಟ್ಟಿ ಕಡೆಗೆ ಅತೀ ವೇಗವಾಗಿ ದೂಳೆಬ್ಬಿಸಿಕೊಂಡು ಹೋಯಿತು ಆ ದೂಳಿನಲ್ಲಿ ಅದರ ನಂಬರ ಮತ್ತು ಯಾವ ವಾಹನವೆಂಬದು ಕಂಡುಬರಲಿಲ್ಲ. ಅದು ಹೋದ ಸ್ವಲ್ಪ ಸಮಯದಲ್ಲಿ ಗುಡಿಸಲಿನಿಂದ ಪೂರ್ವದಿಕ್ಕಿಗೆ 200 ಮೀಟರ ಅಂತರದಲ್ಲಿ ರುಕ್ಮಾಪುರ-ಚಂದ್ಲಾಪುರ ರೋಡಿನ ಪಕ್ಕದಲ್ಲಿಯ ಕೆನಾಲ ಬ್ರಿಡ್ಜಹತ್ತಿರ ಬೆಂಕಿ ಹತ್ತಿ ಉರಿಯುತ್ತಿತ್ತು. ಆಗ ನಾನು ಮತ್ತು ಅಂಬ್ಲಪ್ಪ ತಂದೆ ಭೀಮರಾಯ ಬಂದೊಡ್ಡಿ ಸಾ: ರುಕ್ಮಾಪೂರ  ಬಸವರಾಜ ತಂದೆ ಚಂದಪ್ಪ ಸಲೈಗಾರ ಸಾ:ರುಕ್ಮಾಪೂರ ಮೂರು ಜನರು ಹೋಗಿ ನೋಡಲಾಗಿ ಕೆನಾಲ ಬ್ರಿಡ್ಜಕೆಳಗೆ ಯಾರೋ ಒಬ್ಬ ಯುವಕನ ದೇಹವು ಅಂಗಾತವಾಗಿ ಬಿದ್ದಿದ್ದು, ಅದು ಸಂಪೂರ್ಣವಾಗಿ ಸುಟ್ಟು ಗುರುತಿಸಲು ಆಗದಂತಾಗಿತ್ತು, ಕೆನಾಲ ಮೇಲ್ಬಾಗದಲ್ಲಿದ್ದ  ಕಸ ಕಡ್ಡಿಗೆ ಬೆಂಕಿ ಹತ್ತಿತ್ತು. ಸಮೀಪ ಹೋಗಿ ನೋಡಲಾಗಿ ಅಂದಾಜು 20 ರಿಂದ 22 ವರ್ಷ ವಯಸ್ಸಿನ ಯುವಕನಿದ್ದು, ಯಾವುದೇ ಗುರುತುಗಳು ಕಂಡುಬಂದಿರುವುದಿಲ್ಲ. ಹೆಣ ಸುಟ್ಟಿದ್ದನ್ನು ನೋಡಿ ಗಾಬರಿಯಾಗಿ ತಡವಾಗಿ ಠಾಣೆಗೆ ಬಂದಿರುತ್ತೇನೆ. ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಅಪರಿಚಿತ ಯುವಕನಿಗೆ ಎಲ್ಲೋ ಕೊಲೆ ಮಾಡಿ ಮೃತ ದೇಹವನ್ನು ತಂದು ರುಕ್ಮಾಪುರ-ಚಂದ್ಲಾಪುರ ರೋಡಿನ ಪಕ್ಕದಲ್ಲಿಯ ಕೆನಾಲದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟು ಸಾಕ್ಷಿ ನಾಶಮಾಡಿ ಹೋಗಿದ್ದು ಇರುತ್ತದೆ. ಸದರಿ ಕೊಲೆಯಾದ ಅಪರಿಚಿತ ಯುವಕ ಮತ್ತು ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ .ನಂ. 110/2017 ಕಲಂ 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 60/2017  ಕಲಂ 279,304(ಎ) ಐಪಿಸಿ;- ದಿನಾಂಕ- 19/04/2017 ರಂದು ನಮ್ಮ ಅಕ್ಕಳಾದ ಪಿಲಿಂಗಮ್ಮ ಈಕೆಯ ಮಗನ ಮದುವೆಯು ಕಾಳಬೆಳಗುಂದಿ ಗ್ರಾಮದ ಬನದೇಶ್ವರ ದೇವಸ್ಥಾನ ಹತ್ತಿರ ಮದುವೆ ಕಾರ್ಯಕ್ರಮ ಇಟ್ಟಿದ್ದು ನಾವು ಮತ್ತು ನಮ್ಮ ಸಂಬಂದಿಕರು ದಿನಾಂಕ-19/04/2017 ರಂದು ಬೆಳಿಗ್ಗೆ 09-00 ಗಂಟೆಗೆ ನಾವೆಲ್ಲರು ಕಿಲ್ಲನಕೇರಾ ಗ್ರಾಮದಿಂದ ಕಾಳಬೆಳಗುಂದಿ ದೇವಸ್ಥಾನದ ಮದುವೆ ಕಾರ್ಯಕ್ರಮಕ್ಕೆ ಹೊಗಿದ್ದೆವು. ಕಾಳಬೆಳಗುಂದಿ ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ನಾವೆಲ್ಲರು ಊಟ ಮಾಡಿ  ಬಿಗರು ಮತ್ತು ನಮ್ಮ ಸಂಬಂಧಿಕರನ್ನು ಊರುಗಳಿಗೆ ಕಳುಹಿಸಿ ಮದುವೆಯಲ್ಲಿ ಮಾಡಿದ್ದ ಉಳಿದ ಅನ್ನದ ಬೋಗಣಿಯನ್ನು ಆಟೋದಲ್ಲಿ ಇಟ್ಟುಕೊಂಡು  ನಾನು ಮತ್ತು ನನ್ನ ಮಗ ಪರಶುರಾಮ, ನನ್ನ ಗಂಡ ಮಹಾದೇವಪ್ಪ, ನನ್ನ ಅಕ್ಕ ಪಿಲಿಂಗಮ್ಮ, ನನ್ನ ತಾಯಿ ಬನ್ನಮ್ಮ ಎಲ್ಲರು ಕೂಡಿಕೊಂಡು ನಮ್ಮ ತಮ್ಮ ಭೀಮರಾಯನ ಆಟೋ, ಆಟೋ ನಂಬರ ನಂಬರ ಕೆಎ-33- 5897 ನೆದ್ದರಲ್ಲಿ  ಕುಳಿತುಕೊಂಡು ಕಿಲ್ಲನಕೇರಿಗೆ ಬರುತಿದ್ದೆವು ಆಟೋವನ್ನು ನನ್ನ ಮಗನಾದ ಪರಶುರಾಮ ತಂದೆ ಮಹಾದೇವಪ್ಪ ಇತನು ನಡೆಸುತಿದ್ದನು. ಸಾಯಂಕಾಲ 03-30 ಗಂಟೆಗೆ ವಾಸ್ತಾದ ಬಾವಿ ಹತ್ತಿರ ಬಳಿಚಕ್ರ - ಕಾಳಬೆಳಗುಂದಿ ರೋಡಿನ ಮೇಲೆ ಬರುತ್ತಿರುವಾಗ ನನ್ನ ಮಗನು ಆಟೊವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರೋಡಿನ ಕೆಳಗೆ ಆಟೋವನ್ನು ಪಲ್ಟಿ ಮಾಡಿದನು ಆಟೊ ಪಲ್ಟಿ ಮಾಡಿದ್ದರಿಂದ ಆಟೋದಲ್ಲಿ ಕುಳಿತ ನಾವೆಲ್ಲರು ಬಿದ್ದೆವು ಎದ್ದು ನೋಡಲಾಗಿ  ನನ್ನ ಗಂಡನನ್ನು ಬಿಟ್ಟು ಆಟೋದಲ್ಲಿ ಕುಳಿತ ಇನ್ನುಳಿದವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ  ನನ್ನ ಗಂಡನಿಗೆ ಬಲಾಗಾಲಿನ ತೊಡೆಗೆ ರಕ್ತಗಾಯ, ಗುಪ್ತಾಂಗಗಳಿಗೆ ಬಾರಿ ಗುಪ್ತಗಾಯ, ಬಲಗಡೆ ಕುಂಡಿಗೆ ಬಾರಿ ರಕ್ತಗಾಯವಾಗಿ ಮಾಂಸಖಂಡ ಕಿತ್ತಿರುತ್ತದೆ. ನಂತರ ನನ್ನ ಮಗ 108 ಅಂಬುಲೆನ್ಸಗೆ ಪೊನ್ ಮಾಡಿ ಕರೆಸಿ ನನ್ನ ಗಂಡನನ್ನು ಅಂಬುಲೆನ್ಸದಲ್ಲಿ ನಾನು ನನ್ನ ಮಗ ಪರಶುರಾಮ ನನ್ನ ಅಕ್ಕ ಪಿಲಿಂಗಮ್ಮ, ನನ್ನ ತಾಯಿ ಬಸಮ್ಮ ಎಲ್ಲರು ಕೂಡಿ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ-19/04/2017 ರಂದು ರಾತ್ರಿ 08-15 ಗಂಟೆಗೆ ನನ್ನ ಗಂಡ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮಾನ್ಯರವರು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಆಟೋವನ್ನು ಪಲ್ಟಿ ಮಾಡಿದ ನನ್ನ ಮಗ ಪರಶುರಾಮ ತಂದೆ ಮಹಾದೇವಪ್ಪ ವ|| 16 ವರ್ಷ ಜಾ|| ಕಬ್ಬಲಿಗ ಸಾ|| ಕೊಂಡಾಪೂರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳಬೆಕಂತ ಗಣಕಿಕರಣ ಮಾಡಿಸಿದ ಅಜರ್ಿ ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 56/2017 ಕಲಂ.457,380 ಐಪಿಸಿ ;- ದಿನಾಂಕ 16/04/2017 ರಂದು 7 ಪಿಎಂಕ್ಕೆ ಪಿರ್ಯಾದಿ ಆರತಿ ಗಂ. ರಮೇಶ ಪಾಟೀಲ ಸಾಃ ಸೇಡಂ ಹಾಃವಃ ಲಕ್ಷ್ಮೀ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಹೆಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ  ನಾನು ಮೇಲಿನ ವಿಳಾಸದವಳಿದ್ದು ನಾಲ್ಕು ತಿಂಗಳಿಂದ ಯಾದಗಿರಿಯ ಪಿ.ಎಲ್.ಡಿ. ಬ್ಯಾಂಕಿನಲ್ಲಿ ದ್ವೀತಿಯ ದಜರ್ೆ ಸಹಾಯಕಿ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ಗಂಡನಾದ ರಮೇಶ ಪಾಟೀಲ ಇವರು ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು ನಾನು ನಾಲ್ಕು ತಿಂಗಳಿಂದ ಯಾದಗಿರದ ಲಕ್ಷ್ಮೀ ನಗರದಲ್ಲಿರುವ ಈಶ್ವರಪ್ಪ ಕುಡಗುಂಟಿ ಇವರ ಮನೆ ಯಲ್ಲಿ ಬಾಡಿಗೆ ಮಾಡಿಕೊಂಡು ಇರುತ್ತೇನೆ.  ದಿನಾಂಕ 15/04/2017 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣ ನನ್ನ ಮನೆಯನ್ನು ಬೀಗ ಹಾಕಿಕೊಂಡು ನನ್ನ ತವರು ಮನೆಯಾದ ನಾಲವಾರಕ್ಕೆ ಹೋಗಿ ಅಲ್ಲಿಯೇ ಉಳಿದುಕೊಂಡ್ಡಿದ್ದಾಗ ದಿನಾಂಕ 15/04/2017 ರಂದು ಸಾಯಂಕಾಲ 6 ಪಿಎಂದಿಂದ ಇಂದು ದಿನಾಂಕ 16/04/2017 ರಂದು ಬೆಳಿಗ್ಗೆ 5 ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ನಮ್ಮ ಮನೆಯ ಹಿಂದಿನ ಬಾಗಿಲು ಕೊಂಡಿ ಮುರಿದು ಒಳಗೆ ಹೋಗಿ ನಮ್ಮ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿಸಾಡಿ ನಮ್ಮ ಮನೆಯ ಬೆಡರೂಂ ದ ನನ್ನ ವೆನಿಟಿ ಬ್ಯಾಗಿನಲ್ಲಿಟ್ಟಿದ್ದ 1) ಮೂರುವರೆ ತೊಲೆಯ ಬಂಗಾರದ ಪಾಟ್ಲಿ ಅಂ.ಕಿ.87,500=00 2) ನಾಲ್ಕು ತೊಲೆಯ 3 ಎಳೆಯ ಬಂಗಾದ ಸರ ಅಂ.ಕಿ. 1,00,000=00 ರೂ ಒಟ್ಟು 1,87,500=00 ರೂ. ಕಿಮ್ಮತ್ತಿನ ಬಂಗಾರದ ಸಾಮಾನುಗಳು, ಹಾಗೂ 3) 2000=00 ರೂ ನಗದು ಹಣ ಹೀಗೆ ಒಟ್ಟು 1,89,500=00 ರೂ. ಕಿಮ್ಮತ್ತಿನ ಬಂಗಾರದ ಸಾಮಾನು ಮತ್ತು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿಯರ್ಾಧಿ
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ. 379 ಐಪಿಸಿ;- ದಿನಾಂಕ 17/04/2017 ರಂದು 11-30 ಎಎಂಕ್ಕೆ ಪಿರ್ಯಾಧಿ ಶ್ರೀ ಜಾವೇದ ಅಹೆಮದ ತಂ. ಶೇಖ ಮಹೆಬೂಬ ಶೇಖ ವಃ 45 ಜಾಃ ಮುಸ್ಲಿಂ ಉಃ ಲಾರಿ ಚಾಲಕ ಸಾಃ ಪೊಲೀಸ್ ವಸತಿ ಗೃಹ ಎದುರುಗಡೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ  ನಾನು ಮೇಲಿನ ವಿಳಾಸದವನಿದ್ದು ಲಾರಿ ಚಾಲಕ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ಹಿಗಿದ್ದು ನಮ್ಮ ಅಳಿಯನಾದ ಹಬೀಬ ಸಾಲಂ ಈತನ ಹೀರೂ ಹೊಂಡಾ ಮೊಟಾರ ಸೈಕಲ್ ನಂ. ಕೆಎ-32-ಕೆ-7850 ನೇದ್ದು ನನ್ನ ಹತ್ತಿರ ಇರುತ್ತದೆ. ಹೀಗಿದ್ದು ದಿನಾಂಕ 05/04/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರಾದ ಅಬ್ದುಲ ಸಲಿಂ ತಂ. ಮಹ್ಮದ ಎಕ್ಬಾಲ, ಮಹ್ಮದ ಹುಸೇನ ತಂ. ಅಬ್ದುಲ್ಲಾ ಚೌದಾಪುಡಿ ಇವರು ಕೂಡಿಕೊಂಡು  ಗಾಂದಿ ಚೌಕದಲ್ಲಿರು ಒಂದು ಹೋಟಲದಲ್ಲಿ ಚಹಾ ಕುಡಿದೆವು, ಚಹಾಕುಡಿದ ನಂತರ ನಾನು ಮನೆಗೆ ಹೋಗಬೇಕೆಂದುಕೊಂಡು 7-30 ಗಂಟೆ ಸುಮಾರಿಗೆ ಗಾಂಧಿ ಚೌಕನಲ್ಲಿರುವ ಶಮ್ಸು ಪಾನ ಶಾಪ ಮುಂದುಗಡೆ ನಿಲ್ಲಿಸಿದ ನನ್ನ ಮೋ.ಸೈಕಲ್ ನಂ. ಕೆಎ-32-ಕೆ-7850 ಕಾಣಿಸಲಿಲ್ಲಾ. ನಂತರ ಎಲ್ಲರೂ ಕೂಡಿಕೊಂಡು ಸುತ್ತ ಮುತ್ತ ನೋಡಲಾಗಿ ಎಲ್ಲಿಯೂ ನನ್ನ ಮೋ.ಸೈಕಲ್ ಕಾಣಿಸಲಿಲ್ಲಾ. ನಂತರ ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲಿ ಮೋ.ಸೈಕಲ್ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಕಾರಣ ನನ್ನ ಮೇಲ್ಕಂಡ ಮೋ.ಸೈಕಲ್ ನಂ. ಕೆಎ-32-ಕೆ-7850 ಅಂ.ಕಿ.30,000/-ರೂ ನೇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ ಇಂದು ದಿನಾಂಕ 17/04/2017 ರಂದು ತಡವಾಗಿ ಠಾಣೆಗೆ ಪಿರ್ಯಾದಿ ಕೊಡಲು ಬಂದಿರುತ್ತೇನೆ.          ಕಾರಣ ಕಳ್ಳರನ್ನು ಪತ್ತೆ ಮಾಡಿ ನನ್ನ ಮೋ.ಸೈಕಲನ್ನು ಪತ್ತೆ ಮಾಡಿಕೊಟ್ಟು ಕಳ್ಳರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶ
 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 59/2017 ಕಲಂ.380 ಐಪಿಸಿ;- ದಿನಾಂಕ 19/04/2017 ರಂದು 4 ಪಿಎಂಕ್ಕೆ ಪಿರ್ಯಾದಿ ಶ್ರೀ ಪ್ರಕಾಶ ರಾಠೋಡ ಆಧೇಶ ಜಾರಿಕಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ ರವರು ಒಂದು ಲಿಖಿತ ಅಜರ್ಿ ಕೊಟ್ಟಿದ್ದು ಸಾರಾಂಶವೆನೆಂದರೆ , ನಾನು ದಿನಾಂಕ 18/04/2017 ರಂದು ರಾತ್ರಿ ಕಾವಲು ಕೆಲಸದಲ್ಲಿದ್ದಾಗ ಯಾರೋ ಕಳ್ಳರು ಜಿಲ್ಲಾ ನ್ಯಾಯಾಲಯದ ಆವರಣ ಪ್ರವೇಶಿಸಿ ಎರಡು ಜನರೇಟರಗೆ ಜೋಡಿಸಿದಂತಹ ಎರಡು ಎಕ್ಸೆಐಡ್ ಕಂಪನಿಯ ಬ್ಯಾಟರಿಗಳು ಅಂದಾಜು ಕಿಮತ್ತು ಒಂದಕ್ಕೆ 6000-00 ರೂ ದಂದೆ ಒಟ್ಟು 12,000/-ರೂ ಕಳ್ಳತನ ಮಾಡಿಕೊಂಡು ಹೋಗಿತ್ತಾರೆ. ಆದ ಕಾರಣ ತಾವು ದಯಮಾಡಿ ಜನರೆಟರಗೆ ಜೋಡಿಸಿದಂತಹ ಎಕ್ಸೆಐಡ್ ಕಂಪನಿಯ ಬ್ಯಾಟರಿಗಳು ಅಂದಾಜು ಕಿಮ್ಮತ್ತು ಒಂದಕ್ಕೆ 6,000/-ರೂ  ಒಟ್ಟು 12,000/-ರೂ.ಕಳುವು ಮಾಡಿದ ಕಳ್ಳರನ್ನು ಹಿಡಿದು ಸದರಿ ಬ್ಯಾಟರಿಗಳನ್ನು ನ್ಯಾಲಯಕ್ಕೆ ದೊರಕಿಸಿಕಡಲು ಈ ಮೂಲಕ ವಿನಂಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂದಶ. 
 ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 14-2017 ಕಲಂ, 174 ಸಿ.ಆರ್.ಪಿ.ಸಿ;-  ದಿನಾಂಕ: 20/04/2017 ರಂದು 8-15 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ನಾಗಮ್ಮ ಗಂಡ ಸಣ್ಣ ಸಾಯಬಣ್ಣ ಯೋಗಣಗೋಳ ಸಾ|| ಗೋಗಿ (ಕೆ) ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ಮಲ್ಲಿಕಾಜರ್ುನ ವಯ|| 22 ವರ್ಷ, ನಾಗರಾಜ ವಯ|| 17 ವರ್ಷ ಅಂತಾ ಇಬ್ಬರೂ ಗಂಡು ಮಕ್ಕಳು ಭೀಮವ್ವ ವಯ|| 25 ವರ್ಷ ಶೋಭಾ ಅಂತಾ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ.  ನನ್ನ ಮೊದಲನೇ ಮಗಳಾದ ಭೀಮವ್ವ ಇವಳನ್ನು ಚಿತ್ತಾಪೂರ ತಾಲ್ಲೂಕಿನ ಲಾಡ್ಲಾಪೂರ ಗ್ರಾಮದ ಬಸವರಾಜ ಇವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ.  ಮನೆಯಲ್ಲಿ ನಾನು ನನ್ನ ಗಂಡ ಮತ್ತು ಮೂರು ಮಕ್ಕಳು ಇರುತ್ತೇವೆ.  ನನ್ನ ಗಂಡನ ಪಿತ್ರಾಜರ್ಿತವಾಗಿ ಗೋಗಿ (ಕೆ) ಸೀಮಾಂತರದಲ್ಲಿ ಹೊಲ ಸವರ್ೆ ನಂ: 514, 515  ವಿಸ್ತೀರ್ಣ ಒಟ್ಟು 6 ಎಕರೆ ಜಮೀನು ಇದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತೇವೆ.  ಹೊಲದಲ್ಲಿ ಹೆಸರು, ಸೇಂಗಾ ಬೆಳೆ ಹಾಕಿದ್ದೇವು.  ನನ್ನ ಗಂಡನು ಸಂಸಾರದ ಅಡಚಣೆಗಾಗಿ ಮತ್ತು ಕೃಷಿ ಚಟುವಟಿಕೆಗಾಗಿ ಎಸ್.ಬಿ.ಐ ಬ್ಯಾಂಕಿನಲ್ಲಿ 1,00,000/-  ರೂ ಸಾಲ ಮತ್ತು ವಿ.ಎಸ್.ಎಸ್.ಎನ್. ನಲ್ಲಿ 10,000/- ರೂ ಸಾಲ  ಮತ್ತು ಊರ ಮಂದಿಯಲ್ಲಿ ಕೈಗಡವಾಗಿ 3,00,000/- ರೂ ಸಾಲ ಮಾಡಿದ್ದನು.  ಹೊಲದಲ್ಲಿ ಹಾಕಿದ ಸೇಂಗಾ ಮತ್ತು ಹೆಸರು ಬೆಳೆಗಳು ಸರಿಯಾಗಿ ಬರದ ಕಾರಣ ಚಿಂತೆ ಮಾಡುತ್ತಿದ್ದನು.  ಈ ವಿಷಯವನ್ನು ನನ್ನ ಮುಂದೆ ಹೇಳುತ್ತಿದ್ದನು. ಆದಕ್ಕೆ ನಾನು ಮುಂದಿನ ವರ್ಷ ಬೆಳೆ ಸರಿಯಾಗಿ ಬಂದ ನಂತರ ಸಾಲ ತೀರಿಸಿದರಾಯಿತು ಅಂತಾ ಸಮಾಧಾನ ಹೇಳುತ್ತಿದ್ದೆನು. ಆದರೂ ಕೂಡಾ ನನ್ನ ಗಂಡನು ಸಾಲ ಆಗಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ಸಾಯುತ್ತೇನೆ ಅಂತಾ ಅನ್ನುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ; 19/04/2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮನೆಯಲ್ಲಿ ನಾನು ನನ್ನ ಗಂಡ ಸಣ್ಣ ಸಾಯಬಣ್ಣ ತಂದೆ ಸಾಯಬಣ್ಣ ಯೋಗಣಗೋಳ ಮತ್ತು ಮಕ್ಕಳು ಊಟ ಮಾಡಿದ್ದು ನನ್ನ ಗಂಡನು ಮನೆಯ ಮ್ಯಾಳಿಗೆಯ ಮಲಗುತ್ತೇನೆ ಅಂತಾ ಹೇಳಿ ಹೋದನು. ನಂತರ ಒಮ್ಮೆಲೇ ಸಪ್ಪಳ ಬಂದಿದ್ದು ನಾನು ನನ್ನ ಮಗ ಮಲ್ಲಿಕಾಜರ್ುನ, ನಾಗರಾಜ, ಶೋಭಾ ಇವರು ಕೂಡಿ ಮನೆಯ ಮುಂದೆ ಬಂದು ನೋಡಲಾಗಿ ನನ್ನ ಗಂಡನು ಬಿದ್ದು ಮೃತಪಟ್ಟಿದ್ದನು. ನನಗೆ ರಾತ್ರಿ ಏನೂ ತೋಚದೇ ಇದ್ದು ಇಂದು ದಿನಾಂಕ; 20/04/2017 ರಂದು ಬಂದು ಅಜರ್ಿ ನೀಡುತ್ತಿದ್ದು ನನ್ನ ಗಂಡನು ಸಾಲ ಆಗಿದ್ದರಿಂದ ಈ ವರ್ಷ ಹೊಲದಲ್ಲಿ ಬೆಳೆ ಸರಿಯಾಗಿ ಬರದ ಕಾರಣ ಮನಸ್ಸಿಗೆ ಹಚ್ಚಿಕೊಂಡು ರಾತ್ರಿ ಮನೆಯಲ್ಲಿ ಮ್ಯಾಳಿಗೆ ಮೇಲಿಂದ ಹಾರಿ ಕೆಳಗೆ ಬಿದ್ದು ಮೃತಪಟ್ಟಿದ್ದು ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ: 14/2017 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!