PÉA¨sÁ« ¥Éưøï oÁuÉ
¢£ÁAPÀ 20/12/2014 gÀAzÀÄ ಇಂದು ದಿ: 20/12/14 ರಂದು 04.30 ಪಿಎಮ್‌ಕ್ಕೆ ಶ್ರೀ ಮಹಿಬೂಬ ತಂದೆ ಮೀರಾಸಾಬ
ಗಬಸಾವಳಗಿ ವಯಸ್ಸು|| 55 ವರ್ಷ ಉ|| ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಮಲ್ಲಾ
(ಬಿ) ಸಾ||
ಹೊನ್ನಳ್ಳಿ ತಾ||
ಸಿಂದಗಿ ಇವರು
ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ,
ನಾನು ಮಲ್ಲಾ (ಬಿ)
ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 4 ವರ್ಷಗಳಿಂದ ಮುಖ್ಯೋಪಾದ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,
ದಿನಾಂಕ: 19/12/2014 ರಂದು ನಮ್ಮ ಶಾಲೆಯ ಓದು ಅವಧಿ ಮುಗಿದ ನಂತರ
ಶಾಲೆಯ ಎಲ್ಲ ಕೋಣೆಗಳ ಬಾಗಿಲು ಮುಚ್ಚಿ ಭದ್ರವಾಗಿ ಕೀಲಿಗಳನ್ನು ಹಾಕಿ ಹೋಗಿದ್ದೆನು. ಅದೇ ದಿನ
ರಾತ್ರಿ ಯಾರೋ ಕಳ್ಳರು ನಮ್ಮ ಸರಕಾರಿ ಪ್ರೌಢಶಾಲೆಯ ಮುಖ್ಯೊಪಾದ್ಯಾಯರ ಕೋಣೆ ಮತ್ತು ಗಣಕಯಂತ್ರದ
ಕೋಣೆಯ ಕೀಲಿಗಳನ್ನು ಮುರಿದು ಕೋಣೆಯಲ್ಲಿನ ಸಾಮಾನುಗಳಾದ 1) ಡೆಲ್ ಕಂಪನಿಯ ಲ್ಯಾಪ್ಟಾಪ್ ಅ.ಕಿ||
55,000/- ರೂ 2) ಂಣಣ ಮೊಬೈಲ್,
ಅದರಲ್ಲಿನ ಸಿಮ್
ನಂಬರ- 8277900804 ಅ.ಕಿ|| 16,000/- ರೂ 3) ಹೋಮ ತಿಯೇಟರ ಮತ್ತು ಅದರ ಸ್ಪೀಕರ ಅ.ಕಿ||
2,500/- ರೂ 4)
ಯುಪಿಎಸ್ ಮತ್ತು 02 ಬ್ಯಾಟರಿ ಅ.ಕಿ||
28,000/- ರೂ ಹೀಗೆ ಒಟ್ಟು 1,01,500/- ರೂ ಕಿಮ್ಮತ್ತಿನ ವಸ್ತುಗಳ ಕಳ್ಳತನವಾಗಿದ್ದು,
ಅಲಮಾರಿ ಮತ್ತು
ಕೋಣೆ ಬೀಗಗಳು ಮುರಿದು ಸುಮಾರು 9,000/- ರೂ. ನಷ್ಟು ಲುಕ್ಸಾನು ಆಗಿದ್ದು,
ಇಂದು ದಿನಾಂಕ 20/12/2014 ರಂದು ಬೆಳಿಗ್ಗೆ 07.30 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರು
ಶಾಲೆಗೆ ಬಂದಾಗ ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರಾದ, ಸಿದ್ರಾಮಯ್ಯ ತಂದೆ ರಾಮಲಿಂಗಯ್ಯ ಮಠ,
ರಮೇಶ ತಂದೆ
ಮಹಾದೇವಪ್ಪ ಗಾಯಕವಾಡ, ಶರಣಪ್ಪ ತಂದೆ ಸಿದ್ದಪ್ಪ ಕೇಸರಿ,
ದುಂಡಪ್ಪ ತಂದೆ
ಬಸಪ್ಪ ತಳವಾರ, ಅನಿಲಕುಮಾರ ಕೆ, ಗೌರೀಶ ತಂದೆ ಜಯಪ್ಪ ವಿಶ್ವಕರ್ಮ ಎಸ್ಡಿಎ ಇವರು
ನನ್ನ ಜೊತೆಗಿದ್ದು, ಪರಿಶೀಲನೆ ಮಾಡಿ ನೋಡಿದ್ದು ಇರುತ್ತದೆ.
ಸದರಿ ಕಳ್ಳತನವು ದಿನಾಂಕ: 19/12/2014 ರ ರಾತ್ರಿ ವೇಳೆಯಿಂದ ದಿ: 20/12/2014
ರ ಬೆಳಗಿನ ಜಾವದ
ಮದ್ಯದ ಅವಧಿಯಲ್ಲಿ ನಮ್ಮ ಪ್ರೌಢಶಾಲೆಯಲ್ಲಿ ಯಾರೋ ಕಳ್ಳರು ಕಳವು ಮಾಡಿದ್ದು,
ಪತ್ತೆ ಮಾಡಿ ಕಳವು
ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ ಅದೆ. ಅಂತ ಇದ್ದ ಪಿರ್ಯಾದಿ ಅರ್ಜಿ
ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 124/2014 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
Hello There!If you like this article Share with your friend using