ಗುರಮಿಠಕಲ ಪೊಲೀಸ್ ಠಾಣೆ
ಸದರಿ ನನ್ನ ಮಾವ ಮಲ್ಲಪ್ಪ, ಅತ್ತೆ ಮರೆಮ್ಮ ಮತ್ತು ಅವರ ಮಗಳು ಮರಿಲಿಂಗಮ್ಮ ಮೂರು ಜನರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.266/2014 ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ದಿನಾಂಕ 15/12/14 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಮೃತ ಜಗದೇವಪ್ಪ ಈತನ ತಮ್ಮನ ಹೊಲವನ್ನು ಪಾಲಿಗೆ ಮಾಡಿದ ಮಾತರ್ಾಂಡಪ್ಪ ತಂದೆ ಈರಪ್ಪ ಪೂಜಾರಿ ಮತ್ತು ಆತನ ಮಗ ಮೋನಪ್ಪ ಕೂಡಿ ಮೃತನೊಂದಿಗೆ ಹೊಲದಲ್ಲಿಯ ಶೇಂಗಾ ಬೆಳೆಗೆ ನೀರು ಬಿಡುವ ಸಂಬಂಧ ತಕರಾರು ಮಾಡಿ ಮೃತನ ತೆಕ್ಕೆ ಕುಸ್ತಿಗೆ ಬಿದ್ದು ಕಾಲುವೆಯಲ್ಲಿ ಕೆಳಗೆ ಹಾಕಿ ಮೇಲೆ ಬಿದ್ದಿದ್ದರಿಂದ ಮೃತನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಶೇಂಗಾದ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಔಷದಿಯನ್ನು ತೆಗೆದುಕೊಂಡು ಸೇವೆನೆ ಮಾಡಿ ಚೀರಾಡಿದಾಗ ಮೃತನ ತಮ್ಮನ ಹೆಂಡತಿಯಾದ ಶ್ರೀಮತಿ ವೆಂಕಟಮ್ಮ ಗಂಡ ಬಸಪ್ಪ ತಳವಾರ ಇವಳು ಹೊದಲ್ಲಿಯೇ ಇದ್ದು ನೋಡಿ ಚೀರಾಡಿ ಅಕ್ಕಪಕ್ಕದ ಹೊಲದವರಿಗೆ ಕರೆದು ಮೃತನಿಗೆ ಆಸ್ಪತ್ರೆಗೆ ಒಚಿ್ಯುಲು ಜೀಪಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಗುರುಮಠಕಲಗೆ ಬಂದಾಗ ಮೃತನು ಮಾರ್ಗ ಮದ್ಯದದಲ್ಲಿಯೇ ಮೃತ ಪಟ್ಟಿದ್ದು ಮೃತನ ಮೃತ ದೇಹವನ್ನು ವಾಪಸ್ಸು ಊರಿಗೆ ಹೊಯ್ದ ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ
ದಿನಾಂಕ 16/12/2014 ರಂದು 2-15 ಪಿಎಮ್ ಕ್ಕೆ ಶ್ರೀಮತಿ ಸುಮಂಗಲಾ ಗಂಡ ಭೀಮಪ್ಪ ತೆಗ್ಗ್ಯಾಳ ಸಾ|| ಗೋಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ತನ್ನ ಗಂಡನಾದ ಭೀಮಪ್ಪ ಇವರು ಶಹಾಪೂರ ಬಸ್ ಡಿಪೋದಲ್ಲಿ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದು ದಿನನಿತ್ಯದಂತೆ ದಿನಾಂಕ 12/12/2014 ರಂದು ಮುಂಜಾನೆ 8 ಗಂಟೆ ಸುಮಾರಿಗೆ ಶಹಾಪೂರ ಬಸ್ ಡಿಪೋದಲ್ಲಿ ತಮಗೆ ಹಂಚಿಕೆಯಾದ ಬಸ್ ನಂ ಕೆಎ-33 ಎಫ್-184 ನೇದ್ದರ ಮುಂದಿನ ಗ್ಲಾಸಗಳನ್ನು ಒರೆಸುತ್ತಿದ್ದಾಗ ಒಂದು ಬಸ್ ನಂ ಕೆಎ-33 ಎಫ್- 177 ನೇದ್ದರ ಚಾಲಕನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ಹಿಮ್ಮುಖವಾಗಿ ಯಾವುದೇ ಮುನ್ಸೂಚನೆ ನೀಡದೆ ಚಲಾಯಿಸಿಕೊಂಡು ಬಂದು ಭೀಮಪ್ಪ ಇವರಿಗೆ ಡಿಕ್ಕಿಪಡಿಸಿ ಗಂಭೀರ ಸ್ವರೂಪದ ಗುಪ್ತಗಾಯ ಪಡಿಸಿದ್ದು ಉಪಚಾರಕ್ಕಾಗಿ ಮಿರಜ್ ನ ಜಿ.ಎಸ್.ಕುಲಕರ್ಣೀ ಆಸ್ಪತ್ರೆಗೆ ಸೇರಿಕೆ ಮಾಡಿ ಬರಲು ತಡವಾಗಿದ್ದು ಅಪಘಾಥಪಡಿಸಿದ ಬಸ್ ನಂ ಕೆಎ-33 ಎಫ್-177 ನೇದ್ದರ ಚಾಲಕ ಭೀಮಣ್ಣ ಈತನ ಮೇಲೆ ಕಾನೂನು ರೀತಿ ಕ್ರಮ ಕೈಕೊರ್ಳಳಲು ವಿನಂತಿ ಅಂತ ವಗೈರೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 324/2014 ಕಲಂ279,338 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ
ದಿನಾಂಕ; 16/12/2014 ರಂದು 11-00 ಎ.ಎಮ್ ಕ್ಕೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಒಂದು ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಸರಕಾರಿ ಆಸ್ಪತ್ರೆ ಯಾದಗಿರಿಗೆ ಭೇಟಿ ನೀಡಿ ಗಾಯಾಳು ಶ್ರೀ. ಮರಿಲಿಂಗಪ್ಪ ತಂದೆ ತಿಪ್ಪಣ್ಣ ಚಲುವಾದಿ ಸಾ; ರಾಜುಗಾಂಧಿ ನಗರ ಯಾದಗಿರಿ ರವರ ಹೇಳಿಕೆ ಸಾರಾಂಶವೇನೆಂದರೆ, ಸುಮಾರು 15-20 ದಿವಸಗಳ ಹಿಂದೆ ಫಿರ್ಯಾದಿ ಎರಡನೆ ಹೆಂಡತಿ ಮತ್ತು ನನ್ನ ತಮ್ಮ ರವಿ ತಂದೆ ತಿಪ್ಪಣ್ಣ ಕೂಡಿ ಫಿರ್ಯಾದಿ ಮೊದಲನೇ ಹೆಂಡತಿ ಲಕ್ಷ್ಮೀ ಇವಳಿಗೆ ನನ್ನ ಮಗಳು ಪಲ್ಲವಿಯ ಬಗ್ಗೆ ಕೇಳಿದೆನು. ಆಗ ಫಿರ್ಯಾದಿ ಮಾವ ಮಲ್ಲಮ್ಮ ತಂದೆ ಶರಣಪ್ಪ ಬೊಮ್ಮನ, ಅತ್ತೆ ಮರೇಮ್ಮ ಗಂಡ ಮಲ್ಲಪ್ಪ ಮತ್ತು ಫಿರ್ಯಾದಿ ಹೆಂಡತಿಯ ತಂಗಿ ಮರಿಲಿಂಗಮ್ಮ ಮೂರು ಜನರು ಕೂಡಿ ನೀನು ಈಗ ಬಂದು ಯಾಕೆ ಕೇಳುತ್ತಿ ಬೋಸಡಿಕೆ ಅಂತಾ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿಯ ಮಲ್ಲಪ್ಪ ಬೊಮ್ಮನ ಇವನು ಕೈಯಿಂದ ನನ್ನ ಮುಖಕ್ಕೆ ಗುದ್ದಿದನು. ಅತ್ತೆ ಮರೆಮ್ಮ ಇವಳು ನನ್ನ ಬಲಗೈ ಹಿಡಿದು ತಿರುವುತ್ತಿರುವಾಗ ಹಿಂದಿನಿಂದ ಮರಿಲಿಂಗಮ್ಮ ಇವಳು ಒಂದು ಕಟ್ಟಿಗೆಯಿಂದ ನನ್ನ ತಲೆಗೆ ಎರಡು ಏಟು ಹೊಡೆದಳು. ಇದರಿಂದ ತಲೆಯ ಎಡಕ್ಕೆ ಮತ್ತು ಬಲಕ್ಕೆ ರಕ್ತಗಾಯವಾಗಿದೆ. ನನಗೆ ಹೊಡೆಯುವಾಗ ನನ್ನ ಎರಡನೇ ಹೆಂಡತಿ ಶಿವಮ್ಮ ಮತ್ತು ತಮ್ಮ ರವಿ ಚಲವಾದಿ ಇವರು ಬಿಡಿಸಿಕೊಂಡಿರುತ್ತಾರೆ. ಸದರಿ ನನ್ನ ಮಾವ ಮಲ್ಲಪ್ಪ, ಅತ್ತೆ ಮರೆಮ್ಮ ಮತ್ತು ಅವರ ಮಗಳು ಮರಿಲಿಂಗಮ್ಮ ಮೂರು ಜನರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.266/2014 ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
Hello There!If you like this article Share with your friend using