By blogger on ಭಾನುವಾರ, ನವೆಂಬರ್ 9, 2014

                                                                ಕೊಡೇಕಲ ಪೊಲೀಸ್ ಠಾಣೆ.
             ಇಂದು ದಿ:09.11.2014 ರಂದು 22.30 ಗಂಟೆಗೆ ಫಿಯರ್ಾದಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿಯನ್ನು ಸಲ್ಲಿಸಿದ್ದು, ಅದರ ಸಾರಂಶವೆನೆಂದರೆ ತನ್ನ ತಮ್ಮ ಇವನು ನಮ್ಮ ಓಣಿಯಿಂದ ಅಂಬೇಡ್ಕರ್ ಸರ್ಕಲ್ ಕಡೆಗೆ ನೀರು ತುಂಬಲು ಹೋದಾಗ ಸಾಯಂಕಾಲ 05.30 ಗಂಟೆಗೆ ಸೈಕಲ್ ಮೋಟಾರಿನಲ್ಲಿ ಮೂರು ಜನರು ಬಂದು ನಮಗೆ ಏ ಹೋಲೆ ಸೂಳಿ ಮಕ್ಕಳೇ ನಿಮ್ಮನ್ನು ಕಡಿದು ಕೆನಾಲಕ್ಕೆ ಹಾಕುತ್ತೇವೆ ಎಂದು ಅವ್ಯಾಚ್ಚ ಶಬ್ದಗಳಿಂದ ಬೈಯ್ದುದಲ್ಲದೇ ಎಲೇ ಮಕ್ಕಳೇ 10 ಎಕರೇ ಹೊಲ ಹೋಗಲಿ ನಿಮ್ಮ ಜೀವ ತೆಗೆಯುವ ತನಕ ಬಿಡುವದಿಲ್ಲ ಅಂತಾ ಸಿಕ್ಕಾಪಟ್ಟೆ ಬೈಯ್ದದ್ದು ತಲೆಗೆ ಹೊಡೆದುದರಿಂದ ತಲೆಯ ಮೇಲೆ ಭಾರಿ ರಕ್ತಗಾಯಗಳಾಗಿದ್ದು, ಆಗ ಅಲ್ಲಿಯೇ ಇದ್ದ ನಮ್ಮ ಅಣ್ಣತಮ್ಮಕೀಯರು ನನ್ನ ತಮ್ಮನಿಗೆ ವಾಖಾನೆಗೆ ಒಯ್ಯಲು ಸಹ ಬಿಡಲಿಲ್ಲ. ನಂತರ ನಾನು 108 ವಾಹನಕ್ಕೆ ಫೋನ್ ಮಾಡಿದ್ದು, 108 ವಾಹನ ಬಂದ   ಹುಣಸಗಿ ಸರಕಾರಿ ಆಸ್ಪತ್ರೆಗೆ ಒಯ್ದು ಉಪಚಾರಕ್ಕಾಗಿ ಸೇರಿಕೆ ಮಾಡಿ ನಾನು ತಮ್ಮಲಿಗೆ ಬಂದು ಕೇಸ್ ಮಾಡುತ್ತಿದ್ದು, ನನ್ನ ತಮ್ಮನಿಗೆ ಎಲೇ ಸೂಳಿ ಮಗನೇ ಅಂತಾ ಬೈಯ್ದು ಜಾತಿ ನಿಂದನೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ತಲೆಗೆ ಕೊಡಲಿಯಿಂದ ಹೊಡೆದವರ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿಬೇಕು ಅಂತಾ ತಮ್ಮಲ್ಲಿ ಕಳಕಳಿಯ ವಿನಂತಿ ಅಂತಾ ವಗೈರೆ ಲಿಖಿತ ಫಿರ್ಯದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:67/2014 ಕಲಂ:323,504,307 ಸಂ:34 ಐಪಿಸಿ ಸಂ 3(1)(10),2(5) ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ-1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ
                ಫಿಯರ್ಾದಿ ನಾಗಪ್ಪ ತಂದೆ ಮಹಾದೇವಪ್ಪ ಹುಳಗೋಳ, ಸಾ:ಬಳಿಚಕ್ರ ಇತನ ಮನೆಯ ಅಂಗಳದಲ್ಲಿದ್ದ ಒಂದು ಜಾಲಿ ಗಿಡದ ಟೊಂಗಿಯು ಆರೋಪಿತರ ಮನೆಯ ಮೇಲೆ ಗಿಡದ ಟೊಂಗೆಗಳು ಚಾಚಿಕೊಂಡಿರುತ್ತದೆ. ಆರೋಪಿತರು ಫಿಯರ್ಾದಿಯ ತಮ್ಮನಾದ ತಾಯಪ್ಪನಿಗೆ ಆ ಟೊಂಗೆಗಳನ್ನು ಕಡಿಯುವಂತೆ ಹೇಳಿ ಫಿಯರ್ಾದಿಯು ಮನೆಯಲ್ಲಿದಾಗ ಕಡಿಸಿದ್ದಾರೆ.  ಫಿಯರ್ಾದಿಯು ಮನೆಗೆ ಬಂದ ನಂತರ ತನಗ್ಯಾಕೆ ಕೇಳಿ ಕಡಿಸಿಲ್ಲವೆಂದು ದಿ; 08/11/2014 ರಂದು 1.30 ಪಿಎಮ್ ಸುಮಾರಿಗೆ ವಿಚಾರಿಸಿದಾಗ ವಾಗ್ವಾದ ನಡೆದು ಪಿಯರ್ಾದಿಗೆ ಆರೋಪಿತನಾದ ವೆಂಕೋಬಯ್ಯ ಈತನು ಏ ಮಾದಿಗ ಸೂಳೆ ಮಗನೇ ಅಂತಾ ಜಾತಿ ನಿಂದನೆ ಮಾಡಿ ಕೈ ಮುಷ್ಠಿ ಮಾಡಿ ಬಾಯಿಗೆ ಹೊಡೆದು ಮತ್ತು ಚಪ್ಪಲಿಯಿಂದ ಫಿಯಾದಿಯ ಬಲ ಕಪಾಳಕ್ಕೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಇತರ ಆರೋಪಿತರಾದ ಗುರುರಾಜ ಮತ್ತು ಮಂಜುನಾಥ ಇವರು ಫಿಯರ್ಾದಿಯ ಅಂಗಿಯನ್ನು ಹಿಡಿದುಕೊಂಡು ಜಗ್ಗಾಡಿ ಅವಮಾನ ಮಾಡಿದ ಬಗ್ಗೆ ಫಿರ್ಯಾಧಿ.
ಶೋರಾಪೂರ ಪೊಲೀಸ್ ಠಾಣೆ.
          ಪಿಯರ್ಾದಿ ಮತ್ತು ಆರೋಪಿತರ ಮದ್ಯ ಹೊಲದ ಸಂಬಂದ ತಕಾರರು ಇದ್ದು ಅದೇ ಸಿಷ್ಟಿನಿಂದ ಆರೋಪಿತರು ದಿನಾಂಕ:03/11/2014 ರಂದು ಬೆಳ್ಳಿಗೆ 080.0 ಗಂಟೆ ಸುಮಾರಿಗೆ ಫಿಯರ್ಾದಿಯ ಮನೆಗೆ ಅಕ್ರಮ ಕೂಡ ರಚಿಸಿಕೊಂಡು ಬಂದು ಅವ್ಯಾಚ್ಯವಾಗಿ ಬೈದು ಫಿಯರ್ಾದಿಗೆ ಕೈಯಿಂದ ಹೊಡೆ ಬಡೆ ಮಾಡಿ ಕೈ ಹಿಡಿದು ಜಗಾಡಿ ಮತ್ತು ಸೀರೆ ಹಿಡಿದ ಜಗಾಡಿ ಬಡಿಗೆಯಿಂದ ಹೊಡೆದು ರಕ್ತ ಗಾಯ ಮಾಡಿ ಹೊಡೆದು ಹೋಗುವಾಗ ಜೀವದ ಬೇದರಿಕೆ ಹಾಕಿದ್ದು ಬಗ್ಗೆ ದೂರಿನ ಮೇಲೆ ದಿನಾಂಖ 8-11-2014 ರಂದು ಗುನ್ನೆ ನಂ. 221/2014 ದಾಖಲಾಗಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ
              ದಿ: 08/11/14 ರಂದು 4 ಪಿ.ಎಮ್.ಕ್ಕೆ ಪಿಯರ್ಾಧಿ ಹಾಗೂ ಆರೋಪಿ ಕೂಡಿ ತಮ್ಮ ಕಾರ್ ನಂ: ಕೆ.ಎ-33 ಎಮ್.-1033 ನೇದ್ದರಲ್ಲಿ ಗುಲಬಗರ್ಾದಿಂದ ಯಾದಗೀರ ಕಡೆ ಹೋಗುತ್ತಿರುವಾಗ ಆರೋಪಿತನು ತನ್ನ ಕಾರ್ ಗುರುಸುಣಗಿ ಕ್ರಾಸ್ ಹತ್ತಿರ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಕಟ್ ಹೊಡೆದಿದ್ದರಿಂದ ರಸ್ತೆಯ ಬಿದಯ ಮರಕ್ಕೆ ಕಾರನ್ನು ಡಿಕ್ಕಿ ಪಡಿಸಿದ್ದರಿಂದ ಪಿಯರ್ಾಧಿ ಹಾಗೂ ಆರೋಪಿತರಿಗೆ ಸಾದಾ ರಕ್ತಗಾಯವಾದ ಬಗ್ಗೆ ಸಂಕ್ಷಿಪ್ತ ಸಾರಾಂಶವಿರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!